ಪ್ರಚಲಿತ

ದೇಶದ ಭದ್ರತೆ ಮತ್ತು ಸೈನಿಕರ ರಕ್ಷಣೆಗೆಗಾಗಿ ಮತ್ತೊಂದು ಪ್ರಮುಖ ನಡೆ ಇಟ್ಟಿರುವ ಮೋದಿ ಸರ್ಕಾರ!!

ಹಲವು ದಶಕಗಳಿಂದಲೂ ಸೇನಾ ಪಡೆಗಳಿಗೆ ಅಗತ್ಯವಾಗಿದ್ದ ಆಧುನೀಕರಣ ಪ್ರಕ್ರಿಯೆಗೆ ಕೊನೆಗೂ ಚಾಲನೆ ಸಿಕ್ಕಿದ್ದು, ಭಾರೀ ಪ್ರಮಾಣದಲ್ಲಿ ಲಘು ಮಶಿನ್ ಗನ್‍ಗಳು, ಮದ್ದುಗುಂಡುಗಳು ಮತ್ತು ರೈಫಲ್‍ಗಳನ್ನು ಖರೀದಿಸಲು ಸರ್ಕಾರ ಮುಂದಾಗಿದ್ದಲ್ಲದೇ, ಹಳೆಯದಾಗಿರುವ ಶಸ್ತ್ರಾಸ್ತ್ರಗಳ ಬಳಕೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದ ವಿಚಾರ ತಿಳಿದೇ ಇದೆ. ಆದರೆ ಇದೀಗ ದೇಶದ ಭದ್ರತೆ ಮತ್ತು ಸೈನಿಕರ ರಕ್ಷಣೆಗೆಗಾಗಿ ಮತ್ತೊಂದು ಪ್ರಮುಖ ನಡೆ ಇಟ್ಟಿರುವ ಮೋದಿ ಸರ್ಕಾರ, ಇನ್ನೊಂದು ಹೊಸ ಯೋಜನೆಯನ್ನು ರೂಪಿಸಿದೆ.

ಹೌದು.. ಈಗಾಗಲೇ ಮೇಕ್ ಇಂಡಿಯಾ ಯೋಜನೆಯ ಭಾಗವಾಗಿ 50,000 ಬುಲೆಟ್ ಪೆÇ್ರಫ್ ಜಾಕೆಟ್ ಗಳನ್ನು ಭಾರತದಲ್ಲೇ ಉತ್ಪಾದಿಸಲಾಗಿದ್ದು, ಕೇಂದ್ರ ಸರ್ಕಾರ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ 83 ತೇಜಸ್ ವಿಮಾನಗಳ ಖರೀದಿಗೆ ಗ್ರೀನ್ ಸಿಗ್ನಲ್ ನೀಡಿದೆ. ಇದರ ಬೆನ್ನಲ್ಲೆ ಇದೀಗ ಶತ್ರುಗಳ ಹುಟ್ಟಡಗಿಸಲು ಭಾರತೀಯ ಸೈನಿಕರಿಗಾಗಿ ಹೊಸ ಮಾದರಿಯ ಅಸಲ್ಟ್ ರೈಫಲ್ ಖರೀದಿಸುವ ಪ್ರಸ್ತಾವನೆಗೂ ಗ್ರೀನ್ ಸಿಗ್ನಲ್ ನೀಡಿರುವ ನರೇಂದ್ರ ಮೋದಿ ಸರ್ಕಾರ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿರುವುದು ಹೆಮ್ಮೆಯ ವಿಚಾರವಾಗಿದೆ.

