ಪ್ರಚಲಿತ

ಕೇರಳದ ಮುಂಬರುವ ಚುನಾವಣೆಯಲ್ಲಿ ಕೇರಳದಲ್ಲಿ ಪಿಣರಾಯಿ ವಿಜಯ್ ನನ್ನು ಮೆಟ್ಟಿ ನಿಲ್ಲಲಿದೆಯೇ ಭಾರತೀಯ ಜನತಾ ಪಕ್ಷ?!

ಕೇರಳ… ದೇವರ ನಾಡು ಎಂದು ಪ್ರಸಿದ್ಧಿ ಪೆಡೆದಿರುವ ರಾಜ್ಯ. ಭೂಲೋಖದೊಡೆಯ, ಅಖಿಲಾಂಡ ನಾಯಕ, ಕೋಟಿ ಕೋಟಿ ಭಕ್ತರ ಆರಾಧ್ಯ ದೇವರು, ಹರಿ-ಹರ ಸುತ, ಅಖಂಡ ಬ್ರಹ್ಮಚಾರಿ, ಶಬರಿ ಮಲೆ ಸ್ವಾಮಿ ಅಯ್ಯಪ್ಪ ಸಹಿತ ಹಲವಾರು ಹಿಂದೂ ದೇವರುಗಳು ನೆಲೆಯಾಗಿರುವ ರಾಜ್ಯ ಕೇರಳ…

ದೇಶದ ನಾನಾ ಕಡೆಗಳಿಂದ ಕೋಟ್ಯಾಂತರ ಭಕ್ತರು ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಮೊರೆಯಿಡುತ್ತಾ, 48 ದಿನಗಳ ಕಠಿಣ ವೃತವನ್ನು ಕೈಗೊಂಡು ಅಯ್ಯಪ್ಪನ ಸನ್ನಿಧಾನಕ್ಕೆ ಬಂದು ಪುನೀತರಾಗುತ್ತಾರೆ. ಕೇವಲ ಶಬರಿ ಮಲೆ ಮಾತ್ರವಲ್ಲದೆ, ಗುರುವಾಯೂರ್, ಮಲಯತೂರ್, ಹಾಗೂ ಇತ್ತೀಚೆಗೆ ಭಾರೀ ಸುದ್ಧಿಯಲ್ಲಿರುವ ಅನಂತ ಪದ್ಮನಾಭನ ದೇವಸ್ಥಾನ ಇರುವುದೂ ಕೇರಳದಲ್ಲಿ. ಕೇರಳದಲ್ಲಿರುವ ದೇವಸ್ಥಾನಗಳು ಒಂದೆರಡಲ್ಲ. ಅನೇಕ ದೇವಸ್ಥಾನಗಳು ಭಾರತೀಯ ಸಂಸ್ಕøತಿಯ, ಹಿಂದೂಗಳ ಪವಿತ್ರ ಕ್ಷೇತ್ರವಾಗಿ ಖ್ಯಾತಿಯನ್ನು ಪಡೆದಿದೆ.

ಹಿಂದೂ ಸಂಸ್ಕøತಿಯ ಕೊಡಿಯಾಟ್ಟಮ್, ಕಥಕ್ಕಳಿ, ಕೂತು ಸಹಿತ ಅನೇಕ ನೃತ್ಯಗಳನ್ನು ಪ್ರತಿಬಿಂಬಿಸುವ ಕಲೆಗಳು ಕೇರಳದಲ್ಲಿ ಕಾಣಸಿಗುತ್ತವೆ. ಕೇರಳದಲ್ಲಿ
ದೈವಭಕ್ತಿಯ ಪ್ರಭಾವ ಎಷ್ಟಿದೆಯೆಂದರೆ, ಅಲ್ಲಿರುವ ದೇವಸ್ಥಾನಗಳಿಗೆ ಪ್ರವೇಶಿಸಬೇಕೆಂದರೆ ಭಾರತೀಯ ಸಂಸ್ಕøತಿಯನ್ನು ಬಿಂಬಿಸುವ ಉಡುಪುಗಳನ್ನು ಧರಿಸುವುದು ಕಡ್ಡಾಯ. ಅದು ಅಲ್ಲಿನ ಸಂಸ್ಕøತಿಯ ಪ್ರತೀಕತೆಯಾಗಿದೆ.

