ಪ್ರಚಲಿತ

ಬಡ ಮಕ್ಕಳ ಅನ್ನವನ್ನು ಕಸಿದ ರಾಜ್ಯದ ಸಚಿವನ ವಿರುದ್ಧ ಆ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ನಡೆಸಿದ ಅಣಕು ಪ್ರದರ್ಶನ ಹೇಗಿತ್ತು ಗೊತ್ತೇ..?

ಸುಮಾರು 5-6 ತಿಂಗಳ ಹಿಂದಿನ ವಿಷಯ. ಹಿಂದೂ ಸಮಾಜದ ಪಾಲಿಗೆ ದಕ್ಷಿಣದ ಶಿವಾಜಿ ಎಂದೇ ಖ್ಯಾತರಾಗಿರುವ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಆಡಳಿತದ ವಿದ್ಯಾಸಂಸ್ಥೆಯಾದ ಶ್ರೀ ರಾಮ ವಿದ್ಯಾ ಕೇಂದ್ರಕ್ಕೆ ಒಂದು ಆಘಾತ ಸುದ್ಧಿಯೊಂದು ಕೇಳಿ ಬಂದಿತ್ತು. ಸರ್ಕಾರದ ಮುಜುರಾಯಿ ಇಲಾಖೆಗೆ ಒಳಪಟ್ಟ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಾಲಯದಿಂದ ಕಲ್ಲಡ್ಕ ಶ್ರೀ ರಾಮ ವಿದ್ಯಾ ಸಂಸ್ಥೆಗೆ ಬರುತ್ತಿದ್ದ ಅನ್ನ ದಾಸೋಹವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಸೇರಿಕೊಂಡು ನಿಲ್ಲಿಸಿಬಿಟ್ಟಿದ್ದಾರೆ. ಇನ್ನು ಮುಂದೆ ಆ ಶಾಲೆಗೆ ಊಟಕ್ಕೆ ಅನ್ನ ಬರೋದಿಲ್ಲ ಅನ್ನುವ ವಿಷಯ ನಿಜವಾಗಿಯೂ ಆಘಾತವನ್ನೇ ತಂದಿತ್ತು.

blob:https://web.whatsapp.com/9ce7fb46-b9bc-4357-891c-747be89ce78e

ಅಷ್ಟರಲ್ಲೇ ಇದರ ಹಿಂದಿರುವ ಕೈವಾಡ ಬಹಿರಂಗವಾಗುತ್ತೆ. ಡಾ.ಪ್ರಭಾಕರ್ ಭಟ್‍ರ ಕಠೋರ ಹಿಂದುತ್ವವಾದವೇ ಸರ್ಕಾರದ ಕೆಂಗಣ್ಣಿಗೆ ಬೀಳಲು ಕಾರಣವಾಗುತ್ತೆ. ರಾಜ್ಯದ ಪ್ರಭಾವಿ ಸಚಿವರಾದ ದಕ್ಷಿಣ ಕನ್ನಡ ಜಿಲ್ಲ ಉಸ್ತುವಾರಿ ಸಚಿವ ರಮಾನಾಥ್ ರೈ ಕುತಂತ್ರ ಬಹಿರಂಗವಾಗುತ್ತದೆ. ರಮಾನಾಥ್ ರೈ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಬರೆದ ಪತ್ರವೂ ರಾಜ್ಯದ ಕೆಂಗಣ್ಣಿಗೆ ಕಾರಣವಾಗಿತ್ತು.

ಅದಾಗಲೇ ಬಂಟ್ವಾಳದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಶರತ್ ಮಡಿವಾಳರ ಭೀಕರ ಹತ್ಯೆಯಾಗಿತ್ತು. ಈ ಹತ್ಯೆಯ ಹಿಂದೆ ಮುಸಲ್ಮಾನ ಮೂಲಬೂತವಾದಿಗಳ ಕುಮ್ಮಕ್ಕು ಬಹಿರಂಗವಾಗುತ್ತದೆ. ಡಾ.ಪ್ರಭಾಕರ್ ಭಟ್ ಸಹಿತ ಅನೇಕ ಹಿಂದೂ ಮುಖಂಡರು ರಮಾನಾಥ್ ರೈ ವಿರುದ್ದ ಬೀದಿಗಿಳಿಯುತ್ತಾರೆ. ಇದರ ಪರಿಣಾಮವೇ ಕಲ್ಲಡ್ಕ ಶ್ರೀ ರಾಮ ವಿದ್ಯಾ ಸಂಸ್ಥೆಗೆ ಬರುತ್ತಿದ್ದ ಅನ್ನವನ್ನು ಬಂದ್ ಮಾಡಿದ್ದು.

