ಪ್ರಚಲಿತ

ದಲಿತ ನಾಯಕ ಪರಮೇಶ್ವರ್ ವಿರುದ್ಧ ಮತ್ತೊಂದು ಬಾಣ ಹೂಡಿದ ಸಿದ್ದರಾಮಯ್ಯ!!

ಬಗೆಹರಿಯದ ಆಂತರಿಕ ಕಲಹ!!

ಕರ್ನಾಟಕ ರಾಜ್ಯ ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುವುದು ಮತ್ತೊಮ್ಮೆ ಸಾಭೀತಾಗಿದೆ. ರಾಜ್ಯದಲ್ಲಿ ಅಧಿಕಾರ ಹಿಡಿದು ನಾಲ್ಕೂವರೆ ವರ್ಷದಿಂದಲೂ ತೆವಲಿಕೊಂಡು ಬರುತ್ತಿದ್ದ ಕಾಂಗ್ರೆಸ್ ಸರ್ಕಾರ ತಮ್ಮ ಪಕ್ಷವನ್ನೂ ನೆಟ್ಟಗೆ ಇಟ್ಟುಕೊಳ್ಳುವಲ್ಲಿಯೂ ಅಸಮರ್ಥವಾಗಿದೆ. ಸದಾ ಪಕ್ಷದೊಳಗಿನ ಗುದ್ದಾಟದಿಂದ ಸುದ್ಧಿಯಾಗುತ್ತಿರುವ ರಾಜ್ಯ ಕಾಂಗ್ರೆಸ್ ಈಗ ಮುಖ್ಯಮಂತ್ರಿಗಳು ಆಯೋಜಿಸಿರುವ ಜನಾಶಿರ್ವಾದ ಯಾತ್ರೆಯನ್ನು ರದ್ದುಗೊಳಿಸುವ ಮೂಲಕ ಮತ್ತೊಮ್ಮೆ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಬಯಲಾಗಿಸಿಕೊಂಡಿದ್ದಾರೆ.

ಯಾತ್ರೆಗೆ ಹೊರಟಿದ್ದರು ಸಿಎಂ ಸಿದ್ದು-ಪರಮೇಶ್ವರ್ ಕೊಟ್ಟರು ಸಿದ್ದುಗೇ ಗುದ್ದು…!

ಭಾರತೀಯ ಜನತಾ ಪಕ್ಷದಿಂದ ನಡೆಯುತ್ತಿರುವ ಪರಿವರ್ತನಾ ಯಾತ್ರೆ ಅಭೂತಪೂರ್ವ ಯಶಸ್ಸನ್ನು ಕಾಣುತ್ತಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಯಾತ್ರೆಯ ಅಬ್ಬರವನ್ನು ಕಂಡು ಸ್ವತಃ ಸಿದ್ದರಾಮಯ್ಯನವರೇ ಕಂಗಾಲಾಗಿ ಹೋಗಿದ್ದಾರೆ. ಯಡಿಯೂರಪ್ಪನವರ ರಥ ಎಲ್ಲಿಗೇ ಹೋದರೂ ಅಲ್ಲಿ ಸಾವಿರ ಸಾವಿರ ಜನರು ಮುಗಿಬೀಳುತ್ತಾರೆ. ಬೃಹತ್ ಸಂಖ್ಯೆಯಲ್ಲಿ ಸೇರುತ್ತಿರುವ ಜನತೆಯನ್ನು ಕಂಡು ಸಹಜವಾಗಿಯೇ ಕಾಂಗ್ರೆಸ್ ಪಕ್ಷ ಗಾಬರಿಗೊಂಡಿದೆ.

ಮಾತ್ರವಲ್ಲದೆ ಬಿಎಸ್‍ವೈ ಯಾತ್ರೆ ಆರಂಭಿಸಿದ ಬೆನ್ನಲ್ಲೇ ಅತ್ತ ಜನತಾ ದಳದಿಂದ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಯಾತ್ರೆ ಹೊರಡಿತ್ತು. ಇನ್ನು
ಅಧಿಕಾರದಲ್ಲಿದ್ದು ತಾನು ಯಾತ್ರೆ ಕೈಗೊಳ್ಳದೆ ಇದ್ದರೆ ಕಷ್ಟವಾಗಬಹುದು ಎಂದು ಮುಖ್ಯಮಂತ್ರಿಗಳು ತಾನೂ ಒಂದು ನಿರ್ಧಾರವನ್ನು ತೆಗೆದುಕೊಂಡೇ ಬಿಡುತ್ತಾರೆ. ಅದುವೇ “ಜನಾಶಿರ್ವಾದ ಯಾತ್ರೆ”…

