ಪ್ರಚಲಿತ

ಪಾಕ್ ಸ್ನೇಹಿ ಚೀನಾದಲ್ಲಿ ಮುಸಲ್ಮಾನರು ಗಡ್ಡ ಬಿಟ್ಟರೆ ಕತ್ತರಿಸುತ್ತಾರೆ ಹುಷಾರ್!! ಮುಸಲ್ಮಾನರ ವಿರುದ್ದ ಸಿಡಿದೆದ್ದ ಚೀನಾ!!

ಚೀನಾ ಮತ್ತು ಪಾಕಿಸ್ತಾನ ರಾಷ್ಟ್ರಗಳೆರಡು ಅದೆಷ್ಟು ಅನ್ಯೋನ್ಯವಾಗಿತ್ತು ಎಂದರೆ ಅದನ್ನು ಹೇಳತೀರದು!! ಆದರೆ ಮುಸ್ಲಿಂ ರಾಷ್ಟ್ರದೊಂದಿಗೆ ಅನ್ಯೋನ್ಯದಿಂದಿದ್ದ ಚೀನಾ ಮುಸಲ್ಮಾನರನ್ನು ಕಂಡರೆ ಹುರಿದೇಳುತ್ತೆ ಅಂದರೆ ಅದು ನಂಬಲಸಾಧ್ಯ!! ಯಾಕೆಂದರೆ ಮುಸ್ಲಿಂ ರಾಷ್ಟ್ರವಾದ ಪಾಕಿಸ್ತಾನದೊಂದಿಗೆ ಕೈಜೋಡಿಸಿ ಭಾರತಕ್ಕೆ ಅನ್ಯಾಯವೆಸಗುತ್ತಿರುವ ಚೀನಾ ತನ್ನ ರಾಷ್ಟ್ರದಲ್ಲಿ ಮುಸ್ಲಿಂ ಸಮುದಾಯವನ್ನು ಹದ್ದುಬಸ್ತಿನಲ್ಲಿಡುವುದಲ್ಲದೇ, ಸ್ವತಃ ಚೀನಾ ಸರ್ಕಾರವೇ ಇಸ್ಲಾಮಿಕ್ ಧಾರ್ಮಿಕ ಸ್ಥಳಗಳಲ್ಲಿ ಅವರವರ ಧಾರ್ಮಿಕ ಗ್ರಂಥಗಳನ್ನು ಓದುವುದನ್ನು ನಿಷೇಧಿಸಿದೆ!!

ಹೌದು…. ಪಶ್ಚಿಮ ಚೀನಾದಲ್ಲಿ ಅಲ್ಲಿನ ಸರ್ಕಾರ ಚಳಿಗಾಲದ ನೆಪವೊಡ್ಡಿ ಮುಸ್ಲಿಂ ಮಕ್ಕಳಿಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಿಬಿಟ್ಟಿದೆ. ಅಷ್ಟೇ ಅಲ್ಲದೇ ಈ ಬಗೆಗಿನ ಪ್ರತಿಬಂಧದ ವಿಚಾರವನ್ನು ಅಲ್ಲಿನ ಶಿಕ್ಷಣ ಸಚಿವಾಲಯ ಆನಲೈನ್ ನಲ್ಲಿ ಪೆÇೀಸ್ಟ್ ಮಾಡುವ ಮೂಲಕ ಜಾರಿಗೆ ತಂದಿದೆ. ಈ ಪ್ರತಿಬಂಧದ ಪ್ರಕಾರ ಚೀನಾ ಸರ್ಕಾರವು ಮುಸ್ಲಿಂ ವಿದ್ಯಾರ್ಥಿಗಳು ಶಾಲೆಯ ತರಗತಿಯಲ್ಲಿ ಅಥವ ಯಾವುದೇ ಇಸ್ಲಾಮಿಕ್ ಧಾರ್ಮಿಕ ಸ್ಥಳಗಳಲ್ಲಿ ಅವರವರ ಧಾರ್ಮಿಕ ಗ್ರಂಥಗಳನ್ನು ಓದುವುದನ್ನೇ ನಿಷೇಧ ಮಾಡಿದೆ.

