ಪ್ರಚಲಿತ

ನರೇಂದ್ರ ಮೋದಿ ಹತ್ಯೆಗೆ ಸ್ಕೆಚ್ ಹಾಕಿದ `ಲೋನ್‍ವೋಲ್ಫ್’… ಬೆಚ್ಚಿಬೀಳಿಸುವ ಎಚ್ಚರಿಕೆ ನೀಡಿದ ಗುಪ್ತಚರ ಇಲಾಖೆ!!!

ಬೆಚ್ಚಿಬೀಳಿಸುವ ಎಚ್ಚರಿಕೆ ನೀಡಿದ ಕೇಂದ್ರ ಗುಪ್ತಚರ ಇಲಾಖೆ !

ನರೇಂದ್ರ ಮೋದಿಯನ್ನು ಹತ್ಯೆಗೆ ಮಣಿಶಂಕರ್ ಅಯ್ಯರ್ ಪಾಕಿಸ್ತಾನಕ್ಕೆ ಸುಪಾರಿ ನೀಡಿರುವುದು ಬಹಿರಂಗಗೊಳ್ಳುತ್ತಿದ್ದಂತೆ ಇದೀಗ ಮತ್ತೊಂದು ಸಂಚು ಬಯಲಾಗಿದೆ. ಹೌದು ಈ ಬಾರಿ ಸ್ಕೆಚ್ ಹಾಕಿರುವುದು ಬೇರ್ಯಾರೂ ಅಲ್ಲ.. ಅದೇ ಲೋನ್ ವೋಲ್ಫ್… ಇಂಥದೊಂದು ಬೆಚ್ಚಿಬೀಳಿಸುವ ಎಚ್ಚರಿಕೆಯನ್ನು ಕೇಂದ್ರ ಗುಪ್ತಚರ ಇಲಾಖೆ ನೀಡಿದ್ದು ಆತಂಕಕ್ಕೆ ಕಾರಣವಾಗಿದೆ. ಗುಜರಾತ್‍ನಲ್ಲಿರುವ ನರೇಂದ್ರ ಮೋದಿಯನ್ನು ಲೋನ್‍ವೋಲ್ಫ್ ಹತ್ಯೆ ನಡೆಸಲು ಸಂಚುಹೂಡಿರುವುದರ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿರುವುದರಿಂದ ಹೈ ಅಲರ್ಟ್ ಘೋಷಿಸಲಾಗಿದೆ.

ಹೌದು, ನರೇಂದ್ರ ಮೋದಿ ತನ್ನ ತವರು ರಾಜ್ಯ ಗುಜರಾತ್‍ನಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯಕ್ರಮಗಳಲ್ಲಿ ಸತತವಾಗಿ ಪಾಲ್ಗೊಳ್ಳುತ್ತಿದ್ದಾರೆ. ಇದನ್ನೇ ಟಾರ್ಗೆಟ್ ಮಾಡಿರುವ ಉಗ್ರರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದಾಳಿ ನಡೆಸುವ ಕುರಿತು ಸಂಚು ರೂಪಿಸಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ರೋಡ್ ಶೋಗಳೇ ಉಗ್ರರ ಟಾರ್ಗೆಟ್ ಆಗಿದ್ದು, ಬೃಹತ್ ಪ್ರಮಾಣದಲ್ಲಿ ಜನಸ್ತೋಮ ಸೇರಿದ್ದಾಗ ದಾಳಿ ಮಾಡಲು ಸಂಚು ರೂಪಿಸಿದ್ದಾರೆ ಎಂದು ಐಬಿ ಎಚ್ಚರಿಕೆ ನೀಡಿದೆ.

