ಪ್ರಚಲಿತ

ಜಗತ್ತಿನ ಬೇರಾವ ರಾಜಕೀಯ ವಂಶವೂ ಈ ವಂಶದವರ ತರಹ ದೇಶವನ್ನು ನಾಶಗೊಳಿಸಿಲ್ಲ!!!!!

2014ರವರೆಗೆ ಭಾರತೀಯ ರಾಜಕೀಯವು ಒಂದು ಕುಟುಂಬದ ಸುತ್ತ ಜೇಡರ ಬಲೆ ಹೆಣೆದಂತೆ ತನ್ನ ಸಾಮ್ರಾಜ್ಯಕ್ಕೆ ಮಾತ್ರ ಸೀಮಿತ ಎನ್ನುವ ರೀತಿಯಲ್ಲಿತ್ತು. ಅಷ್ಟೇ ಅಲ್ಲದೆ ಈ ಒಂದು ಪರಿಸ್ಥಿತಿ 1947 ರಿಂದ 2014ರವರೆಗೆ ಏಕಸ್ವಾಮ್ಯದಂತೆಯೇ ಭಾಸವಾಗುತ್ತಿತ್ತು ಕೂಡ. ನಾವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ ಆದರೆ ಇದು ನಿಜವಾದ ಅರ್ಥದಲ್ಲಿ ಪ್ರಜಾಫ್ರಭುತ್ವ ವ್ಯವಸ್ಥೆಗೆ ಮಾರ್ಪಟ್ಟಿದೆ ಎಂದರೆ ಅದು ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ!! ಹೌದು.. ಪ್ರಧಾನಿ ಮೋದಿಯವರನ್ನು ಈಗಾಗಲೇ ಅನೇಕ ವಿಮರ್ಶಕರು ಸುಲಭವಾಗಿ ಪ್ರಶ್ನಿಸುವ ಹುನ್ನಾರಗಳು ನಡೆಯುತ್ತಲೇ ಇದೆ. ಆದರೆ ಪ್ರಧಾನಿ ಮೋದಿಯವರು ಯಾವ ಕುಟುಂಬದ ಕೈಗೊಂಬೆ ಅಂತೂ ಅಲ್ಲವೇ ಅಲ್ವೇ?

ಡಾ.ಮನಮೋಹನ್ ಸಿಂಗ್ ಅವರು ಪ್ರಾಮಾಣಿಕವಾಗಿ ಖರ್ಚು ಮಾಡಬೇಕಾದರೂ ಕೂಡ ಅವರ ‘ಪರಿವಾರ’ಕ್ಕೆ ವರದಿ ಸಲ್ಲಿಸಬೇಕಾಗಿತ್ತು. ನೇರವಾಗಿ ಹೇಳಬೇಕೆಂದರೆ ರಾಷ್ಟ್ರೀಯ ಭಾವನೆಯೇ ಇಲ್ಲದ ಇಟಲಿಯ ಸಾಮಾನ್ಯರಿಗೆ ಈ ವರದಿಯನ್ನು ಒಪ್ಪಿಸಬೇಕಿತ್ತು. ಆದರೆ ದುರದೃಷ್ಟವಶಾತ್, ಈ ನಾಟಕ ಆರಂಭವಾಗಿದ್ದೇ ಜವಾಹರಲಾಲ್ ನೆಹರು ಅವರ ಕಾಲದಿಂದ!! ಭಾರತದ ಮೊದಲ ಪ್ರಧಾನಿಯಾಗಲು ಸರ್ದಾರ್ ವಲ್ಲಭಾಯಿ ಪಟೇಲ್ ಅವರನ್ನು ನಿಯೋಜಿಸಿದ್ದರು. ಇದಕ್ಕೆ ಸರ್ದಾರ್ ವಲ್ಲಭಾಯಿ ಪಟೇಲ್ ಅವರು ಅರ್ಹತೆಯ ಅಧಿಕೃತ ವಿದ್ವಂಸಕರಾಗಿದ್ದರು. ಆದರೆ ಗಾಂಧಿಯವರ ಸಾಮೀಪ್ಯದಲ್ಲಿರುವವರಿಗೆ ಅ ಅರ್ಹತೆಯನ್ನು ದಾನಮಾಡಲಾಯಿತು ಎಂದರೆ ತಪ್ಪಾಗಲಾರದು!! ಯಾವಾಗ ನೆಹರೂ ಅಧಿಕಾರದ ಚುಕ್ಕಾಣಿಯನ್ನು ಹಿಡಿದರೂ ಅಲ್ಲಿಂದಲೇ ಭಾರತದಲ್ಲಿ ಸಾಕಷ್ಟು ಕೆಟ್ಟ ಪರಿಸ್ಥಿತಿಗಳು ಆರಂಭವಾಗಲು ಕಾರಣವು ಆಯಿತು!!

