ಪ್ರಚಲಿತ

ತಾಲಿಬಾನ್ ಉಗ್ರನೊಂದಿಗಿದ್ದ ಕಾಂಗ್ರೆಸ್ ನಾಯಕ ‘ಚಿದಂಬರಂ’ ಫೋಟೋ ವೈರಲ್!! ಮತ್ತೊಮ್ಮೆ ಬಯಲಾಯಿತು ಕಾಂಗ್ರೆಸ್‍ನ ಕರಾಳ ಮುಖ!

ಬಯಲಾಯಿತು ಚಿದಂಬರ ರಹಸ್ಯ!

ಕಾಂಗ್ರೆಸ್ ಅನ್ನುವ ದೇಶದ್ರೋಹಿ ಪಕ್ಷ ಅದೆಷ್ಟೇ ತಮ್ಮ ರಾಷ್ಟ್ರಪ್ರೇಮವನ್ನು ಸಮರ್ಥಿಸಿಕೊಂಡರೂ ಒಂದಲ್ಲಾ ಒಂದು ದಿನ ಅವರ ನೈಜ ಮುಖ
ಅನಾವರಣಗೊಳ್ಳುತ್ತದೆ ಅನ್ನೋದಕ್ಕೆ ಇದುವೇ ತಾಜಾ ಉದಾಹರಣೆ. ದೇಶದ ಆಂತರಿಕ ಭದ್ರತೆಗೆ ಅಪಾಯವನ್ನುಂಟುಮಾಡುವ ಈ ದೇಶದ್ರೋಹಿಗಳು ಅದ್ಯಾವ ಮಟ್ಟಕ್ಕೂ ಇಳಿಯಲು ಸಿದ್ಧರಿದ್ದಾರೆ ಅನ್ನೋದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇರೇನೂ ಬೇಡ.

ಈವರೆಗೂ ನಾವಂದಕೊಂಡದ್ದು ಇಷ್ಟೆ. ದೇಶದಲ್ಲಿ ಮೋದಿ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದ ನಂತರ ಕಾಂಗ್ರೆಸ್ಸಿಗರಿಗೆ ಉಗ್ರರನ್ನು, ದೇಶದ್ರೋಹಿಗಳನ್ನು ಭೇಟಿ ಮಾಡುವ ಗೀಳು ಹಿಡಿದು ಹೋಗಿದೆ ಎಂದು. ಆದರೆ ತಮ್ಮ ಆಡಳಿತಾವಧೀಯಲ್ಲೂ ದೇಶದ್ರೋಹದ ಕೆಲಸಗಳನ್ನು ಮಾಡುತ್ತಾ ಜನರನ್ನು ಮೋಸಗೊಳಿಸುತ್ತಲೇ ಬಂದಿತ್ತು ಈ ಕಾಂಗ್ರೆಸ್. ಅದರ ಒಂದು ಭಾಗವೇ ತಾಲಿಬಾನ್ ಉಗ್ರನೊಂದಿಗೆ ಚಿದಂಬರಂ ಭೇಟಿ.

ಬಯಲಾಯಿತು “ಚಿದಂಬರ” ರಹಸ್ಯ..!!!

ತನ್ನ ಅವಧಿಯಲ್ಲಿ ಸಾಲು ಸಾಲು ಹಗರಣಗಳ ಮೂಲಕ ಭ್ರಷ್ಟಾಚಾರಗಳ ಸರಮಾಲೆಯನ್ನೇ ಹೊತ್ತುಕೊಂಡಿದ್ದ ಈ ಚಿದಂಬರಂ ಎನ್ನುವ ಕಾಂಗ್ರೆಸ್ ನಾಯಕ ತನ್ನ ಆಡಳಿತಾವಧಿಯಲ್ಲಿ ತಾಲಿಬಾನ್ ಉಗ್ರನೊಂದಿಗೆ ಸಭೆ ನಡೆಸಿದ್ದು ಈಗ ಮಾಧ್ಯಮಗಳಲ್ಲಿ ಭಾರೀ ಸದ್ಧಾಗುತ್ತಿದೆ. ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ವಿತ್ತ ಸಚಿವ ಪಿ. ಚಿದಂಬರಂ ಹಾಗೂ ತಾಲಿಬಾನ್ ಉಗ್ರ ಸಂಘಟನೆಯ ನಾಯಕ ಮುಲ್ಲಾ ಅಬ್ದುಲ್ ಝಯೀಪ್ ಎಂಬಾತನನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ 2013ರ ಚಿತ್ರ ಭಾರೀ ವೈರಲ್ ಆಗಿದೆ. ಪಿ.ಚಿದಂಬರಂ ವಿತ್ತ ಸಚಿವರಾಗಿದ್ದ ಸಂದರ್ಭದಲ್ಲಿ ತಾಲಿಬಾನ್ ಉಗ್ರನನ್ನು ಭೇಟಿಯಾಗಿದ್ದ ಬಗ್ಗೆ ಕೇಂದ್ರ ರಕ್ಷಣಾ ಸಚಿವೆಯಾದ ನಿರ್ಮಲಾ ಸೀತಾರಾಮನ್ ಶೇರ್ ಮಾಡಿದ್ದಾರೆ.

