ಪ್ರಚಲಿತ

ಡಿವೈಎಸ್ಪಿ ಗಣಪತಿಯವರ ಸಾವಿನ ಪ್ರಕರಣದಲ್ಲಿ ಕೆ.ಜೆ.ಜಾರ್ಜ್ ಬಂಧನ?!

ಕೊನೆಗೂ ಸಿಬಿಐ ಡಿವೈಎಸ್ಪಿ ಗಣಪತಿಯ ಹತ್ಯೆಯ ತನಿಖೆಯನ್ನು ಯಶಸ್ವಿಯಾಗಿ ಮುಂದುವರೆಸುತ್ತಿದ್ದು, ಅಕ್ಟೋಬರ್ 26, ಗುರುವಾರದಂದು ಕೆ.ಜೆ.ಜಾರ್ಜ್ ರವರ ಮೇಲೆ ಮೊಕದ್ದಮೆ ಹೂಡಿದ್ದಾರೆ.

ಅಲ್ಲದೇ, ಐಜಿಪಿ ಪ್ರಣಬ್ ಮೊಗಾಂತಿ ಹಾಗೂ ಎಡಿಜಿಪಿ ಎಎಮ್ ಪ್ರಸಾದ್ ರವರ ಮೇಲೂ ಸಿಬಿಐ ಮೊಕದ್ದಮೆ ದಾಖಲಿಸಿದ್ದು , ಈ ಮೂವರನ್ನೂ ಸಹ ಗಣಪತಿಯವರ ಸಾವಿನ ಮುಖ್ಯವಾದ ಆರೋಪಿಗಳೆಂದು ಹೇಳಿದ್ದಾರೆ.

ಜುಲ್ೈ 7, 2016 ರಂದು ಡಿವೈಎಸ್ಪಿ ಎಮ್ ಕೆ ಗಣಪತಿಯವರು ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ತನ್ನ ಸಾವಿಗೆ ಕೆ.ಜೆ.ಜಾರ್ಜ್, ಎಎಮ್ ಪ್ರಸಾದ್ ಹಾಗೂ ಪ್ರಣಾಬ್ ಮೊಹಾಂತಿ ಕಾರಣವೆಂದು ಹೇಳಿದ್ದ ವೀಡಿಯೋ ಸಂದೇಶವನ್ನು ಮಾಡಿದ್ದರು. ಅದನ್ನೇ ಗಂಭೀರವಾಗಿ ಪರಿಗಣಿಸಿರುವ ಸಿಬಿಐ ಮೂವರ ಮೇಲೂ ಮೊಕದ್ದಮೆ ದಾಖಲಿಸಿ ತನಿಖೆಗೆ ಒಳಪಡಿಸುತ್ತಿದೆ.

ಸೆಪ್ಪೆಂಬರ್ 5 ರಂದು, ಸರ್ವೋಚ್ಛ ನ್ಯಾಯಾಲಯ ಪ್ರಕರಣವನ್ನು ಸಿಬಿಐ ವಶಕ್ಕೆ ಒಪ್ಪಿಸಿತ್ತು.

ಸರ್ವೋಚ್ಛ ನ್ಯಾಯಾಲಯ ಗಣಪತಿಯವರ ತಂದೆಯಾದ ಎಮ್ ಕೆ ಕುಶಾಲಪ್ಪನವರ ವಿನಂತಿಯನ್ನು ಕೇಳುವಾಗ, ” ಇದು ಆತ್ಮಹತ್ಯೆಯೋ ಕೊಲೆಯೋ ಎಂಬುದನ್ನು ತನಿಖೆಯ ನಂತರವೇ ಗೊತ್ತು ಮಾಡಲು ಸಾಧ್ಯವಾಗಬಹುದು.” ಎಂದು ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಿತ್ತು.

ಈ ಹಿಂದೆ ಕುಶಾಲಪ್ಪನವರು ಕರ್ನಾಟಕ ಹೈ ಕೋರ್ಟ್ ನಲ್ಲಿ ಪ್ರಕರಣವನ್ನು ಸಿಬಿಐ ಗೆ ನೀಡಲು ನೀಡಿದ್ದ ಮನವಿಯನ್ನು ತಿರಸ್ಕರಿಸಿದ್ದನ್ನು ಪ್ರಶ್ನಿಸಿ, ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದ ಗಣಪತಿಯವರ ಕುಟುಂಬಕ್ಕೆ ಸರ್ವೋಚ್ಛ ನ್ಯಾಯಾಲಯ ಸಾಂತ್ವನ ಹೇಳಿದ್ದಲ್ಲದೇ, ಆ ತಕ್ಷಣವೇ ಸಿಬಿಐ ಗೆ ಪ್ರಕರಣವನ್ನು ಒಪ್ಪಿಸಿತ್ತು.

