ಪ್ರಚಲಿತ

ಅಷ್ಟೆಲ್ಲ ನುಂಗಿ ನೀರು ಕುಡಿದು ಗಂಡಾಂತರ ಮಾಡಿದ ಕರ್ನಾಟಕ ಕಾಂಗ‌್ರೆಸ್ಸಿಗರು ಶಾಲಾ ಮಕ್ಕಳ ‘ಶೂ’ ನನ್ನೂ ಬಿಡಲಿಲ್ಲ!!!

ರಾಜ್ಯ ಸರಕಾರ ಭಾಗ್ಯಗಳ ಮೇಲೆ ಭಾಗ್ಯಗಳನ್ನು ನೀಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾದರೂ ಕೂಡ ಇನ್ನೊಂದೆಡೆ ಸರ್ಕಾರಿ ಶಾಲೆಗಳ ಕಡೆ ಮಕ್ಕಳನ್ನು ಸೆಳೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ಮಕ್ಕಳನ್ನು ತಲುಪಬೇಕಾದ ಈ ಯೋಜನೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದ್ದು ಅದರಲ್ಲೂ ಮಕ್ಕಳ ಶೂ ವಿಚಾರದಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿದೆ ಎಂದರೆ ಕಾಂಗ್ರೆಸ್ ಸರಕಾರದಲ್ಲಿ ಭ್ರಷ್ಟಾಚಾರಕ್ಕೂ ಒಂದು ಸ್ಟಾಂಡರ್ಡ್ ಇಲ್ವೇ??

ಹೌದು.. ಸರ್ಕಾರಿ ಶಾಲೆಗೆ ಮಕ್ಕಳನ್ನು ಸೆಳೆಯುವ ನಿಟ್ಟಿನಲ್ಲಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ, ಟೈ, ಶೂಗಳನ್ನು ನೀಡುತ್ತಿದ್ದು, ವಿನಾಶದ ಅಂಚಿನಲ್ಲಿರುವ ಸರ್ಕಾರಿ ಶಾಲೆಯನ್ನು ಮೇಲೆತ್ತಲು ನಾನಾ ರೀತಿಯ ಯೋಜನೆಗಳನ್ನು ಕೈಗೊಳ್ಳುತ್ತಿರುವ ಸರಕಾರವು, ಮಕ್ಕಳಿಗೆ ವಿಶೇಷ ರೀತಿಯ ಸವಲತ್ತನ್ನು ನೀಡುತ್ತಿದೆ. ಆದರೆ ಮಕ್ಕಳಿಗೆ ತಲುಪಬೇಕಾದ ಹಣದಲ್ಲಿ ಕಮಿಷನ್ ಆಸೆಯಿಂದ ಮಧ್ಯವರ್ತಿಗಳು ಬ್ರಹ್ಮಾಂಡ ಭ್ರಷ್ಟಾಚಾರ ನಡೆಸುತ್ತಿರುವ ವಿಚಾರ ಇದೀಗ ಬಯಲಾಗಿದೆ!!

ಈಗಾಗಲೇ ಸರಕಾರವು ಅನ್ನಭಾಗ್ಯದ ವಿಚಾರವಾಗಿ ತೀವ್ರವಾದ ಮುಖಭಂಗವನ್ನು ಕಂಡಿದ್ದು, ಅನ್ನ ಭಾಗ್ಯದ ಜೊತೆಗೆ ಮಕ್ಕಳಿಗೆ ಹುಳುಭಾಗ್ಯ, ಕಲ್ಲಿನ ಭಾಗ್ಯವನ್ನೂ ಕರುಣಿಸಿದೆ!! ಅಷ್ಟೇ ಅಲ್ಲದೇ ಕಳಪೆ ಮಟ್ಟದ ಅಕ್ಕಿ, ಬೇಳೆಯನ್ನು ನೀಡುತ್ತಿದ್ದು, ಇದರಿಂದ ಅದೆಷ್ಟೋ ಮಕ್ಕಳು ಆಸ್ಪತ್ರೆ ಪಾಲಾಗಿದ್ದಾರೆ. ಇನ್ನು ಗ್ರಾಮೀಣ ಬಡವರ ಮಕ್ಕಳಿಗೂ ಉತ್ತಮ ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕು ಹಾಗೂ ಅಪೌಷ್ಟಿಕತೆ ಹೋಗಲಾಡಿಸುವ ಸಲುವಾಗಿ ಸರ್ಕಾರ ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರದ ಜೊತೆ ವಾರಕ್ಕೆ 2 ದಿನ ಮೊಟ್ಟೆ ನೀಡುವ ಯೋಜನೆಯನ್ನ ಜಾರಿಗೆ ತಂದಿತ್ತು. ಆದರೆ ಈ ಅಂಗನವಾಡಿಗೆ ಸಿಕ್ಕಿರೋದು ಕೊಳೆತಿರುವ ಮೊಟ್ಟೆ ಭಾಗ್ಯ. ಇನ್ನು ಈ ಮೊಟ್ಟೆಗಳನ್ನು ತಿಂದ ಹಲವು ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿರುವ ವಿಚಾರವೂ ಬಹಳಷ್ಟು ಸುದ್ದಿಯಾಗಿತ್ತು!!

