ಪ್ರಚಲಿತ

ಒಂದೇ ದೇಶದಲ್ಲಿ ಇನ್ನೊಂದು ದೇಶವನ್ನು ನಿರ್ಮಿಸಿದ್ದ ನೆಹರೂ! ಅದಕ್ಕಾಗಿ ಏನು ಕಿತಾಪತಿ ಮಾಡಿದ್ದರು ಗೊತ್ತೇ?!

ಕಾಶ್ಮೀರಕ್ಕಾಗಿ ಇರುವ ಪರಿಚ್ಛೇದ 370ರ ಬಗ್ಗೆ ಎಷ್ಟು ಮಂದಿಗೆ ಗೊತ್ತಿದೆಯೋ ಏನೋ… ಆದರೆ 370 ಪರಿಚ್ಛೇದದ ದುಷ್ಪರಿಣಾಮಕ್ಕೆ ನೆಹರೂರವರೇ ಜವಾಬ್ದಾರರು. ಇದು ನಿಜವಾಗಿಯೂ ಕಾಶ್ಮೀರದ ಬಂಡುಕೋರರಿಗೆ ಕೊಡುವ ಅತ್ಯುನ್ನತ ಸೌಲಭ್ಯವಾಗಿದ್ದು, ಇದು ನೆಹರೂ ರೂಪಿಸಿದ ವಿಧಿಯಾಗಿದೆ. ಭಾರತಕ್ಕೆ ಒಳಪಡುವ ಸಂಸ್ಥಾನಗಳನ್ನು ಭಾರತಕ್ಕೆ ವಿಲೀನಗೊಳಿಸುವ ಜವಾಬ್ದಾರಿ ಸರ್ದಾರ್ ವಲ್ಲಭಾಯ್ ಪಟೇಲರ ಮೇಲಿತ್ತು. ಆಗ ಸರ್ದಾರ್ ನೆಹರೂರವರಲ್ಲಿ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಕೇಳಿಕೊಂಡರು. ಬೇರೆ ಸಂಸ್ಥಾನಗಳು ತಕ್ಷಣ ವಿಲೀನವಾದವು. ಆದರೆವ ಅಲ್ಲಿನ ರಾಜಾ ಹರಿಸಿಂಗ್ ಮಾಡಿದ ಕೊಂಚ ಎಡವಟ್ಟಿನಿಂದ ಮತ್ತು ನೆಹರೂರವರ ನಿರ್ಲಕ್ಷ್ಯದಿಂದ ಕಾಶ್ಮೀರ ಇಂದಿನವರೆಗೆ ಸಮಸ್ಯೆ ನೀಡುತ್ತಲೇ ಬಂದಿದೆ. ಕೊನೆಗೆ ಚೀನಾ 36 ಸಾವಿರ ಮೈಲು ವಿಸ್ತೀರ್ಣದ ಭೂಭಾಗವನ್ನು ಸ್ವಾಧೀನಗೊಳಿಸಿತು.

ಪಾಕಿಸ್ತಾನವು ಕಾಶ್ಮೀರಕ್ಕೆ ಸೇನೆಯನ್ನು ಕಳುಹಿಸಿದಾಗ ರಾಜಾ ಹರಿಸಿಂಗ್‍ನು ಸೈನ್ಯ ಕಳುಹಿಸಲು ಭಾರತದಲ್ಲಿ ವಿನಂತಿಸುತ್ತಿದ್ದನು; ಆದರೆ ನೆಹರು ಬಾಯಿ
ಮುಚ್ಚಿಕೊಂಡಿದ್ದರು. ಪಾಕಿಸ್ತಾನವು ಅರ್ಧ ಕಾಶ್ಮೀರವನ್ನು ವಶಪಡಿಸಿದ ನಂತರ ಸರದಾರ ಪಟೇಲರು ಸ್ವತಃ ಸೈನ್ಯ ಕಳುಹಿಸಿ ಪಾಕಿಸ್ತಾನದ ಸೈನ್ಯವನ್ನು ತಡೆದರು. ಆದ್ದರಿಂದ ಕಾಶ್ಮೀರ ಅರ್ಧ ಭಾಗವಾದರೂ ಉಳಿಯಿತು. ಆದರೆ ಪಾಕಿಸ್ತಾನಕ್ಕೆ ಸರಿಯಾದ ಉತ್ತರ ನೀಡಲು ಕಾಂಗ್ರೆಸ್ ಸರಕಾರಕ್ಕೆ ಮನಸ್ಸಾಗಲೇ ಇಲ್ಲ.

