ಪ್ರಚಲಿತ

ದೆಹಲಿಯಲ್ಲಿ ತಾಂಡವವಾಡುತ್ತಿರುವ ವಾಯುಮಾಲಿನ್ಯಕ್ಕೆ ಸನಾತನ ಧರ್ಮದಲ್ಲಿದೆ ಶಾಶ್ವತ ಪರಿಹಾರ!!!

ದೆಹಲಿ. ಈ ಹೆಸರು ಕೇಳಿದರೆ ಸಾಕು, ದೇಶದ ಪ್ರಜಾತಂತ್ರವೇ ಕಣ್ಣ ಮುಂದೆ ಬರುತ್ತೆ. ನಮ್ಮ ಭಾರತ ದೇಶದ ಶಕ್ತಿಕೇಂದ್ರ ಇರುವುದೇ ಅದೇ ದೆಹಲಿಯಲ್ಲಿ. ಇಡೀ
ದೇಶದ ರಾಜಕೀಯ ಹಾಗೂ ಸಾಂವಿಧಾನಿಕ ನೀತಿಗಳನ್ನು ಬದಲಾಯಿಸುವಂತಹ ಶಕ್ತಿ ಇರುವುದು ಅದೇ ದೆಹಲಿಗೆ. ಸುಪ್ರೀಂ ಕೋರ್ಟ್, ಲೋಕಸಭೆ, ಸಹಿತ ಅನೇಕ ದೇಶದ ಪ್ರಜಾತಂತ್ರದ ಚಿತ್ರಣವನ್ನೇ ಹೊಂದಿದೆ ದೆಹಲಿ. ಹಾ… ನಮ್ಮ ದೇಶದ ರಾಜಧಾನಿಯೂ ಹೌದು.

ಜಗತ್ತಿನಲ್ಲೇ ಪ್ರಸಿದ್ಧಿಯಾಗಿರುವ ದೆಹಲಿಯಲ್ಲಿ ಈಗ ಅತಿದೊಡ್ಡ ಸಮಸ್ಯೆಯೊಂದು ಎದುರಾಗಿದೆ. ಈ ಸಮಸ್ಯೆ ಅಲ್ಲಿನ ಮಾನವ ಸಹಿತ ಜೀವ ಸಂಕುಲವನ್ನೇ ಕೊಲ್ಲುತ್ತಿದೆ. ಅನೇಕ ಜೀವಗಳು ಮೃತಪಟ್ಟಿವೆ. ಮನುಷ್ಯರು ಹೊರಹೋಗದಂತೆ ವಾತಾವರಣ ಸೃಷ್ಟಿಯಾಗಿದೆ. ದೇಶದ ರಾಜಧಾನಿಯ ದೆಹಲಿಯ ಹೆಸರನ್ನೇ
ಹಾಳುಮಾಡುವಂತಾಗಿದೆ. ಇದರ ಮಧ್ಯೆ ರಾಜಕೀಯ ಕೆಸರೆರೆಚಾಟ ಕೂಡಾ ಜೋರಾಗಿದೆ.

ದೆಹಲಿಯಲ್ಲಿ ತಾಂಡವವಾಡುತ್ತಿದೆ ವಾಯು ಮಾಲಿನ್ಯದ ರುದ್ರ ನರ್ತನ!

ಹೌದು. ದೆಹಲಿಯಲ್ಲಿ ಈ ರೀತಿಯ ಭೀತಿಗೆ ಕಾರಣವಾಗಿರುವುದು ವಾಯು ಮಾಲಿನ್ಯ. ದೆಹಲಿಯಲ್ಲಿ ಟ್ರಾಫಿಕ್ ಜಾಮ್ ಅನ್ನೋದು ಹೊಸದಲ್ಲ. ದೇಶದಲ್ಲಿ ಎಲ್ಲೂ ಇಲ್ಲದ ಟ್ರಾಫಿಕ್ ಕಿರಿಕಿರಿ ದೆಹಲಿಯಲ್ಲಿದೆ. ಹೀಗಾಗಿಯೇ ವಾಯುಮಾಲಿನ್ಯ ಇಲ್ಲಿ ಬದುಕನ್ನೇ ಕಸಿದುಕೊಳ್ಳುತ್ತಿದೆ. ಇಡೀ ದೆಹಲಿಯೇ ದಟ್ಟ ಹೊಗೆಯಿಂದ ತುಂಬಿಕೊಂಡಿದೆ. ಮಲೆನಾಡಿನಲ್ಲಿ ಮಂಜು ತುಂಬಿಕೊಂಡಿರುವಂತೆ ಇಡೀ ದೆಹಲಿಗೆ ಹೊಗೆ ಆವರಿಸಿಕೊಂಡಿದೆ. ಈ ಹಿಂದೆ ದೀಪಾವಳಿ ವೇಳೆ ಪಟಾಕಿಯನ್ನು ನಿಷೇಧಿಸಿ ದೀಪಾವಳಿಯ ಸಂಭ್ರಮವನ್ನೇ ಕಸಿದಿತ್ತು ಈ ವಾಯು ಮಾಲಿನ್ಯ ಎಂಬ ಭೂತ. ಈಗ ಹೊಗೆ ತುಂಬಿದ ವಾತವರಣದಿಂದ ಉಸಿರಾಡಲೂ ಕಷ್ಟವಾಗುತ್ತಿದೆ.

