ಅಂಕಣದೇಶಪ್ರಚಲಿತ

ಕಚ್ಛಾ ತೈಲದ ಬೆಲೆ ಕಡಿಮೆಯಿದ್ದರೂ ಮೋದಿಯವರು ಪೆಟ್ರೋಲ್ ಬೆಲೆಯ ದರ ಏರಿಸಿದ್ದು ಯಾಕೆ ಗೊತ್ತಾ ??

ಭಾರತ ಅನೇಕ ಸಮಸ್ಯೆಗಳನ್ನು ಇವತ್ತು ಎದುರಿಸುತ್ತಿದೆ, ಭಾರತ ಸರಕಾರ ಆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುತ್ತಲೇ ಇದೆ. ಅವುಗಳಲ್ಲಿ ಜನಸಾಮಾನ್ಯರನ್ನು ಕಾಡುವ ಸಮಸ್ಯೆಯೊಂದಿದೆ. ನಿಜ. ಉಪಯುಕ್ತ ವಸ್ತುಗಳ ದರ ದಿನೇ ದಿನೇ ಏರಿಕೆಯಾಗುತ್ತಲೇ ಇದೆಯೆಂಬ ಭಾವನೆ ಉದ್ಭವವಾಗಿದೆ. ಪ್ರಮುಖವಾಗಿ ಪೆಟ್ರೋಲ್ ಮತ್ತು ಡೀಸಿಲ್ ದರದ ಏರಿಕೆಯ ಕುರಿತಾಗಿ ಅನೇಕ ಅಸಮಾಧಾನಗಳು ವ್ಯಕ್ತವಾಗಿವೆ. ಆದರೆ ಯಾಕೆ ಈ ರೀತಿ ದರ ಏರಿಕೆಯಾಗುತ್ತಿದೆ ಅನ್ನುವ ಚಿಂತನೆಯನ್ನೂ ನಾವು ಮಾಡಬೇಕಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯ ಪರಿಸ್ಥಿತಿಯನ್ನು ಅವಲೋಕನ ಮಾಡಬೇಕಿದೆ :

ಪ್ರಥಮವಾಗಿ ಬೆಲೆ ಯಾಂತ್ರಿಕತೆಯ ಕುರಿತಾಗಿ ನಾವು ತಿಳಿಯಬೇಕಿದೆ. ಅಂತರಾಷ್ಟ್ರೀಯ ತೈಲ ಬೆಲೆಗೆ ಹಾಗೂ ಭಾರತದಲ್ಲಿ ನಿಗದಿಯಾಗುವ ಪೆಟ್ರೋಲ್ ಹಾಗೂ ತೈಲ ಬೆಲೆಗೂ ಅವಿನಾಭಾವ ಸಂಬಂಧವಿದೆ. ಸುಮಾರು 80% ಇಂಧನ ಅವಶ್ಯಕತೆಯನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ಆದ್ದರಿಂದಲೇ ಅಂತರಾಷ್ಟ್ರೀಯ ಬೆಲೆಗೂ ಸ್ಥಲೀಯ ಇಂಧನ ಬೆಲೆಗೂ ಸಂಭಂದವಿದೆ. ಈವಾಗ ನಮಗೆ ಒಂದು ಪ್ರಶ್ನೆ ಕಾಡಬಹುದು. ಅಂತರಾಷ್ಟ್ರೀಯವಾಗಿ ಬೆಲೆಗಳು ಕಡಿಮೆಯಾಗುವಾಗ ಅದೇ ದರ ಭಾರತದಲ್ಲಿ ಯಾಕಿಲ್ಲ??

ಇದು ವಾಸ್ತವವಾಗಿಯೂ ಸತ್ಯ. ಆದರ್ಶ ಪ್ರಶ್ನೆಯೆಂದೇ ಇದನ್ನು ಪರಿಗಣಿಸಬಹುದು. ಭಾರತದಲ್ಲಿ ಲಭಿಸುವ ತೈಲಕ್ಕೆ ಅಧಿಕ ತೆರಿಗೆ ಹಾಕುವ ಪದ್ಧತಿಯಿದೆ. ಅಷ್ಟೇ ಅಲ್ಲದೇ, ಭಾರತ ವಿದೇಶೀಯರ ಸಾಲವನ್ನೂ ಮರುಪಾವತಿಸಬೇಕಿದೆ, ಕೆಲವು 4 ವರ್ಷಗಳ ಹಿಂದಿನದ್ದು, ಇನ್ನು ಕೆಲವು ಅದಕ್ಕಿಂತಲೂ ಹಿಂದಿನದ್ದು.