ತಟ್ಟೆ ಬಡಿದು ಪ್ರತಿಭಟಿಸಿದ್ದ ಮಕ್ಕಳು…

ಯಾವಾಗ ರಾಜ್ಯ ಕಾಂಗ್ರೆಸ್ ಸರ್ಕಾರ ಇಂತಹ ಅಮಾನವೀಯ ನಿರ್ಧಾರವನ್ನು ಕೈಗೊಳ್ಳುತ್ತೋ ಅಂದೇ ಅಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸಿಟ್ಟು ನೆತ್ತಿಗೇರಿತ್ತು. ಹೆತ್ತವರ ಆಕ್ರೋಷ ಮುಗಿಲು ಮುಟ್ಟಿತ್ತು. ಅಲ್ಲಿನ ಸುಮಾರು 3 ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಅನ್ನದ ತಟ್ಟೆಯನ್ನು ಹಿಡಿದು ಬೀದಿಗಿಳಿದು ಪ್ರತಿಭಟನೆಯಮನ್ನು ನಡೆಸುತ್ತಾರೆ. ಅನ್ನದ ತಟ್ಟೆಯನ್ನು ಬಡಿಯುವ ಮೂಲಕ ತಮ್ಮ ಆಕ್ರೋಷವನ್ನು ವ್ಯಕ್ತಪಡಿಸುತ್ತಾರೆ.

ಬತ್ತ ಬೆಳೆದು ಸರ್ಕಾರಕ್ಕೆ ಸವಾಲೆಸೆದ ವಿದ್ಯಾರ್ಥಿಗಳು…

ಮಕ್ಕಳ ಪ್ರತಿಭಟನೆ ಇಷ್ಟಕ್ಕೇ ನಿಲ್ಲದೆ ಮತ್ತೂ ಮುಂದುವರೆದಿತ್ತು. ಮಕ್ಕಳು ಗದ್ದೆಗೆ ಇಳಿದು ತಮ್ಮ ಸಂಸ್ಥೆಗೆ ಬೇಕಾಗುವ ಅಕ್ಕಿಯನ್ನು ತಾವೇ ಬೆಳೆದು, ಅದನ್ನು ಕಟಾವು ಮಾಡಿ. ಎಲ್ಲಾ ಕೆಲಸಗಳನ್ನು ಮಾಡಿ ಬೇಶ್ ಅನ್ನಿಸಿಕೊಂಡಿದ್ದರು. ಈ ಕೆಲಸಕ್ಕೆ ಸ್ವತಃ ಮಕ್ಕಳ ಜೊತೆಗೆ ಡಾ.ಪ್ರಭಾಕರ್ ಭಟ್‍ರೇ ಬತ್ತ ಕಟಾವು ಮಾಡಲು ಗದ್ದೆಗೆ ಇಳಿದಿದ್ದರು. ಮಕ್ಕಳ ಪೋಷಕರೂ ಇದಕ್ಕೆ ಸಾಕ್ಷಿಯಾಗಿದ್ದರು. ರಾಜ್ಯದಲ್ಲಿ ಸರ್ಕಾರಕ್ಕೆ ಸವಾಲೆಸೆಯುವಂತಹ ಒಂದು ದಿಟ್ಟ ಕೆಲಸ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಮಕ್ಕಳಿಂದ ನಡೆದು ಹೋಯಿತು. ಇದು ಹೊಸ ಇತಿಹಾಸಕ್ಕೆ ನಾಂದಿಯಾಯಿತು.