ಸಮ-ಬೆಸ ಜಾರಿಗೆ ತರಲು ಮುಂದಾಗಿದ್ದ ದೆಹಲಿ ಸರ್ಕಾರ!

ವಾಯು ಮಾಲಿನ್ಯ ದೆಹಲಿಯಲ್ಲಿ ವಿಜ್ರಂಭಿಸುತ್ತಿರುವ ಹಿನ್ನೆಲೆಯಲ್ಲಿ, ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ವಾಯು ಮಾಲಿನ್ಯ ನಿಯಂತ್ರಿಸುವ ಸಲುವಾಗಿ ಸಮ-ಬೆಸ ಸಂಖ್ಯೆಯ ವಾಹನಗಳನ್ನು ರೋಡಿಗಿಳಿಯಬೇಕೆಂಬ ಆದೇಶವನ್ನು ಜಾರಿಗೆ ತರುತ್ತಾರೆ. ಈ ಮೂಲಕ ದೆಹಲಿಯಲ್ಲಿ ತಾಂಡವವಾಡುತ್ತಿರುವ ಹೊಗೆಗೆ ಪರಿಹಾರ ಕಂಡುಕೊಳ್ಳಲು ಬೆಟ್ಟ ಅಗೆದು ಇಲಿ ಹಿಡಿಯುವ ಕಾರ್ಯವನ್ನು ಮಾಡುತ್ತಿದೆ ದೆಹಲಿ ಸರ್ಕಾರ. ಈ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಆದೇಶವನ್ನು ವಾಪಾಸು ತೆಗೆದುಕೊಳ್ಳುತ್ತಾರೆ. ಅದೆಷ್ಟೇ ಪ್ರಯತ್ನ ಪಟ್ಟರೂ ದೆಹಲಿಯಲ್ಲಿನ ವಾಯು ಮಾಲಿನ್ಯವನ್ನು ನಿಯಂತ್ರಿಸೋಕೆ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಇದು ರಾಜಕೀಯ ದೌರ್ಬಲ್ಯವೋ ಅಥವಾ ಸರ್ಕಾರದ ನಿರಾಸಕ್ತಿಯೋ ಗೊತ್ತಿಲ್ಲ.

ವಾಯು ಮಾಲಿನ್ಯಕ್ಕೆ ಇಲ್ಲಿದೆ ಶಾಶ್ವತ ಪರಿಹಾರ…!!!

Image result for agnihotra

ಹೌದು. ನಾವೇನಾದರು ಈ ವಿಷಯವನ್ನು ಸರ್ಕಾರದ ಮುಂದೆ ಪ್ರಸ್ತಾಪಿಸಿದರೆ ಕೋಮುವಾದಿಗಳು ಎಂಬ ಪಟ್ಟವನ್ನು ಕಟ್ಟಿ ಬಿಡುತ್ತಾರೆ. ಇದು ಹಿಂದುತ್ವವನ್ನು
ಉತ್ತೇಜಿಸುವ ಕಾರ್ಯ. ಕೋಮುವಾದಿಗಳು ಕೇಸರೀಕರಣ ಮಾಡಲು ಹೊರಟಿದ್ದಾರೆ ಎಂದು ಬಡಬಡಾಯಿಸುತ್ತಾರೆ. ಆದರೆ ಸನಾತನ ಧರ್ಮದಲ್ಲಿ ಇರುವ ಎಲ್ಲಾ ಆಚರಣೆಗಳು ವೈಜ್ಞಾನಿಕವಾಗಿ ಸಾಭೀತಾಗಿರುವ ಸಂಗತಿಗಳಾಗಿದೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಾಗಿದೆ. ಸನಾತನ ಧರ್ಮದ ಯಾವುದಾದರು ಒಂದು ಆಚರಣೆಗೆ ವೈಜ್ನಾನಿಕ ಹಿನ್ನೆಲೆ ಇಲ್ಲಾ ಎಂದರೆ ಅದು ಮೂಡನಂಬಿಕೆ ಎಂದು ಕರೆಯಬಹುದು.

