ಪ್ರಚಲಿತ

ತನ್ನ ಪಕ್ಷ ದೇಶದ್ರೋಹಿಗಳ ಅಡ್ಡಾ ಎಂದು ಕಪಿಲ್ ಸಿಬಲ್ ತೋರಿಸಿದ್ದು ಹೇಗೆ? ಈ ವಿಷಯ ಗೊತ್ತಾದರೆ ಎಂದೂ ಈ ಪಕ್ಷಕ್ಕೆ ಓಟು ಹಾಕಲಾರಿರಿ…

ಅಯೋಧ್ಯೆಯಲ್ಲಿ ಬಾಬ್ರಿ ಕಟ್ಟಡ ವಿವಾದಕ್ಕೆ ಸಂಬಂಧಿಸಿದ ತೀರ್ಪು ಮುಂದಿನ ಲೋಕಸಭಾ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುವುದರಿಂದ ಪ್ರಕರಣದ ವಿಚಾರಣೆಯನ್ನು 2019ರ ಜುಲೈ ಬಳಿಕ ನಡೆಸಬೇಕೆಂದು ಹಿರಿಯ ನ್ಯಾಯವಾದಿ, ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಮಂಗಳವಾರ ಸುಪ್ರೀಂಕೋರ್ಟಿನಲ್ಲಿ ಮಾಡಿಕೊಂಡ ಮನವಿ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿಯವರು ಸಿಬಲ್‍ರನ್ನು ಟೀಕಿಸಿದ್ದಾರೆ. ವಿಷಯ ಗಂಭೀರವಾಗುತ್ತಿರುವುದನ್ನು ಮನಗಂಡ ಕಾಂಗ್ರೆಸ್, ಸಿಬಲ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ.

ಒಂದೆಡೆ ಗುಜರಾತ್ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟು ಕೊಂಡು ಹಿಂದು ಮತಬ್ಯಾಂಕ್ ಗಟ್ಟಿಮಾಡಿಕೊಳ್ಳುವ ಉದ್ದೇಶದಿಂದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಗುಡಿ ಗೋಪುರ ಸುತ್ತುತ್ತಿದ್ದರೆ ಮತ್ತೊಂದೆಡೆ ಸುಪ್ರೀಂಕೋರ್ಟ್‍ನಲ್ಲಿ ಸುನ್ನಿ ವಕ್ಪ್ ಬೋರ್ಡ್ ಪ್ರತಿನಿಧಿಸಿರುವ ಅದೇ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ವಕೀಲರಾಗಿ ಪ್ರಕರಣದ ವಿಚಾರಣೆಯನ್ನು ಮುಂದೂಡಬೇಕೆಂದು ಮನವಿ ಮಾಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಈ ನಡೆಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದು, ಚುನಾವಣೆಗೂ ರಾಮಮಂದಿರಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ. ಮತ್ತೊಂದೆಡೆ, ವಿಚಾರಣೆ ವಿಳಂಬಕ್ಕೆ ತನ್ನ ಸಹಮತವಿಲ್ಲ ಎಂದಿರುವ ಸುನ್ನಿ ವಕ್ಪ್ ಬೋರ್ಡ್, ಸಿಬಲ್ ತಾವು ವಕೀಲನೆಂಬುದನ್ನು ಮರೆತು ಪಕ್ಷದ ಪ್ರತಿನಿಧಿ ಎಂಬುದನ್ನು ತೋರಿಸಿದ್ದಾರೆಂದು ಕಿಡಿಕಾರಿದೆ. ಸಿಬಲ್ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು.