ಇದಷ್ಟೇ ಅಲ್ಲದೇ, ಕಳಪೆ ಮಟ್ಟದ ಸಮವಸ್ತ್ರದ ಜೊತೆಗೆ ಹರಿದು ಹೋಗುವಂತಿರುವ ಪಠ್ಯಪುಸ್ತಕಗಳು, ಮುದ್ರಣ ದೋಷ ಹೀಗೆ ಒಂದಲ್ಲಾ ಒಂದು ವಿಚಾರದಲ್ಲಿ ಸರ್ಕಾರಿ ಮಕ್ಕಳಿಗೆ ನೀಡುತ್ತಿರುವ ಯೋಜನೆಗಳು, ಅದರಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳು ಬಯಲಾಗುತ್ತಲೇ ಇದೆ!! ಅಂತಹದ್ದೇ ಒಂದು ಭ್ರಷ್ಟಾಚಾರದ ಮಾಹಿತಿ ಇದೀಗ ಲಭ್ಯವಾಗಿದ್ದು, ಸರ್ಕಾರಿ ಶಾಲಾ ಮಕ್ಕಳಿಗೆ ನೀಡಬೇಕಿದ್ದ ಶೂ ಗಳಲ್ಲಿ ಶಾಲೆಯ ಎಸ್‍ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರು ಕಮಿಷನ್ ಕೇಳುತ್ತಿರುವ ಎಕ್ಸ್ ಕ್ಲ್ಯೂಸಿವ್ ದೃಶ್ಯಗಳು ಹಾಗೂ ಫೆÇೀನ್ ರೆಕಾರ್ಡ್, ಕನ್ನಡ ಖಾಸಗಿ ದೃಶ್ಯಮಾಧ್ಯಮ ಒಂದಕ್ಕೆ ಲಭ್ಯವಾಗಿದೆ.

ಹೌದು…. ದಾವಣಗೆರೆಯ ಕೆಲ ಸರ್ಕಾರಿ ಶಾಲೆಗಳಲ್ಲಿ ಶೂ ಸಪ್ಲೈ ಏಜೆನ್ಸಿ ಗಳ ಜೊತೆ ಡೈರೆಕ್ಟ್ ಡೀಲ್ ಬಗ್ಗೆ ಮಾತನಾಡುತ್ತಿದ್ದು, ಒಂದು ಮಗುವಿಗೆ 25 ರೂಪಾಯಿ ಗಳಿಂದ 40 ರೂಪಾಯಿಗಳವರೆಗೂ ಕಮಿಷನ್ ವಿಚಾರದ ಬಗ್ಗೆ ಮಾತಾನಾಡುತ್ತಿರುವ ಬಗ್ಗೆ ಫೆÇೀನ್ ರೆಕಾರ್ಡ್‍ನಿಂದ ಮಾಹಿತಿ ಹೊರ ಬಿದ್ದಿದೆ !! ಸರ್ಕಾರ ಬಡ ಮಕ್ಕಳಿಗೆ ಶೂ ಭಾಗ್ಯ ಜಾರಿಗೆ ತಂದ್ರೆ ಇಲ್ಲಿನ ಶಿಕ್ಷಕರು ಹಾಗೂ ಎಸ್‍ಡಿಎಂಸಿ ಸದಸ್ಯರು ಕಮಿಷನ್ ಭಾಗ್ಯವನ್ನು ಹುಟ್ಟಿಹಾಕಿಕೊಂಡಿರುವುದು ಮಾತ್ರ ವಿಪರ್ಯಾಸ!!

