ಪ್ರಚಲಿತ

ತಾನೊಬ್ಬ ಸಮಾಜವಾದಿ ಎಂದು ಬೋಂಗು ಬಿಡುತ್ತಿರುವ ಸಿದ್ದರಾಮಯ್ಯ ಮೌಢ್ಯತೆಯ ವಿಚಾರದಲ್ಲಿ ಯೋಗಿಯಿಂದ ಕಲಿಯಬೇಕಾಗಿರುವುದೇನು?!

ನಾನೊಬ್ಬ ಸಮಾಜವಾದಿ, ನಾನು ದೇವರು ದಿಂಡರನ್ನೆಲ್ಲಾ ನಂಬುವುದಿಲ್ಲ ನಾನು ನಾಸ್ತಿಕ ಎಂದೆಲ್ಲಾ ಬೋಂಗು ಬಿಡುತ್ತಿದ್ದ ಸಿದ್ದರಾಮಯ್ಯ ಅಂದೊಂದು ದಿನ ತಾನೆಷ್ಟು ಮೌಢ್ಯವನ್ನು ನಂಬುತ್ತಾರೆ ಎನ್ನುವುದನ್ನು ತೋರಿಸಿಕೊಟ್ಟಿದ್ದರು. ಇದೆಲ್ಲಾ ಮುಸ್ಲಿಮರ ಓಟಿಗಾಗಿ ಮಾಡುವ ಸಿದ್ದರಾಮಯ್ಯನ ತಂತ್ರ ಎನ್ನುವುದು ಆ ಬಳಿಕ ಬಹಿರಂಗಗೊಂಡಿತ್ತು.

ಇತ್ತೀಚೆಗೆ ಮುಸ್ಲಿಮರೂ ಕೂಡಾ ಕಾಂಗ್ರೆಸಿಗೆ ಕೈ ಕೊಡುತ್ತಿರುವುದನ್ನು ಮನಗಂಡ ಸಿದ್ದು, ಇದೀಗ ಮತ್ತೆ ಹಿಂದುತ್ವದ ಪ್ರತಿಪಾದಕರಂತೆ ನಾಟಕ ಮಾಡುತ್ತಿದ್ದಾರೆ. ತನ್ನನ್ನು ಅಹಿಂದು ಎಂದು ಘೋಷಿಸಿಕೊಳ್ಳುತ್ತಿದ್ದ ಸಿದ್ದರಾಮಯ್ಯ ಇದೀಗ ನಾನೂ ಕೂಡಾ ಹಿಂದು ನನ್ನ ಹೆಸರಲ್ಲಿ ರಾಮನಿದ್ದಾನೆ ಎಂದು ಬಣ್ಣ ಬದಲಿಸುವ ಗೋಸುಂಬೆಯಂತೆ ನಾಟಕವಾಡುತ್ತಿದ್ದಾರೆ. ಸಮಾಜವಾದದ ಹೆಸರಲ್ಲಿ ಸಕಲೈಶ್ವರ್ಯ ಸುಖಭೋಗಗಳನ್ನು ಅನುಭವಿಸುತ್ತಿರುವ ಸಿದ್ದರಾಮಯ್ಯ ಮೌಢ್ಯವನ್ನು ನಂಬುವ ಒಬ್ಬ ಮುಖ್ಯಮಂತ್ರಿ ಎಂಬುವುದನ್ನು ಒಮ್ಮೆ ತೋರಿಸಿಕೊಟ್ಟಿದ್ದರು.

ಇಂಥಾ ಡೋಂಗಿ ಸಮಾಜವಾದಿ ಸಿದ್ಧಾಂತದ ಪ್ರತಿಪಾದಕ ಸಿದ್ದರಾಮಯ್ಯನವರು ಯೋಗಿ ಆದಿತ್ಯನಾಥ್ ಜೀ ಎಂದು ಕಲಿಯುವುದು ತುಂಬಾ ಇದೆ. ಯಾಕೆಂದರೆ ಅವರ ಸಂತ ಪರಂಪರೆಯನ್ನು ಮೂಢನಂಬಿಕೆ ಎಂದು ಚಿತ್ರಿಸುವ ಬುದ್ಧಿಜೀವಿಗಳು ಯೋಗಿ ಆದಿತ್ಯನಾಥ್ ಜೀ ಆಧುನೀಕರಣಕ್ಕೆ ಒತ್ತು ನೀಡುತ್ತಾರೆ ಎನ್ನುವುದನ್ನು ಕಲಿಯಬೇಕಾಗಿದೆ. ಯೋಗಿಯವರದ್ದು ಮೌಢ್ಯ ಬಿತ್ತುವ ಕಾರ್ಯ ಎಂದು ಪ್ರತಿಪಾದಿಸುವವರೆಲ್ಲಾ ಅವರನ್ನು ನೋಡಿ ಕಲಿಯಬೇಕಾಗಿರುವುದು ತುಂಬಾ ಇದೆ.