ಗುಜರಾತ್‍ನಲ್ಲೂ ಮಂದಿರ ಸದ್ದು

ಮೊದಲ ಹಂತದ ಮತದಾನಕ್ಕೆ ಮೂರು ದಿನ ಬಾಕಿ ಇರುವಾಗಲೇ ಗುಜರಾತ್ ನಲ್ಲಿ ರಾಮಮಂದಿರ ವಿಚಾರವಾಗಿ ರಾಜಕೀಯ ಚುಟುವಟಿಕೆ ಜೋರಾಗಿದೆ. ರಾಜ್ಯದಲ್ಲಿ ಚುರುಕಿನ ಚುನಾವಣಾ ಪ್ರಚಾರ ಕೈಗೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ 15 ದಿನಗಳಲ್ಲಿ 22 ದೇವಾಲಯಗಳಿಗೆ ಭೇಟಿ ನೀಡಿ, ಹಿಂದುಗಳ ಮತ ಸೆಳೆಯಲು ಯತ್ನಿಸಿದ್ದಾರೆ. ಇದು ಬಿಜೆಪಿ ಪಾಳಯದಲ್ಲಿ ತುಸು ಆತಂಕ ಸೃಷ್ಟಿಸಿದೆ. ಈಗ ಸಿಬಲ್ ನೀಡಿರುವ ಹೇಳಿಕೆ ಬಿಜೆಪಿಗೆ ಹೊಸ ಅಸ್ತ್ರ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ರಾಮಮಂದಿರ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಭಾರಿ ಪ್ರಚಾರ ನಡೆಸುತ್ತಿದೆ. ಈವರೆಗೆ ಲೋಕಸಭಾ ಚುನಾವಣೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗುತ್ತಿದ್ದ ರಾಮಮಂದಿರ ವಿಚಾರ ಈಗ ಗುಜರಾತ್ ವಿಧಾನಸಭಾ ಚುನಾವಣೆಯಲ್ಲೂ ಚರ್ಚೆಯ ವಿಷಯವಾಗಿದೆ.

ಸಿಬಲ್‍ರಿಂದ ಪ್ರಕರಣ ಹೈಜಾಕ್

ಕಪಿಲ್ ಸಿಬಲ್ ನಡೆಗೆ ಅವರ ಕಕ್ಷಿದಾರ ಸುನ್ನಿ ವಕ್ಪ್ ಬೋರ್ಡ್ ಅಸಮಾಧಾನ ವ್ಯಕ್ತಪಡಿಸಿದೆ. ಲೋಕಸಭಾ ಚುನಾವಣೆ ಮುಗಿಯುವವರೆಗೆ ಪ್ರಕರಣದ ವಿಚಾರಣೆಯನ್ನು ಮುಂದೂಡಲು ಮನವಿ ಮಾಡುವಂತೆ ನಾವು ಅವರನ್ನು ಕೇಳಿಕೊಂಡಿರಲಿಲ್ಲ. ಸಿಬಲ್ ನ್ಯಾಯವಾದಿ ಹಾಗೂ ರಾಷ್ಟ್ರೀಯ ಪಕ್ಷವೊಂದರ ಮುಖಂಡರು. ಅವರು ಸುಪ್ರೀಂಕೋರ್ಟ್‍ನಲ್ಲಿ ಮಾಡಿದ ಮನವಿ ಸರಿಯಲ್ಲ.

ಅಯೋಧ್ಯೆ ವಿವಾದ ಶೀಘ್ರದಲ್ಲಿ ಪರಿಹಾರವಾಗಬೇಕು ಎಂಬುದು ನಮ್ಮ ನಿಲುವು ಎಂದು ಸುನ್ನಿ ವಕ್ಪ್ ಬೋರ್ಡ್ ಪ್ರತಿನಿಧಿ ಹಾಜಿ ಮಹಮ್ಮದ್ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಸೋತರೆ, ಮುಂದಿನ ಲೋಕಸಭಾ ಚುನಾ ವಣೆಯಲ್ಲೂ ಕಾಂಗ್ರೆಸ್ ಸೋಲುತ್ತದೆ ಎಂಬ ಕಾರಣಕ್ಕೆ ಸಿಬಲ್ ರಾಜಕೀಯ ಆಧಾರದ ಮೇಲೆ ವಾದ ಮಂಡಿಸಿದ್ದಾರೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ

ಎಲೆಕ್ಷನ್‍ಗೂ ಮಂದಿರಕ್ಕೂ ಏನು ಸಂಬಂಧ

ಅಯೋಧ್ಯೆ ವಿವಾದ ಪ್ರಕರಣದ ವಿಚಾರಣೆ ಮುಂದೂಡಬೇಕೆಂಬ ಕಪಿಲ್ ಸಿಬಲ್ ನಿಲುವಿಗೆ ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಈ ನಿಲುವಿನ ಹಿಂದಿನ ವೈಚಾರಿಕತೆಯನ್ನು ಪ್ರಶ್ನಿಸಿದ್ದಾರೆ. ಬುಧವಾರ ಗುಜರಾತ್‍ನ ರ್ಯಾಲಿಯಲ್ಲಿ ಮಾತನಾಡಿದ ಅವರು, ತ್ರಿವಳಿ ತಲಾಕ್ ಹಾಗೂ ರಾಮಮಂದಿರ ವಿವಾದ ಕುರಿತು ಸಿಬಲ್ ಮುಸ್ಲಿಮ್ ಸಮುದಾಯ ಪರ ಹೋರಾಡುತ್ತಿರುವುದಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ ರಾಮಮಂದಿರ ಪ್ರಕರಣದ ವಿಚಾರಣೆಯನ್ನು 2019ರ ಜುಲೈವರೆಗೆ ಮುಂದೂಡಬೇಕು ಎಂದು ಏಕೆ ಹೇಳುತ್ತಿದ್ದಾರೆ. ಕಾಂಗ್ರೆಸ್ ನಾಯಕರು ರಾಮಮಂದಿರ ವಿಚಾರವನ್ನು ಚುನಾವಣೆಗೆ ತಳುಕು ಹಾಕುತ್ತಿದ್ದಾರೆ. ಆದರೆ ದೇಶದ ಬಗ್ಗೆ ಅವರಿಗೆ ಕಾಳಜಿಯಿಲ್ಲ ಎಂದು ಮೋದಿ ಹರಿಹಾಯ್ದಿದ್ದಾರೆ.

