ಪ್ರಚಲಿತ

ದೇಶದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಅಭಿವೃದ್ಧಿಗೆ ತಕ್ಕುದಾದ ವ್ಯಕ್ತಿಬೇಕಿತ್ತು. ಅದಕ್ಕಾಗಿ ಮೋದಿ ಸುರೇಶ್ ಪ್ರಭುವನ್ನೇ ಆಯ್ಕೆ ಮಾಡಿದ್ದು ಯಾಕೆ ಗೊತ್ತೇ?!

ದೇಶದ ಹಿರಿಯ ರಾಜಕಾರಣಿಗಳಲ್ಲೊಬ್ಬರು ಎನಿಸಿಕೊಂಡಿದ್ದಾರೆ ಶ್ರೀ ಸುರೇಶ್ ಪ್ರಭು!!

ಒಂದು ಕಾಲದಲ್ಲಿ ದೇಶದ ನದಿಗಳನ್ನೆಲ್ಲ ಜೋಡಿಸಿ ಜನರ ದಾಹ ನೀಗಿಸಿ, ನಂತರ ವಿದ್ಯುತ್ ಪ್ರವಾಹ ಹರಿಸುವ ಯೋಜನೆಗಳನ್ನು ಹಿಡಿದುಕೊಂಡು ತಿರುಗಾಡಿದವರು ಮತ್ತೆ ರೈಲು ಮಾರ್ಗ ಜೋಡಣೆಯ ಜವಾಬ್ದಾರಿಯನ್ನು ಹೊತ್ತು ಇದೀಗ ವಾಣಿಜ್ಯ ಮತ್ತು ಕೈಗಾರಿಕಾ ಜವಾಬ್ದಾರಿಯನ್ನು ಹೊತ್ತಿರುವ ದೇಶದ ಹಿರಿಯ ರಾಜಕಾರಣಿಗಳಲ್ಲೊಬ್ಬರು ಎನಿಸಿಕೊಂಡಿದ್ದಾರೆ ಶ್ರೀ ಸುರೇಶ್ ಪ್ರಭು!!

ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ಮೂಲಕ ದೇಶದಲ್ಲಿ ಬದಲಾವಣೆ ಮತ್ತು ಆಡಳಿತ ಸುಧಾರಣೆ ಪ್ರಕ್ರಿಯೆಗಳು ವೇಗವಾಗಿ ನಡೆಯುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ಇದು ಸ್ಪಷ್ಟವಾಗಿ ಕಾಣಿಸಿಕೊಳ್ಳಲಿದೆ ಎಂದಿರುವ ಮೋದಿ ಸರಕಾರದ ಸಚಿವ ಸಂಪುಟದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿರುವ ಸುರೇಶ್ ಪ್ರಭು ಅವರ ಮಾತು!!