ಅಣಕು ಪ್ರದರ್ಶನ ಮಾಡಿ ಸರ್ಕಾರಕ್ಕೆ ಧಿಕ್ಕಾರ ಕೂಗಿದ ವಿದ್ಯಾರ್ಥಿಗಳು…

ಕಲ್ಲಡ್ಕ ಕ್ರೀಡೋತ್ಸವ ಅಂದ್ರೆ ಅದೊಂದು ಹಬ್ಬ. ದೇಶದಲ್ಲಿ ನಿಜವಾಗಿಯೂ ಕ್ರೀಡಾಕೂಟ ಹೇಗೆ ನಡೆಯಬೇಕೋ ಅದೇ ರೀತಿ ನಡೆಯುತ್ತದೆ ಆ ಶಾಲೆಯ ಕ್ರೀಡಾ ಕೂಟ. ದೇಶದ ಪರಂಪರೆಯನ್ನು ಬಿಂಬಿಸುವ, ಸಾಂಸ್ಕøತಿಕ ವೈಭವವನ್ನು ಸಾರುವ ಈ ಕ್ರೀಡಾಕೂಟದಲ್ಲಿ ಎಲ್ಲವೂ ದೇಶೀಯ ವಿಜ್ರಂಭನೆಯೆ. ಎರಡು ವರ್ಷದ ಹಿಂದೆ ನಡೆದಿದ್ದ ಸಾಂಸ್ಕøತಿಕ ಹಾಗೂ ಮನೋರಂಜನಾತ್ಮಕವಾದ ಈ ಕ್ರೀಡಾ ಹಬ್ಬದಲ್ಲಿ ಕೇಂದ್ರದ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೂಡಾ ಭಾಗವಹಿಸಿ ಮೆಚ್ಚುಗೆ ವ್ಯಕ್ತ ಪಡಿಸಿದ್ದರು.

ಈ ಬಾರಿಯ ಕ್ರೀಡಾಕೂಟ ಮತ್ತಷ್ಟು ವಿಶೇಷವಾಗಿತ್ತು. ಅನ್ನ ಕಸಿದ ರಮಾನಾಥ್ ರೈ ಮೇಲಿನ ಸಿಟ್ಟು ಆ ಮಕ್ಕಳಲ್ಲಿ ಇನ್ನೂ ಕಡಿಮೆಯಾಗಿರಲಲಿಲ್ಲ. ಕ್ರೀಡಾಕೂಟದಲ್ಲೂ ಆ ಮಕ್ಕಳು ತಮ್ಮ ಆಕ್ರೋಷವನ್ನು ವ್ಯಕ್ತಪಡಿಸಿದ್ದರು. ತಾವು ನಡೆಸಿದ ಅಣಕು ಪ್ರದರ್ಶನ ಈಗ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆ ಶಾಲೆಯ ಸಾವಿರಾರು ಮಕ್ಕಳು ಎಂದಿನಂತೆ ಮಧ್ಯಾಹ್ನದ ಊಟವನ್ನು ಮಾಡುತ್ತಾ ಇರುತ್ತಾರೆ. ಇದ್ದಕ್ಕಿದ್ದ ಹಾಗೆ ಅಲ್ಲಿಗೆ ಇನ್ನೋವಾ ಕಾರೊಂದು ಆಗಮಿಸುತ್ತೆ. ಆ ಕಾರಿನಿಂದ ಒಂದು ದಡೂತಿ ದೇಹದ ವ್ಯಕ್ತಿ ಬೆಂಬಲಿಗರ ಸಹಾಯದಿಂದ ಕೆಳಗಿಳಿಯುತ್ತಾನೆ. ಕೆಳಗಿಳಿಯುತ್ತಲೇ, ಇದು ಆರ್‍ಎಸ್‍ಎಸ್ ನವರ ಶಾಲೆ. ಇಲ್ಲಿನ ಮಕ್ಕಳಿಗೆ ಸರ್ಕಾರದಿಂದ ನಯಾ ಪೈಸೆಯ ಸಹಕಾರವೂ ಸಿಗಬಾರದು. ಕೀಊಡಲೇ ಇಲ್ಲಿಗೆ ಬರುತ್ತಿದ್ದ ಅನ್ನವನ್ನು ನಿಲ್ಲಿಸುವಂತೆ ಆದೇಶಿಸುತ್ತೇನೆ ಎಂದು ಹೇಳುತ್ತಾನೆ. ಮಾತ್ರವಲ್ಲದೆ ಇನ್ನಾವ ಶಾಲೆಯಾದರೂ ಇದೆಯಾ ಎಂದು ಕೇಳಿದಾಗ ಪಕ್ಕದಲ್ಲಿದ್ದ ಮುಸಲ್ಮಾನ ಬೆಂಬಲಿಗರು ಪುನಚ್ಚದಲ್ಲಿರುವ ಶಾಲೆಯ ಬಗ್ಗೆ ಮಾತನಾಡುತ್ತಾರೆ. ಹಾಗಾದರೆ ತಡ ಯಾಕೆ ಅಲ್ಲಿಗೆ ಬರುತ್ತಿದ್ದ ಅನ್ನವನ್ನೂ ನಿಲ್ಲಿಸಿಬಿಡುತ್ತೇನೆ ಎಂದು ಹೇಳಿ ಅಲ್ಲಿಂದ ನಿರ್ಗಮಿಸುತ್ತಾನೆ. ನಂತರ ಅಲ್ಲಿನ ಮಕ್ಕಳು ತಟ್ಟೆಯನ್ನು ಬಡಿದು ಪ್ರತಿಭಟನೆ ನಡೆಸುತ್ತಾರೆ.

