ಪ್ರಚಲಿತ

ಬಯಲಾಯ್ತು ಹಿಂದೂ ಹೃದಯ ಸಾಮ್ರಾಟ್ ಕುಟುಂಬದ ಸತ್ಯ!! ಅತಿ ದೊಡ್ಡ ರಾಜ್ಯದ ಒಡೆಯನ ಕುಟುಂಬದ ಒಂದು ರೋಚಕ ಕಥೆ!

ಓರ್ವ ರಾಜಕಾರಣಿಯೆಂದರೆ ಅವರು ಸಕಲೈಶ್ವರ್ಯಭರಿತರು ಎನ್ನುವ ಮಾತಿದೆ. ತಮಗೆ ಮಾತ್ರವಲ್ಲದೆ ತಮ್ಮ ಅಧಿಕಾರದಿಂದ ತಮ್ಮ ಕುಟುಂಬಕ್ಕೂ ಬೇಕಾದಷ್ಟು ಮಾಡಿಡುವ ರಾಜಕಾರಣಿಗಳಿಗೆ ಭಾರತದಲ್ಲಿ ಬರವಿಲ್ಲ. ತನಗೂ ತನ್ನ ಕುಟುಂಬಕ್ಕೂ ಬೇಕಾದಷ್ಟು ಮಾಡಿಡುವ ಈ ಕಾಲದಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯಂತಹಾ ರಾಜಕಾರಣಿಗಳೂ ಇದ್ದಾರೆ ಎಂದರೆ ಅದು ಬಹಳ ಅಪರೂಪವೇ ಸರಿ. ಇಂತಹಾ ಒಂದು ದೇಶದ ಅತಿದೊಡ್ಡ ರಾಜಕಾರಣಿಯ ಕುಟುಂಬದ ಕುರಿತಾದ ಒಂದು ಸಣ್ಣ ಸ್ಟೋರಿಯನ್ನು ಹೇಳುತ್ತೇವೆ ನೋಡಿ.

ದೇಶದಲ್ಲಿ ತನ್ನ ಕುಟುಂಬಕ್ಕೆ ದುಡಿಯದೆ ದೇಶಕ್ಕಾಗಿ ಸರ್ವಸ್ವವನ್ನೇ ತ್ಯಾಗ ಮಾಡಿರುವ ರಾಜಕಾರಣಿಗಳು ಯಾರು ಎಂಬ ಪ್ರಶ್ನೆಗೆ ಪಕ್ಕನೆ ಉತ್ತರ ಬರೋದು ನಮ್ಮ ದೇಶದ ಹೆಮ್ಮೆಯ ಮಾಜಿ ಪ್ರಧಾನಿಗಳಾದ ಲಾಲ್ ಬಹದ್ದೂರ್ ಶಾಸ್ತ್ರೀಜಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಜೀ. ಅವರು ದೇಶಸೇವೆಗಾಗಿ ತನ್ನ ಕುಟುಂಬವನ್ನೇ ದೂರವಿಟ್ಟು ನಿಸ್ವಾರ್ಥ ಸೇವೆಯನ್ನು ಗೈದವರು. ನಂತರ ಅವರ ಸಾಲಿಗೆ ಸೇರ್ಪಡೆಯಾದ ಮತ್ತೋರ್ವ ಅಪ್ಪಟ ದೇಶಪ್ರೇಮಿ, ದೇಶಕಂಡ ಮತ್ತೋರ್ವ ರಾಜಕೀಯ ಮುತ್ಸದ್ದಿ ಈಗಿನ ಪ್ರಧಾನಿ ನರೇಂದ್ರ ಮೋದಿ. 4 ಬಾರಿ ಗುಜರತಿನ ಮುಖ್ಯಮಂತ್ರಿಯಾಗಿ, ಪ್ರಸ್ತುತ ದೇಶದ ಪ್ರಧಾನ ಮಂತ್ರಿಯಾದರೂ ತಮ್ಮ ಕುಟುಂಬವನ್ನು ಹತ್ತಿರಕ್ಕೆ ಸುಳಿಯಲು ಬಿಡಲಿಲ್ಲ ಪ್ರಧಾನಿ ನರೇಂದ್ರ ಮೋದಿಯವರು. ತಮ್ಮ ಈ ಸರಳ ರಾಜಕೀಯ ನಡೆಯಿಂದ ವಿಶ್ವ ಮಟ್ಟದಲ್ಲೇ ಭಾರೀ ಜನ ಮಣ್ಣನೆಗೆ ಪಾತ್ರರಾಗಿದ್ದರು.