ರೈಲ್ವೆಯನ್ನು ಆಧುನೀಕರಣಗೊಳಿಸುವುದು, ಜಪಾನ್ ಮಾದರಿಯ ಬುಲೆಟ್ ಟ್ರೈನ್‍ಗಳನ್ನು ದೇಶದಲ್ಲಿ ಸಂಚರಿಸುವಂತೆ ಮಾಡುವುದು ಮೋದಿ ಅವರ ಅತಿ ದೊಡ್ಡ ಕನಸು. ಇದನ್ನು ನನಸು ಮಾಡುವ ಸಲುವಾಗಿ ರೈಲ್ವೇ ಸಚಿವರಾಗಿ ಜವಾಬ್ದಾರಿ ಹೊತ್ತಿದ್ದ ಪ್ರಭು ಚುನಾವಣೆ ಮುಗಿದು ಮೋದಿ ಅವರು ದೇಶ ಮುನ್ನಡೆಸುವ ಕಾರ್ಯಕ್ಕೆ ಕೈ ಹಾಕಿದ್ದ ಸಂದರ್ಭದಲ್ಲಿ ಮೋದಿಯವರಿಗೆ ವಿದ್ಯುತ್, ಪರಿಸರ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಲಹೆ ನೀಡುತ್ತಿದ್ದ ಪ್ರಭು ಅವರಿಗೆ, ದೊಡ್ಡ ಯೋಜನೆಗಳನ್ನು ಜಾರಿಗೆ ತರುವ ಹೊಣೆಯನ್ನೇ ಹೊರಿಸಿದ್ದರು ಮೋದಿ. ಆದರೆ ಉತ್ತರ ಪ್ರದೇಶದಲ್ಲಿ ಸಂಭವಿಸಿದ ಅಪಘಾತಗಳ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ ನಂತರ ಇದೀಗ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಭಾರತೀಯ ರಾಜಕಾರಣಿಯಾಗಿರುವ ಸುರೇಶ್ ಪ್ರಭು 11 ಜುಲೈ 1953 ಮುಂಬೈನಲ್ಲಿ ಜನಿಸಿದರು. ಮುಂಬಯಿಯ ಶಾರದಾಶ್ರಮ ವಿದ್ಯಾ ಮಂದಿರದಿಂದ ಉತ್ತೀರ್ಣರಾಗಿ, ಬಿ.ಕಾಂ ಆನರ್ಸ್ ಪದವಿಯನ್ನು ಮುಂಬಯಿಯ ಎಮ್.ಎಲ್. ದಹನೂಕರ್ ಕಾಲೇಜಿನಿಂದ ಪಡೆದಿರುವ ಇವರು, ತದನಂತರದಲ್ಲಿ ಮುಂಬಯಿಯ ನ್ಯೂ ಲಾ ಕಾಲೇಜಿನಿಂದ ಕಾನೂನು ಪದವಿಯನ್ನು ಪಡೆದ್ದಾರೆ.

ಮುಂಬೈನಲ್ಲಿ ಹುಟ್ಟಿ ಬೆಳೆದ ಸುರೇಶ್ ಪ್ರಭು ವೃತ್ತಿಪರ ರಾಜಕಾರಣಿಯಲ್ಲ, ಓದಿದ್ದು ಸಿಎ. ಅದರಲ್ಲಿ ಅಖಿಲ ಭಾರತದಲ್ಲಿ 11ನೇ ರ್ಯಾಂಕ್ ಪಡೆದಿರುವ ಇವರು ಕಾನೂನು ಪದವೀಧರರೂ ಹೌದು!! ತಮ್ಮದೇ ಲೆಕ್ಕ ಪರಿಶೋಧಕ ಸಂಸ್ಥೆ ಹುಟ್ಟಿ ಹಾಕಿ ಸಹಕಾರಿ ಸಂಸ್ಥೆಗಳನ್ನು ಮುನ್ನಡೆಸಿದ್ದಾರೆ. ಆದರೆ ರಾಜಕೀಯಕ್ಕೆ ಸೇರಿದ್ದೂ ಮಾತ್ರ ಅಕಸ್ಮಿಕ.

ಅದಕ್ಕೆ ಕಾರಣವಾದ ಅಂಶಗಳೇ ಇವತ್ತು ಮೋದಿಯವರು ಕೈ ಹಿಡಿದು ರಾಜಕೀಯವಾಗಿ ಮತ್ತೊಂದು ಉತ್ತುಂಗಕ್ಕೆ ಏರಿಸಲೂ ಕಾರಣವಾಗಿವೆ. ಉದ್ಧವ್ ಠಾಕ್ರೆ ಅವರ ಜ್ಞಾನಪರಿಧಿ ವಿಸ್ತರಿಸಬಲ್ಲವರಿಗಾಗಿ ಬಾಳಾ ಠಾಕ್ರೆ ಅವರು ಹುಡುಕಾಡುತ್ತಿದ್ದಾಗ ಸುರೇಶ್ ಪ್ರಭು ಹೆಸರನ್ನು ಪತ್ರಕರ್ತರೊಬ್ಬರು ಸೂಚಿಸಿದರಂತೆ. ಪ್ರಭು ಅವರು ಆಗ ಸಾರಸ್ವತ ಬ್ಯಾಂಕ್ ಅನ್ನು ಮುನ್ನಡೆಸುತ್ತಿದ್ದರು. ಇವರೊಂದಿಗಿನ ಚರ್ಚೆಗಳಿಂದ ಪ್ರಭಾವಿತರಾದ ಠಾಕ್ರೆ, ಪ್ರಭು ಅವರನ್ನು 1996ರಲ್ಲಿ ಲೋಕಸಭೆ ಚುನಾವಣೆ ಕಣಕ್ಕಿಳಿಸಿದರು. ಅಲ್ಲಿಂದಾಚೆಗೆ ರಾಜಕೀಯಕ್ಕೆ ಎಂಟ್ರಿ ಕೊಟ್ಟರು ಸುರೇಶ್ ಪ್ರಭು.