ಇದು ಸಚಿವ ರಮಾನಾಥ್ ರೈ ವಿರುದ್ಧ ಮಕ್ಕಳು ತೋರಿಸಿದ ಆಕ್ರೋಷದ ಪರಿ. ಈ ಬಗ್ಗೆ ಶ್ರೀ ರಾಮ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕಲ್ಲಡ್ಕ ಡಾ.ಪ್ರಭಾಕರ್ ಭಟ್‍ರನ್ನು ಕೇಳಿದರೆ ಇದರಲ್ಲಿ ಟಾಂಗ್ ಕೊಡುವುದೇನೂ ಇಲ್ಲ. ತಮಗೆ ಏನು ಅನ್ಯಾಯವಾಗಿದೆ ಅದನ್ನೇ ಮಕ್ಕಳು ತೋರಿಸಿದ್ದಾರೆ ಅಷ್ಟೆ. ಇದರಲ್ಲಿ ಟಾಂಗ್ ಕೊಡುವ ಅವಶ್ಯಕತೆಯೇ ಇಲ್ಲ. ಇದು ನಿಜ ವಿಷಯ ಎಂದು ಹೇಳಿದ್ದಾರೆ.

ಬಯಲಾಗಿತ್ತು ಅನ್ನ ಕಸಿದ ಸಚಿವರ ಕರಾಮತ್ತು…!

ಸರ್ಕಾರವೇ ಕ್ರಮ ಕೈಗೊಂಡಿದೆ. ಇದರಲ್ಲಿ ತನ್ನದೇನೂ ಹಸ್ತಕ್ಷೇಪವಿಲ್ಲ ಎಂದು ನುನುಚಿಕೊಳ್ಳುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ನಿಜಮುಖ ಬಯಲಾಗಿತ್ತು. ಸಾಮಾಜಿಕ ಹೋರಾಟಗಾರ, ಈ ಹಿಂದೆ ಕಾಂಗ್ರೆಸ್‍ನಲ್ಲಿದ್ದು ಸದ್ಯ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾಗಿರುವ ಹರಿಕೃಷ್ಣ ಬಂಟ್ವಾಳ ದಾಖಲೆಯೊಂದನ್ನು ಬಿಡುಗಡೆ ಮಾಡಿ ಸಚಿವರ ಕೈವಾಡವನ್ನು ದೃಢಪಡಿಸಿದ್ದಾರೆ. ಅನ್ನ ಕಸಿದ ಸರ್ಕಾರದ ಹಿಂದೆ ರಮಾನಾಥ್ ರೈ ಇದ್ದಾರೆ. ರೈ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರಕ್ಕೆ ಹೋಗುತ್ತಿದ್ದ ಅನ್ನವನ್ನು ನಿಲ್ಲಿಸುವಂತೆ ಪತ್ರ ಬರೆದಿದ್ದನ್ನು ಬಹಿರಂಗ ಪಡಿಸಿದ್ದಾರೆ.