ಹೌದು… ವಿಪಕ್ಷಗಳ ನಡೆಯನ್ನು ಕಂಡು ಗಾಬರಿಗೊಂಡ ಸಿಎಂ ಸಿದ್ದರಾಮಯ್ಯ ತರಾತುರಿಯಲ್ಲಿ “ಜನಾಶಿರ್ವಾದ ಎಂಬ ಹೆಸರಿನೊಂದಿಗೆ ಯಾತ್ರೆ ಹೊರಡುತ್ತೇವೆ” ಎಂದು ಘೋಷಿಸಿಬಿಟ್ಟಿದ್ದರು. ಬಿಜೆಪಿ ಹಮ್ಮಿಕೊಂಡ ಯಾತ್ರೆಯ ರೀತಿಯೇ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೂ ತೆರಳಿ ಪ್ರಚಾರವನ್ನು ಮಾಡಿ, ಮತ್ತೊಮ್ಮೆ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಬೇಡಲು ಸಿದ್ದರಾಗಿ ನಿಂತಿದ್ದರು. “ಡಿಸೆಂಬರ್ 13ನೇ ತಾರೀಕಿನಂದು ಯಾತ್ರೆಗೆ ಚಾಲನೆ ದೊರೆಯಲಿದೆ ಹಾಗೂ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲೂ ಈ ಯಾತ್ರೆ ಸಂಚರಿಸಲಿದೆ” ಎಂದು ಘೋಷಿಸಿದ್ದರು. ಆದರೆ ಅಷ್ಟರಲ್ಲೇ ಮುಖ್ಯಮಂತ್ರಿಗಳ ಈ ಯಾತ್ರೆಗೆ ಅಮವಾಸ್ಯೆಯ ಕತ್ತಲು ಕವಿದುಕೊಂಡು ಬಿಟ್ಟಿತ್ತು.

ಮೂರನೇ ಕಣ್ಣು ತೆರೆದನಾ ಪರಮೇಶ್ವರ..!!!

ಡಾ.ಜಿ.ಪರಮೇಶ್ವರ್. ಕೆಪಿಸಿಸಿ ಅಧ್ಯಕ್ಷರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿಯೂ ಹಾಗೂ ಸಮಗ್ರ ಕಾಂಗ್ರೆಸ್‍ನ ಬೆಳವಣಿಗೆಯಲ್ಲಿ
ಕಾರಾಣಕರ್ತರಾದವರು. ಆದರೆ ಹಿಂದಿನಿಂದಲೂ ಸಿದ್ದರಾಮಯ್ಯನವರ ತುಳಿತಕ್ಕೆ ಒಳಗಾಗುತ್ತಲೇ ಬಂದಿದ್ದಾರೆ ಪರಮೇಶ್ವರ್. ಇವರು ಶಾಸಕರಾಗಿ ಆಯ್ಕೆಯಾದರೆ ಮುಖ್ಯಮಂತ್ರಿ ಸ್ಥಾನ ಎಲ್ಲಿ ಕೈತಪ್ಪಿ ಹೋಗುತ್ತೋ ಅನ್ನೋ ಭಯದಿಂದ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನಾಜೂಕಾಗಿ ಪರಮೇಶ್ವರ್‍ರವರನ್ನು ಸೋಲಿಸಿಬಿಡುತ್ತಾರೆ ಸಿದ್ದರಾಮಯ್ಯನವರು.

