ಅಂಕಣಜಿಲ್ಲಾ ಸುದ್ದಿಪ್ರಚಲಿತ

ಕಾವ್ಯಾಳ ಸಾವಿನ ಸೂತಕದ ಮನೆಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವವರ ಎಕ್ಸಕ್ಲೂಸಿವ್ ಮಾಹಿತಿ!

ಸಾವಿಗೂ ರಾಜಕೀಯ ಮಾಡುವ ಒಂದಷ್ಟು ತಲೆಗಳ ಕಂಡಾಗ ನಿಜಕ್ಕೂ ದುರಂತವೆನ್ನಿಸಿಬಿಡುತ್ತದೆ. ಹಾ! ತೀರಾ ಇತ್ತೀಚೆಗಾದ ಕಾವ್ಯಾಳ ಘಟನೆಯೊಂದರ ಮೇಲೆ ಪ್ರಗತಿಪರರು, ಬುದ್ಧಿಜೀವಿಗಳು, ಅದೂ ಇದೂ ಎನ್ನುವ ಒಂದಷ್ಟು ಸಾವಿನ ರಾಜಕೀಯದ ವಕ್ತಾರರೆಲ್ಲ ಎಲ್ಲೆಂದರೆಲ್ಲಿ ಗುಲ್ಲೆಬ್ಬಿಸಿಬಿಟ್ಟರು! ಕಾವ್ಯಾಳದ್ದು ಆತ್ಮಹತ್ಯೆಯಲ್ಲ, ಬದಲಾಗಿ ಕೊಲೆ ಎಂಬುದು! ಪರಿಣಾಮ, ಯಾವುದೇ ಸಾಮಾಜಿಕ ಜಾಲತಾಣ ನೋಡಿದರೂ ಅದೇ ಕೂಗು ಕೇಳಿಸಿತು! ಒಂದು ಸುಳ್ಳನ್ನೇ ಹತ್ತು ಜನರಾಡುವಾಗ ಸತ್ಯವಾಗುವಾಗ ಹಾಗೆ ಈ ಕಾವ್ಯಾಳ ಪ್ರಕರಣವೊಂದಿದೆಯಲ್ಲ, ಅದೆಷ್ಟು ಉಳಿದ ಹೆತ್ತವರ ಒಡಲುರಿಸಿರಬಹುದು?

ಅನುಕಂಪವಿದೆ ಸರಿ! ಆದರೆ, ಸತ್ಯ ಯಾವತ್ತೂ ಮುಚ್ಚಿಹೋಗಬಾರದಲ್ಲವೇ? ಆಕೆಯ ಸಾವಿಗೆ ಅನುಕಂಪವಿದೆ, ಅಯ್ಯೋ ಹೀಗಾಯಿತಲ್ಲ ಎಂಬ ಸಂಕಟವೂ ಇದೆ! ಆದರೆ, ಅನುಕಂಪದ ದೃಷ್ಟಿಯಲ್ಲಾಗುತ್ತಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಬೇಕಾದ ಕರ್ತವ್ಯವೂ ಇದೆ.

ಇಷ್ಟೆಲ್ಲದರ ಹಿಂದಿರುವ ಕಾಣದ ಕೈಗಳಾವುದು ಎಂಬುದೇ ಯಕ್ಷಪ್ರಶ್ನೆ!

