ಅಂಕಣಪ್ರಚಲಿತ

ಖುಷಿ ಸುದ್ದಿ: ಹೊಸವರ್ಷಕ್ಕೆ ಮೋದಿ ಸರ್ಕಾರದಿಂದ ಭರ್ಜರಿ ಉಡುಗೊರೆ!! ಒಂದು ಲೀಟರ್ ಪೆಟ್ರೋಲಿನ ಬೆಲೆ ಇಷ್ಟಾಗಬಹುದು?!!

ಹೊಸವರ್ಷಕ್ಕೆ ಕೇಂದ್ರ ಸರ್ಕಾರ ಭಾರತೀಯರಿಗೆ ಹೊಸ ಉಡುಗೊರೆ ನೀಡಲು ಸಿದ್ಧವಾಗಿದೆಯೆಂಬ ಸುದ್ದಿ ರಾಜಕೀಯ ಪಡಸಾಲೆಗಳಲ್ಲಿ, ಸುದ್ಧಿಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಮೋದಿ ಸರ್ಕಾರದಿಂದ ನೋಟ್ ಬ್ಯಾನ್ ನಂತಹ ಮಹತ್ವದ ನಿರ್ಣಯ ದೇಶದ ಕಪ್ಪುಕುಳಗಳಲ್ಲಿ ನಡುಕ ಹುಟ್ಟಿಸಿದ್ದಂತೂ ನಿಜ, ಕಪ್ಪು ಹಣ ಕೂಡಿಟ್ಟು ದೇಶದ ಆರ್ಥಿಕತೆಯನ್ನ ಬುಡಮೇಲು ಮಾಡಿದ್ದ ಕಪ್ಪು ಕುಳಗಳಿಗೆ ನೋಟ್ ಬ್ಯಾನ್ ಶಾಪವಾಗಿ ಪರಿಣಮಿಸಿತ್ತು.

ನೋಟ್ ಬ್ಯಾನ್ ನಂತರ ದೇಶದಲ್ಲಿ ಡಿಜಿಟಲ್ ಟ್ರಾನ್ಸ್ಯಾಕ್ಷನ್, ನಗದುರಹಿತ ವ್ಯವಹಾರ, ಆನಲೈನ್ ಪೇಮೆಂಟ್ ಹೀಗೆ ಅನೇಕ ಬದಲಾವಣೆಗಳಾಗಿ ದೇಶ ಕ್ಯಾಶಲೆಸ್ ಆಗುವತ್ತ ಹೆಜ್ಜೆ ಹಾಕುತ್ತಿದೆ.

ನೋಟ್ ಬ್ಯಾನ್ ನ ಈ ನಿರ್ಧಾರವನ್ನ ವಿಶ್ವದ ಅನೇಕ ರಾಷ್ಟ್ರಗಳು ಹಾಡಿ ಹೊಗಳಿವೆ, ಇದರ ಜೊತೆ ಜೊತೆಗೆ ಮೋದಿ ಸರ್ಕಾರದಿಂದ ಒಂದು ಒಂದು ಟ್ಯಾಕ್ಸ್ ಎಂಬ ಹೆಸರಿನಲ್ಲಿ ಜಿಎಸ್ಟಿ ಕೂಡ ಜಾರಿಗೆ ತಂದಿತ್ತು.

ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಟ್ಯಾಕ್ಸ್ ಸಿಸ್ಟಮ್ ಮೋದಿ ಸರ್ಕಾರ ಸಮರ್ಥವಾಗಿ ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿತ್ತು.

“ಮೈ ದೇಶ್ ನಹಿ ಮಿಟನೇ ದೂಂಗಾ(ದೇಶವನ್ನ ಅಳಿವಿನಂಚಿಗೆ ಹೋಗೋಕೆ ನಾನು ಬಿಡಲ್ಲ)” ಅಂತ ಹೇಳಿದ್ದ ನರೇಂದ್ರ ಮೋದಿ ದೇಶವನ್ನ ಸುಭೀಕ್ಷ ಮಾಡುವತ್ತ ತಮ್ಮ ಹೆಜ್ಜೆ ಹಾಕಿದ್ದಾರೆ.

