ಪ್ರಚಲಿತ

ಆತನ ದೇಹದಲ್ಲಿ ನಾಲ್ಕು ಗುಂಡುಗಳು ಹೊಕ್ಕು, ಗ್ರೇನೆಡ್ ಸಿಡಿದು ದೇಹ ಜರ್ಝರಿತವಾಗಿದ್ದರೂ ಸಹ ಅನೇಕ ಭಾರತೀಯರ ಜೀವಗಳನ್ನು ಉಳಿಸಿದ್ದ!! ಭಾರತೀಯ ಸೇನೆಯ ಈ ಧೀರೋದಾತ್ತ ಯುವಕನ ಬಗ್ಗೆ ನಿಮಗೆಷ್ಟು ಗೊತ್ತು?

ನಾವೆಲ್ಲಾ ಭಾರತೀಯರು, ಭಾರತದ ಪರಂಪರೆಯವರು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಈ ಮಣ್ಣು ವೀರರ ರಕ್ತದಿಂದ ತೊಯ್ದ ಮಣ್ಣು. ಈ ಭೂಮಿ ಸರ್ವ ಶ್ರೇಷ್ಠ ಸಂತ, ಋಷಿಮುನಿಗಳು ನೆಲೆಸಿ, ಭಾರತದ ಪತಾಕೆಯನ್ನು ಜಗತ್ತಿನೆತ್ತರಕ್ಕೆ ಹಾರಿಸಿದ್ದರು. ಶಿವಾಜಿ ಮಹಾರಾಜ್, ಸಾವರ್ಕರ್, ಭಗತ್ ಸಿಂಗ್, ಅಜಾದ್ ರಿಂದ ಹಿಡಿದು ಇಂದಿನ ಭಾರತೀಯ ಸೇನೆಯವರೆಗೆ ಎಲ್ಲರೂ ಭಾರತಾಂಬೆಗಾಗಿ ಹೋರಾಡಿದವರೇ, ಹೋರಾಡುತ್ತಿರುವವರೇ.

ಸಾವರ್ಕರ ಪ್ರೇರಣೆಗೆ ಓಗೊಟ್ಟ ಭಾರತೀಯರು ಸೇನೆಗೆ ಸೇರಿದ್ದರ ಪರಿಣಾಮವಾಗಿ ಇಂದು ಭಾರತೀಯ ಸೇನೆ ಜಗತ್ತಿನ ಬಲಾಢ್ಯ ಸೇನೆಗಳಲ್ಲಿ ಒಂದಾಗಿದೆ. ಭಾರತೀಯ ಸೇನೆಯ ವೀರಕಲಿಗಳ ಬಗ್ಗೆ ಮಾತನಾಡುವಾಗವಾಗ, ಬರೆಯುವಾಗ ಹೆಮ್ಮೆಯ ಅನಿಸುತ್ತದೆ. ಈಗ ನಾನು ಹೇಳಹೊರಟಿರುವುದು ಭಾರತೀಯ ಸೇನೆಯ ವೀರಕಲಿಯ ಬಗ್ಗೆ.

ಬಹುತೇಕ ಭಾರತೀಯರು ಈ ವೀರಕಲಿಯ ಬಗ್ಗೆ ಕೇಳಿರಲಿಕ್ಕಿಲ್ಲ‌. ಮಣಿಪುರದ ಭಯೋತ್ಪಾದನೆಯ ಕಾರ್ಯಾಚರಣೆಯಲ್ಲಿ ಈ ಯೋಧ ತೋರಿಸಿದ ಪರಾಕ್ರಮದಿಂದ ಅನೇಕ ಜನರ ಜೀವ ಉಳಿಯಿತು. ಆತನ ದೇಹದಲ್ಲಿ ನಾಲ್ಕು ಗುಂಡು ಹೊಕ್ಕಿದ್ದರೂ ಕೂಡಾ ತಾನು ಭಾರತೀಯರನ್ನು ಕಾಪಾಡದೇ ಮರಳುವುದಿಲ್ಲ ಎಂಬ ಸಂಕಲ್ಪ ತೊಟ್ಟಿದ್ದ.