ಸಾಲ ಘಟಕ :

ಭಾರತದಲ್ಲಿ ಅಧಿಕವಾಗುತ್ತಿರುವ ತೈಲಬೆಲೆಗೆ ಮೂಲ ಕಾರಣವೇ ಭಾರತಕ್ಕೆ ಇರಾನ್ ಹಾಗೂ ಹೊರದೇಶದಿಂದ ಪೆಡೆಯಲಾದ ಸಾಲಗಳ ಬಾಬ್ತು. ಭಾರತ ಪ್ರತೀವರ್ಷ 5 ಲಕ್ಷ ಬ್ಯಾರೆಲ್ಸ್ ನಷ್ಟು ತೈಲವನ್ನು ಇರಾನ್ ನಿಂದ ಆಮದು ಮಾಡಿಕೊಳ್ಳುತ್ತದೆ. ಹೀಗೆ ನಾವು ಮಾಡುವ ಸಾಲ ಎಷ್ಟು ಗೊತ್ತೇ?? ವರ್ಷಕ್ಕೆ ಬರೋಬ್ಬರಿ 43 ಸಾವಿರ ಕೋಟಿ. ಅಮೇರಿಕಾ ಹಾಗು ಕೆಲವು ರಾಷ್ಟ್ರಗಳು ಇರಾನ್ ನಿಂದ ತೈಲವನ್ನು ಆಮದು ಮಾಡುವುದನ್ನು ಸ್ಥಗಿತಗೊಳಿಸಿದರೂ, ಭಾರತ ಈಗಲೂ ಇರಾನ್ ದೇಶದಿಂದಲೇ ತೈಲಕ್ಕೆ ಸಂಬಂಧಪಟ್ಟ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಕೆಲವು ರಾಷ್ಟ್ರಗಳು ಇರಾನ್ ಮೇಲೆ ನಿರ್ಭಂಧಗಳನ್ನು ವಿಧಿಸಿದ್ದರಿಂದ, ಇರಾನ್ ನಗದು ರೂಪದಲ್ಲೇ ಹಣ ಪಾವತಿಸಬೇಕೆಂದು ಹೇಳಿರುವುದು, ಭಾರತಕ್ಕೆ ಕಠಿಣ ಸವಾಲಾಗಿ ಎದುರಾಗಿದೆ. ಆದ್ದರಿಂದಲೇ ಇರಾನ್ ಮೇಲಿರುವ ಸಾಲ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಈರೋ ದ ಬೆಲೆ ಅಧಿಕವಾಗಿರುವುದರಿಂದ ಭಾರತಕ್ಕೆ ಸಾಲವನ್ನು ಮರುಪಾವತಿಸಲು ಇನ್ನೊಂದು ಸವಾಲು ಎದುರಾದಂತಾಗಿದೆ.

ಸ್ವಲ್ಪ ಮಟ್ಟಿಗೆ ಖುಷಿಯನ್ನು ತರಬಹುದಾದ ಒಂದು ಅಂಶವನ್ನು ಹೇಳುತ್ತೇನೆ ಕೇಳಿ. ಕಳೆದ ಕೆಲವು ತಿಂಗಳುಗಳ ತರುವಾಯ ಸಾಲದ ಮೊದಲ ಕಂತಿನಲ್ಲಿ 5 ಸಾವಿರ ಕೋಟಿಯಷ್ಟು ಮೋದಿ ಸರಕಾರ ಪಾವತಿಸಿದೆ. ಇನ್ನು ಉಳಿದ ಮೊತ್ತವನ್ನು ಪಾವತಿಸುವ ಕುರಿತಾಗಿ ಭಾರತ ಸರಕಾರ ಸದಾ ಚಿಂತಿಸುತ್ತಿರುವುದು ಶ್ಲಾಘನೀಯ ವಿಚಾರವೇ ಸರಿ.

ಇತರೆ ಅಂಶಗಳು :

ಪ್ರಜೆಗಳಾಗಿ ನಾವು ದೂರದೃಷ್ಟಿಯಿಂದ ಚಿಂತನೆಯನ್ನು ಮಾಡುವುದೇ ಇಲ್ಲ. ಹಣಕಾಸಿನ ಕೊರತೆಗಳನ್ನು ನೀಗಿಸುವಲ್ಲಿ ಹಾಗೂ ಅದಕ್ಕೆ ಪರಿಹಾರವನ್ನು ಶ್ರೀ ನರೇಂದ್ರ ಮೋದಿಯವರ ಸರಕಾರ ಕೊಂಡುಕೊಳ್ಳುತ್ತಿದೆ ಅನ್ನುವುದು ಸ್ಪಷ್ಟವಾಗುತ್ತದೆ. ಜನಪ್ರಿಯ ಯೋಜನೆಗಳಿಗಿಂತ ಸ್ಥೂಲ ಆರ್ಥಿಕತೆಯ ಕುರಿತಾಗಿ ಹೆಚ್ಚು ಗಮನವನ್ನು ಹರಿಸುತ್ತಿದ್ದಾರೆ ಮೋದಿ. ಪ್ರಾರಂಭದ ಹಂತದಲ್ಲಿ ಇದು ಸ್ವಲ್ಪ ಕಷ್ಟವೆಂದು ನಮಗೆ ತೋರಬಹುದು, ಆದರೆ ಹಣಕಾಸಿನ ಕೊರತೆಯನ್ನು ನೀಗಿಸಲು ಇದು ಅತ್ಯಾವಶ್ಯಕ. ಭಾರತದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಬೆಲೆ ಅಧಿಕದ ವಿಚಾರವಾಗಿ ಅನೇಕ ವಿಮರ್ಶೆಗಳನ್ನು ಮಾಡಿ , ಕೆಲವು ಸಂಗತಿಗಳಿಗೆ ಪ್ರಾಮುಖ್ಯತೆಯನ್ನು ಕೊಡುವ ಸಲುವಾಗಿ, ಇನ್ನು ಕೆಲವು ವಿಚಾರಕ್ಕೆ ರಾಜಿ ಮಾಡಲೇ ಬೇಕಾಗಿದೆ.

