ಪ್ರಚಲಿತ

ಕಾಂಗ್ರೆಸ್ ಸರಕಾರದಿಂದ ಕೊಲೆಭಾಗ್ಯ…! ಬಿಜೆಪಿ ಮುಖಂಡನನ್ನು ಕೊಲೆ ಮಾಡಿದ ಕರ್ನಾಟಕದ ಈ ಪ್ರಭಾವಿ ಕಾಂಗ್ರೆಸ್ ಮುಖಂಡ ಯಾರು ಗೊತ್ತೇ?

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ, ಬಿಜೆಪಿ ಮುಖಂಡ ಯೋಗೀಶ್ ಗೌಡ ಅವರ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಈ ಕೊಲೆ ಪ್ರಕರಣದಲ್ಲಿ ರಾಜ್ಯದ ಪ್ರಭಾವಿ ಕಾಂಗ್ರೆಸ್ ಮುಖಂಡನೋರ್ವನ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಈ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಸೃಷ್ಟಿಸುವ ಸಾಧ್ಯತೆ ಇದ್ದು, ಭಾರೀ ಕುತೂಹಲ ಕೆರಳಿಸಿದೆ. ಈ ಸಚಿವನ ಮೇಲೆ ಆರಂಭದಲ್ಲಿಯೇ ಕೊಲೆ ಆರೋಪ ಕೇಳಿಬಂದಿತ್ತು. ಆದರೆ ಇದನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಪ್ರಯತ್ನ ನಡೆದಿತ್ತು. ಇದೀಗ ಈ ಪ್ರಕರಣ ತಣ್ಣಗಾಗುವ ಹೊತ್ತಿನಲ್ಲಿಯೇ ಈ ಪ್ರಭಾವಿ ಶಾಸಕನ ಹೆಸರು ಬೆಳಕಿಗೆ ಬಂದಿದ್ದು, ಕಾಂಗ್ರೆಸ್ ಸರಕಾರದ ಕೊಲೆ ಭಾಗ್ಯ ಕೊನೆಗೂ ಬೆಳಕಿಗೆ ಬಂದಂತಾಗಿದೆ.

ಅಂದಹಾಗೆ ಈ ಕೊಲೆ ನಡೆದಿರುವುದು ಯಾರದ್ದು ಗೊತ್ತೇ? ಹೌದು ಈ ಕೊಲೆ ರಾಜ್ಯದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಅವರದ್ದು! ಇದಕ್ಕೆ ಕಾರಣವೇನೆಂಬುವುದನ್ನೂ ಪೊಲೀಸ್ ಅಧಿಕಾರಿ ಬಯಲುಗೊಳಿಸಿದ್ದು ಯುವ ಕಾಂಗ್ರೆಸ್ ಮುಖಂಡ ಬಸವರಾಜ್ ಮುತ್ತಗಿ ಸೇರಿ ಹಲವರ ಆರೋಪದ ಬಗ್ಗೆ ತಿಳಿಸಿದ್ದರು. ಬೆಳ್ಳಿಗಟ್ಟಿ ಗ್ರಾಮದ ಬಳಿ ನಾಗೇಶ್ ಎಂಬವರಿಗೆ ಸೇರಿದ 40 ಎಕರೆ ಜಮೀನಿನಲ್ಲಿ, 9ಎಕರೆ ಜಮೀನನ್ನು ಯೋಗೀಶ್ ಗೌಡ ಖರೀದಿಸಿದ್ದರು. ಬಳಿಕ 15 ಎಕರೆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರು. ಜಮೀನು ಖರೀದಿ ವಿಷಯದಲ್ಲಿ ಯೋಗೀಶ್ ಗೌಡ ಹಾಗೂ ಬಸವರಾಜ್ ಮುತ್ತಗಿಗೆ ವಿವಾದ ನಡೆದಿತ್ತು. ಈ ಹಿನ್ನೆಲೆಯಲ್ಲಿ ಜೂನ್ 15ರಂದು ಧಾರವಾಡದ ಸಪ್ತಾಪುರ ಬಡಾವಣೆಯಲ್ಲಿರುವ ಉದಯ್ ಜಿಮ್ ನಲ್ಲೇ ಯೋಗೀಶ್ ಗೌಡ ಅವರನ್ನು ಐವರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಬಗ್ಗೆ ಹುಬ್ಬಳ್ಳಿ ಧಾರವಾಡ ಪೆÇಲೀಸ್ ಆಯುಕ್ತ ಪಾಂಡುರಂಗ ರಾಣೆ ಸುದ್ದಿಗೋಷ್ಠಿ ಮಾಹಿತಿ ನೀಡಿದ್ದರು.

