ಪ್ರಚಲಿತ

ಅದೆಷ್ಟೋ ವರ್ಷಗಳ ತರುವಾಯ ಮೋದಿ ತನ್ನ ಹಿರಿಯಣ್ಣನನ್ನು, ಗುಜರಾತಿನಲ್ಲಿ ಆಕಸ್ಮಿಕವಾಗಿ ಭೇಟಿಯಾದ ನಂತರ ಆಶೀರ್ವಾದ ಪಡೆದುಕೊಂಡಿದ್ದು ಹೀಗೆ!

ಮೋಹವನ್ನೂ ಸಹ ಅಲ್ಲಿಯೇ ತ್ಯಜಿಸಿ ಹೊರನಡೆದ ಮೋದಿ ಸಂತನಾಗಿಬಿಟ್ಟರು!

ಇವತ್ತಿನವರೆಗೂ ಬಹುಷಃ ಪ್ರಧಾನಿ ಮೋದಿ ರಾಜಕಾರಣಕ್ಕೆ ಬಂದ ಮೇಲೆ, ಎಲ್ಲಿಯಾದರೂ, ಅವರ ಅಣ್ಣ ತಮ್ಮಂದಿರ ಜೊತೆ ಇರುವ ಛಾಯಾಚಿತ್ರಗಳನ್ನು
ನೋಡಿದ್ದೀರಾ? ಎಲ್ಲಿಯಾದರೂ, ತನ್ನ ಬಳಗದವರ ಜೊತೆ ತೀರಾ ಎನ್ನುವಷ್ಟು ಸಮಯ ಕಳೆದಿದ್ದನ್ನು ನೋಡಿದ್ದೀರಾ?! ಹೆಚ್ಚಾಗಿ, ಮೋದಿಯವರು ತನ್ನ ತಾಯಿಯ ಜೊತೆ ಇರುವ ಚಿತ್ರಗಳು ಸಿಗಬಹುದು! ತಾಯಿಯ ಜೊತೆಗಿನ ಆಗಾಗಿನ ಭೇಟಿ ಕಾಣಬಹುದಷ್ಟೇ! ಅದನ್ನು ಹೊರತು ಪಡಿಸಿ ಎಲ್ಲಿಯೂ ಮೋದಿ ಉಳಿದ ತನ್ನ ಕುಟುಂಬದ ಸದಸ್ಯರನ್ನು ಭೇಟಿಯಾಗಿದ್ದು ತೀರಾ ವಿರಳ!

ರಾಜಕೀಯಕ್ಕೆ ಕಾಲಿಟ್ಟಾಗಿನಿಂದಲೋ, ಅಥವಾ ಸ್ವಯಂ ಸೇವಕ ಸಂಘಕ್ಕೆ ಅರ್ಪಿತವಾಗಲು ಯಾವತ್ತು ಮನೆಯಿಂದ ಹೊರಬಿದ್ದರೋ, ಅವತ್ತಿನಿಂದಲೇ ಬಹುಷಃ ಕುಟುಂಬ ಸದಸ್ಯರ ಮೇಲಿದ್ದ ಮೋಹವನ್ನೂ ಸಹ ಅಲ್ಲಿಯೇ ತ್ಯಜಿಸಿ ಹೊರನಡೆದ ಮೋದಿ, ಸಂತನಾಗಿಬಿಟ್ಟರು! ರಾಷ್ಟ್ರವನ್ನು ಅದಮ್ಯವಾಗಿ ಪ್ರೀತಿಸಬಲ್ಲಂತಹ ಸಂತ! ಮಹಾಸಂತನಾದರು! ತನಗಾವುದೇ ಪವರ್ರು, ಪೊಸಿಷನ್ನಿನಲ್ಲಿಯೂ ಸಹ, ವೈಯುಕ್ತಿಕವಾಗಿ ಯಾವುದನ್ನೂ ದುರುಪಯೋಗ ಪಡಿಸಿಕೊಳ್ಳದ ಮೋದಿ ಎಂಬ ಸಂತನನ್ನೂ ದ್ವೇಷಿಸುವ ಕೆಲವರನ್ನು ನೋಡಿದಾಗ ನಿಜಕ್ಕೂ ಅಚ್ಚರಿಯಾಗಿಬಿಡುತ್ತದೆ!