ಹಿಂದಿನಿಂದಲೂ ಚಿದಂಬರಂ ಎಂಬ ಕಾಂಗ್ರೆಸ್ ನಾಯಕ ರಾಷ್ಟ್ರದ್ರೋಹದ ಕೆಲಸಗಳನ್ನು ಮಾಡುತ್ತಲೇ ಬಂದಿದ್ದಾರೆ. ದೇಶದ ಆಸ್ತಿಗಳನ್ನು ನುಂಗಿ ನೀರು ಕುಡಿದದ್ದು ಸಾಲದೆ ಜಗತ್ತಿಗೇ ಕಂಟಕವಾಗಿರುವ ತಾಲಿಬಾನ್ ಉಗ್ರನೊಂದಿಗೆ ನಿಕಟ ಸಂಪರ್ಕವನ್ನು ಹೊಂದಿರುವುದು ಕಾಂಗ್ರೆಸ್ ಎಂಬ ದೇಶದ್ರೋಹಿ ಪಕ್ಷದ ಅಸಲಿ ಮುಖವನ್ನು ತೋರಿಸುವುದಲ್ಲದೆ ಮತ್ತಿನ್ನೇನು..?

ಹಾಲಿ, ಮಾಜಿ ಪ್ರಧಾನಿಗಳ ಫೈಟ್‍ನ ಅಸಲಿಯತ್ತು…

ಇತ್ತೀಚೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಾಕ್ ಹೈಕಮೀಷನರನ್ನು ಭೇಟಿ ಮಾಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಬಗ್ಗೆ ಪ್ರಧಾನಿಯವರ ಟೀಕೆಗೂ ಗುರಿಯಾಗಿದ್ದರು. ತಾನು ಅಧಿಕಾರದಲ್ಲಿರುವಾಗ ನೆಟ್ಟಗೆ ಆಡಳಿತ ಮಾಡಲಾಗದ ಈ ಮನಮೋಹನ್ ಸಿಂಗ್‍ರಿಗೆ ಈಗ ಪಾಕ್ ಹೈಮಿಷನರನ್ನು ಭೇಟಿ ಮಾಡುವ ಉದ್ಧೇಶವಾದರೂ ಏನಿತ್ತು ಎಂಬ ಪ್ರಶ್ನೆಗಳನ್ನು ದೇಶವಾಸಿಗಳು ಕಾಂಗ್ರೆಸ್ ಪಕ್ಷದಲ್ಲಿ ಇಡುತ್ತಿದ್ದಾರೆ. ಆದರೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‍ರವರು ಪ್ರಧಾನಿ ಮೋದಿಯವರನ್ನು ಟೀಕಿಸುತ್ತಾರೆ. ದೇಶಕ್ಕೋಸ್ಕರ ತನ್ನ ಮನೆ ಮಠವನ್ನು ಬಿಟ್ಟು ರಾಷ್ಟ್ರ ಸೇವೆಯನ್ನು ಮಾಡುತ್ತಿರುವ ಮೋದೀಜಿಯ ಬಗ್ಗೆ ಟೀಕೆ ಮಾಡುವ ಕಾಂಗ್ರೆಸ್ ನಾಯಕರು ಅವರ ಯೋಗ್ಯತೆಯನ್ನು ಅಳೆಯಬೇಕಾಗುತ್ತದೆ.

