ಪ್ರಚಲಿತ

ಕಾಂಗ್ರೆಸ್ ಟಾರ್ಗೆಟ್‍ನಿಂದ ಪ್ರತಾಪ್ ಸಿಂಹ ಕೊನೆಗೂ ಮಿಸ್!!! ಕೋರ್ಟು ತೀರ್ಪಿನಿಂದ ಸಿದ್ದರಾಮಯ್ಯ ಹಾಗೂ ಎಸ್‍ಪಿ ರವಿ ಚೆನ್ನಣ್ಣನವರ್ ಪೇಚಿಗೆ ಸಿಲುಕಿದ್ದು ಹೇಗೆ ಗೊತ್ತೇ?!

ಹನುಮಾನ್ ಜಯಂತಿ..

ಮೈಸೂರು ಸಂಸದ ಪ್ರತಾಪ್ ಸಿಂಹರನ್ನು ಟಾರ್ಗೆಟ್ ಮಾಡಲು ಹೋದ ಕರ್ನಾಟಕದ ಕಾಂಗ್ರೆಸ್ ಸರಕಾರವೇ ಇದೀಗ ಪೇಚಿಗೆ ಸಿಲುಕಿದೆ. ಅದರ ಜೊತೆಗೆ ಖಡಕ್ ಪೊಲೀಸ್ ಅಧಿಕಾರಿ ಎಂದೇ ಖ್ಯಾತಿ ಪಡೆದ ಎಸ್‍ಪಿ ರವಿ ಚೆನ್ನಣ್ಣನವರ್ ಕೂಡಾ ಪೇಚಿಗೆ ಸಿಲುಕುವಂತಾಗಿದೆ. ಇದಕ್ಕೆಲ್ಲಾ ಕಾರಣವಾದ ಘಟನೆ ಏನು ಗೊತ್ತೇ? ಹೈಕೋರ್ಟು ಪ್ರತಾಪ್ ಸಿಂಹರ ಹನುಮಾನ್ ಜಯಂತಿ ಮೆರವಣಿಗೆಗೆ ವಿಚಾರವಾಗಿ ನೀಡಿದ ತೀರ್ಪು!! ಪೊಲೀಸರ ಹಾಗೂ ಸರಕಾರದ ನಡೆಗೆ ಕೋರ್ಟು ಸರಿಯಾಗಿ ಮಂಗಳಾರತಿ ಎತ್ತಿದೆ.

ಹೌದು ಹನುಮಾನ್ ಜಯಂತಿ ವಿಚಾರದಲ್ಲಿ ಪ್ರತಾಪ್ ಸಿಂಹರನ್ನು ಟಾರ್ಗೆಟ್ ಮಾಡಲು ಹೋಗಿದ್ದ ಸಿದ್ದರಾಮಯ್ಯ ಸರಕಾರ ಹಾಗೂ ಎಸ್‍ಪಿ ಚೆನ್ನಣ್ಣನವರ್ ಅವರು ಕೋರ್ಟು ನೀಡಿದ ತೀರ್ಪಿನಿಂದ ಪೇಚಿಗೆ ಸಿಲುಕಿದ್ದಾರೆ.

