ಪ್ರಚಲಿತ

ದೋಕ್ಲಾಂ ನಲ್ಲಿ ಪ್ರಾರಂಭವಾಗಿದೆ ಹೊಸ ರಣತಂತ್ರ! ಇದ್ದಕ್ಕಿದ್ದಂತೆ ಭಾರತೀಯ ವಾಯು ಸೇನೆ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ದೋಕ್ಲಾಂ ಕಡೆಗೆ ಕಳುಹಿಸಿದ್ದು ಯಾಕೆ ಗೊತ್ತಾ?!

ದೋಕ್ಲಾಂ ಪ್ರದೇಶದಲ್ಲಿ ಯಾವಾಗ ಚೀನಾ ಕಿತಾಪತಿಗಿಟ್ಟುಕೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಬಿಡಿ! ಬಾರಿ ಬಾರಿಗೂ ತನ್ನ ಕುತಂತ್ರವನ್ನು
ತೋರುತ್ತಲೇ ನಡೆಯುವ ದೋಕ್ಲಾಂನಲ್ಲೀಗ ಮತ್ತೆ ಸಂಚಲನ! ಎರಡು ತಿಂಗಳ ಹಿಂದಷ್ಟೇ ಭಾರತೀಯ ಸೇನೆ ದೋಕ್ಲಾಂ ನಿಂದ ಚೀನಾವನ್ನು ಒದ್ದೋಡಿಸಿತ್ತಾದರೂ, ನಾಯಿ ಬಾಲ ಡೊಂಕೆನ್ನುವಂತೆ ಮತ್ತೆ ಚೀನಾದ ಆಟ ಪ್ರಾರಂಭವಾಗಿದ್ದೇ, ಭಾರತೀಯ ವಾಯು ಸೇನೆ ಈ ಸಲ ಚೀನಾವನ್ನು ಬಡಿಯುವ ಜವಾಬ್ದಾರಿ ತೆಗೆದುಕೊಂಡು, ಡೆಡ್ಲಿ ಫೈಟರ್ ಎಂದೇ ಹೆಸರಾದ ಸುಖೋಯ್ ಫೈಟರ್ ನೊಂದಿಗೆ ದೋಕ್ಲಾಂ ಗೆ ಪ್ರವೇಶಿಸದ್ದಷ್ಟೇ! ಚೀನಾ ಹೌಹಾರಿ ಹೋಗಿದೆ!

Image result for Indian China Army in Doklam

ಕೆಲವು ದಿನಗಳ ಹಿಂದೆ, ಹೇಗೆ ಚೀನಾ ಭಾರತೀಯ ಭೂಪ್ರದೇಶಕ್ಕೆ ಪ್ರವೇಶಿಸಲು ನೋಡಿತು ಗೊತ್ತೇ?!

ಡಿಸೆಂಬರ್ 28 ರಂದು, ಅರುಣಾಚಲದ LAC ಪ್ರದೇಶದಲ್ಲಿ ರಸ್ತೆಯೊಂದನ್ನು ನಿರ್ಮಾಣ ಮಾಡಲು ಯೋಜನೆ ಹಾಕಿದ್ದ ಚೀನಾ, ನಿರ್ಮಾಣ ಕಾರ್ಯವನ್ನೂ ಪ್ರಾರಂಭಿಸಿತ್ತು! ಆದರೆ, ಭಾರತೀಯ ಸೇನೆ ಮತ್ತು ಇಂಡೋ ಟಿಬೆಟಿಯನ್ ಬಾರ್ಡರ್ ಪೋಲಿಸ್ ರ ಹರಸಾಹಸದಿಂದ ಚೀನಾದ ಈ ಉಪಾಯವೂ ಮಕಾಡೆ ಮಲಗಿದೆ! ಚೀನಾದ ಯೋಧರನ್ನು ಮತ್ತೆ ಹಿಮ್ಮೆಟ್ಟಿಸಿರುವ ಭಾರತೀಯ ಸೇನೆ, ಜೊತೆಗೆ ರಸ್ತೆ ನಿರ್ಮಾಣಕ್ಕೆ ಉಪಯೋಗಿಸಲಾಗತ್ತಿದ್ದ ಬೃಹತ್ ಗಾತ್ರದ ಯಂತ್ರಗಳನ್ನೂ ವಶಪಡಿಸಿಕೊಂಡಿದೆ!

