ಪ್ರಚಲಿತ

ಧರ್ಮಸ್ಥಳದಲ್ಲಿ ಮೋದಿ ಅಲೆ! ಕನ್ನಡದಲ್ಲಿಯೇ ಭಾಷಣ ಪ್ರಾರಂಭಿಸಿದ ಮೋದಿ ಹೇಳಿದ್ದೇನು ಗೊತ್ತೇ?!

ಶತಮಾನಗಳ ಇತಿಹಾಸ ಹೊಂದಿರುವ ಧರ್ಮಕ್ಷೇತ್ರ, ನ್ಯಾಯಕ್ಷೇತ್ರ ಎಂದೇ ಹೆಸರುವಾಸಿಯಾಗಿರುವ ಧರ್ಮಸ್ಥಳದಲ್ಲಿ ಇತಿಹಾಸದ ಮೊದಲ ಬಾರಿಗೆ ಈ ಪುಣ್ಯಕ್ಷೇತ್ರಕ್ಕೆ ಪ್ರಧಾನಿ ಬೇಟಿ ನೀಡಿದ್ದು, ಇತಿಹಾಸದ ಪುಟಗಳಲ್ಲಿ ಅಚ್ಚಾಗಿ ಉಳಿಯಲಿದೆ!! ದೇಶದ ಪ್ರಸಿದ್ಧ ದೇವಾಲಯಗಳಲ್ಲೊಂದಾದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪ್ರಧಾನಿ ಮೋದಿ ಇಂದು ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ. ಮಂಗಳೂರು ಬಚ್ಪೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು!!! ಅಷ್ಟೇ ಅಲ್ಲದೇ ಪ್ರಧಾನಿ ಅವರಿಗೆ ಮೈಸೂರು ಪೇಟ ತೊಡಿಸಿ, ಗಂಧದ ಹಾರ ಹಾಕಿ ಕೇಂದ್ರ ಸಚಿವ ಅನಂತ್‍ಕುಮಾರ್ ಸೇರಿ ಕೆಲವು ಗಣ್ಯರು ಸ್ವಾಗತಿಸಿದ್ದಾರೆ. ವಿಶೇಷ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳದತ್ತ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ, ಮದುವಣಗಿತ್ತಿಯಂತೆ ಅಲಂಕರಿಸಿಲಾದ ಧರ್ಮಸ್ಥಳವು ಮೋದಿ ಮೋದಿ ಎನ್ನುವ ಜನರ ಜೈಕಾರದಿಂದ ಮುಳುಗಿ ಹೋಗಿತ್ತು!!

ದೇವಸ್ಥಾನಕ್ಕೆ ಪ್ರವೇಶವಾದ ಕೂಡಲೇ ಪ್ರಧಾನಿ ಮೋದಿಯವರಿಗೆ ಇಲ್ಲಿನ ಸಂಪ್ರದಾಯದಂತೆಯೇ ಪಂಚೆ ಹಾಗೂ ಶಲ್ಯ ದೇವಾಲಯದ ವತಿಯಿಂದ ವ್ಯವಸ್ಥೆ
ಮಾಡಲಾಗಿತ್ತು. ಮಂಜುನಾಥ ಸ್ವಾಮಿಯ ದರ್ಶನಕ್ಕಾಗಿ ಪ್ರಧಾನಿ ಮೋದಿ ಅವರು ಬೆಳಗ್ಗಿನಿಂದಲೇ ಉಪವಾಸವಿದ್ದು, ದೇವರದರ್ಶನ ಪಡೆದ ನಂತರ ಪ್ರಸಾದ
ಸ್ವೀಕರಿಸಿದರು. ಸುಮಾರು 20ನಿಮಿಷಗಳ ಕಾಲ ದೇವಾಲಯದಲ್ಲಿದ್ದು ಮೋದಿಯವರನ್ನು ದೇವಾಲಯದ ಎದುರು ಪೂರ್ಣಕುಂಭದ ಮೂಲಕ ಸ್ವಾಗತಿಸಲಾಯಿತು!! ವೇದಘೋಷಗಳಿಂದ ದೇವಲಾಯದೊಳಗೆ ಬರಮಾಡಿಕೊಂಡು, ಆ ಬಳಿಕ ಮೋದಿಜೀ ಮಂಜುನಾಥ ಸ್ವಾಮಿಗೆ ರುದ್ರಭೀಷೆಕಾ ಸಲ್ಲಿಸಿ, ಅಲ್ಲಿದ್ದ ಅಣ್ಣಪ್ಪ ಸ್ವಾಮಿ, ಮಹಾಗಣಪತಿ, ಅಮ್ಮನವರ ದರ್ಶನ ಪಡೆದ್ದಲ್ಲದೇ, ಕೆಲಕಾಲ ಧ್ಯಾನದಲ್ಲಿದ್ದ ನಂತರ ಉಜಿರೆಯತ್ತ ಪಯಾಣ ಬೆಳೆಸಿದರು!!

ಮೋದಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುತ್ತಿರುವುದು ಇದು ಐದನೇ ಬಾರಿಯಾದರೂ, ಪ್ರಧಾನಿಯಾಗಿ ಆಗಮಿಸುತ್ತಿರುವುದು 2ನೇ ಬಾರಿ!! ಹೌದು… ಮೊದಲ ಬಾರಿ, 2016 ಮೇ 8 ರಂದು ಮೋದಿ ವಿಮಾನ ನಿಲ್ದಾಣದಿಂದ ನೇರವಾಗಿ ಕೇರಳಕ್ಕೆ ಪ್ರಯಾಣಿಸಿದ್ದರು. ಆದರೆ, ಈ ಬಾರಿ ನೇರವಾಗಿ ದಕ್ಷಿಣ ಕನ್ನಡ ಪ್ರವಾಸ ಮಾಡುತ್ತಿದ್ದಾರೆ. ಅದರಲ್ಲೂ ಧರ್ಮಸ್ಥಳ ಪುಣ್ಯಕ್ಷೇತ್ರಕ್ಕೆ ಮೊದಲ ಸಲ ಭೇಟಿ ನೀಡುತ್ತಿರುವುದು ವಿಶೇಷ!!! ಈ ಹಿಂದೆ 1977 ಮತ್ತು 1980ರಲ್ಲಿ ಇಂದಿರಾ ಗಾಂಧಿ, 1991ರಲ್ಲಿ ರಾಜೀವ್ ಗಾಂಧಿ ಹಾಗೂ ಹಲವು ಬಾರಿ ಎಚ್.ಡಿ.ದೇವೇಗೌಡ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದ್ದಾರಾದರೂ, ಅದು ಮಾಜಿ ಪ್ರಧಾನಿಗಳಾದ ಬಳಿಕವಷ್ಟೇ!! ಆದರೆ ಪ್ರಧಾನಿಯಾಗಿರುವಾಗಲೇ ಮೋದಿ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿರುವುದು ಮಾತ್ರ ಹೆಚ್ಚು ಮಹತ್ವ ಪಡೆದುಕೊಂಡಿದೆ!!

ತುಳುನಾಡಿನ ಆಡುಭಾಷೆಯಾದ ತುಳುವಿನಲ್ಲಿಯೇ ಬರಮಾಡಿಕೊಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ !!!

ಇನ್ನು ಧರ್ಮಸ್ಥಳದ ಮಂಜುನಾಥನ ಕ್ಷೇತ್ರಕ್ಕೆ ಬೇಟಿ ನೀಡಿದ ಮೋದಿಜಿ ತದನಂತರ ಉಜಿರೆಯ ಸಮಾವೇಶದಲ್ಲಿ ಭಾಗವಹಿಸಿ ಎಂದಿನಂತೆ ಅಲ್ಲಿ ನೆರೆದಿದ್ದ ಲಕ್ಷಾಂತರ ಜನರನ್ನು ತನ್ನ ಮಾತಿನ ಮೂಲಕ ಮೋಡಿ ಮಾಡಿದರು. 12 ಲಕ್ಷ ಜನರಿಗೆ ಉಪಯೋಗವಾಗುವ ರೂಪೇ ಕಾರ್ಡ್ ವಿತರಿಸಿದ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಯವರ ಕಾರ್ಯಗಳ ಬಗ್ಗೆ ಶ್ಲಾಘನೆಯ ಸುರಿಮಳೆಯನ್ನೇ ಹರಿಸಿದ್ದಾರೆ!! ಹೌದು.. ಮಹಾಸಮಾವೇಶದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿಯವರನ್ನು ವೀರೇಂದ್ರ ಹೆಗ್ಗಡೆಯವರು “ಇರೆಗ್ ಎಂಕಲೆನ ಸ್ವಾಗತ…” ಎಂದು ತುಳುವಿನಲ್ಲಿ ಸ್ವಾಗತಿಸಿದ್ದು, ತುಳು ಭಾಷೆಗೆ ಸರ್ಕಾರದ ಕಡೆಯಿಂದ ಸ್ಥಾನ ಮಾನ ಕೋರಿದರು. ಅಷ್ಟೇ ಅಲ್ಲದೇ, ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ!!

ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದ ಪ್ರಧಾನಿ!!

ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಎಸ್‍ಕೆಡಿಆರ್‍ಡಿಪಿ ಸಮಾವೇಶದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದಲ್ಲದೇ ಎಂದಿನಂತೆ ಎಲ್ಲರನ್ನು ತನ್ನ ಮಾತಿನಿಂದ ಮೋಡಿ ಮಾಡಿದರು. ಧರ್ಮಾಧಿಕಾರಿಯಾಗಿ 50 ವರ್ಷ ಪೂರೈಸಿರುವ ವೀರೇಂದ್ರ ಹೆಗ್ಗಡೆ ಅವರಿಗೆ ಶಾಲು ಹೊದಿಸಿ ಮೋದಿ ಸನ್ಮಾನಿಸಿದರು. ಆ ಬಳಿಕ ಕನ್ನಡ ದಲ್ಲಿ ತಮ್ಮ ಭಾಷಣ ಪ್ರಾರಂಭಿಸಿದ ಅವರು, “ನಮೋ ಮಂಜುನಾಥ… ಬಂಧು ಭಗಿನಿಯರೆ ನಿಮಗೆಲ್ಲ ನನ್ನ ನಮಸ್ಕಾರ. ನನ್ನ ಪ್ರೀತಿಯ ಸೋದರಿಯರಿಗೆ ವಿಶೇಷ ಅಭಿನಂದನೆ” ಎಂದರು!!

ಇದು ನನ್ನ ಸೌಭಾಗ್ಯ ಭಗವಾನ್ ಮಂಜುನಾಥ್ ಸ್ವಾಮಿಯ ದರ್ಶನದ ಜೊತೆಗೆ ನಿಮ್ಮೆಲ್ಲರ ದರ್ಶನ ಮಾಡುವ ಭಾಗ್ಯ ದೊರೆತಿದೆ. ಕಳೆದ ವಾರ ನಾನು ಕೇದರನಾಥ್ ತೆರಳಿದ್ದೆ, ಇಂದು ದಕ್ಷಿಣ ಭಾರತದ ಮಂಜುನಾಥ ಸ್ವಾಮಿಯ ದರ್ಶನ ಪಡೆದಿರುವುದು ಅತೀವ ಆನಂದವನ್ನು ತರಿಸಿದೆ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಹೆಗ್ಗಡೆ ಅವರನ್ನು ಸನ್ಮಾನಿಸಲು ನಾನು ತುಂಬಾ ಚಿಕ್ಕವನು. ದೇಶದ ಜನರು ನನ್ನನ್ನು ಒಂದು ಸ್ಥಾನದಲ್ಲಿ ಕೂರಿಸಿದ್ದರಿಂದ ಇಂದು ನಾನು ಹೆಗ್ಗಡೆಯವರನ್ನು ಸನ್ಮಾನಿಸಿದ್ದೇನೆ. ಇದು ನನ್ನ ಸೌಭಾಗ್ಯ ಎಂದು ಹೇಳಿದರು!!

