ಪ್ರಚಲಿತ

ಕರ್ನಾಟಕ ಬಂದ್ ಎಂದು ಬೊಬ್ಬಿಡುವ ಬಂದ್ ಪ್ರೇಮಿಗಳು ಈ ಪ್ರಶ್ನೆಗಳಿಗೆ ಉತ್ತರ ನೀಡಲೇಬೇಕು..

ಬಂದ್ ಬಂದ್ ಬಂದ್…ಕರ್ನಾಟಕ ಬಂದ್…!? ಕಣ್ಣಿನಿಂದ ಏನೆಲ್ಲಾ ನೋಡಬಾರದಿತ್ತೋ ಅವೆಲ್ಲವನ್ನೂ ಈ ಕಾಂಗ್ರೆಸ್ ಆಡಳಿತದಲ್ಲಿ ನೋಡಿದ್ದಾಯಿತು. ಯಾಕೆಂದರೆ ಮಳೆ ಬಾರದಿದ್ದರೂ ಕರ್ನಾಟಕ ಬಂದ್ ಬೆಳೆ ಆಗದಿದ್ದರೂ ಕರ್ನಾಟಕ ಬಂದ್. ಕರ್ನಾಟಕದ ಅಭಿವೃದ್ಧಿಯ ಕಡೆ ಕಿಂಚಿತ್ತೂ ಗಮನಹರಿಸದ ಕಾಂಗ್ರೆಸ್ ಸರಕಾರ ಕರ್ನಾಟಕವನ್ನು ದಿವಾಳಿ ಮಾಡಲು ಹೊರಟಿರುವುದಂತೂ ಸತ್ಯ.

ಯಾಕೆಂದರೆ ಕರ್ನಾಟಕ ಮತ್ತು ಗೋವಾಗೆ ಸಂಬಂಧಿಸಿದ ‘ಮಹಾದಾಯಿ’ ಸಮಸ್ಯೆಯನ್ನು ಸುಲಭವಾಗಿ ಸಾಧ್ಯವಾಗದ ಈ ಕಾಂಗ್ರೆಸ್ ಪದೇ ಪದೇ ಕರ್ನಾಟಕ ಬಂದ್ ಗೆ ಪ್ರೇರೇಪಿಸಿ‌ ಕರ್ನಾಟಕವನ್ನು ದಿವಾಳಿ ಮಾಡಲು ಹೊರಟಿದೆ…!

ಸಮಸ್ಯೆ ಬಗೆಹರಿಸುವುದಾದರೆ ಎರಡೂ ರಾಜ್ಯಗಳು ಸೇರಿ ಮಾತಿನ ಮೂಲಕ ಇತ್ಯರ್ಥ ಮಾಡಿಕೊಳ್ಳಬಹುದಿತ್ತು.
ಆದರೆ ‘ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ’ ಎಂಬಂತೆ ಇತ್ತೀಚೆಗೆ ಕರ್ನಾಟಕದಲ್ಲಿ ಏನೇ ನಡೆದರೂ ಪ್ರಧಾನಿ ನರೇಂದ್ರ ಮೋದಿಯೇ ಕಾರಣ ಎಂಬಂತೆ ಈ ಎಡಬಿಡಂಗಿ ಕಾಂಗ್ರೆಸ್ ವರ್ತಿಸುತ್ತಿದೆ ಮತ್ತು ರಾಜ್ಯದ ಜನರ ದಿಕ್ಕುತಪ್ಪಿಸುತ್ತಿದೆ.