ಆ ವೀರ ಕಲಿಯ ಹೆಸರು ಕ್ಯಾಪ್ಟನ್ ಡಿಪಿಕೆ ಪಿಳ್ಳೆ(ಕ್ಯಾಪ್ಟನ್ ದಿವಾಕರನ್ ಪದ್ಮಕುಮಾರ್ ಪಿಳ್ಳೆ). ಕ್ಯಾಪ್ಟನ್ ದಿವಾಕರನ್ ಪದ್ಮಕುಮಾರ್ ಪಿಳ್ಳೆ 12 ಆಗಸ್ಟ್ 1967 ರಂದು ಕೇರಳದ ಕಣ್ಣೂರ್ನಲ್ಲಿ ಮೇಜರ್ ಮತ್ತು ಶ್ರೀಮತಿ ಎವಿಡಿ ಪಿಲ್ಲೇ ದಂಪತಿಯ ಮಗನಾಗಿ ಜನಿಸಿದರು. ಓದಿದ್ದು ಕರ್ನಾಟಕದ ಬೆಂಗಳೂರು ಮಿಲಿಟರಿ ಅಕಾಡೆಮಿಯಲ್ಲಿ. ಓದು ಮುಗಿದ ನಂತರ ಆಯ್ಕೆ ಮಾಡಿದ್ದು ಭಾರತೀಯ ಸೇನೆ.

ಅದು 1995ನೇ ಇಸವಿ ಜನವರಿ ತಿಂಗಳು. ಮಣಿಪುರದಲ್ಲಿ ಒಂದು ಉಗ್ರರ ಕರ್ಯಾಚರಣೆ ಮಾಡಲು ಭಾರತೀಯ ಸೇನೆ ನಿರ್ಧರಿಸಿತ್ತು. ಅದಕ್ಕೆ ನೇತೃತ್ವವನ್ನು ಡಿಪಿಕೆ ಪಿಳ್ಳೆಯವರಿಗೆ ವಹಿಸಲಾಗಿತ್ತು. ಮಣಿಪುರದ ತಮೆಂಗ್ಲಾಂಗ್ ಗ್ರಾಮವನ್ನು ಉಗ್ರರು ವಶಕ್ಕೆ ತೆಗೆದುಕೊಂಡಿದ್ದರು. ಆ ಗ್ರಾಮದವರನ್ನು ರಕ್ಷಿಸುವುದು ಪಿಳ್ಳೆಯವರ ಬೆಟಾಲಿಯನ್ ನ ಜವಾಬ್ದಾರಿಯಾಗಿತ್ತು. ಆ ಕಾರ್ಯಾಚರಣೆ ಮಾಡುತ್ತಿರುವಾಗ ಉಗ್ರರು ಒಮ್ಮೆಂದೊಮ್ಮೆಲೆ ಭಾರತೀಯ ಸೇನೆಯ ಮೇಲೆ ದಾಳಿ ಮಾಡುತ್ತಾರೆ. ಆಗ ಉಗ್ರರ ಗುಂಡುಗಳು ಪಿಳ್ಲೆಯವರ ದೇಹವನ್ನು ಹೊಕ್ಕುತ್ತವೆ.

ಒಂದು ಗ್ರೆನೆಡ್ ದಾಳಿಯಿಂದ ಅವರ ಕಾಲು ಮುರಿಯುತ್ತೆ. ಆದರೆ ಅದಾವುದನ್ನೂ ಲೆಕ್ಕಿಸದ ಪಿಳ್ಳೆಯವರು ವೀರಾವೇಶದಿಂದ ಹೋರಾಡಿ ಅಲ್ಲಿದ್ದ ಗ್ರಾಮಸ್ಥರನ್ನು ರಕ್ಷಿಸುತ್ತಾರೆ. ಅವರ ದೇಹದಲ್ಲಿ ಗುಂಡು ಹೊಕ್ಕಿ, ಗ್ರೆನೆಡ್ ದಾಳಿಯಿಂದ ಕಾಲು ಮುರಿದಾಗ ಅವರ ಬೆಟಳಿನ್ ನ ಸೈನಿಕರು ಅವರನ್ನು ಆಸ್ಪತ್ರೆಗೆ ಒಯ್ಯುವ ಮಾತನಾಡಿದಾಗ, ಪಿಳ್ಳೆ ಹೇಳುತ್ತಾರೆ. ಈ ಕಾರ್ಯಾಚರಣೆ ಮುಗಿಯುವವರೆಗೂ ನಾನು ಇಲ್ಲಿಂದ ಕದಲಲ್ಲ. ಎಲ್ಲಾ ಗ್ರಾಮಸ್ಥರು ಸುರಕ್ಷಿತವಾಗಿದ್ದಾರೆಂದು ಖಚಿತವಾದ ಮೇಲೆಯೇ ನಾನು ಇಲ್ಲಿಂದ ಹೋಗೋದು ಅಂತ ಪಿಳ್ಳೆಯವರು ಹೇಳುತ್ತಾರೆ.

