ಅಂಕಣಪ್ರಚಲಿತರಾಜ್ಯ

ಜನರನ್ನು ಮೂರ್ಖರನ್ನಾಗಿಸುವುದೆಂದರೆ ಇದೇ ತಾನೆ?! ಆರಂಭವಾದ ಒಂದೇ ವಾರಕ್ಕೆ ಶೆಟರ್ ಎಳೆದ ಇಂದಿರಾ ಕ್ಯಾಂಟೀನ್!!!!!

ಇಂದಿರಾ ಕ್ಯಾಂಟೀನ್!!! ಜನರ ಹಸಿವನ್ನು ನೀಗಿಸುವ ಯತ್ನದಲ್ಲಿ ಕಾಂಗ್ರೆಸ್ ಮಾಡುತ್ತಿರುವ ರಾಜಕೀಯ.. ಪ್ರತಿಯೊಂದು ವಿಚಾರಕ್ಕೂ ರಾಜಕಾರಣವನ್ನು ಸೇರಿಸುತ್ತಾರೆಂದು ಹೇಳಬೇಡಿ ಮತ್ತೆ!! ವಾಸ್ತವ ಸಂಗತಿಯನ್ನು ನಿಮ್ಮ ಮುಂದೆ ಬಿಚ್ಚಿಡುವ ಪ್ರಯತ್ನವಷ್ಟೇ ನಮ್ಮದು. ಂಯಾಕೆಂದರೆ ನಮಗೆ ಸ್ವಚ್ಛ ಸಮಾಜ ಬೇಕು. ಸ್ವಚ್ಛ ರಾಜಕಾರಣ ಬೇಕು. ನಿರ್ಮಲ ಮನಸ್ಸಿನ ರಾಜಕಾರಣಿಗಳು ಬೇಕು. ಆದರೆ ಕುತಂತ್ರಿ ರಾಜಕಾರಣಿಗಳಿಂದಾಗಿ ಉತ್ತಮ ರಾಜಕಾರಣಿಗಳು ಕಣ್ಣಿಗೇ ಕಾಣಸಿಗುತ್ತಿಲ್ಲ. ನಮ್ಮ ದೇಶದ ದುರ್ದೈವಲ್ಲವೇ ಇದು ?

ನಮ್ಮ ಹಸಿವನ್ನು ಇಂದಿರಾ ಕ್ಯಾಂಟೀನ್ ನೀಗಿಸುತ್ತೆ ಎಂದು ಅಲ್ಲಿಗೆ ಆಗಮಿಸಿದ ಜನರಿಗೆ ನೀರಸವಾಗಿತ್ತು. ಯಾಕೆಂದರೆ ಕ್ಯಾಂಟೀನ್ ಮುಂಭಾಗದಲ್ಲಿ ಮುಚ್ಚಲಾಗಿದೆ ಅಂತ ಫಲಕವನ್ನು ನೇತು ಹಾಕಲಾಗಿತ್ತು. ಆಗಸ್ಟ್ 16 ನೆಯ ದಿನಾಂಕದಂದು ತೆರೆಯಾಲಾಗಿದ್ದ ಕ್ಯಾಂಟೀನ್ ಇಂದು ಮಚ್ಚಲಾಗಿದೆ ಅಂತ ಹಾಕಲಾಗಿತ್ತು.

ಬೆಂಗಳೂರಿನ ಮೇಯರ್ ಆಗಿರುವಂತಹ ಜಿ. ಪದ್ಮಾವತಿಯ ಅಚಾನಕ್ ಭೇಟಿಯಿಂದ ಈ ವಿಚಾರ ಬಯಲಾಗಿದೆ. ಜನರು ಬೆಳಗ್ಗಿನ ಉಪಾಹಾರಕ್ಕೆ ಸರದಿ ಸಾಲ್ಲಿ ನಿಲ್ಲುತ್ತಿದ್ದ ಸನ್ನಿವೇಶವನ್ನು ಗಮನಿಸಿದ ಮೇಯರ್, ಇದರ ಕುರಿತಾಗಿ ಪರಿಶೀಲನೆಗೆ ಮುಂದಾದರು.