ಇನ್ನು ಉಗ್ರರ ಈ ಕಾರ್ಯಾಚರಣೆ ಲೋನ್ ವೋಲ್ಫ್ (ಒಂಟಿ ತೋಳ) ಕಾರ್ಯಾಚರಣೆ ಎಂದು ಹೆಸರಿಡಲಾಗಿದ್ದು, ಉಗ್ರನೋರ್ವ ದಾಳಿ ವೇಳೆ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕವಿಲ್ಲದೇ ತನಗಿಚ್ಛಿಸಿದಂತೆ ದಾಳಿ ಮಾಡುವುದಾಗಿದೆ. ಹೆಚ್ಚು ಪ್ರಮಾಣಲ್ಲಿ ಹಾನಿ ಮಾಡುವುದು ಈ ದಾಳಿಯ ಮುಖ್ಯ ಉದ್ದೇಶವಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಇನ್ನು ಇತ್ತೀಚೆಗಷ್ಟೇ ದೇಶದಲ್ಲಿ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು. ಈ ಶಂಕಿತ ಉಗ್ರರು ನೀಡಿರುವ ಮಾಹಿತಿ ಮೇರೆಗೆ ಅಧಿಕಾರಿಗಳು ಇಂತಹ ಮಾಹಿತಿಯನ್ನು ಕಲೆಹಾಕಿದ್ದಾರೆ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶದ ಮಥುರಾದಲ್ಲಿ ಉರೋಜ್ ಖಾನ್ ಎಂಬಾತನನ್ನು ಬಂಧಿಸಲಾಗಿತ್ತು. ಈತ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುವ ಜವಾಬ್ದಾರಿ ಹೊಂದಿದ್ದ. ಇಸ್ಲಾಮಿಕ್ ಸ್ಟೇಟ್ ಮೂಲದ ಇಬ್ಬರು ಉಗ್ರರನ್ನು ಲೋನ್ ವೋಲ್ಫ್ ದಾಳಿಗೆ ನಿಯೋಜನೆ ಮಾಡಲಾಗಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ನರೇಂದ್ರ ಮೋದಿಯವರು ಮೊದಲಿಂದಲೂ ಉಗ್ರರ ಟಾರ್ಗೆಟ್ ಆಗಿದ್ದು, ಗುಪ್ತಚರ ಇಲಾಖೆ ಮಾಹಿತಿ ನೀಡುತ್ತಲೇ ಇದೆ. ಈ ಮುಂಚೆಯೂ ಮೋದಿಯವರ ಹತ್ಯೆಗೆ ಉಗ್ರರು ವಿಫಲ ಸಂಚು ರೂಪಿಸಿದ್ದರು.

2014ರ ಲೋಕಸಭೆ ಚುನಾವಣೆಗೆ ಮೊದಲೇ ಮೋದಿಯವರನ್ನು ಮುಗಿಸಬೇಕೆಂದು ಪಾಟ್ನಾದಲ್ಲಿ ಪ್ರಯತ್ನ ನಡೆಸಲಾಗಿತ್ತು. 2013 ಅಕ್ಟೋಬರ್ 27ರಂದು ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು ಬಿಹಾರದ ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಹೂಂಕಾರ್ ರ್ಯಾಲಿಯಲ್ಲಿ ಮಾತನಾಡಲು ಆಗಮಿಸುವ ಸಂದರ್ಭದಲ್ಲಿ ಬಾಂಬ್ ಸ್ಫೋಟ ನಡೆದಿತ್ತು.ಸುಮಾರು 8 ಲಕ್ಷ ಜನ ನೆರೆದಿದ್ದ ಈ ಸಭೆ ಸಂದರ್ಭದಲ್ಲಿ ನಡೆದ ಈ ಸರಣಿ ಬಾಂಬ್ ಸ್ಪೋಟದಲ್ಲಿ 6 ಜನ ತೀರಿಕೊಂಡರು. ಮೋದಿಯವರು ಭಾಷಣ ಮಾಡುತ್ತಿದ್ದ ವೇದಿಕೆಗೆ 40 ಅಡಿ ದೂರದಲ್ಲೇ ಬಾಂಬ್ ಪತ್ತೆಯಾಯಿತು! ಸಭೆ ಮುಗಿದ ನಂತರ ನಡೆದ ತಪಾಸಣೆಯಲ್ಲಿ ಸುಮಾರು 17 ಸಜೀವ ಬಾಂಬುಗಳು ಸಿಕ್ಕಿದವು. ನರೇಂದ್ರ ಮೋದಿ ಬಚಾವಾಗಿದ್ದರು! ಈ ಮುಂಚೆ ಎನ್‍ಕೌಂಟರ್‍ಗೆ ಬಲಿಯಾದ ಇಶ್ರತ್ ಜಹಾನ್ ಎಂಬ ಯುವತಿಯೂ ಮೋದಿ ಹತ್ಯೆಗೆ ಮುಂದಾಗಿದ್ದಳು. ಈ ಬಗ್ಗೆ ಅಮೆರಿಕದ ಜೈಲಿನಲ್ಲಿರುವ ಹೆಡ್ಲಿ ಕೂಡಾ ದೃಢಪಡಿಸಿದ್ದ.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಲುವಾಗಿ ಪಾಕಿಸ್ತಾನದ ಐಎಸ್‍ಐ ಮತ್ತು ಸೌದಿ ಅರೇಬಿಯಾದ ಉಗ್ರ ಸಂಘಟನೆಗಳು ಭಾರಿ ಪ್ರಮಾಣದ ಸಂಚು ರೂಪಿಸಿದ್ದ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು. ಪಟನಾ ಸ್ಫೋಟದಲ್ಲಿ ಇಂಡಿಯನ್ ಮುಜಾಹಿದೀನ್‍ನ ಸಂಚು ವಿಫಲವಾದ ಮೇಲೆ ಐಎಸ್‍ಐ, ಭೂಗತ ದೊರೆ ದಾವೂದ್ ಇಬ್ರಾಹಿಂ ಮೊರೆ ಹೋಗಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು. ಕೇವಲ ಪಾಕಿಸ್ತಾನದ ಭಯೋತ್ಪಾದನೆ ಸಂಘಟನೆಗಳಷ್ಟೇ ಅಲ್ಲ, ಸೌದಿ ಅರೇಬಿಯಾದ ಕೆಲ ಸಂಘಟನೆಗಳೂ ಕೂಡ ಮೋದಿ ಅವರ ಹತ್ಯೆಗಾಗಿ ಸಂಚು ರೂಪಿಸುತ್ತಿವೆ. ಇವೆಲ್ಲವೂ ಒಟ್ಟಾಗಿ ಸೇರಿ ಮೋದಿ ಅವರ ಹತ್ಯೆಗಾಗಿ ಭಾರಿ ಪ್ರಮಾಣದಲ್ಲೇ ಸಂಚು ರೂಪಿಸುತ್ತಿವೆ ಎಂದು ಗುಪ್ತಚರ ದಳ ಮಾಹಿತಿ ಕಲೆಹಾಕಿತ್ತು. ಈ ಮಾಹಿತಿಯನ್ನು ಭಯೋತ್ಪಾದಕ ಶಹೀದ್ ಅಲಿಯಾಸ್ ಬಿಲಾಲ್ ಎಂಬಾತನಿಂದ ಕಲೆಹಾಕಿವೆ.

