ಪ್ರಚಲಿತ

ನರೇಂದ್ರ ಮೋದಿಯ ಹತ್ಯೆಗೆ ಪಾಕಿಸ್ತಾನಕ್ಕೆ ಸುಪಾರಿ ನೀಡಿದ್ದ ಪ್ರಭಾವಿ ಕಾಂಗ್ರೆಸ್ ಮುಖಂಡ!!! ಮೊದಲ ಸ್ಕೆಚಲ್ಲಿ ಮೋದಿ ಬಚಾವಾಗಿದ್ದು ಹೇಗೆ?

ಯಾರನ್ನು ಪ್ರಭಾವಿಗಳೆಂದು ಭಾವಿಸಿದ್ದೇವೆಯೋ ಅವರೇ ಮೋದಿಯವರನ್ನು ಮುಗಿಸಲು ಮುಂದಾಗಿದ್ದಾರೆ!

ಒಂದು ದೇಶದಲ್ಲಿ ಒಬ್ಬ ಬಡ ಕೂಲಿ ಕಾರ್ಮಿಕ ಪ್ರಧಾನಿ ಹುದ್ದೆಗೆ ಏರುವುದು ತಪ್ಪಾ? ಹಿಂದುಳಿದ ಜಾತಿಯವನು ಉನ್ನತ ಹುದ್ದೆಯನ್ನು ಗಳಿಸಲೇಬಾರದೇ? ನರೇಂದ್ರ ಮೋದಿಯ ವಿಷಯದಲ್ಲೂ ಹಾಗೆಯೇ ಯೋಚಿಸಬೇಕಾಗಿದೆ. ಯಾಕೆಂದರೆ ಇವರ ಹತ್ಯೆಗೆ ಎಂಥೆಂಥದೋ ದೇಶದ್ರೋಹಿಗಳು ತಯಾರಾಗಿದ್ದಾರೆ ಎಂದರೆ ಅದನ್ನು ಊಹಿಸಿದಾಗಲೂ ಭಯವಾಗುತ್ತದೆ. ಒಂದು ಕಡೆ ಪಾಕಿಸ್ತಾನ, ಮತ್ತೊಂದು ಕಡೆ ಭಯೋತ್ಪಾದಕರು, ಇನ್ನೊಂದು ಕಡೆ ಯಾರನ್ನು ಪ್ರಭಾವಿಗಳೆಂದು ಭಾವಿಸಿದ್ದೇವೆಯೋ ಅವರೇ ಮೋದಿಯವರನ್ನು ಮುಗಿಸಲು ಮುಂದಾಗಿದ್ದಾರೆ ಎಂದಾಗ ದಿಗಿಲಾಗುತ್ತದೆ.

ಮಣಿಶಂಕರ್ ಅಯ್ಯರ್!!!!

ಈ ಮನುಷ್ಯ ಎಷ್ಟೊಂದು ಕುಲಗೆಟ್ಟು ಹೋಗಿದ್ದಾನೆಂದರೆ ಏನೂ ಮಾಡಲು ಹೇಸದ ವ್ಯಕ್ತಿಯಂಥಾಗಿದ್ದಾನೆ. ಸೋನಿಯಾಳ ಪಕ್ಕಾ ಗುಲಾಮನಂತೆ ವರ್ತಿಸುವ ಈತ ಆಕೆಯ ಪ್ರೀತಿಗಾಗಿ ಯಾವ ಮಟ್ಟಕ್ಕೂ ಇಳಿಯಲು ಸಿದ್ಧ ಎಂಬುವುದನ್ನು ನಿರೂಪಿಸಿಬಿಟ್ಟಿದ್ದಾನೆ. ಮೊನ್ನೆ ನರೇಂದ್ರ ಮೋದಿಯನ್ನು ನೀಚ ಆದ್ಮಿ ಎಂದು ಕೀಳುಮಟ್ಟದಲ್ಲಿ ನಿಂದಿಸಿದ್ದ ಈತ ಇದೀಗ ಈತನನ್ನು ಕಾಂಗ್ರೆಸ್‍ನಿಂದ ಅಮಾನತು ಮಾಡಲಾಗಿದೆಯಂತೆ. ಆದರೆ ಇದು ಕಾಂಗ್ರೆಸಿಗರು ಮಾಡಿದ ದೊಡ್ಡ ನಾಟಕ ಎಂದು ಅರಿವಾಗದೇ ಇರುವುದಿಲ್ಲ.

