ಪ್ರಚಲಿತ

ಮಾಯಾವತಿಗೆ ಬಿಗ್ ಶಾಕ್ ನೀಡಿದ ಯೋಗಿ!! ಅಷ್ಟಕ್ಕೂ ಯೋಗಿ ಸರ್ಕಾರ ಮಾಡಿದ್ದಾದರೂ ಏನು ಗೊತ್ತೇ??

ಈಗಾಗಲೇ ಭಾರತೀಯ ಜನತಾ ಪಾರ್ಟಿಯನ್ನು ವಿರೋಧಿಸುತ್ತಲೇ ಬರುತ್ತಿರುವ ಇತರ ರಾಜಕೀಯ ಪಕ್ಷಗಳು ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸನ್ನು ಸಹಿಸಲಾಗದೇ ಮೋದಿ ವಿರೋಧಿ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಾಗುತ್ತಲೇ ಇದ್ದಾರೆ!! ಆದರೆ ಭಾರತೀಯ ಜನತಾ ಪಾರ್ಟಿಯು ದಲಿತ ವಿರೋಧಿ, ಬೌದ್ಧ ವಿರೋಧಿ ಎಂಬಂತೆ ವಿನಾಕಾರಣ ಬಿಂಬಿಸುತ್ತಿದ್ದ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿಗೆ ಇದೀಗ ಉತ್ತರ ಪ್ರದೇಶದ ಯೋಗಿ ಸರ್ಕಾರ ತಕ್ಕ ಉತ್ತರವನ್ನು ನೀಡುವ ಮೂಲಕ ಫೈರ್ ಬ್ರಾಂಡ್ ಯೋಗಿ ಮತ್ತೆ ಸುದ್ದಿಯಾಗಿದ್ದಾರೆ!!

ಈಗಾಗಲೇ ಕಾಂಗ್ರೆಸ್ಸಿಗರು ಡಾ. ಬಿ.ಆರ್ ಅಂಬೇಡ್ಕರ್ ಗೆ ಮಾಡಿದ ಅವಮಾನವನ್ನು ಸಹಿಸದ ಬಿಜೆಪಿ ಸರಕಾರ ಮಾತ್ರ ಅವರಿಗೆ ಯಾವೆಲ್ಲಾ ಸ್ಥಾನವನ್ನು ಕೊಡಬೇಕೋ ಅದನ್ನೆಲ್ಲಾ ಕೊಡುತ್ತಲೇ ಬರುತ್ತಿರುವ ವಿಚಾರ ತಿಳಿದೇ ಇದೆ!! ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಂದ ಅಂಬೇಡ್ಕರ್ ಹೆಸರಿನ ಜೊತೆಗೆ ಹೊಸ ಹೆಸರನ್ನು ಸೇರ್ಪಡೆ ಮಾಡುವ ಮೂಲಕ ಹೊಸ ನಾಂದಿಯನ್ನು ಹಾಡಿದ್ದರು!! ಆದರೆ ಇದೀಗ ಬೌದ್ಧನನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದ ಮಾಯಾವತಿ ಸೇರಿ ಹಲವು ಮುಖಂಡರಿಗೆ ಯೋಗಿ ದೊಡ್ಡ ಶಾಕ್ ನೀಡಿ ಮತ್ತೆ ಸುದ್ದಿಯಾಗಿದ್ದಾರೆ.

ಹೌದು… ದಲಿತರ ಹೆಸರಿನಲ್ಲಿ ರಾಜಕಾರಣ ನಡೆಸಿದಷ್ಟು ಬೇರಾವ ಸಮುದಾಯದ ಬಗ್ಗೆಯೂ ನಡೆದಿರಲಿಕ್ಕಿಲ್ಲ ಎಂದನಿಸುತ್ತದೆ!! ಯಾಕೆಂದರೆ ಈಗಾಗಲೇ ದಲಿತರ ಹೆಸರಿನಲ್ಲಿ ಸದಾ ರಾಜಕಾರಣ ಮಾಡುತ್ತಾ ತಮ್ಮ ಬೇಳೆ ಬೇಯಿಸಿಕೊಂಡವರು ಮಾಯಾವತಿಯಂತಹ ದಲಿತ ರಾಜಕಾರಣಿಗಳು ಮೀಸಲಾತಿಯ ಹೆಸರಿನಲ್ಲಿ ತಾವೇ ಸಂಪತ್ತನ್ನು ಮಾಡಿದರೇ ಹೊರತು ನಿಜವಾಗಿಯೂ ಕಷ್ಟದಲ್ಲಿರುವ ದಲಿತರಿಗೆ ಈ ರಾಜಕಾರಣಿಗಳು ಅಥವಾ ಅಧಿಕಾರಿಗಳು ಸಹಾಯ ಮಾಡಿದ್ದು ಕಂಡೂ ಇಲ್ಲ, ಕೇಳಿಯೂ ಇಲ್ಲ. ಹಾಗಾಗಿ ಇದೀಗ ದಲಿತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದ ಮಾಯಾವತಿಗೆ ಉತ್ತರ ಪ್ರದೇಶದ ಯೋಗಿ ಸರ್ಕಾರ ತಕ್ಕ ಉತ್ತರವನ್ನು ತನ್ನ ಕಾರ್ಯದ ಮೂಲಕವೇ ನೀಡಿದೆ.