ಹೌದು.. ಭಾರತದ ಹಳ್ಳಿಗಾಡಿನಲ್ಲಿರುವ ಜನರನ್ನು ಅಜ್ಞಾನಿಗಳೆಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೆ, ನಿಜವಾಗಿಯೂ ಕೂಡ ಇವರು ಅಜ್ಞಾನಿಗಳೇ!!
ಯಾಕೆಂದರೆ ಗಾಂಧಿ ಎನ್ನುವ ಪದಕ್ಕೆ ಮಾರುಹೋಗಿ ಮತವನ್ನು ನೀಡುತ್ತಿರುವ ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಅಜ್ಞಾನಿಗಳೇ!!! ನಕಲಿ ಉಪನಾಮಗಳು ಬೃಹತ್ ಮಟ್ಟದಲ್ಲಿ ಪ್ರತಿಫಲವನ್ನು ಪಡೆಯಿತು ಎನ್ನುವುದೇ ವಿಪರ್ಯಾಸ!! ನೆಹರೂ ಭೂಮಿಯಿಂದ ನಿರ್ಗಮಿಸಿದ ನಂತರ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಬಳಸಿಕೊಂಡರು. ಅವರು ಈ ಹೆಸರನ್ನು ಹಿಡಿದು ಯಶಸ್ಸಿನ ಮೇಲೆ ಸವಾರಿ ಮಾಡಿದರು. ಗಾಂಧಿ ಬ್ರಾಂಡ್ ಆಗಿ ಹೋಯಿತು!! ಸುಮಾರು ವರುಷಗಳ ಹಿಂದೆ ಷೇಕ್ಸಿಪಿಯರ್ “ಹೆಸರಿನಲ್ಲಿ ಏನಿದೆ?” ಎನ್ನುವುದನ್ನು ತಮ್ಮ ಸಾಹಿತ್ಯದಲ್ಲಿ ಹೇಳಿದ್ದರು!! ಆದರೆ ಭಾರತದ ರಾಜಕೀಯ ಇತಿಹಾಸವನ್ನು ನೋಡುತ್ತಿದ್ದರೆ ಷೇಕ್ಸಿಪಿಯರ್ ಎರಡೆರಡು ಬಾರಿ ಬರೆಯಲು ಯೋಚಿಸುತ್ತಿದ್ದರೋ ಏನೋ, ಗೊತ್ತಿಲ್ಲ!!!

ನೆಹರು ಯುಗದಲ್ಲಿ ಸಹಾನುಭೂತಿಯ ವಯಸ್ಸು ತಮ್ಮ ಪಕ್ಷಕ್ಕೆ ಬರಲು ಅಗತ್ಯತೆ ಇದ್ದ ಏಕೈಕ ಅರ್ಹತೆಯಾಗಿತ್ತು!! ಕಾಂಗ್ರೆಸ್ ಪಕ್ಷದವರು ತಮ್ಮ ಅಧಿಕಾರವನ್ನು ತಮ್ಮ ಆತ್ಮೀಯರಿಗೆ ಬಿಟ್ಟುಕೊಡುತ್ತಾರೆಯೇ ಹೊರತು ಬೇರಾರಿಗೂ ಅಲ್ಲ. ದೇಶದ 132ಕೋಟಿ ಜನ, ನಾವೆಲ್ಲ ಒಂದೇ ಕುಟುಂಬ ಎಂದು ಹೇಳಿ ತಪ್ಪು ದಾರಿಗೆ ಬರುತ್ತಿದ್ದೇವೆ. ಯಾಕೆಂದರೆ ಮತ ಹಾಕಿ ಜಯಶಾಲಿಯನ್ನಾಗಿಸಿದವರು ನಾವಲ್ಲವೇ?? ಅಷ್ಟೇ ಅಲ್ಲದೇ ಭಾರತದದಲ್ಲಿ ಮಹಾತ್ಮ ಗಾಂಧಿಯವರು ಅತ್ಯುತ್ತಮ ಕೊಡುಗೆಗಳನ್ನು ನೀಡಿದ್ದಾರೆ ಎಂದು ಶಿಕ್ಷಕರು ಮಕ್ಕಳಿಗೂ ಹೇಳಿ ಕೊಡುತ್ತಾರೆ.