Image result for Indian China Army in Doklam

ಭಾರತದ ಗಡಿಯ ಪಕ್ಕವೇ, 12 ಅಡಿ ಅಗಲ, ಹಾಗೂ ಒಂದು ಕಿ.ಮೀಯಷ್ಟು ದೂರ ವಿರುವ ರಸ್ತೆಯನ್ನು ನಿರ್ಮಾಣ ಮಾಡ ಹೊರಟಿತ್ತು ಚೀನಾ! ತನ್ನ ಪ್ರದೇಶದಲ್ಲಿ ರಸ್ತೆ ಹಾಕಿಕೊಂಡಿದ್ದರೆ, ಭಾರತ ‘ಬದುಕಿಕೋ’ ಎಂದಿಬಿಡುತ್ತಿತ್ತೇನೋ! ಆದರೆ, ಅಷ್ಟರೊಳಗೇ, ರಸ್ತೆ ನಿರ್ಮಾಣ ಮಾಡುವ ನೆಪದಲ್ಲಿ ಭಾರತದ 400 ಮೀಟರ್ ಜಾಗವನ್ನು ಕಬಳಿಸಿದ ಚೀನಾದ ಕುತಂತ್ರವನ್ನು, ಅಲ್ಲಿಯ ನಿವಾಸಿಗಳು ITBP ಗೆ ವರದಿ ಮಾಡಿದ್ದಾರೆ! ಸಮುದ್ರ ಮಟ್ಟದಿಂದ 12,000 ಅಡಿ ಎತ್ತರವಿರುವ ಈ ಪ್ರದೇಶವನ್ನು ರಕ್ಷಿಸುವುದು ITBP ಯಾದ್ದರಿಂದ, ನಿವಾಸಿಗಳು ತಕ್ಷಣವೇ ವರದಿ ಮಾಡಿದ್ದಾರೆ! ಈ ಹಿಂದೆ, ITBP ಚೆಕ್ ಪೋಸ್ಟ್ ಹತ್ತಿರ ಹತ್ತಿರ ಕಾಲಿರಿಸಿದ್ದ ಚೀನಾ, ಸುಮಾರು ಎರಡು ಕಿ.ಮೀ ಗಳಷ್ಟು ಭಾರತದೊಳಕ್ಕೆ ಬಂದಿತ್ತು!

ಹೇಳಿದಂತೆ ಪ್ರಾರಂಭವಾಗಿತ್ತಾ ಯುದ್ಧ?! ಇದ್ದಕ್ಕಿದ್ದಂತೆ ದೋಕ್ಲಾಂ ಗಡಿ ಭಾಗಕ್ಕೆ SU – 30MKI ಜೆಟ್ ನನ್ನು ಕಳುಹಿಸಿದ್ದು ಯಾಕೆ ಗೊತ್ತಾ?!

ಯಾವಾಗ ಚೀನಾ ರಸ್ತೆ ನಿರ್ಮಾಣ ಮಾಡಲು ತೊಡಗಿತೋ, ತಕ್ಷಣವೇ, ಸುಕೋಯ್ ವಿಮಾನಗಳು ದೋಕ್ಲಾಂ ಗಡಿ ಭಾಗಕ್ಕೆ ಹತ್ತಿರವಿರುವ ಹಸಿಮಾರಾ ವಾಯುನೆಲೆಗೆ ಪ್ರಯಾಣ ಬೆಳೆಸಿದೆ! ಎರಡು ತಿಂಗಳ ಹಿಂದೆ, ಇದೇ ವಾಯುನೆಲೆಯಲ್ಲಿ ಪಾಕಿಸ್ಥಾನ ಮತ್ತು ಭಾರತದ ನಡುವೆ ಗುಂಡಿನ ಚಕಮಕಿ ನಡೆದಿತ್ತು!