ಈಗ ದೆಹಲಿಯಲ್ಲಿ ಸಂಭವಿಸುತ್ತಿರುವ ಈ ದೊಡ್ಡ ಸಮಸ್ಯೆಗೆ ಪರಿಹಾರ ಸನಾತನ ಧರ್ಮದಲ್ಲಿದೆ. ಅಗ್ನಿಹೋತ್ರ ಎಂಬುವುದು ಸನಾತನ ಧರ್ಮದಲ್ಲಿ ಅತಿ ಶ್ರೇಷ್ಠ
ಕಾರ್ಯವಾಗಿರುವ ಒಂದು ಆಚರಣೆಯಾಗಿದೆ. ಯಾವುದೇ ಕಾಯಿಲೆಗೂ, ಯಾವುದೇ ಉಸಿರಾಟ ತೊಂದರೆಗೂ ಈ ಅಗ್ನಿ ಹೋತ್ರ ಶಾಶ್ವತ ಪರಿಹಾರ. ಮನೆಗಳಲ್ಲಿ ಅಗ್ನಿಹೋತ್ರ ನಡೆಸಿ ಗಣಹೋಮ ನಡೆಸಿದರೆ ಆ ಮನೆಗೆ ಬರುವಂತಹ ದಾರಿದ್ರ್ಯ ನಿವಾರಣೆಯಾಗುತ್ತೆ ಎಂಬ ಬಲವಾದ ನಂಬಿಕೆ ಹಿಂದು ಸಮಾಜದಲ್ಲಿದೆ. ಈ ಆಚರಣೆ ಇಂದಿಗೂ ನಡೆದುಕೊಂಡು ಬಂದಿದೆ. ಇದು ಕೇವಲ ಆಚರಣೆಯಾಗಿ ಉಳಿಯದೆ ವೈಜ್ಞಾನಿಕವಾಗಿಯೂ ಬಹಳ ಮಹತ್ವವನ್ನು ಪಡೆದಿದೆ.

ಸದ್ಯ ದೆಹಲಿಯಲ್ಲಿ ಸಂಭವಿಸುತ್ತಿರುವ ಸಮಸ್ಯೆಗೂ ಈ ಅಗ್ನಿಹೋತ್ರದಲ್ಲಿ ಸುಲಭ ಪರಿಹಾರವಿದೆ. ದೆಹಲಿಯಲ್ಲಿ ವಾಯುಮಾಲಿನ್ಯ ಹಲವಾರು ಜನರ ಅನಾರೋಗ್ಯಕ್ಕೆ ಕಾರಣವಾಗಿದ್ದು ಉಸಿರುಗಟ್ಟುವ ಸ್ಥಿತಿಗೆ ತಲುಪಿದೆ. ವಾಯು ಮಾಲಿನ್ಯ ಸಂಭವಿಸಿದ ಪ್ರದೇಶದಲ್ಲಿ ಅಲ್ಲಲ್ಲಿ ಅಗ್ನಿಹೋತ್ರ ನಡೆಸಿದರೆ ಅದರಲ್ಲಿ ಆಮ್ಲಜನಕ ಉತ್ಪತಿಯಾಗಿ, ವಾಯು ಮಾಲಿನ್ಯವನ್ನು ಹೋಗಲಾಡಿಸುತ್ತದೆ. ಅಗ್ನಿಹೋತ್ರಕ್ಕೆ ದನದಿಂದ ಉತ್ಪಾದನೆಯಾಗುವ ತುಪ್ಪ ಸಹಿತ ಅನೇಕ ಆಯುರ್ವೇದ ಪದಾರ್ಥಗಳನ್ನು ಹಾಕುವುದರಿಂದ ದೊಡ್ಡ ಪ್ರಮಾಣದಲ್ಲಿ ಆಮ್ಲಜನಕ ಉತ್ಪಾದನೆಯಾಗುತ್ತದೆ. ದೆಹಲಿಯಲ್ಲಿ ಈ ಅಗ್ನಿಹೋತ್ರವನ್ನು ನಿರ್ಮಿಸಿದರೆ ಅಲ್ಲಿರುವ ವಾಯುಮಾಲಿನ್ಯ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಇದು ಕೇವಲ ಕಾಲ್ಪನಿಕ ಅಲ್ಲ. ಅಥವಾ ಸನಾತನ ಧರ್ಮದ ಪರವಾಗಿದೆ ಎಂಬ ಉತ್ಪ್ರೇಕ್ಷೆಯೂ ಅಲ್ಲ. ಬದಲಾಗಿ ನೈಜ ವಿಷಯ. ನಡೆದ ಘಟನೆಯೂ ಹೌದು. ಈ
ಹಿಂದೆ ವಿಷಾನಿಲ ಸೋರಿಕೆ ಆದ ಪ್ರದೇಶದಲ್ಲಿ ಇಂತಹ ಆಚರಣೆಯನ್ನು ತಂದಾಗ ಅಲ್ಲಿ ನಡೆದ ರೋಚಕ ಸತ್ಯವನ್ನು ತಿಳಿಸುತ್ತೇವೆ.