ಆದರೆ ಮಹತ್ಮಾ ಗಾಂಧಿಯನ್ನು ನಾನಿಲ್ಲಿ ಯಾವತ್ತು ವಿರೋಧಿಸುತ್ತಿಲ್ಲ. ಒಂದು ವೇಳೆ ಇವರ ಎಲ್ಲ ತತ್ವಗಳನ್ನು ಪಾಲಿಸುತ್ತಿದ್ದರೆ ಪ್ರತಿ ಯುದ್ದದಲ್ಲೂ ಸೋಲನ್ನು
ಅನುಭವಿಸಬೇಕಾಗಿತ್ತು. ಈಗ ಕೂಡ ಭಾರತ ಪ್ರಜಾಪ್ರಭುತ್ವದ ರಾಷ್ಟ್ರ. ಹಾಗಾಗಿ ಎಲ್ಲರಿಗೂ ಎಲ್ಲ ರೀತಿ ಸ್ವಾತಂತ್ರ್ಯವಿದೆ. ಹಾಗಾಗಿ ಭಾರತೀಯ ಸ್ವಾತಂತ್ರ್ಯ
ಹೋರಾಟಗಾರ ಚಂದ್ರಶೇಖರ್ ಆಝಾದ್ ಬಗ್ಗೆ ಹೇಳುವುದಾದರೆ, ರಾಷ್ಟ್ರಕ್ಕೋಸ್ಕರ ತನ್ನ ಜೀವವನ್ನೇ ಅರ್ಪಿಸಿದ ಒಬ್ಬ ಮಹಾನ್ ಹೋರಾಟಗಾರನನ್ನು
ನೆನಪಿಸಕೊಳ್ಳಲೇಬೇಕು. ಎಂ.ಕೆ ಗಾಂಧಿ ಮಹಾನ್ ಹೋರಾಟಗಾರರಾಗಿದ್ದರೋ ಗೊತ್ತಿಲ್ಲ. ಆದರೆ ಚಂದ್ರಶೇಖರ್ ಆಝಾದ್ ಮತ್ತು ಭಗತ್‍ಸಿಂಗ್ ಮಹಾನ್
ಕ್ರಾಂತಿಕಾರಿಗಳಾಗಿದ್ದರು ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ.

ಆದರೆ ಹಿಂದಿನ ವಿಚಾರವನ್ನು ಕೆದಕುವುದಾದರೆ, ನೆಹರು ಒಬ್ಬ ಸಮರ್ಥ ಆಡಳಿತರಾರರಲ್ಲ. ಆದರೆ ಸ್ವತಂತ್ರ ಭಾರತಕ್ಕೆ ಸಂಭವಿಸಿದ ದುಃಖದ ಸಂಗತಿಗಳಲ್ಲಿ
ಒಂದಾಗಿದೆ ಎಂದು ಹೇಳಬಹುದಷ್ಟೇ!! 1962ರಲ್ಲಿ ಚೀನಾ ಯುದ್ದವನ್ನು ಕಳೆದುಕೊಂಡರು ಮತ್ತು ನಂತರಗಳಲ್ಲಿ ತನ್ನ ಸ್ಥಾನದಿಂದ ಕೆಳಗಿಳಿಯಲು ನಿರಾಕರಿಸಿದರು. ಆದರೆ ಇವರ ಮಗಳು ಸಾಕಷ್ಟು ಪ್ರಚಾರವನ್ನು ಪಡೆದುಕೊಂಡರು. ಅವರ ‘ಗರಿಬಿ ಕಟಾವೊ’ ಎನ್ನುವ ಘೋಷಣೆ ಸೂಪರ್ ಹಿಟ್ ಆಗಿತ್ತು. ಅವರ ರಾಜ್ಯಕ್ಕೆ ನೈಸರ್ಗಿಕವಾದ ಉತ್ತರಾಧಿಕಾರಿಯಾಗಿದ್ದರು ಕೂಡ!!