ಈ ಮುಂಚೆ ನರೇಂದ್ರ ಮೋದಿಯವರನ್ನು ಚಾಯ್‍ವಾಲಾ ಎಂದು ನಿಂದಿಸಿದ್ದ. ದೇಶದ ನಾನಾ ಹುದ್ದೆಗಳನ್ನು ಅಲಂಕರಿಸಿರುವ ಈ ಮನುಷ್ಯ ಬಾಯಿಗೆ ಬಂದಂತೆ ಒದರುವುದನ್ನು ನೋಡಿದಾಗ ಆತ ಪ್ರತಿನಿಧಿಸುವ ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕಿದ್ದಕ್ಕೆ ಭಾರತೀಯರೆಲ್ಲಾ ಪಶ್ಚಾತಾಪ ಪಡುವಂತಾಗಿದೆ. ಆದರೆ ಇದೇ ಮನುಷ್ಯ ನರೇಂದ್ರ ಮೋದಿಯವರನ್ನು ಕೊಲ್ಲಲು ಪಾಕಿಸ್ತಾನಕ್ಕೆ ಸುಪಾರಿ ಕೊಟ್ಟಿದ್ದಾನೆ…!!!

ಗುಜರಾತ್‍ನ ಯಾತ್ರೆಯನ್ನುದ್ದೇಶಿಸಿ ಮಾತಾಡಿರುವ ನರೇಂದ್ರ ಮೋದಿ, ತನ್ನನ್ನು ಕೊಲ್ಲಲು ಮಣಿಶಂಕರ್ ಅಯ್ಯರ್ ಪಾಕಿಸ್ತಾನಕ್ಕೆ ಸುಪಾರಿ ನೀಡಿದ್ದರು ಎಂದು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಗುಜರಾತ್ ಚುನಾವಣೆಯ ಮೊದಲ ಹಂತದ ಮತದಾನದ ಬಹಿರಂಗ ಪ್ರಚಾರಕ್ಕೆ ಗುರುವಾರ ತೆರೆಬಿದ್ದ ಬೆನ್ನಲ್ಲೇ ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಬಿಜೆಪಿ ಹೈವೋಲ್ಟೇಜ್ ಮಾಡುತ್ತಿದೆ. ಪ್ರಧಾನಿ ಮೋದಿ ಅವರನ್ನು ನೀಚ ಮನಸ್ಥಿತಿಯ ಮನುಷ್ಯ (ನೀಚ್ ಕಿಸ್ಮ್ ಕಾ ಆದ್ಮಿ) ಎಂದು ಜರಿದು ಕಾಂಗ್ರೆಸ್‍ನ ಪ್ರಾಥಮಿಕ ಸದಸ್ಯತ್ವದಿಂದ ಅಮಾನುತಗೊಂಡು ಶಿಸ್ತು ಕ್ರಮ ಎದುರಿಸಿದ ಮಣಿಶಂಕರ್ ಅಯ್ಯರ್ ಅವರನ್ನೇ ಕೇಂದ್ರವಾಗಿರಿಸಿಕೊಂಡು ಖುದ್ದು ಪ್ರಧಾನಿ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ತಮ್ಮನ್ನು ಮುಗಿಸಲು ಅಯ್ಯರ್ ಸುಪಾರಿ ಕೊಟ್ಟಿದ್ದರು ಎಂಬ ಅರ್ಥದಲ್ಲಿ ಗಂಭೀರ ಆರೋಪ ಮಾಡಿದ್ದು, ಇಡೀ ದೇಶದಲ್ಲಿ ಗಂಭೀರ ಚರ್ಚೆಯೊಂದಕ್ಕೆ ನಾಂದಿ ಹಾಡಿದೆ. ಬನಸ್ಕಾಂತ ಜಿಲ್ಲೆಯ ಭಾಬಹಾರ್‍ನಲ್ಲಿ ಚುನಾವಣಾ ರಾರಯಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ”ಕಾಂಗ್ರೆಸ್ ನನ್ನ ವಿರುದ್ಧ ಕೀಳು ಭಾಷೆಯಲ್ಲಿ ಟೀಕೆಗಳನ್ನಷ್ಟೇ ಮಾಡುತ್ತಿಲ್ಲ, ನನ್ನನ್ನು ಮುಗಿಸಲು ಸಂಚು ಕೂಡ ರೂಪಿಸಿತ್ತು. 2015ರಲ್ಲಿ ಮಣಿಶಂಕರ್ ಅಯ್ಯರ್ ಪಾಕ್‍ಗೆ ತೆರಳಿದ್ದಾಗ ಟಿವಿ ಟಾಕ್ ಶೋನಲ್ಲಿ ‘ಭಾರತ-ಪಾಕಿಸ್ತಾನದ ಸಂಬಂಧ ಸುಧಾರಿಸಬೇಕೆಂದರೆ ಈ ಹಾದಿಗೆ ಅಡ್ಡಿಯಾಗಿರುವ ಮೋದಿಯನ್ನು ತೆಗೆದುಹಾಕಬೇಕು’ (ಜಬ್ ತಕ್ ಮೋದಿ ಕೋ ರಾಸ್ತೆ ಸೇ ಹಟಾಯ ನಹೀ ಜಾಥಾ…),” ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಸೋಷಿಯಲ್ ಮಿಡಿಯಾಗಳಲ್ಲಿ ಸಾಕಷ್ಟು ಮಾಹಿತಿ ಹರಿದಾಡುತ್ತಿವೆ. ಈಗ ನೀವೇ ಹೇಳಿ ನೀಚ ಮನಸ್ಥಿತಿಯ ವ್ಯಕ್ತಿ ಯಾರು ಎಂದು ಮತದಾರರನ್ನು ಪ್ರಶ್ನಿಸಿದರು.