ಅನಿಲ ದುರಂತದಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿದರೂ ಆ ಕುಟುಂಬದಲ್ಲಿ ಮತ್ರ ಪವಾಡನೇ ನಡೆಯಿತು..!!!

Image result for bhopal tragedy

ಅದು ಡಿಸೆಂಬರ್ 1984ರ ಸಮಯ. ಬೋಪಾಲ್‍ನ ಕುಶ್ವಾಹ ಎಂಬಾತನಿಗೆ ರಾತ್ರಿ 1.30ಯ ಹೊತ್ತಿಗೆ ನಿದ್ದೆಯಿಂದ ಎಚ್ಚರಾಗಿ ಗೊಂದಲದ ಪರಿಸ್ಥಿತಿಗೆ
ಸಿಲುಕುತ್ತಾನೆ. ಈತನ ಪತ್ನಿ ತ್ರಿವೇಣಿ ವಾಂತಿ ಮಾಡುತ್ತಿರುವಂತೆ ಕೇಳುತ್ತದೆ. ತದ ನಂತರ ಆತನ ಮಕ್ಕಳು ಕೆಮ್ಮ, ಎದೆನೋವು ಉಸಿರುಗಟ್ಟುವಿಕೆ ಹಾಗೂ ಕಣ್ಣು ಉರಿಯೆಂದು ಬಳಲುತ್ತಿರುವುದನ್ನು ನೋಡುತ್ತಾನೆ. ಈತ ಹೊರ ನೋಡುತ್ತಿದ್ದಂತೆಯೇ ಇಡೀ ಬೀದಿಯ ಜನರು ಗಾಬರಿಗೊಂಡಿರುತ್ತಾರೆ. ಆ ಸಂದರ್ಭದಲ್ಲಿ ಕುಶ್ವನಾ, ಯುನಿಯನ್ ಕಾರ್ಬೈಡ್ ಪ್ಯಾಕ್ಟರಿಯಲ್ಲಿ ಅನಿಲ ಸೋರಿರುವಿಕೆಯಾಗಿರುವುದನ್ನು ಜನರಿಗೆ ತಿಳಿಸಿ ಅಲ್ಲಿಯ ಜನರನ್ನು ಕರೆದುಕೊಂಡು ಆ ಪ್ರದೇಶದಿಂದ ಓಡಲು ನಿರ್ಧರಿಸಿದ. ಆ ವೇಳೆ ಕುಶ್ವನಾನ ಹೆಂಡತಿ “ನಾವು ಅಗ್ನಿಹೋತ್ರವನ್ನು ಪ್ರಾರಂಭ ಮಾಡಿದರೆ ಸಮಸ್ಯೆಗೆ ಪರಿಹಾರ ಸಿಗಲ್ವೇ” ಎಂದು ಸಲಹೆ ನೀಡುತ್ತಾಳೆ. ಕುಶ್ವಾನನು ಅಗ್ನಿಹೊತ್ರವನ್ನು ಪ್ರಾರಂಭಿಸಲು ನಿರ್ಧಾರ ಮಾಡುತ್ತಾನೆ. ಪ್ರಾರಂಭಿಸಿದ 20 ನಿಮಿಷಗಳ ಒಳಗೆ ಎಂಐಸಿ ಅನಿಲವು ಸೋರಿಕೆಯಾಗುತ್ತದೆ.

