ಅಂಕಣಇತಿಹಾಸದೇಶಪ್ರಚಲಿತ

ಇದು ಯಾರೂ ಹೇಳದ ಕಥೆ!!! ರಾಜೀವ್ ಗಾಂಧಿಯನ್ನು ಕೊಲ್ಲಿಸಿದ ಒಳಗಿನ ಆ ನಿಗೂಢ ವ್ಯಕ್ತಿ ಯಾರು?!

ಭಾರತದ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರ ಹತ್ಯೆಯನ್ನು ಭಾರತದ ಇತಿಹಾಸದಲ್ಲಿ ಒಂದು ನಿಗೂಢ, ಭಯಂಕರ ಎಂದೇ ಪರಿಗಣಿಸಲ್ಪಟ್ಟಿದೆ. ಈ ಕೊಲೆ
ಇನ್ನೂ ಹಲವಾರು ಸಂಶಯಗಳ ಸುಳಿಯಲ್ಲಿ ಸಿಲುಕಿದ್ದು, ಇದನ್ನು ಒಂದು ಯೋಜಿತ ಕೊಲೆ ಎಂದೇ ಸಂಶಯಿಸಲಾಗುತ್ತಿದೆ. ರಾಜೀವ್ ಕುಟುಂಬದಲ್ಲಿ ಈತ ಮಾತ್ರ
ಹತ್ಯೆಯಾಗಿದ್ದಲ್ಲ, ಹಲವರ ಕೊಲೆಯಾಗಿದೆ. ಆದ್ರೆ ರಾಜೀವ್ ಹತ್ಯೆಯ ಹಿಂದೆ ಕೆಲವು ಪ್ರಬಲ ವ್ಯಕ್ತಿಗಳಿದ್ದು, ರಾಜಕೀಯ ಲಾಭದ ಉದ್ದೇಶಕ್ಕಾಗಿ ವ್ಯವಸ್ಥಿತವಾಗಿ ಕೊಲೆ ನಡೆಸಲಾಗಿದೆ ಎನ್ನಲಾಗುತ್ತಿದೆ.
ಇಂದಿರಾ ಗಾಂಧಿ ಹತ್ಯೆಯಾದ ಆರು ವರ್ಷಗಳ ಬಳಿಕ ರಾಜೀವ್ ಹತ್ಯೆಯಾಯಿತು. ರಾಜೀವ್ ಹತ್ಯೆಯು ರಾಜಕೀಯ ಪಕ್ಷಗಳಲ್ಲಿ ಭಯದ ಛಾಯೆಯನ್ನು ಸೃಷ್ಟಿಸಿತು. 1991, ಮೇ 21ರ ರಾತ್ರಿ ಎಲ್‍ಟಿಟಿಇ ಆತ್ಮಹತ್ಯಾ ಬಾಂಬರ್ ಧನು(ಥೆಂಮೋಜಿ ರಾಜರತ್ನಂ) ಎಂಬಾತನಿಂದ ರಾಜೀವ್ ಹತ್ಯೆಯಾಯಿತು. ಜಗತ್ತಿನಲ್ಲಿ ತಿಳಿದ ಪ್ರಕಾರ ಎಲ್‍ಟಿಟಿಐ ಮುಖಂಡ ಪ್ರಭಾಕರನ್ ಆಣತಿಯ ಮೇರೆಗೆ ರಾಜೀವ್‍ರನ್ನು ಹತ್ಯೆಮಾಡಲಾಯಿತು. ಇದು ಜಗತ್ತು ಇದುವರೆಗೆ ನಂಬಿಕೊಂಡು ಬಂದಿರುವ ವಿಷಯ.

ಆದರೆ….!

ಆದರೆ ಒಳಗಿನ ಸತ್ಯವೇ ಬೇರೆ… ಅಸಲಿಗೆ ರಾಜೀವ್ ಗಾಂಧಿಯನ್ನು ಪ್ರಭಾಕರನ್ ಕೊಲ್ಲಿಸಿದ್ದು ಎಂದು ಹೇಳಿದ್ದು ಯಾರು?

ಹೆಚ್ಚಿನವವರಿಗೆ ಪ್ರಭಾಕರನ್ ಒಬ್ಬ ಮತಾಂತರಗೊಂಡ ಕ್ಯಾಥೋಲಿಕ್ ಕ್ರೈಸ್ತನೆಂದು ಗೊತ್ತಿಲ್ಲ. ಪ್ರಭಾಕರನ್ ಎಲ್‍ಟಿಟಿಇ ಮುಖ್ಯಸ್ಥನಾಗಿದ್ದು, ಆತನಿಗೆ ವ್ಯಾಟಿಕನ್‍ನ ಸಂಸ್ಥೆಯೊಂದು ಸಹಾಯ ಮಾಡುತ್ತಿತ್ತು. ಶ್ರೀಲಂಕಾದ ಜನರನ್ನು ಸಿಂಹಳೀಯರೆಂದು ಕರೆಯಲಾಗುತ್ತದೆ. ಇವರು ಬೌದ್ಧರಾಗಿದ್ದು, ಈ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ವ್ಯಾಟಿಕನ್ ಪ್ರಭಾಕರನ್‍ಗೆ ಸಹಾಯ ಮಾಡುತ್ತಿತ್ತು. ಇದಕ್ಕಾಗಿ ಪ್ರಭಾಕರನ್ ವ್ಯಾಟಿಕನ್‍ಗೆ ಅಭಾರಿಯಾಗಿದ್ದ ಎಂದು ಹೇಳಲಾಗಿದೆ.
ಎಲ್‍ಟಿಟಿಇ ಶ್ರೀಲಂಕಾದ ಭಯೋತ್ಪಾದಕ ಸಂಘಟನೆಯಾಗಿದ್ದು, ಇದಕ್ಕೆ ನಾರ್ವೆಯ ಬೆಂಬಲವೂ ಇತ್ತು. ನಾರ್ವೆಯ ಗುಪ್ತಚರ ಇಲಾಖೆ(ಎನ್‍ಐಎಸ್) ಶ್ರೀಲಂಕಾದಲ್ಲಿ ಶಾಂತಿಪ್ರಕ್ರಿಯೆಗೆ ಅಡ್ಡಗಾಲಾಗಿದ್ದು, ಭಯೋತ್ಪಾದಕ ಗುಂಪುಗಳಿಗೆ ಸಾಕಷ್ಟು ಹಣ ಮತ್ತು ಸಾಮಗ್ರಿ ಸಾಗಿಸಲು ಸಹಾಯ ಮಾಡುತ್ತಿತ್ತು. ಇದಕ್ಕೆ ವ್ಯಾಟಿಕನ್ ಗುಪ್ತಚರ ಇಲಾಖೆಯಿಂದಲೂ ಸಹಾಯ ಹಸ್ತ ಸಿಗುತ್ತಿತ್ತು ಎಂಬುವುದು ಗುಟ್ಟಾಗಿ ಉಳಿದಿಲ್ಲ. ವ್ಯಾಟಿಕನ್ ಪಡೆಯ ಜನರು ಅತ್ಯಂತ ಪ್ರಭಾವಿಗಳಾಗಿದ್ದು. ವಿಶ್ವದ ಹಲವು ದೇಶಗಳ ಮೇಲೆ ರಾಜಕೀಯ ಮತ್ತು ಧಾರ್ಮಿಕ ಪ್ರಭಾವ ಬೀರುತ್ತಾರೆ. ಓಪಸ್ ಡೀ ಎನ್ನುವಾತ ವ್ಯಾಟಿಕನ್ ಇಂಟೆಲಿಜೆನ್ಸಿ ಏಜೆನ್ಸಿ ಜೊತೆಗೆ ಕೆಲಸ ಮಾಡುತ್ತಿದ್ದ. (ಓಪಸ್ ಡೀ ಎನ್ನುವಾತ ಯಾರೆಂದು ಸರಿಯಾಗಿ ಗೊತ್ತಾಗಬೇಕಾದರೆ ಡ್ಯಾನ್ ಬ್ರೌನ್ ಎಂಬವರು ಬರೆದ ;ಪುಸ್ತಕದಲ್ಲಿ ಸಂಪೂರ್ಣ ಮಾಹಿತಿ ಸಿಗುತ್ತದೆ)ವ್ಯಾಟಿಕನ್ ಇಂಥದ್ದೇ ಪ್ರಭಾವವನ್ನು ಪ್ರಭಾಕರನ್ ಮುಖಾಂತರ ಶ್ರೀಲಂಕದಲ್ಲೂ ಬೀರಿತ್ತು. ಇದು ಕೊನೆಗೆ ರಾಜೀವ್ ಹತ್ಯೆಯವರೆಗೂ ಮುಂದುವರಿಯಿತು ಅಂದರೆ ಆ ಪ್ರಭಾವ ಯಾವ ರೀತಿ ಇರಬಹುದು ಎಂದು ಗಂಭೀರವಾಗಿ ಆಲೋಚಿಸಬೇಕಾಗುತ್ತದೆ.