ಅಷ್ಟೇ ಅಲ್ಲದೇ, ಈ ಪ್ರತಿಬಂಧಕದ ಉದ್ದೇಶ ಚೀನಾ ರಾಜಕೀಯ ಉದ್ದೇಶವಿಟ್ಟುಕೊಂಡು ಮುಸಲ್ಮಾನರಿಂದ ದೇಶದಲ್ಲಿ ಗಲಭೆಗಳಾದಿರಲಿ ಅವರನ್ನು ಹದ್ದುಬಸ್ತಿನಲ್ಲಿಡಲು ತಯಾರಿ ಅಂತ ಮಾಧ್ಯಮಗಳು ವರದಿ ಮಾಡಿವೆ. ಆದರೆ ಇದು ಚೀನಾ ಮುಸಲ್ಮಾನರ ವಿರುದ್ಧವಾಗಿ ಮೊದಲ ಜಾರಿಗೆ ತಂದ ಕಾನೂನುಗಳಲ್ಲ, ಇದಕ್ಕೂ ಮೊದಲು ಚೀನಾ ಮುಸ್ಲಿಮರನ್ನು ನಿಯಂತ್ರಿಸಲು ಹಲವಾರು ಕಾನೂನುಗಳನ್ನು ಈಗಾಗಲೇ ಜಾರಿತಂದಿದೆ.

ಇತ್ತ ಪಾಕಿಸ್ತಾನದೊಂದಿಗೆ ಅನ್ಯೋನ್ಯವಾಗಿರುವ ಚೀನಾ ತನ್ನ ರಾಷ್ಟ್ರದಲ್ಲಿ ಮುಸಲ್ಮಾನರನ್ನು ಹದ್ದು ಬಸ್ತಿನಲ್ಲಿಡುತ್ತಿರುವುದನ್ನು ಕಂಡರೆ ಒಂದು ಕ್ಷಣ ಅಚ್ಚರಿಯಾಗುತ್ತೆ!! ಯಾಕೆಂದರೆ ಪಾಕಿಸ್ತಾನ ಕಟು ಮುಸ್ಲಿಂ ರಾಷ್ಟ್ರವಾಗಿದ್ದರೂ ಕೂಡ ಚೀನಾ ಪಾಕಿಸ್ತಾನದೊಂದಿಗೆ ಸ್ನೇಹದಿಂದಿದ್ದು, ಪಾಕಿಸ್ತಾನಕ್ಕೆ ಹೆಚ್ಚಿನ ಸಹಕಾರದೊಂದಿಗೆ ಒಲವನ್ನು ತೋರಿಸುತ್ತಿದೆ. ಆದರೆ ತನ್ನ ದೇಶದಲ್ಲಿರುವ ಮುಸ್ಲಿಂ ವಿದ್ಯಾರ್ಥಿಗಳಿಗೆ ಶಾಲೆಯ ತರಗತಿಯಲ್ಲಿ ಅಥವ ಯಾವುದೇ ಇಸ್ಲಾಮಿಕ್ ಧಾರ್ಮಿಕ ಸ್ಥಳಗಳಲ್ಲಿ ಅವರವರ ಧಾರ್ಮಿಕ ಗ್ರಂಥಗಳನ್ನು ಓದುವುದನ್ನೇ ನಿಷೇಧಿಸಿದೆ ಎಂದರೆ ಅದು ಪರಮಾಶ್ಚರ್ಯ!!

ಆದರೆ ಚೀನಾ ಒಂದು ನಾಸ್ತಿಕ ದೇಶವಾಗಿದ್ದು ಅಲ್ಲಿ ದೇವರನ್ನು ಪೂಜಿಸುವುದು ತುಂಬಾ ಕಷ್ಟದ ವಿಚಾರವಾಗಿದೆ. ಚೀನಾ ಕಮ್ಯುನಿಸ್ಟ್ ದೇಶವಾದ್ದರಿಂದ ಕಮ್ಯುನಿಸ್ಟರು ಧರ್ಮ, ದೇವರು ಎಂಬ ವಿಷಯಗಳನ್ನು ನಂಬೋದೆ ಇಲ್ಲ. ಆದರೆ ಕಳೆದ ವರ್ಷ ಅಕ್ಟೋಬರ್ ನಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಚೀನಾ ಅನೇಕ ನಿರ್ಧಾರಗಳನ್ನು ತೆಗೆದುಕೊಂಡಿತ್ತಲ್ಲದೇ, ಅವುಗಳ ಪ್ರಕಾರ ಮುಸ್ಲಿಂ ಧಾರ್ಮಿಕ ವಿಧಾನಗಳನ್ನು ತಹವಂದಿಗೆ ತರುವುದೇ ಚೀನಾದ ಉದ್ದೇಶವಾಗಿತ್ತು.
ಬುರ್ಕಾ ಮತ್ತು ಗಡ್ಡವನ್ನು ನಿಷೇಧಿಸಿದೆ ಚೀನಾ ಸರ್ಕಾರ!!