ಭೂಪಾಲ್ ರೈಲು ನಿಲ್ದಾಣದಲ್ಲಿ, ಎಂಐಸಿ ಅನಿಲ ಸೋರಿಕೆಯ ಸಂದರ್ಭದಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿದರು. ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಒಂದು ಕುಟುಂಬವು ಬದುಕಿ ಉಳಿದಿತ್ತು. ಹೌದು! ಎಂಎಲ್ ರಾಥೋರೆ ಹಾಗೂ ಅವನ ಹೆಂಡತಿ, ನಾಲ್ವರು ಮಕ್ಕಳು, ಆತನ ತಾಯಿ, ಹಾಗೂ ಸಹೋದರನೊಬ್ಬ ಬದುಕಿದ್ದರು ಕಾರಣ ಅವರು ಕಳೆದ 5 ವರ್ಷಗಳಿಂದ ಅಗಿಹೋತ್ರ ಹೋಮವನ್ನು ನಡೆಸುತ್ತಿದ್ದರು. ಆ ನಂತರ ಅವರು ತ್ರಯಂಭಕ ಹೋಮವನ್ನು ಮುಂದುವರಿಸಿದರು. ಅಗ್ನಿಹೋತ್ರವನ್ನು ಅಲ್ಲಿನ ಸಂತ್ರಸ್ತ ಜನರ ಕಲ್ಯಾಣಕ್ಕೋಸ್ಕರ ನಡೆಸಲಾಯಿತು. ಎಂಐಸಿ ಅನಿಲ ಸೋರಿಕೆಯಾದ ಪ್ರದೇಶದಲ್ಲಿ ಸ್ವಯಂಸೇವಕರ ತಂಡವು ಅಗ್ನಿಹೋತ್ರದ ಚಟುವಟಿಕೆಯಲ್ಲಿ ತೊಡಗಿದರು. 8 ರಿಂದ 10 ಜನರ ತಂಡವು ವಿವಿಧ ಜಾಗಗಳಲ್ಲಿ ಈ ಹೋಮವನ್ನು ನಡೆಸಲು ನಿರ್ಧರಿಸಿದರು, ಈ ತಂಡದಲ್ಲಿ 40-50 ಪ್ರತಿಷ್ಠಿತ ಜನರಿಂದ ಹೋಮ ನಡೆಸಲಾಯಿತು. ಸೂರ್ಯೋದಯದಿಂದ, ಸೂರ್ಯಸ್ತದವರೆಗೂ ಈ ಹೋಮ ನಡೆಸಿ ಉಸಿರುಗಟ್ಟಿರವ ಜನರು ನೆಮ್ಮದಿಯಿಂದ ಉಸಿರಾಡುವಂತೆ ಈ ಹೋಮವು ಮಾಡಿತು. ಸಣ್ಣ ಸಣ್ಣ ಪೊಟ್ಟಣಗಳಲ್ಲಿ ಅಗ್ನಿಹೊತ್ರ ಹೋಮದ ಬೂದಿಯನ್ನು ಔಷದಿಯಾಗಿ ಜನರಿಗೆ ವಿತರಣೆ ಮಾಡಲಾಯಿತು. ಅಗ್ನಿಹೋತ್ರ ಹೋಮ ನಡೆದ ನಂತರ ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಕಣ್ಣಿನ ಹನಿಯನ್ನು ಹಾಕುವಂತೆ ತಿಳಿಸಿದರು. ಅಗ್ನಿಹೋತ್ರ ನಡೆಸಿದ ನಂತರ ಅದರಿಂದ ಬರುವ ಹೊಗೆಯಿಂದ ತೊಂದರೆಗೊಳಗಾದವರು ಕಣ್ಣಿನ ಹನಿ ಹಾಕುವುದಾಗಿ ರೋಗಿಗಳಿಗೆ ಪರಿಹಾರ ಸೂಚಿನಲಾಯಿತು. ಪೆಬ್ರವರಿ 1985 ರಲ್ಲಿ ಯುಎಸ್ ನ ಬ್ಯಾರಿ ರಾಥ್ನರ್ ಎಂಬಾತ ಅನಿಲ ಸೋರಿಕೆಯಾದ ಪ್ರದೇಶದಲ್ಲಿ ಬಂದು ಅಲ್ಲಿಯ ಜನರ ಬಗ್ಗೆ ಹಾಗೂ ಅವರ ಆರೋಗ್ಯದ ಬಗ್ಗೆ ಅನ್ವೇಷಣೆ ನಡೆಸುತ್ತಾನೆ. 2 ತಿಂಗಳವರೆಗೆ ಅಲ್ಲಿಯ ಜನರು ಪ್ರತಿ ಬಳಗ್ಗೆ ಹಾಗೂ ಸಂಜೆ ಅಗ್ನಿಹೋತ್ರ ಹೋಮ ನಡೆಸಿ ತಮ್ಮನ್ನು ತಾವು ರಕ್ಷಿಸಿಕೊಂಡರು.