ಸಿದ್ದರಾಮಯ್ಯ ಮೌಢ್ಯವನ್ನು ನಂಬುವುದಿಲ್ಲ ಎನ್ನುವುದು ಬೂಟಾಟಿಕೆ ಅಷ್ಟೆ. ಯಾಕೆಂದರೆ ಅಂತರಾಳದಲ್ಲಿ ಸಿದ್ದರಮಯ್ಯ ಮೌಢ್ಯತೆಯನ್ನು ನಂಬುವ ವ್ಯಕ್ತಿ. ಖುರ್ಚಿ ಉಳಿಯುವ ಸಲುವಾಗಿ ಮಂತ್ರವಾದಿಗಳಿಂದ ಸಲಹೆ ಪಡೆದು, ಕೊನೆಗೆ ದೇವಸ್ಥಾನ ದೇವಸ್ಥಾನ ಸುತ್ತುವುದ್ನೂ ಮಾಡುತ್ತಾರೆ. ಒಂದು ಕಡೆ ನಾಸ್ತಿಕ ಎಂದು ಮತ್ತೊಂದು ಕಡೆ ದೇವಸ್ಥಾನಕ್ಕೆ ಭೇಟಿ, ದೇವರಿಗೆ ಸೀರೆ ಹರಕೆ ಒಪ್ಪಿಸುವ ಒಬ್ಬ ಎಡಬಿಡಂಗಿ ವ್ಯಕ್ತಿ..

ಆದ್ದರಿಂದ ತನ್ನ ಸಿದ್ದಾಂತವನ್ನು ಮನಸ್ಸಿಗೆ ಬೇಕಾದಂತೆ ತಿರುಚುತ್ತಿದ್ದ ಸಿದ್ದರಾಮಯ್ಯನವರು ಯೋಗಿ ಆದಿತ್ಯನಾಥ್ ಅವರಿಂದ ಕಲಿಯುವಂಥದ್ದು ತುಂಬಾ ಇದೆ. ಮೌಢ್ಯತೆಯ ವಿಚಾರದಲ್ಲಿ ಸ್ಪಷ್ಟ ನಿಲುವಿಲ್ಲದ ಸಿದ್ದುವಿಗೆ ಆದಿತ್ಯನಾಥ್‍ಜೀ ಅವರ ಈ ಒಂದು ಕೆಲಸ ಚೆನ್ನಾಗಿ ಪಾಠಕಲಿಸಬಲ್ಲುದು…

ನಿಮಗೆ ನೆನಪಿದೆಯೇ?

`ಶಾಪಗ್ರಸ್ತ ನಗರ’ ಎಂದೇ ಹಣೆಪಟ್ಟಿ ಕಟ್ಟಿಕೊಂಡಿರುವ ಚಾಮರಾಜನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೇಟಿ ನೀಡಲು ಸಿದ್ದರಾಮಯ್ಯ ಮೀನಾಮೇಷ ಎಣಿಸುತ್ತಿದ್ದರು. ಚಾಮರಾಜನಗರಕ್ಕೆ ಸಿಎಂ ಭೇಟಿನೀಡಿದರೆ ತನ್ನ ಹುದ್ದೆಯನ್ನು ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ ಚಾಲ್ತಿಯಲ್ಲಿತ್ತು. ಇದನ್ನು ಸಿದ್ದರಾಮಯ್ಯ ಕೂಡಾ ನಂಬಿದ್ದರು. ಈ ಬಗ್ಗೆ ಸಾಕಷ್ಟು ಒತ್ತಡ ಹೇರಿದ್ದರೂ ಸಿದ್ದು ಭೇಟಿಯಾಗಿರಲಿಲ್ಲ. ಕೊನೆಗೆ ತನ್ನ ಘನತೆಯ ಪ್ರಶ್ನೆ ಎಂದು ಕೊನೆಗೂ ಚಾಮರಾಜನಗರಕ್ಕೆ ಭೇಟಿ ನೀಡಿ ವಿವಿಧ ಕಾಮಗಾರಿಗಳಿಗೆ ಭೇಟಿ ನೀಡಿ ಬಂದಿದ್ದರು. ಭೇಟಿ ನೀಡಿದ ಬಳಿಕ ತಾನೊಬ್ಬ ಮಹಾ ಸಮಾಜವಾದಿ ಎನ್ನುವಂತೆ ಬೋಂಗುಬಿಟ್ಟಿದ್ದರು..