ಅದಕ್ಕಾಗಿ ಉತ್ತರ ಪ್ರದೇಶದಲ್ಲಿರುವ ಪ್ರಮುಖ ಆರು ಬೌದ್ಧ ಕ್ಷೇತ್ರಗಳನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸೋಧ್ಯಮ ತಾಣಗಳಾಗಿ ಅಭಿವೃದ್ಧಿ ಪಡಿಸಲು ಯೋಗಿ ಆದಿತ್ಯನಾಥ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಬೌದ್ಧನನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದ ಮಾಯಾವತಿ ಸೇರಿ ಹಲವು ಮುಖಂಡರಿಗೆ ಯೋಗಿ ಆದಿತ್ಯನಾಥ್ ಸರ್ಕಾರ ದಿಟ್ಟ ಉತ್ತರವನ್ನು ನೀಡುವ ಮೂಲಕ ಬಹುಜನ ಸಮಾಜವಾದಿ ಪಕ್ಷಕ್ಕೆ ಶಾಕ್ ನೀಡಿದೆ!!

Related image

ಮಾಯಾವತಿ ಅಧಿಕಾರದಲ್ಲಿದ್ದಾಗ ಕೇವಲ ಕೆಲವು ನಗರಗಳಿಗೆ ಗೌತಮ ನಗರ, ಸಿದ್ಧಾರ್ಥ ನಗರ, ಬುದ್ಧ ನಗರ ಎಂದು ನಾಮಕರಣ ಮಾಡಿ ಬುದ್ಧನ ಸಾರಥಿಯಂತೆ ಬಿಂಬಿಸಿಕೊಂಡಿದ್ದರು. ಆದರೆ ಬೌದ್ಧ ಧರ್ಮದ ಪ್ರಸಿದ್ಧ ಕ್ಷೇತ್ರಗಳ ಅಭಿವೃದ್ಧಿಯನ್ನೇ ಮರೆತ್ತಿದ್ದ ಇವರು ದುಡ್ಡು ಮಾಡುವುದರಲ್ಲೇ ಬ್ಯುಸಿಯಾಗಿ ಹೋದರೋ ಗೊತ್ತಿಲ್ಲ!! ಆದರೆ ದಲಿತರನ್ನು ಬೌದ್ಧ ಧರ್ಮವನ್ನು ಮರೆತ್ತಿದ್ದಂತೂ ಅಕ್ಷರಶಃ ನಿಜ!! ಆದರೆ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಅಧಿಕಾರ ವಹಿಸಿಕೊಂಡಂದಿನಿಂದಲೂ ಸಾಮಾಜಿಕವಾಗಿ, ಧಾರ್ಮಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿಯತ್ತ ಸಾಗುತ್ತಿರುವ ಉತ್ತರಪ್ರದೇಶವನ್ನು ಗೂಂಡಾ ಮುಕ್ತ ರಾಜ್ಯವನ್ನಾಗಿ ಸ್ಥಾಪಿಸಲು ಪಣತೊಟ್ಟ ಇವರು ಇದೀಗ ಪ್ರಸಿದ್ಧ ಬೌದ್ಧ ಕ್ಷೇತ್ರಗಳಾದ ಸಾರಾನಾಥ, ಖುಷಿ ನಗರ, ಸ್ರವಸ್ತಿ, ಸಂಕಿಸಾ, ಕೌಷಂಬಿ ಮತ್ತು ಕಪಿಲವಸ್ತು ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲದೇ ಎಲ್ಲ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಸರಣಿಯಾಗಿ ಭೇಟಿ ನೀಡುವಂತ ಯೋಜನೆಯನ್ನು ರೂಪಿಸಿದ್ದಾರೆ.