ಹನುಮ ಮಾಲೆ ಧರಿಸಿದ್ದ ಸಂಸದ ಪ್ರತಾಪ್ ಸಿಂಹ ಮತ್ತು ನೂರಾರು ಜನ ಮೈಸೂರಿನ ಹುಣಸೂರು ರಸ್ತೆಯಲ್ಲಿ ಮೆರವಣಿಗೆ ಹೊರಟಿದ್ದರು. ಮೆರವಣಿಗೆ ಶಾಂತಿಯುತವಾಗಿ ನಡೆಯುತ್ತಿದ್ದರೂ ಕಾಂಗ್ರೆಸ್ ಸರಕಾರದ ಆಣತಿಯಂತೆ ಪೆÇಲೀಸರು ಬ್ಯಾರಿಕೇಡ್ ಹಾಕಿ ಮೆರವಣಿಗೆ ತಡೆಯುವ ಪ್ರಯತ್ನ ಮಾಡಿದ್ದರು. ಬಿಳಕೆರೆ ಬಳಿ ಸಂಸದ ಪ್ರತಾಪ್ ಸಿಂಹರನ್ನು ತಡೆಯಲೆಂದು ಪೊಲೀಸರು ಕಾರು ಚಲಿಸುತ್ತಿದ್ದಂತೆ ಬ್ಯಾರಿಕೇಡ್ ಅಡ್ಡಹಾಕಿದ್ದರು. ಆದರೆ ವಾಹನ ಸಾಗುವಾಗ ಪ್ರತಾಪ್ ಸಿಂಹರ ಕಾರ್ ಬ್ಯಾರಿಕೇಡ್‍ಗೆ ಸಿಲುಕಿತ್ತು. ಇದನ್ನೇ ದೊಡ್ಡದು ಮಾಡಿದ ಪೊಲೀಸರು ಪ್ರತಾಪ್ ಸಿಂಹ ಬ್ಯಾರಿಕೇಡ್ ಭೇದಿಸಿ ವಾಹನ ಚಲಾಯಿಸಿದ್ದಾರೆ ಎಂದು ಅವರ ಮೇಲೆ ಕಾನೂನು ಕ್ರಮ ಕೈಗೊಂಡರು. ಇದನ್ನು ಮಾದ್ಯಮಗಳೆಲ್ಲಾ ಮಸಾಲೆ ಸೇರಿಸಿ ವರದಿ ಮಾಡಿದವು.

ನಂತರ ಹುಣಸೂರು ಪ್ರವೇಶಕ್ಕೂ ಮುನ್ನವೇ ಪೊಲೀಸರು ಪ್ರತಾಪ್ ಸಿಂಹ ಅವರನ್ನು ಪೆÇಲೀಸರು ವಶಕ್ಕೆ ಪಡೆದರು. ಈ ವೇಳೆ ಸಂಸದರು ಇರುವ ಜಾಗಕ್ಕೇ ಮೈಸೂರು ಎಸ್‍ಪಿ ರವಿ ಚನ್ನಣ್ಣವರ್ ಆಗಮಿಸಿದರು. ಆಗ ಪ್ರತಾಪ್ ಸಿಂಹ ಪೊಲೀಸರ ನಡೆಯನ್ನು ಪ್ರಶ್ನಿಸಿದರು. ಕೊನೆಗೆ ಎಸ್‍ಪಿ ರವಿ ಚನ್ನಣ್ಣವರ್ ಪ್ರತಾಪ್ ಸಿಂಹ ಅವರನ್ನು ಮನವೊಲಿಸುವ ಪ್ರಯತ್ನ ನಡೆಸಿದರು. ಮಾತನ್ನು ಕೇಳದೇ ಇದ್ದಾಗ ಸಂಸದರ ಜೊತೆ ಹನುಮ ಮಾಲಾಧಾರಿಗಳನ್ನು ಪೊಲೀಸರು ಬಂಧಿಸಿದರು.

ಕೊನೆಗೆ ಸಂಸದರನ್ನು ಇಡೀ ದಿನ ಕಾರಿನಲ್ಲಿ ಸುತ್ತಾಡಿಸಿ ಬಳಿಕ ಮೈಸೂರಿನ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲು. ಐಪಿಸಿ 353(ಪೊಲೀಸರ ಕರ್ತವ್ಯಕ್ಕೆ ಅಡ್ಡಿ) ಐಪಿಸಿ 332(ಕರ್ತವ್ಯಕ್ಕೆ ಅಡ್ಡಿ) ಐಪಿಸಿ 279(ಅಜಾಗರೂಕತೆಯಿಂದ ವಾಹನ ಚಲಾಯಿಸಿ ಜೀವಕ್ಕೆ ಕುತ್ತು) ಕಾಲಂಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಹೀಗೆ ಶಾಂತಿಯುತ ಮೆರವಣಿಗೆ ನಡೆಯುತ್ತಿದ್ದರೂ ಲಾಠಿಪ್ರಹಾರ ಮಾಡಿ ಸಾಕ್ಷಾತ್ ಔರಂಗ ಜೇಬನ ಆಡಳಿತದಂತೆ ಕಾಂಗ್ರೆಸ್ ಸರಕಾರ ವರ್ತಿಸಿತ್ತು.