ಗರೀಬಿ ಹಟಾವೊ ವಾಸ್ತವವಾಗಿ ‘ಗರೀಬ್ ಹಟಾವೊ’ ಆಗಿತ್ತು. ಯಾಕೆಂದರೆ ಇಂದಿರಾಗಾಂಧಿಯವರು ಗಮನಾರ್ಹವಾಗಿ ಆಟವನ್ನೇ ಆಡಿದ್ದರು! ಹೇಗೆಂದರೆ ಅವರ ಹೆಸರಿನ ಉಪನಾಮದ ವಿಷಯದಲ್ಲಿ ಚಮತ್ಕಾರವನ್ನೇ ಮಾಡಿದ್ದರು!! ಇಂದಿರಾ ನೆಹರೂ ಎನ್ನುವ ಹೆಸರು ದೊಡ್ಡ ಹೆಸರು ಮಾಡಲಿಲ್ಲ. ಅವರ ಸಮಯದಲ್ಲಿ ಭ್ರಷ್ಟಚಾರ ತಾಂಡವವಾಡುತ್ತಿತ್ತು. ಆಗ ಇವರೇ ಸರ್ವಾಧಿಕಾರಿಯಾಗಿದ್ದರು ಮತ್ತು ತುರ್ತುಪರಿಸ್ಥಿಯನ್ನು ತಂದಿದ್ದಲ್ಲದೇ ತನ್ನ ನಿರಂಕುಶ ಚಿಂತನೆಗೆ ಸಾಕ್ಷಿಯಾಗಿತ್ತು. ಇಂದಿರಾ ಗಾಂಧಿ ಮತ್ತು ಅವರ ತಂದೆ ಪಾಕಿಸ್ತಾನದ ಮೇಲೆ ಮೃದುವಾದರು. ಆದರೆ, ಈ ಸಂದರ್ಭದ 1971ರಲ್ಲಿ ಭಾರತೀಯ ಸೈನ್ಯವು ಪಾಕಿಸ್ತಾನದ ವಿರುದ್ದ ವಿಜಯಿಶಾಲಿಯಾಗಿ 92,000 ಪಾಕಿಸ್ತಾನದ ಸೈನಿಕರನ್ನು ವಶಪಡಿಸಿಕೊಂಡರು. ಈ ಯುದ್ದವು ಬಾಂಗ್ಲಾದೇಶದ ರಚನೆಗೆ ಕಾರಣಾವಾಯಿತು. ಆದರೆ 92,000 ಸೈನಿಕರನ್ನು ಜೀವಂತವಾಗಿ ಸೆರೆ ಹಿಡಿದರು ಕೂಡ ಅದು ಅರ್ಥಹೀನವಾಗಿತ್ತು!!

ಇಂದಿರಾ ಗಾಂಧಿಯ ಹತ್ಯೆಯ ನಂತರ ರಾಜೀವ್ ಗಾಂಧಿ ಸಿಂಹಾಸನವನ್ನು ಏರಿದರು. ಇವರು ಇನ್ನೊಂದು ಇತಿಹಾಸವನ್ನೇ ಬರೆದರೂ ಎಂದರೂ ತಪ್ಪಾಗಲಾರದು? ಯಾವುದೇ ನಿಜವಾದ ಅರ್ಹತೆ ಇಲ್ಲದಿದ್ರೂ ಕೂಡ ಶುದ್ದ ರಾಜವಂಶದ ನಿಯಮದಂತೆ ಮುಂದುವರೆಯುತ್ತಲೇ ಹೋದಂತಿತ್ತು!! ರಾಜೀವ್ ಗಾಂಧಿ ಅತ್ಯಂತ ಪ್ರಭಾವಿ ಪ್ರಧಾನಿಗಳಾಗಿ ಬಿಂಬಿತರಾಗಲಿಲ್ಲ, ಬದಲಿಗೆ ಕೆಟ್ಟ ರೀತಿಯಲ್ಲಿ ಅಧಿಕಾರ ನಿರ್ವಹಿಸಿದರು ಎಂದರೆ ತಪ್ಪಾಗಲಾರದು. ಯಾಕೆಂದರೆ 1984ರ ಸಿಖ್ ವಿರೋಧಿ ದಂಗೆಗಳು, ಭೋಪಾಲ್ ಅನಿಲ ದುರಂತ, ಬೊಫೋರ್ಸ್ ಹಗರಣಗಳು ನಡೆದಿದ್ದವು!! ರಾಜೀವ್ ಗಾಂಧಿಯವರ ಹತ್ಯೆಯ ನಂತರ ಭಾರತೀಯ ರಾಜಕೀಯದಲ್ಲಿ ಆಂಟೋನಿಯ ಮೈನೋ ಅಧಿಕಾರದ ಗದ್ದುಗೆಯನ್ನೇರಿದರು!!