 

ಇನ್ನು ರಾಜೀವ್ ಗಾಂಧಿಯ ಹತ್ಯೆಯ ವಿಷಯಕ್ಕೆ ಬರುವುದಾದರೆ, ಇಂಟೆಲಿಜೆನ್ಸ್ ರಾಜೀವ್ ಗಾಂಧಿಗೆ ಹತ್ಯಾ ಬೆದರಿಕೆ ಇರುವ ಬಗ್ಗೆ ಮಾಹಿತಿಯನ್ನು ಮೊದಲೇ
ಪಡೆದುಕೊಂಡಿತ್ತು. 1990ರಲ್ಲಿ ಉತ್ತರ ಭಾಗದಿಂದ ಮುಸ್ಲಿಂ ಭಯೋತ್ಪಾಕರಿಂದ ಬೆದರಿಕೆ ಬಂದಿದ್ದರೆ, ದಕ್ಷಿಣದಿಂದ ಎಲ್‍ಟಿಟಿಯ ಭಯೋತ್ಪಾದಕರಿಂದ ಬೆದರಿಕೆಗಳು ಬಂದಿದ್ದವು. ಆದರೆ ಐಬಿ ಇಷ್ಟೆಲ್ಲಾ ಬೆದರಿಕೆ ಬಂದಿದ್ದರೂ ಇದರಲ್ಲಿ ಸ್ಪಷ್ಟತೆ ಇಲ್ಲವೆಂದು ಎಲ್ಲವನ್ನೂ ನಿರ್ಲಕ್ಷಿಸುತ್ತಾ ಬಂದಿತು. ನಂತರದ ದಿನಗಳಲ್ಲಿ ಸ್ವತಃ ವ್ಯಾಟಿಕನ್ ಸಹಕಾರದಿಂದ ರಾಜೀವ್ ಅವರ ಹತ್ಯೆ ಮಾಡುವ ಬೆದರಿಕೆಯೂ ಬಂದಿತ್ತು.. ರಾಜೀವ್‍ನನ್ನು ಹತ್ಯೆಗೊಳಿಸಿ ಭಾರತವನ್ನು ವ್ಯಾಟಿಕನ್ ನಿಯಂತ್ರಣಕ್ಕೆ ತರುವುದು ಇದರ ಉದ್ದೇಶವಾಗಿತ್ತು.
ಇಲ್ಲೊಂದು ಅತ್ಯಂತ ಮುಖ್ಯವಾದ ವಿಷಯವೊಂದಿದೆ. ಈ ವಾಕ್ಯವನ್ನು ಗಮನವಿಟ್ಟು ಓದಿ..
`ಒಂದು ವ್ಯಕ್ತಿ, ಆ ವ್ಯಕ್ತಿ ರಾಜೀವ್ ಗಾಂಧಿ ಜೊತೆ ಸಾಕಷ್ಟು ನಿಕಟವರ್ತಿ ಎಂದರೆ ವ್ಯಾಟಿಕನ್ ಜೊತೆಯೂ ಅಷ್ಟೇ ನಿಕಟವರ್ತಿಯಾಗಿದೆ. ರಾಜೀವ್ ಗಾಂಧಿ
ಹತ್ಯೆಯಾಗಲು ಈ ವ್ಯಕ್ತಿಯ ಪಾತ್ರ ಪ್ರಮುಖವಾಗಿತ್ತು…’ ರಾಜೀವ್ ಗಾಂಧಿಗೂ ತನ್ನ ಹತ್ಯೆಯ ಬಗ್ಗೆ ಮಾಹಿತಿ ಇತ್ತಂತೆ. ಆದರೆ ಹತ್ಯೆಯ ರೂಪುರೇಷೆ ಸಿದ್ಧಪಡಿಸಿದ್ದು ಯಾರು ಎಂಬ ಬಗ್ಗೆ ಅಂದಾಜಿರಲಿಲ್ಲ. ಒಂದು ಕಾಲದಲ್ಲಿ ರಾಜೀವ್ ಗಾಂಧಿ ಮತ್ತು ಸುಬ್ರಹ್ಮಣ್ಯ ಸ್ವಾಮಿ ಇವರಿಬ್ಬರು ಪರಸ್ಪರ ನಿಕಟವರ್ತಿಗಳಾಗಿದ್ದರು.
ಒಮ್ಮೆ ರಾಜೀವ್ ಅವರು ಸುಬ್ರಹ್ಮಣ್ಯ ಜೊತೆ ಮಾತಾಡುವಾಗ, `ಈ ದೇಶಕ್ಕೆ ಆ ಒಂದು ವ್ಯಕ್ತಿಯನ್ನು ಕರೆತಂದು ದೊಡ್ಡ ತಪ್ಪು ಮಾಡಿದೆ ಅನಿಸ್ತದೆ’ ಎಂದು ಹೇಳಿದ್ದರು ಎಂದು ಸ್ವತಃ ಸುಬ್ರಹ್ಮಣ್ಯ ಸ್ವಾಮಿ ಹೇಳಿಕೊಂಡಿದ್ದರು.ರಾಜೀವ್‍ನ ದೊಡ್ಡ ದೊಡ್ಡ ಹಗರಣಗಳು ಹೊರಬರಲಾರಂಭಿಸಿತ್ತು. ಭೋಫೋರ್ಸ್ ಹಗರಣ ಎಂಬುವುದು ತನಗೆ ಅತ್ಯಂತ ಕೆಟ್ಟ ಹೆಸರು ತಂದಿತ್ತಲ್ಲದೆ ಇದು ತನ್ನ ಜೀವನದ ಅತ್ಯಂತ ದೊಡ್ಡ ತಪ್ಪು ಎಂದು ಹೇಳಿಕೊಳ್ಳುತ್ತಿದ್ದರು. ತನ್ನ ಕಣ್ಣೆದುರೇ ದೊಡ್ಡ ದೊಡ್ಡ ಹಗರಣಗಳು ನಡೆಯುತ್ತಿದ್ದರೂ ಎಲ್ಲವನ್ನೂ ಕಣ್ಣಿದ್ದೂ ಕುರುಡನಂತೆ ನೋಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಇದನ್ನೆಲ್ಲಾ ಕಂಡ ರಾಜೀವ್ ಗಾಂಧಿ ಎಲ್ಲದ್ದಕ್ಕೂ ಒಂದು ಅಂತ್ಯ ಹಾಡಬೇಕೆಂದು ನಿರ್ಧರಿಸಿದ್ದರು. ಆದರೆ ದುರದೃಷ್ಟವಶಾತ್ ರಾಜೀವ್ ಗಾಂಧಿ ಕೊಲೆಯಾಗಿ ಹೋದರು.