ಇದು ಕೇರಳ ರಾಜ್ಯದ ಭವ್ಯ ಮನೋಹರ ವರ್ಣನೆಗಳು. ಆದರೆ ಇಂತಹ ದೇವರ ನಾಡು ಎಂದು ಕರೆದುಕೊಳ್ಳುವ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳು ಮಾತ್ರ ಅದೇ ದೈಭಕ್ತರ ಪಾಲಿಗೆ ಕಣ್ಣೀರ ಧಾರೆಯನ್ನೇ ಹರಿಸಿಬಿಡುವಂತೆ ಮಾಡಿದೆ. ಅದ್ಯಾಕೋ ಗೊತ್ತಿಲ್ಲ. ಕೇರಳದಲ್ಲಿ ನಡೆಯುತ್ತಿರುವ ಬಲಪಂಥೀಯ, ಎಡಪಂಥೀಯ ಯುದ್ಧಗಳು ನಾಡಿನ ಜನತೆಯನ್ನು ಬೆಚ್ಚಿ ಬೀಳಿಸಿವೆ. ಸಿಪಿಎಂ ರಕ್ಕಸರ ಅಟ್ಟಹಾಸ ಮುಗಿಲು ಮುಟ್ಟಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಷ ಧರಿಸಿ ಜೈಶ್ರೀ ರಾಮ್ ಎಂದರೆ ಸಾಕು, ಮತ್ತೆ ಅಲ್ಲಿ ಬದುಕುವುದೇ ಕಷ್ಟ.

ಈಗಲಂತೂ ಧರ್ಮ ಯುಧ್ದದ ಜೊತೆಗೆ ರಾಜಕೀಯ ಯುದ್ಧಗಳೂ ಆರಂಭವಾಗಿದೆ. ಸಿಪಿಎಂ ಎಂಬ ಎಡಪಂಥೀಯ ನಿಲುವನ್ನು ಹೊಂದಿರುವ ಪಕ್ಷ ದಿನನಿತ್ಯ ಹಿಂದೂ ಹಾಗೂ, ಬಿಜೆಪಿ ಕಾರ್ಯಕರ್ತರ ಕೊಲೆಗಳನ್ನು ನಡೆಸುತ್ತಾ ಬಂದಿದೆ. ಕೇಸರಿ ಶಾಲು ಧರಿಸಿದರೆ ಸಾಕು ಅವರ ಮೇಲೆ ಕಣ್ಣಿಡುವ ಕೆಂಪು ಉಗ್ರರ ಬೆಂಬಲಿಗರು ಅವರನ್ನು ಕೊಲ್ಲುವವರೆಗೆ ತಮ್ಮ ದಾಹವನ್ನು ತೀರಿಸುವುದಿಲ್ಲ. ಅಷ್ಟೊಂದು ಕಠೋರ ನಿಲುವನ್ನು ಹೊಂದಿದೆ ಅಲ್ಲಿನ ಸಿಪಿಎಂ ಪಕ್ಷ.

ಪ್ರಸ್ತುತ ಕೇರಳ ರಾಜ್ಯದಲ್ಲಿ ರಾಜ್ಯವನ್ನಾಳುವ ಪಕ್ಷವೂ ಸಿಪಿಎಂ ಆಗಿದೆ. ಸಿಪಿಎಂ ಉಗ್ರರು ನಡೆಸುವ ಕೊಲೆಗಳಿಗೆ ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್
ಸದಾ ಬೆಂಬಲವನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಕಾನೂನು ಸುವ್ಯವಸ್ಥೆನ್ನು ಕಾಪಾಡಿಕೊಳ್ಳುವಲ್ಲಿ ವಿಫಲರಾಗಿರುವ ಸಿಎಂ ಪಿಣರಾಯಿ ವಿಜಯನ್, ಬಲಪಂಥೀಯರ ಕೊಲೆಗಳಿಗೆ ನೇರ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ. ಈ ಕಾರಣಕ್ಕಾಗಿಯೇ ಕಳೆದ ಬಾರಿ ಮಂಗಳೂರಿಗೆ ಆಗಮಿಸಿದ್ದ ಪಿಣರಾಯಿ ವಿಜಯನ್‍ಗೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು ತೀವ್ರ ಪ್ರತಿಭಟನೆಯನ್ನು ನಡೆಸಿದ್ದರು. ಈ ಮೂಲಕ ಕೇರಳದಲ್ಲಿ ಸಿಪಿಎಂ ನಡೆಸುತ್ತಿರುವ ರಕ್ತದಾಟಕ್ಕೆ ತಕ್ಕ ಪಾಠ ಕಳಿಸಿದ್ದರು.