1996 ರಿಂದ, ಪ್ರಭು ಶಿವ ಸೇನಾ ಪಕ್ಷದ ಸದಸ್ಯರಾಗಿ ಮಹಾರಾಷ್ಟ್ರದಲ್ಲಿನ ರಾಜಾಪುರ್ ಲೋಕ ಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಅವರು 9 ನವೆಂಬರ್ 2014 ರಂದು ಶಿವ ಸೇನೆಯನ್ನು ತೊರೆದು ತದನಂತರ ಭಾರತೀಯ ಜನತಾ ಪಕ್ಷವನ್ನು ಸೇರಿದರು. ಪ್ರಸ್ತುತ ಅವರು ಭಾರತೀಯ ಸಂಸತ್ತಿನ ಮೇಲ್ಮನೆಯಲ್ಲಿ ಆಂಧ್ರ ಪ್ರದೇಶವನ್ನು ಪ್ರತಿನಿಧಿಸುತ್ತಾರೆ ಕೂಡ!!

ಪ್ರಭು ಹಲವಾರು ಸರ್ಕಾರಿ ಮತ್ತು ಅರೆಸರ್ಕಾರಿ ಸ್ಥಾನಗಳನ್ನು ಅಲಂಕರಿಸಿದ್ದಾರೆ, ಇದರಲ್ಲಿ ಮಹಾರಾಷ್ಟ್ರ ರಾಜ್ಯ ಹಣಕಾಸು ಆಯೋಗ, ಸಾರಸ್ವತ್ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷತೆ, ಮಹಾರಾಷ್ಟ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಸದಸ್ಯ, ಇತ್ಯಾದಿಗಳನ್ನು ಒಳಗೊಂಡಿವೆ. ಪ್ರಭು 100 ಕ್ಕಿಂತ ಹೆಚ್ಚು ದೇಶಗಳಿಗೆ ಪ್ರಯಾಣಿಸಿದ್ದಾರೆ. ಅಷ್ಟೇ ಅಲ್ಲದೇ, 16 ಜಾಗತಿಕ ಸಂಸ್ಥೆಗಳು ಮತ್ತು 9 ಆಯಕಟ್ಟಿನ ಮಾತುಕತೆಗಳಲ್ಲಿ ಕೆಲಸ ಮಾಡುತ್ತಿರುವ ಹಿರಿಮೆ ಇವರದ್ದಾಗಿದೆ!!

ಆದರೆ, ಸುರೇಶ್ ಪ್ರಭು ಅವರ ಪ್ರತಿಭೆಯಿಂದ ಪ್ರಭಾವಿತರಾಗಿದ್ದ ವಾಜಪೇಯಿ ಅವರು ತಮ್ಮ ಕನಸಿನ ನದಿ ಜೋಡಣೆ ಯೋಜನೆ ಕಾರ್ಯಪಡೆಯ ಅಧ್ಯಕ್ಷರನ್ನಾಗಿ ಮಾಡಿದ್ದರು. ಅಲ್ಲಿಂದಾಚೆಗೆ ಪ್ರಭು ಅವರು ಹೆಸರು ಮಾಡಿದ್ದು ಈ ಸಂಬಂಧದ ಕಾರ್ಯಗಳಿಂದಲೇ!! ಹಲವರು ಅವರ ಕೆಲಸವನ್ನು ಹೊಗಳಿದರೆ, ಅದನ್ನು ಮೀರಿದ ಟೀಕೆಗಳೂ ವ್ಯಕ್ತವಾದವು.