ಆ ಉಗ್ರರ ದಾಳಿಯಲ್ಲಿ ಎರಡು ಮಕ್ಕಳಿಗೆ ಗಂಭೀರವಾದ ಗಾಯವಾಗಿರುತ್ತವೆ. ಭಾರತೀಯ ಸೇನೆಯ ವಿಮಾನ ಪಿಳ್ಳೆಯವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾತನಾಡಿದಾಗ, ಪಿಳ್ಳೆ ಮೊದಲು ಮಕ್ಕಳನ್ನು ಕರೆದೊಯ್ಯಿ ಅಂತಾರೆ. ವಾವ್!! ಸೈನಿಕ ಯಾವತ್ತಿಗೂ ತನ್ನ ಪ್ರಾಣವನ್ನು ಲೆಕ್ಕಿಸೋದೇ ಇಲ್ಲ ಅನ್ನೋದಕ್ಕೆ ಇದೇ ಸಾಕ್ಷಿ‌. ಭಾರತೀಯರೇ ನೀವೇ ಆಲೋಚನೆ ಮಾಡಿ, ಆತನ ದೇಹದಲ್ಲಿ ನಾಲ್ಕು ಗುಂಡು ಹೊಕ್ಕು, ಗ್ರೆನೆಡ್ ದಾಳಿಯಿಂದ ಕಾಲು ಮುರಿದಿದ್ದರೂ ಕೂಡಾ ಆತ ಮೊದಲು ತನ್ನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾತಾಡಲಿಲ್ಲ, ಬದಲಿಗೆ ಮಕ್ಕಳ ಸುರಕ್ಷತೆಯ ಬಗ್ಗೆ ಮಾತನಾಡಿದನು. ಈ ತಾಕತ್ತು ಮತ್ತು ಈ ಮನಸ್ಸು ಸೈನಿಕನಿಗಲ್ಲದೇ ಬೇರೆ ಯಾರಿಗೂ ಬರುವುದಿಲ್ಲ.

Related image

ದೇಹದಲ್ಲಿ ನಾಲ್ಕು ಗುಂಡು ಹೊಕ್ಕು, ಗ್ರೆನೆಡ್ ದಾಳಿಯಾಗಿ ಆ ಪುಟ್ಟ ಎರಡು ಮಕ್ಕಳನ್ನು ಕಾಪಾಡಿದ ಕ್ಯಾಪ್ಟನ್ ದಿವಾಕರನ್ ಪದ್ಮಕುಮಾರ್ ಪಿಳ್ಳೆ ಅವರು ಇಂದಿಗೂ ಇದ್ದಾರೆ. ಈಗ ಅವರು 51 ವರ್ಷದವರು. ಅಂದು ಮಾಡಿದ ಕಾರ್ಯಾಚರಣೆಯನ್ನು ಮಣಿಪುರದ ಜನ ಇಂದಿಗೂ ಮರೆತಿಲ್ಲ. ಅವರ ಸಾಹಸಕ್ಕೆ, ಅವರ ನಿಸ್ವಾರ್ಥಕ್ಕೆ, ಮಣಿಪುರದ ಆ ಗ್ರಾಮವನ್ನು ರಕ್ಷಿಸಿದ್ದಕ್ಕೆ ಅಲ್ಲಿನ ಜನ ಗೌರವದಿಂದ ಪಿಳ್ಳೆ ಪಮೇಯಿ ಎಂದು ಕರೆಯುತ್ತಾರೆ. ಇದು ಮಣಿಪುರದ ಸ್ಥಳೀಯ ಪ್ರಭಾವಿ ಕುಲದ ಉಪನಾಮವಾಗಿದೆ.

