ಪ್ರಚಲಿತ

 ಕರ್ನಾಟಕದ ಅನ್ನ ತಿಂದ ಪ್ರಕಾಶ್ ರೈ ಕೇರಳದ ಕುಮ್ಮಿಗಳೆದುರಿಗೆ ಕರ್ನಾಟಕವನ್ನು ಅವಮಾನ ಮಾಡಿದ್ದು ಹೇಗೆ ಗೊತ್ತೇ?!

ಸಂಸಾರದ ಜವಾಬ‌್ದಾರಿಯನ್ನೇ ಸರಿಯಾಗಿ ನಿರ್ವಹಿಸಲಾಗಲಿಲ್ಲ! ಅಂತಹದ್ದರಲ್ಲಿ.....

ಮುಂಚೆನೇ ಹೇಳಿದ್ದೆ! ಕರ್ನಾಟಕದ ಅನ್ನ ತಿಂದವರಿಗೆ ಬಹುಷಃ ಕರ್ನಾಟಕವೆನ್ನುವುದು ಕೊನೆಗೆ ಬೇಡವೆನಿಸಿಬಿಡುತ್ತದೆ ಎನ್ನುವುದು ಸುಳ್ಳಲ್ಲ! ಅದರಲ್ಲಿಯೂ, ಪ್ರಕಾಶ್ ರೈ ಅಂತಹವರು ಇಂತಹ ‘ಬೆನ್ನ ಹಿಂದೆ ಚೂರಿ’ಹಾಕುವ ಕೆಲಸಕ್ಕಿಳಿದುಬಿಟ್ಟಿರುವುದು ವಿಷಾದನೀಯವಾದರೂ ಕೂಡ, ಕೊನೆಗಾದರೂ ಒಂದಷ್ಟು ಜನರಿಗೆ ಇಂತಹ ಕುತಂತ್ರಿಗಳ ಬುದ್ದಿ ಅರಿವಾಗುವುದಲ್ಲವೇ ಎಂಬ ಸಮಾಧಾನ ಕೂಡ!

ಒಂದಷ್ಟು ತಿಂಗಳ ಹಿಂದಷ್ಟೇ, ಗೌರಿ ಲಂಕೇಶ್ ಹತ್ಯೆಯಾದಾಗ, ಎಲ್ಲೋ ಗೋರಿಯೊಳ ಮಲಗಿಕೊಂಡಿದ್ದವನು ಇದ್ದಕ್ಕಿದ್ದಂತೆ ಎದ್ದು ಬಂದು ‘ಕರ್ನಾಟಕದಲ್ಲಿ ಏನಾಗುತ್ತಿದೆ?!” ಎಂದಿದ್ದ! ಜೊತೆ ಜೊತೆಗೆ ‘ಬಲಪಂಥೀಯರೇ ಹತ್ಯೆಗೆ ಕಾರಣ’ ಎನ್ನುವ ಸುಖಾಸುಮ್ಮನೆಯ ತೀರ್ಪನ್ನೂ ನೀಡಿ ದೊಡ್ಡ ಹೀರೋ ಆಗಲು ಹೋಗಿ, ಕೊನೆಗೆ ‘ಛೀ ಥೂ’ ಎಂದು ಉಗಿಸಿಕೊಂಡಿದ್ದ ಪ್ರಕಾಶ್ ರಾಜ್, ಪ್ರಧಾನಿಯಾದ ಮೋದಿಯನ್ನೂ ಬಿಡದೇ, ಯೋಗಿ ಆದಿತ್ಯನಾಥ್ ರನ್ನೂ ಕೂಡ ಕೆಳಗಿಳಿಸಿ ಬಿಟ್ಟಿದ್ದ ಪ್ರಕಾಶ್ ರಾಜ್ ಅದ್ಯಾವ ಗಳಿಗೆಯಲ್ಲಿ ದೇಶದ ಬಗ್ಗೆ ತಲೆ ಕೆಡಿಸಿಕೊಳ್ಳಲು ಪ್ರಾರಂಭಿಸಿದನೋ ಆತನ ಪಾದ್ರಿಗಳಿಗೇ ಗೊತ್ತು!

ಎಲ್ಲಿ ಸಾರ್ವಜನಿಕವಾಗಿ ಕುಖ್ಯಾತಿಯಾಗಿ ಪ್ರಸಿದ್ಧಿಗೊಳಗಾಗ ತೊಡಗಿದನೋ, ಆಗಲೇ ಪ್ರಸಿದ್ಧಿಯ ಪಿತ್ತವೊಂದು ನೆತ್ತಿಗೇರಿತ್ತು ಬಿಡಿ! ಅದಕ್ಕೇ, ‘ಕೇರಳದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಪ್ರವೇಶ ನೀಡಿದ್ದ ಪ್ರಕಾಶ್ ರಾಜ್, ಮೈಕು ಸಿಕ್ಕಿದ್ದೇ ಸಿಕ್ಕಿದ್ದು ನೋಡಿ!

” ನಾನು ಕೇರಳಕ್ಕೆ ಬಂದಾಗ ಯಾವುದೇ ಸಂಭಾಷಣೆಗಳನ್ನು ನನ್ನ ಜೊತೆ ತೆಗೆದುಕೊಂಡು ಬರುವುದಿಲ್ಲ. ಕೇರಳದಲ್ಲಿ ಭಯವಿಲ್ಲದೇ ಉಸಿರಾಡಬಹುದು! ಹೀಗಾಗಿ, ನಾನು ಈ ರಾಜ್ಯ ಪ್ರೀತಿಸುವೆ!”