ಪ್ರತಾಪ್ ಸಿಂಹರನ್ನು ಬೇಕೆಂದೇ ಟಾರ್ಗೆಟ್ ಮಾಡಲು ಹೋಗಿದ್ದ ಕಾಂಗ್ರೆಸ್ ಸರಕಾರ ಅದಕ್ಕಾಗಿ ಖಡಕ್ ಪೊಲೀಸ್ ಅಧಿಕಾರಿ ಚೆನ್ನಣ್ಣನವರ್ ಅವರ ಮೇಲೆ ಒತ್ತಡ ಹೇರಿ ಅವರನ್ನು ಬಂಧಿಸುವಂತೆ ಮಾಡಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪ್ರತಾಪ್ ಸಿಂಹ ಅವರು ಖಡಕ್ ಉತ್ತರವನ್ನೇ ನೀಡಿದ್ದರು

`ನಾನು ಯಾವುದೇ ಕಾನೂನು ಉಲ್ಲಂಘಿಸಿಲ್ಲ. ಜಿಲ್ಲಾಡಳಿತ ಮತ್ತು ಪೊಲೀಸರು ಆರಂಭದಲ್ಲಿ ಒಪ್ಪಿ ನಂತರ ಮಾತಿಗೆ ತಪ್ಪಿದ್ದರಿಂದ ಈ ಬೆಳವಣಿಗೆಯಾಗಿದೆ ಹೊರತು ಈ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಕಳೆದ 25 ವರ್ಷದಿಂದ ಹುಣಸೂರಿನಲ್ಲಿ ಹನುಮ ಜಯಂತಿ ನಡೆಯುತ್ತಿದೆ. ಕಳೆದ ವರ್ಷ ಅಹಿತಕರ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ಮೆರವಣಿಗೆಗೆ ಅವಕಾಶ ಮಾಡಿಕೊಡುತ್ತೇವೆ ಎಂದು ಎಸ್‍ಪಿ ಹೇಳಿದ್ದರು. ಅವರ ಮಾತಿಗೆ ಒಪ್ಪಿ ನಾವು ಕಳೆದ ವರ್ಷ ಅವರು ಹೇಳಿದಂತೆ ನಡೆದುಕೊಂಡಿದ್ದೆವು.

ಈ ಬಾರಿ ನಾವು ಸಂಪ್ರದಾಯದ ಪ್ರಕಾರ ರಂಗನಾಥ ಬಡಾವಣೆಯಿಂದಲೇ ಮೆರವಣಿಗೆ ಮಾಡುತ್ತೇವೆ ಎಂದು ಒಂದು ತಿಂಗಳ ಹಿಂದೆಯೇ ಪ್ರೆಸ್‍ಮೀಟ್ ಮಾಡಿ ಹೇಳಿದ್ದೆ. ಆದರೆ ಈ ಮಧ್ಯೆ ನವೆಂಬರ್ 27 ರಂದು ಜಿಎಲ್‍ಬಿ ರಸ್ತೆ, ಕಾರ್ಖಾನೆ ರಸ್ತೆ, ರಂಗನಾಥ ಬಡಾವಣೆಯಲ್ಲಿ ಮೆರವಣಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಪೆÇಲೀಸರು ಹೇಳಿದ್ದಾರೆ. ನವೆಂಬರ್ 5ರಂದೇ ಈ ಆದೇಶ ಪ್ರಕಟವಾಗಿದ್ದರೂ ಯಾರಿಗೂ ಈ ವಿಚಾರ ತಿಳಿಸಲೇ ಇಲ್ಲ. ಅಷ್ಟೇ ಅಲ್ಲದೇ ಯಾವುದಾದರೂ ಮಾಧ್ಯಮಗಳಲ್ಲಿ ನಿರ್ಬಂಧ ವಿಧಿಸಿರುವ ವಿಚಾರವನ್ನು ತಿಳಿಸಿರಲಿಲ್ಲ.