ಚೀನಾ ಮುಸಲ್ಮಾನರ ವಿರುದ್ಧವಾಗಿ ಮೊದಲ ಬಾರಿಗೆ ಜಾರಿಗೆ ತಂದಹ ಕಾನೂನುಗಳಲ್ಲ, ಇದಕ್ಕೂ ಮೊದಲು ಚೀನಾ ಮುಸ್ಲಿಮರನ್ನು ನಿಯಂತ್ರಿಸಲು ಹಲವು ಕಾನೂನುಗಳನ್ನು ತಂದಿದೆ. ಚೀನಾ ಸರ್ಕಾರ ಕಳೆದ ತಿಂಗಳುಗಳ ಹಿಂದೆಯಷ್ಟೇ ಮಹತ್ವದ ಆದೇಶ ಹೊರಡಿಸಿದ್ದು, ಅಲ್ಲಿನ ಸ್ಥಳೀಯರು ಅಕ್ಕಪಕ್ಕದವರಿಗೆ ಮಸೀದಿಯ ಸ್ಪೀಕರ್‍ಗಳಿಂದ ತೊಂದರೆಯಾಗುತ್ತಿದೆ ಎಂದು ದೂರು ಕೊಟ್ಟಿದ್ದರಿಂದ ಚೀನಾ ಸರಕಾರ ಕ್ವಾ0ಗೈ ಪ್ರದೇಶದ 300 ಮಸೀದಿಗಳ ಮೇಲಿನ ಸ್ಪೀಕರ್‍ಗಳನ್ನು ತೆಗೆದುಹಾಕಿತ್ತು.

ಚೀನಾ ಸರ್ಕಾರ ಬರೀ ಬೋಂಗಾ ಅಷ್ಟೇ ನಿಷೇಧಿಸಿಲ್ಲ ಬುರ್ಕಾ ಮತ್ತು ಗಡ್ಡವನ್ನು ನಿಷೇಧಿಸಿರುವುದು ಇನ್ನೂ ವಿಶೇಷ!! ಆದರೆ ಇದೀಗ ಅದರ ಬೆನ್ನಲ್ಲೇ ಚೀನಾ ಸರ್ಕಾರ ಕುರಾನಿನ ಎಲ್ಲಾ ಪ್ರತಿ ಮತ್ತು ಪ್ರಾರ್ಥನೆಯ ಮ್ಯಾಟ್ ಅನ್ನು ಹಿಂತಿರುಗಿಸಿ ಅಥವಾ ಕಠಿಣ ಶಿಕ್ಷೆಯನ್ನು ಎದುರಿಸಿ ಎಂದು ಅಲ್ಲಿನ ಮುಸ್ಲಿಮರಿಗೆ ಆದೇಶವನ್ನೂ ನೀಡಿದೆ.