ಗಡಿ ಸಮಸ್ಯೆಯ ಕುರಿತು ಮಾತಾಡಲು ನೆಹರೂರವರು ಸಂಯುಕ್ತ ರಾಷ್ಟ್ರ ಸಂಘಕ್ಕೆ ಶೇಖ್ ಅಬ್ದುಲ್ಲಾ ಎಂಬವರನ್ನು ಕಳುಹಿಸಿದರು. ಆಗ ಅವರು ಕಾಶ್ಮೀರ ಭಾರತದ್ದೂ ಅಲ್ಲ, ಪಾಕಿಸ್ತಾನದ್ದೂ ಅಲ್ಲ ಎಂಬ ಹೇಳಿಕೆ ನೀಡಿದರು. ಇದರಿಂದಾಗಿಯೇ ಪಾಕಿಸ್ತಾನವು ಇದುವರೆಗೂ ಕಾಶ್ಮೀರವನ್ನು ತಮ್ಮದೆಂದು ಹೇಳಿಕೊಳ್ಳುತ್ತಿದೆ. ಇದು ನೆಹರೂ ಮಾಡಿದ ತಪ್ಪಾಗಿದ್ದು, ಇಂದಿಗೂ ಆ ಸಮಸ್ಯೆ ಭಾರತವನ್ನು ಕಿತ್ತು ಕಿತ್ತು ತಿನ್ನುತ್ತಿದೆ.

ಇದಾದ ಬಳಿಕ ಜಮ್ಮು ಕಾಶ್ಮೀರದಲ್ಲಿ 370ನೇ ಪರಿಚ್ಛೇದ ಚಾಲ್ತಿಗೆ ಬಂದಿತು. ಇದರಿಂದಾಗಿ ಸಾವಿರಾರು ಕಾಶ್ಮೀರಿ ಯುವತಿಯರಿಗೆ ವರಾನ್ವೇಶಣೆಗೆ ಅಡ್ಡಿಯಾಗುತ್ತಿದೆ. ಕಾಶ್ಮೀರಿ ಯುವತಿ ಭಾರತದ ಮುಸಲ್ಮಾನನೊಂದಿಗೆ ವಿವಾಹ ವಾಗುವಂತಿಲ್ಲ, ಆದರೆ ಕಾಶ್ಮೀರಿ ಯುವಕರು ಯಾರೊಂದಿಗೂ ವಿವಾಹವಾಗ ಬಹುದು. ಇಂತಹ ಭೇದ ಭಾವವೇಕೇ? ಈ ಬಗ್ಗೆ ಸಮಾನತೆಯ ಬಗ್ಗೆ ಕೂಗು ಹಾಕುವ ಪ್ರಗತಿಪರರು, ಮಹಿಳಾವಾದಿಗಳು ಮಾತಾಡುತ್ತಲೇ ಇಲ್ಲ..

370ರ ಪರಿಚ್ಛೇದದ ದುಷ್ಪರಿಣಾಮಗಳು:

ಕಾಶ್ಮೀರದಲ್ಲಿ ಭಾರತೀಯರಿಗೆ ವಾಸಿಸುವಂತಿಲ್ಲ. ಇದ್ದರೆ ಅತಿಥಿಗಳಂತೆ ಸ್ವಲ್ಪದಿನ ಇದ್ದು ಬರಬಹುದು. ರಾಷ್ಟ್ರಪತಿಗೂ ಅಲ್ಲಿ ನೆಲೆಸಲು ಸಾಧ್ಯವಿಲ್ಲ. ಅಲ್ಲಿ ಆಲ್
ಇಂಡಿಯಾ ರೇಡಿಯೋ ಇಲ್ಲ. ಅಲ್ಲಿ ರೇಡಿಯೋ ಕಾಶ್ಮೀರವಿದೆ. ಅಂಬೇಡ್ಕರ್ ಸಂವಿಧಾನವನ್ನು ಅನ್ವಯಿಸುವಾಗ ನೆಹರು ಅದನ್ನು ಕಾಶ್ಮೀರದಿಂದ ದೂರವಿಟ್ಟರು.
ಸಂವಿಧಾನದಲ್ಲಿನ ಯಾವುದೇ ಪರಿಚ್ಛೇದವೂ ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುವುದಿಲ್ಲ ಎಂದರು. ಕಾಶ್ಮೀರದ ಮುಖ್ಯಮಂತ್ರಿಗೆ ಭಾರತದ ಪ್ರಧಾನಿಗಿರುವ ಅಧಿಕಾರ ಮರ್ಯಾದೆ ಇದೆ. ಇದರಿಂದಾಗಿ ಒಂದು ದೇಶದಲ್ಲಿ ಎರಡು ಪ್ರಧಾನಿಗಳಂತೆ. ಆದುದರಿಂದ ಈ ದೇಶದ್ರೋಹಿ 370 ಪರಿಚ್ಛೇದವನ್ನು ರದ್ದುಪಡಿಸಿದಾಲೇ ಭಾರತ ನಿಜವಾಗಿಯೂ ಸ್ವತಂತ್ರವಾಗಲಿದೆ.

ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು ಕಾಶ್ಮೀರಕ್ಕೆ ಅನ್ವಯವಾಗುವ 370ನೇ ಪರಿಚ್ಛೇದವನ್ನು ರದ್ದುಗೊಳಿಸಬೇಕು ಎಂಬ ಹೇಳಿಕೆಯನ್ನು ನೀಡಿದರು. ಆದರೆ ಆ ಹೇಳಿಕೆ ಹೊರಬಿದ್ದ ತಕ್ಷಣ ಮೋದಿಯವರನ್ನು ದೇಶದ್ರೋಹಿಯಂತೆ ಚಿತ್ರಿಸಲಾಯ್ತು. ಕಂಗ್ರೆಸ್ ಕೃಪಾಪೆÇೀಷಿತ ಮಾಧ್ಯಮ,ಗಳು ಮೋದಿಯವರ ಮೇಲೆ ಛೂ ಬಿದ್ದವು. 370ನೇ ಪರಿಚ್ಛೇದದ ದುಷ್ಪರಿಣಾಮದ ಬಗ್ಗೆ ಯಾವ ಮಾಧ್ಯಮಗಳೂ ಜನರಿಗೆ ತಿಳುವಳಿಕೆಯನ್ನು ನೀಡಲಿಲ್ಲ.

ಈ ಕಾಶ್ಮೀರ ಸಮಸ್ಯೆ ಬಗೆಹರಿದಿದ್ದರೆ ಲಕ್ಷಾಂತರ ಅಮಾಯಕ ಜನರು ಸಾವಿಗೀಡಾಗಬೇಕಾಗುತ್ತಿರಲಿಲ್ಲ. ಕಾಶ್ಮೀರಿ ಪಂಡಿತರು ದೇಶಬಿಟ್ಟು ಹೋಗಿ ಬೀದಿಬದಿಗಳಲ್ಲಿ ಚಪ್ಪಲಿ ಹೊಲಿಯುವ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ಕಾಶ್ಮೀರದ ಮುಖ್ಯಮಂತ್ರಿ ಭಾರತ ದೇಶದ ವಿರುದ್ಧ ಹೇಳಿಕೆಯನ್ನು ನೀಡಬೇಕಾಗಿರಲಿಲ್ಲ. ಭಾರತದ ಹೆಮ್ಮೆಯ ಲಕ್ಷಾಂತರ ಸೈನಿಕರು ಪ್ರಾಣ ತ್ಯಾಗ ಮಾಡಬೇಕಾಗಿರಲಿಲ್ಲ. ಯುದ್ಧಕ್ಕಾಗಿ ಭಾರತ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಬೇಕಾಗುತ್ತಿರಲಿಲ್ಲ. ಮುಖ್ಯವಾಗಿ ಭಯೋತ್ಪಾದನೆ ಈ ಪರಿ ಬೆಳೆಯಲೂ ಸಾಧ್ಯವಾಗುತ್ತಿರಲಿಲ್ಲ.