ತನ್ನ ಕಾರಿನ ಮೇಲೆ ಕಾಗೆ ಕುಳಿತಿತು ಎಂದು ಕಾರನ್ನೇ ಬದಲಿಸಿದ ಸಿದ್ದರಾಮಯ್ಯ ಯಾವ ರೀತಿಯ ಮೌಢ್ಯ ವಿರೋಧಿ ಪ್ರತಿಪಾದಕರು ಎನ್ನುವುದನ್ನು ತೋರಿಸಿಕೊಟ್ಟಿದ್ದರು. ರಾಜ್ಯದಲ್ಲಿ ಮಳೆ ಬರುವುದಿಲ್ಲ ಎಂದು ಪರ್ಜನ್ಯ ಹೋಮ ಮಾಡಿಸಿದ್ದರು ಸಿದ್ದರಾಮಯ್ಯ. ತನಗೆ ಮಾಟ ಮಾಡಿದ್ದರೆಂದು ನಂಬಿದ್ದ ಸಿದ್ದರಾಮಯ್ಯ ಕೈಯ್ಯಲ್ಲಿ ಲಿಂಬೆಹುಳಿ ಹಿಡಿದು ಮಾಟಕ್ಕೆ ಮೂಲಿಕೆ ಮಾಡಿದ್ದರು. ಇದೀಗ ದೇವಸ್ಥಾನ ದೇವಸ್ಥಾನ ಸುತ್ತುವ ಸಿದ್ದು ಇಂದು ಮಸೀದಿಗೆ ಹೋಗಿ ತುಲಾಭಾರ ಮಾಡಿಸಿಕೊಂಡು ಬಂದಿದ್ದಾರೆ. ಇಂಥದೊಂದು ವ್ಯಕ್ತಿ ಇಂದು ಮೌಢ್ಯವನ್ನು ನಂಬುವುದಿಲ್ಲ ಎನ್ನುವ ಮಾತಿಗೆ ನಿಜವಾದ ಅರ್ಥವಿದೆಯೇ?

ಸಿದ್ದರಾಮಯ್ಯ ಹೊರಗೊಂದು ಒಳಗೊಂಡು ಆಡುವ ಬದಲು ನೇರ ನಡೆನುಡಿಯ ಯೋಗಿ ಆದಿತ್ಯನಾಥ್‍ಜೀ ಅವರನ್ನು ನೋಡಿ ಕಲಿಯಲಿ…

ನೋಯ್ಡಾಗೆ ಭೇಟಿ ನೀಡುವ ಉತ್ತರ ಪ್ರದೇಶ ಮುಖ್ಯಮಂತ್ರಿಗಳು ಮತ್ತೊಮ್ಮೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಮೂಢ ನಂಬಿಕೆ ಇದೆ. ಇದನ್ನು ಮೌಢ್ಯ ಎಂದು ಸಾಬೀತು ಮಾಡುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೋಯ್ಡಾಗೆ ಭೇಟಿ ನೀಡಿ ತಾನೊಬ್ಬ ಮೌಢ್ಯತೆಯ ಕಟ್ಟಾ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಚಾಮರಾಜನಗರಕ್ಕೆ ಭೇಟಿ ನೀಡಲು ಹಿಂದೆ ಮುಂದೆ ನೋಡುತ್ತಿದ್ದ ಸಿದ್ದರಾಮಯ್ಯ ಯೋಗಿ ಆದಿತ್ಯನಾಥ್ ಅವರನ್ನು ನೋಡಿ ಕಲಿಯಬೇಕಿದೆ.