ದಾವಣಗೆರೆಯಲ್ಲಿ 1 ರಿಂದ 10 ನೇ ತರಗತಿವರೆಗೆ 1607 ಸರ್ಕಾರಿ ಶಾಲೆಗಳಿದ್ದು, 1.43 ಲಕ್ಷಕ್ಕೂ ಅಧಿಕ ಶಾಲಾ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇನ್ನು ಸರ್ಕಾರ ಮಕ್ಕಳಿಗೆ ಶೂ ಭಾಗ್ಯವನ್ನು ಮೂರು ಹಂತಗಳಲ್ಲಿ ವಿತರಣೆಗೆ ಕ್ರಮ ಜರುಗಿಸಿದೆ. ಅವು:

* 1 ರಿಂದ 5 ನೇ ತರಗತಿ ಮಕ್ಕಳಿಗೆ ಒಂದು ಹಂತದಲ್ಲಿ ವಿತರಣೆ, ಅದಕ್ಕೆ ತಲಾ ಒಬ್ಬ ವಿದ್ಯಾರ್ಥಿಗೆ 265 ರೂಪಾಯಿ ನಿಗದಿ.
* 6-8 ನೇ ತರಗತಿಗೆ ಮಕ್ಕಳಿಗೆ ಎರಡನೇ ಹಂತದಲ್ಲಿ ವಿತರಣೆ, ತಲಾ ಒಬ್ಬ ವಿದ್ಯಾರ್ಥಿಗೆ 295 ರೂಪಾಯಿ ನಿಗದಿ.
* 9-10 ನೇ ತರಗತಿ ಮಕ್ಕಳಿಗೆ ಮೂರನೇ ಹಂತದಲ್ಲಿ ವಿತರಣೆ, ತಲಾ ಒಬ್ಬ ವಿದ್ಯಾರ್ಥಿಗೆ 325 ರೂಪಾಯಿ ನಿಗದಿ ಮಾಡಲಾಗಿದೆ.
* 1 ಜೊತೆ ಶೂ, 2 ಜೊತೆ ಸಾಕ್ಸ್ ವಿತರಣೆಗೆ ಸರ್ಕಾರ ಆದೇಶ ನೀಡಿದೆ.

ಸರ್ಕಾರಿ ಶಾಲೆಗಳಲ್ಲಿ ಶೂ ಸರಿಯಾಗಿ ವಿತರಣೆ ಮಾಡಲಾಗಿದೇಯೋ ಇಲ್ಲವೋ, ಕಟ್ಟ ಕಡೆಯ ಫಲಾನುಭವಿಗೆ ತಲುಪಿದೆಯೋ ಎಂದು ಗಮನಿಸಲು ಹಾಗೂ ಪರಿಶೀಲನೆ ಮಾಡಲು ಸರ್ಕಾರ ಒಂದು ತಾಲೂಕಿಗೆ 3 ರಿಂದ 4 ಇಲಾಖೇತರ ಅಧಿಕಾರಿಗಳ ಕಮಿಟಿ ಮಾಡಿದೆ. ಆದರೂ ಸಹ ಅಧಿಕಾರಿಗಳು ಮಾತ್ರ ಇದನ್ನು ಕಂಡೂ ಕಾಣದ ರೀತಿಯಲ್ಲಿ ಜಾಣ ಕುರುಡು ಪ್ರದರ್ಶನ ಮಾಡುತ್ತಿರುವುದು ಇನ್ನು ವಿಪರ್ಯಾಸವಾಗಿದೆ!!

ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳ ಪಟ್ಟಿ ಎಂದಿಗೆ ಕೊನೆಗೊಳ್ಳುತ್ತೋ ಗೊತ್ತಿಲ್ಲ. ಆದರೆ ಮಕ್ಕಳ ಅನ್ನಭಾಗ್ಯದಲ್ಲಿಯೇ ಚೆಲ್ಲಾಟ ಆಡಿರುವ ಸರಕಾರ ಇನ್ನು ‘ಶೂ’ ಅನ್ನೂ ಬಿಡಲಿಲ್ಲವೇ?? ಮಕ್ಕಳಿಗೆ ಸಿಗಬೇಕಾದ ಸ್ವತ್ತುಗಳನ್ನು ತನ್ನ ಲಾಭಕ್ಕಾಗಿ ಉಪಯೋಗಿಸುವ ಅಧಿಕಾರಿಗಳಿಗೆ ಹಾಗೂ ಶಿಕ್ಷಕರಿಗೆ ಅದೇನ್ ಬೇಕೋ ಗೊತ್ತಾಗುತ್ತಿಲ್ಲ!!

Source :http://publictv.in/corruption-in-govts-shoe-bhagya-scheme-headmasters/

-ಅಲೋಖಾ!!!

Tags

Related Articles

Close