ಅನಾವರಣವಾಯ್ತು ಯೋಗಿ ಕುಟುಂಬದ ಆಸ್ತಿ..!

ಈವರೆಗೆ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಅವರ ಕುಟುಂಬದ ಆಸ್ತಿಯ ಲೆಕ್ಕಾಚಾರಗಳನ್ನು ದೇಶ ವಿಮರ್ಶಿಸುತ್ತಿತ್ತು. ದೇಶದ ಪ್ರಧಾನಿಯಾಗಿದ್ದರೂ ಕೂಡಾ ತಮ್ಮ ಕುಟುಂಬವನ್ನು ರಾಜಕೀಯದ ಅಥವಾ ತನ್ನ ಆಡಳಿತದ ಸಮೀಪಕ್ಕೂ ಪ್ರವೇಶಿಸಲು ಬಿಡಲಿಲ್ಲ ಎಂಬ ಉಧ್ಘೋಶ ದೇಶದೆಲ್ಲೆಡೆ ಪಸರಿಸಿತ್ತು. ಕೇವಲ ಪ್ರಧಾನಿ ನರೇಂದ್ರ ಮೋದಿ ಮಾತ್ರವಲ್ಲ, ಅವರ ಕುಟುಂಬವೂ ಮೋದಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ ಎನ್ನುವುದೂ ಅಷ್ಟೇ ಗುರುತಿಸುವಂತದ್ದು.

ಆದರೆ ಇದೀಗ ಮತ್ತೋರ್ವ ಹೃದಯ ಸಾಮ್ರಾಟನ ಕುಟುಂಬದ ನೈಜ ಸ್ಥಿತಿ ಅನಾವರಣವಾಗಿದೆ. ಎಸ್… ಅವರು ಕೋಟ್ಯಾಂತರ ಹಿಂದೂಗಳ ಹೃದಯ ಸಾಮ್ರಾಟ. ಅವರೆಂದರೆ ಕೋಟಿ ಹಿಂದೂಗಳು ಜೈ ಎನ್ನುತ್ತಾರೆ. ಹಾ… ಅವರೇ ಉತ್ತರ ಪ್ರದೇಶದ ಮುಖ್ಯಮಂತ್ರಿ, ಫೈರ್ ಬ್ರಾಂಡ್ ಖ್ಯಾತಿಯ ಯೋಗಿ ಆದಿತ್ಯನಾಥ್. ಅತ್ಯಂತ ಸಣ್ಣ ವಯಸ್ಸಿನಲ್ಲೇ ಸನ್ಯಾಸ ಧೀಕ್ಷೆಯನ್ನು ಪಡೆದು ದೇಶದಲ್ಲಿ ಸಂತ ಪರಂಪರೆಯನ್ನು ಮುಂದುವರೆಸಲು ಸಜ್ಜಾಗಿದ್ದ ಯುವಕ ಆದಿತ್ಯನಾಥ್. ಅವರು ಕೇವಲ ಸನ್ಯಾಸಿ ಮಾತ್ರವೇ ಆಗಲಿಲ್ಲ. ಹಿಂದೂ ಧರ್ಮದ ಉದ್ಧಾರಕ್ಕಾಗಿ ಅವರು ರಾಜಕೀಯ ಪ್ರವೇಶವನ್ನೂ ಮಾಡಿದ್ದರು.