” ನಾನು ಜಾಲಹಳ್ಳಿ ವಾರ್ಡ್‍ಗೆ ಭೇಟಿಯಿಟ್ಟಿದ್ದೆ. ಹಾಗೆಯೇ ಸುಮಾರು ಬೆಳಗ್ಗೆ 8 ಗಂಟೆಯ ಸುಮಾರಿಗೆ ಸುಬ್ರಹ್ಮಣ್ಯನಗರ ಕ್ಕೆ ಭೇಟಿಯಿಟ್ಟಿದ್ದೆ. ಆಗ ಅಲ್ಲಿ ಇಂದಿರಾ ಕ್ಯಾಂಟೀನ್ ಮುಚ್ಚಿದ ಪರಿಸ್ಥಿತಿಯನ್ನು ಗಮನಿಸಿದ ಮೇಯರ್ ಅವರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಎಲ್ಲಾ ಸದಸ್ಯರೂ, ಕೌಂಟರ್ ನಲ್ಲಿರರುವ ಸಿಬ್ಬಂದಿಗಳೂ ಕ್ಯಾಂಟೀನ್ ಒಳಗಡೆ ಕುಳಿತುಕೊಂಡಿದ್ದರು. ಯಾಕೆ ಈ ರೀತಿಯಲ್ಲಿ ಕ್ಯಾಂಟೀನ್ ಮುಚ್ಚಲಾಗಿದೆ ಅನ್ನುವುದು ಗೊತ್ತಿಲ್ಲ. ಆಗ ನಾನು ಅಲ್ಲಿನ ಸಿಬ್ಬಂದಿಗಳಿಗೆ ಕ್ಯಾಂಟೀನ್ ತೆರೆಯಲು ಆದೇಶಿದೆ.” ಎಂದರು ಮೇಯರ್.

ಹೊರಗೆ ಪಾಪ! ಹಸಿವಿನಿಂದ ಬಂದವರು ಕೂತಲ್ಲೇ ಆಹಾರವನ್ನು ನಿರೀಕ್ಷಿಸುತ್ತಾ ಇದ್ದರು. ಮೇಯರ್ ಅಲ್ಲಿಗೆ ಭೇಟಿ ನೀಡುವಲ್ಲಿಯವರೆಗೆ ಅವರ ಅವಸ್ಥೆ ಹೇಳತೀರದು. ಕ್ಯಾಂಟೀನ್ ನಲ್ಲಿ ನೀರಿನ ಸರಬರಾಜು ಸರಿಯಾಗುತ್ತಿರಲಿಲ್ಲ. ನಾವು ಇದನ್ನು ಅಧಿಕಾರಿಗಳಿಗೆ ಸೂಚಿಸಿದ್ದೆವಿ. ಆದರೆ ಅವರು ಕ್ರಮ ಕೈಗೊಂಡಿರಲಿಲ್ಲ. ನೀರಿಗಾಗಿ ಕೊರತೆಯಾಗಿತ್ತು. ಹಾಗಾಗಿ ಇವತ್ತು ಮುಚ್ಚಿದ್ದೆವು ಎಂಬುದಾಗಿ ಮಂಜುನಾಥ್ ಅವರು ಸ್ಪಷ್ಟೀಕರಣವನ್ನು ಕೊಟ್ಟಿದ್ದಾರೆ. ಮಂಜುನಾಥ್ ಅವರು ಸುಬ್ರಹ್ಮಣ್ಯನಗರದ ಶಾಸಕರೂ ಆಗಿದ್ಧಾರೆ.

ಒಟ್ಟಾರೆಯಾಗಿ ಇಂದಿರಾ ಕ್ಯಾಂಟೀನ್ ಬಗೆಹರಿಯಲಾಗದ ಸಮಸ್ಯೆಗಳಾಗಿ ಉಳಿದಿರುವುದ ಅಂತೂ ಸ್ಪಷ್ಟ. ಒಂದು ಕಡೆ ಸರಿಯಾದ ಅಡುಗೆ ಮನೆಗಳನ್ನು ತೆರೆಯದೇ ಕ್ಯಾಂಟೀನ್ ಅನ್ನು ಉದ್ಘಾಟಿಸಿದರು, ಇನ್ನೊಂದು ಕಡೆ ನೀರಿನ ಸಮಸ್ಯೆಯನ್ನು ನಿವಾರಿಸಲಾಗದೇ ಕ್ಯಾಂಟೀನ್ ಅನ್ನೇ ಮುಚ್ಚಿದವು. ಇಂತಹ ಅದೆಷ್ಟು ತಾಪತ್ಯಯಗಳು ಇಂದಿರಾ ಕ್ಯಾಂಟೀನ್ ಗೆ ಬರಲಿವೆ?? ಸರಿಯಾದ ವ್ಯವಸ್ಥೆಯನ್ನು ಮಾಡದೇ ಕೇವಲ ಜನರನ್ನು ಮೂರ್ಖಗೊಳಿಸುವ ಈ ಪ್ರಯತ್ನ ಇನ್ನೆಷ್ಟು ದಿವಸಗಳು ನಡೆದೀತು ಹೇಳಿ??

Tags

Related Articles

Close