”ರಾಸ್ತಾ ಸೇ ಹಟಾನಾ ಎಂಬ ಅರ್ಥವಾದರೂ ಏನೆಂದು ಕೆಲವರು ವಿವರಿಸಬೇಕು. ಪಾಕ್‍ನ ದುನಿಯಾ ಟಿವಿಯಲ್ಲಿ ಚರ್ಚೆ ನಡೆಸಿದ್ದರ ಔಚಿತ್ಯವೇನು? ನೀವು (ಅಯ್ಯರ್) ಅಲ್ಲಿಗೆ ಹೋಗಿ, ಭಾರತ-ಪಾಕ್ ನಡುವಿನ ಸಂಬಂಧ ವೃದ್ಧಿಗೆ ಮೋದಿ ಅಡ್ಡಿಯಾಗಿದ್ದು, ಅವರನ್ನು ರಸ್ತೆಯಿಂದ ‘ತೆಗೆದುಹಾಕಲು’ ಸುಪಾರಿ (ಕೊಲೆ ಮಾಡಲು ಗುತ್ತಿಗೆ) ಕೊಟ್ಟಿದ್ದೀರಿ,” ಎಂದು ತಮ್ಮದೇ ವ್ಯಾಖ್ಯಾನದ ಮೂಲಕ ಆರೋಪಿಸಿದ ಪ್ರಧಾನಿ, ಈ ಬೆಳವಣಿಗೆ ನಡೆದು ಮೂರು ವರ್ಷ ಕಳೆದರೂ ಕಾಂಗ್ರೆಸ್ ಏನೂ ಗೊತ್ತಿಲ್ಲದಂತೆ ವರ್ತಿಸಿ, ತಮ್ಮ ಪಕ್ಷದ ನಾಯಕನ ಬೆಂಬಲಕ್ಕೆ ನಿಂತಿತ್ತು ಎಂದು ದೂರಿದರು.ನಾನು ಮಾಡಿರುವ ಅಪರಾಧವಾದರೂ ಏನು ಎಂದು ಪ್ರಶ್ನಿಸಿದ ಅವರು, ಜನರ ಆಶೀರ್ವಾದದಿಂದ ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಪ್ರಧಾನಿಯಾಗಿ ಆಯ್ಕೆಯಾಗಿದ್ದೇನೆ. ಮಣಿಶಂಕರ್ ಅವರಂತೆ ಎಂತಹದ್ದೇ ದುಷ್ಟಶಕ್ತಿಗಳು ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದರೂ ಆ ಅಂಬಾ ಮಾತೆಯ ಆಶೀರ್ವಾದದಿಂದ ನಾನಿಂದೂ ಬದುಕಿದ್ದು, ಜನರ ಸೇವೆ ಕೈಗೊಳ್ಳುತ್ತಿದ್ದೇನೆ ಎಂದರು.

ಮೊದಲ ಸ್ಕೆಚ್ಚಲ್ಲಿ ಬಚಾವಾಗಿದ್ದ ಮೋದಿ!!