ಈ ಕೊಲೆಗೆ ಸಂಬಂಧಿಸಿ ಯುವ ಕಾಂಗ್ರೆಸ್ ಮುಖಂಡ ಬಸವರಾಜ್ ಮುತ್ತಗಿ ಸೇರಿ ವಿಕ್ರಮ್ ಬಳ್ಳಾರಿ, ವಿನಾಯಕ ಕಟಗಿ, ಕೀರ್ತಿಕುಮಾರ್ ಕುರಹಟ್ಟಿ, ಸಂದೀಪ್ ಸವದತ್ತಿ ಎಂಬವರನ್ನು ಬಂಧಿಸಲಾಗಿತ್ತು. ಆದರೆ ಈ ಕೊಲೆಗೆ ಸಂಬಂಧಿಸಿ ಇದೀಗ ಹೊಸತೊಂದು ಹೊಸ ಟ್ವಿಸ್ಟ್ ಸಿಕ್ಕಿದ್ದು, ಈ ಕೊಲೆಯಲ್ಲಿ ರಾಜ್ಯದ ಪ್ರಭಾವಿ ಸಚಿವನ ಕೈವಾಡ ಇರುವುದನ್ನು ಸುದ್ದಿವಾಹಿನಿಯೊಂದು ಬಯಲುಗೊಳಿಸಿದೆ.

ಅಂದ ಹಾಗೆ ಈ ಪ್ರಭಾವಿ ಕಾಂಗ್ರೆಸ್ ಮುಖಂಡ ಯಾರು ಗೊತ್ತೇ? ಬೇರ್ಯಾರೂ ಅಲ್ಲ ಅವರೇ ವಿನಯ್ ಕುಲಕರ್ಣಿ… ಹೌದು ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕೆಂದು ಹೋರಾಟ ನಡೆಸಿದ್ದ ವಿನಯ ಕುಲಕರ್ಣಿ ಕೈ ಮೇಲೆ ರಕ್ತದ ಕಲೆ ಮೆತ್ತಿಕೊಂಡಂತಾಗಿದೆ.

ಈ ಕೊಲೆಯ ಬಗ್ಗೆ ಆರಂಭದಲ್ಲೇ ವಿನಯ ಕುಲಕರ್ಣಿ ಮೇಲೆ ಆರೋಪ ಕೇಳಿಬಂದಿತ್ತು. ಯಾಕೆಂದರೆ ಯೋಗೀಶ್ ಗೌಡ ಕೊಲೆಗೆ ಎರಡು ದಿನಗಳ ಮುಂಚೆ ಅವರಿಗೊಂದು ಅನಾಮಧೇಯ ಪತ್ರವೊಂದು ಬಂದಿದ್ದು ಅದರಲ್ಲಿ ಈ ರೀತಿ ಬರೆಯಲಾಗಿತ್ತು…

“ನಮಸ್ಕಾರ ಯೋಗೀಶ್ ಗೌಡರಿಗೆ..
ನಿಮ್ಮ ಅಣ್ಣ ಉದಯ ಗೌಡ್ರ ಕೊಲೆ ಮಾಡಿಸಿದ್ದು ವಿನಯ ಕುಲಕರ್ಣಿ, ಎಚ್.ಕೆ. ಪಾಟೀಲ್. ಅವರು ಮತ್ತೆ ಅಂದರೆ ವಿನಯ ಕುಲಕರ್ಣಿ ಸಮಯ ನೋಡಿ ನಿಮ್ಮ ಕೊಲೆ ಮಾಡಿಸಬೇಕು ಅಂತ ಕಾಯುತ್ತಾ ಇದ್ದಾರೆ. ನಾನು ಯಾರು ಅಂತ ತಿಳಕೊಳ್ಳೋ ಪ್ರಯತ್ನ ಮಾಡಬೇಡಿ. ಮುಂದೆ ನಿಮಗೆ ಎಲ್ಲ ರೀತಿಯ ಮಾಹಿತಿ ಲೆಟರ್ ಮೂಲಕ ತಿಳಿಸುತ್ತೇನೆ. ನನಗೆ ನಿಮ್ಮಿಂದ ಸಹಾಯ ಬೇಕು. ಆಗ ನಿಮ್ಮ ಹತ್ತಿರ ಖಂಡಿತಾ ಬರುತ್ತೇನೆ, ಸಹಾಯ ಮಾಡಿ”