ಇಡೀ ದೇಶದಲ್ಲಿ ಮೋದಿ-ಷಾ ಜೋಡಿಯ ಮೋಡಿಗೆ ನೆಲಕಚ್ಚಿರುವ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಶತಾಯ-ಗತಾಯ ಕರ್ನಾಟಕದಲ್ಲಿ ಮತ್ತೆ ಗೆಲ್ಲಲೇಬೇಕು ಎಂದು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಏನೇನೋ ಪ್ರಯತ್ನ ಪಡುತ್ತಲೇ ಇದೆ.
ಇಂದು ಕರ್ನಾಟಕದ ಮೈಸೂರಿನಲ್ಲಿ ನಡೆಯಲಿರುವ ಯಡಿಯೂರಪ್ಪ ನೇತ್ರತ್ವದ ‘ಪರಿವರ್ತನಾ ಯಾತ್ರೆ’ ಯಲ್ಲಿ ಭಾಗವಹಿಸಲಿದ್ದು ಇದಕ್ಕೆ ಹೆದರಿದ ಕಾಂಗ್ರೆಸ್ ಹೇಗಾದರೂ ಈ ಸಮಾವೇಶವನ್ನು ವಿಫಲಗೊಳಿಸುವ ಸಲುವಾಗಿ ‘ಮಹಾದಾಯಿ’ ಯ ವಿಚಾರವಾಗಿ ಕೆಲ ರೋಲ್‌ಕಾಲ್ಡ್ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆಕೊಟ್ಟಿರುವುದಕ್ಕೆ ರಾಜ್ಯ ಕಾಂಗ್ರೆಸ್ ಸರಕಾರವೂ ಬೆಂಬಲ ನೀಡಿದೆ.

ವಾಟಾಳ್ ನಾಗರಾಜ್ ನೇತ್ರತ್ವದಲ್ಲಿ ನಡೆಯುತ್ತಿರುವ ಕರ್ನಾಟಕ ಬಂದ್ ಗೆ ರಾಜ್ಯ ಕಾಂಗ್ರೆಸ್ ಸರಕಾರವೂ ಕೈ ಜೋಡಿಸಿದ್ದು ಸರಕಾರವೇ ತನ್ನ ರಾಜ್ಯದಲ್ಲಿ ಬಂದ್ ನಡೆಸುತ್ತಿರುವುದು ರಾಜ್ಯದ ಜನತೆಯ ವಿಪರ್ಯಾಸವೇ ಸರಿ.
ಕರ್ನಾಟಕದ ಬಗ್ಗೆ ಈ‌ ಕಾಂಗ್ರೆಸ್ ಯಾವ ರೀತಿಯ ಕಾಳಜಿ ವಹಿಸುತ್ತಿದೆ ಎಂಬೂದು ತಿಳಿಯುತ್ತದೆ.

ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸುತ್ತಿರುವವರಿಗೆ ಈ ಪ್ರಶ್ನೆ…!

ರಾಜ್ಯ ಸರಕಾರದ ವೈಫಲ್ಯವನ್ನು ಮುಚ್ಚಿಹಾಕಲು ಕೇಂದ್ರ ಸರಕಾರದತ್ತ ಬೊಟ್ಟು ಮಾಡುವ ಎಲ್ಲಾ ಎಡಪಂಥೀಯ ಸಂಘಟನೆಗಳು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಲೇಬೇಕು.

೧.ಮಹಾದಾಯಿ ಸಮಸ್ಯೆಗೆ ರಾಜ್ಯದ ಪ್ರಮುಖ ಮೂರು ಪಕ್ಷಗಳು ಕಾರಣವಾಗಿದೆಯಾದರೂ ಈಗ ರಾಜ್ಯದಲ್ಲಿ ಬಿಜೆಪಿಯನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ,ಯಾಕೆ?

೨.ರಾಜ್ಯದಲ್ಲಿ ಅಭಿವೃದ್ಧಿ ಎಂಬುದು ಕುಂಠಿತಗೊಂಡಿದೆ ಆದರೂ ರಾಜ್ಯದ ಜನತೆಯ ಕಡೆ ಗಮನಹರಿಸದ ಈ ಕಾಂಗ್ರೆಸ್ ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸುತ್ತಿರುವುದು ಸರಿಯೇ…?