ಅಗ್ನಿಹೋತ್ರ ಹೋಮವು ಅನಿಲ ಸೋರಿಯಾದ ಪ್ರದೇಶದ ಜನರಿಗೆ ಉತ್ತಮ ಆರೋಗ್ಯದಾಯಕ ಪರಿಸರವನ್ನು ನಿರ್ಮಿಸಿಕೊಟ್ಟಿತು. ಈ ಹೋಮದಿಂದ ಪ್ರಜಾಪತಿ ಕುಟುಂಬಕ್ಕೆ ಉತ್ತಮ ಅನುಭವನ್ನು ನೀಡಿತು. ಹೌದು! ಪ್ರಜಾಪತಿಯ ಹೆಂಡತಿ ಹಾಗೂ ಈತನ ಇಬ್ಬರ ಮಕ್ಕಳ ಆರೋಗ್ಯಕ್ಕೆ ತುಂಬಾ ಕೆಟ್ಟ ಪರಿಣಾಮವನ್ನು ಬೀರಿತ್ತು. ಈ ಸನ್ನಿವೇಶದಲ್ಲಿ ಅವರು ಅಗ್ನಿಹೋತ್ರವನ್ನು ಪ್ರಾರಂಬಿಸಿದರು. ಪ್ರಜಪತಿಯವರು ಈ ಹೋಮನಡೆಸಿದ ಸ್ವಲ್ಪ ಸಮಯದಲ್ಲೇ ಅವರ ಹೆಂಡತಿ ಸಂಪೂರ್ಣವಾಗಿ ಗುಣಮುಖರಾದರು. ಇವರ 13 ವರ್ಷದ ಒಬ್ಬ ಮಗ ಕ್ಷಯರೋಗದಿಂದ ಬಳಲುತ್ತಿದ್ದ. ಆದ ಕಾರಣ ಪ್ರಜಪತಿಯವರು ಅಗ್ನಿಹೋತ್ರದ ಔಷದಿಯನ್ನು ಬಳಸಿ ಚಿಕಿತ್ಸೆಯನ್ನು ನೀಡಿದರು, ಹಾಗೂ ಇನ್ನೊಂದು ಆಶ್ಚರ್ಯದಾಯಕ ಸಂಗತಿಯೆಂದರೆ ಅನಿಲ ಸೋರಿಕೆಯ ನಂತರದ ವರ್ಷದಲ್ಲಿ ಈತನಿಗೆ ಒಬ್ಬ ಮಗಳು ಹುಟ್ಟುತ್ತಾಳೆ ಅವಳು ಸಂಪೂರ್ಣವಾಗಿ ಆರೋಗ್ಯಕರವಾಗಿ ಹುಟ್ಟಿದ್ದಾಳೆ. ನಂತರಲ್ಲಿ ಆ ಕುಟುಂಬ ನೆಮ್ಮದಿಯಿಂದ ಜೀವನ ಸಾಗಿಸಿತು.

ಭೋಪಾಲ್‍ನ ಅನಿಲ ಸೋರಿಕೆಯ ಘಟನೆ ವಿಶ್ವದಾದ್ಯಂತ ಸುದ್ದಿ ಮಾಡಿತು. ಹಾಗೂ ಆಗಿನ ಪತ್ರಿಕೆಗಳು ಈ ಘಟನೆಯಲ್ಲಿ ಅಗ್ನಿಹೋತ್ರವನ್ನು ಮುಖ್ಯಾಂಶವಾಗಿ ಎತ್ತಿ ಹಿಡಿಯಿತು. ಎಪ್ರಿಲ್ 7, 1985 ರಲ್ಲಿ ಆಗಿನ ಪ್ರಮುಖ ಪತ್ರಿಕೆಯಾಗಿದ್ದ “ದಿ ಹಿಂದೂ” ಈ ಘಟನೆಯ ಆಯ್ದ ಭಾಗಗಳನ್ನು ಪ್ರಕಟಿಸಿದ್ದು ಅದರಲ್ಲಿ ಪ್ರಮುಖವಾಗಿ
ಅಗ್ನಿಹೋತ್ರದ ಬಗ್ಗೆಯೆ ಮಾಹಿತಿಯನ್ನು ಪ್ರಕಟಿಸಲಾಯಿತು.

Image result for agnihotra

ಪೂರ್ವ ಯುರೋಪಿಯನ್ ಹೇಳುವ ಪ್ರಕಾರ!

ಸಾಮಾನ್ಯವಾಗಿ ವಿಜ್ಞಾನಿಗಳು ಅಗ್ನಿಹೋತ್ರದಿಂದ ಬರುವ ವಿಕಿರಣ ಶೀಲತೆಗಳನ್ನು ಒಪ್ಪಲು ಅಥವಾ ಅವುಗಳನ್ನು ನಂಬಲು ತಯಾರಿರುವುದಿಲ್ಲ. ವಿಜ್ಞಾನಿಗಳು
ಯಾವಾಗಲೂ ಯಾವುದಾದರು ರಾಸಾಯನಿಕವನ್ನು ಸುಟ್ಟು ಅದರಿಂದ ಹೊರ ಬರುವ ಹೊಗೆಗಳ ಬಗ್ಗೆಯೇ ಚಿಂತಿಸಿರುತ್ತಾರೆ. ಆದರೆ ಈ ರಾಸಾಯನಿಕ ಹಾಗೂ
ಸ್ಪೋಟಕಗಳು ಯಾವುದನ್ನೂ ಬದಲಿಸುವುದಿಲ್ಲ, ಹಾಗೂ ಇದರಿಂದ ಹೊರ ಬರುವ ವಿಕಿರಣಶೀಲತೆಗಳು ಯಾವುದೇ ರೀತಿಯಲ್ಲೂ ಪರಿಣಮಿಸುವುದಿಲ್ಲ.

