ಪ್ರಚಲಿತ

ಕಲಿಯುಗದ ಅದ್ಭುತ!! ನನ್ನನ್ನು 687 ಮಂದಿ ಸತ್ತವರು ಓಟು ಹಾಕಿ ಉಪಚುನಾವಣೆ ಗೆಲ್ಲಿಸಿದ್ದಾರೆ ಎಂದು ಬಹಿರಂಗಪಡಿಸಿದ ಸಿದ್ದರಾಮಯ್ಯ..

ಸತ್ತವರ ಓಟು ಇದೆ ಎಂದು ತಾವೇ ಬಹಿರಂಗಪಡಿಸಿದ್ದು ಮಾತ್ರ ವಿಪರ್ಯಾಸ!!

ಚುನಾವಣೆಯಲ್ಲಿ ಬಿಜೆಪಿಯನ್ನು ಮಟ್ಟ ಹಾಕಲು ಕರ್ನಾಟಕದ ಕಾಂಗ್ರೆಸ್ ಸರಕಾರ ಮಾಡುತ್ತಿರುವ ಸರ್ಕಸ್ ಅಷ್ಟಿಷ್ಟಲ್ಲ!! ಆದರೆ ಈ ಹಿಂದೆ ಸಿ.ಎಂ ಸಿದ್ದರಾಮಯ್ಯ ಯಾವ ರೀತಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಜಯಗಳಿಸಿದ್ದರು ಎನ್ನುವ ರಹಸ್ಯವನ್ನು ಬಿಚ್ಚಿಟ್ಟು ವಿವಾದವನ್ನು ಸೃಷ್ಟಿಸಿದ್ದರು!! ಆದರೆ ಸಿಎಂ ಸಿದ್ದರಾಮಯ್ಯ ವಿರುದ್ಧ ವರ್ಷವಾದ್ರೂ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಿರುವ ಡಿಸಿ, ಕಾನೂನು ಮರೆತರಾ ಎಂಬ ಪ್ರಶ್ನೆ ಇದೀಗ ಎದ್ದಿದೆ!!

ಹೌದು…. ಪ್ರತಿ ಬಾರಿ ಒಂದಲ್ಲ ಒಂದು ವಿವಾದಗಳನ್ನು ಸೃಷ್ಟಿಸುತ್ತಾ ತನ್ನ ಬೊಕ್ಕಸವನ್ನು ತುಬಿಸುತ್ತಾ, ಅಧಿಕಾರವನ್ನು ಭದ್ರ ಪಡಿಸುತ್ತಾ ಸಾಗುತ್ತಿರುವ ಕಾಂಗ್ರೆಸ್ ಸರಕಾರ ಏನೆಲ್ಲಾ ಗೋಲ್ ಮಾಲ್ ಮಾಡಿ ಅಧಿಕಾರವನ್ನು ಪಡೆದುಕೊಂಡಿದೆ ಎಂದು ತಿಳಿದರೆ ಅಸಹ್ಯ ಅನಿಸುತ್ತೇ!! ಆದರೆ ಸಿಎಂ ಸಿದ್ದರಾಮಯ್ಯನವರ ಗೆಲುವಿನ ಹಿಂದೆ ಸತ್ತವರ ಓಟು ಇದೆ ಎಂದು ತಾವೇ ಬಹಿರಂಗಪಡಿಸಿದ್ದು ಮಾತ್ರ ವಿಪರ್ಯಾಸ!!

“ಸತ್ಯಕ್ಕೆ ಸಾವಿಲ್ಲ” ಎಂದು ಹೇಳುತ್ತಾರಲ್ಲ…. ಅದು ಅಕ್ಷರಶಃ ನಿಜ!! ಯಾಕೆಂದರೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಜಯಗಳಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಗೆಲುವಿನ ರಹಸ್ಯವನ್ನು ಬಿಚ್ಚಿಟ್ಟಲ್ಲದೇ ವಿವಾದವನ್ನು ಸೃಷ್ಟಿಸಿದ್ದರು. ಅಷ್ಟೇ ಅಲ್ಲದೇ, ವರುಣಾ ವಿಧಾನಸಭಾ ಕ್ಷೇತ್ರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ, ಹುಮ್ಮಸ್ಸಿನಲ್ಲಿ ಅಂದು ನಕಲಿ ಮತದಾನ ನಡೆದಿದ್ದನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಜೊತೆಗೆ ಅಂದಿನ ಉಪಚುನಾವಣೆಯಲ್ಲಿ ಸತ್ತವರ ಓಟನ್ನೂ ಪಡೆದ ಬಗ್ಗೆ ಜನರ ಜೊತೆ ಖುಷಿ ಹಂಚಿಕೊಂಡಿದ್ದರು!!