ಅದೂ ಹೋಗಲಿ ಬಿಡಿ! ಒಬ್ಬ ರಾಬರ್ಟ್ ರೊಜಾರಿಯೋ ಎಂಬ ವ್ಯಕ್ತಿ ಪೋಸ್ಟ್ ಕಾರ್ಡ್ ನ್ಯೂಸ್ ನ ಒಬ್ಬ ಸದಸ್ಯರಿಗೆ ಸಂದೇಶ ಕಳುಹಿಸುತ್ತಾರೆ, ಆಳ್ವಾಸ್ ಬಗ್ಗೆ ಯಾಕೆ ಬರೆದಿಲ್ಲವೆಂದು. ಸತ್ಯಾಸತ್ಯತೆ ಅರಿಯದೇ ಯಾವ ವಿಷಯವನ್ನೂ ಸುಖಾಸುಮ್ಮನೆ ಹಾಕುವುದಿಲ್ಲವೆಂದಾಗ, ‘ಇವತ್ತಿನ ದಿನ ಟಿವಿ ನೋಡಿ, ಕಾವ್ಯಾಳ ಹೆತ್ತವರ ಜೊತೆ ಪ್ರತಿ ಮಾಧ್ಯಮದಲ್ಲಿಯೂ ಹೋಗುತ್ತಿದ‌್ದೇನೆ.’ ಎಂದ ಅವನು ಹೇಳಿದಂತೆ ಮಾಡಿದನಾದರೂ ಕೂಡ ಅವನ ಉದ್ದೇಶ ಎಂಬುದೆಂದೇ ತಿಳಿಯದ ಹಾಗಾಯ್ತು. ಕಾವ್ಯಾಳ ಪೋಸ್ಟ್ ಮಾರ್ಟಮ್ ನಡೆಯುವಾಗ, ಅಂತ್ಯ ಸಂಸ್ಕಾರ ಮಾಡುವಾಗ, ಅದರ ನಂತರವೂ ಸುಮ್ಮನಿದ್ದ ಕಾವ್ಯಾಳ ಹೆತ್ತವರು ಇದ್ದಕ್ಕಿದ್ದಂತೆ ಎದ್ದು ಬಿದ್ದು ರೋಜಾರಿಯೋ ಜೊತೆ ಏಕಾಏಕಿ ಮಾಧ್ಯಮದ ಮುಂದೆ ನಿಲ್ಲಲು ಕಾರಣ?

ಇಡೀ ದಕ್ಷಿಣ ಕನ್ನಡದಲ್ಲಿ ಕ್ರೈಸ್ತ ಮಿಷನರಿಗಳು ನಡೆಸುತ್ತಿರುವ ವಿದ್ಯಾಸಂಸ್ಥೆಗೆದುರಾಗಿ ಪ್ರಬಲವಾಗಿ ಬೆಳೆದ ಆಳ್ವಾಸ್ ಗೆ ಅದೇ ಮುಳ್ಳಾಯಿತೇ?!

ಯಾವತ್ತೂ ಇಲ್ಲದಿದ್ದ ಈ ರೋಜಾರಿಯೋ ಈ ವಿಷಯವೊಂದನ್ನೇ ಕೇಂದ್ರೀಕರಿಸಿ ಆಳ್ವಾಸ್ ಸಂಸ್ಥೆಯ ಗೌರವವನ್ನಡಗಿಸಲು ಮಾಡಿದ ಸಂಚೇ?

ಬಿಡಿ! ರಾಜಕೀಯದ ಪಿತೂರಿ ಶಾಮೀಲೆನ್ನುವುದು ಪ್ರತಿ ಹಿಂದುವಿಗೂ ಮೇಲ್ನೋಟಕ್ಕೆಯೇ ಕಾಣುವ ಸತ್ಯ! ರಾಜಕೀಯದಲ್ಲಿ ಅಮರ್ ನಾಥ್ ಶೆಟ್ಟಿ ಹಾಗೂ ಅಭಯ್ ಚಂದ್ರ ಜೈನ್ ರವರಿಗೆ ದೊಡ್ಡ ಹೆಸರಿದೆ. ಆದರೆ ಆ ಇಬ್ಬರೂ ಕೂಡ ಈ ಸಲದ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದಾಗ ಬಿಜೆಪಿಯ ನಾಯಕರು ಮೋಹನ್ ಆಳ್ವರನ್ನು ಸಂಪರ್ಕಿಸಿದ್ದು ನಿಜವಾದರೂ ಮೋಹನ್ ಆಳ್ವರು ಖಡಾಖಂಡಿತವಾಗಿಯೇ ತಿರಸ್ಕರಿಸಿದರು. ಆದರೆ, ಅದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲೆತ್ನಿಸುತ್ತಿರುವ ಇವಾನ್ ಡಿಸೋಜಾ ರವರು ಮೋಹನ್ ಆಳ್ವ ಸ್ಪರ್ಧಿಸಿದರೆ ತಮಗೆಲ್ಲಿ ರಾಜಕೀಯ ಕನಸಾಗಿಯೇ ಉಳಿದುಬಿಡುವುದೆಂದು ತಿಳಿದರೇ?