ತಾನೂ ಒಬ್ಬ ಸಿಪಿಎಂ ಕಾರ್ಯಕರ್ತನಾಗಿದ್ದುಕೊಂಡು, ಸಿಪಿಎಂ ನ ಕೆಲವು ನೀತಿಗಳನ್ನು, ಹಿಂಸಾತ್ಮಕ ಕ್ರಮಗಳನ್ನು ಧಿಕ್ಕರಿಸಿ, ಪಕ್ಷ ತೊರೆದ ಮಾತ್ರಕ್ಕೆ ಸದಾನಂದ ಮಾಸ್ಟರ್‍ರವರ ಎರಡೂ ಕಾಲುಗಳನ್ನು ತುಂಡು ತುಂಡಾಗಿ ಕತ್ತರಿಸಿ ಹಾಕಿದ್ದರು ಅದೇ ಸಿಪಿಎಂ ಉಗ್ರರು.

ತನ್ನ ರಾಜಕೀಯ ನಿಲುವಿಗೆ ಯಾರಾದರು ವಿರುದ್ಧ ನಿಂತಿದ್ದೇ ಆದರೆ ಅವರನ್ನು ಹಿಂಸಿಸುವ ಪ್ರವೃತ್ತಿಯನ್ನು ನಡೆಸಿಕೊಂಡು ಬಂದಿದೆ ಕೇರಳದ ಸಿಪಿಎಂ ಸರ್ಕಾರ.
ಕೇರಳದಲ್ಲಿ ರಾಜಕೀಯ ನಡೆಸುವುದೆಂದರೆ, ಅದರಲ್ಲೂ ಸಿಪಿಎಂ ವಿರುದ್ಧ ಹೋರಾಡುವುದೆಂದರೆ ತನ್ನ ಜೀವವನ್ನೇ ಮುಡಿಪಾಗಿಟ್ಟು, ಗಡಿಯಲ್ಲಿ ಹೋರಾಡಿದ ಹಾಗೆ. ಅಷ್ಟೊಂದು ಭೀಕರತೆ ಕೇರಳ ರಾಜ್ಯದ ರಾಜಕೀಯ ಸ್ಥಿತಿ.

ಪಿಣರಾಯಿ ವಿಜಯನ್ ಮುಖ್ಯಮಂತ್ರಿ ಅವಧಿಯಲ್ಲಿ ನಡೆಡ ಕೊಲೆಗಳೆಷ್ಟು ಗೊತ್ತಾ..?

ಕೇರಳ ರಾಜ್ಯದಲ್ಲಿ ಸಿಪಿಎಂ, ಕಾಂಗ್ರೆಸ್ ಪಕ್ಷ ಹೊರತು ಪಡಿಸಿ ಬಲಪಂಥೀಯ ಪಕ್ಷಗಳಿಗೆ ಅವಕಾಶ ಸಿಗಲೇ ಇಲ್ಲ. ಕಳೆದ ಬಾರಿ ಕೂಡಾ ಸಿಪಿಎಂ ನೇತೃತ್ವದ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದಿದ್ದು, ಪಿಣರಾಯಿ ವಿಜಯನ್ ಮುಖ್ಯಮಂತ್ರಿಯಾದರು. ನಂತರ ನಡೆದದ್ದೇ ಬಲಪಂಥೀಯ ಕಾರ್ಯಕರ್ತರ ಮಾರಣ ಹೋಮ. ತನ್ನ ಪಕ್ಷದ ವಿರುದ್ಧ ಮಾತೆತ್ತಿದರೆ ಸಾಕು ಅವರನ್ನು ಕೊಂದು ಹಾಕುತ್ತಿರುವ ಸಿಪಿಎಂ ಅಟ್ಟಹಾಸ ಹೇಳತೀರದಷ್ಟಿದೆ. ಪಿಣರಾಯಿ ವಿಜಯನ್ ಮುಖ್ಯಮಂತ್ರಿಯಾದ ನಂತರ ಕೇರಳದಲ್ಲಿ ಕೋಮುಧ್ವೇಷ ಹಾಗೂ ರಾಜಕೀಯ ಧ್ವೇಷಕ್ಕಾಗಿ ಬರೋಬ್ಬರಿ 120 ಕೊಲೆಗಳಾಗಿವೆ ಎಂದರೆ ನಂಬಲೇಬೇಕು. ತನ್ನ ರಾಜಕೀಯ ಅಸ್ತಿತ್ವಕ್ಕೋಸ್ಕರ ವಿರೋಧ ಪಕ್ಷದವರನ್ನು ಕೊಲೆ ಮಾಡಿಸುವ ಸಿಪಿಎಂ ನ ರಾಜಕೀಯ ಕೊಲೆಗಳಿಗೆ ಕೊನೆಯೇ ಇಲ್ಲದಂತಾಗಿದೆ…