ಭಾರತ ಸರಕಾರವು ಬರುವ ಆದಾಯದ ಕೆಲವು ಅಂಶಗಳನ್ನು ಮೂಲಸೌಕರ್ಯ, ರಕ್ಷಣೆ, ಸಬ್ಸಿಡಿ, ಸಾಮಾಜಿಕ ಕ್ಷೇತ್ರ, ಇತ್ಯಾದಿಗಳಿಗೆ ವಿನಿಯೋಸುತ್ತಿದೆ. ಇನ್ನುಳಿದ ಆದಾಯವನ್ನು ರಸ್ತೆ ಅಭಿವೃದ್ಧಿಗೆ, ಶಾಲಾ-ಕಾಲೇಜುಗಳಿಗೆ, ಆಸ್ಪತ್ರೆಗಳ ಅಭಿವೃದ್ಧಿಗಳಿಗೆ ವಿನಿಯೋಗಿಸಲಾಗುತ್ತದೆ. ಇದನ್ನು ಪೆಟ್ರೊ ತೆರೆಗೆ ಎಂದೂ ಕರೆಯಲಾಗುತ್ತದೆ.

ಸಬ್ಸಿಡಿಗಳಿಗೆ ಹಾಗೂ ಮೂಲಸೌಕರ್ಯಗಳ ಅಭಿವೃದ್ದಿಗೆ ಸರಕಾರ ಬಹುಪಾಲು ಆದಾಯವನ್ನು ವ್ಯಯಿಸುತ್ತಿದೆ. ಹಾಗಾಗಿ ತೆರಿಗೆಯನ್ನು ಸ್ವಲ್ಪ ಅಧಿಕ ಮಾಡಿದರೂ ಅದು ಸಮರ್ಥನೀಯವೇ ಆಗುತ್ತದೆ.

ಭಾರತೀಯರು ಅತ್ಯಧಿಕ ಪ್ರಮಾಣದಲ್ಲಿ ವಾಹನಗಳನ್ನು ಬಳಸುತ್ತಿದ್ದಾರೆ. ಯಾವಾಗ ವಾಹನಗಳಿಗೆ ಬೇಡಿಕೆಗಳು ಅಧಿಕವಾಗುತ್ತವೆಯೋ, ಆವಾಗ ತೈಲ ಕಚ್ಚಾ ವಸ್ತುಗಳನ್ನು ಪ್ರಜೆಗಳಿಗೆ ಪೂರೈಸುವುದೂ ಪ್ರಮುಖವಾಗುತ್ತದೆ. ಇನ್ನಷ್ಟು ಆಮದು ಮಾಡಬೇಕಾದ ಪರಿಸ್ಥಿತಿ ನಮ್ಮ ದೇಶಕ್ಕೆ ಬರುತ್ತದೆ. ಸ್ವಾಭಾವಿಕವಾಗಿಯೇ ಆಗ ದರ ಏರಿಕೆಯಾಗುತ್ತವೆ.

ಆದ್ದರಿಂದ ದರದ ಇಳಿಕೆ ಹಾಗೂ ಏರಿಕೆ ಯು ಪ್ರಜೆಗಳ ಮೇಲೆಯೇ ಅವಲಂಬಿತವಾಗಿವೆ ಅನ್ನುವುದು ಅಷ್ಟೇ ಸ್ಪಷ್ಟ ಹಾಗೂ ಸತ್ಯ. ಅಗತ್ಯವಿದ್ಧಾಗ ಮಾತ್ರ ಸ್ವಂತ ವಾಹನದಲ್ಲಿ ತೆರಳಿ, ಉಳಿದ ಸಂದರ್ಭದಲ್ಲಿ ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಸುವುದರಿಂದ ದೇಶಕ್ಕೆ ಉಳಿತಾಯ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ತೈಲಾ ಬೆಲೆಯ ದರವೂ ಕಡಿತಗೊಳ್ಳುವುದು ನಿಸ್ಸಂಶಯ. ಆ ನಿಟ್ಟಿನಲ್ಲಿ ದೇಶಹಿತವನ್ನು ಬಯಸುವವರಾದ ನಾವು ಚಿಂತಿಸಬೇಕಿದೆ, ವಿಮರ್ಶಿಸಬೇಕಿದೆ.

– ವಸಿಷ್ಠ

Tags

Related Articles

Close