ನದಿ ಜೋಡಣೆ ಬಗ್ಗೆ ಸುರೇಶ್ ಪ್ರಭು ಸುಳ್ಳುಗಳನ್ನು ಹೇಳಿ ದೇಶವನ್ನೇ ದಿಕ್ಕು ತಪ್ಪಿಸುತ್ತಿದ್ದಾರೆನ್ನುವ ದೂರುಗಳೂ ಕೇಳಿ ಬಂದವು. ದೇಶದ ನದಿಗಳ ಜೋಡಣೆ ಮೂಲಕ 34 ದಶಲಕ್ಷ ಹೆಕ್ಟೇರ್ ಹೆಚ್ಚುವರಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಬಹುದು, 101 ಜಿಲ್ಲೆಗಳು ಮತ್ತು 5 ನಗರಗಳಿಗೆ ಕುಡಿಯುವ ನೀರು ಪೂರೈಸಬಹುದು, 34 ಸಾವಿರ ಮೆಗಾವ್ಯಾಟ್ ಅಗ್ಗದ ವಿದ್ಯುತ್ ಉತ್ಪಾದಿಸಬಹುದು ಎನ್ನುವುದು ಯೋಜನೆಯ ಪ್ರಮುಖ ಅಂಶಗಳಾಗಿದ್ದವು ಆದರೆ ಇದು 2004ರಲ್ಲೇ ಈ ಕಾರ್ಯ ನಿಂತು ಹೋಯಿತು.

ಆದರೆ, ಮೋದಿ ಗದ್ದಲ ದೇಶಾದ್ಯಂತ ಹೆಚ್ಚಾದಂತೆ ಪ್ರಭು ಅವರೂ ನಿಧಾನವಾಗಿ ರಾಜಕೀಯದ ಹೊಸ ಅಧ್ಯಾಯ ಆರಂಭಿಸಿದರು. ಅವರು ಶಿವಸೇನೆಗೆ ದಿಢೀರನೆ ಕೈ ಕೊಟ್ಟರು ಎಂದು ಎನಿಸಿದರೂ ಅದಕ್ಕೆ ಎಲ್ಲ ಸಿದ್ಧತೆಗಳೂ ವರ್ಷದ ಹಿಂದೆಯೇ ಆರಂಭವಾಗಿದ್ದವು. 2013ರಲ್ಲಿ ಅಮೆರಿಕದ ವಾರ್ಟನ್ ಸ್ಕೂಲ್‍ನ ವಾರ್ಟನ್ ಇಂಡಿಯ ಎಕನಾಮಿಕ್ ಫೆÇೀರಂ ನರೇಂದ್ರ ಮೋದಿಯವರ ಉಪನ್ಯಾಸವನ್ನು ದಿಢೀರ್ ರದ್ದುಪಡಿಸಿದಾಗ ಅದನ್ನು ಅಷ್ಟೇ ದಿಢೀರ್ ಆಗಿ ವಿರೋಧಿಸಲು ಎದ್ದವರು ಸುರೇಶ್ ಪ್ರಭು.

ಈ ಮೂಲಕ ಅವರು ಮೋದಿಯವರ ಜತೆ ಬಹಿರಂಗವಾಗಿಯೇ ಗುರುತಿಸಿಕೊಂಡರು. ಮುಂದೆ ಮೋದಿ ಅವರು ಪ್ರಧಾನಿಯಾಗುತ್ತಿದ್ದಂತೆ ರಚಿಸಿದ ವಿದ್ಯುತ್, ಕಲ್ಲಿದ್ದಲು ಮತ್ತು ನವೀಕರಣ ಇಂಧನದ ಸಲಹಾ ಮಂಡಳಿಯ ಮುಖ್ಯಸ್ಥರಾದರು. ಈಗಾಗಲೇ ಈ ಬಗ್ಗೆ ಎರಡು ವರದಿಗಳನ್ನು ಸಚಿವರಿಗೆ ಸಲ್ಲಿಸಿದ್ದಾರೆ. ತದನಂತರ ಸುರೇಶ್ ಪ್ರಭು ಜಿ-20 ಶೃಂಗ ಸಭೆಗೆ ಮೋದಿ ಅವರಿಗೆ ಸಲಹೆಗಳನ್ನು ನೀಡಿರುವ ವ್ಯಕ್ತಿಯಾಗಿದ್ದಾರೆ!!