ಪೋಸ್ಟ್ ಕಾರ್ಡ್ ನಡೆಸಿತ್ತು ಬೃಹತ್ ಆಂದೋಲನ…

ಯಾವಾಗ ಸರ್ಕಾರದಿಂದ ಇಂತಹ ಅಮಾನವೀಯ ಕೃತ್ಯಗಳ ಆದೇಶ ಹೊರಬಂತೋ ಅಂದು ಇಡೀ ಹಿಂದೂ ಸಮಾಜವೇ ಒಂದಾಗಿತ್ತು. ಹಲವಾರು ಮಂದಿ ಸಂಸ್ಥೆಗೆ ಸಹಾಯ ಮಾಡಲು ಧಾವಿಸಿದ್ದರು. ಈ ಮಧ್ಯೆ ಮಹೇಶ್ ವಿಕ್ರಮ್ ಹೆಗ್ಡೆ ನೇತೃತ್ವದ ನಮ್ಮ “ಪೋಸ್ಟ್ ಕಾರ್ಡ್” ಮಾಧ್ಯಮ ಸಂಸ್ಥೆಯು ವಿನೂತನ ಆಂದೋಲನವೊಂದನ್ನು ಜಾರಿಗೆ ತಂದಿತ್ತು. “ಭಿಕ್ಷಾಂದೇಹಿ” ಎಂಬ ಹೆಸರಿನ ಆಂದೋಲನವು ರಾಜ್ಯ ಹಾಗೂ ದೇಶವ್ಯಾಪಿಯಾಗಿ ಸದ್ದು ಮಾಡಿತ್ತು. ಎಲ್ಲಡೆಯಿಂದಲೂ “ಭಿಕ್ಷಾಂದೇಹಿ” ಹೆಸರಿನಲ್ಲಿ ಅಕ್ಕಿಯನ್ನು ತಂದು ಸಂಸ್ಥೆಗೆ ನೀಡಿದ್ದರು. ಸ್ವತಃ “ಪೋಸ್ಟ್ ಕಾರ್ಡ್” ಸಂಸ್ಥೆಯೇ 42 ಲಕ್ಷ ಹಣವನ್ನು ಕ್ರೋಡೀಕರಿಸಿದ್ದು ಮಾತ್ರವಲ್ಲದೆ 14 ಸಾವಿರ ಕೆಜಿ ಅಕ್ಕಿಯನ್ನು ಸಂಗ್ರಹಿಸಿ ಆ ವಿದ್ಯಾ ಸಂಸ್ಥೆಗೆ ದಾನವಾಗಿ ನೀಡಿತ್ತು. ಇದು ಕರ್ನಾಟಕದ ಇತಿಹಾದಲ್ಲೇ ಮೊದಲು ಹಾಗೂ ವಿನೂತನ ಆಂದೋಲನವಾಗಿತ್ತು.

ಒಟ್ಟಿನಲ್ಲಿ ಹಿಂದೂ ಮುಸ್ಲಿಂ ಎನ್ನದೆ ಎಲ್ಲರೂ ಒಟ್ಟಾಗಿ ವಿದ್ಯಾಭ್ಯಾಸ ಮಾಡುವ ಕಲ್ಲಡ್ಕ ವಿದ್ಯಾ ಸಂಸ್ಥೆಯ ಬಡ ಮಕ್ಕಳ ಮೇಲೆ ಸರ್ಕಾರ ತೋರಿಸಿದ ಇಂತಹ ಹೀನ ಕ್ರೌರ್ಯವು ರಾಜ್ಯದ ಜನರಲ್ಲಿ ಆಕ್ರೋಷವನ್ನು ಹುಟ್ಟಿಸುವಂತೆ ಮಾಡಿತ್ತು. ಈಗ ಅದೇ ಸಂಸ್ಥೆಯ ಮಕ್ಕಳೇ ಸರ್ಕಾರದ ವಿರುದ್ಧ ತಮ್ಮ ಅಣಕು ಪ್ರದರ್ಶನಗಳನ್ನು ಪ್ರದರ್ಶಿಸುವ ಮೂಲಕ ಸರ್ಕಾರಕ್ಕೆ ದಿಟ್ಟ ಉತ್ತರವನ್ನು ನೀಡಿದ್ದಾರೆ.

-ಸುನಿಲ್ ಪಣಪಿಲ

Tags

Related Articles

Close