ದಕ್ಷಿಣ ಕನ್ನಡದ ಹಿಂದೂಗಳ ಒಗ್ಗಟ್ಟು ಅದೆಷ್ಟೋ ವರ್ಷಗಳಿಂದಲೂ ಇದೆ. ಒಗ್ಗಟ್ಟಿನ ಪ್ರಾಬಲ್ಯ ಮುರಿಯಲು ಇದೇ ವಿಷಯವನ್ನಿಟ್ಟುಕೊಂಡು ‘ಮಂಗಳೂರು ಬಿಲ್ಲವಾಸ್’ ಎಂಬ ಹೊಸದೊಂದು ಸಂಘ ಕಟ್ಟಿ, ಬಂಟ್ಸ್ v/s ಬಿಲ್ಲವ ಎಂಬ ಆಂದೋಲನ ಶುರು ಹಚ್ಚಿ ಒಡೆದು ಆಳುವ ನೀತಿಗೆ ‘ಸಲಾಮ್’ ಹೊಡೆದು ಹಿಂದೂಗಳ ಒಗ್ಗಟ್ಟೊಡೆಯಲು ನೋಡಿದರಾ?

ಆಳ್ವಾಸ್ ಕಾಲೇಜಿನ ದೈಹಿಕ ಶಿಕ್ಷಕರು ಪ್ರಶಾಂತ್ ಪೂಜಾರಿ ಬಿಲ್ಲವರೇ ಆಗಿದ್ದರಿಂದ ಈ ಒಡೆದು ಆಳುವ ಕುತಂತ್ರ ಅಂದುಕೊಂಡಷ್ಟು ಯಶಸ್ವಿಯಾಗಲಿಲ್ಲವೆಂಬುದೇ ಮೋಹನ್ ಆಳ್ವರನ್ನು ಟಾರ್ಗೆಟ್ ಮಾಡಿದ್ದೇ?

ಕಾಂಗ್ರೆಸ್ ನ ಈ ನೀತಿ ಉತ್ತರ ಕರ್ನಾಟಕದ ಲಿಂಗಾಯತರ ತಲೆಕೆಡಿಸಿದ್ದು ಸಾಲದೇ ಈಗ ದಕ್ಷಿಣ ಕನ್ನಡದ ಹಿಂದೂಗಳ ಜೊತೆ ಆಟವಾಡಲು ನಿಂತಿದೆಯೇ? ಈ ಸಲದ ಚುನಾವಣೆಯಲ್ಲಿ ತಾ ಗೆಲ್ಲುವುದೇ ಇಲ್ಲವೆಂದು ಅರಿವಾದ ರಾಜ್ಯ ಸರಕಾರಕ್ಕೆ ಇದೊಂದು ವಿಷಯ ಸುಲಭವಾಗಿ ದಕ್ಕಿತೇ?

ಈ ಸಾವಾದ ಮೂರು ದಿನದ ನಂತರ ಫಾದರ್ ಮುಲ್ಲರ್ ಎಜುಕೇಶನಲ್ ಟ್ರಸ್ಟ್ ನ ಹಾಸ್ಟೆಲ್ಲಿನಲ್ಲಿ ಪ್ರಸಾದ್.ಎಚ್.ಕೆ ಎಂಬುವ ಹುಡುಗ ಆತ್ಮಹತ್ಯೆ ಮಾಡಿಕೊಂಡದ್ದು ಎಲ್ಲಿಯಾದರೂ ಸುದ್ದಿಯಾಯಿತೇ? ಆತ ವೈದ್ಯಕೀಯ ವಿದ್ಯಾರ್ಥಿ! ಯಾವ ಮಾಧ್ಯಮದವರೂ ವಿಷ ಕಾರಲಿಲ್ಲ. ಯಾವ ಪ್ರಗತಿಪರ ಚೇಲಾಗಳೂ ಜಸ್ಟೀಸ್ ಎಂದು ಬೊಬ್ಬೆ ಹಾಕಲಿಲ್ಲ. ಕಾರಣ, ಅದೊಂದು ಕ್ರೈಸ್ತ ಮಿಷನರಿಯ ಆಳ್ವಿಕೆಗೊಳಪಟ್ಟ ಸಂಸ್ಥೆ!