ದೆಹಲಿಯ ಜನಕಪುರಿಯಿಂದ ನೋಯ್ಡಾದವರೆಗೆ ಮೆಜೆಂತಾ ಮೆಟ್ರೋ ಲೈನ್ ನಿರ್ಮಿಸಲಾಗಿದ್ದು, ಮೆಟ್ರೋ ರೈಲು ಉದ್ಘಾಟನೆಗಾಗಿ ಯೋಗಿ ಆದಿತ್ಯನಾಥ್ ನೋಯ್ಡಾಗೆ ಭೇಟಿ ನೀಡಿದ್ದರು. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಯೋಗಿ ಆದಿತ್ಯನಾಥ್ ಸ್ವಾಗತಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುವುದಕ್ಕೂ ಮುನ್ನವೇ ಅಂದರೆ ಡಿ.23 ರ ಸಂಜೆಯೇ ನೋಯ್ಡಾಗೆ ಭೇಟಿ ನೀಡಿದ್ದ ಯೋಗಿ ಆದಿತ್ಯನಾಥ್, ನೋಯ್ಡಾಗೆ ಸಂಬಂಧಿಸಿದಂತೆ ಇದ್ದ ಮೌಢ್ಯವನ್ನು ಸುಳ್ಳು ಎಂದು ಸಾಬೀತು ಪಡಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಹಾಕಿದ್ದಾರೆ.

ಮೌಢ್ಯವನ್ನು ತೊಲಗಿಸುವ ಸಿಎಂ ಯೋಗಿ ಆದಿತ್ಯನಾಥ್ ಅವರ ನಡೆಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆಡಳಿತದಲ್ಲಿ ಮೌಢ್ಯಕ್ಕೆ ಆಸ್ಪದವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಉಡುಗೆಯನ್ನು ನೋಡಿ ಜನರು ಆದಿತ್ಯನಾಥ್ ಆಧುನಿಕವಾಗಿಲ್ಲ ಎಂದುಕೊಳ್ಳುತ್ತಾರೆ, ಆದರೆ ಯೋಗಿ ಜಿ ಉತ್ತರ ಪ್ರದೇಶದ ಹಿಂದಿನ ಯಾವುದೇ ಮುಖ್ಯಮಂತ್ರಿಗಳೂ ಮಾಡದೇ ಇದ್ದ ಮೌಢ್ಯವನ್ನು ತೊಲಗಿಸುವ ಕೆಲಸವನ್ನು ಮಾಡಿರುವುದು ಸಂತಸದ ಸಂಗತಿ ಎಂದು ಪ್ರಧಾನಿ ಮೋದಿ ಯೋಗಿಯನ್ನು ಶ್ಲಾಘಿಸಿದ್ದಾರೆ.

ಗುಜರಾತ್‍ನಲ್ಲಿ ಮುಖ್ಯಮಂತ್ರಿಯಾಗಿದ್ದಾಗ ತಮಗೂ ನಿರ್ದಿಷ್ಟ ಪ್ರದೇಶಗಳಿಗೆ ತೆರಳದಂತೆ ಸಲಹೆ ಬರುತ್ತಿತ್ತು, ಆದರೆ ಮೌಢ್ಯಕ್ಕೆ ಆಸ್ಪದ ನೀಡದೇ ಆ ಪ್ರದೇಶಗಳಿಗೆ ಭೇಟಿ ನೀಡಿದ್ದೆ, ಈಗ ಯೋಗಿ ಆದಿತ್ಯನಾಥ್ ಅವರೂ ಅದೇ ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂದು ಮೋದಿ ಹೆಮ್ಮೆ ಪಟ್ಟಿದ್ದಾರೆ.

ತಾನೊಬ್ಬ ಸಮಾಜವಾದಿ, ನಾಸ್ತಿಕ, ಮೂಢನಂಬಿಕೆಯ ವಿರೋಧಿ ಎಂದೆಲ್ಲಾ ಬೋಂಗು ಬಿಡುತ್ತಿರುವ ಸಿದ್ದರಾಮಯ್ಯ ಒಳಗಡೆ ಮಾತ್ರ ಪಕ್ಕಾ ಮೌಢ್ಯತೆಯ ಕೂಪದಲ್ಲಿಯೇ ಇದ್ದಾರೆ ಎನ್ನುವುದನ್ನು ಹಲವು ಬಾರಿ ಸಾಬೀತುಪಡಿಸಿದ್ದಾರೆ. ಆದರೆ ಸಿದ್ದು ಮೋದಿ, ಯೋಗಿಯಿಂದ ಕಲಿಯಬೇಕಾದುದು ಹಲವಷ್ಟಿದೆ.

ಚೇಕಿತಾನ

Tags

Related Articles

Close