ಮೋದಿಗಿರುವುದು ಒಂದು ಸಹೋದರಿ, ಮತ್ತು ಮೂವರು ಸಹೋದರರಿದ್ದರೂ ಸಹ ವಿಚಾರ ವಿನಿಮಯ ಬಹಳ ಕಡಿಮೆಯೇ! ತನ್ನ ಜನುಮದಿನದ ದಿನ ತಾಯಿಯನ್ನು ತಪ್ಪದೇ ಭೇಟಿಯಾಗುವ ಮೋದಿ, ಮಾತನಾಡುವುದೂ ಸಹ ತಾಯಿಯ ಬಗೆಗೆ ಮಾತ್ರವೇ! ಮೋದಿ 14 ವರ್ಷಗಳ ಕಾಲ ಮುಂಚೆ ಗುಜರಾತಿನ ಮುಖ್ಯಮಂತ್ರಿಯಾಗಿದ್ದರೂ, ಈ ಗ ಪ್ರಧಾನುಯಾಗಿದ್ದರೂ ಸಹ, ಅವರ ಕುಟುಂಬದ ಸದಸ್ಯರಿಗೆ ಯಾವುದೇ ಕಾರಣಕ್ಕೂ ಕೂಡ, ವಿಶೇಷವಾದ ಸೌಲಭ್ಯಗಳಾಗಲೀ, ಸಮಾಜದಲ್ಲಿ ವಿಶೇಷವಾದ ‘ಮುಖ್ಯ’ ಎಂಬಂತಾದ ಯಾವುದೇ ಆದರಗಳೂ ಸಿಗುವುದಿಲ್ಲ. ಸಾಮಾನ್ಯರಲ್ಲಿ ತೀರಾ ಸಾಮಾನ್ಯರಾಗಿ ಇರುವ ಮೋದಿ ಕುಟುಂಬ ಇವತ್ತಿಗೂ ಕೂಡ ಅದೇ ರೀತಿಯ ಶ್ರಮವಹಿಸಿ ದುಡಿಯುತ್ತಿದ್ದಾರೆ! ತನ್ನ ಪ್ರಭಾವವನ್ನು ಬಳಸಿ ಕುಟುಂಬದ ಸದಸ್ಯರನ್ನೆಲ್ಲ ಉನ್ನತ ಹುದ್ದೆಗೇರಿಸಬಹುದಿತ್ತು ಪ್ರಧಾನಿ! ಆದರೆ, ರಾಜಕೀಯವನ್ನು ವೈಯುಕ್ತಿಕವಾಗಿ ಬಳಸದೇ ಇರುವ ಧೀಮಂತ ರಾಜಕಾರಣಿಗಳಲ್ಲಿ ಮೋದಿಯೂ ಒಬ್ಬರು!

ನೆನ್ನೆ ಗುಜರಾತಿನಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಮೋದಿ ತವರಿಗೆ ಮತ ಹಾಕಲು ಬಂದಿದ್ದರಷ್ಟೇ! ರಾನಿಪ್ ನಲ್ಲಿರುವ ಮತಗಟ್ಟೆಗೆ ಮತ ಚಲಾಯಿಸಲು ಬಂದಿದ್ದ ಮೋದಿಗೊಂದು ಅಚ್ಚರಿ ಕಾದಿತ್ತು! ಆಕಸ್ಮಿಕವಾಗಿ, ಅದೇ ಮತಗಟ್ಟೆಗೆ ಮತ ಚಲಾಯಿಸಲು ಬಂದಿದ್ದ ಮೋದಿಯ ಹಿರಿಯಣ್ಣ ಸೋಮ್ ಭಾಯಿ ಮೋದಿ ಯನ್ನು ನೋಡಿದ ತಕ್ಷಣ ಹತ್ತಿರ ಹೋಗಿ ಕಾಲು ಮುಟ್ಟಿ ನಮಸ್ಕರಿಸಿ , ಕೈ ಕುಲುಕಿದ್ದಾರೆ. ಅದೇ ರೀತಿಯಲ್ಲಿ, ಮೋದಿಯ ಅಣ್ಣ ಕೂಡಾ ತೀರಾ ಸಂತಸದಿಂದ ಮೋದಿಯ ಕುಶಲೋಪರಿ ವಿಚಾರಿಸಿದ್ದಾರೆ. ಅಲ್ಲದೇ, ಹೆಮ್ಮೆಯಿಂದ ಮೋದಿಯ ಬೆನ್ನು ತಟ್ಟಿದ್ದಾರೆ. ತೀರಾ ಜಾಸ್ತಿ ಮಾತನಾಡದೇ, ಮತ ಚಲಾಯಿಸಿ ಹೊರಟಿದ್ದಾರೆ ಮೋದಿ!!!

ಬಹುಷಃ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿ, ಒಬ್ಬ ಪ್ರಧಾನಿ ಅದೆಷ್ಟೋ ವರ್ಷಗಳ ನಂತರ ತನ್ನ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ್ದೇನೋ! 2014 ರ ನಂತರ ಸಹೋದರರನ್ನು ಭೇಟಿಯೇ ಆಗದಿದ್ದ ಪ್ರಧಾನಿ ಮೋದಿ, ಅಣ್ಣನನ್ನು ನೋಡಿದ ತಕ್ಷಣ ತೋರ್ಪಡಿಸಿದ ಭಾವಗಳು ನಿಜಕ್ಕೂ ಅದ್ಭುತವಷ್ಟೇ!

– ಪೃಥು ಅಗ್ನಿಹೋತ್ರಿ

Tags

Related Articles

Close