ಭಾರತ ಮತ್ತು ಪಾಕಿಸ್ಥಾನ ಎಂಬುವುದು ಬದ್ಧವೈರಿಗಳ ರಾಷ್ಟ್ರ ಎಂಬವುದು ಭಾರತ ಪಾಕಿಸ್ಥಾನ ಮಾತ್ರವಲ್ಲದೆ ಇಡಿಯ ಜಗತ್ತಿಗೆ ಗೊತ್ತಿರುವ ವಿಷಯವಾಗಿದೆ. ಪದೇ ಪದೇ ಪಾಪಿ ಪಾಕಿಸ್ಥಾನ ಎಂಬ ರಾಷ್ಟ್ರ ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಇರುತ್ತದೆ. ಕದನ ವಿರಾಕಮ ಉಲ್ಲಂಘನೆ, ಗಡಿಯಲ್ಲಿ ಉಗ್ರರ ಒಳನುಸುಳುವಿಕೆ, ಭಾರತೀಯ ಸೈನಿಕರ ಹತ್ಯೆ ಹೀಗೆ ಪಾಕಿಸ್ಥಾನದ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದನ್ನು ಅರಿತೂ ಈ ದೇಶದ ಕಾಂಗ್ರೆಸ್ ನಾಯಕರು ವೈರಿ ರಾಷ್ಟ್ರದ ಮುಂದೆ ಹೋಗಿ ಕೈಕುಲುಕುವ ಅಗತ್ಯವಾದರೂ ಏನಿರುತ್ತೆ.

ತಮ್ಮ ಅಧಿಕಾರಾವಧಿಯಲ್ಲಿ ಉಗ್ರರ ಉಪಟಳವನ್ನು ನಿಯಂತ್ರಿಸಲು, ಪಾಕಿಸ್ಥಾನಕ್ಕೆ ಉತ್ತರ ನೀಡಲು ಆಗುತ್ತಿರಲಿಲ್ಲ. ದಿನ ಬೆಳಗಾದರೆ ಬಾಂಬ್‍ಗಳ ಸದ್ಧೇ
ಕೇಳುತ್ತಿತ್ತು. ಸೈನಿಕರ ಶಿರಚ್ಚೇದ ಎಗ್ಗಿಲ್ಲದೆ ನಡೆಯುತ್ತಿತ್ತು. ಆದರೆ ಮೋದಿ ಸರ್ಕಾರ ಬಂದ ನಂತರ ಈ ದೇಶದ ಭದ್ರತಾ ವ್ಯವಸ್ಥೆಯನ್ನು ಕಂಡಿದ್ದೀರಾ.? ಕಳೆದ 3 ವರ್ಷಗಳಿಂದ ಭಾರತದಲ್ಲಿ ಬಾಂಬ್ ಸಿಡಿದ ಸುದ್ಧಿಯನ್ನು ಕೇಳಿದ್ದೀರಾ? ಪಾಕ್ ಎಂಬ ಕುತಂತ್ರಿ ರಾಷ್ಟ್ರ ಜಾಗತಿಕ ಮಟ್ಟದಲ್ಲಿ ತಲೆಯೆತ್ತಿ ನಡೆಯುತ್ತಿರುವುದನ್ನು ನೋಡಿದ್ದೀರಾ.? ಹಾಗಾದರೆ ಯುಪಿಎ ಅಧಿಕಾರದ ಅವಧಿಯಲ್ಲಿ ಇದೆಲ್ಲಾ ಹೇಗಾಗುತ್ತಿತ್ತು.? ಆಡಳಿತದ ವೈಫಲ್ಯ ತಾನೇ..?

ರಾಹುಲ್ ಗಾಂಧಿ ಚೀನಾ ರಾಯಬಾರಿಯನ್ನು ಭೇಟಿಯಾದ್ದೇಕೆ..?

ಡೋಕ್ಲಾಂ ಗಡಿ ವಿವಾದ ತಾರಕಕ್ಕೇರುವ ಸಮಯ. ಇನ್ನೇನು ಭಾರತ-ಚೀನಾ ಯುದ್ಧ ನಡೆದೇ ಹೋಗುತ್ತೆ ಅಂತಾನೇ ಎಲ್ಲರೂ ಅಂದುಕೊಂಡಿದ್ದರು. ಉಭಯ ರಾಷ್ಟ್ರಗಳ ಸೇನೆಗಳು ಒಂದೊಂದೇ ಹೆಜ್ಜೆಯನ್ನು ಮುಂದಿಡುತ್ತಲೇ ಬರುತ್ತಿದ್ದರು. ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಚೀನಾ ರಾಯಭಾರಿಯನ್ನು ಭೇಟಿ ಮಾಡಿ ಕೈಕುಲುಕಿಕೊಂಡು ಬಂದಿರೋದು ಯಾಕೆ. ಅಂತಹ ಸಮಯದಲ್ಲಿ ವಿರೋಧ ಪಕ್ಷದಲ್ಲಿದ್ದುಕೊಂಡು ಚೀನಾ ರಾಯಬಾರಿಯನ್ನು ಭೇಟಿ ಮಾಡಿದ್ದು ಎಷ್ಟು ಸರಿ?