125 ಕೋಟಿ ಜನ ನನಗೆ ಪ್ರಧಾನಿ ಪದವಿ ನೀಡಿದ್ದಾರೆ ಆ ಎಲ್ಲ ಜನರ ಸೇವಕನಾಗಿ ಸನ್ಮಾನ ಮಾಡಿರುವೆ ಎಂದು ಅವರು ಹೇಳಿದರು. ವೀರೇಂದ್ರ ಹೆಗ್ಗಡೆಯವರ
ಆಧ್ಯಾತ್ಮಿಕ ಜೀವನ ಹಾಗೂ ಸಮಾಜ ಸೇವೆಯನ್ನು ಕೊಂಡಾಡಿದ ಮೋದಿ, ವೀರೇಂದ್ರ ಹೆಗ್ಗಡೆ ಅವರು ಸದಾ ಮಂದಹಾಸದಿಂದ ಇರುತ್ತಾರೆ ಅವರು ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿ ಎಂದರು. ಒಂದು ಧಾರ್ಮಿಕ ಕ್ಷೇತ್ರ ಹೇಗಿರಬೇಕು? ಎನ್ನುವುದಕ್ಕೆ ಧರ್ಮಸ್ಥಳವೇ ಮಾದರಿಯಾಗಿದೆ!! ಅಷ್ಟೇ ಅಲ್ಲದೇ ಹೆಗ್ಗಡೆಯವರು ತಮ್ಮ ಚಿಂತನೆ ಹಾಗೂ ಕೌಶಲ್ಯಗಳಿಂದ ಕ್ಷೇತ್ರ ಅಭಿವೃದ್ಧಿಪಡಿಸಿದ್ದಾರೆ. ಕೌಶಲ್ಯಾಭಿವೃದ್ಧಿಗೆ ಮಾದರಿ ಡಾ.ವೀರೇಂದ್ರ ಹೆಗ್ಗಡೆ ಎಂದು ಮೋದಿ ಹೇಳಿದರು!!

ಡಿಜಿಟಲ್, ಸ್ಕಿಲ್ ಹಾಗೂ ಸ್ಟಾರ್ಟ್‍ಆ್ಯಪ್ ಇಂಡಿಯಾ ಯೋಜನೆಗಳು ನವ ಭಾರತದ ಅಡಿಪಾಯ!

ಉಜಿರೆ ಗ್ರಾಮಾಭಿವೃದ್ಧಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹಿಳಾ ಸ್ವಸಹಾಯ ಸಂಘಗಳಿಗೆ ರೂಪೇ ಕಾರ್ಡ್ ವಿತರಿಸಿದರು. ಪರೋಕ್ಷವಾಗಿ ವಿಪಕ್ಷಗಳಿಗೆ ಕುಟುಕಿದ ಮೋದಿ, ಸದನದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ಕ್ಯಾಶ್‍ಲೆಸ್ ಬಗ್ಗೆ ಮಾತಾಡ್ತಾರೆ. ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗಬೇಕು. ಅಂತೆಯೇ ಕ್ಯಾಶ್‍ಲೆಸ್ ಮೂಲಕ ಡಿಜಿಟಲೀಕರಣಕ್ಕೆ ಒತ್ತು ನೀಡುವ ಅವಶ್ಯಕತೆ ಇದೆ ಎಂದರು. ಅಷ್ಟೆ ಅಲ್ಲದೇ, ಡಾ.ಹೆಗ್ಗಡೆಯವರು ನವಭಾರತ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ದೇಶಕ್ಕೆ ಉಪಯೋಗವಾಗುವ ಕೆಲಸಕ್ಕೆ ಕೈಜೋಡಿಸಿದ್ದಾರೆ. ದೇಶದಲ್ಲಿ ಇಷ್ಟೊಂದು ಬಡತನವಿದೆ ಇಂತಹ ಪರಿಸ್ಥಿತಿಯಲ್ಲಿ ವೀರೇಂದ್ರ ಹೆಗ್ಗಡೆಯವರ ಜನಪರ ಯೋಜನೆಗಳು ಎಲ್ಲರಿಗೂ ಮಾದರಿ ಎಂದರು.