ರಾಜೀವ್ ಗಾಂಧಿ ಸೋನಿಯಾ ಗಾಂಧಿಯನ್ನು ಮದುವೆಯಾದ ಎಂದು ಎಲ್ಲರೂ ತಿಳಿದಿರುವಂಥದ್ದೇ. ಈಕೆ ಭಾರತದ ಪ್ರಭಾವಿ ಮಹಿಳೆಯಾಗಿ ಬೆಳೆದುಕೊಂಡಳಲ್ಲದೆ ವ್ಯಾಟಿಕನ್ ಜೊತೆ ನಿಕಟ ಸಂಬಂಧವನ್ನು ಹೊಂದಿದ್ದಳು. “ರಾ” ಸಂಸ್ಥೆಯ ಮಾಜಿ, ಇಂಟೆಲಿಜೆನ್ಸಿ ಬ್ಯೂರೋದಲ್ಲಿ ಕೆಲಸ ಮಾಡಿಕೊಂಡಿದ್ದ ಅಧಿಕಾರಿಯೊಬ್ಬರ ಅಭಿಪ್ರಾಯದಂತೆ ಇಂದಿರಾ ಗಾಂಧಿಯವರ ಸಮಯದಲ್ಲಿ ವಿದೇಶೀ ಗುಪ್ತಚರ ಇಲಾಖೆ ಭಾರತದ ರಾಜಕೀಯದಲ್ಲಿ ಸಾಕಷ್ಟು ಪ್ರಭಾವ ಬೀರಿತು. ಆಂಟೊನಿಯಾ ಅಲ್ಬಿನಾ ಮೈನೋ ಅರ್ಥಾತ್ ಸೋನಿಯಾ ಗಾಂಧಿ ಭಾರತದ ರಾಜಕೀಯವನ್ನು ತನಗೆ ಬೇಕಾದಂತೆ ಮಾರ್ಪಡಿಸಿಕೊಂಡಳು ಎಂದು ಅವರು ತಿಳಿಸುತ್ತಾರೆ.
ಸೋನಿಯಾಳ ತಂದೆ ಸ್ಟೆಫನೊ ಮೈನೋ ಗೆ ವ್ಯಾಟಿಕನ್ ಜೊತೆ ನಿಕಟ ಸಂಪರ್ಕವಿದ್ದು, ಈತ ರೋಮನ್ ಕ್ಯಾಥೋಲಿಕ್‍ನ ಬಲವಾದ ಬೆಂಬಲಿಗನಾಗಿದ್ದ.
ರಾಜೀವ್ 1960ರಲ್ಲಿ ಕೇಂಬ್ರಿಜ್‍ನಲ್ಲಿ ಕಲಿಯುತ್ತಿದ್ದ ಸಂದರ್ಭ ಸೋನಿಯಾಳನ್ನು ಮೊದಲು ಭೇಟಿಯಾಗಿದ್ದ. ರಾಜೀವ್ ತನ್ನ ವಿದೇಶಿ ಗೆಳೆಯರ ಜೊತೆ ಬಾರ್‍ಗೆ ಗುಂಡು ಹಾಕಲು ತೆರಳಿದಾಗ ಸೋನಿಯಾ ಬಾರ್‍ನಲ್ಲಿ ಡ್ಯಾನ್ಸ್ ಮಾಡುತ್ತಿದ್ದಳು. ಒಬ್ಬ ವಿದೇಶಿ ಗೆಳೆಯ ಸೋನಿಯಾಳನ್ನು ರಾಜೀವ್ ಗಾಂಧಿಗೆ ಪರಿಚಯ ಮಾಡಿಸಿದ. ಹೀಗೆ ಪರಿಚಯ ಮಾಡಿಸಿದ ವ್ಯಕ್ತಿ ವ್ಯಾಟಿಕನ್ ಗುಪ್ತಚರ ಇಲಾಖೆಗೆ ಸೇರಿದವ ಎಂಬುವುದು ತಡವಾಗಿ ಬೆಳಕಿಗೆ ಬಂದಿತ್ತು. ಆ ವೇಳೆಗಾಗಲೇ ಸೋನಿಯಾ ಹೆಣೆದ ಬಲೆಗೆ ಅರ್ಥಾತ್ ವ್ಯಾಟಿಕನ್ ಹೆಣೆದ ಬಲೆಗೆ ರಾಜೀವ್ ಬಿದ್ದಾಗಿತ್ತು. ಅದರಿಂದ ಹೊರಬರುವಂತೆಯೇ ಇರಲಿಲ್ಲ.
ರಾಜೀವ್ ಅಲ್ಲಿ ತಂಗಿದ್ದ ಸಂದರ್ಭ ಸೋನಿಯಾ ಆತನಿಗೆ ಹಣಕಾಸಿನ ಸಹಕಾರವನ್ನು ಮಾಡಿದಳು. ಆದರೆ ಆ ಹಣ ಎಲ್ಲಿಂದ ಬರುತ್ತಿತ್ತು ಗೊತ್ತಾ? ಸೋನಿಯಾ
ಗಾಂಧಿಯ ಒಬ್ಬ ಅಂಕಲ್‍ನಿಂದ. ಆ ಅಂಕಲ್ ಬೇರೆ ಯಾರೂ ಅಲ್ಲ, ಓಪಸ್ ಡೀ ಎನ್ನುವಾತನೇ ಆ ಅಂಕಲ್. ಈತ ವ್ಯಾಟಿಕನ್‍ನ ಇಂಟೆಲಿಜೆನ್ಸ್. ಈತ ಶ್ರೀಲಂಕಾದ ಎಲ್‍ಟಿಟಿಇಗೆ ಹಣಕಾಸಿನ ಸಹಕಾರ ಮಾಡುತ್ತಿರುವ ವ್ಯಕ್ತಿ. ಇದೇ ವ್ಯಕ್ತಿ ರಾಜೀವ್ ಮತ್ತು ಸೋನಿಯಾ ಗಾಂಧಿ ಮದುವೆಯಾಗುವಂತೆ ಒಪ್ಪಿಕೊಂಡಿದ್ದು ಇಲ್ಲಿಯೇ ಅಂತೆ…