ಕೇವಲ ಮನ ಮೋಹನ್ ಮೋಹನ್ ಸಿಂಗ್, ಚಿದಂಬರಂ ಹಾಗೂ ರಾಹುಲ್ ಗಾಂಧಿಯ ಸ್ಟೋರಿ ಮಾತ್ರವಲ್ಲ. ಐಸಿಸ್ ಸಂಪರ್ಕವನ್ನು ಹೊಂದಿರುವ ಅಹ್ಮದ್ ಪಟೇಲ್, ಪಾಕಿಸ್ಥಾನಕ್ಕೆ ಹೋಗಿ ಮೋದಿಯನ್ನು ಕಿತ್ತೊಗೆಯಿರಿ ಎಂದು ಪಾಕ್ ಉಗ್ರರಿಗೆ ಸುಪಾರಿ ನೀಡದ್ದ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಹೀಗೆ ಎಷ್ಟು ಬೇಕೋ ಅಷ್ಟು ದೇಶ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ ಕಾಂಗ್ರೆಸ್. ಅದೂ ಸಮಾಜದ ಮುಂದೆ ಬಟಬಯಲಾಗಿದೆ.

ಇತ್ತೀಚೆಗೆ ಗುಜರಾತ್ ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ನಾಯಕರು ಕಾಶ್ಮೀರದಲ್ಲಿದ್ದ ಪ್ರತ್ಯೇಕವಾದಿಗಳನ್ನು ಕರೆಸುವಷ್ಟರ ಮಟ್ಟಿಗೆ ಬಂದಿದ್ದಾರೆ ಎಂದರೆ ಇದರ ಹಿಂದಿನ ಮರ್ಮವೇನು? ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಭಾರತಕ್ಕೆ ಭಾರತವೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಿವೆ. ಆದರೆ ಕಾಶ್ಮೀರದಲ್ಲಿ ಕೆಲವು ಉಗ್ರ ಪ್ರೇರಿತ ಯುವಕರು ಕಾಶ್ಮೀರ ಪ್ರತ್ಯೇಕ ದೇಶವನ್ನಾಗಿ ಮಾಡಬೇಕು ಎಂದು ಬೊಬ್ಬೆ ಬಿಡುತ್ತಿದೆ. ಈ ಯುವಕರಿಂದ ಆಂತರಿಕ ಭದ್ರತೆಯೇ ಆಪತ್ತಿನಲ್ಲಿದೆ. ಇಡೀ ದೇಶಕ್ಕೆ ದೇಶವೇ ಆ ಯುವಕರ ವಿರುದ್ಧ ತಿರುಗಿ ಬಿದ್ದಿದೆ. ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಅವರ ಪರವಾಗಿ ಬ್ಯಾಟಿಂಗ್ ಮಾಡಿತ್ತು. ಎಲ್ಲಾ ಬಿಡಿ, ಮೊನ್ನೆ ನಡೆದ ಗುಜರಾತಿನ ವಿಧಾನ ಸಭಾ ಚುನಾವಣಾ ಪ್ರಚಾರದಲ್ಲಿ ದೇಶ ದ್ರೋಹಿ ಪ್ರತ್ಯೇಕವಾದಿಗಳನ್ನು ಕರೆದುಕೊಂಡು ಕಾಂಗ್ರೆಸ್ ರ್ಯಾಲಿಗೆ ಬರುತ್ತಾರೆಂದರೆ ಕಾಂಗ್ರೆಸ್ ಮೆಂಟಾಲಿಟಿ ಏನು ಎಂಬುವುದು ಖಂಡಿತವಾಗಿಯೂ ಅರ್ಥವಾಗುತ್ತದೆ.

ಈ ದೇಶದ್ರೋಹ ಚಟುವಟಿಕೆಗಳಿಗಾಗಿಯೇ ದೇಶದ ಜನತೆ ಕಾಂಗ್ರೆಸ್ ಎಂಬ ಪಾಪದ ಕೂಪವನ್ನು ಕಿತ್ತು ಬಿಸಾಕಿದ್ದಾರೆ. ಈ ಪಕ್ಷ ಮುಂದೆಂದೂ ರಾಷ್ಟ್ರದಲ್ಲಿ ಮೇಲೆದ್ದು ಬರಲ್ಲ ಅನ್ನೋದು ಅಷ್ಟೇ ಸತ್ಯ.

-ಸುನಿಲ್ ಪಣಪಿಲ

Tags

Related Articles

Close