ನಗು ನಗುತ್ತಲೇ ಚುನಾವಣೆಯಲ್ಲಿನ ಅಕ್ರಮ ಮತದಾನದ ಬಗ್ಗೆ ಪ್ರಶ್ನೆ ಹುಟ್ಟು ಹಾಕಿದ ಸಿಎಂ ಸಿದ್ದರಾಮಯ್ಯ ವಿರುದ್ಧ ವರ್ಷವಾದ್ರೂ ಯಾವುದೇ ಕ್ರಮ ಕೈಗೊಳ್ಳದೆ ಮೈಸೂರು ಜಿಲ್ಲಾಧಿಕಾರಿ ರಂದೀಪ್ ಕಾನೂನು ಮರೆತರಾ ಎಂಬ ಪ್ರಶ್ನೆ ಎದ್ದಿದೆ. ಚುನಾವಣೆ ನಡೆದು ಇಷ್ಟು ವರ್ಷವಾದರೂ ಕೂಡ ಈ ಬಗ್ಗೆ ಯಾವುದೇ ಅಧಿಕಾರಿಗಳು ಮಾತ್ರ ತುಟಿಕ್ ಪಿಟಿಕ್ ಎನ್ನದೇ ನಿರಾಳ ಮೌನ ವಹಿಸಿರುವುದು ಮಾತ್ರ ವಿಪರ್ಯಾಸ!!

ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಸಿಎಂ ಸಿದ್ದರಾಮಯ್ಯ, ಸತ್ತವರ ಓಟುಗಳನ್ನು ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ ಎನ್ನುವುದು ಭಾರಿ ಮಟ್ಟದ ವಿವಾದಕ್ಕೆ ಕಾರಣವಾದ ಬಳಿಕ ಸಾಮಾಜಿಕ ಕಾರ್ಯರ್ತ ಮರಿಲಿಂಗೇಗೌಡ ಮಾಲಿ ಪಾಟೀಲ್ ಎನ್ನುವವರು ಸಿಎಂ ಶಾಸಕತ್ವ ರದ್ದುಪಡಿಸಬೇಕೆಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಅದರಂತೆ 2016ರ ಅಕ್ಟೋಬರ್ ತಿಂಗಳಲ್ಲಿ ತನಿಖೆ ನಡೆಸುವಂತೆ ಚುನಾವಣಾ ಆಯೋಗ ಡಿಸಿಗೆ ಪತ್ರ ಬರೆದಿತ್ತು. ಆದರೆ ಆ ವಿಚಾರ ಪಾತಳದಲ್ಲಿ ಹುದುಗಿ ಹೋಗಿರುವುದು ಮಾತ್ರ ಅಕ್ಷರಶಃ ನಿಜ..

ತನ್ನ ಗೆಲುವಿನ ರಹಸ್ಯವನ್ನು ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯನವರ ವಿರುದ್ದ ಮೈಸೂರು ಡಿಸಿ ರಂದೀಪ್ ತನಿಖೆ ನಡೆಸದೇ ಉಪವಿಭಾಗಾಧಿಕಾರಿಗೆ ಪತ್ರ ಬರೆದಿದ್ದಾರೆ. ಆದರೆ ಈ ಉಪ ವಿಭಾಗಾಧಿಕಾರಿಯೂ ಕೂಡ ತಹಶೀಲ್ದಾರ್ ಗೆ ಪತ್ರ ಬರೆದು ಸುಮ್ಮನಾಗಿದ್ದಾರೆ. ಒಟ್ಟಿನಲ್ಲಿ ದೂರು ನೀಡಿ ವರ್ಷವಾದ್ರೂ ಡಿಸಿ ಕೈಕಟ್ಟಿ ಕುಳಿತಿದ್ದಾರೆ ಎಂದರೆ ಏನರ್ಥ!! ಹಾಗಾದರೆ ಇದಕ್ಕೆಲ್ಲ ಸಿಎಂ ಸಿದ್ದರಾಮಯ್ಯನವರ ಹಣದ ಮಹಿಮೆಯೇ ಕಾರಣವೇ ಎನ್ನುವ ಪ್ರಶ್ನೆಯೂ ಮೂಡುವುದು ಸಹಜ!!

ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತಾನಾಡಿದ ಭಾಷಣದ ಸಾರಾಂಶ:

“ಈ ಊರಿನ ಜನರು ನನಗೆ 100ಕ್ಕೆ 100ಓಟು ಹಾಕಿದ್ದೀರಿ.
ಉಪಚುನಾವಣೆಯಲ್ಲಿ ಸತ್ತಿದ್ದವರ ಓಟನ್ನು ನನಗೆ ಹಾಕಿಸಿದ್ದೀರಿ.
ಈ ಊರಿನಲ್ಲಿದ್ದ 687 ಓಟುಗಳನ್ನು ನನಗೆ ಹಾಕಿದ್ದೀರಿ.
1977 ರಿಂದಲೂ ನನ್ನ ಮೇಲೆ ಅಭಿಮಾನ ಇಟ್ಟಿದ್ದೀರಿ.
ಹಾಗಾಗಿ ಈ ಊರಿನ ಜನರೆಂದರೆ ನನಗೆ ತುಂಬಾ ಪ್ರೀತಿ”!! ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸರಕಾರ ತಮ್ಮ ಬುದ್ದಿವಂತಿಕೆಯನ್ನು ತೋರಿಸುವಲ್ಲಿ ಪ್ರತಿ ಬಾರಿ ಎಡವಿ ಬೀಳುತ್ತಲೇ ಇದ್ದು, ಹಗರಣಗಳ ಮೇಲೆ ಹಗರಣಗಳನ್ನು ಸೃಷ್ಟಿಸುತ್ತಲೇ ಇರುವುದು ಸರ್ವೇಸಾಮಾನ್ಯವಾಗಿದೆ!! ಪ್ರತೀ ಬಾರೀಯೂ ಬೊಕ್ಕಸವನ್ನು ತುಂಬಿಸಿಕೊಳ್ಳುವ ಯೋಜನೆಯಲ್ಲಿ ಸಾಗಿದ್ದರೆ ಈ ಬಾರಿ ಕೂಡ ಪ್ರಜೆಗಳನ್ನೇ ಮತದಾನದ ಪಟ್ಟಿಯಿಂದ ನಾಪತ್ತೆ ಮಾಡಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ!!