ಆದರೆ ಕಳೆದ 5 , 6 ವರ್ಷಗಳಲ್ಲಿ ಅಗ್ನಿಹೋತ್ರಿಯ ಬಗ್ಗೆ ಹಲವಾರು ಲೇಖನಗಳು ಬರೆಯಲ್ಪಟ್ಟವು. ಆದರೆ ಇದಾವುದನ್ನು ಹಲವಾರು ವಿಜ್ಞಾನಿಗಳು ಒಪ್ಪಲು
ತಯಾರಿರಲಿಲ್ಲ. ಆದರೆ ಈ ವರಧಿಯು ನಿಜವಾಗಿತ್ತು. ಅಗ್ನಿಹೋತ್ರವು ಪರಿಸರವನ್ನು ಸರಿಸ್ಥಿತಿಯಲ್ಲಿಡುತ್ತದೆ. ಹಾಗಾದರೆ ವಿಕಿರಣಶೀಲತೆಯನ್ನು ಹೇಗೆ ಅಲ್ಲಗೆಳೆಯಲು ಸಾಧ್ಯ ? ಅಗ್ನಿಹೋತ್ರದ ಜ್ವಾಲೆಯ ಮುಂದೆ ಕುಳಿತರೆ ಅದು ಮನುಷ್ಯನ ಮೆದುಳಿನ ಮೇಲೆ ಪರಿಣಾಮ ಬೀಳುತ್ತದೆ. ಈ ಜ್ವಾಲೆಯ ಆವರ್ತನಗಳು ಮನುಷ್ಯರಿಗೆ ಉತ್ತಮ ಅಂಶಗಳನ್ನು ಒದಗಿಸುತ್ತವೆ.

ಕೆಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆಗಳನ್ನು ನಡೆಸಿದರು..

ನಮಗೆಲ್ಲ ಗೊತ್ತಿರುವ ಹಾಗೆ ಅಗ್ನಿಹೋತ್ರದ ಬೂದಿಯು ಶುದ್ಧ ವಸ್ತು . ಇದು ವಿಕಿರಣಶೀಲತೆಗೆ ವಿರುದ್ಧವಾಗಿದೆ. ಇದು ಸಾಮಾನ್ಯ ತತ್ವಗಳಿಂದ
ಕಾರ್ಯನಿರ್ವಹಿಸುವುದು. ನಮ್ಮ ದೇಹವು ಎಲ್ಲಾ ಅಂಶಗಳನ್ನು ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ಯಾವುದು ಯೋಗ್ಯವೋ ಅದನ್ನು ಮಾತ್ರ ಸ್ವೀಕರಿಸುವುದು.
ಉದಾಹರಣೆಗೆ ನಾವು ಊಟದ ಜೊತೆಗೆ ಕಬ್ಬಿಣವನ್ನು ತಿಂದರೆ ಅದನ್ನು ನಮ್ಮ ದೇಹವು ಸ್ವೀಕರಿಸಲು ತಯಾರಿರುವುದಿಲ್ಲ. ಯಾವಾಗ ನಮ್ಮ ದೇಹವು ವಿಕಿರಣಶೀಲತೆ ಇಲ್ಲದ ಅಂಶಗಳನ್ನು ಒಳಗೊಂಡಿರುತ್ತವೆಯೋ ಆಗ ನಮ್ಮ ದೇಹವು ಎಲ್ಲಾ ವಿಕಿರಣ ಅಂಶಗಳನ್ನು ನಮ್ಮ ದೇಹವು ಹೊರಹಾಕುತ್ತವೆ. ಇದು ಮೆಟಾಬಲಿಸಮ್ (ಚಯಾಪಚಯ) ತತ್ವ. ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಬೇಕೆ ಬೇಕು ನಾವು ಯಾವಾಗ ವಿಕಿರಣ ಅಂಶಗಳನ್ನು ಒಳತೆಗೆದು ಕೊಳ್ಳುತ್ತಾವೆಯೋ ಆ ಸಂದರ್ಭದಲ್ಲಿ ಅಗ್ನಿಹೋತ್ರದ ಬೂದಿಯನ್ನು ಸೇವಿಸುವುದರಿಂದ ವಿಕಿರಣಶೀಲತೆಯ ಅಂಶಗಳು ನಮ್ಮ ದೇಹದಲ್ಲಿ ಉಳಿಯುತ್ತದೆ. ಉಸಿರಾಟ ಕ್ರಿಯೆಯು ಸ್ಥಿರವಾಗಿರುವಂತೆ ನೋಡಿಕೊಳ್ಳುತ್ತದೆ. ಅಗ್ನಿಹೋತ್ರದ ಬೂದಿಯು ನಮ್ಮ ದೇಹಕ್ಕೆ ಔಷಧೀಯ ಗುಣವನ್ನು ನೀಡುತ್ತದೆ. ಹಾಗೂ ಇವೆಲ್ಲಾ ಅಂಶಗಳನ್ನು ಆ ಸಭೆಯಲ್ಲಿ ಸೇರಿದ್ದ ಎಲ್ಲಾ ವಿಜ್ಞಾನಿಗಳು ಒಪ್ಪುತ್ತಾರೆ.

