ಅಂಕಣದೇಶಪ್ರಚಲಿತ

ನಿಕಾಹ್ ಹಲಾಲ್! ಮೌಲ್ವಿ ಜೊತೆಗಿನ ಒನ್ – ನೈಟ್ – ಸ್ಟ್ಯಾಂಡ್!!!!

ಈ ಕಾನೂನು ವಿಚ್ಛೇದನಕ್ಕೊಳಗಾದ ಮುಸ್ಲಿಂ ಮಹಿಳೆಗೆ ಪರ ಪುರುಷನ ಜೊತೆ ಒಂದು ರಾತ್ರಿಯನ್ನೊದಗಿಸುತ್ತದೆ! ಇದು ಆಕೆಯ ಮದುವೆಯನ್ನು ಕಾಪಾಡುವುದಕ್ಕಾಗಿ! ಇದು ಆಘಾತವಾದರೂ ಸತ್ಯ!

ನಿಕಾಹ್ ಹಲಾಲಾ!!!!

ನಿಕಾಹ್ ಹಲಾಲಾ ಎನ್ನುವುದು ವಿಚ್ಛೇದನ ಮಹಿಳೆ ತನ್ನ ಮೊದಲನೇ ಪತಿಯ ಜೊತೆ ಮತ್ತೆ ಬದುಕಲು ಇರುವ ವಿಧಾನ! ತ್ರಿವಳಿ ತಲಾಕ್ ನೀಡಿದ ಪತಿಗೆ ಮತ್ತೆ ಹೆಂಡತಿಯನ್ನು ಪಡೆಯಬೇಕೆಂದೆನಿಸಿದರೆ, ಆತ ಅವಳನ್ನು ಮೊದಲು ಮೌಲ್ವಿಗೆ ನೀಡಬೇಕು! ತದನಂತರ, ಒಂದು ರಾತ್ರಿಯ ಸಂಭೋಗದ ನಂತರ ಮೌಲ್ವಿ ಆಕೆಗೆ ವಿಚ್ಛೇದನ ನೀಡುವ ಶಾಸ್ತ್ರ ಮಾಡಿ ಆಕೆಯ ಮೊದಲನೇ ಪತಿಯ ಹತ್ತಿರ ತಿರುಗಿ ಕಳುಹಿಸಿದ ಮೇಲೆಯೇ ಅವರಿಬ್ಬರೂ ಮತ್ತೆ ಸಂಸಾರ ಮಾಡಲಿಕ್ಕೆ ಯೋಗ್ಯರು!

ಗುಪ್ತವಾದ ಚುಟುಕು ಕಾರ್ಯಾಚರಣೆಯ ನಂತರ ಈ ವಿಧಾನವೊಂದು ಬಯಲಾಗಿದೆ! ನಿಕಾಹ್ ಹಲಾಲ್ ನಡೆಸಲು ಮೌಲ್ವಿಗಳು ರೂ.20,000 ದಿಂದ ರೂ.1.5 ಲಕ್ಷದವರೆಗೂ ವಿಧಿಸುತ್ತಾರೆಂಬ ಸ್ಫೋಟಕ ಮಾಹಿತಿ ಬಯಲಾಗಿದೆ!

ಇಷ್ಟು ದಿನವಾದರೂ ಈ ನಿಷೇಧಿತ ವಿಧಾನವೊಂದು ಬೆಳಕಿಗೆ ಬಂದಿರಲಿಲ್ಲ. ಪ್ರತಿ ಬಾರಿಯೂ ಚರ್ಚೆಯಾಗುತ್ತಿದ್ದ ತ್ರಿವಳಿ ತಲಾಕ್ ಗಿಂತ ಈ ಅನಿಷ್ಟ ಪದ್ಧತಿಯೊಂದು ಇದೇ ಮೊದಲ ಬಾರಿಗೆ ಬಟಾಬಯಲಾದದ್ದೂ ಅಲ್ಲದೇ, ಆಘಾತಕರವೂ ಹೌದು!

ಒಬ್ಬ ಮುಸ್ಲಿಂ ಮಹಿಳೆಯನ್ನು ಧರ್ಮಗುರು ಎಂದೆನಿಸಿಕೊಳ್ಳುವವನ ಜೊತೆ ಲೈಂಗಿಕ ಸಂಬಂಧಕ್ಕೆ ಒತ್ತಡ ಹೇರುವುದು ಧರ್ಮದ ಗೌರವವನ್ನುಳಿಸಲು ಸಾಧ್ಯವೇ?

ಇಂಡಿಯಾ ಟುಡೇ ಯ ಮಾಹಿತಿಯ ಪ್ರಕಾರ ಅದೆಷ್ಟೋ ಮೌಲ್ವಿಗಳು ಈ ವಿಷಯವನ್ನು ಒಪ್ಪಿಕೊಂಡಿದ್ದಾರೆಂದು ತಿಳಿಸಿದೆ.

ನಿಕಾಹ್ ಹಲಾಲ್ ನಡೆಸುವ ಮೌಲ್ವಿಗಳೂ ಮದುವೆಯಾದವರೇ!!!