ಅತ್ಯಂತ ಸಣ್ಣ ವಯಸ್ಸಿನಲ್ಲಿ ಸಂಸದ ಸ್ಥಾನಕ್ಕೆ ಸ್ಪರ್ಧಿಸಿ 26ನೇ ವಯಸ್ಸಿಗೇ ಮೊದಲ ಬಾರಿಗೆ ಲೋಕಸಭಾ ಪ್ರವೇಶವನ್ನು ಪಡೆದವರು ಯೋಗಿ ಆದಿತ್ಯನಾಥ್. ಸತತ 5 ಬಾರಿ ಸಂಸದನಾಗಿ ಆಯ್ಕೆಯಾದರೂ ಈವರೆಗೂ ಯಾವುದೇ ಫಲಾಪೇಕ್ಷೆ ಇಲ್ಲದೆ ರಾಜಕೀಯದಲ್ಲಿ ಪಳಗಿದವರು ಯೋಗಿ ಮಹರಾಜ್. ಹಿಂದುತ್ವದ ಉಸಿರಾಗಿ ದೇಶದ ಉದ್ದಗಲಕ್ಕೂ ಸಂಚರಿಸಿ ಹಿಂದೂ ಯುವಕರ ರಕ್ತವನ್ನು ಬಿಸಿಗೊಳಿಸಿದವರು ಈ ಹಿಂದೂ ಹೃದಯ ಸಾಮ್ರಾಟ್.

ನಂತರ ಕಳೆದ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಭೇರಿಯನ್ನು ಭಾರಿಸಿ ನಿರೀಕ್ಷಿಸದೆನೇ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದವರು ಯೋಗಿ ಆದಿತ್ಯನಾಥ್ ಜೀ. ನಂತರ ನಡೆದಿದ್ದೇ ಇತಿಹಾಸ. ಗೂಂಡಾ ರಾಜ್ಯ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದ ಉತ್ತರ ಪ್ರದೇಶದ ಚಿತ್ರಣವೇ ಬದಲಾಗಿತ್ತು. ದಿನ ಉರುಳುತ್ತಿದ್ದಂತೆಯೇ ಗೋಂಡಾಗಳ ತಲೆಗಳೂ ಉರುಳಲಾರಂಭಿಸಿತ್ತು. ಒಂದಲಾ ಎರಡಲ್ಲಾ, ಸಾವಿರಾರು ಎನ್ ಕೌಂಟರ್‍ಗಳು ಉತ್ತರ ಪ್ರದೇಶದಲ್ಲಿ ನಡೆದೇ ಹೋಗಿತ್ತು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದಿನ ಕಳೆದಂತೆಯೇ ದೇಶದ ಮಾಸ್ ಲೀಟರ್ ಆಗಿ ಪರಿವರ್ತನೆ ಆದರು. ಮೋದಿ ನಂತರದಲ್ಲಿ ಮತ್ಯಾರು ಎಂಬ ಪ್ರಶ್ನೆಗೆ ಯೋಗಿ ಮಹರಾಜ್ ಅಪ್ಪಟ ಉತ್ತರವಾಗಿ ಕಂಡರು. ತತ್ತರವಾಗಿದ್ದ ಉತ್ತರ ಬದಲಾಗಿ ಹೋಗಿತ್ತು.

ಯೋಗಿ ಆದಿತ್ಯನಾಥ್ ಇಷ್ಟೊಂದು ಪವರ್ ಫುಲ್ ನಾಯಕರಾಗಿದ್ದರೂ ಕೂಡಾ ಅವರ ಕುಟುಂಬ ಮಾತ್ರ ಸಾಮಾನ್ಯರಲ್ಲಿ ಸಾಮಾನ್ಯ. ಉಳಿದೆಲ್ಲಾ ರಾಜಕಾರಣಿಗಳಂತೆ ತನಗೂ ಹಾಗೂ ತನ್ನ ಕುಟುಂಬಕ್ಕೂ ಎನ್ನದೆ, ಕೇವಲ ದೇಶದಿಂದ ಮತ್ತು ದೇಶಕ್ಕೆ ಎಂಬ ಪರಿಪಾಠವನ್ನು ಅನುಸರಿಸಿಕೊಂಡು ಬಂದವರು ಯೋಗೀಜಿ. ಅದ್ಯಾವಾಗ ಸನ್ಯಾಸ ಧೀಕ್ಷೆಯನ್ನು ಸ್ವೀಕರಿಸಿ ಸಂತನಾದರೋ ಅಂದಿನಿಂದ ಯೋಗಿ ತನ್ನ ಕುಟುಂಬವನ್ನು ತನ್ನ ಆಡಳಿತದ ಅಥವಾ ಜೀವನದ ಭಾಗವಾಗಿ ಕಾಣಲೇ ಇಲ್ಲ.