ಅಂತರ ಕಾಯ್ದ ಕಾಂಗ್ರೆಸ್

ಸಿಬಲ್ ಹೇಳಿಕೆ ವಿವಾದಕ್ಕೆ ತಿರುಗುತ್ತಲೇ ಅಯೋಧ್ಯೆ ವಿಚಾರದಲ್ಲಿ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. ಪ್ರಕರಣ ಮುಂದೂಡಬೇಕೆಂಬುದು ಅವರ ವೈಯಕ್ತಿಕ ಅಭಿಪ್ರಾಯ. ಸುಪ್ರೀಂ ಮಾರ್ಗದರ್ಶನದಲ್ಲಿ ವಿವಾದ ಶೀಘ್ರ ಬಗೆಹರಿಯಲಿ ಎಂಬುದು ಪಕ್ಷದ ನಿಲುವಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಸ್ಪಷ್ಟಪಡಿಸಿದ್ದಾರೆ.

ಸಿಬಲ್ ಮಾಡಿದ ಇನ್ನಷ್ಟು ಟ್ರಬಲ್

ದೇಶ ದ್ರೋಹಿ ಘೋಷಣೆ ಕೂಗಿದ ಕನ್ಹಯ್ಯ ಕುಮಾರ್  ಪರ ವಕೀಲ ಕಪಿಲ್ ಸಿಬಲ್:

ಜವಹರ್‍ಲಾಲ್ ನೆಹರೂ ವಿಶ್ವ ವಿದ್ಯಾಲಯದಲ್ಲಿ ದೇಶ ದ್ರೋಹಿ ಘೋಷಣೆ ಕೂಗಿದ ಕನ್ಹಯ್ಯ ಕುಮಾರ್ ಬಗ್ಗೆ ಇಡೀ ದೇಶವೇ ರೊಚ್ಚಿಗೆದ್ದು ಪ್ರತಿಭಟಿಸಿತ್ತು. ಆದರೆ ನ್ಯಾಯಾಲಯದಲ್ಲಿ ಅದೇ ದೇಶದ್ರೋಹಿ ಪರ ವಕಾಲತು ಮಾಡಿದ ಮತ್ತೊಬ್ಬ ದೇಶದ್ರೋಹಿ ಇದೇ ಕಪಿಲ್ ಸಿಬಲ್..

ಹಾರ್ದಿಕ್ ಪಟೇಲ್ ಪರ ವಕೀಲ ಕಪಿಲ್ ಸಿಬಲ್

ಗುಜರಾತ್‍ನಲ್ಲಿ ಜಾತಿ ಜಾತಿಗಳ ಮಧ್ಯೆ ತಿಕ್ಕಾಟವನ್ನು ಏರ್ಪಡಿಸಿ ಅರಾಜಕತೆಗೆ ಕಾರಣವಾಗಿದ್ದ ಹಾರ್ದಿಕ್ ಪಟೇಲ್ ಎಂಬ ಸ್ವಘೋಷಿತ ಜನ ನಾಯಕನ ದೇಶ ದ್ರೋಹದ ಚಟುವಟಿಕೆಗಳ ಪರವಾಗಿ ವಕಾಲತು ನಡೆಸಿದ ಕಪಿಲ್ ಸಿಬಲ್