ಆದರೆ., ಸಿಬಿಐ ವಶಕ್ಕೆ ನೀಡುವುದನ್ನು ತೀವ್ರವಾಗಿ ವಿರೋಧಿಸಿದ್ದ ಕರ್ನಾಟಕ ಕಾಂಗ್ರೆಸ್ ಸರಕಾರ, ಸರ್ವೋಚ್ಛ ನ್ಯಾಯಾಲಯದಲ್ಲಿಯೂ ಸಹ ಸಿಬಿಐಗೆ ಪ್ರಕರಣವನ್ನು ನೀಡದಿರುವಂತೆ ಮನವಿಯನ್ನು ಮಾಡಿತ್ತು.

ಹಾಗಾದರೆ?!

ಈ ಹಿಂದೆ ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ರವರ ಮೇಲೆ ಎಸ್ ಐ ಟಿ ಮೊಕದ್ದಮೆ ಹೂಡದೇ ಇದ್ದದ್ದು ಯಾಕೆ?! ಕರ್ನಾಟಕದ ತನಿಖಾ ದಳ ತನ್ನ ವರದಿಯಲ್ಲಿ, ಯಾವುದೇ ಸಾಕ್ಷ್ಯಾಧಾರಗಳೂ ಲಭ್ಯವಿಲ್ಲ ವೆಂದು ಹೇಳಿತ್ತಲ್ಲದೇ, ಬೇರೆ ಕಥೆಯನ್ನೇ ಕಟ್ಟಿತ್ತು.

ಸಿಬಿಐಗೆ ಸಿಕ್ಕಿದ ಸಾಕ್ಷ್ಯಾಧಾರಗಳು ತನಿಖಾ ದಳಕ್ಕೆ ಸಿಕ್ಕಿರಲೇ ಇಲ್ಲವೋ, ಅಥವಾ ಮುಚ್ಚಿಟ್ಟು ಆಟವನ್ನಾಡಿತ್ತೋ?!

ಕರ್ನಾಟಕದ ಸಿದ್ಧರಾಮಯ್ಯರವರ ಸರಕಾರವೊಂದು ಸಿಬಿಐ ಗೆ ಪ್ರಕರಣವನ್ನು ನೀಡುವುದನ್ನು ವಿರೋಧಿಸಿದ್ಯಾಕೆ?! ತಪ್ಪಿತಸ್ಥ ತಾನೇ ಎಂದು ಗೊತ್ತಾಗುವುದೆಂದೋ ಅಥವಾ ?!

ಹತ್ಯೆಯಾಗಿ ವರ್ಷ ಕಳೆದ ಮೇಲಾದರೂ, ಗಣಪತಿಯವರ ಸಾವಿಗೆ ನ್ಯಾಯ ಸಿಗುವುದೇ?! ಮೊಕದ್ದಮೆ ದಾಖಲಿಸಿರುವ ಸಿಬಿಐ ಕೆ. ಜೆ.ಜಾರ್ಜ್ ನನ್ನು
ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ಬಹುಷಃ ಸತ್ಯವೊಂದು ಹೊರಬರಬಹುದೇನೋ.

ಅಲ್ಲದೇ, ಇಷ್ಟು ದಿನವೂ ಸಿದ್ಧರಾಮಯ್ಯರವರ ಬಗಲಲ್ಲಿ ಸುರಕ್ಷವಾಗಿದ್ದ ಜಾರ್ಜ್, ಮೊಹಾಂತಿ ಹಾಗೂ ಪ್ರಸಾದ್ ರವರನ್ನು ಕೆಲವೇ ದಿನಗಳಲ್ಲಿ ಬಂಧಿಸುವ ಎಲ್ಲಾ ಸೂಚನೆಗಳೂ ಕಾಣುತ್ತಿದೆ.

ಕೊನೆಗೂ ಕಾಂಗ್ರೆಸ್ ಸರಕಾರದಲ್ಲಿ ದಕ್ಷ ಅಧಿಕಾರಿಗಳಿಗೆ ಉಳಿಗಾಲವಿಲ್ಲ ಎಂಬುದನ್ನು ಸಾಬೀತು ಪಡಿಸಿರುವ ಸಿದ್ಧರಾಮಯ್ಯರವರ ಸರಕಾರಕ್ಕೆ ಪ್ರಶ್ನೆ ಮಾಡುವರಾರು?!

– ಪೃಥ ಅಗ್ನಿಹೋತ್ರಿ

Tags

Related Articles

Close