೩.ಒಂದು ದಿನ ಕೆಲಸ ಸಿಗದೇ ಇದ್ದರೆ ತನ್ನ ಕುಟುಂಬದ ಸದಸ್ಯರ ಹೊಟ್ಟೆ ತುಂಬಿಸಲು ಸಾಧ್ಯವಾಗದಂತಹ ಸ್ಥಿತಿಯಲ್ಲಿ ಇರುವ ಅದೆಷ್ಟೋ ಕುಟುಂಬಗಳು ರಾಜ್ಯದಲ್ಲಿವೆ ಆದರೂ ಇಂತಹ ಬಂದ್ ಗೆ ರಾಜ್ಯ ಸರ್ಕಾರವೇ ಕೈಜೋಡಿಸಿದ್ದು ರಾಜ್ಯದ ಜನತೆಯ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಾಳಜಿಯೇ ಇಲ್ಲವೇ…?

೪.ಈಗಾಗಲೇ ಸಾವಿರಾರು ಕೋಟಿ ಸಾಲದಲ್ಲಿರುವ ರಾಜ್ಯ ಸರ್ಕಾರ ಇಡೀ ರಾಜ್ಯದ ಜನತೆಯನ್ನು ಸಾಲದಲ್ಲಿರುವಂತೆ ಮಾಡಿದೆ.
ಆದರೂ ಸ್ವತಃ ರಾಜ್ಯ ಕಾಂಗ್ರೆಸ್ ಸರ್ಕಾರವೇ ಕರ್ನಾಟಕ ಬಂದ್ ಗೆ ಬೆಂಬಲ ಕೊಡಬಹುದೇ.? ಬಂದ್ ನಿಂದಾಗಿ ಒಂದು ದಿನದಲ್ಲಿ ರಾಜ್ಯಕ್ಕಾಗುವ ಸಾವಿರಾರು ಕೋಟಿ ತೆರಿಗೆ ಹಣವನ್ನು ಯಾರು ತುಂಬಿಸುತ್ತಾರೆ.?

೫.ರಾಜ್ಯದಲ್ಲಿ ಸಾವಿರಾರು ರೈತರ ಆತ್ಮಹತ್ಯೆಗೆ ಕಾರಣವಾಗಿರುವ ಸಿದ್ದರಾಮಯ್ಯ ಸರಕಾರದ ವಿರುದ್ಧ ಯಾಕೆ ಈ ರೋಲ್‌ ಕಾಲ್ಡ್ ಸಂಘಟನೆಗಳು ಬಂದ್ ನಡೆಸುತ್ತಿಲ್ಲಾ.?

೬.ರೈತರ ಸಾಲ ಮನ್ನಾ ಮಾಡುವ ನಾಟಕವಾಡಿ ರೈತರ ವಿಚಾರದಲ್ಲಿ ಬೇಜವಾಬ್ದಾರಿತನ ತೋರಿ ಇದೀಗ ಮಹಾದಾಯಿ-ಕಾವೇರಿ ವಿಷಯದಲ್ಲಿ ಉದ್ಧಟನ ತೋರಿಸುತ್ತಾ ಇರುವ ಸಿದ್ದರಾಮಯ್ಯ ಸರಕಾರದ ವಿರುದ್ಧ ಯಾಕೆ ಬಂದ್ ನಡೆಸುತ್ತಿಲ್ಲ.?

೭.ಮಹಾದಾಯಿ ವಿಚಾರವಾಗಿ ಮೋದಿ ಸರಕಾರದತ್ತ ಬೊಟ್ಟು ಮಾಡುವ ಎಲ್ಲಾ ಎಡಬಿಡಂಗಿಗಳು ಮಹಾದಾಯಿ ವಿಚಾರವಾಗಿ ಮೋದಿಯವರು ಸ್ಪಷ್ಟವಾಗಿ ಹೇಳಿದ ಮಾತು ಏನೆಂಬೂದು ನೆನಪಿದೆಯೇ…?