ಆದರೆ ಮೋದಿಯ ಈ ಕಠಿಣ ನಿರ್ಧಾರಗಳ ಬಳಿಕ ವಿರೋಧ ಪಕ್ಷಗಳು ಮೋದಿ ಸರ್ಕಾರದ ವಿರುದ್ಧ ಸಿಡಿದೆದ್ದು ತಮ್ಮ ಚೇಲಾಗಳಿಂದ ಸೋಶಿಯಲ್ ಮೀಡಿಯಾಗಳಲ್ಲಿ ನೋಟಬ್ಯಾನ್, ಜಿಎಸ್ಟಿ ಕುರಿತಾಗಿ ಇಲ್ಲಸಲ್ಲದ ಸುದ್ದಿಗಳನ್ನೆಲ್ಲಾ ಹರಿಬಿಡಲಾಗಿತ್ತು.

ಆದರೂ ಜನ ಮೋದಿಯ ಮೇಲಿನ ನಂಬಿಕೆ ಕಳೆದುಕೊಳ್ಳಲಿಲ್ಲ, ನೋಟ್ ಬ್ಯಾನ್,‌ ಜಿಎಸ್ಟಿ ನಂತರ ಮೋದಿ ಸರ್ಕಾರ ಇನ್ನೊಂದು ಮಹತ್ತರವಾದ ಯೋಜನೆಯೊಂದನ್ನ execute ಮಾಡೋಕೆ ಹೊರಟಿದೆ, ಹೊಸವರ್ಷಕ್ಕೆ ದೇಶದ ಜನರಿಗೆ ಗಿಫ್ಟ್ ಕೊಡೋಕೆ ತೀರ್ಮಾನಿಸಿದೆ?!!

ಅದೇನಂತೀರಾ? ಹೊಸವರ್ಷಕ್ಕೆ ಪೆಟ್ರೋಲಿನ ಬೆಲೆ 45 ರೂ. ಆಗಬಹುದು ಅನ್ನೋದೇ ಕೇಂದ್ರಸರ್ಕಾರದ ಆ ಉಡುಗೊರೆ, ಸದ್ಯದ ಪರಿಸ್ಥಿತಿಯಲ್ಲಿ ಇದನ್ನ ನಂಬೋಕೆ ಕಷ್ಟವಾಗಬಹುದು ಆದರೆ ಮೋದಿ ಸರ್ಕಾರ ಇಂಥದ್ದೊಂದು ಗಿಫ್ಟ್ ಜನರಿಗೆ ನೀಡಬಹುದಾಗಿದೆ.

ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಮೋದಿ ಸರ್ಕಾರದ ನಿರ್ಧಾರದಿಂದ ಪೆಟ್ರೋಲ್ ಡೀಸಲ್ ನ ಬೆಲೆ 25 ರೂಪಾಯಿ ಇಳಿಕೆ ಮಾಡಲಿದೆ ಅನ್ನೋದಾಗಿದೆ.

ಸದ್ಯ ಪೆಟ್ರೋಲ್ ಬೆಲೆ ಹತ್ತಿರತ್ತಿರ 70 ಹಾಗು ಡೀಸೆಲ್ ಬೆಲೆ 60 ರೂ, ಸದ್ಯ ಕಚ್ಚಾತೈಲದ ಬೆಲೆ ಗಣನೀಯವಾಗಿ ಏರಿಳಿತ ಕಾಣುತ್ತಿರುವದರಿಂದ ಪೆಟ್ರೋಲ್ ಡಿಸೇಲ್ ಬೆಲೆಯಲ್ಲಿ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಇದರಿಂದ ಸರ್ಕಾರ ಜನರಿಗೆ ಇವುಗಳ ಬೆಲೆ ಕಡಿತಗೊಳಿಸೋಕೆ ಮುಂದಾಗಬಹುದು.