ನರೇಂದ್ರ ಮೋದಿ ಅವರಿಗೆ ಭಾರಿ ಪ್ರಮಾಣದ ಭದ್ರತೆ ಇರುವುದರಿಂದ ಸಾಮಾನ್ಯ ಜನರಿಗೆ ಅವರ ಬಳಿ ಹೋಗಲು ಕಷ್ಟ. ಭದ್ರತಾ ಅಧಿಕಾರಿಗಳನ್ನೇ ದಂಗೆ ಏಳುವಂತೆ ಮಾಡಿ ಅವರ ಹತ್ಯೆ ಮಾಡಿದರೆ ಹೇಗೆ ಎಂಬ ಕುಯುಕ್ತಿ ಅವರದ್ದಾಗಿತ್ತು. ಮೋದಿ ಹತ್ಯೆಗಾಗಿ ನೇರವಾಗಿ ದಾಳಿ ನಡೆಸುವ ಬದಲಾಗಿ ಸುಸೈಡ್ ಅಟ್ಯಾಕ್ ಮಾಡುವುದು. ಆತ್ಮಹತ್ಯಾ ದಾಳಿಗಾಗಿ ಶಹೀನ್ ಪಡೆಯೊಂದನ್ನೂ ಕಟ್ಟಲಾಗಿದೆ. ಇದಷ್ಟೇ ಅಲ್ಲ ನಿಷೇಧಿತ ಸಂಘಟನೆ ಸಿಮಿ ಕೂಡ ಇವರಿಗೆ ಸಹಾಯ ಮಾಡುತ್ತಿದೆ. ಈ ಸಂಘಟನೆ ಎಲ್‍ಇಟಿ, ಹುಜಿ ಮತ್ತು ಜೆಇಎಂ ಸಂಘಟನೆಗಳ ಜೊತೆ ಸಂಪರ್ಕದಲ್ಲಿದೆ. ಭಯೋತ್ಪಾದಕರ ಜೊತೆ ಮೋದಿ ಅವರ ಮೇಲೆ ನಕ್ಸಲೀಯರು ಕೂಡ ಗುರಿ ಇಟ್ಟಿದ್ದಾರೆ ಎಂದೂ ಗುಪ್ತಚರ ದಳ ಮಾಹಿತಿ ನೀಡಿತ್ತು.

ಇದೇ ಗುಪ್ತಚರ ಇಲಾಖೆ ಮೋದಿ ಹತ್ಯೆಗೆ ಉಗ್ರರು ಮತ್ತೊಮ್ಮೆ ಸಂಚು ರೂಪಿಸುತ್ತಿರುವುದರ ಮಾಹಿತಿ ನೀಡಲಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ.

source: https://goo.gl/PGTpsW

ಚೇಕಿತಾನ

Tags

Related Articles

Close