ಈ ರೀತಿ ಅನಾಮಧೇಯ ವ್ಯಕ್ತಿಯೊಬ್ಬ ಯೋಗೀಶ್ ಗೌಡ್ರರಿಗೆ ಎಚ್ಚರಿಕೆ ಪತ್ರವೊಂದು ಬಂದಿತ್ತು. ಈ ಪತ್ರದ ಸಮೇತ ಮನೆಯವರು ಪೆÇಲೀಸರಿಗೆ ದೂರು ನೀಡಿದ್ದರು. ಆದರೆ ಎಚ್ಚರಿಕೆ ಬಂದ ಬಳಿಕ ಯೋಗೀಶ್ ಗೌಡರ ಕೊಲೆ ನಡೆದಿತ್ತು. ಆದರೆ ಪತ್ರದಲ್ಲಿದ್ದ ವಿನಯ ಕುಲಕರ್ಣಿಯವರ ಹೆಸರನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿತ್ತು. ಆದರೆ ಕೊನೆಗೂ ಆ ಪತ್ರದ ಪ್ರತಿ ಮಾಧ್ಯಮಗಳ ಕೈಗೆ ಸಿಕ್ಕಿ ಅದು ಬಹಿರಂಗಗೊಂಡಿತ್ತು.

ಇದೀಗ ಈ ಕೊಲೆ ಪ್ರಕರಣದಲ್ಲಿ ವಿನಯ ಕುಲಕರ್ಣಿಯ ಹೆಸರು ಬಹಿರಂಗಗೊಂಡಿದ್ದು, ಈ ಬಗ್ಗೆ ಕನ್ನಡದ ಸುದ್ದಿವಾಹಿನಿ ಬಹಿರಂಗಗೊಳಿಸಿದೆ.

ಯೋಗೀಶ್ ಗೌಡ ಕುಟುಂಬದ ಜೊತೆ ರಾಜೀ ಸಂಧಾನಕ್ಕೆ ಸಚಿವ ವಿನಯ್ ಕುಲಕರ್ಣಿ ಯತ್ನಿಸಿದ್ದರೇ ಎಂಬ ಬಗ್ಗೆ ಸಂಶಯ ಮೂಡಿದೆ. ಈ ಎಲ್ಲದರ ಬಗ್ಗೆ ಸುದ್ದಿವಾಹಿನಿ ಬಳಿ ವಿಡಿಯೋ ಮತ್ತು ಆಡಿಯೋ ಸಾಕ್ಷ್ಯಗಳು ಲಭ್ಯವಾಗಿರುವುದಾಗಿ ಬಹಿರಂಗಗೊಳಿಸಿದೆ. ಕೊಲೆ ಪ್ರಕರಣದ ಬಗ್ಗೆ ಸ್ಫೋಟಕ ವಿಷಯಗಳನ್ನು ಬಹಿರಂಗಗೊಳಿಸಲು ಯೋಗೀಶ್ ಗೌಡ ಕುಟುಂಬಿಕರು ತಮ್ಮ ಸ್ಟುಡಿಯೋಗೆ ಬಂದಿದ್ದಾರೆ. ಯೋಗೀಶ್ ಗೌಡ ಕೊಲೆಯಾಗಿದ್ದು ಏಕೆ? ಕೊಲೆ ಹಿಂದಿನ ರಹಸ್ಯ ಏನು? ಯೋಗೀಶ್ ಗೌಡಗೂ- ಸಚಿವ ವಿನಯ್ ಕುಲಕರ್ಣಿಗೂ ಇರುವ ದ್ವೇಷ ಏನು? ಸಚಿವ ವಿನಯ್ ಕುಲಕರ್ಣಿ ರಾಜಿ ಸಂಧಾನಕ್ಕೆ ಮುಂದಾಗಿದ್ದು ಏಕೆ? ಎಂಬ ಬಗ್ಗೆ ಸುದ್ದಿವಾಹಿನಿ ಸ್ಫೋಟಕ ಸತ್ಯಗಳನ್ನು ಯೋಗೀಶ್ ಕುಟುಂಬಿಕರು ಬಯಲುಗೊಳಿಸಲಿದ್ದಾರೆ.

ಈ ವಿಚಾರವನ್ನು ಪ್ರಸಾರ ಮಾಡುತ್ತಿದ್ದಂತೆ ಅತ್ತ ಬೆಳಗಾವಿಯಲ್ಲಿ ಕಲಾಪ ಆರಂಭವಾದ ಕೂಡಲೇ ಸಚಿವ ವಿಶ್ವೇಶ್ವರ ಹೆಗಡೆ ಕಾವೇರಿ ಇದನ್ನು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಬಗ್ಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು. ಸಚಿವ ಜಾರ್ಜ್ ಪ್ರಕರಣದಲ್ಲೂ ಸರ್ಕಾರ ಸರಿಯಾದ ಉತ್ತರ ನೀಡುತ್ತಿಲ್ಲ. ವಿನಯ್ ಕುಲಕರ್ಣಿ ಪ್ರಕರಣದ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಹಲವು ಕೊಲೆ ಪ್ರಕರಣಗಳನ್ನು ಮುಚ್ಚಿಹಾಕಲು ಸರ್ಕಾರ ಯತ್ನಿಸುತ್ತಿದೆ. ಈ ಬಗ್ಗೆ ಚರ್ಚಿಸಲು ಅವಕಾಶ ನೀಡುವಂತೆ ವಿಶ್ವೇಶ್ವರ ಹೆಗಡೆ ಆಗ್ರಹಿಸಿದ್ದಾರೆ. ಇದರ ಜೊತೆಗೆ ವಿಧಾನ ಪರಿಷತ್’ನಲ್ಲೂ ಕೂಡಾ ಈ ವಿಚಾರ ಪ್ರತಿಧ್ವನಿಸಿತು.