ಯೋಗಿ ಸಹೋದರಿ ಏನು ಮಾಡುತ್ತಿದ್ದಾರೆ ಗೊತ್ತಾ..?

ಬನ್ನಿ, ಯೋಗಿಯ ಸಂಪೂರ್ಣ ಕುಟುಂಬದ ವಿಚಾರ ಬಿಟ್ಟು ಕೇವಲ ಅವರ ಓರ್ವ ಸಹೋದರಿಯ ಸ್ಟೋರಿಯನ್ನು ನಾವು ಹೇಳುತ್ತೇವೆ ಕೇಳಿ. ಶಶಿ ಪಾಲ್ ದೇವಿ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಿರಿಯ ಸಹೋದರಿ. ಅತ್ತ ತನ್ನ ಅಣ್ಣ 5 ಬಾರಿ ಸಂಸದನಾಗಿ ಇದೀಗ ದೇಶದ ಅತಿ ದೊಡ್ಡ ರಾಜ್ಯವನ್ನು ಆಳುತ್ತಿರುವ ದೊರೆ. ಆದರೆ ಇತ್ತ ಈ ಕಿರಿಯ ಸಹೋದರಿ ಬೀದಿ ಬದಿ ಚಹಾ ಅಂಗಡಿ ಇಟ್ಟುಕೊಂಡು ಸಾಮಾನ್ಯ ಜೀವನ ನಡೆಸುತ್ತಿರುವ ಸ್ವಾವಲಂಭಿ.

ಹೌದು… ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಮಹರಾಜ್ ಅವರ ಕಿರಿಯ ಸಹೋದರಿ ಶಶಿಪಾಲ್ ದೇವಿ ಎಂಬವರು ಕಳೆದ 23 ವರ್ಷಗಳಿಂದ ಉತ್ತರಖಂಡ್‍ನ ಕೋಠಾರ್ ಗ್ರಾಮದಲ್ಲಿ ಸಮಾನ್ಯರಂತೆ ಇಂದಿಗೂ ಟೀ ಸ್ಟಾಲ್ ನಡೆಸುತ್ತಾ ಜೀವನವನ್ನು ಸಾಗಿಸುತ್ತಿದ್ದಾರೆ. ಕೇವಲ ಶಶಿಪಾಲ್ ಮಾತ್ರವಲ್ಲದೆ ಅವರ ಪತಿಯೂ ಟೀ ಸ್ಟಾಲ್ ಅಂಗಡಿಯ ಬಳಿಯೇ ಚಿಕ್ಕದಾದ ಪೂಜಾ ಸಾಮಾಗ್ರಿಯ ಅಂಗಡಿಯನ್ನು ತರೆದು ಸಾಮಾನ್ಯರಂತೆ ವ್ಯವಹಾರವನ್ನು ನಡೆಸಿಕೊಂಡು ಬರುತ್ತಿದ್ದಾರೆ.