ಈ ವಿಚಾರ ತಿಳಿದು ನಾನು ಎಸ್‍ಪಿ ಅವರ ಜೊತೆ ಮಾತನಾಡಿ ರಂಗನಾಥ ಸ್ವಾಮಿ ಬಡಾವಣೆಯಿಂದ ನಾವು ಮೆರವಣಿಗೆ ಹೋಗುತ್ತೇವೆ ಇದಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದೆ. ಇದಾದ ಬಳಿ ಜಿಲ್ಲಾಡಳಿತ ಪೆÇಲೀಸರ ಇದಕ್ಕೆ ನಾವು ಪರಿಹಾರ ಹುಡುಕುತ್ತೇವೆ ಎಂದು ಹೇಳಿ ಮನವಿಯನ್ನು ಗೃಹ ಕಾರ್ಯದರ್ಶಿಗೆ ತಿಳಿಸುತ್ತೇವೆ ಎಂದು ಹೇಳಿದರು. ಈ ನಡುವೆ ಗೃಹ ಕಾರ್ಯದರ್ಶಿ ನಾನು ಸೋಮವಾರದವರೆಗೆ ಸಿಗುವುದಿಲ್ಲ ಎಂದು ಹೇಳಿದರು.

ನಾವು ಅನುಮತಿ ಸಿಕ್ಕರೆ ಮೆರವಣಿಗೆಯನ್ನು ಮುಂದೂಡುತ್ತೇವೆ ಎಂದು ಹೇಳಿದರು. ಈ ನಡುವೆ ಎಸಿಎಸ್ ಅವರು ನಮ್ಮ ಮನವಿಯನ್ನು ತಿರಸ್ಕರಿಸಿದ್ದಾರೆ ಎಂದು ಡಿ.ಸಿ ಹೇಳಿದರು. ಅದಕ್ಕೆ ನಾವು ಮೆರವಣಿಗೆ ಮುಂದೂಡುತ್ತೇವೆ ಎಂದಾಗ ಹನುಮ ಜಯಂತಿ ಮುಕ್ತಾಯವಾಗುವವರೆಗೂ ಈ ನಿರ್ಬಂಧ ಮುಂದುವರಿಯುತ್ತದೆ ಎಂದು ಎಸ್ಪಿ ಹೇಳಿದರು.

ಒಂದು ವೇಳೆ ನವೆಂಬರ್ 5ರಂದು ನಿರ್ಬಂಧ ವಿಧಿಸಿರುವುದು ಗೊತ್ತಾಗಿದ್ದರೆ ನಾವು ನ್ಯಾಯಾಂಗ ಹೋರಾಟ ಮಾಡುತ್ತಿದ್ದೆವು. ಆ ವಿಚಾರವನ್ನು ಮುಚ್ಚಿಟ್ಟು ನವೆಂಬರ್ 27ಕ್ಕೆ ತಿಳಿಸಿದ್ದು ಯಾಕೆ? ಅಷ್ಟೇ ಅಲ್ಲದೇ ಕಳೆದ ವರ್ಷ ಅನುಮತಿ ನೀಡುತ್ತೇವೆ ಎಂದು ಹೇಳಿ ಈ ವರ್ಷ ಅನುಮತಿ ನೀಡದ್ದು ಯಾಕೆ? ಹೀಗಾಗಿ ಪ್ರಕರಣದಲ್ಲಿ ತಪ್ಪು ಯಾರದ್ದು ಎನ್ನುವುದನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಎದೆ ತಟ್ಟಿ ಹೇಳಲಿ ನೋಡಲಿ.

ಈ ವಿಚಾರ ತಿಳಿದ ಬಳಿಕ ನಾವು ಮೆರವಣಿಗೆ ಹೋಗುವುದು ಸಿದ್ಧ ಎಂದಾಗ ಎಸ್‍ಪಿ ಅವರು ನಿಮ್ಮನ್ನು ನಾವು ಬಂಧಿಸಬೇಕಾಗುತ್ತದೆ ಎಂದು ಫೋನಿನಲ್ಲಿ ಹೇಳಿದ್ದರು. ಅದಕ್ಕೆ ನಾನು ನನ್ನನ್ನು ಬಂಧಿಸಿ ಎಂದು ತಿಳಿಸಿದ್ದೆ. ಆದರೆ ಮೈಸೂರಿನಲ್ಲಿ ನನ್ನನ್ನು ಬಂಧಿಸದೇ ಬಿಳಿಕೆರೆಯಲ್ಲಿ ಬಂಧಿಸಿದ್ದಾರೆ ಎಂದು ಪ್ರತಾಪ್ ಸಿಂಹ ತಿಳಿಸಿದ್ದರು.