2008ರಲ್ಲಿ ತಾಲ್ಲೂಕಿನ ಅಳ್ನಾವರ ಪಟ್ಟಣ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ಪ್ರತಿಬಂಧಕ ಆಜ್ಞೆ ಉಲ್ಲಂಘನೆ, ಪೆÇಲೀಸರ ಕರ್ತವ್ಯಕ್ಕೆ ಅಡ್ಡಿ, ಬೇರೆ ಪಕ್ಷವನ್ನು ಬೆಂಬಲಿಸುತ್ತಾರೆ ಎನ್ನುವ ಸಂಶಯದ ಹಿನ್ನೆಲೆಯಲ್ಲಿ ಸದಸ್ಯರಾದ ದೀಪಾ ಹುಲಿ ಹಾಗೂ ಸರೋಜಾ ಬೆಟಗೇರಿ ಅವರ ಅಪಹರಣದ ಪ್ರಯತ್ನ ಸೇರಿದಂತೆ ವಿವಿಧ ಆರೋಪಗಳಡಿ ಸಚಿವ ವಿನಯ ಕುಲಕರ್ಣಿ ಮತ್ತು ಇತರರ ವಿರುದ್ಧ ಪೆÇಲೀಸರು ಭಾರತೀಯ ದಂಡ ಸಂಹಿತೆ ಕಲಂ 143, 147,148,341,186,504,336, 188 ಜತೆಗೆ 149 ರಡಿ ಪ್ರಕರಣ ದಾಖಲಾಗಿತ್ತು. ಇದೇ ರೀತಿ ಹಲವು ಆರೋಪಗಳಿದ್ದು, ತಾನೊಬ್ಬ ಗೂಂಡಾ ರಾಜಕಾರಣಿ ಎಂದು ಬಯಲುಗೊಂಡಿದೆ.

ಲಿಂಗಾಯಿತ ಪ್ರತ್ಯೇಕ ಧರ್ಮವಾಗಬೇಕೆಂದು ಹೋರಾಟ ನಡೆಸುತ್ತಾ ಜನರನ್ನು ಒಡೆದು ಆಳುವ ನೀತಿಯ ವಿನಯ ಕುಲಕರ್ಣಿ ಮೇಲೆ ಇದೀಗ ಕೊಲೆ ಆರೋಪ ಬಂದಿದ್ದು, ಕರ್ನಾಕ ಸರಕಾರದ ಹಕವು ಭಾಗ್ಯಗಳ ಪೈಕಿ ಕೊಲೆ ಭಾಗ್ಯವೂ ಸೇರಿಕೊಂಡಿದೆ. ಈಗಾಗಲೇ ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ರಾಜ್ಯ ಸಚಿವ ಕೆ.ಜೆ. ಜಾರ್ಜ್ ಹೆಸರು ತಳುಕು ಹಾಕಿಕೊಂಡಿದ್ದು ಸಿಬಿಐ ತನಿಖೆ ಕೈಗೆತ್ತಿಕೊಂಡಿದೆ. ವಿಡಿಯೋವೊಂದರಲ್ಲಿ ದಾಖಲಾಗಿದ್ದಂತೆ ಗಣಪತಿ ಅವರು ತನ್ನ ಜೀವಕ್ಕೆ ಅಪಾಯವಾದರೆ ಅದಕ್ಕೆ ಕೆ.ಜೆ ಜಾರ್ಜ್ ಕೂಡಾ ಕಾರಣರಾಗುತ್ತಾರೆ ಎಂದು ಆರೋಪಿಸಿರುವುದು ಬೆಳಕಿಗೆ ಬಂದಿತ್ತು.

ಈ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸುವ ಎಲ್ಲಾ ಲಕ್ಷಣಗಳು ಕಾಣಿಸಿಕೊಂಡಿದೆ.

source:http://kannada.asianetnews.com/news/suvarna-news-expose-a-big-exclusive-news
-ಚೇಕಿತಾನ

Tags

Related Articles

Close