Image result for Sukhoi Su-30Mki

ಸುಕೋಯ್ ಎಂಬುದು ಸಾಮಾನ್ಯ ಜೆಟ್ ಅಲ್ಲವೇ ಅಲ್ಲ! ಸುಕೋಯ್ ಸು – 30MKI ಫ್ಲಾಂಕರ್ – H ಅತ್ಯಾಧುನಿಕವಾದ ಯುದ್ಧ ವಿಮಾನ! ಎರಡು ಜನ ಕೂರಬಹುದಾದ, ಎರಡು ಇಂಜಿನ್ ಗಳಿರುವ, ಕ್ರಾಪ್ಡ್ ಡೆಲ್ಟಾ ಸೌಲಭ್ಯವಿರುವ, ಅತ್ಯಾಧುನಿಕವಾದ, ಬಹಳ ದೂರ ಕ್ರಮಿಸುವ ವೇಗವಾದ ಏರ್ ಕ್ರಾಫ್ಟ್! ಬಾಂಬು ಸ್ಫೋಟಿಸುವಲ್ಲಿ, ತನ್ನ ಗುರಿಯನ್ನು ತಾನೇ ನಿರ್ಧರಿಸಿಕೊಳ್ಳುವ ಈ ಜೆಟ್, ಗುರಿ ಇಟ್ಟರೆ ತಪ್ಪುವುದು ವಿರಳ!

8000 ಕೆಜಿಗಳಷ್ಟು ಸ್ಫೋಟಕ ವಸ್ತುಗಳನ್ನು ಕೊಂಡೊಯ್ಯಬಹುದಾದ, ಒಮ್ಮೆಲೇ 12 ಕಡೆ ದಾಳಿ ಮಾಡಬಲ್ಲಂತಹ ಈ ವಿಮಾನ ಭಾರತದ ಸೇನೆಯಲ್ಲಿರುವ ಅತ್ಯಂತ ವೇಗವಾದ ಏರ್ ಕ್ರಾಫ್ಟ್ !! 2016 ರ ಮಧ್ಯ ರಾತ್ರಿಯಲ್ಲಿ, ರೋಗಿಗೆ ಕಿಡ್ನಿಯೊಂದನ್ನು ಸಾಗಿಸಲು ಪುಣೆಯಿಂದ ದೆಹಲಿಗೆ ಹೋಗಲು 35 – 40 ನಿಮಿಷಗಳನ್ನಷ್ಟೇ ತೆಗೆದುಕೊಂಡಿದ್ದ ಈ ವಿಮಾನ ಈಗ ದೋಕ್ಲಾಂ ನ ಮೇಲೆ ಕಣ್ಣಿಟ್ಟಿದೆ!

Related image

ಪರಿಸ್ಥಿತಿ ಗಂಭೀರವಾಗಿಯೇ ಇದೆ!

ಹಾ! ಎಲ್ಲವೂ ಸರಿ ಇದ್ದಿದ್ದರೆ, ಇದ್ದಕ್ಕಿದ್ದಂತೆ ಜೆಟ್ ವಿಮಾನಗಳನ್ನು ದೋಕ್ಲಾಂ ಗೆ ಕಳುಹಿಸುತ್ತಲೂ ಇರಲಿಲ್ಲ ! ಅದಕ್ಕೆ ತಕ್ಕನಾಗಿ, ಚೀನಾ ಇದ್ದಕ್ಕಿದ್ದಂತೆ ರಸ್ತೆಕಾರ್ಯವನ್ನು ಪ್ರಾರಂಭಿಸಿದ್ದು ಯಾಕೆ?! ಅನುಮಾನಾಸ್ಪದ ಬದಲಾವಣೆಯೊಂದು ಇದ್ದಕ್ಕಿದ್ದಂತೆ ಪ್ರಾರಂಭವಾಗಿದೆ ದೋಕ್ಲಾಂ ನಲ್ಲಿ!