ಹೌದು, ಮಾಜಿ ರಾ ಅಧಿಕಾರಿ ಪ್ರಕಾರ, ಸೋನಿಯಾ ಗಾಂಧಿ ಅಲಿಯಾಸ್ ಆಂಟೊನಿಯಾ ಅಲ್ಬಿನಾ ಮೈನೋಳ ಹಿನ್ನೆಲೆಯೇ ಪ್ರಶ್ನಾರ್ಥಕವಾಗಿದೆ. ಇಂಥವಳನ್ನು
ಮದುವೆಯಾಗಲು ರಾಜೀವ್ ತೀವ್ರ ಆಸಕ್ತಿ ವಹಿಸಿದ್ದ. ಆದರೆ ಇದು ಇಂದಿರಾ ಗಾಂಧಿ ಮತ್ತು ಆಕೆಯ ಇಬ್ಬರು ಪುತ್ರರ ಅವಸಾನದ ಆರಂಭ ಎಂದು ಅವರಿಗೆ ಗೊತ್ತೇ ಇರಲಿಲ್ಲ… ಎಂದು ಅವರು ಅಭಿಪ್ರಾಯಿಸುತ್ತಾರೆ.
ರಾಜೀವ್ ಗಾಂಧಿಯ ಕೊಲೆಯಾದ ನಂತರ ರಾಜೀವ್ ಗಾಂಧಿ ತನ್ನ ರಕ್ಷಣೆಗಾಗಿ ಕಮಾಂಡೋಗಳನ್ನು ಬಳಸಿಕೊಂಡರು. ಸೆಕ್ಯುರಿಟಿ ತುಂಬಾ ಬಿಗಿಯಾಗಿತ್ತಲ್ಲದೆ ಅವರ ಆಪ್ತ ಸಹೋದ್ಯೋಗಿಗಳು, ಪಾರ್ಟಿಗೆ ಬರುವವರು ರಾಜೀವ್ ಭೇಟಿಯಾಗಬೇಕಿದ್ರೆ ಕಮಾಂಡೋಗಳಿಂದ ಅನುಮತಿ ಕೇಳಬೇಕಿತ್ತು.
ಆದರೆ ಆ ಒಂದು ರಾತ್ರಿ ರಾಜೀವ್‍ನ ಕೊಲೆಯಾಗುತ್ತದೆ. ನೀನಾ ಗೋಪಾಲ್ ಎಂಬಾಕೆ ತನ್ನ ಪುಸ್ತಕದಲ್ಲಿ ರಾಜೀವ್ ಗಾಂಧಿ ಹತ್ಯೆಯ ಬಗ್ಗೆ ಕೆಲವೊಂದು ಪ್ರಶ್ನೆಗಳನ್ನು ಎತ್ತಿದ್ದಾರೆ.
ರಾಜೀವ್ ಗಾಂಧಿಯನ್ನು ತಮಿಳುನಾಡಿನ ಶ್ರೀಪೆರಂಬುದುರುನಲ್ಲಿ ಕೊಲೆ ನಡೆಸಲಾಗುತ್ತದೆ. ಇಲ್ಲಿ ನೈನಾ ಎತ್ತುವ ಪ್ರಶ್ನೆಗಳಿಷ್ಟು….ರಾಜೀವ್ ಬರುವ ಸ್ಥಳದಲ್ಲಿ ಸಾಕಷ್ಟು ಬೆಳಕಿನ ವ್ಯವಸ್ಥೆ ಇರಲಿಲ್ಲ ಯಾಕೆ? ಬೆಳಕಿದ್ದರೂ ಆ ಕಡೆಯೆಲ್ಲಾ ಮಬ್ಬಾಗಿದ್ದದ್ದು ಯಾಕೆ? ಈ ಪ್ರದೇಶ ಚುನಾವಣೆ ರ್ಯಾಲಿಯಂತಿರಲಿಲ್ಲ ಯಾಕೆ? ಪಾಪ ತನ್ನದೇ ಜನರು ಯಾಕೆ ಈ ರೀತಿ ಮಾಡಿದ್ದಾರೆ ಎಂದು ಆತನಿಗೆ ಗೊತ್ತೇ ಆಗಲಿಲ್ಲ…’ ಎಂದು ನೈನಾ ಬರೆಯುತ್ತಾರೆ.
ರಾಜೀವ್ ಗಾಂಧಿಗೆ ಮೊದಲಿದಂದಲೂ ಬೆದರಿಕೆ ಇತ್ತು. ಅದಕ್ಕಾಗಿ ಬ್ಲ್ಯಾಕ್ ಕ್ಯಾಟ್ ಕಮೋಂಡೋಗಳು ಆತನಿಗೆ ರಕ್ಷಣೆಯೊದಗಿಸುವ ಕೆಲಸ ಮಾಡುತ್ತಿತ್ತು. ಆದರೆ
ತಮಿಳುನಾಡು ಭೇಟಿ ಸಂದರ್ಭ ರಕ್ಷಣೆಯನ್ನು ಕಡಿಮೆಗೊಳಿಸಲಾಗಿತ್ತು. ಕಮಾಂಡೋಗಳನ್ನು ಕಡಿತಗೊಳಿಸಲು ತಿಳಿಸಿದ್ದು ಯಾರು ಎಂಬುವುದು ಇನ್ನೂ ನಿಗೂಢವಾಗಿ ಉಳಿದಿದೆ.
ಗುಪ್ತಚರ ಇಲಾಖೆಯೂ ಕೂಡಾ ರಾಜೀವ್‍ಗೆ ಶ್ರೀಪರಂಬದೂರುಗೆ ತೆರಳದಂತೆ ಎಚ್ಚರಿಕೆಯನ್ನೂ ನೀಡಿತ್ತು. ರಾಜೀವ್ ಗಾಂಧಿಯ ಸ್ವಂತ ಭದ್ರತಾ ಅಧಿಕಾರಿ ಓ.ಪಿ
ಸಾಗರ್ ಅವರು ರಾಜೀವ್ ಗಾಂಧಿ ಹೋದ ಕಡೆಗೆಲ್ಲಾ ಹೋಗಿದ್ದರು. ರಾಜೀವ್ ದೆಹಲಿಯಿಂದ ಓಡಿಸ್ಸಾ ಅಲ್ಲಿಂದ ಆಂಧ್ರಪ್ರದೇಶ ಹೀಗೆ ಎಲ್ಲಾ ಕಡೆಗೆ ಸಂಚರಿಸಿದ್ದರು. ಆದರೆ ರಾಜೀವ್ ಜೊತೆ ಶ್ರಿಪೆರಂಬದೂರು ಜೊತೆ ಬರಲೇ ಇಲ್ಲ. ರಾಜೀವ್ ಗಾಂಧಿ ಜೊತೆ ವಿಮಾನದಲ್ಲಿ ಹೋಗಲು ತೆರಳಿದ್ದಾಗ ವಿಮಾನ ಆ ಮುಂಚೆಯೇ ತೆರಳಿಯಾಗಿತ್ತು. ಇದೆಲ್ಲಾ ಉದ್ದೇಶಪೂರ್ವಕವಾಗಿ ನಡೆಸಿದ ಕೃತ್ಯ ಎಂದು ಸುಲಭವಾಗಿ ನಂಬಬಹುದು.
ರಾಜೀವ್ ಅವರ ಕಾರ್ ಶ್ರೀಪೆರಂಬದೂರುಗೆ ತೆರಳುತ್ತಿತ್ತು. ಅಲ್ಲಿನ ಸೆಕ್ಯುರಿಟಿ ಎಷ್ಟೊಂದು ಕಳಪೆಯಾಗಿತ್ತೆಂದರೆ ಒಂದು ದೇಶದ ಪ್ರಧಾನಿಗೆ ಇಷ್ಟೊಂದು ಕಳಪೆ