ಅದ್ಹೇಗೆ ಅಂತೀರಾ? ಕಳೆದ ಕೆಲ ತಿಂಗಳುಗಳ ಹಿಂದೆ ಮೋದಿ ಸರ್ಕಾರ ಒಂದು ದೇಶ ಒಂದು ಟ್ಯಾಕ್ಸ್ ಎಂಬ ನಿಯಮದಡಿ ಜಿಎಸಟಿ ಬಿಲ್ ಪಾಸ್ ಮಾಡಿದ್ದು ನಿಮಗೆಲ್ಲಾ ಗೊತ್ತಿರಬಹುದು

ಆದರೆ ಪೆಟ್ರೋಲ್ ಡಿಸೆಲ್ ಉತ್ಪನ್ನಗಳನ್ನ ಜಿಎಸಟಿ ಅಡಿಯಲ್ಲಿ ಮೋದಿ ಸರ್ಕಾರ ತಂದಿರಲಿಲ್ಲ. ಆದರೆ ಹೊಸವರ್ಷಕ್ಕೆ ಪೆಟ್ರೋಲ್ ಡಿಸೆಲ್ ನ್ನೂ ಜಿಎಸ್ಟಿ ಅಡಿಯಲ್ಲಿ ತರುವ ವಿಚಾರ ಮೋದಿ ಸರ್ಕಾರ ಮಾಡಿದೆ.

ಕೇಂದ್ರದ ಹಣಕಾಸು ಸಚಿವರಾದ ಅರುಣ್ ಜೆಟ್ಲಿ ಹಾಗು ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಈ ವಿಷಯದ ಬಗ್ಗೆ ಮುನ್ಸೂಚನೆಯನ್ನ ಕೊಟ್ಟಿದ್ದಾರೆ.

ಮೋದಿ ಸರ್ಕಾರದ ಪ್ಲ್ಯಾನ್ ಏನು?

ಪೆಟ್ರೋಲ್ ಮತ್ತು ಡಿಸೇಲನ್ನ ಜಿಎಸ್ಟಿ ತೆರಿಗೆ ಅಡಿಯಲ್ಲಿ ತರುವುದರಿಂದ ಅತಿ ಹೆಚ್ಚು ಟ್ಯಾಕ್ಸ್ ಲಿಮಿಟ್ 28% ವನ್ನಷ್ಟೇ ಇವುಗಳ ಮೇಲೆ ವಿಧಿಸಬಹುದಾಗಿದೆ. ಈ ಟ್ಯಾಕ್ಸ್ ವಿಧಿಸಿದ ನಂತರ ತಾನೇ ತಾನಾಗಿ ಪೆಟ್ರೋಲ್ ಡಿಸೇಲ್ ಬೆಲೆಗಳು ಇಳಿಮುಖ ಕಾಣಲಿವೆ.

ಒಂದು ಲೀಟರ್ ಪೆಟ್ರೋಲ್ ಬೆಲೆಯ ಮೇಲೆ ಡೀಲರ್ ನಿಂದ ಬರೋಬ್ಬರಿ 31.78 ರೂಪಾಯಿಗಳನ್ನ ತೆಗೆದುಕೊಳ್ಳಲಾಗುತ್ತೆ ಇದರಲ್ಲಿ 3.58 ರೂ.ಡೀಲರ್ ಕಮೀಷನ್ ಕೂಡ ಸೇರಿಕೊಳ್ಳುತ್ತೆ. ಈ ರೀತಿ ಒಂದು ಲೀಟರ್ ಪೆಟ್ರೋಲ್ ಬೆಲೆ 35.36 ರೂಗೆ ಬಂದು ತಲುಪುತ್ತೆ.

ಪೆಟ್ರೋಲ್ ಬೆಲೆ ಜಿಎಸ್ಟಿ ಟ್ಯಾಕ್ಸ್ ಅಡಿಯಲ್ಲಿ ಬಂದರೆ ವ್ಯಾಟ್ ಹಾಗು ಎಕ್ಸೈಸ್ ಡ್ಯೂಟಿ ಟ್ಯಾಕ್ಸ್ ಬದಲಾಗಿ ಬರೀ 28% ಟ್ಯಾಕ್ಸ್ ಇದರ ಮೇಲೆ ಹಾಕಲಾಗುತ್ತೆ.

28% ಟ್ಯಾಕ್ಸ್ ನಿಂದ 35.36 ರೂ.ಗಳಿಗೆ 9.90 ರೂ. ಕೂಡಿಕೊಳ್ಳುತ್ತೆ. ಈ ರೀತಿಯಾಗಿ ಒಂದು ಲೀಟರ್ ಪೆಟ್ರೋಲ್ ನಮಗೆ 45.26 ರೂ.ಗಳನ್ನಷ್ಟೇ ನೀಡಬೇಕಾಗುತ್ತೆ.