ಇದರ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಮೌಲ್ವಿಯೊಬ್ಬರು, ‘ನಾನದೆಷ್ಟೋ ನಿಕಾಹ್ ಹಲಾಲ್ ನು ನೆರವೇರಿಸಿದ್ದೇನೆ. ನಾನಿದರ ಬಗ್ಗೆ ಹೆಂಡತಿಗೂ ಹೇಳಿಲ್ಲ, ನಮ್ಮ ಧರ್ಮದಲ್ಲಿ ಹೇಳಬೇಕೆಂಬ ನಿಯಮವಿಲ್ಲ.’ ಎಂದು ಹೇಳಿ‌ದ್ದಾರೆ.

ಇನ್ನೊಬ್ಬ ಮೌಲ್ವಿಯೂ ತಾನು ನಿಕಾಹ್ ಹಲಾಲ್ ನಡೆಸಲು ಒಪ್ಪಿದ್ದಾಗಿ ಹಾಗೂ 1 ಲಕ್ಷ ರೂಪಾಯಿವರೆಗೂ ವಿಧಿಸಿದ್ದನ್ನು ಒಪ್ಪಿಕೊಂಡಿದ್ದಾರೆ.

ಜುಬೈರ್ ಕಸ್ಮಿ ಎಂಬ ಮೌಲ್ವಿಯೊಬ್ಬ ನೀಡಿದ ಹೇಳಿಕೆಯಿದೆಯಲ್ಲ, ಅದು ಇಡೀ ಭಾರತದ ಗೌರವಕ್ಕೆ ಧಕ್ಕೆ ತಂದಿತು! ” ನಾನು ಅದೆಷ್ಟೋ ಈ ರೀತಿಯ ರಾತ್ರಿಗಳ ಕಳೆದಿದ್ದೇನೆ. ನನಗೆ ಎರಡು ಹೆಂಡತಿಯರಿದ್ದಾರಿಂದ ಕಷ್ಟವೆಂದೇ ಅನ್ನಿಸಲಿಲ್ಲ. ನಾನು ನಿಕಾಹ್ ಹಲಾಲ್ ಮಾಡುವಾಗ ಮೊದಲನೇ ಹೆಂಡತಿಯ ಜೊತೆಗಿದ್ದೇನೆಂದು ಎರಡನೇ ಹೆಂಡತಿ ಅಂದುಕೊಳ್ಳುತ್ತಾಳೆ, ಹಾಗೂ ಮೊದಲನೇ ಹೆಂಡತಿ ನಾನು ಎರಡನೇ ಹೆಂಡತಿಯ ಜೊತೆಗಿದ್ದೇನೆಂದು ಅಂದುಕೊಳ್ಳುತ್ತಾಳೆ!”

ಕೊನೆಗೂ, ಈ ನಿಕಾಹ್ ಹಲಾಲ್ ಎಲ್ಲರ ವಿರೋಧಕ್ಕೊಳಪಟ್ಟಿತು!

ಹೌದು! ಈ ವಿಷಯ ಬಹಿರಂಗವಾದಂತೆ, ಮೌಲಾನಾ ಮಕ್ಸೂದ್ ಅಲ್ ಹಸನ್, ” ಇದು ಕಾಮವೇ ಹೊರತು ಇನ್ನೇನೂ ಅಲ್ಲ. ಇದಕ್ಕೊಪ್ಪುವ ಮೌಲ್ವಿಗಳನ್ನು ಮಸೀದಿಯಿಂದಲೇ ಓಡಿಸಬೇಕು.” ಎಂದು ಅಭಿಪ್ರಾಯಿಸಿದರು.

ಯಾವಾಗ ಹಿಂದೂ ಧರ್ಮದ ‘ಸತಿ’ ಆಚರಣೆಯ ಬಗ್ಗೆ ಚರ್ಚೆಯಾಯಿತೋ, ಆಗ ಎಲ್ಲ ಮಾಧ್ಯಮಗಳೂ, ಎಡ ಪಂಥದ ಚೇಲಾಗಳೂ ಬಾಯಿ ಬಡಿದುಕೊಂಡಿದ್ದವು. ಸತಿ ಪದ್ಧತಿ ಸ್ವ- ಇಚ್ಛೆಯದ್ದು ಎನ್ನುವುದಾದರೂ ಇನ್ಯಾವುದೋ ಕಥೆ ಕಟ್ಟಿದ್ದ ಸೆಕ್ಯುಲರ್ ಹಾಗೂ ಮಾನವತೆಯ ಆರಾಧಕರೆಲ್ಲ ಇದರ ಬಗ್ಗೆ ಮೌನವಾಗಿರುವುದು ಅವರ ಹೇಡಿತನಕ್ಕಷ್ಟೇ ಕನ್ನಡಿ ಹಿಡಿದಂತಿದೆ. ಇನ್ನು ಮುಂದಾದರೂ ಮುಸ್ಲಿಂ ಸಮುದಾಯದವರು ಈ ಅನಿಷ್ಟ ಪದ್ಧತಿಯನ್ನು ನಿಷೇಧಗೊಳಿಸಿದರೆ, ಮುಸ್ಲಿಂ ಹೆಣ್ಣು ಮಕ್ಕಳು ಸ್ವಲ್ಪವಾದರೂ ನೆಮ್ಮದಿಯಿಂದ ಬದುಕಲು ಸಾಧ್ಯ!

http://indiatoday.intoday.in/story/nikah-halala-islamic-scholars-one-night-stand-divorced-muslim-women-marriage/1/1027212.html

– ಪೃಥು

Tags

Related Articles

Close