ಇನ್ನು, ಕ್ಸಿನ್ಜಿಯಾಂಗ್ ವಾಯವ್ಯ ಭಾಗದಲ್ಲಿ ಮುಸ್ಲಿಮರ ವಿರುದ್ಧ ಚೀನೀಯ ಅಧಿಕಾರಿಗಳು ಮತ್ತೆ ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿದ್ದಾರೆ. ಆ ಪ್ರದೇಶದ ಮೂಲಗಳ ಪ್ರಕಾರ, ಜನಾಂಗೀಯ ಅಲ್ಪಸಂಖ್ಯಾತ ಮುಸ್ಲಿಂ ಕುಟುಂಬಗಳು ಕುರಾನ್ ಮತ್ತು ನಮಾಜ್ ಮಾಡುವ ಮ್ಯಾಟ್ ಸೇರಿದಂತೆ ಧಾರ್ಮಿಕ ವಸ್ತುಗಳನ್ನು ಕಡ್ಡಾಯವಾಗಿ ಹಿಂದಿರುಗಿಸುವಂತೆ ಮುಸ್ಲಿಂ ಕುಟುಂಬಗಳಿಗೆ ಮತ್ತು ಮಸೀದಿಗಳಿಗೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಚೀನಾದಲ್ಲಿ ಎಲ್ಲ ಧರ್ಮದವರಿಗೆ ತಮ್ಮ-ತಮ್ಮ ಪದ್ಧತಿಯಿಂದ ಉಪಾಸನೆ ಮಾಡುವ ಸ್ವಾತಂತ್ರ್ಯವನ್ನು ಕೊಡಲಾಗಿದೆ ಆದರೆ ಇತರರಿಗೆ ಯಾವುದೇ ರೀತಿಯ ಹಾನಿಯಾಗದಂತೆ ಅಥವಾ ಅವರ ಸ್ವಾತಂತ್ರ್ಯಕ್ಕೆ ಅಡ್ಡಿಯಾಗದಂತೆ ಉಪಾಸನೆಯನ್ನು ಮಾಡಬೇಕು. ಆದರೆ ಇಲ್ಲಿನ ಮೂಲಭೂತ ಇಸ್ಲಾಮಿಗರಿಂದ ಆಂತರಿಕ ಬೆದರಿಕೆಗಳನ್ನು ಅನುಭವಿಸುತ್ತಿದೆ ಹೀಗಾಗಿ ಚೀನಾ ಸರ್ಕಾರ ಈ ಕಠಿಣ ಕ್ರಮವನ್ನು ಕೈಗೊಂಡಿದೆ ಎಂದು ಚೀನಾ ಸರ್ಕಾರ ಸ್ಪಷ್ಟ ಪಡಿಸಿತ್ತು.

ಮಾನವ ಹಕ್ಕುಗಳ ಹೋರಾಟಗಾರರು ಚೀನಾ ಸರ್ಕಾರಕ್ಕೆ ಈ ಕುರಿತಂತೆ ಪ್ರಶ್ನಿಸಿದಾಗ ಚೀನಾ ಸರ್ಕಾರ ಖಡಕ್ ಆಗಿ ಉತ್ತರಿಸಿದ್ದು, “ಮೂಲಭೂತ ಇಸ್ಲಾಂನಿಂದ ಆಂತರಿಕ ಬೆದರಿಕೆಗಳನ್ನು ಚೀನಾ ಎದುರಿಸುತ್ತಿದೆ ಮತ್ತು ರಾಷ್ಟ್ರಿಯ ಭದ್ರತೆಗೆ ಸವಾಲಾಗಿರುವ ಮುಸ್ಲಿಮರ ವಿರುದ್ಧ ಕಾರ್ಯಾಚರಣೆ ಅತ್ಯಗತ್ಯ” ಎಂದು ಖಡಕ್ ಆಗಿ ಉತ್ತರಿಸಿದೆ. ಭಾರತದ ಕಾಶ್ಮೀರದಲ್ಲಿ ಸೈನಿಕರ ಮೇಲೆ ಕಲ್ಲು ಹೊಡೆಯುವಂತೆ ಚೀನಾದಲ್ಲೂ ಹೊಡೆಯುತ್ತಾರೆ. ಆದರೆ ಚೀನಾ ಸರ್ಕಾರ ಅವರಿಗೆ ಕೊಡುವ ಶಿಕ್ಷೆಗೆ ಜೀವನದಲ್ಲಿ ಅವರು ಯಾವತ್ತಿಗೂ ಕಲ್ಲೇ ಮುಟ್ಟದ ಹಾಗೆ ಮಾಡುತ್ತಾರೆ.

ಸ್ವಿಟ್ಜರ್ಲೆಂಡ್ ನಲ್ಲಿಯೂ ಕೂಡಾ ಬುರ್ಕಾ ನಿಷೇಧಿಸಲಾಗಿದೆ!!