ರಕ್ಷಣೆಯಾ ಎಂಬ ಅನುಮಾನ ಮೂಡಿಸುವಂತಿತ್ತು. ರಾಜೀವ್ ಕಾರ್ ಹೋಗುತ್ತಿದ್ದಾಗ ಜನರೆಲ್ಲಾ ಕಾರನ್ನು ಮುತ್ತಿಕೊಳ್ಳುತ್ತಿದ್ದರು. ಕೆಲವರು ಕಾರ್‍ನ ಒಳಗಿನಿಂದಲೇ ರಾಜೀವ್‍ನ ಕೈ ಕುಲುಕಿದರು. ಇದನ್ನೆಲ್ಲಾ ನೋಡುವಾಗ ರಾಜೀವ್‍ಗೂ ಸಹ ತನ್ನ ಸಾವು ಹತ್ತಿರದಲ್ಲೇ ಇದೆ ಎಂದು ಅಂದಾಜಾಗಬಹುದು.
ರಾಜೀವ್ ಗಾಂಧಿ ಕಾರ್‍ನಿಂದ ಹೊರಬರುತ್ತಿದ್ದಂತೆ ದೊಡ್ಡ ಜನಸಮೂಹವೇ ಆತನನ್ನು ಮುತ್ತಿಕೊಂಡಿತು. ರಾಜೀವ್ ಗಾಂಧಿ ಎಲ್ಲರಿಗೂ ಕೈಬೀಸಿದ ಕೆಲವರ ಕೈ ಕುಲುಕಿದ. ಇದನ್ನು ನೋಡುತ್ತಿದ್ದಂತೆ ಇನ್ನಷ್ಟು ಮಂದಿ ಹತ್ತಿರವಾದರು. ಇದೇ ಸಂದರ್ಭದಲ್ಲಿ ಒಬ್ಬಳು ಹುಡುಗಿ ಹಾರ ಹಿಡಿದುಕೊಂಡು ಬಂದು ರಾಜೀವ್ ಕಾಲನ್ನು ಹಿಡಿದಳು. ಆಕೆಯ ಕೈಯ್ಯಲ್ಲಿ ಹಾರವಿತ್ತು. ಸೊಂಟದಲ್ಲಿ 700 ಗ್ರಾಂ ಆರ್‍ಡಿಎಕ್ಸ್ ಅನ್ನು ಸೊಂಟದಲ್ಲಿ ಸುತ್ತಿಕೊಂಡಿದ್ದಳು. ಅದು ಕೆಲವೇ ಸಮಯದಲ್ಲಿ ಸ್ಫೋಟಗೊಂಡು ರಾಜೀವ್ ಗಾಂಧಿಯ ದೇಹವೆಲ್ಲಾ ಛಿದ್ರಗೊಂಡು ಮಾಂಸದ ತುಂಡುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು.
ಆದರೆ ಇಲ್ಲೊಂದು ಅಚ್ಚರಿಯುಂಟುಮಾಡುವ ವಿಷಯವಿದೆ. ಅದೇನಪ್ಪಾ ಅಂದರೆ ಇಲ್ಲಿ ಮೂರು ಕಾಂಗ್ರೆಸ್ ಲೀಡರ್‍ಗಳಿದ್ದು, ಅವರೆಲ್ಲಾ ರಾಜೀವ್ ಒಟ್ಟಿಗೆ ಬಂದವರು. ಕೆ. ಮೂಪನರ್, ಜಯಂತಿ ನಟರಾಜನ್ ಮತ್ತು ಮಾರ್ಗತಂ ಚಂದ್ರಶೇಖರ್. ರಾಜೀವ್ ಕಾರ್‍ನಿಂದ ಇಳಿದರೂ ಇವರ್ಯಾರೂ ಕೂಡಾ ರಾಜೀವ್ ಬಳಿ ಬರಲಿಲ್ಲ! ಮಾರ್ಗತಂ ಚಂದ್ರಶೇಖರ್ ಅವರು ಶ್ರೀಪೆರಂಬದೂರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಸ್ವತಃ ಆಕೆಯೇ ರಾಜೀವ್‍ನನ್ನು ಭಾಷಣ ಮಾಡಿಸಲು ಕರೆದಿದ್ದರು. ಆಕೆಯೂ ರಾಜೀವ್ ಜೊತೆ ಕಾರ್‍ನಲ್ಲಿ ತೆರಳುತ್ತಿದ್ದಳು. ಸಭೆ ಇದ್ದ ಸ್ಥಳದಲ್ಲಿ ರಾಜೀವ್ ಕಾರ್‍ನಿಂದ ಇಳಿದರೂ ಆಕೆ ಮಾತ್ರ ಕಾರ್‍ನಲ್ಲೇ ಕುಳಿತುಕೊಂಡಿದ್ದಳು. ರಾಜೀವ್‍ನನ್ನು ಶ್ರೀಪೆರಂಬದೂರಿಗೆ ಕರೆದುಕೊಂಡು ಬರಲು ಅಲ್ಲಿ ರಾಜಕೀಯ ಪಿತೂರಿಯೊಂದು ನಡೆದಿರುವುದನ್ನು ಅಲ್ಲಗಳೆಯುವಂತಿಲ್ಲ. ಯಾಕೆಂದರೆ ಅಂದಿನ ತಮಿಳುನಾಡಿನ ಕಾಂಗ್ರೆಸ್ ಮುಖ್ಯಸ್ಥ ವಝಪ್ಪಡಿ ರಾಮಮೂರ್ತಿ ಅವರು ರಾಜೀವ್‍ನನ್ನು ಶ್ರಿಪೆರಂಬದೂರಿಗೆ ಬರದಂತೆ ಸಲಹೆ ನೀಡಿದ್ದರು. ಸ್ವತಃ ರಾಜೀವ್‍ಗೂ ತಾನು ಶ್ರೀಪೆರಂಬದೂರಿನಲ್ಲಿ ಭಾಷಣ ಮಾಡಲಿದೆಯೆಂದು ಗೊತ್ತಿರಲಿಲ್ಲ. ಆದರೆ ಕೆಲವೇ ಕೆಲವು ಕಾಂಗ್ರೆಸ್ ಮುಖಂಡರು ತರಾತುರಿಯಿಂದ ರಾಜೀವ್‍ನನ್ನು ರಾಜೀವ್‍ನನ್ನು ಇಲ್ಲಿಗೆ ಬರುವಂತೆ ಮಾಡಿಕೊಂಡರು. ಆದರೆ ರಾಜೀವ್ ಕೋಲೆಯಾಗಿ ಹೋದರು.. ರಾಜೀವ್ ಕೊಲೆ ನಡೆದಿದ್ದು ಮೇ 21, 1991ರಲ್ಲಿ. ಅದಕ್ಕಿಂತ ಎರಡು ದಿನಗಳ ಮುಂಚೆಯೇ ಕೆಲವೊಂದು ಒಳಗಿನ ವ್ಯಕ್ತಿಗಳಿಂದಾಗಿಯೇ ರಾಜೀವ್ ಕೊಲೆಗೆ ಸ್ಕೆಚ್ ಸಿದ್ಧವಾಗಿತ್ತಂತೆ.