ಮಾಜಿ ಕೇಂದ್ರ ಸಚಿವ ಜಿಕೆ ಪಿಳ್ಳೆ, ಗೃಹಖಾತೆ ನಾಹು ಅಧಿನ ಕಾರ್ಯದರ್ಶಿ ಆರ್‍ವಿಎಸ್‍ಮಣಿ, ಐಪಿಎಸ್ ಅಧಿಕಾರಿ ಡಿಜಿ ವನ್ಝಾರಾ, ಮಾಜಿ RAW ಅಧಿಕಾರಿ ಆರ್‍ಎಸ್‍ನ ಸಿಂಗ್ ಹೀಗೆ ಹಲವಾರು ಮಂದಿ ಬಾಯ್ಬಿಟ್ಟಿದ್ದರು. ಅಮೆರಿಕದ ಜೈಲಿನಲ್ಲಿರುವ ಮುಂಬೈ ದಾಳಿಯ ರೂವಾರಿಗಳಲ್ಲೊಬ್ಬನಾದ ಡೆವಿಡ್ ಹೆಡ್ಲಿ ಭಾರತದ ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯ ನಂತರ ಇದು ಗಂಭೀರ ಸ್ವರೂಪ ಪಡೆದಿತ್ತು…

ಅದೇ ಇಶ್ರತ್ ಜಹಾನ್ ಎನ್‍ಕೌಂಟರ್ ಪ್ರಕರಣ

ಈಕೆ ಲಷ್ಕರೆ ತಯ್ಯೆಬಾದ ಭಯೋತ್ಪಾದಕಿ ಎಂಬ ಅಂಶವನ್ನು ಡೆವಿಡ್ ಹೆಡ್ಲಿ ಹೊರಹಾಕಿದ ಬಳಿಕ ಈಕೆಯದ್ದು ನಕಲಿ ಎನ್‍ಕೌಂಟರ್ ಎಂದು ಬಾಯ್ಬಿಡುತ್ತಿದ್ದ ಬಾಯಿಬುಡುಕರ ಬಾಯಿಗೆ ಬೀಗ ಜಡಿಸಿತ್ತು. ಇದಾದ ಮೇಲೆ ಖ್ಯಾತ ಆಂಕರ್ ಅರ್ನಾಬ್ ಗೋಸಾಮಿ ಈ ಬಗ್ಗೆ ಸಚಿತ್ರ ವರದಿಯನ್ನು ಪ್ರಕಟಿಸಿದ್ದರು. ಅದೇ ಮೋದಿಯನ್ನು ಮುಗಿಸುವ ಯತ್ನ. ಇದಾದ ಬಳಿಕ ಭಯೋತ್ಪಾದಕಿ ಇಶ್ರತ್ ಜಹಾನ್‍ನ ಎನ್‍ಕೌಂಟರನ್ನು ನಕಲಿ ಎಂದು ಬಿಂಬಿಸಿ ಅಮಿತ್ ಶಾ ಹಾಗೂ ಮೋದಿಯವರನ್ನು 2014ರ ಚುನಾವಣೆಗೂ ಮುನ್ನ ಜೈಲಿಗೆ ಕಳುಹಿಸಿ ಅಧಿಕಾರಕ್ಕೆ ಏರುವ ಕನಸು ಕಂಡಿತ್ತು ಕಾಂಗ್ರೆಸ್..

2004, ಜೂನ್ 15ರಂದು ಹತ್ತೊಂಬತ್ತರ ಹರೆಯದ ಇಶ್ರತ್ ಜಹಾನ್‍ಳನ್ನು ಹತ್ಯೆ ಮಾಡಲಾಗಿತ್ತು. ಮುಂಬಯಿನ ಹೊರವಲಯದಲ್ಲಿರುವ ಮುಂಬ್ರಾದ ಅಝ್ಮತ್ ಪಾರ್ಕ್ ನಿವಾಸಿ. ಆಂಟಿ ಮನೆಗೆ ಹೋಗುತ್ತೇನೆಂದು ಅಮ್ಮನಿಗೆ ಹೇಳಿ ಜೂನ್ 12 ರಂದು ಮನೆ ಬಿಟ್ಟಿದ್ದಾಳೆ. ಇತ್ತ ಗೋಪಿನಾಥ್ ಪಿಳ್ಳೆ ಎಂಬುವರ ಪುತ್ರ ಪ್ರಾಣೇಶ್ ಕುಮಾರ್ ಪಿಳ್ಳೆ ಕೇರಳದ ತಾಮರಕ್ಕುಲಂನವನು. ಸಾಜಿದಾ ಎಂಬ ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ ಪ್ರಾಣೇಶ್, ಆಕೆಯನ್ನು ವಿವಾಹವಾಗುವ ಸಲುವಾಗಿ ಇಸ್ಲಾಂಗೆ ಮತಾಂತರಗೊಂಡು ಜಾವೆದ್ ಗುಲಾಂ ಮೊಹಮದ್ ಶೇಕ್ ಆಗಿದ್ದ. ಜಾವೆದ್‍ಗೆ ಎಲೆಕ್ಟ್ರಿಷಿಯನ್ ಆಗುವ ಹಂಬಲ. ತರಬೇತಿಗಾಗಿ 1988ರಲ್ಲಿ ಮಹಾರಾಷ್ಟ್ರದ ಪುಣೆಗೆ ಬಂದಿದ್ದ. ಆಗ ಇಶ್ರತ್‍ಳ ಅಪ್ಪನ ಪರಿಚಯವಾಯಿತು. 1992ರಲ್ಲಿ ಅವರ ಬಳಿಯೇ ಕೆಲಸಕ್ಕೆ ಸೇರಿದ. 1998ರಲ್ಲಿ ದುಬೈಗೆ ಹಾರಿದ ಜಾವೆದ್ ವಾಪಸ್ಸಾಗಿದ್ದು 2002ರಲ್ಲಿ. ಪ್ರಾಣೇಶ್ ಮತ್ತು ಜಾವೆದ್ ಎಂಬ ಎರಡೂ ಹೆಸರಿನಲ್ಲಿ ಕಾನೂನುಬಾಹಿರವಾಗಿ ಪಾಸ್‍ಪೆÇೀರ್ಟ್ ಹೊಂದಿದ್ದ ಆತ ಮುಂಬಯಿಗೆ ಮರಳಿದ್ದೇ ತಡ ಮೂರು ಪ್ರಕರಣಗಳು ಹಾಗೂ ಮಾರಕಾಸ್ತ್ರ ಹೊಂದಿದ ಅಪರಾಧಕ್ಕಾಗಿ ಪೆÇಲೀಸರ ಅತಿಥ್ಯವನ್ನೂ ಸ್ವೀಕರಿಸಿದ.ಇಂತಹ ಜಾವೆದ್ ಮತ್ತು ಆಂಟಿ ಮನೆಗೆಂದು ಹೇಳಿ ಹೊಸ್ತಿಲಾಚೆ ಕಾಲ್ತೆಗೆದ ಇಶ್ರತ್, ಜೂನ್ 12ರಂದು ಅಹಮದಾಬಾದ್‍ಗೆ ಹೊರಟಿದ್ದಾರೆ.