೮.ಗೋವಾ ಮತ್ತು ಮಹಾರಾಷ್ಟ್ರದ ಕಾಂಗ್ರೆಸ್ ಪಕ್ಷವನ್ನು ನೀವು ಒಪ್ಪಿಸಿಕೊಂಡು ಬನ್ನಿ ಈ ಎರಡೂ ರಾಜ್ಯಗಳ ಬಿಜೆಪಿಯನ್ನು ನಾನು ಒಪ್ಪಿಸುತ್ತೇನೆ ಎಂದು ಸ್ಪಷ್ಟವಾಗಿ ಹೇಳಿ ಎರಡೂ ರಾಜ್ಯಗಳ ಬಿಜೆಪಿಯನ್ನು ಒಪ್ಪಿಸುವಲ್ಲಿ ಯಶಸ್ವಿಯಾದ ಮೋದಿಯವರನ್ನು ಪ್ರಶ್ನಿಸುವವರು ನಿಜವಾಗಿಯೂ ಪ್ರಶ್ನಿಸಬೇಕಾದದ್ದು ಯಾರನ್ನು.?

೯.ಅಮಿತ್ ಷಾ ಕರ್ನಾಟಕ ಭೇಟಿಯ ದಿನವೇ ಕರ್ನಾಟಕ ಬಂದ್ ಗೆ ಕರೆ ನೀಡಿರುವ ಕನ್ನಡ ಪರ ಸಂಘಟನೆಗಳು ಮಹಾದಾಯಿ ವಿಚಾರವಾಗಿ ಪ್ರಾಮಾಣಿಕವಾಗಿ ಹೋರಾಟ ಮಾಡುವುದೇ ಆದರೆ ಯಾವತ್ತಾದರೂ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಛೇರಿ ಮುಂದೆ ಧರಣಿ ಅಥವಾ ಪ್ರತಿಭಟನೆ ಮಾಡಿದ್ದೀರಾ…?

೧೦.ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಕರ್ನಾಟಕ ಬಂದ್ ಗೆ ಕರೆ ಕೊಡುವ ನೀವುಗಳು ಕಾಂಗ್ರೆಸ್ ನ ಮಹಾರಾಜ ರಾಹುಲ್ ಗಾಂಧಿ ಮುಂದಿನ ವಾರ ರಾಜ್ಯಕ್ಕೆ ಬರಲಿದ್ದಾರೆ.ಅವರ ವಿರುದ್ದವೂ ಪ್ರತಿಭಟಿಸುತ್ತೀರಾ.? ಮಹಾದಾಯಿ ಕುರಿತು ಕಾಂಗ್ರೆಸ್ ನ ನಿಲುವನ್ನು ಸ್ಪಷ್ಟಪಡಿಸಲು ರಾಹುಲ್ ಗಾಂಧಿಗೆ ಹೇಳುತ್ತೀರಾ…?

೧೧.ಗೋವಾ ಬಿಜೆಪಿ ಸರಕಾರ ಮಹಾದಾಯಿ ಕುರಿತು ಈಗಾಗಲೇ ಕುಡಿಯುವ ನೀರಿಗೆ ಒಪ್ಪಿಗೆ ನೀಡಿದರೂ ಗೋವಾ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಲೇ ಇದೆ.ಹಾಗಾದರೆ ನೀವು ನಿಜವಾಗಿ ಪ್ರತಿಭಟನೆ ಮಾಡಬೇಕಾದದ್ದು ಯಾರ ವಿರುದ್ಧ.?

೧೨.ಕಳಸಾ-ಬಂಡೂರಿ ಯೋಜನೆಗೆ ಅನುಮತಿ ನೀಡಿದ ಅಟಲ್ ಬಿಹಾರಿ ವಾಜಪೇಯಿ ಯವರ ಬಿಜೆಪಿ ಸರ್ಕಾರದ ವಿರುದ್ಧವೋ ನಿಮ್ಮ ಪ್ರತಿಭಟನೆ.?