Image result for Sukhoi Su-30Mki in doklam

“ನಾವು ಎಲ್ಲದಕ್ಕೂ ತಯಾರಿ ಮಾಡಿಕೊಳ್ಳುತ್ತಿದ್ದೇವಷ್ಟೇ! ಏನಾದರೂ ಆದರೆ, ತಕ್ಷಣವೇ ಕ್ರಮ ತೆಗೆದುಕೊಳ್ಖಬಹುದೆಂಬ ದೃಷ್ಟಿಯಿಂದಷ್ಟೇ! ಭದ್ರತಾ ವ್ಯವಸ್ಥೆಯನ್ನೂ ಬಲಪಡಿಸುವ ನಿಟ್ಟಿನಲ್ಲಿ ಈ ಕ್ರಮವಷ್ಟೇ!” ಎಂದು ಹಿರಿಯ ಸೇನಾಧಿಕಾರಿ ಹೇಳಿಕೆ ನೀಡಿದ್ದರೂ, ‘ಏನಾದರೂ ಆದರೆ’ ಎಂದರೇನಿರಬಹುದು ಎಂಬುದು ಯಕ್ಷ ಪ್ರಶ್ನೆಯಾಗಿದೆಯಷ್ಟೇ!

ನವೆಂಬರ್ ನಲ್ಲಿ, ಜಗತ್ತಿನಲ್ಲಿಯೇ ಅತ್ಯಂತ ವೇಗವಾದ ಸೂಪರ್ ಸಾನಿಕ್ ಕ್ರೂಯ್ಸ್ ಮಿಸಿಲ್ ಗಳನ್ನು ಮತ್ತು ಬ್ರಾಹ್ಮೋಸ್ ಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು! ಅದೂ ಸಹ, ಸುಕೋಯ್ ಜೆಟ್ ವಿಮಾನಗಳ ಮೂಲಕ ಮಿಸಿಲ್ ಗಳನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದ್ದ ಭಾರತೀಯ ವಾಯು ಸೇನೆ ‘ಯಶಸ್ವಿಯಾಗ ಬ್ರಾಹ್ಮೋಸ್ ಗಳ ಪರೀಕ್ಷೆ ನಡೆಸಿದ್ದೇವೆ! ಇನ್ನು ಏರ್ ಕಾಂಬಾಟ್ ಆಪರೇಷನ್ ಗಳಲ್ಲಿ ನಮಗೆ ಹೆಚ್ಚಿನ ಬಲ ಬರಲಿದೆ!’ ಎಂದು ಹೇಳಿತ್ತು!

Image result for Indiann China Army in Doklam

ಇದು, ಸುಖಾ ಸುಮ್ಮನೇ ಅಲ್ಲ! ಬದಲಾಗಿ, ನೆರೆ ರಾಷ್ಟ್ರಗಳಿಂದ ಅಚಾನಕ್ಕಾಗಿ ಒದಗಿಬರುವ ದಾಳಿಗಳ ಬಗ್ಗೆ ಮಾಹಿತಿ ಸಿಕ್ಕಿದೆಯೇ ಸೇನೆಗೆ?!

ಹಾ! ಒಂದಷ್ಟು ಮಾಹಿತಿಗಳ ಪ್ರಕಾರ, ಈಗಾಗಲೇ ತೀರಾ ಕಷ್ಟಕರವಾದ ಪ್ರದೇಶಗಳಲ್ಲಿ, ಪರಿಸ್ಥಿತಿಗನುಗುಣವಾಗಿ ಮುಂಚಿತವಾಗಿ ಯುದ್ಧ ಸಾಮಾಗ್ರಿಗಳನ್ನು ಶೇಖರಿಸಿ ಇಡುತ್ತಿರುವ ಭಾರತೀಯ ಸೇನೆ, ಈಗಾಗಲೇ ದೇಶದ ವಿವಿಧ ಭಾಗಗಳಿಗೆ ಸೂಚನೆಯನ್ನೂ ಕಳುಹಿಸಿಕೊಟ್ಟಿದೆ ಎನ್ನಲಾಗುತ್ತಿದೆ!

Source : http://www.defencenews.in/article/India-deploys-Su-30-MKI-front-line-fighter-jets-close-to-Doklam-525659

– ಪೃಥು ಅಗ್ನಿಹೋತ್ರಿ

Tags

Related Articles

Close