ಇದಾಗಿ ತಾನಂದುಕೊಂಡಂತೆಯೇ ಮುಖ್ಯಮಂತ್ರಿಗಳೂ ಆಗುತ್ತಾರೆ. ಆದರೆ ಪರಮೇಶ್ವರ್ ಭವಿಷ್ಯ ಮಾತ್ರ ಮುಗಿದೇ ಹೋಗುತ್ತೆ ಅಂದುಕೊಂಡಿದ್ದರು ಕಾಂಗ್ರೆಸ್ಸಿಗರು. ನಂತರ ಪರಮೇಶ್ವರ್ ವಿಧಾನ ಪರಿಷತ್‍ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಹೀಗಾಗಿ ಮತ್ತೆ ಪ್ರಬಲ ಸ್ಥಾನದ ಆಕಾಂಕ್ಷಿಯಾಗುತ್ತಾರೆ. ಹೈಕಮಾಂಡ್‍ನ ಕೈಕಾಲು ಹಿಡಿದು ಅದೇಗೋ ಸರ್ಕಾರದ ಎರಡನೇ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಗೃಹ ಸಚಿವನ ಪಟ್ಟ ಒಲಿದು ಬರುತ್ತೆ. ಮುಖ್ಯಮಂತ್ರಿಗಳೂ ಒಲ್ಲದ ಮನ್ಸಸ್ಸಿನಲ್ಲಿ ಈ ಪಟ್ಟವನ್ನು ಕೊಟ್ಟುಬಿಡುತ್ತಾರೆ. ನಂತರ ಮತ್ತೆ ಪರಮೇಶ್ವರ್‍ಗೆ ಕೆಪಿಸಿಸಿ ಅಧ್ಯಕ್ಷನ ಸ್ಥಾನವನ್ನು ನೀಡುವಂತೆ ಮಾಡಿ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದ್ದಾರೆ.

ಪದೇ ಪದೇ ಸರ್ಕಾರ ಹಾಗೂ ಪಕ್ಷದಲ್ಲಿ ವೈಮನಸ್ಸು ಹಾಗೂ ಭಿನ್ನಾಭಿಪ್ರಾಯಗಳು ತಾಂಡವವಾಡುತ್ತಲೇ ಇರುತ್ತಿತ್ತು. ಅದೆಷ್ಟೋ ಬಾರಿ ಬೀದಿಗೆ ಕೂಡಾ ಬಂದಿತ್ತು. ಸಿದ್ದರಾಮಯ್ಯರ ಅಹಂಕಾರಕ್ಕೆ ಸ್ವತಃ ಕಾಂಗ್ರೆಸ್ ರಾಜ್ಯಾಧ್ಯಕ್ಷರೇ ಬೆಚ್ಚಿ ಬಿದ್ದಿದ್ದರು. ಆದರೆ ತಮ್ಮ ಕೈಯ್ಯಲ್ಲಿ ಅಧಿಕಾರ ಇದ್ದರೂ ಏನೂ ಮಾಡಲಾಗದ ಹತಾಶ ಸ್ಥಿತಿಯಲ್ಲಿದ್ದರು ಪರಮೇಶ್ವರ್.

ಯಾತ್ರೆಗೆ ಅಡ್ಡಗಾಲು ಹಾಕಿದ್ದು ಯಾಕೆ ಗೊತ್ತಾ..?

ಅಷ್ಟಕ್ಕೂ ಮುಖ್ಯಮಂತ್ರಿಗಳ ಈ “ಜನಾಶಿರ್ವಾದ ಯಾತ್ರೆ”ಗೆ ಪರಮೇಶ್ವರ್ ಅಡ್ಡಗಾಲು ಹಾಕಿದ್ದಾರೆ. ಮುಖ್ಯಮಂತ್ರಿಗಳು ಯಾವಾಗ ಈ ಒಂದು ನಿರ್ಧಾರವನ್ನು ಕೈಗೊಂಡರೋ ಅಂದಿನಿಂದ ಪರಮೇಶ್ವರ್ ಪರೋಕ್ಷವಾಗಿಯೇ ಟಾಂಗ್ ಕೊಡುತ್ತಾ ಬಂದಿದ್ದರು. “ಮುಖ್ಯಮಂತ್ರಿಗಳು ಘೋಷಿಸಿದ ಜನಾಶಿರ್ವಾದ ಯಾತ್ರೆಯನ್ನು ಮಾಡಿದರೆ ಬಿಜೆಪಿಯವರದ್ದು ನಕಲಿ ಮಾಡಿದ ಹಾಗೆ ಇರುತ್ತೆ. ಹೀಗಾಗಿ ಈ ಯಾತ್ರೆ ಬೇಡ. ಇದರ ಬದಲಾಗಿ ಬೇರೆ ಯೋಜನೆಯನ್ನು ಹಮ್ಮಿಕೊಳ್ಳುತ್ತೇವೆ” ಎಂದು ಕಾಂಗ್ರೆಸ್ ಅಧ್ಯಕ್ಷರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಮತ್ತೊಂದು ವಿಶೇಷವೇನೆಂದರೆ, ಮುಖ್ಯಮಂತ್ರಿಗಳು ಆಯೋಜಿಸಿರುವ ಈ ಯಾತ್ರೆಯಲ್ಲಿ ಪರಮೇಶ್ವರ್‍ಗೇ ಯಾವುದೇ ಸ್ಥಾನವಿರಲಿಲ್ಲ.