 

ಸ್ಫೋಟದಿಂದ ರಾಜೀವ್ ಜೊತೆ 15 ಮುಗ್ಧರ ಹತ್ಯೆಯಾಯಿತು…. ಆದರೆ ಇತರ ಕಾಂಗ್ರೆಸ್ ಮುಖಂಡರಿಗೆ ಏನೂ ಆಗಿಲ್ಲ ಯಾಕೆ?
ಇಂಥದೊಂದು ಪ್ರಶ್ನೆ ಇದೀಗ ನಿಮ್ಮ ಮನದಲ್ಲಿ ಸುಳಿದಾಡಬಹುದು. ಸ್ಫೋಟ ನಡೆದಾಗ ಕಾರ್‍ನೊಳಗಡೆಯೇ ಇದ್ದ ಕೆ. ಮೂಪನರ್, ಜಯಂತಿ ನಟರಾಜನ್ ಮತ್ತು ಮಾರ್ಗತಂ ಚಂದ್ರಶೇಖರ್ ಕಾರ್‍ನ ಒಳಗಿನಿಂದಲೇ ದಿಗಿಲಿಂದ ನೋಡುತ್ತಿದ್ದರು. ಈ ವೇಳೆ ಸಭೆಯ ಮಧ್ಯೆ ಒಂದು ಮಾತು ತಕ್ಷಣ ಕೇಳಿಬಂದಿತು….
“ಆಂಟಿ ವಿನಂತಿಸಿದ್ದರಿಂದ ಮಾತ್ರ ರಾಜೀವ್ ಗಾಂಧಿ ಶ್ರೀಪೆರಂಬದೂರುಗೆ ಬಂದಿದ್ದು…” ಎಂದು ಹೇಳಿದ್ದರು. ಇದೇ ಸುಳಿವಿನಿಂದ ರಾಜೀವ್ ಗಾಂಧಿಯ ಕೊಲೆಗೆ ಪಿತೂರಿ ನಡೆಸಿದ ಒಳಗಿನ ವ್ಯಕ್ತಿ ಯಾರು ಎಂದು ತಿಳಿಯಬಹುದು.

 