ಈಗಾಗಲೇ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮೈಸೂರಿನಲ್ಲಿನ ಮತದಾರ ಪಟ್ಟಿಯಲ್ಲಿ ಅಧಿಕಾರಿಗಳು ಬಾರಿ ಪ್ರಮಾಣದ ಗೋಲ್ ಮಾಲ್ ನಡೆಸಿದ್ದಾರೆಂದು ಮಾಜಿ ಸಚಿವ ಎಸ್.ಎ ರಾಮದಾಸ್ ನೇರವಾಗಿ ಆರೋಪಿಸಿರುವುದು ಗೊತ್ತೇ ಇದೆ!! ಇದರ ಪ್ರಕಾರ, ಮೈಸೂರಿನ ಕೆಆರ್ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಬಂದ ಬೂತ್‍ನಲ್ಲಿ ಬರೋಬ್ಬರಿ 4,794 ಮತದಾರರ ಹೆಸರು ನಾಪತ್ತೆಯಾಗಿದೆ. ಈ ಮತದಾರರ ಹೆಸರು ಹೇಗೆ ನಾಪತ್ತೆ ಯಾಗಿದೆ ಎನ್ನುವುದನ್ನು ತಿಳಿದುಕೊಂಡಾಗ ಒಂದುಕ್ಷಣ ಆಶ್ಚರ್ಯ ಆಗಬಹುದು!! ಯಾಕೆಂದರೆ ಮತದಾರರು ಬದುಕಿದ್ದರೂ, ಸತ್ತು ಹೋಗಿದ್ದಾರೆಂದು ಮತದಾರ ಪಟ್ಟಿಯಿಂದ ಹೆಸರು ತೆಗೆದು ಹಾಕಲಾಗಿದೆ!! ಬದುಕಿದ್ದವರನ್ನು ಸತ್ತುಹೋಗಿದ್ದಾರೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಎಸ್.ಎ ರಾಮದಾಸ್ ಅಧಿಕಾರಿಗಳ ಈ ಕೃತ್ಯದ ಬಗ್ಗೆ ದಾಖಲೆ ಬಿಡುಗಡೆ ಮಾಡಿರುವುದ ತಿಳಿದೇ ಇದೆ!!

ಪ್ರತಿ ಬಾರಿ ಸತ್ತವರ ಓಟನ್ನು ಹಾಕಿಸುತ್ತಾ, ಬದುಕಿದ್ದವರನ್ನು ಸಾಯಿಸುತ್ತಾ ಗೋಲ್ ಮಾಲ್ ಮೂಲಕವೇ ಅಧಿಕಾರದ ಗದ್ದುಗೆಯನ್ನು ಏರುತ್ತಿರುವುದನ್ನು ನೋಡಿದರೆ ಅಸಹ್ಯ ಎಂದೆನಿಸುತ್ತೆ!! ಆದರೆ ಸಿಎಂ ಸಿದ್ದರಾಮಯ್ಯ ವಿರುದ್ದ ಸಾಮಾಜಿಕ ಕಾರ್ಯರ್ತನಾದ ಮರಿಲಿಂಗೇಗೌಡ ಮಾಲಿ ಪಾಟೀಲ್ ಎನ್ನುವವರು ಸಿದ್ದರಾಮಯ್ಯನವರ ಸಿಎಂ ಶಾಸಕತ್ವವನ್ನು ರದ್ದುಪಡಿಸಬೇಕೆಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

ಆದರೆ ಸತ್ತವರ ಓಟುಗಳನ್ನು ಹಾಕಿ ನನ್ನ ಗೆಲ್ಲಿಸಿದ್ದಾರೆ ಎಂದಿದ್ದ ಸಿಎಂ ವಿರುದ್ಧ ವರ್ಷವಾದ್ರೂ ತನಿಖೆ ನಡೆಸದೇ, ಕಾನೂನು ಕ್ರಮವನ್ನು ಮರೆತು ಬಿಟ್ರಾ ಮೈಸೂರು ಡಿಸಿ… ಎನ್ನುವ ಪ್ರಶ್ನೆ ಇದೀಗ ಮೂಡಿದೆ!!

– ಅಲೋಖಾ

Tags

Related Articles

Close