ಆದರೆ ಈ ಮಧ್ಯೆಯೂ ಮುಖ್ಯಮಂತ್ರಿಗಳು ತಮ್ಮ ಪೌರುಷವನ್ನು ತೋರಿಸಿಯೇ ಬಿಟ್ಟಿದ್ದರು. ಡಿಸೆಂಬರ್ 13ಕ್ಕೆ ಜನಾಶಿರ್ವಾದ ಯಾತ್ರೆಗೆ ಚಾಲನೆ ನೀಡುವುದೆಂದು ಘೋಷಿಸಿ ಬಿಟ್ಟಿದ್ದರು. ಅಲ್ಲಿವರೆಗೆ ತಾಳ್ಮೆಯಿಂದ ಇದ್ದಂತಹ ಪರಮೇಶ್ವರ ತನ್ನ ಮೂರನೇ ಕಣ್ಣನ್ನು ತೆರೆದೇ ಬಿಟ್ಟಿದ್ದ. ಮುಖ್ಯಮಂತ್ರಿಗಳ ಈ ಧೋರಣೆಯನ್ನು ಸಹಿಸದ ಕಾಂಗ್ರೆಸ್ ಅಧ್ಯಕ್ಷ ಕೈಕಮಾಂಡ್ ಮೊರೆ ಹೋಗುತ್ತಾರೆ. ಕೈಮಾಂಡ್‍ನಿಂದ ನೇರವಾಗಿ ಮುಖ್ಯಮಂತ್ರಿಗಳಿಗೆ ಆದೇಶ ಬರುತ್ತೆ. “ಯಾವುದೇ ಕಾರಣಕ್ಕೂ ಪರಮೇಶ್ವರ್ ಹೊರತಾದ ಯಾತ್ರೆಯನ್ನು ಮಾಡುವಂತಿಲ್ಲ” ಎಂದು. ಇದರಿಂದ ಗಲಿಬಿಲಿಗೊಂಡ ಸಿದ್ದರಾಮಯ್ಯ ತಾನು ಆಯೋಜಿಸಿದ್ದ ಜನಾಶಿರ್ವಾದ ಯಾತ್ರೆಯನ್ನೇ ರದ್ದುಗೊಳಿಸಿದ್ದಾರೆ.

ಪರಮೇಶ್ವರ್‍ರನ್ನು ಯಾವುದೇ ಕಾರಣಕ್ಕೂ ಈ ಯಾತ್ರೆಯಲ್ಲಿ ಸೇರಿಸುವುದಿಲ್ಲ ಎಂಬ ತಟಸ್ಥ ನಿಲುವು ಹೊಂದಿದ್ದ ಸಿದ್ದರಾಮಯ್ಯ ಜನಾಶಿರ್ವಾದ ಯಾತ್ರೆಯನ್ನೇ ರದ್ದು ಮಾಡಿದ್ದರು. ಮಾತ್ರವಲ್ಲದೆ ಅದೇ ಕಾರ್ಯಕ್ರಮದ ರೀತಿಯಲ್ಲಿ ಬೇರೊಂದು ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಪರಮೇಶ್ವರ್‍ರನ್ನು ಶಾಶ್ವತವಾಗಿ ದೂರವಿಡುವ ಪ್ಲಾನಿಂಗ್‍ವೊಂದನ್ನು ರೂಪಿಸಿಕೊಂಡಿದ್ದಾರೆ.