ತನ್ನ ಅಣ್ಣ ಒಂದು ರಾಜ್ಯದ ಮುಖ್ಯಮಂತ್ರಿ, ದೇಶದ ಅಗ್ರಗಣ್ಯ ರಾಜಕಾರಣಿಗಳಲ್ಲಿ ಓರ್ವರು. ಆದರೆ ತಂಗಿ ಮಾತ್ರ ಒಂದು ಸಾಮಾನ್ಯ ಅಂಗಡಿಯ ಮಾಲೀಕೆ. ಸ್ವಾವಲಂಭಿ ಜೀವನ ನಡೆಸುತ್ತಿರುವ ಯೋಗಿ ಆದಿತ್ಯನಾಥ್ ಅವರ ಸಹೋದರಿ ಈವರೆಗೂ ಅಣ್ಣನ ಬಳಿ ಸಹಾಯ ಹಸ್ತವನ್ನು ಚಾಚಿದವರಲ್ಲ. ಹಾಗೂ ಯೋಗೀಜಿಯೂ ಇತರೆ ರಾಜಕಾರಣಿಗಳಂತೆ ಕುಟುಂಭದವರಿಗೆ ಮಾಡಿಟ್ಟವರಲ್ಲ. ಇದರಿಂದಲೇ ಅವರು ಇಂದಿಗೂ ಅವರು ದೇಶದ ಮಾದರಿ ರಾಜಕಾರಣಿಯಾಗಿದ್ದಾರೆ.

ದೇಶದಲ್ಲಿ ವಿರೋಧಿಗಳು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ರನ್ನು ಟೀಕಿಸುತ್ತಲೇ ಇರುತ್ತಾರೆ. ಆದರೆ ಹೀಗೆ ವಿರೋಧಿಸುವ ಅದೆಷ್ಟೋ ವಿರೋಧಿಗಳು ಇಂದು ಕೋಟಿಗಟ್ಟಲೆಯ ಆಸ್ತಿಯನ್ನು ಮಾಡಿಕೊಂಡು ಜೀವನ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಅವೆಲ್ಲದರ ಮಧ್ಯೆ ತಾನೂ ಸರಳ ಜೀವನವನ್ನು ನಡೆಸಿಕೊಂಡು ಬರುತ್ತಿದ್ದು, ತನ್ನ ಕುಟುಂಬವೂ ಸರಳ ಜೀವನದತ್ತ ಸಾಗುತ್ತಿರುವುದು ದೇಶದಲ್ಲಿ ಮಾದರಿಯೇ ಸರಿ.

ಇಂದು ತನಗೆ ಕನಿಷ್ಟ ಗ್ರಾಮ ಪಂಚಾಯತ್‍ನಲ್ಲೂ ಒಂದು ಸಣ್ಣ ಅಧಿಕಾರ ಸಿಕ್ಕರೆ ತನ್ನ ಕುಟುಂಬವನ್ನೂ ಅದರ ತೆಕ್ಕೆಗೆ ತೆಗೆದುಕೊಂಡು ಬೇಕಾದಷ್ಟು ದೋಚುವ ರಾಜಕಾರಣಿಗಳು ಇರೋವಾಗ ಯಾವುದೇ ಫಲಾಪೇಕ್ಷೆಯನ್ನು ಇಟ್ಟುಕೊಳ್ಳದೆ, ಇಂದಿಗೂ ಆಡಂಬರದ ಜೀವನವನ್ನು ನಡೆಸದೆ ಕೇವಲ ಖಾವಿಧಾರಿಯಾಗಿ ಜನರ ಮನವನ್ನು ಗೆದ್ದ ಯೋಗಿ ಆದತ್ಯನಾಥ್‍ರಿಗೂ ಹಾಗೂ ಅವರ ಹಾದಿಯನ್ನೇ ತುಳಿಯುತ್ತ ಸಾಮಾನ್ಯರಂತೆ ಜೀವನ ನಡೆಸುತ್ತಿರುವ ಯೋಗೀ ಮಹರಾಜ್ ಅವರ ಕುಟುಂಬಕ್ಕೂ ಒಂದು ಸೆಲ್ಯೂಟ್ ಕೊಡಲೇ ಬೇಕಲ್ವಾ..?

-ಸುನಿಲ್ ಪಣಪಿಲ

Tags

Related Articles

Close