ಹುಣಸೂರಿನಲ್ಲಿ ಶಾಂತಿಯುತವಾಗಿ ಭಾಗವಹಿಸಿದ್ದ ಜನರ ಮೇಲೆ ಲಾಠಿ ಚಾರ್ಜ್ ಮಾಡಿದ್ದು ಗೊತ್ತಾಗಿ ಅಲ್ಲಿ ನಾನು ತೆರಳಲು ಹೋಗುತ್ತಿದ್ದಾಗ ಬಿಳಿಕೆರೆ ಬಳಿ ಎಲ್ಲ ವಾಹನಗಳನ್ನು ತಡೆದು ನಿಲ್ಲಿಸಿ ಪೊಲೀಸರು ತಪಾಸಣೆ ಮಾಡುತ್ತಿದ್ದರು. ಆ ಪ್ರದೇಶದಲ್ಲಿ ಯಾವುದೇ ನಿರ್ಬಂಧ ವಿಧಿಸಲಾಗಲಿಲ್ಲ.

ಅಷ್ಟೇ ಅಲ್ಲದೇ ಬ್ಯಾರಿಕೇಡ್ ಹಾಕಿರಲಿಲ್ಲ. ಈ ವಿಚಾರ ತಿಳಿದು ಯಾಕೆ ವಾಹನಗಳನ್ನು ತಡೆಯುತ್ತಿದ್ದೀರಿ ಎಂದು ನಾನು ಕಾರು ನಿಲ್ಲಿಸಿ ಪೆÇಲೀಸರನ್ನು ಪ್ರಶ್ನಿಸಲು ಮುಂದಾಗುತ್ತಿದ್ದಾಗ ನಾನು ಮುಂದೆ ಹೋಗಬಾರದು ಎನ್ನುವುದಕ್ಕೆ ಬ್ಯಾರಿಕೇಡ್ ಹಾಕಿದ್ದಾರೆ. ಹೀಗಾಗಿ ನಾನು ಕಾರನ್ನು ಚಲಾಯಿಸಿದ್ದೇನೆ. ಕಾರಿನ ಮುಂಭಾಗಕ್ಕೆ ಬ್ಯಾರಿಕೇಡ್ ತಾಗಿದೆ ಬೇರೆ ಏನೂ ಆಗಿಲ್ಲ’

ಈ ರೀತಿ ಪ್ರತಾಪ್ ಕಾಂಗ್ರೆಸ್ ಸರಕಾರದ ಇಬ್ಬಗೆ ನೀತಿಯನ್ನು ಬಯಲುಗೊಳಿಸಿದ್ದರು.

ಜೊತೆಗೆ ಎಸ್‍ಪಿ ರವಿ ಚೆನ್ನಣ್ಣನವರ್‍ಗೆ, ಕನಿಷ್ಠ ಖಡಕ್ ಅಧಿಕಾರಿಗಳೆಂಬ ಸೋಗು ಬಿಟ್ಟು ಅಳುವ ಪಕ್ಷದ ಆಳುಗಳು ಎನ್ನುವುದನ್ನು ಒಪ್ಪಿಕೊಳ್ಳಿ. ದತ್ತ ಜಯಂತಿಗೆ ಸಕಲ ವ್ಯವಸ್ಥೆ ಮಾಡಿದ ಎಸ್.ಪಿ ಅಣ್ಣಾಮಲೈ, ಸರ್ಕಾರವನ್ನು ಎದುರು ಹಾಕಿಕೊಂಡ ಡಿಐಜಿ ರೂಪಾ, ಮೆಡಿಕಲ್ ಸೀಟ್ ಬ್ಲಾಕಿಂಗ್ ಹಗರಣ ತಡೆದ ಐಎಎಸ್ ರಶ್ಮಿ ನೋಡಿ ಕಲಿಯಿರಿ. ಭಾಷಣ ನಿಲ್ಲಿಸಿ. ನನ್ನ ರಾಜಕೀಯ ಭವಿಷ್ಯಕ್ಕಿಂತ ನನ್ನ ಧರ್ಮ, ಸಂಪ್ರದಾಯ ರಕ್ಷಣೆ ನನಗೆ ಮುಖ್ಯ ಎಂದು ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದರು.