ಲಗ್ಗೆಯಿಟ್ಟಿದೆ ಕೇಸರಿ ಪಡೆ…

ಹೌದು… ತನ್ನ ಪರಿವಾರದ ಕಾರ್ಯಕರ್ತರನ್ನು ಧಮನಿಸುತ್ತಲೇ ಬಂದಿರುವ ಕೇರಳದ ಸಿಪಿಎಂ ಸರ್ಕಾರದ ವಿರುದ್ಧ ತೊಡೆ ತಟ್ಟಲು ಕೇಸರಿ ಪಡೆ ಸಜ್ಜಾಗಿ ನಿಂತಿದೆ. ಒಂದೇ ಒಂದು ಸೀಟುಗಳನ್ನೂ ಪಡೆಯದ ಕೇರಳದ ಬಿಜೆಪಿ ತನ್ನ ಪ್ರವೇಶವನ್ನು ಪಡೆಯಲು ತುಂಬಾನೆ ಕಷ್ಟಕರವಾಗಿತ್ತು. ಆದರೆ ಕಳೆದ ಕೆಲವು ಚುನಾವಣೆಯಲ್ಲಿ ತನ್ನ ಪಕ್ಷ ಖಾತತೆಯನ್ನ ತೆರೆಯುವ ಮೂಲಕ ಭರ್ಜರಿಯಾಗಿಯೇ ಪ್ರವೇಶ ಪಡೆದಿತ್ತು ಭಾರತೀಯ ಜನತಾ ಪಕ್ಷ.

ನಂತರ ಶುರುವಾಗಿದ್ದೇ ರಾಜಕೀಯ ಯುದ್ಧಗಳು. ಯಾವಾಗ ಬಿಜೆಪಿ ಅನ್ನುವ ಕೇಸರಿ ಪಕ್ಷ, ದೇವರ ನಾಡಿನಲ್ಲಿ ಬೆಳೆಯಲು ಆರಂಭಿಸಿತೋ ಅಂದಿನಿಂದ ಕೇರಳದ
ಸಿಪಿಎಂ ಪಕ್ಷಕ್ಕೆ ನಡುಕ ಹುಟ್ಟಿಸಿತು. ಹಿಂಸಾತ್ಮಕ ಚಟುವಟಿಕೆಗಳು ಮುಗಿಲು ಮುಟ್ಟಿದ್ದವು. ಯಾವ ಹಿಂಸೆಗಳಿಗೂ ನ್ಯಾಯ ಸಿಗಲೇ ಇಲ್ಲ. ಕಾಂಗ್ರಸ್ ಪಕ್ಷವಂತೂ
ಮುಗ್ಗರಿಸಿ ಹೋಗಿತ್ತು.

ದೇವರ ನಾಡಿಗೆ ಎಂಟ್ರಿ ಕೊಟ್ಟಿದ್ದಾರೆ ರಾಜಕೀಯ ಚಾಣಾಕ್ಯ…!

ಕೇರಳದಲ್ಲಿ ಬಿಜೆಪಿಯನ್ನು ಶತಾಯ ಗತಾಯ ಅಧಿಕಾರಕ್ಕೆ ತರಲೇ ಬೇಕೆನ್ನುವ ಹಠಕ್ಕೆ ಬಿದ್ದಿರುವ ಕೇಸರಿ ಪಾಳಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಈಗ ರಾಜಕೀಯ ಚಾಣಾಕ್ಯ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭರ್ಜರಿಯಾಗಿಯೇ ಎಂಟ್ರಿ ಕೊಟ್ಟಿದ್ದಾರೆ. ಹಿಂದೂಗಳ ಸಾಲು ಸಾಲು ಹತ್ಯೆಗಳನ್ನು ರಾಜಕೀಯವಾಗಿ ಸೇಡು ತೀರಿಸುವುದರೊಂದಿಗೆ ಕೇರಳದಲ್ಲಿ ಕೇಸರಿ ಪತಾಕೆಯನ್ನು ಹಾರಿಸಲು ಸರ್ವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ತಮ್ಮ ಸಂಪೂರ್ಣ ರಾಜಕೀಯ ಸಾಮಥ್ರ್ಯವನ್ನು ಬಳಸಿಕೊಂಡು ಬಿಜೆಪಿಯನ್ನು ಸ್ಥಾಪಿಸಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರೆ ಶಾ…