1991ರಲ್ಲಿ ಪಿ.ವಿ ನರಸಿಂಹರಾವ್ ಸರಕಾರ ಅಸ್ತಿತ್ವಕ್ಕೆ ಬಂದಿದ್ದು. ಅವರು ಪ್ರಧಾನಿಯಾದರು. ರಾಜೀವ್ ಗಾಂಧಿಯ ಕೊಲೆ ತನಿಖೆ ನಡೆಸಲು ಆದೇಶಿಸಿದರು. ಅನೇಕ ಮಂದಿ ಈ ಕೊಲೆಯ ಹಿಂದೆ ಒಂದು ಸಂಸ್ಥೆಯೇ ಇದೆ ಎಂದು ಅಂದಾಜಿಸಿದರು. ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿಯೊಬ್ಬರು ಸ್ಫೋಟಕ ವಿಷಯವೊಂದನ್ನು ಬಹಿರಂಪಡಿಸಿದರು. ಅದೇನಪ್ಪಾ ಅಂದರೆ, ವ್ಯಾಟಿಕನ್ ಜೊತೆ ನಿಕಟ ಸಂಬಂಧ ಇರುವ ವ್ಯಕ್ತಿಯಿಂದಲೇ ಈ ಕೊಲೆ ನಡೆದಿರುವ ಸಾಧ್ಯತೆ ಇದೆ….
ಗುಪ್ತಚರ ಅಧಿಕಾರಿಯೊಬ್ಬರು ರಾಜೀವ್ ಕೊಲೆಯ ಬಗ್ಗೆ ತನ್ನ್ ಬ್ಲಾಗ್‍ನಲ್ಲಿ ಬರೆದಿದ್ದು ಹೀಗೆ,
`ರಾಜೀವ್ ಕೊಲೆಗೆ ಕಾರಣ ಯಾರು ಎಂದು ಪುರಾವೆ ದೊರಕಿದೆ. ವ್ಯಾಟಿಕನ್ ಮತ್ತು ಎನ್‍ಐಸ್ ಎರಡೂ ಸೇರಿ ರಾಜೀವ್‍ನನ್ನು ಕೊಲ್ಲಲು ಎಲ್‍ಟಿಟಿಇಗೆ ಗ್ರೀನ್ ಸಿಗ್ನಲ್ ನೀಡಿದೆ. ಎಲ್‍ಟಿಟಿಇ ಮುಖಂಡ ಪ್ರಭಾಕರನ್ ರಾಜೀವ್ ಜೊತೆ ಯಾವುದೇ ಪ್ರತೀಕಾರದ ಭಾವನೆ ಹೊಂದಿರಲಿಲ್ಲ. ರಾಜೀವ್‍ನನ್ನು ಕೊಲ್ಲಲು ಎನ್‍ಐಎಸ್ ಮತ್ತು ಎಲ್‍ಟಿಟಿಇಗೆ ಡೀಲ್ ನೀಡಲಾಗಿತ್ತು. ಈ ಬಗ್ಗೆ ರಷ್ಯಾ ಗುಪ್ತಚರ ಇಲಾಖೆಯೂ ಅನುಮಾನಿಸಿದೆ. ಆದರೆ ಡೀಲ್ ನಡೆಸಿದ ಸಂಭಾಷಣೆಯನ್ನು ತಡೆಹಿಡಿಯಲಾಗಿದೆ. ಒಳಗಿನ ವ್ಯಕ್ತಿಯ ಸಹಕಾರದಿಂದ ಈ ಕೊಲೆ ನಡೆದಿದೆ…’ ಎಂದು ಬರೆದುಕೊಂಡಿದ್ದರು.
ಈ ವರದಿಯನ್ನು ಆ ಅಧಿಕಾರಿ ನೇರವಾಗಿ ಪ್ರಧಾನಿಯಾಗಿದ್ದ ನರಸಿಂಹ ರಾವ್‍ಗೆ ಕಳಿಸಿದ್ದರು. ಈ ವರದಿಯನ್ನು ಓದಿದ ನರಸಿಂಹ ರಾವ್ ಅವರು ಒಳಗಿನ ನಿಗೂಢ ವ್ಯಕ್ತಿಯ ಕರಾಮತ್ ನೋಡಿ ಸ್ವತಃ ಬೆಚ್ಚಿ ಬಿದ್ದಿದ್ದರು. ಆದರೆ ಈ ವರದಿ ನೀಡಿದ್ದ ನಾಲ್ಕು ದಿನಗಳ ನಂತರ ತನಿಖಾ ತಂಡವನ್ನೇ ರದ್ದುಗೊಳಿಸಲಾಯಿತ್ತಲ್ಲದೆ, ಈ ವರದಿಯ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ತಡೆಯಲಾಯಿತು.

 

ರಾಜೀವ್ ಕೊಲೆ ರಹಸ್ಯ ಬೇಧಿಸಲು ಇನ್ನೊಂದು ತನಿಖಾ ತಂಡವನ್ನು ರಚಿಸಲಾಯಿತು. ಅದರ ನೇತೃತ್ವವನ್ನು ಎಸ್‍ಐಟಿಯ ಡಾ. ಕಾರ್ತಿಕೇಯನ್ ವಹಿಸಿದ್ದರು. ಅವರ ವರದಿಯಲ್ಲಿ ಕೊಲೆಯ ಹಿಂದೆ ಎಲ್‍ಟಿಟಿಇಯ ಪಾತ್ರವಿದ್ದು, ರಾಜೀವ್ ಕೊಲೆ ನಡೆಸಿ ಪ್ರತೀಕಾರ ತೀರಿಸಿದೆ ಎಂದು ವರದಿ ಸಲ್ಲಿಸಿದರು. ಆದರೆ ಈ ಸಮಿತಿ, ಅದಕ್ಕೆ ಪೂರಕವಾದ ದಾಖಲೆಗಳನ್ನು ಸಲ್ಲಿಸಲು ವಿಫಲವಾಯಿತು. ಮುಖ್ಯವಾಗಿ ರಾಜೀವ್‍ನ ಫೋಟೋ, ವಿಡಿಯೋ ತೆಗೆದವನು ಹರಿಬಾಬು ಎಂಬಾತ. ಹರಿಬಾಬು ಸ್ಪೋಟದಲ್ಲಿ ಮೃತಪಟ್ಟಿದ್ದರೂ ಆತನ ಕ್ಯಾಮರಾಕ್ಕೆ ಏನೂ ಆಗಿರಲಿಲ್ಲ. ಅದರಲ್ಲಿ ದಾಖಲಾಗಿದ್ದ ವಿಡಿಯೋವನ್ನು ವಿರೂಪಗೊಳಿಸಲಾಗಿದೆಯಲ್ಲದೆ ಕೆಲವೊಂದನ್ನು ಅಳಿಸಲಾಗಿದೆ. ಎಸ್‍ಐಟಿ ಪ್ರಸ್ತುತಪಡಿಸಿದ ವಿಡಿಯೋಗಳೆಲ್ಲಾ ವಿರೂಪವಾಗಿತ್ತಲ್ಲದೆ ವರದಿಯಲ್ಲಿ ತುಂಬಾ ತಪ್ಪುಗಳಿದ್ದವು.ಜನರು ಸ್ವಲ್ಪ ದಿನಗಳಾದ ಮೇಲೆ ಮರೆಯುವ ಜಾಯಮಾನವನ್ನು ಹೊಂದಿದ್ದಾರೆ ಎನ್ನುವ ಸಿದ್ದಾಂತವನ್ನು ಕಾಂಗ್ರೆಸ್ ಪಾಲಿಸಿಕೊಂಡು ಬಂದಿರುವುದರಿಂದ ಹಲವು ಕೊಲೆಗಳ ಬಗ್ಗೆ ಜಾಸ್ತಿ ಮಾತಾಡುವುದಿಲ್ಲ ಅಲ್ಲದೆ ಯಾರೇ ಏನೇ ಅಂದರೂ ಅದರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತದೆ.