ಹಾಗಾಗಿ ದೇಶದ ಭದ್ರತೆ ಮತ್ತು ಸೈನಿಕರ ರಕ್ಷಣೆಗೆಗಾಗಿ ಮೋದಿ ಸರ್ಕಾರ ಬರೋಬ್ಬರಿ 553 ಮಿಲಿಯನ್ ಡಾಲರ್ ಮೌಲ್ಯದ 160,000 ಅತ್ಯಾಧುನಿಕ ಗನ್ ಗಳ ಖರೀದಿಗಾಗಿ ಯೋಜನೆ ರೂಪಿಸಿದೆ. ಅಷ್ಟೇ ಅಲ್ಲದೇ, ವಿವಾದಿತ, ಚೀನಾ ಮತ್ತು ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ನಿಯೋಜಿತಸಲ್ಪಟ್ಟ ಸೈನಿಕರಿಗೆ ಈ ಗನ್ ಗಳನ್ನು ನೀಡಲಾಗುತ್ತದೆ ಎಂದು ರಕ್ಷಣಾ ಮೂಲಗಳು ಸ್ಪಷ್ಟ ಪಡಿಸಿದೆ.

ಅಸಲ್ಟ್ ರೈಫಲ್ ಖರೀದಿಸುವ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ನೀಡಿರುವ ಹಿನ್ನಲೆಯಲ್ಲಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ರಕ್ಷಣಾ ಸಾಮಗ್ರಿ ಖರೀದಿ ಮಂಡಳಿ, ಮಂಗಳವಾರ 3547 ಕೋಟಿ ರೂಪಾಯಿ ಮೊತ್ತದ ರೈಫಲ್ ಖರೀದಿ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಹಾಗಾಗಿ ಒಟ್ಟು ಎರಡು ಮಾದರಿಯ ರೈಫಲ್ ಖರೀದಿಯನ್ನು ನಿರ್ಧರಿಸಲಾಗಿದ್ದು, ಈ ಪೈಕಿ 72,400 ಅಸಲ್ಟ್ ರೈಫಲ್‍ಗಳು ಮತ್ತು 93,895 ಕಾರ್ಬೈನ್ ರೈಫಲ್?ಗಳನ್ನು ಖರೀದಿಸಲು ಕೇಂದ್ರ ಮುಂದಾಗಿದೆ. ಅಷ್ಟೇ ಅಲ್ಲದೇ, ಈ ರೈಫಲ್‍ಗಳನ್ನು ಮೇಕ್ ಇನ್ ಇಂಡಿಯಾದ ಭಾಗವಾಗಿ ಭಾರತದಲ್ಲೇ ಉತ್ಪಾದಿಸಲು ಟೆಂಡರ್ ಪಡೆಯುವ ಕಂಪನಿಗಳಿಗೆ ಅವಕಾಶ ಮಾಡಿಕೊಡಲು ಕೆಲವು ನಿಯಮಾವಳಿಗಳನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ.

ಈಗಾಗಲೇ, ಸುಮಾರು 44 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಭಾರೀ ಪ್ರಮಾಣದ ಖರೀದಿಗೆ ನಿರ್ಧರಿಸಲಾಗಿದ್ದು, ಇದು ದೇಶದ ಸೇನಾ ಇತಿಹಾಸದಲ್ಲೇ ಬೃಹತ್ ಪ್ರಮಾಣದ್ದಾಗಿದೆ. 7 ಲಕ್ಷ ರೈಫಲ್‍ಗಳು, 44 ಸಾವಿರ ಲಘು ಮಶಿನ್ ಗನ್‍ಗಳು ಮತ್ತು 44,600 ಕಾರ್ಬೈನ್‍ಗಳನ್ನು ಖರೀದಿ ಮಾಡುವ ನಿರ್ಧಾರ ಅಂತಿಮಗೊಂಡಿದೆ. ಇದಕ್ಕೆ ಸೇನೆ ಹಾಗೂ ರಕ್ಷಣಾ ಸಚಿವಾಲಯಗಳು ಕೂಡ ಹಸಿರು ನಿಶಾನೆ ತೋರಿವೆ.