ಕ್ಯಾಪ್ಟನ್ ದಿವಾಕರನ್ ಪದ್ಮಕುಮಾರ್ ಪಿಳ್ಳೆಯವರು ಬರೀ ಸೈನಿಕನಾಗಿ ಅಷ್ಟೇ ಕೆಲಸ ಮಾಡಿಲ್ಲ‌ ತಾನು ರಕ್ಷಿಸಿದ್ದ ಗ್ರಾಮಗಳ ಜನರ ಜೀವನಾಧಾರಕ್ಕೆ ನೆರವಾಗಿದ್ದಾರೆ‌. ಆ ಗ್ರಾಮಗಳ ರಸ್ತೆಯನ್ನು ನಿರ್ಮಾಣ ಮಾಡಿಸಿದ್ದಾರೆ. ಇಂತಹ ಅನೇಕ ಅಭಿವೃದ್ಧಿಯ ಕೆಲಸಗಳನ್ನು ಮಾಡಿದ್ದಾರೆ‌.

ಒಂದೇ ಒಂದು ಬುಲೆಟ್ ನಮಗೆ ತಾಕಿದರೆ ಪ್ಯಾನಿಕ್ ದಾಳಿಯಿಂದ ಬಹುಶಃ ಮರಣಹೊಂದಬಹುದು. ಆದರೆ ಕ್ಯಾಪ್ಟನ್ ದಿವಾಕರನ್ ಪದ್ಮಕುಮಾರ್ ಪಿಳ್ಳೆಯವರು ಮನುಷ್ಯನು ನಂಬಲಾಗದ ಧೈರ್ಯವನ್ನು ಆ ದಿನ ಪ್ರದರ್ಶಿಸಿದ್ದಾರೆ. ಅದು ಖಂಡಿತವಾಗಿ ಪ್ರಪಂಚದ ಅತ್ಯುತ್ತಮ ಶೌರ್ಯದ ಕಥೆಗಳಲ್ಲಿ ಒಂದಾಗಿದೆ.

ಇಂತಹ ವೀರಯೋಧರ ಸಾಹಸ , ಬಲಿದಾನಗಳಿಂದಲೇ ನಾವಿಂದು ಆರಾಮಾಗಿದ್ದೇವೆ. ಅವರನ್ನು ನೆನಪಿಸಿಕೊಳ್ಳವುದು,ಅವರಿಗೆ ಗೌರವಿಸೋದು ನಮ್ಮ ಕರ್ತವ್ಯ. ಈ ಲೇಖನವನ್ನು ಓದಿದ ಮೇಲೆ ಎರಡು ಹನಿ ಕಣ್ಣೀರು ಸುರಿಸಿಬಿಡಿ. ಅದೇ ನಾವು ಸೈನಿಕರಿಗೆ ಕೊಡುವ ದೊಡ್ಡ ಗೌರವ.

ನಮ್ಮಿಂದ ಗಡಿಗೆ ಹೋಗಿ ಹೋರಾಡಿ ಸಾಯೋದಕ್ಕಂತೂ ಆಗಲ್ಲ ಅದಕ್ಕಾಗಿ ದೇಶಕ್ಕಾಗಿ ಬದುಕೋಣ. ದೇಶ ಸೇವೆ ಮಾಡುತ್ತಿರುವ , ತಾಯಿ ಭಾರತಾಂಬೆಗಾಗಿ ಮಾಡಿದ ವೀರ ಯೋಧರನ್ನು ನೆನೆಯೋಣ. ವೀರ ಯೋಧರ ಬಗ್ಗೆ ದಿನಕ್ಕೆ ಒಂದು ಸಾರಿಯಾದರೂ ನೆನಪಿಸಿಕೊಳ್ಳಿ. ನಮ್ಮಿಂದ ದೇಶಕ್ಕಾಗು ಸಾಯೋಕಂತೂ ಆಗಲ್ಲ, ಕನಿಷ್ಠ ಪಕ್ಷ ದೇಶಕ್ಕಾಗಿ ಬದುಕಿ.
ಜೈ ಹಿಂದ್
-ಶಿವಾಂಶ

Tags

Related Articles

Close