ಹಾಗಾಗಿ ಉತ್ತರ ಪ್ರದೇಶದಲ್ಲಿರುವ ತಾಜಮಹಲ್ ಮತ್ತು ವಾರಣಾಸಿ ಮಾದರಿಯಲ್ಲಿ, ವಿಶ್ವಖ್ಯಾತಿಯ ಹಲವು ತಾಣಗಳಿದ್ದು, ಅವುಗಳ ಅಭಿವೃದ್ಧಿಗೆ ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿರುವುದೇ ಹೆಮ್ಮೆಯ ವಿಚಾರ!! ಹಾಗಾಗಿ ಇದೀಗ ಬೌದ್ಧ ಕ್ಷೇತ್ರಗಳನ್ನು ಯೋಗಿ ಆದಿತ್ಯನಾಥ ಸರ್ಕಾರ ಕಣ್ಣಿಟ್ಟಿದ್ದು, ಹೊಸ ಬದಲಾವಣೆಗೆ ತೆರೆದುಕೊಂಡಿದೆ. ಬೌದ್ಧನ ಕ್ಷೇತ್ರಗಳ ಅಭಿವೃದ್ಧಿಗೆ ನೂತನ ಯೋಜನೆ ರೂಪಿಸಿದ್ದು, ಶೀಘ್ರದಲ್ಲಿ ಈ ಯೋಜನೆಗೆ ಕಾಮಗಾರಿ ಆರಂಭವಾಗಲಿದೆ. ಈ ಯೋಜನೆ ಪೂರ್ಣಗೊಂಡರೆ ಉತ್ತರ ಪ್ರದೇಶದಲ್ಲಿ ಪ್ರವಾಸೋಧ್ಯಮದ ವಿಶೇಷವಾಗಿ ಬೌದ್ಧರ ತಾಣಗಳಿಗೆ ಲಕ್ಷಾಂತರ ಜನರು ಭೇಟಿ ನೀಡುವಂತೆ ಮಾಡುವುದು ನಿಶ್ಚಿತ ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ!!

ಬಿಜೆಪಿ ದಲಿತ ವಿರೋಧಿ ಎನ್ನುವ ವಿರೋಧ ಪಕ್ಷಗಳಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಕ್ಕ ಉತ್ತರ ನೀಡಿದ್ದು, ಡಾ.ಬಿ.ಆರ್ ಅಂಬೇಡ್ಕರ್ ಹೆಸರಿನ ಜೊತೆಗೆ ರಾಮ್ ಜೀ ಅಂತಾ ಸೇರ್ಪಡೆ ಭಾವಚಿತ್ರವಷ್ಟೇ ಅಲ್ಲದೆ ದಲಿತರ ಏಳಿಗೆಗೆ, ರಕ್ಷಣೆಗೆ ಇನ್ನು ಹೊಸ ಅಸ್ತ್ರಗಳು ಹೊರ ಬರಲಿವೆ ಎಂದು ಯೋಗಿ ಆದಿತ್ಯನಾಥ್ ಇತ್ತೀಚೆಗಷ್ಟೇ ತಿಳಿಸಿದ್ದರು!! ಅಷ್ಟೇ ಅಲ್ಲದೇ ಇಲ್ಲಿಯವರೆಗೆ ಕಾಂಗ್ರೆಸ್ ಸರ್ಕಾರ ಮಾಡಲಾಗದಂತಹ ಕಾರ್ಯವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಮಾಡಿ ಜನಮನ್ನಣೆಯನ್ನೂ ಪಡೆದಿದ್ದಾರೆ.

ಆದರೆ ಇದೀಗ ಪ್ರದೇಶದಲ್ಲಿರುವ ಪ್ರಮುಖ ಆರು ಬೌದ್ಧ ಕ್ಷೇತ್ರಗಳನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸೋಧ್ಯಮ ತಾಣಗಳಾಗಿ ಅಭಿವೃದ್ಧಿ ಪಡಿಸಲು ಯೋಗಿ ಆದಿತ್ಯನಾಥ ಸರ್ಕಾರ ನಿರ್ಧರಿಸಿದ್ದಲ್ಲದೇ, ಈ ಮೂಲಕ ಬೌದ್ಧನನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದ ಮಾಯಾವತಿ ಸೇರಿ ಹಲವು ಮುಖಂಡರಿಗೆ ಯೋಗಿ ದೊಡ್ಡ ಶಾಕ್ ನೀಡಿರುವುದೇ ಹೆಮ್ಮೆಯ ವಿಚಾರವಾಗಿದೆ!!

ಕೃಪೆ:
https://economictimes.indiatimes.com/news/politics-and-nation/yogi-government-to-promote-6-buddhist-destinations-to-challenge-mayawatis-claim-over-buddha/articleshow/63584876.cms
– ಅಲೋಖಾ

 

Tags

Related Articles

Close