೧೩.ಉಪಮುಖ್ಯಮಂತ್ರಿಯಾಗಿ ಹಣಕಾಸು ಸಚಿವರಾಗಿ ಕುಮಾರ ಸ್ವಾಮಿ ಯೊಂದಿಗೆ ಜಗಳ ಮಾಡಿ ೧೦೦ ಕೋಟಿ ಹಣ ಬಿಡುಗಡೆ ಮಾಡಿ ಕಳಸ-ಬಂಡೂರಿ ಯೋಜನೆಗೆ ಶಂಕುಸ್ಥಾಪನೆ ಮಾಡಿದ ಯಡಿಯೂರಪ್ಪ ನವರ ಬಿಜೆಪಿಯ ವಿರುದ್ಧವೋ…?

೧೪.ಗೋವಾ ಮುಖ್ಯಮಂತ್ರಿ ಯನ್ನು ಒಪ್ಪಿಸಿ ಕುಡಿಯುವ ನೀರಿಗೆ ನಮ್ಮ ತಕರಾರು ಇಲ್ಲವೆಂದು ವಾಗ್ದಾನ ಪತ್ರ ತಂದ ಯಡಿಯೂರಪ್ಪ ನವರ ಬಿಜೆಪಿಯ ವಿರುದ್ಧವೋ…?

೧೫.ಕರ್ನಾಟಕಕ್ಕೆ ಗೋವಾದಿಂದ ಒಂದು ಹನಿ ನೀರು ಬಿಡಲು ಅವಕಾಶ ನೀಡುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ ಸೋನಿಯಾ ಗಾಂಧಿಯ ಕಾಂಗ್ರೆಸ್ ವಿರುದ್ಧ ತಾವೇಕೆ ಪ್ರತಿಭಟಿಸುತ್ತಿಲ್ಲಾ…?

೧೬.ದೇಶದ ಪ್ರಧಾನಿಯಾಗಿ ೧೦ ವರ್ಷಗಳ ಕಾಲ ಸಮಸ್ಯೆ ಬಗೆಹರಿಸದೆ ಮೌನವಾಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ತಾವೇಕೆ ಪ್ರತಿಭಟಿಸುತ್ತಿಲ್ಲ…?

ಪ್ರಧಾನಿ ಮೋದಿಯವರು ಫೆಬ್ರವರಿ 4ರಂದು ಕರ್ನಾಟಕ ಭೇಟಿ ಮಾಡಲಿದ್ದಾರೆ ಎಂಬ ಕಾರಣಕ್ಕೆ ವಾಟಾಳ್ ನಾಗರಾಜ್ ಸೇರಿದಂತೆ ಕೆಲ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಮಾಡಲು ನಿರ್ಧರಿಸಿದವು.
ಆದರೆ ಇದೀಗ ಅಮಿತ್ ಷಾ ಕರ್ನಾಟಕ ಭೇಟಿ ಮಾಡಲಿರುವ ಕಾರಣ ಕರ್ನಾಟಕ ಬಂದ್ ಮಾಡುತ್ತಿರುವ ಎಡಬಿಡಂಗಿಗಳ ಜೊತೆಗೆ ರಾಜ್ಯ ಕಾಂಗ್ರೆಸ್ ಸರಕಾರವೂ ಕೈ ಜೋಡಿಸಿರುವುದು ಇಂದು ನಡೆಯುತ್ತಿರುವ ಕರ್ನಾಟಕ ಬಂದ್ ಸಂಪೂರ್ಣವಾಗಿ ರಾಜಕೀಯ ಪ್ರೇರಿತ ಎಂಬುದು ತಿಳಿಯುತ್ತದೆ.

ಮಹಾದಾಯಿ ವಿಚಾರವಾಗಿ ಪ್ರಾಮಾಣಿಕ ಹೋರಾಟ ಮಾಡುವವರು ರಾಜಕೀಯ ತಾಳಕ್ಕೆ ಕುಣಿಯಬಾರದಿತ್ತು.ಆದರೂ ಕರ್ನಾಟಕದಲ್ಲಿ ರಾಜಕೀಯ ಪ್ರೇರಿತ ಬಂದ್ ನಡೆಸುವವರು ಇಂತಹ ಪ್ರಶ್ನೆಗಳಿಗೆ ಉತ್ತರಿಸುವಿರಾ…???
–ಅರ್ಜುನ್

Tags

Related Articles

Close