ಆ ದಿನ ರಾತ್ರಿ ಮಾಲೆಗಾಂವ್‍ನಲ್ಲಿ ತಂಗಿದ್ದು, ಜೂನ್ 13ರಂದು ಅಹಮದಾಬಾದ್ ತಲುಪಿದ್ದಾರೆ. ಅಲ್ಲಿ ಅಮ್ಜದ್ ಅಲಿ ಆಲಿಯಾಸ್ ರಾಜ್‍ಕುಮಾರ್ ಅಕ್ಬರ್ ಅಲಿ ರಾಣಾ ಮತ್ತು ಜಿಸಾನ್ ಜೋಹರ್ ಅಬ್ದುಲ್ ಘನಿ ಜತೆಗೂಡಿದ್ದಾರೆ. ನಾಲ್ವರೂ ಸೇರಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ನಿವಾಸವನ್ನು ವೀಕ್ಷಿಸಿದ್ದಾರೆ. ಈ ನಡುವೆ ನೀಲಿ ಇಂಡಿಕಾ ಕಾರಿನಲ್ಲಿ ತೆರಳುತ್ತಿರುವ ನಾಲ್ವರು, ಸಂಶಯಾಸ್ಪದ ಭಯೋತ್ಪಾದಕರು ಎಂಬ ಮಾಹಿತಿ ಜೂನ್ 14ರ ರಾತ್ರಿ 11 ಗಂಟೆಗೆ ಗುಪ್ತಚರ ಏಜೆನ್ಸಿಗಳಿಂದ ಅಹಮದಾಬಾದ್ ಪೆÇಲೀಸ್‍ನ ಅಪರಾಧ ದಳಕ್ಕೆ ಬಂದು ಮುಟ್ಟಿದೆ.