ಕೇರಳದಲ್ಲಿ ಕಮಲವನ್ನು ಅರಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು. ಕೇರಳದ ಗಡಿಯಾಚೆಗಿರುವ
ಜಿಲ್ಲೆಯಾಗಿರುವ ಧಕ್ಷಿಣ-ಕನ್ನಡ ಜಿಲ್ಲೆಯ ಸಂಸದರಾಗಿ, ಭಾರತೀಯ ಜನತಾ ಪಕ್ಷದ ನೇತಾರನಾಗಿ, ಕರ್ನಾಟಕದಲ್ಲೇ ನಂಬರ್ ವನ್ ಸಂಸದ ಎಂದು ಹೆಗ್ಗಳಿಕೆಗೆ
ಪಾತ್ರರಾಗಿರುವ ನಳಿನ್ ಕುಮಾರ್ ಕಟೀಲು, ಕೇರಳದ ಪ್ರತಿ ರಾಜಕೀಯ ಬೆಳವಣಿಗೆಯಲ್ಲೂ ಅವರ ಪಾತ್ರ ಬಹಳಷ್ಟಿದೆ. ಕೇರಳ ರಾಜ್ಯದ ಉಸ್ತುವಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಿರುವ ನಳಿನ್ ಕುಮಾರ್ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯ ಮೇರೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಮಿತ್ ಶಾ ಸೂಚನೆಯಂತೆ ಕೇರಳದಲ್ಲಿ ಇತ್ತೀಚೆಗೆ ಜನರಕ್ಷಾ ಯಾತ್ರೆಯನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು. ಖುದ್ದು ಬಿಜೆಪಿ ಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರವರೇ ಕೇರಳಕ್ಕೆ ಆಗಮಿಸಿ ಯಾತ್ರೆಯಲ್ಲಿ ಪಾಲ್ಗೊಂಡು ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದರು. ಕೇರಳದಲ್ಲಿ ಕೊಲೆಯಾದ ಅನೇಕ ಯುವಕರ ಮನೆಗಳಿಗೆ ತೆರಳಿ “ನಿಮ್ಮೊಂದಿಗೆ ನಾವಿದ್ದೇವೆ” ಎಂದು ಧೈರ್ಯ ಹೇಳಿ ಬಂದಿದ್ದಾರೆ.

ಅಮಿತ್ ಶಾ, ನಳಿನ್ ಕುಮಾರ್ ಕಟೀಲು ಮಾತ್ರವಲ್ಲದೆ ಹಿಂದುತ್ವದ ಫೈರ್ ಬ್ರಾಂಡ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಾ ಕೇರಳ
ರಾಜ್ಯದ ರಾಜಕೀಯದಲ್ಲಿ ಪ್ರವೇಶ ಮಾಡುವ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೇರಿಸಿಯೇ ಸಿದ್ದ ಎಂದು ಪಣತೊಟ್ಟಿದ್ದಾರೆ. ದೇಶದ ಕಮಲ ಕಲಿಗಳೆಲ್ಲಾ ಕೇರಳ
ರಾಜ್ಯಕ್ಕೆ ಲಗ್ಗೆಯಿಟ್ಟು ಸಿಪಿಎಂ ಕೋಟೆಯನ್ನು ಪುಡಿ ಮಾಡಲು ಹೊರಟಿದ್ದಾರೆ…

ಒಟ್ನಲ್ಲಿ ಕೇರಳದಲ್ಲಿ ಕೇಸರಿ ಪಾಳಯದ ರಾಜಕೀಯ ಚಟುವಟಿಕೆ ಬಿರುಸಿನಲ್ಲಿದ್ದು ಮುಂದಿನ ದಿನಗಳಲ್ಲಿ ಸರ್ಕಾರ ರಚಿಸುವಲ್ಲಿ ಭಾರತೀಯ ಜನತಾ ಪಕ್ಷ ಪ್ರಮುಖ
ಪಾತ್ರ ವಹಿಸುವುದರಲ್ಲಿ ಸಂದೇಹವೇ ಇಲ್ಲ.

-ಸುನಿಲ್

Tags

Related Articles

Close