ಹೌದು! ದನದ ಸಗಣಿ, ತುಪ್ಪ, ಅಕ್ಕಿ ಮುಂತಾದವುಗಳನ್ನು ಅಗ್ನಿಹೋತ್ರ ಹೋಮ ನಡೆಸುವ ಹಂತದಲ್ಲಿ ಬಳಸುತ್ತಾರೆ. ಆದರೆ ವಿಕಿರಣತೆಗೆ ಯಾವುದೇ
ತೊಂದರೆಯುಂಟಾಗುವುದಿಲ್ಲ. ಹಾಗಾಗಿ ಇಂಡಿಯಾ ಹಾಗೂ ಆಸ್ಟ್ರೇಲಿಯ ಯಾವುದೇ ಮಾಲಿನ್ಯಕ್ಕೆ ಒಳಗಾಗಿಲ್ಲ ಎಂಬುವುದು ಸಾಬೀತಾಗಿದೆ. ಹಾಗಾಗಿ ಅವರು
ಅಗ್ನಿಹೋತ್ರದ ಬೂದಿಗಳನ್ನು ಗುಳಿಗೆಗಳಾಗಿ ಪರಿವರ್ತಿಸಿ ಭಾರತ ಹಾಗೂ ಯುರೋಪ್‍ಗಳಲ್ಲಿ ಬೃಹತ್ ಪ್ರಮಾಣದಲ್ಲಿ ಹಂಚಲಾಯಿತು. ಇದು ಒಂದು ರೀತಿಯ
ವ್ಯವಹಾರ ಅಲ್ಲ. ಇದು ಮಾನವೀಯತೆಗೆ ಮಾಡಲಾದ ಸಹಾಯವಷ್ಟೇ ಎಂದು ಹೇಳಿದರು.

ದೆಹಲಿಗೆ ಇದುವೇ ಅಂತಿಮ ಪರಿಹಾರ!

ಹೌದು. ದೆಹಲಿಯಲ್ಲಿರುವ ವಾಯುಮಾಲಿನ್ಯದ ಸಮಸ್ಯೆಗೆ ಇದು ಶಾಶ್ವತ ಪರಿಹಾರವಾಗುವ ಲಕ್ಷಣಗಳಾಗಿವೆ. ಸದ್ಯ ಈ ವಾಯುಮಾಲಿನ್ಯದ ಭೀತಿ ಸುಪ್ರೀಂ ಕೋರ್ಟ್‍ನ ಕದ ತಟ್ಟಿದೆ. ಸರ್ಕಾರ ಹೀಗೊಂದು ಮನಸ್ಸು ಮಾಡಿ, ಅಲ್ಲಲ್ಲಿ ಅಗ್ನಿ ಹೋತ್ರವನ್ನು ನಡೆಸಿದರೆ ಸುಲಭ ಉಸಿರಾಟ ಹಾಗೂ ಸುಸಜ್ಜಿತ ಆರೋಗ್ಯವನ್ನೂ ನೀಡುತ್ತದೆ. ಎಂತಹ ದಟ್ಟನೆಯ ಹೊಗೆಯಾದರೂ ಅದನ್ನು ಮೀರಿಸುವಂತಹ ಶಕ್ತಿ ಅಗ್ನಿಹೋತ್ರಕ್ಕೆ ಇದೆ ಎಂಬುವುದು ಅಷ್ಟೇ ಸತ್ಯ. ಇದು ಖಂಡಿತ ಅತಿಶಯೋಕ್ತಿ ಅಲ್ಲ.

ಹೀಗೆ ಮಾಡಿದರೆ ಸನಾತನ ಧರ್ಮವನ್ನು ಪಾಲನೆ ಮಾಡಿದಂತಾಗುತ್ತದೆ ಮತ್ತು ರಾಜಕೀಯವಾಗಿ ಹಿನ್ನೆಡೆಯಾಗಬಹುದು ಎಂಬ ದುರಾಲೋಚನೆಯನ್ನು ದೂರ
ಮಾಡಬೇಕಷ್ಟೆ.

-ಸುನಿಲ್ ಪಣಪಿಲ

Tags

Related Articles

Close