ಆಂಟೋನಿಯ ಮೈನೋ ಅಲಿಯಾಸ್ ಸೋನಿಯಾ!! ರಾಜೀವ್ ಗಾಂಧಿಯ ನಂತರದಲ್ಲಿ ತಮ್ಮ ರಾಜವಂಶವನ್ನು ಮುಂದುವರೆಸುತ್ತಿರುವ ಮಹಿಳೆ. ಕಾಂಗ್ರೆಸ್ ಇದೀಗ ಇವರ ಕಪಿಮುಷ್ಠಿಯಲ್ಲಿರುವುದು ಎಲ್ಲರಿಗೂ ತಿಳಿದಿದೆ. ಅಷ್ಟೇ ಅಲ್ಲದೇ ಮೌನವನ್ನು ಕಾಪಾಡಿಕೊಂಡು ಬಂದ ಹಾಗೂ ಕೈಗೊಂಬೆಯಾಗಿದ್ದ ಪ್ರಧಾನಿಯನ್ನು ನಾವು ಹೊಂದಿದ್ದೆವು. ವಿಪರ್ಯಾಸ ಎಂದರೆ ಮೋದಿಯವರ ವರದಿಯನ್ನು ಭಾರತದ ಜನರಿಂದಲೇ ಮೌಲ್ಯಮಾಪನ ಮಾಡಲಾಗಿದೆ. ಆದರೆ ಮನಮೋಹನ್ ಸಿಂಗ್ ಅವರ ವರದಿಯನ್ನು ಅವರಿಂದಲೇ ಬರೆಯಲಾಗಿದೆ!! ವ್ಯಂಗ್ಯವೆಂದರೆ ಅಮೇಥಿ ಮತ್ತು ರೇ ಬರೇಲಿಯನ್ನು ಕಳೆದುಕೊಂಡಿಲ್ಲ. ಆ ಸಂದರ್ಭದಲ್ಲಿ ಇಂದಿರಾ ಗಾಂಧಿಯವರು ಚುನಾವಣೆಯಲ್ಲಿ ಸೋತರು. ಆದರೆ ಸಂಜಯ್‍ಗಾಂಧಿಯನ್ನು ಕಳೆದುಕೊಂಡೆವು!!

ಹಾಗಾದರೆ ಸೋನಿಯಾ ಮತ್ತು ರಾಹುಲ್ ಇದೀಗಾ ರಾಜಕೀಯ ದರ್ಬಾರ್ ನಡೆಸುತ್ತಿದ್ದಾರೆ ಎಂದರೆ ಅಮೇಥಿ ಮತ್ತು ರೇ ಬರೇಲಿಯ ಜನರು ಅಜ್ಞಾನರೇ? ಯಾಕೆಂದರೆ ಈ ಎರಡು ಕ್ಷೇತ್ರಗಳಲ್ಲಿಯೂ ಮೂಲ ಸೌಕರ್ಯಗಳೇ ಇಲ್ಲ. ಈ ಮೂಲ ಸೌಕರ್ಯದ ಕೊರತೆ ಎದ್ದು ಕಾಣುತ್ತಿರುವುದೇ ಒಂದು ದೊಡ್ಡ ವಿಪರ್ಯಾಸ!! ಪ್ರಧಾನಿ ಮೋದಿಯವರು ಮಲ್ಲಿಕಾರ್ಜುನ ಖರ್ಗೆಯವರಿಗೆ ಕೆಳಮನೆಯಲ್ಲಿ ನೀಡಿದ ಉತ್ತರದಲ್ಲಿ” ಒಂದು ಕುಟುಂಬದ ಏಕಸ್ವಾಮ್ಯವನ್ನು ಮಾಡಬಾರದು” ಎಂದು ಹೇಳಿದ್ದರು. ಯಾಕೆಂದರೆ ದೇಶಕ್ಕೇ ಕುಟುಂಬದ ಕೊಡುಗೆ ಕಡಿಮೆಯಾಗುತ್ತದೆ. ಸೋನಿಯಾ ಗಾಂಧಿಯವರ ಹಗರಣ ಅಪರಿಮಿತವಾದದ್ದು. 2ಜಿ ಹಗರಣ, ಕಾಮನ್ವೆಲ್ತ್ ಹಗರಣ ಹಾಗೂ ಇತರ ಭಾರತೀಯ ಇತಿಹಾಸದ ಅಗ್ರ 10 ಭ್ರಷ್ಟಚಾರ ಹಗರಣಗಳಿಗೂ ಇವರು ಕಾರಣಕರ್ತರಾಗಿದ್ದಾರೆ!! ಹೌದು ರಾಜಕೀಯ ಇತಿಹಾಸ ತನ್ನ ಕುಟುಂಬಕ್ಕೆ ಮಾತ್ರ ಸೀಮಿತವಾಗಬೇಕು ಎಂದು ತಿಳಿದರೆ ಇದರಷ್ಟು ದೊಡ್ಡ ಮೂರ್ಖತನ ಮತ್ತೊಂದಿಲ್ಲ. ಯಾಕೆಂದರೆ ಭಾರತ ಪ್ರಜಾಪ್ರಭುತ್ವದ ರಾಷ್ಟ್ರ!!!

– ಅಲೋಖಾ

Tags

Related Articles

Close