ಮುಖ್ಯಮಂತ್ರಿಗಳು ಮಾಡಿರುವ ಈ ಯೋಜನೆ ಏನಂದರೆ ಸರ್ಕಾರಿ ಕಾರ್ಯಕ್ರಮಗಳ ಅನುಷ್ಟಾನ. ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲೂ ಸರ್ಕಾರಿ ಕಾರ್ಯಕ್ರಮವನ್ನು ಅನುಷ್ಟಾನ ಮಾಡುವ ನೆಪವೊಡ್ಡಿ ಆ ಕ್ಷೇತ್ರಗಳಿಗೆ ತೆರಳಿ ಅಲ್ಲಿ ಬೃಹತ್ ಸಮಾವೇಶಗಳನ್ನು ಆಯೋಜಿಸಿ ಪ್ರಚಾರ ಮಾಡುವ ಖತರ್ನಾಕ್ ಪ್ಲಾನಿಂಗ್ ಮುಖ್ಯಮಂತ್ರಿಗಳದ್ದು. ಪರಮೇಶ್ವರ್ ಸರ್ಕಾರಿ ಸುಪರ್ದಿಗೆ ಬರದೇ ಇರುವ ಕಾರಣದಿಂದ ಈ ಕಾರ್ಯಕ್ರಮಗಳಿಗೆ ಪರಮೇಶ್ವರ್‍ರನ್ನು ಆಹ್ವಾನಿಸುವ ಪ್ರಮೇಯವೇ ಬೀರೋದಿಲ್ಲ. ಹೀಗಾಗಿ ಸಿದ್ದರಾಮಯ್ಯ ತಾನೊಬ್ಬನೇ ಆಯಾ ಕ್ಷೇತ್ರಗಳಿಗೆ ತೆರಳಿ ಸ್ವಾ ಕಾರ್ಯವೂ, ಸ್ವಾಮಿ ಕಾರ್ಯವೂ ಮಾಡಿ ವನ್ ಮ್ಯಾನ್ ಶೋ ಆಗುವ ಉದ್ದೇಶವನ್ನು ಹೊರಹಾಕಿದ್ದಾರೆ. ಇದನ್ನು ಸ್ವತಃ ಸಿಎಂ ಸಿದ್ದರಾಮಯ್ಯನವರೇ ಹೇಳಿದ್ದಾರೆ.

ಪಕ್ಷವನ್ನೇ ಆಳದವರು ರಾಜ್ಯವನ್ನೇನು ಆಳುತ್ತಾರೋ…!!!

ಸರ್ಕಾರವೆಂದರೆ ರಾಜ್ಯವನ್ನು ರಾಮ ರಾಜ್ಯವನ್ನಾಗಿಸುವ ಕನಸು ಕಂಡಿರಬೇಕು. ಅದನ್ನು ನನಸಾಗಿಸಲು ಅವಿರತ ಪ್ರಯತ್ನಿಸಬೇಕು. ಎಲ್ಲಾ ಧರ್ಮಗಳನ್ನೂ ಒಂದೇ ತೆರನಾಗಿ ಕಂಡು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ನೀಡಬೇಕು. ಆದರೆ ನಾಲ್ಕೂವರೆ ವರ್ಷದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದ್ದೇ ಬೇರೆ. ಕೇವಲ ಒಂದು ಧರ್ಮವನ್ನು ಓಲೈಕೆ ಮಾಡಿಕೊಂಡು ಅವರಿಗಾಗಿ ಸಾಲು ಸಾಲು ಭಾಗ್ಯಗಳನ್ನು ಕರುಣಿಸುತ್ತಾ, ಬಹುಸಂಖ್ಯಾತ ಹಿಂದೂ ಸಮಾಜವನ್ನು ಕಾಲ ಕಸದಂತೆ ಮಾಡಿ ಅಕ್ಷರಷಃ ತುಘಲಕ್ ಅಧಿಕಾರವನ್ನು ಮೆರೆಯುತ್ತಿತ್ತು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ.

ಒಟ್ಟಾರೆ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಒಡಕಿದೆ ಎಂಬ ಸತ್ಯ ಮತ್ತೊಮ್ಮೆ ಬಟಬಯಲಾಗಿದೆ. ಪಕ್ಷದ ಆಂತರಿಕ ಕಲಹಗಳಿಂದ ಮುಂದಿನ ಚುನವಣೆಯಲ್ಲಿ ಇದು ತೀವ್ರ ಪರಿಣಾಮ ಬೀರಬಹುದೆಂದೂ ಹೇಳಲಾಗುತ್ತಿದೆ. ಸರ್ಕಾರದ ವೈಫಲ್ಯಗಳನ್ನು ಧಮನಿಸುವ ಜೊತೆ ಜೊತೆಗೆ ಪಕ್ಷವನ್ನೂ ಧಮನಿಸುವ ಕೆಲಸವನ್ನು ಜನ ಮಾಡುತ್ತಾರೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

-ಸುನಿಲ್ ಪಣಪಿಲ

Tags

Related Articles

Close