ದೇರಳಕಟ್ಟೆಯ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವಾದಾಗ ಯಾವ ಉಗ್ರಪ್ಪನೂ ಬರಲಿಲ್ಲ. ಯಾವ ರಾಜಕಾರಣಿಯೂ ಮಾತನಾಡಲಿಲ್ಲ. ಆ ಸಾವು ಸುದ್ದಿಯಾಗಲೂ ಇಲ್ಲ. ಕಾರಣ?

ಪುತ್ತೂರಿನ ಸೌಮ್ಯಾ ಭಟ್, ತೀರ್ಥಹಳ್ಳಿಯ ನಂದಿತಾ.. ಇನ್ನೂ ಅದೆಷ್ಟೋ ಹೆಣ್ಣು ಮಕ್ಕಳು ಅತ್ಯಾಚಾರಕ್ಕೀಡಾದರು.. ಉಹೂಂ! ಯಾರೊಬ್ಬರೂ ಧ್ವನಿ ಎತ್ತಲಿಲ್ಲ! ಹಿಂದೂ ಸಂಘಟನೆಗಳೊಂದನ್ನು ಬಿಟ್ಟು. ಕಾರಣ, ಅತ್ಯಾಚಾರಿಗಳು ಮುಸಲ್ಮಾನರೆಂದೇ?

ಸೂತಕದ ಮನೆಯಲ್ಲಿ ನಡೆಯುತ್ತಿರುವ ರಾಜಕೀಯವನ್ನು ಮಾಧ್ಯಮದವರು ಮರೆಮಾಚುತ್ತಿರುವುದೇಕೆ?

 

ಯಾರೆಂದುಕೊಂಡಿರಿ ಆಳ್ವರನ್ನು?

ಮೂಡುಬಿದಿರೆಯ ಆಳ್ವರಿಗೆ ಮಕ್ಕಳ ಬಗ್ಗೆ ಇರುವ ಕಾಳಜಿಯನ್ನು ಬಹು ಹತ್ತಿರದಿಂದ ನೋಡಿದ್ದೇನೆ. ಪ್ರತ್ಯಕ್ಷವಾಗಿ ನೋಡಬೇಕು ಅನ್ನಿಸಿದರೆ ಸಂಜೆ ಆಳ್ವಾಸ್ ಕ್ಯಾಂಪಸ್ ಗೆ ಹೋಗಿ ನೋಡಿ. ಅಲ್ಲಿ ಎದುರಿಗೆ ಮೆಡಿಸಿನ್ ಕಿಟ್ ಇಟ್ಟುಕೊಂಡು ಅಲ್ಲಿ ಬರುವ ಎಲ್ಲಮಕ್ಕಳ ಜೊತೆ ಮಕ್ಕಳ ಹಾಗೆ ಮಾತನಾಡುತ್ತಾ ಅವರ ಸುಖಕಷ್ಟ ವಿಚಾರಿಸುತ್ತಾ ಚಾಕೊಲೇಟ್ ಕೊಟ್ಟು ಅವರ ಜೊತೆ ಬೆರೆಯುವ ಮೋಹನ ಆಳ್ವ ಕಾಣಿಸುತ್ತಾರೆ.

ತನ್ನ ಅದ್ಭುತವಾದ ಸಾಂಸ್ಕೃತಿಕ ತಂಡವನ್ನು ಕಟ್ಟಿಕೊಂಡು ಕರ್ನಾಟಕದ ಮೂಲೆ ಮೂಲೆಗಳಲ್ಲಿ,ಮುಂಬೈ,ಪುನಾ,ದುಬೈ ಎಲ್ಲ ಕಡೆ ಹೋದಾಗಲೂ  ಆಳ್ವರು ಅಲ್ಲಿ ಮಕ್ಕಳಿಗೆ ಏನೂ ತೊಂದರೆಯಾಗದಂತೆ ಹೆತ್ತವರಿಗಿಂತ ಹೆಚ್ಚಾಗಿ ಕಾಳಜಿ ತೋರಿಸಿದ್ದನ್ನು ಕಂಡಿದ್ದೇವೆ.