ವಾಜಪೇಯಿ ಸರಕಾರದಲ್ಲಿ ವಿದ್ಯುತ್ ಸಚಿವರಾಗಿ ದೇಶದ ವಿದ್ಯುತ್ ವ್ಯವಸ್ಥೆಯ ಸುಧಾರಣೆಗೆ ಕಾರಣವಾದವರು ಎನ್ನುವ ಹೆಗ್ಗಳಿಕೆಯೂ ಸುರೇಶ್ ಪ್ರಭು ಅವರದ್ದು. ಹಾಗಾಗಿ 2003ರ ವಿದ್ಯುತ್ ಕಾಯ್ದೆ ಮೂಲಕ ವಿದ್ಯುತ್ ಕ್ಷೇತ್ರಕ್ಕೆ ಖಾಸಗಿ ಹೂಡಿಕೆ ಪೆÇ್ರೀತ್ಸಾಹಿಸಿ ಉತ್ಪಾದನೆ ಹೆಚ್ಚುವಂತೆ ನೋಡಿಕೊಂಡರು. ರಾಜ್ಯಗಳ ಬಾಕಿ ವಸೂಲಿಗೆ ಕ್ರಮ ಕೈಗೊಂಡರು. ಆಗ ಅವರು ಶಿವಸೇನೆಯಲ್ಲಿಯೇ ಇದ್ದರೂ ಬಿಜೆಪಿಯ ಘಟಾನುಘಟಿಗಳ ಜತೆ ಬೆರೆತರು.

ಮೋದಿ ಸರಕಾರದ ಮೊದಲ ಸಂಪುಟ ವಿಸ್ತರಣೆಯಲ್ಲೇ ಪ್ರಭು ಅವರು ಪೂರ್ಣವಾಗಿ ಬಿಜೆಪಿಯವರೇ ಆಗಿಬಿಟ್ಟಿದ್ದಾರೆ ಮತ್ತು ಬಿಜೆಪಿಯೊಳಗಿನ ಜನರೂ ಬೆರಗಾಗುವಂಥ ಮತ್ತು ಅಸೂಯೆ ಪಡುವಂಥ ರೈಲ್ವೇ ಖಾತೆ ಪಡೆದಿದ್ದರು.

ಪ್ರಭು ಅವರನ್ನು ಸಚಿವರನ್ನಾಗಿ ಮಾಡಿದ್ದಲ್ಲದೆ, ರಾಜ್ಯಸಭೆ ಪ್ರವೇಶಿಸುವಂತೆ ನೋಡಿಕೊಂಡಿದ್ದಾರೆ. ಪ್ರಭು ಅವರು ಬಿತ್ತಿದ ನದಿಗಳ ಜೋಡಣೆಯ ಕನಸು ನನಸಾಗಲಿಲ್ಲ. ಅಷ್ಟೇ ಅಲ್ಲದೇ, 2012ರ ವೇಳೆಗೆ ಎಲ್ಲರಿಗೂ ವಿದ್ಯುತ್ ಸಂಪರ್ಕ ನೀಡುವ ಅವರ ಭರವಸೆಯೂ ಈಡೇರಲಿಲ್ಲ. ಆದರೆ, ತಾವು ಬೆಳೆಸಿಕೊಂಡ ಸಂಪರ್ಕ, ವರ್ಚಸ್ಸಿನಿಂದ ತಾವು ಮತ್ತೊಮ್ಮೆ ರಾಜಕೀಯದ ಪವರ್ ಪಡೆದುಕೊಂಡರು. ಹಾಗಾಗಿ ಸುರೇಶ್ ಪ್ರಭು ಅವರನ್ನು ಪ್ರಾಮಾಣಿಕ ರಾಜಕಾರಣಿ ಎಂದೂ ಕರೆಯುತ್ತಾರೆ.