ಆಹಾ! ತಿನ್ನೋದಿಕ್ಕೆ ಕನ್ನಡದ ಅನ್ನ! ಸೂರಿಗೆ, ಆಶ್ರಯಕ್ಕೆ, ಹೋಗಲಿ! ಈತ ಮುಂದೊಂದು ದಿನ ಹರನ ಪಾದ ಸೇರಿದರೆ, ಸ್ಮಾರಕಕ್ಕೂ ಕನ್ನಡ ನೆಲವನ್ನೇ ಬಯಸಿ ಬೋಂಗು ಬಿಟ್ಟವನಿಗೆ ಕರ್ನಾಟಕ ಅಂದರೆ ಹೆದರಿಕೆ?!

ಇನ್ನೂ ಮುಂದುವರೆದು, ‘ ದುರ್ಗಾ ವೈನ್ ಶಾಪ್ ಅಥವಾ ಬಾರ್ ಎಂದು ಹೆಸರಿಟ್ಟರೆ ಇವರಿಗೆ ಸಮಸ್ಯೆ ಇಲ್ಲ, ಬದಲಿಗೆ ‘ಸೆಕ್ಸಿ ದುರ್ಗಾ’ ಎಂದರೆ ಇವರು ವಿರೋಧಿಸುತ್ತಾರೆ! ಸೆಕ್ಸಿ ದುರ್ಗಾ ವಿರೋಧಿಗಳು ನನಗೆ ತಕರಾರು ಹಾಗುವಾಗ ನಗು ಬರುತ್ತದೆ! ನನ್ನಿಂದ ಅವರು ಏನು ಪಡೆದುಕೊಳ್ಳಲು ಸಾಧ್ಯ?!’ ಎಂದಿದ್ದಾನೆ!

ಅಯ್ಯೊ! ಇರುವ ಹೆಂಡತಿಯನ್ನು ತೊರೆದು ಇನ್ಯಾರದೋ ಜೊತೆ ನಾಲ್ಕು ಗೋಡೆಗಳ ಮಧ್ಯೆ ಸರಸ ನಡೆಸಿದರೆ ಯಾರಿಗೂ ಸಮಸ್ಯೆಯಿಲ್ಲ ಸ್ವಾಮಿ! ಬದಲಿಗೆ ರಸ್ತೆಯಲ್ಲಿಯೇ ಮಲಗಿದರೆ ಹೇಗೆ ವಿರೋಧಿಸಲ್ಪಡುತ್ತದೆಯೋ ಇದೂ ಹಾಗೆಯೇ! ಸೆಕ್ಸಿ ಎನ್ನುವ ಅರ್ಥಕ್ಕೂ, ಇನ್ನೇನೋ ಅರ್ಥವನ್ನು ಲಿಂಕ್ ಮಾಡಿ ಪುಂಗಿ ಬಿಡುವ ಪ್ರಕಾಶ್ ರಾಜ್ ನನ್ನು ನೋಡಿ ನಗೆ ಬರುವುದು ನಮಗೆ!

‘ಒಬ್ಬ ಕಲಾವಿದನಾಗಿ, ಧ್ವನಿ ಎತ್ತಬೇಕು ಎಂಬುದು ನನ್ನ ಭಾವನೆ! ಅದು ನನ್ನ ಜವಾಬ್ದಾರಿ! ಅವರು ಧ್ವನಿಯನ್ನಡಗಿಸಲು ಯತ್ನಿಸುತ್ತಿದ್ದಾರೆ! ಜನರ
ಮನಸ್ಸಿನಲ್ಲಿ ಭಯ ಹುಟ್ಟಿ ಚಕಾರ ಕೂಡ ಎತ್ತಲು ಹೆದರುವಂತಹ ವಾತಾವರಣ ನಿರ್ಮಿಸುತ್ತಿದ್ದಾರೆ! ರಾಜಸ್ಥಾನದ ಒಬ್ಬನನ್ನು ಹೊಡೆದು ಸಾಯಿಸಿದ್ದಾರೆ. . . ” ಇನ್ನೂ ನಾಲಗೆ ಇದೆಯೆಂದು ಹರಿಬಿಟ್ಟಿರುವ ಪ್ರಕಾಶ್ ರಾಜ್ ಹೊನ್ನಾವರದ ಪರೇಶ್ ಮೇಸ್ತಾನ ಬಗ್ಗೆ ತುಟಿಪಿಟಿಕ್ ಎನ್ನುವುದೇ ಇಲ್ಲ!

ಇವನ ಕರ್ಮಕ್ಕೆ ಸಂಸಾರದ ಜವಾಬ‌್ದಾರಿಯನ್ನೇ ಸರಿಯಾಗಿ ನಿರ್ವಹಿಸಲಾಗಲಿಲ್ಲ! ಅಂತಹದ್ದರಲ್ಲಿ, ಸಮಾಜದ ಜವಾಬ‌್ದಾರಿಯುತ ಪ್ರಜೆಯಾಗಿ ಎನ್ನುವವನು ಸಮಾಜಕ್ಕೇನು ಕೊಡಲು ಸಾಧ್ಯ?! ಎರಡೆರಡು ಹೆಂಡತಿಯ ಕಾನ್ಸೆಪ್ಟನ್ನೇ?! ಮಗ ತೀರಿ ಮೊದಲನೇ ಹೆಂಡತಿ ದುಃಖದಲ್ಲಿದ್ದರೂ ತೊರೆದು ಇನ್ಜೊಬ್ಬ ಹೆಂಡತಿಯ ಜೊತೆ ಸರಸವಾಡಿ ಎಂತಲೇ?! ಥೂ!

– ತಪಸ್ವಿ

Tags

Related Articles

Close