ಕಾಲೇಜಿಗೆ ಬಂದ ಆರಂಭದಲ್ಲಿ ಮಕ್ಕಳು ಮನೆಯ ನೆನಪಲ್ಲಿ ಖಿನ್ನತೆಗೆ ಒಳಗಾಗುತ್ತಾರೆ ಎನ್ನುದನ್ನು ಅರ್ಥ ಮಾಡಿಕೊಂಡು ಅವರಿಗಾಗಿ ದೇಶ ವಿದೇಶದ ಕಲಾವಿದರನ್ನು ಕರೆಸಿ ಕಾರ್ಯಕ್ರಮ ಮಾಡಿ ಮಕ್ಕಳ ಮನಸ್ಸು ಖುಷಿಯಾಗುವ ಹಾಗೆ ಮಾಡಿದ್ದು ಮಾಡುತ್ತಿರುವುದು ನೋಡಿದ್ದೇವೆ.

ಮಕ್ಕಳಿಗೆ ಸಮಸ್ಯೆಯಾದರೆ ಉಪನ್ಯಾಸಕರು, ಪ್ರಾಂಶುಪಾಲರು ಅಂತಹ ಮಕ್ಕಳ ಕೌನ್ಸಲಿಂಗ್ ಮಾಡಿ ಪರಿಹಾರ ಹೇಳುತ್ತಿರುವುದನ್ನು ನೋಡಿದ್ದೇನೆ. ಕ್ರೀಡೆ,ಸಾಹಿತ್ಯ,ಸಂಸ್ಕೃತಿ, ಕನ್ನಡದ ಉಳಿವಿಗಾಗಿ ಒಬ್ಬ ವ್ಯಕ್ತಿ ಅದರಲ್ಲೂ ಖಾಸಗಿ ಶಿಕ್ಷಣ ಸಂಸ್ಥೆ ನಡೆಸುವ ವ್ಯಕ್ತಿ ತನ್ನ ಜೀವನಪೂರ್ತಿ ಶ್ರಮ ಪಟ್ಟಿದ್ದು ಇದ್ದರೆ ಅದು ಮೋಹನ ಆಳ್ವರು ಮಾತ್ರ. ನಾನು ಆಳ್ವರ ಸಂಸ್ಥೆಯಲ್ಲಿ ನಾಲ್ಕು ವರ್ಷ ಇದ್ದವನು ಹೆಚ್ಚಿನ ಕ್ರೀಡಾ ವಿದ್ಯಾರ್ಥಿಗಳಿಗೆ ಪಾಠ ಮಾಡಿದವನು,ಅವರ ಜೊತೆ ಆತ್ಮೀಯ ಒಡನಾಟ ಇದ್ದವನು. ಆದರೆ ಅವರ್ಯಾರೂ ಕೂಡಾ 4-15ಕ್ಕೆ ಪ್ರಾಕ್ಟೀಸ್ ಗೆ ಹೋದವರಲ್ಲ,ಹೋಗುವಂತೆ ಯಾರೂ ಹೇಳುವುದು ಇಲ್ಲ ಅದೂ ಒಬ್ಬೊಬ್ಬರೆ ಗ್ರೌಂಡ್ ಗೆ ಹೋಗುವುದಿಲ್ಲ.

ಆಳ್ವಾಸ್ ನ ಬಸ್ ನಲ್ಲಿ ಹೋಗಿ ಅದರಲ್ಲೆ ವಾಪಾಸು ಬರುವಾಗ 4-15ಕ್ಕೆ ಕರೆದಿರಲು ಸಾಧ್ಯವೇ ಇಲ್ಲ.

ನಾ ನೋಡಿದ ಹಾಗೆ ಹದಿಹರೆಯದ ಮಕ್ಕಳು ಚಂಚಲ ಮನಸ್ಥಿತಿಯವರು. ಅವರ ಸಿಟ್ಟು,ಕೋಪ,ಪ್ರೀತಿ ಎಲ್ಲವೂ ಆ ಕ್ಷಣಕ್ಕೆ ಅತಿರೇಕಕ್ಕೆ ಹೋಗುತ್ತದೆ.