ಇದಕ್ಕೆ ಉತ್ತರವಾಗಿ ರವಿ ಅವರು ನಾನು ಜಿಲ್ಲಾಡಳಿತದ ಆದೇಶದಂತೆ ವರ್ತಿಸಿದ್ದೆ ಎಂದು ಹೇಳಿಕೆ ನೀಡಿದ್ದರು. ಒಟ್ಟಾರೆ ಸರಕಾರದ ಕೈಗೊಂಬೆಗಳಂತೆ ವರ್ತಿಸಿದ್ದ ಜಿಲ್ಲಾಡಳಿತ ಹಾಗೂ ಎಸ್‍ಪಿಗೆ ಕೋರ್ಟು ತೀರ್ಪಿನಿಂದ ಪೇಚಿಗೆ ಸಿಲುಕುವಂತಾಗಿದೆ.

ನಿಷೇಧಾಜ್ಞೆ ಪ್ರದೇಶಕ್ಕೆ ಸಂಸದರು ಹೋಗದೇ ಇದ್ದರೂ ಅದನ್ನು ಉಲ್ಲಂಘಿಸಲಾಗಿದೆ ಎಂದು ಹೇಳಿ ಸೆಕ್ಷನ್ ಕಣ್ತಪ್ಪಿನಿಂದ ಹಾಕಲಾಗಿದೆ ಎನ್ನುವುದಕ್ಕೆ ಸಮಜಾಯಿಷಿ ಕೊಡುವುದಕ್ಕೆ ಸಾಧ್ಯವಿಲ್ಲ. ಗಡಿಬಿಡಿಯಲ್ಲಿ ಎಫ್‍ಐಆರ್ ಹಾಕಿದ್ದೇವೆ ಎಂದು ಹೇಳಿದರೂ ಕೂಡ ಪೊಲೀಸರು ಗಡಿಬಿಡಿ ಆಗುವಂತಹ ಒತ್ತಡ ಹೇರಿದ್ದು ಯಾರು ಎನ್ನುವ ಪ್ರಶ್ನೆ ಕೂಡ ಈಗ ಹುಟ್ಟಿಕೊಂಡಿದೆ.

ಕೋರ್ಟು ತೀರ್ಪು ಏನು?

ಪೊಲೀಸರು ಪ್ರತಾಪ್ ಸಿಂಹರನ್ನು ಬಂಧಿಸಿ ಅವರ ಮೇಲೆ ಕೇಸ್ ದಾಖಲಿಸಿರುವುದನ್ನು ಕೋರ್ಟು ಪ್ರಶ್ನಿಸಿದೆ. ಸೆಕ್ಷನ್ ವಾಪಸ್ ಪಡೆದು ಮತ್ತೆ ಜಡಿಯುವ ಔಚಿತ್ಯವೇನು ಎಂದು ಕೋರ್ಟು ಪ್ರಶ್ನಿಸಿಸದೆ. ಪೊಲೀಸರು ದಾಖಲಿಸಿದ್ದ ಎಫ್‍ಐಆರ್ ಕೂಡಾ ಸರಿಯಾದ ಕ್ರಮ ಅಲ್ಲ ಎಂದು ವಿವರಿಸಿದ ಕೋರ್ಟು ಈ ಬಗ್ಗೆ ನ್ಯಾಯಧೀಶರು ಇದೀಗ ಸೆಕ್ಷನ್ ಕೈಬಿಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಪ್ರತಾಪ್ ಸಿಂಹರಗೆ ಗೆಲುವಾಗಿದ್ದು, ಅವರನ್ನು ಟಾರ್ಗೆಟ್ ಮಾಡಲು ಹೋಗಿದ್ದ ಕಾಂಗ್ರೆಸ್ ಸರಕಾರ ಪೇಚಿಗೆ ಸಿಲುಕಿದಂತಾಗಿದೆ.

ಚೇಕಿತಾನ

Tags

Related Articles

Close