ನರೇಂದ್ರ ಮೋದಿ ಹತ್ಯೆಗೆ ಸಂಚು ನಡೆಸುತ್ತಿದ್ದಾರೆಂಬ ಗುಮಾನಿ ಬಂದಿದೆ. ಈ ಸುದ್ದಿ ಮುಟ್ಟಿದ ಕೂಡಲೇ ಅಹಮದಾಬಾದ್ ಪೆÇಲೀಸರು 6 ತಂಡಗಳಲ್ಲಿ ನಗರದ ಎಲ್ಲ ಪ್ರವೇಶ ದ್ವಾರಗಳ ಮೇಲೂ ಹದ್ದಿನಗಣ್ಣು ಇಟ್ಟಿದ್ದಾರೆ. ಜೂನ್ 15ರಂದು ಬೆಳಗಿನ ಜಾವ 4 ಗಂಟೆಗೆ ಮುಂಬೈನಿಂದ ನರೋಲಾ ಕಡೆಗೆ ತೆರಳುತ್ತಿರುವ ನೀಲಿ ಇಂಡಿಕಾ ಕಾರು ಎಸಿಪಿ ನರೇಂದ್ರ ಅಮೀನ್ ಕಣ್ಣಿಗೆ ಬಿದ್ದಿದೆ. ಸುಮಾರು 15 ಕಿ.ಮೀ. ದೂರ ಬೆನ್ನಟ್ಟಿದ ನಂತರ ಅಮೀನ್ ತಂಡದಲ್ಲಿದ್ದ ಭದ್ರತಾ ಅಧಿ ಕಾರಿಯೊಬ್ಬರು ತಮ್ಮ ಎ.ಕೆ. -47 ರೈಫಲ್ ಮೂಲಕ ಕಾರಿನ ಟೈಯರ್‍ಗಳಿಗೆ ಗುಂಡು ಹಾರಿಸಿದ್ದಾರೆ. ಪಂಕ್ಚರ್ ಆಗಿ ಕಾರು ನಿಂತಿದೆ. ಆಗ ಬೆಳಗಿನ ಜಾವ 4 ಗಂಟೆ 30 ನಿಮಿಷ. ಕಾರಿನಿಂದ ಕೆಳಗಿಳಿದ ಒಬ್ಬ ವ್ಯಕ್ತಿ ತನ್ನ ಎ.ಕೆ.-56 ರೈಫಲ್ ತೆಗೆದು ಪೆÇಲೀಸರತ್ತ ಗುಂಡು ಹಾರಿಸಲು ಆರಂಭಿಸಿದ್ದಾನೆ. ಆ ವೇಳೆಗಾಗಲೇ ಎಸಿಪಿ ಪಿ. ಸಿಂಘಾಲ್ ನೇತೃತ್ವದ ತಂಡ ಇನ್ನೊಂದು ಬದಿಯಿಂದ ದಾಳಿ ಮಾಡಿದೆ. ಎಂಟು ನಿಮಿಷಗಳ ಗುಂಡಿನ ಚಕಮಕಿಯ ನಂತರ ಇಂಡಿಕಾ ಕಾರಿನಲ್ಲಿ ತೆರಳುತ್ತಿದ್ದ ಜಾವೆದ್, ಅಮ್ಜದ್ ಅಲಿ, ಜಿಸಾನ್ ಜೋಹರ್ ಮತ್ತು ಇಶ್ರತ್ ಜಹಾನ್ ಹೆಣವಾಗಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೆÇಲೀಸರಿಗೆ ಒಂದು ಎ.ಕೆ.-56 ರೈಫಲ್, ಒಂದು ಪಿಸ್ತೂಲು, ಸೆಟಲೈಟ್ ಫೆÇೀನ್ ಮತ್ತು ಡೈರಿಗಳು ಸಿಕ್ಕಿವೆ. ಅಲ್ಲಿಗೆ ಪೆÇಲೀಸರ ಎನ್‍ಕೌಂಟರ್ ಏನೋ ಮುಗಿಯಿತು, ಆದರೆ ಮಾಧ್ಯಮಗಳ ಅನುಮಾನ ಆರಂಭವಾಯಿತು! ಅದೇ ಸಮಯಕ್ಕೆ ಗುಜರಾತ್‍ನಲ್ಲಿ ಮೋದಿಯವರ ನಾಯಕತ್ವದ ವಿರುದ್ಧ ರಾಜ್ಯ ಬಿಜೆಪಿಯಲ್ಲಿ ಬಂಡಾಯ ವೆದ್ದಿತ್ತು. ಅದನ್ನು ದಿಕ್ಕುತಪ್ಪಿಸುವ ಸಲುವಾಗಿ ಮೋದಿ ಮಾಡಿದ ಹುನ್ನಾರವೇ ಅಮಾಯಕಿ ಇಶ್ರತ್ ಜಹಾನ್‍ಳ ಎನ್ಕೌಂಟರ್ ಎಂದು ಮಾಧ್ಯಮಗಳು ಷರಾ ಬರೆದವು.