ಅಷ್ಟೇ ಅಲ್ಲದೇ, ಹಲವು ವರ್ಷಗಳಿಂದಲೂ ಸೇನೆ ಈ ಆಧುನೀಕರಣ ಪ್ರಕ್ರಿಯೆಗೆ ಬೇಡಿಕೆ ಸಲ್ಲಿಸುತ್ತಿತ್ತು. ಪಾಕಿಸ್ಥಾನ ಹಾಗೂ ಚೀನದ ಸೇನಾಪಡೆಗಳನ್ನು ಎದುರಿಸುವ ನಿಟ್ಟಿನಲ್ಲಿ ಈ ಆಧುನೀಕರಣ ಅಗತ್ಯವಾಗಿತ್ತು. ಇತ್ತೀಚೆಗೆ ಸೇನಾ ಕಮಾಂಡರ್‍ಗಳ ಸಭೆಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಗಿತ್ತು. ಸೇನೆಯ ಆಧುನೀಕರಣವು ಸರಕಾರದ ಆದ್ಯತೆಯಾಗಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈ ವೇಳೆ ಹೇಳಿದ್ದರು. ಹೋರಾಟ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲ ಕೊರತೆಗಳನ್ನೂ ನೀಗಿಸಲಾಗುತ್ತದೆ ಎಂದು ಅವರು ಭರವಸೆ ನೀಡಿದ್ದರು.

ಆದರೆ ಇದೀಗ ವಿವಾದಿತ, ಚೀನಾ ಮತ್ತು ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ನಿಯೋಜಿತಸಲ್ಪಟ್ಟ ಸೈನಿಕರಿಗೆ ಬರೋಬ್ಬರಿ 553 ಮಿಲಿಯನ್ ಡಾಲರ್ ಮೌಲ್ಯದ 160,000 ಅತ್ಯಾಧುನಿಕ ಗನ್ ಗಳನ್ನು ನೀಡಲಾಗುತ್ತದೆ ಎಂದು ರಕ್ಷಣಾ ಮೂಲಗಳು ಸ್ಪಷ್ಟ ಪಡಿಸಿದೆ. ಅಷ್ಟೇ ಅಲ್ಲದೇ, ಪ್ರತಿ ಬಾರಿಯೂ ಕೇಂದ್ರ ಸರ್ಕಾರ ದೇಶವನ್ನು ಕಾಯುವ ಸೈನಿಕರ ಬಗ್ಗೆ, ಸೇನೆಯ ಬಗ್ಗೆ ನಿಗಾ ವಹಿಸಿದ್ದಲ್ಲದೇ ವಿಶ್ವದಲ್ಲೇ ಭಾರತೀಯ ಸೇನೆಯನ್ನು ಪ್ರಬಲ ಸೇನೆಯನ್ನಾಗಿ ಮಾಡ ಹೊರಟಿರುವುದೇ ಹೆಮ್ಮೆಯ ವಿಚಾರ!!

ಇನ್ನು, ಕೇಂದ್ರ ಸರ್ಕಾರವು ಅತ್ಯಾಧುನಿಕ ಗನ್ ಗಳನ್ನು ನೀಡುವ ಬಗ್ಗೆ ಸ್ಪಷ್ಟೀಕರಣ ನೀಡಿದ್ದ ಸಂದರ್ಭದಲ್ಲಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಸಭೆಯಲ್ಲಿ 72,400 ಅಸಾಲ್ಟ್ ರೈಫಲ್ಸ್ ಮತ್ತು 93,895 ಕಾರ್ಬೈನ್ ಗಳನ್ನು 35 ಬಿಲಿಯನ್ ರೂಪಾಯಿ ವೆಚ್ಚದಲ್ಲಿ ಖರೀದಿಸಲು ಅನುಮೋದಿಸಲಾಗಿದೆ ಎಂದು ತಿಳಿದು ಬಂದಿದೆ.