ಇನ್ನು, ರೈಲ್ವೇ ಸಚಿವರಾಗಿದ್ದ ಸಂದರ್ಭದಲ್ಲಿ ರೈಲ್ವೇ ಇಲಾಖೆಯಲ್ಲಿ ಆಡಳಿತ ವಿಕೇಂದ್ರೀಕರಣಕ್ಕೆ ಒತ್ತು ನೀಡಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸುವುದು, ನೇಮಕಾತಿ ಪ್ರಕ್ರಿಯೆ ಸಹಿತ ಹಲವು ತೀರ್ಮಾನಗಳನ್ನು ಆಯಾ ವಿಭಾಗದ ಪ್ರಧಾನ ರೈಲ್ವೇ ಪ್ರಧಾನ ವ್ಯವಸ್ಥಾಪಕರ ಮಟ್ಟದಲ್ಲಿಯೇ ಅಂತಿಮಗೊಳಿಸುವಂತೆ ಸೂಚಿಸಲಾಗಿತ್ತು. ಅಷ್ಟೆ ಅಲ್ಲದೇ. ಸಣ್ಣಪುಟ್ಟ ವಿಚಾರಗಳ ಬಗ್ಗೆ ರೈಲ್ವೇ ಸಚಿವರು ಮತ್ತು ರೈಲ್ವೇ ಮಂಡಳಿ ನಿರ್ಧಾರ ತೆಗೆದುಕೊಳ್ಳಲು ಬದಲು ಸ್ಥಳೀಯ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡುವಂತಹ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮದ ಮೂಲಕ ಬರುವ ದೂರುಗಳು ಮತ್ತು ಸಲಹೆಗಳನ್ನು ಪಡೆದುಕೊಂಡು ರೈಲ್ವೇ ಇಲಾಖೆಯಲ್ಲಿಯೂ ಸಾಕಷ್ಟು ಸುಧಾರಣೆಗಳನ್ನು ತರಲಾಗಿದ್ದು, ಸಾಮಾಜಿಕ ಮಾಧ್ಯಮಗಳ ಮೂಲಕ ದೂರುಗಳನ್ನು ಸ್ವೀಕರಿಸಿ ಅತ್ಯಂತ ಕಡಿಮೆ ಅವಧಿಯಲ್ಲಿ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ. ವೈದ್ಯಕೀಯ ನೆರವು ಮತ್ತು ದೂರುಗಳಿಗೆ ಕ್ಷಿಪ್ರಗತಿಯಲ್ಲಿ ಸ್ಪಂದಿಸಲು ಅಗತ್ಯ ಕ್ರಮ ಕೈಗೊಳ್ಳುವ ಕ್ರಮವನ್ನು ಇವರು ಜಾರಿಗೊಳಿಸಿದ್ದಾರೆ!! ಅಷ್ಟೇ ಅಲ್ಲದೇ, ದೇಶದ ಪ್ರಥಮ ಸೆಮಿ ಹೈ ಸ್ಪೀಡ್ ಗತಿಮಾನ್ ಎಕ್ಸ್‍ಪ್ರೆಸ್ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ಅನ್ನು ಇವರ ಅಧಿಕಾರಾವಧಿಯಲ್ಲಿ ಮಾಡಿರುವುದೇ ಹೆಮ್ಮೆಯ ವಿಚಾರ!!

ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ ಒಂದೆರಡು ತಿಂಗಳ ಹಿಂದೆಯಷ್ಟೇ ಅಧಿಕಾರ ಸ್ವೀಕರಿಸಿರುವ ಇವರು ದೇಶದ ಆಯುಷ್ ಕ್ಷೇತ್ರ ಪ್ರಗತಿ ಪಥದಲ್ಲಿ ಮುನ್ನುಗ್ಗುತ್ತಿದ್ದು ಮುಂದಿನ ದಿನಗಳಲ್ಲಿ ಕೋಟ್ಯಂತರ ಉದ್ಯೋಗವಕಾಶ ಸೃಷ್ಟಿಯಾಗಲಿದೆ ಎಂದು ತಿಳಿಸಿದ್ದಾರೆ. 2020ರ ವೇಳೆಗೆ ಈ ಕ್ಷೇತ್ರ ಪ್ರತ್ಯಕ್ಷವಾಗಿ 10 ಲಕ್ಷ ಮಂದಿಗೆ, ಪರೋಕ್ಷವಾಗಿ 2.5 ಕೋಟಿ ಮಂದಿಗೆ ಉದ್ಯೋಗವಕಾಶ ಕಲ್ಪಿಸಲಿದೆ ಎಂದು ಹೇಳಿರುವ ಇವರು ದೇಶದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ ಯಾವೆಲ್ಲಾ ಅಬಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಿದ್ದಾರೆ ಎನ್ನವುದನ್ನು ಕಾದು ನೋಡಬೇಕಾಗಿದೆ!!

– ಅಲೋಖಾ

Tags

Related Articles

Close