ರೋಹಿಂಗ್ಯ ಮುಸ್ಲಿಂರ ಪರ ವಕೀಲ

ಮ್ಯಾನ್‍ಮ್ಮಾರ್‍ನಿಂದ ಭಾರತಕ್ಕೆ ವಲಸೆ ಬಂದ ರೋಹಿಂಗ್ಯಾ ಮುಸ್ಲಿಮರಿಗೆ ಇಲ್ಲಿ ಆಶ್ರಯ ನೀಡಬೇಕು ಎಂದು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದು ಇದೇ ಕಪಿಲ್ ಸಿಬಲ್… ಅಲ್ಪ ಸಂಖ್ಯಾತರ ಮತಗಳಿಸಬೇಕು ಎನ್ನುವ ಉದ್ಧೇಶವನ್ನಿಟ್ಟುಕೊಂಡು ಆ ರೋಹಿಂಗ್ಯಾ ಮುಸ್ಲಿಮರನ್ನು ಇಲ್ಲೇ ಇರಿಸುವಂತೆ ಹರ ಸಾಹಸ ಪಟ್ಟಿದ್ದು ಈ ಕಾಂಗ್ರೆಸ್ ಮತ್ತು ಕಪಿಲ್ ಸಿಬಲ್.

ಲವ್ ಜಿಹಾದ್ ಪರ ವಕೀಲ-ಕಪಿಲ್ ಸಿಬಲ್

ಹಿಂದೂ ಹೆಣ್ಣು ಮಕ್ಕಳನ್ನು ಪ್ರೀತಿಸಿ ಮದುವೆ ನೆಪದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುವುದಕ್ಕೆ ಇಡೀ ದೇಶ ದೇಶವೇ ಲವ್ ಜಿಹಾದ್‍ನ್ನು ದ್ವೇಷಿಸುತ್ತಿದ್ದರೆ ಕಪಿಲ್ ಸಿಬಲ್ ಮಾತ್ರ ಲವ್ ಜಿಹಾದ್ ಪರ ಹೋರಾಟ ನಡೆಸಿದ್ದಾರೆ.

ತ್ರಿವಳಿ ತಲಾಕ್ ಪರ ವಕೀಲ ಕಪಿಲ್ ಸಿಬಲ್

ಮುಸ್ಲಿಮ್ ಮಹಿಳಾ ಸಂಘಟನೆ ಭಾರತೀಯ ಮುಸ್ಲಿಮ್ ಮಹಿಳಾ ಆಂದೋಲನ್ ತ್ರಿವಳಿ ತಲಾಖ್ ಹಾಗೂ ನಿಖ್ಹಾ ಹಲಾಲಾಗೆ ನಿಷೇಧ ಹೇರುವಂತೆ ಕೋರಿ ಎರಡು ವರ್ಷದ ಹಿಂದೆ ಆಂದೋಲನವನ್ನು ಆರಂಭಿಸಿತ್ತು. ಅದಲ್ಲದೆ ಪ್ರಧಾನಿ ನರೇಂದ್ರ ಮೋದಿಯವರೂ ಈ ಅನಿಷ್ಟ ಪದ್ಧತಿಯನ್ನು ನಿಷೇಧ ಮಾಡಬೇಕು ಎಂದು ಹಲವಾರು ಪ್ರಸ್ತಾಪ ಕೂಡಾ ಮಾಡಿದ್ದರು. ಆದರೆ ಕಪಿಲ್ ಸಿಬಲ್ ಮಾತ್ರ ಈ ತ್ರಿವಳಿ ತಲಾಖ್ ಪರ ವಾದವನ್ನು ಮಂಡಿಸಿದ್ದರು.

ಕಾಂಗ್ರೆಸ್‍ನ ದೊಡ್ಡ ನಾಯಕ ಕಪಿಲ್ ಸಿಬಾಲ್ 

ಹೌದು ಈ ಎಲ್ಲಾ ಅಂಶಗಳನ್ನು ನಾವು ಗಮನ ಹರಿಸಿದರೆ ಕಾಂಗ್ರೆಸ್ನ ದೊಡ್ಡ ನಾಯಕ ಎಂದೇ ಹೇಳಬಹುದು…ಒಬ್ಬ ವಕೀಲನಾಗಿ ಕಪಿಲ್ ಸಿಬಲ್ ನ್ಯಾಯಕ್ಕಾಗಿ ಹೋರಾಟ ಮಾಡುವ ಬದಲು ಅನ್ಯಾಯದ ವಿರುದ್ಧನೇ ಹೋರಾಟ ಮಾಡುವಲ್ಲಿ ಎತ್ತಿದ ಕೈ…

ಹಾಗಾದರೇ ಕಾಂಗ್ರೆಸ್ ಒಂದು ರಾಜಕೀಯ ಪಕ್ಷನಾ ಅಥವಾ ದೇಶದ್ರೋಹಿಗಳ ಅಡ್ಡನಾ? ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.

-ಪವಿತ್ರ

Tags

Related Articles

Close