ಹಾಗಾದರೆ ರಾಜೀವ್‍ನನ್ನು ಕೊಲ್ಲಿಸಿದ ನಿಗೂಢ ವ್ಯಕ್ತಿ ಯಾರು? ಆ ನಿಗೂಢ ವ್ಯಕ್ತಿಯ ಬಗ್ಗೆ ವರದಿಗಳು ಏನನ್ನು ಬಹಿರಂಗಪಡಿಸಿದೆ? ಈ ಕೊಲೆಯಲ್ಲಿ ನಿಗೂಢ ವ್ಯಕ್ತಿಯ ಪಾತ್ರವೇನು? ಆ ವ್ಯಕ್ತಿ ಪ್ರಧಾನಿಗಿಂತಲೂ ಯಾಕೆ ಅಷ್ಟು ಪ್ರಭಾವಶಾಲಿ? ಎಂದೆಲ್ಲಾ ಯೋಚಿಸುವಾಗ ಆ ನಿಗೂಢ ವ್ಯಕ್ತಿ ಯಾರೆಂದು ಪ್ರಶ್ನೆ ಮೂಡಬಹುದು.

ರಾಜೀವ್ ಗಾಂಧಿಯನ್ನು ಕೊಲೆ ಮಾಡಿದರೆ ಆ ನಿಗೂಢ ವ್ಯಕ್ತಿಗೆ ಆದ ಲಾಭವೇನು? ಯಾಕೆಂದರೆ ಒಬ್ಬ ವ್ಯಕ್ತಿ ಸತ್ತ ನಂತರ ಆತನ ಹಣ, ಆಸ್ತಿ, ಪವರ್, ಹುದ್ದೆ ಹೀಗೆ ಎಲ್ಲವೂ ಆತನ ಆಪ್ತ ಸಂಬಂಧಿಗೆ ಹೋಗುತ್ತದೆ. ಇಲ್ಲೂ ಅದೇ ರೀತಿ ನಡೆದಿರಬಹುದು… ಒಂದು ದೇಶದ ಪ್ರಧಾನಿಯ ಕೊಲೆಯನ್ನು ತನ್ನ ಹೆಗಲಿಗೆ ಹಾಕಿದಾಗಅದರ ಪರಿಣಾಮ ಏನಾಗಬಹುದು ಎಂದು ಸ್ವತಃ ಎಲ್‍ಟಿಟಿಇಗೂ ಅಂದಾಜಾಗಿರಬಹುದು. ಅಲ್ಲದೆ ಇದರಿಂದ ಎಲ್‍ಟಿಟಿಇಗೆ ಭಯವೂ ಆವರಿಸಿರಬಹುದು. ಆದರೆ ಭಾರತದ ಕಡೆಯಿಂದ ಏನೂ ಆಗುವುದಿಲ್ಲ ಆದ್ದರಿಂದ ಭಯಪಡಬೇಕಾಗಿಲ್ಲ ಎಂದು ಸ್ವತಃ ವ್ಯಾಟಿಕನ್ ಎಲ್‍ಟಿಟಿಇಗೆ ಭರವಸೆ ನೀಡಿತ್ತು. ಅದರಂತೆ ನಡೆದುಕೊಂಡಿತು ಸಹ…. ಆದ್ದರಿಂದ ಏನೂ ನಡೆಯಲಿಲ್ಲ……! ರಾಜೀವ್ ಹಂತಕರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದರೂ ರಾಜೀವ್ ಗಾಂಧಿಯ ಪತ್ನಿಯಾಗಿರುವ ಸೋನಿಯಾ ಗಾಂಧಿ ಮಾತ್ರ ಅವರನ್ನು ಕ್ಷಮಿಸುವಂತೆ ಕೇಳಿದ್ದಾರೆ!!

ಸೈಬರ್ ವಿಭಾಗದ ಗುಪ್ತಚರರಾಗಿರುವ ಗೌರವ್ ಪ್ರಧಾನ್ ಈ ಘಟನೆಯ ಬಗ್ಗೆ ಕೆಲವೊಂದು ವಿಚಾರಗಳನ್ನು ಟ್ವೀಟಿಸಿದ್ದಾರೆ.
“ಕಾಂಗ್ರೆಸ್ ಪ್ರಕಾರ ರಾಜೀವ್ ಕೊಲೆ ಸಾಮಾನ್ಯ ವಿಷಯ ಆದ್ರೆ ಇಷ್ರತ್ ಜಹಾನ್ ವಿಷಯ ಗಂಭೀರವಾಗಿದೆ” ಎಂದು ಕಾಂಗ್ರೆಸ್‍ಗೆ ಲೇವಡಿ ಮಾಡಿದ್ದಾರೆ.
“ರಾಜೀವ್ ಗಾಂಧಿ ಕೊಲೆನಡೆದಾಗ ಜಯಂತಿ ನಟರಾಜನ್ ತಪ್ಪಿಸಿಕೊಂಡಿದ್ದಾರೆ. ಆ ರ್ಯಾಲಿಯಲಿಲ್ಲಾರ್‍ಜಿ ಹೊರತುಪಡಿಸಿ ಬೇರೆ ಯಾವ ದೊಡ್ಡ ನಾಯಕನೂ
ಇರಲಿಲ್ಲ..”
“ಜೈಲಲ್ಲಿರುವ ಎಲ್‍ಟಿಟಿಯ ನಳಿನಿಯನ್ನು ಭೇಟಿಯಾಗಲು ಪ್ರಿಯಾಂಕ ಹೋಗುವ ವಿಷಯ ಗೊತ್ತು ಆದರೆ ರಾಹುಲ್ ಯಾಕೆ ಹೋಗುವುದಿಲ್ಲ…?”
“ಪ್ರಿಯಾಂಕ ಗಾಂಧಿ ನಳಿನಿಯನ್ನು ಭೇಟಿ ಮಾಡಲು ಜೈಲಿಗೆ ತೆರಳಿ ಕ್ಷಮಿಸುವುದಾಗಿ ಹೇಳುತ್ತಾರೆ. ನಿಜವಾಗಿಯೂ ಆಕೆ ಕ್ಷಮಿಸುತ್ತಾರಾ?”

 

Source:

Did the Vatican have a hand in planting Sonia Gandhi in the Gandhi household?

Subramanian Swamy reveals the facts

Evidence to prove the assasination of Rajiv Gandhi

Disclaimer: All the above information in the article was got from various sources and
Postcard.news is no way responsible if any information was wrongly quoted. We do not
endorse the views of the sources

-ಚೇಕಿತಾನ

Tags

Related Articles

Close