ಅಷ್ಟೇ ಅಲ್ಲದೇ, ಗಡಿಗಳಲ್ಲಿ ನಿಯೋಜಿಸಲಾಗಿರುವ ಪಡೆಗಳಿಗೆ ತಕ್ಷಣದ ಅವಶ್ಯಕತೆಗಳನ್ನು ಪೂರೈಸಲು ಹಾಗೂ ರಕ್ಷಣಾ ಪಡೆಗಳನ್ನು ಸಕ್ರಿಯಗೊಳಿಸಲು ಈ ಯೋಜನೆ ಅತ್ಯಗತ್ಯವಾಗಿದೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈಗಾಗಲೇ ಭಾರತೀಯ ವಾಯುಪಡೆ 50,025 ಕೋಟಿ ರೂಪಾಯಿ ವೆಚ್ಚದಲ್ಲಿ ಯುದ್ಧ ವಿಮಾನಗಳ ಖರೀದಿಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್) ಕಂಪನಿಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಹಾಗಾಗಿ ವಾಯುಪಡೆ ಈಗಾಗಲೇ ಎಚ್ ಎಎಲ್ ನಿಂದ 40 ತೇಜಸ್ ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆಯಲ್ಲದೇ ಪ್ರಸ್ತುತ ವಾಯುಪಡೆಯ ಬಳಿ 33 ಯುದ್ಧ ವಿಮಾನಗಳ ಸ್ಕ್ವಾಡ್ರನ್ ಗಳಿವೆ. ಇವುಗಳ ಪೈಕಿ ಮುಂದಿನ 10 ವರ್ಷಗಳಲ್ಲಿ ಮಿಗ್ 21, ಮಿಗ್ 27 ಮತ್ತು ಮಿಗ್ 29 ಯುದ್ಧವಿಮಾನಗಳ 14 ಸ್ಕ್ವಾಡ್ರನ್ ಗಳು ನಿವೃತ್ತಿ ಹೊಂದಲಿವೆ. ಹಾಗಾಗಿ ಅವುಗಳ ಸ್ಥಾನವನ್ನು ತುಂಬಲು ತೇಜಸ್ ವಿಮಾನ ಖರೀದಿಸಲಾಗುತ್ತಿದೆ ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.

ಹಾಗಾಗಿ ಶತ್ರುಗಳ ಹುಟ್ಟಡಗಿಸಲು ಭಾರತೀಯ ಸೈನಿಕರಿಗಾಗಿ ಹೊಸ ಮಾದರಿಯ ಅಸಲ್ಟ್ ರೈಫಲ್ ಖರೀದಿಸುವ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ನೀಡಿರುವ ಕೇಂದ್ರ ಸರ್ಕಾರವು ಈ ರೈಫಲ್ ಗಳನ್ನು ಮೇಕ್ ಇನ್ ಇಂಡಿಯಾದ ಭಾಗವಾಗಿ ಭಾರತದಲ್ಲೇ ಉತ್ಪಾದಿಸಲು ಟೆಂಡರ್ ಪಡೆಯುವ ಕಂಪನಿಗಳಿಗೆ ಅವಕಾಶ ಮಾಡಿಕೊಡಲು ಕೆಲವು ನಿಯಮಾವಳಿಗಳನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ. ಆದರೆ ಇದೀಗ ಕೇಂದ್ರ ಸರ್ಕಾರವು ದೇಶದ ಭದ್ರತೆ ಮತ್ತು ಸೈನಿಕರ ರಕ್ಷಣೆಗಾಗಿ ಮತ್ತೊಂದು ಪ್ರಮುಖ ನಡೆ ಇಟ್ಟಿದ್ದಲ್ಲದೇ, ಬರೋಬ್ಬರಿ 553 ಮಿಲಿಯನ್ ಡಾಲರ್ ಮೌಲ್ಯದ 1,60,000 ಅತ್ಯಾಧುನಿಕ ಗನ್ ಗಳ ಖರೀದಿಗಾಗಿ ಯೋಜನೆ ರೂಪಿಸಿರುವುದು ಹೆಮ್ಮೆಯ ವಿಚಾರವಾಗಿದೆ.
– ಅಲೋಖಾ

Tags

Related Articles

Close