ಪೆಟ್ರೋಲಿಯಂ ಕಂಪನಿಗಳು ಒಂದು ಲೀಟರ್ ಡೀಸೆಲ್ ನ್ನ ಡೀಲರ್ ಗಳಿಗೆ 32.61 ರೂ.ಗೆ ಮಾರಾಟ ಮಾಡುತ್ತವೆ, ಅದಕ್ಕೆ ಡೀಲರ್ ಕಮಿಷನ್ ಅಂತ 2.52 ರೂ‌.ಗಳನ್ನೂ ಸೇರಿಸಲಾಗುತ್ತೆ. ಇದರಿಂದ ಒಂದು ಲೀಟರ್ ಡಿಸೇಲ್ ಬೆಲೆ 35.13 ರೂ. ಆಗತ್ತೆ.

ಇದರಮೇಲೆ 28% GST ಟ್ಯಾಕ್ಸ್ ಹಾಕುವುದರಿಂದ 9.83 ರೂ. ಈ 35.13 ಕ್ಕೆ ಸೇರಿ ಒಂದು ಲೀಟರ್ ಡೀಸೆಲ್ ನಮಗೆ 44.96 ರೂ.ಗಳಿಗೆ ಸಿಗುವಂತಾಗುತ್ತದೆ.

ಪೆಟ್ರೋಲ್ ಡೀಸೆಲ್ ಜಿಎಸ್ಟಿ ಅಡಿಯಲ್ಲಿ ಬಂದನಂತರ ಅವುಗಳ ಬೆಲೆಯಲ್ಲಿ ಏರಿಳಿತ ಕಂಡುಬರೋಕೆ ಶುರುವಾಗುತ್ತೆ.

ಜಿಎಸ್ಟಿ ಜಾರಿಯಾದ ನಂತರ ಹಲವರು ಮೋದಿ ಸರ್ಕಾರಕ್ಕೆ ಯಾಕೆ ನೀವು ಪೆಟ್ರೋಲಿಯಂ ಉತ್ಪನ್ನಗಳ ಮೇಲೂ ಇದನ್ನ ವಿಧಿಸುತ್ತಿಲ್ಲ ಅನ್ನೋ ಪ್ರಶ್ನೆ ಮಾಡಿದ್ದರು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರೋದ್ರಿಂದ ಬಹುಷಃ ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳನ್ನ ಜಿಎಸ್ಟಿ ಅಡಿಯಲ್ಲಿ ತಂದಿರಲಿಕ್ಕಿಲ್ಲ.

ಆದರೆ ಸದ್ಯ ಕೇಂದ್ರದ ಮೋದಿ ಸರ್ಕಾರ ಈ ಚಿಂತನೆಯನ್ನ ನಡೆಸುತ್ತಿದ್ದು ಹೊಸ ವರ್ಷದ ಹೊಸ್ತಿಲಲ್ಲಿ ಇಂಥದ್ದೊಂದು ಮಹತ್ವದ ನಿರ್ಣಯ ಮೋದಿ ಸರ್ಕಾರದಿಂದ ಹೊರಬೀಳಲಿದೆ ಅನ್ನೋದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.

ಈ ರೀತಿಯಾಗಿ ಮೋದಿ ಸರ್ಕಾರ ಹೊಸ ವರ್ಷಕ್ಕೆ ದೇಶದ ಜನರಿಗೆ ಗಿಫ್ಟ್ ನೀಡೋಕೆ ಮುಂದಾಗಿದೆ, ಇದು ನಿಜವೇ ಆದರೆ ಇನ್ನುಮುಂದೆ ಬೆಲೆಯೇರಿಕೆ ಸಮಸ್ಯೆ ಗಣನೀಯವಾಗಿ ತಗ್ಗಲಿದೆ.

ವಿ.ಸೂ: ಮೇಲೆ ಉಲ್ಲೇಖಿಸಿರುವ ಪೆಟ್ರೋಲ್ ಡಿಸೇಲ್ ಬೆಲೆಗಳು ಡಿಸೆಂಬರ್ 25 ರಂದು ದೇಶದಲ್ಲಿ ವಿವಿಧ ರಾಜ್ಯಗಳಲ್ಲಿದ್ದ ಬೆಲೆಗಳಾಗಿವೆ.

– Vinod Hindu Nationalist

Tags

Related Articles

Close