ಆದರೆ ಎನ್‍ಕೌಂಟರ್‍ನಲ್ಲಿ ಬಲಿಯಾದ ನಾಲ್ವರು ಅಮಾಯಕರಾಗಿದ್ದರೆ ಎಕೆ-56 ರೈಫಲ್, ಪಿಸ್ತೂಲ್ ಎಲ್ಲಿಂದ ಬಂದವು? ಸಾಮಾನ್ಯವಾಗಿ ಮುಸಲ್ಮಾನರಲ್ಲಿ ಪ್ರಾಯಕ್ಕೆ ಬಂದ ಹೆಣ್ಣುಮಗಳನ್ನು ಅನ್ಯ ಗಂಡಸರ ಜತೆ ಹೊರಕ್ಕೆ ಕಳುಹಿ ಸುವುದು ಸಾಧ್ಯವೇ ಇಲ್ಲ. ಹಾಗಿದ್ದಾಗ್ಯೂ ಆಕೆ ಜಾವೆದ್ ಜತೆ ಹೋಗಲು ಹಾಗೂ ಕಳುಹಿಸಲು ಕಾರಣವೇನು? ಆಕೆ ದೇಶವಿರೋಧಿ ಶಕ್ತಿಗಳ ಜತೆ ಭಾಗಿಯಾಗಿದ್ದಳು ಎಂಬುದಕ್ಕೆ ಇವಿಷ್ಟೇ ಕಾರಣಗಳು ಸಾಕಿದ್ದವು. ಜತೆಗೆ ಎನ್ಕೌಂಟರ್‍ನ ಬೆನ್ನ ಆಕೆ ತಮ್ಮ ಸಂಘಟನೆಗೆ ಸೇರಿದವಳು ಎಂದು ಲಷ್ಕರೆ ತಯ್ಯೆಬಾ ತನ್ನ ವೆಬ್‍ಸೈಟ್‍ನಲ್ಲಿ, ಮ್ಯಾಗಝಿನ್‍ನಲ್ಲಿ ಸ್ವತಃ ಒಪ್ಪಿಕೊಂಡಿತು. ಇಷ್ಟಾಗಿಯೂ ಆಕೆ ಮುಸ್ಲಿಮಳು, ಎನ್‍ಕೌಂಟರ್ ನಡೆದಿದ್ದು ನರೇಂದ್ರ ಮೋದಿಯವರ ಗುಜರಾತ್‍ನಲ್ಲಿ ಎಂಬ ಅಂಶಗಳು ಮಾತ್ರ ಅನುಮಾನದ ಸರಮಾಲೆಯನ್ನು ಉದ್ದ ಮಾಡುತ್ತಲೇ ಹೋದವು.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಸರಕಾರದಲ್ಲಿ ಮುಸ್ಲಿಮರಿಗೆ ಉಳಿಗಾಲವಿಲ್ಲ ಎಂದು ಬಿಂಬಿಸಲಾಯಿತು. ಆದರೆ ಮ್ಯಾಜಿಸ್ಟ್ರೇಟ್ ತಮಾಂಗ್ ವರದಿ ಹೊರಬಿದ್ದು ಹತ್ತು ತಿಂಗಳು ತುಂಬುವ ಮೊದಲೇ ಇಶ್ರತ್ ಜಹಾನ್ ಎನ್ಕೌಂಟರ್ ಘಟನೆ ಮತ್ತೊಂದು ತಿರುವು ಪಡೆದುಕೊಂಡಿತು.

ಪ್ರಸ್ತುತ ಅಮೆರಿಕದ ಜೈಲಿನಲ್ಲಿರುವ ಹೆಡ್ಲಿಯನ್ನು ವಿಚಾರಣೆ ಮಾಡಲು ಭಾರತದ `ರಾಷ್ಟ್ರೀಯ ತನಿಖಾ ಏಜೆನ್ಸಿ’ಅಧಿ ಕಾರಿಗಳು 2010ರಲ್ಲಿ ಮೊದಲಿಗೆ ತೆರಳಿದ್ದರು. ಆಗ 2004ರಲ್ಲಿ ಹತ್ಯೆಯಾದ ಮುಂಬೈ ಯುವತಿ ವಾಸ್ತವದಲ್ಲಿ ಲಷ್ಕರೆ ತಯ್ಯೆಬಾದ ಫಿದಾಯಿನ್(ಆತ್ಮಹತ್ಯಾ ಬಾಂಬರ್). 2007ರವರೆಗೂ ಲಷ್ಕರೆ ತಯ್ಯೆಬಾದ ಭಾರತದ ಕಾರ್ಯಾಚರಣೆಯ ಮುಖ್ಯ ಪಿತೂರಿದಾರನಾಗಿದ್ದ ಕಮಾಂಡರ್ ಮುಝಾಮಿಲ್ ಆಕೆಯನ್ನು ಸಂಘಟನೆಗೆ ಸೇರ್ಪಡೆ ಮಾಡಿಕೊಂಡಿದ್ದ ಎಂಬ ವಿಷಯವನ್ನು ಹೆಡ್ಲಿ ಬಹಿರಂಗ ಮಾಡಿದ್ದ. ಮೋದಿ ಹತ್ಯೆಗೆಂದು ತೆರಳಿದ್ದವರಲ್ಲಿ ಇಬ್ಬರು ಪಾಕಿಸ್ತಾನಿಯರು ಎಂದೂ ಹೇಳಿದ. ಕೆಲವು ವಿಐಪಿಗಳನ್ನು ಹತ್ಯೆ ಮಾಡುವ ಸಲುವಾಗಿ ಮುಝಾಮಿಲ್, ಇಶ್ರತ್ ಹಾಗೂ ಇತರ ಮೂವರನ್ನು ಗುಜರಾತ್‍ಗೆ ಕಳುಹಿಸಿದ್ದ ಎಂದು ಗುಜರಾತ್ ಪೆÇಲೀಸರು ಮಾಡಿದ್ದ ಪ್ರತಿಪಾದನೆ ಹೆಡ್ಲಿ ಮಾಹಿತಿಯಿಂದ ನಿಜವಾದಂತಾಯಿತು.