ಬಹುಶಃ ಅಂತಹ ಯಾವುದೊ ವಿಷಗಳಿಗೆಯಲ್ಲಿ ಆ ಹುಡುಗಿ ಕೆಟ್ಟ ನಿರ್ಧಾರ ಮಾಡಿರಬಹುದು. ಅವಳನ್ನು ಆ ಸಂದರ್ಭದಲ್ಲಿ ಹಾಸ್ಟೆಲ್ ನಲ್ಲಿ ಇಟ್ಟುಕೊಂಡರೆ ಅದರಷ್ಟು ಅಪಾಯಕಾರಿ ಬೇರೆ ಇಲ್ಲ. ಉಳಿದ ಸಾವಿರಾರು ಮಕ್ಕಳು ಅವಳನ್ನು ನೋಡಲು ಬಂದು ಅವರು ಆಘಾತ ಕ್ಕೆ ಒಳಗಾಗಿ ಸಂಪೂರ್ಣ ವ್ಯವಸ್ಥೆಯೇ ಗೊಂದಲದ ಗೂಡಾಗುತ್ತದೆಂಬ ಕಾರಣದಿಂದ ಅವಳ ಶವವನ್ನು ಅಲ್ಲಿಂದ ಸಾಗಿಸಿದ್ದಾರೆ ಅಷ್ಟೇ.

ಸತ್ತಿದ್ದು ಯಾರದ್ದೋ ಮಗು ಡೋಂಟ್ ಕೇರ್ ಅನ್ನೊಕೆ ಮೋಹನ ಆಳ್ವರು ಕರುಳಿಲ್ಲದವರಲ್ಲ.
ಅವರಿಗೂ ಕರುಣೆ ಇದೆ, ಸತ್ತವಳ ಬಗ್ಗೆ ನೋವಿದೆ, 30ಸಾವಿರ ಮಕ್ಕಳನ್ನು ಸಾಕುವ, ಸುಸಂಸ್ಕೃತ ರನ್ನಾಗಿ ಮಾಡುವ ಮಹತ್ತರ ಜವಾಬ್ದಾರಿ ಅವರ ಮೇಲೆ ಇದೆ. 256 ಕೋಟಿ ಸಾಲವಿದೆ! ಅಷ್ಟಾದರೂ 600 ಜನರಿಗೆ ಉಚಿತ ಶಿಕ್ಷಣ ಆಹಾರ ವಸತಿಯ ವ್ಯವಸ್ಥೆ ಇದೆ!

ಅಂತಹವರ ಮೇಲೆ ಕರ್ನಾಟಕದಲ್ಲಿ ಶಿಕ್ಷಣ,ಸಾಂಸ್ಕೃತಿಕ ವಾಗಿ ಒಂದು ಬಗೆಯ ಆಂದೋಲನವನ್ನೇ ಹುಟ್ಟುಹಾಕಿದವರ ಮೇಲೆ ಈ ರೀತಿ ಗೂಬೆ ಕೂರಿಸುವುದು ಸರಿಯಲ್ಲ.
ನಿಷ್ಪಕ್ಷಪಾತ ತನಿಖೆಯಾಗಲಿ ಯಾವ ತನಿಖೆಗೂ ತಾನು ಸಿದ್ದ ಎಂದಮೇಲೂ ಅವರನ್ನು ಮತ್ತೆ ಮತ್ತೆ ಮಾನಸಿಕವಾಗಿ ಘಾಸಿಗೊಳಿಸುವುದು ಸರಿಯಲ್ಲ ಅಲ್ಲವೇ?

ಇನ್ನಾದರೂ ಸತ್ಯಾಸತ್ಯತೆ ತಿಳಿದುಕೊಂಡು ಹಿಂದೂಗಳು ಎಚ್ಚೆತ್ತರೆ ಬಹುಷಃ ಹಿಂದೂ ಸಮಾಜ ಉಳಿದೀತು, ಇಲ್ಲವಾದರೆ ಒಡೆದು ಆಳುವ ನೀತಿಗೆ ಶಾಶ್ವತವಾಗಿಯೇ ನಲುಗಿ ಇಬ್ಭಾಗವಾಗುತ್ತದೆ.

– ಶೇಖರ್ ಪೂಜಾರಿ ದರಗುಡ್ಡೆ

Tags

Related Articles

Close