ಚೀನಾ ಸರ್ಕಾರವು ಶಾಲೆಯ ತರಗತಿಯಲ್ಲಿ ಅಥವ ಯಾವುದೇ ಇಸ್ಲಾಮಿಕ್ ಧಾರ್ಮಿಕ ಸ್ಥಳಗಳಲ್ಲಿ ಅವರವರ ಧಾರ್ಮಿಕ ಗ್ರಂಥಗಳನ್ನು ಓದುವುದನ್ನೇ ನಿಷೇಧಿಸಿದ್ದಲ್ಲದೇ ಬುರ್ಕಾ ಮತ್ತು ಗಡ್ಡವನ್ನು ನಿಷೇಧಿಸಿದೆ. ಇನ್ನು ಚೀನಾದಲ್ಲಿ ನಿಷೇಧಿಸಿದಂತೆ ಸ್ವಿಟ್ಜರ್ಲೆಂಡ್ ನಲ್ಲಿಯೂ ಕೂಡಾ ಬುರ್ಕಾ ನಿಷೇಧಿಸಲಾಗಿದೆ. ಒಂದು ಸಲ ಸ್ವಿಟ್ಜರ್ಲೆಂಡ್ ನ ಸಂಸತ್ತಿನಲ್ಲಿ ಚರ್ಚೆ ನಡೆದಾಗ ಒಬ್ಬ ಸಂಸದ ಎದ್ದು ನಿಂತು ಹೇಳ್ತಾನೆ. “ನನ್ನ ದೇಶ ಸುರಕ್ಷಿತವಾಗಿರಬೇಕೆಂದರೆ ನನ್ನ ದೇಶದಲ್ಲಿ ಬುರ್ಕಾ ನಿಷೇಧವಾಗಬೇಕು. ಯಾಕೆಂದರೆ ಬುರ್ಕಾದ ಒಳಗಡೆ ಪ್ರತಿ ಸಂದರ್ಭದಲ್ಲಿಯೂ ಮಹಿಳೆಯೇ ಇರುತ್ತಾಳೆಂದು ಹೇಳಲಾಗುವುದಿಲ್ಲ. ಹಾಗಾಗಿ ನನ್ನ ದೇಶ ಸುರಕ್ಷಿತವಾಗಿರಬೇಕೆಂದರೆ ನನ್ನ ದೇಶದಲ್ಲಿ ಬುರ್ಕಾ ನಿಷೇಧವಾಗಬೇಕು”

ಒಟ್ಟಿನಲ್ಲಿ ಚೀನಾ ಸರ್ಕಾರ ತನ್ನ ಅಂತರಿಕ ಭದ್ರತಾ ದೃಷ್ಟಿಯಿಂದ ಕುರಾನಿನ ಎಲ್ಲಾ ಪ್ರತಿ ಮತ್ತು ಪ್ರಾರ್ಥನೆಯ ಮ್ಯಾಟ್ ಅನ್ನು ಹಿಂತಿರುಗಿಸಿ ಅಥವಾ ಕಠಿಣ ಶಿಕ್ಷೆಯನ್ನು ಎದುರಿಸಿ ಎಂದು ಅಲ್ಲಿನ ಮುಸ್ಲಿಮರಿಗೆ ಕಟಕ್ ಆಗಿ ಆದೇಶ ನೀಡಿದ್ದು ಮುಸಲ್ಮಾನರಿಗೆ ಭಯ ಹುಟ್ಟಿಸಿದ್ದಂತೂ ಅಕ್ಷರಶಃ ನಿಜ!!

ಆದರೆ ಭಾರತ ದೇಶದಲ್ಲಿ ಮುಸಲ್ಮಾನರಿಗೆ ಎಲ್ಲ ಸೌಲಭ್ಯಗಳನ್ನು, ಧಾರ್ಮಿಕ ಸ್ವಾತಂತ್ರ್ಯವನ್ನು ಯಥೇಚ್ಚವಾಗಿ ನೀಡಿದರೂ ಕೂಡ ಭಾರತ ಅಸಹಿಷ್ಣು ರಾಷ್ಟ್ರವಾಗಿಯೇ ಕರೆಸಿಕೊಳ್ಳುತ್ತಿರುವುದು ಮಾತ್ರ ವಿಪರ್ಯಾಸ!! ಆದರೆ ಭಾರತದಲ್ಲಿ ಚೀನಾದಂತಹ ಕಾನೂನು ಬಂದರೆ ದೇಶದಲ್ಲಿ ಅದೇನೇನೂ ನಡೆದು ಬಿಡುತ್ತೋ ನಾ ಕಾಣೆ!!
ಮೂಲ: http://www.nationalistviews.com/china-conditions-on-muslims/
– ಅಲೋಖಾ

Tags

Related Articles

Close