ಇಶ್ರತ್ ಹತ್ಯೆಯ ಬೆನ್ನ ಆಕೆ ನಮ್ಮ ಸಂಘಟನೆಗೆ ಸೇರಿದವಳು ಎಂದು ಪಾಕಿಸ್ತಾನದಲ್ಲಿರುವ ಲಷ್ಕರೆ ತಯ್ಯೆಬಾದ ಮುಖವಾಣಿ `ಘಝ್ವಾ ಟೈಮ್ಸ್’ ಪ್ರತಿಪಾದಿಸಿತ್ತು. ಈ ಎಲ್ಲವನ್ನೂ ಡೆವಿಡ್ ಹೆಡ್ಲಿ ಹೊರಹಾಕಿರುವ ಅಂಶಗಳು ನಿಜವಾಗಿಸಿದವು . ಟೈಮ್ಸ್ ನೌ ಚಾನೆಲ್ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಮಾಜಿ ರಾ ಅಧಿಕಾರಿ ಆರ್‍ಎಸ್‍ಎನ್ ಸಿಂಗ್ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಯಾವಾಗ ಇಶ್ರತ್ ಹಾಗೂ ಗುಜರಾತ್ ಹಿಂಸಾಚಾರದ ವಿಷಯವನ್ನಿಟ್ಟುಕೊಂಡು ಮೋದಿಯವರನ್ನು ಜೈಲಿಗೆ ಹಾಕಲು ಸಾಧ್ಯವಾಗಲಿಲ್ಲವೋ ಆಗ, 2014ರ ಲೋಕಸಭೆ ಚುನಾವಣೆಗೆ ಮೊದಲೇ ಮೋದಿಯವರನ್ನು ಮುಗಿಸಬೇಕೆಂದು ಪಾಟ್ನಾದಲ್ಲಿ ಅಂತಿಮ ಪ್ರಯತ್ನ ಮಾಡಲಾಯಿತು ಎಂದಿದ್ದರು.

ಆ ಪಾಟ್ನಾ ಯತ್ನ ಮತ್ತಾವುದೂ ಅಲ್ಲ, 2013 ಅಕ್ಟೋಬರ್ 27ರಂದು ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು ಬಿಹಾರದ ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಹೂಂಕಾರ್ ರ್ಯಾಯಲ್ಲಿ ಮಾತನಾಡಲು ಆಗಮಿಸುವ ಸಂದರ್ಭದಲ್ಲಿ ನಡೆದ ಬಾಂಬ್ ಸ್ಫೋಟ! ಸುಮಾರು 8 ಲಕ್ಷ ಜನ ನೆರೆದಿದ್ದ ಈ ಸಭೆ ಸಂದರ್ಭದಲ್ಲಿ ನಡೆದ ಈ ಸರಣಿ ಬಾಂಬ್ ಸ್ಪೋಟದಲ್ಲಿ 6 ಜನ ತೀರಿಕೊಂಡರು. ಮೋದಿಯವರು ಭಾಷಣ ಮಾಡುತ್ತಿದ್ದ ವೇದಿಕೆಗೆ 40 ಅಡಿ ದೂರದಲ್ಲೇ ಬಾಂಬ್ ಪತ್ತೆಯಾಯಿತು! ಸಭೆ ಮುಗಿದ ನಂತರ ನಡೆದ ತಪಾಸಣೆಯಲ್ಲಿ ಸುಮಾರು 17 ಸಜೀವ ಬಾಂಬುಗಳು ಸಿಕ್ಕಿದವು. ನರೇಂದ್ರ ಮೋದಿ ಬಚಾವಾಗಿದ್ದರು!!!

-ಚೇಕಿತಾನ

Tags

Related Articles

Close