ಇಂದು ಭಾರತದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದಾರೆ. ಸರ್ಜಿಕಲ್ ಸ್ಟ್ರೈಕ್, ನೋಟ್‍ಬ್ಯಾನ್, ಜಿಎಸ್‍ಟಿ ಮುಂತಾದ ದಿಟ್ಟ ಕಾನೂನು ರೂಪಿಸಿದ ಮೋದಿ ಜಮ್ಮು ಕಾಶ್ಮೀರದ ಸಮಸ್ಯೆಯನ್ನೂ ನಿವಾರಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನ ಮಾಡುತ್ತಲೇ ಇದ್ದಾರೆ. ಜೊತೆಗೆ ಕಾಶ್ಮೀರದಲ್ಲಿ ಇಂದು ಕಲ್ಲುತೂರಾಟ, ಭಯೋತ್ಪಾದನೆ, ಗುಂಡಿನ ಚಕಮಕಿ ಮುಂತಾದವುಗಳಿಗೆ ಕಡಿವಾಣ ಬಿದ್ದಿದ್ದು, ಅನೇಕ ಉಗ್ರ ಕಮಾಂಡರ್‍ಗಳನ್ನು ಹತ್ಯೆ ನಡೆಸಲಾಗಿದೆ. ಮುಖ್ಯವಾಗಿ ಕಾಶ್ಮೀರ ಜನತೆ ಕೂಡಾ ಭಾರತದ ಬಗ್ಗೆ ಪ್ರೀತಿಯನ್ನು ಗಳಿಸಿದ್ದಾರೆ.

ಜಮ್ಮು ಕಾಶ್ಮೀರ ಸಮಸ್ಯೆ ನಿವಾರಣೆಯಾಗುವ ನಿರೀಕ್ಷೆಯ ಜೊತೆಗೆ ಇನ್ನೂ ಹಲವಾರು ಮಹೋತ್ತರ ಕಾರ್ಯಗಳು ನಡೆಯಲಿದೆ. ಸಹಸ್ರಾರು ಸಿಖ್ಖರ ಸಾವಿಗೆ
ಕಾರಣವಾದ ಕಾಂಗ್ರೆಸ್ ಅದರ ಅಧಿನಾಯಕಿ ಅಂತರರಾಷ್ಟ್ರೀಯ ಕಟಕಟೆಯಲ್ಲಿ ನಿಲ್ಲಬೇಕಾದ ಪ್ರಮೇಯ ಒದಗಿ ಬರುತ್ತದೆ. ಭೋಪಾಲ್ ಅನಿಲ ದುರಂತದ ಹಿಂದಿರುವ ಕರಾಳ ಮುಖಗಳು ಜೈಲುಪಾಲಾಗುವುದು ಖಂಡಿತ. ಭೋಪೆÇೀರ್ಸ್, ಟೂಜಿ ಹಗರಣ, ಸೇರಿ ನಾನಾ ಹಗರಣಗಳನ್ನು ನಡೆಸಿದ್ದಲ್ಲದೆ, ಒಂದಲ್ಲಾ ಒಂದು ರೀತಿಯಲ್ಲಿ ಕೋಟಿಗಟ್ಟಲೆ ಜನರ ಸಾವಿಗೆ ಕಾರಣವಾದ  ಕಾಂಗ್ರೆಸ್ ಮೂಲೋತ್ಪಾಟನೆಯಾಗುತ್ತಿದೆ.

-ಚೇಕಿತಾನ

Tags

Related Articles

Close