ಇಷ್ಟೇ ಅಲ್ಲದೇ ಚಿನ್ನದ ನಾಣ್ಯ, ತಾಮ್ರದ ನಾಣ್ಯ, ನೋಟು ಹೀಗೆ ಯುಗಯುಗಗಳಿಂದ ನಗದಿನ ರೂಪ ಬದಲಾಗಿದೆ, ಈಗ ಡಿಜಿಟಲ್ ಹಣದ ಕಾಲವಾಗಿದ್ದು, ನಗದು ರಹಿತ ವಹಿವಾಟಿನಿಂದ ಪಾರದರ್ಶಕತೆ ಕಾಪಾಡಲು ಸಾಧ್ಯವಾಗಿದ್ದು ದೇಶದ ಜನತೆ ಹೆಚ್ಚು ಡಿಜಿಟಲ್ ವಹಿವಾಟು ನಡೆಸಬೇಕೆಂದು ಮೋದಿ ಕರೆ ನೀಡಿದ್ದಾರೆ!!

ಭೂ ಮಾತೆ ರಕ್ಷಣೆಗೆ ಮಕ್ಕಳು ನಾವು ಮುಂದಾಗಬೇಕು. ಮರಗಳಿಂದ ನಮಗೆ ಸ್ವಚ್ಛಗಾಳಿ ದೊರೆಯುತ್ತದೆ. ಅವುಗಳನ್ನು ಲಾಲನೆ ಪಾಲನೆ ಮಾಡುವುದು ನಮ್ಮ
ಕರ್ತವ್ಯ. ಯೂರಿಯಾ ಬಳಕೆ ಕಡಿಮೆ ಮಾಡಲು ಶಪಥ ಮಾಡೋಣ. 2022ರಲ್ಲಿ ಭಾರತಕ್ಕೆ ಸ್ವಾತಂತ್ಯ್ರ ದೊರಕಿ 75 ವರ್ಷಗಳಾಗುತ್ತವೆ. ಆ ವೇಳೆ ಭಾರತ ಕೃಷಿ
ಕ್ಷೇತ್ರದಲ್ಲಿ ರಸಾಯನಿಕಗಳ ಬಳಿಕೆ ಮುಕ್ತಾಯವಾಗಿರಬೇಕು ಎಂದು ಸಾವಯವ ಕೃಷಿಯತ್ತ ಪ್ರಧಾನಿ ತಮ್ಮ ಒಲವು ವ್ಯಕ್ತಪಡಿಸಿದರು.

ನಾವು ಎಂದೂ ಭೂಮಿ ತಾಯಿಯ ಬಗ್ಗೆ ಯೋಚನೆ ಮಾಡುವುದಿಲ್ಲ. ನಮಗೆ ನಮ್ಮ ಲಾಭ ಮಾತ್ರ ಮುಖ್ಯವಾಗಿದೆ. ಹಲವು ಕ್ರಿಮಿನಾಶಕಗಳನ್ನು ಬಳಸುತ್ತಿದ್ದೇವೆ.
ಕ್ರಿಮಿನಾಶಕಗಳ ಬಳಕೆಯ ಪ್ರಮಾಣ ಕಡಿಮೆಗೊಳಿಸಬೇಕು. 2022ರೊಳಗೆ ಯೂರಿಯಾ ಉಪಯೋಗವನ್ನು ಶೇ.50ರಷ್ಟು ಕಡಿಮೆ ಬಳಕೆ ಮಾಡುತ್ತೇವೆ ಎಂದು ಎಲ್ಲ ಕೃಷಿ ಬಾಂಧವರು ಪ್ರತಿಜ್ಞೆಯನ್ನು ಮಾಡಬೇಕಾಗಿದೆ. ಮೈಕ್ರೋ ಇರಿಗೇಷನ್ `ಪರ್ ಡ್ರಾಪ್ ಮೋರ್ ಕ್ರಾಪ್” ಎಂಬ ಸಂಕಲ್ಪವನ್ನು ನಮ್ಮ ರೈತ ಬಾಂಧವರು ಮಾಡಬೇಕಾಗಿದೆ ಎಂದರು!!

ಈ ಕಾರ್ಯಕ್ರಮದಲ್ಲಿ ಸಚಿವರಾದ ಅನಂತ ಕುಮಾರ್, ಡಿ. ವಿ. ಸದಾನಂದ ಗೌಡ, ಅನಂತ್ ಕುಮಾರ್ ಹೆಗಡೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ,
ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಕೆ. ವಸಂತ ಬಂಗೇರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ರಜನೀಶ್ ಕುಮಾರ್, ಜ್ಞಾನ ವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮೊದಲಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

– ಅಲೋಖಾ

Tags

Related Articles

Close