ಪ್ರಚಲಿತ

ಬಿಗ್ ಬ್ರೇಕಿಂಗ್!! ದೆಹಲಿ ಸಿಎಂ ಸ್ಥಾನಕ್ಕೆ ಅರವಿಂದ ಕೇಜ್ರಿವಾಲ್ ರಾಜೀನಾಮೆ..?! ಕೇಜ್ರಿವಾಲ್ ರ ಮುಂದಿನ ನಡೆ ಏನು ಗೊತ್ತಾ?

ಅವರು ದೇಶದಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟದಿಂದಲೇ ಮನೆ ಮಾತಾಗಿದ್ದ ಅಭಿನವ ಗಾಂಧಿ. ಯುಪಿಎ ಮಾಡಿದ್ದ ಬ್ರಹ್ಮಾಂಡ ಭ್ರಷ್ಟಾಚಾರಗಳಿಂದ ರೋಸಿ ಹೋಗಿದ್ದ ದೇಶಕ್ಕೆ ಹೋರಾಟ ಎಂಬ ಕಿಚ್ಚು ಹಚ್ಚಿದ್ದ ನಾಯಕ. ಥೇಟ್ ಮಹಾತ್ಮ ಗಾಂಧಿಯಂತೆ ಕಾಣಿಸಿಕೊಳ್ಳುವ ಆ ವ್ಯಕ್ತಿಯೇ ಅಣ್ಣಾ ಹಜಾರೆ. ಹೌದು… ತಾನು ರಾಜಕೀಯಕ್ಕೆ ಎಂಟ್ರಿ ಕೊಡದಿದ್ದರೂ ರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಪಾತ್ರವನ್ನು ವಹಿಸಿದವರು ಅಣ್ಣಾ ಹಜಾರೆ. ಇವರು ಮಾಡಿದ್ದ ಹೋರಾಟ ಅಂದು ಯುವಜನತೆಯನ್ನು ಬಡಿದೆಬ್ಬಿಸಿತ್ತು. ದೇಶದ ಪ್ರತಿಯೊಬ್ಬ ಯುವಕನೂ ಅಣ್ಣಾ ಹಜಾರೆ ಅವರ ಮಾರ್ಗವನ್ನು ತುಳಿದು ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.

“ಅಣ್ಣಾ” ಹೋರಾಟದಲ್ಲಿ ಹುಟ್ಟಿ ಬಂದನೊಬ್ಬ “ತಮ್ಮ”..!

ಅಣ್ಣಾ ಹಜಾರೆಯವರ ಹೋರಟ ಯಾವಾಗ ದೇಶದಲ್ಲಿ ಹೊಸ ಆಂದೋಲವನ್ನು ಸೃಷ್ಟಿಸಿತ್ತೋ ಅಂದಿನಿಂದ ದೇಶ ನವ ಪಥದಲ್ಲಿ ಸಾಗಿತ್ತು. ಈ ಹೋರಾಟದಲ್ಲಿ ಒಂದು ಹಸುಕೂಸೊಂದು ಹುಟ್ಟಿಕೊಂಡಿತ್ತು. ದೇಶದ ಜನತೆಗೆ ಈ ವ್ಯಕ್ತಿ ಯಾರು ಅಂತಾನೆ ಗೊತ್ತಿಲ್ಲದ ಸಮಯದಲ್ಲಿ ಅಣ್ಣಾ ಹಜಾರೆಯವರ ಹೋರಾಟದಲ್ಲಿ ಮೆಲ್ಲನೆ ತೂರಿಕೊಂಡು ಬಂದು ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಂಡಿದ್ದರು. ಅಂದ ಹಾಗೆ ಆ ವ್ಯಕ್ತಿ ಬೇರಾರೂ ಅಲ್ಲ. ಅವರೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್.

ಅಣ್ಣಾ ಹಜಾರೆಯವರ ಹೋರಾಟದಲ್ಲಿ ಸಕ್ರಿಯವಾಗಿ ಬೆರೆತುಕೊಂಡು ನಂತರ ಅದನ್ನೇ ಬಂಡವಾಳವಾಗಿ ಇಟ್ಟುಕೊಂಡು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು
ಅರವಿಂದ್ ಕೇಜ್ರಿವಾಲ್. ತಾನೊಬ್ಬ ಆರ್‍ಟಿಐ ಕಾರ್ಯಕರ್ತನಾಗಿದ್ದು, ನಯಾ ಪೈಸೆಯ ರಾಜಕೀಯ ಅನುಭವವೇ ಇಲ್ಲದ ಓರ್ವ ರಾಜಕಾರಣಿ ಅದೇಗೋ ದೆಹಲಿಯ ಮುಖ್ಯಮಂತ್ರಿಯಾಗಿದ್ದು ಇತಿಹಾಸ.

ರಾಜೀನಾಮೆ ನೀಡಲು ಮುಂದಾದ ಅರವಿಂದ ಕೇಜ್ರಿವಾಲ್..!

ತನ್ನ ಆಮ್ ಆದ್ಮೀ ಪಕ್ಷದಿಂದ ಮುಖ್ಯಮಂತ್ರಿ ಗಾದಿಗೆ ಏರಿದ್ದ ಅರವಿಂದ ಕೇಜ್ರಿವಾಲ್ ದಿನಕ್ಕೊಂದು ಅವಾಂತರದಲ್ಲೇ ಸುದ್ಧಿಯಾಗುತ್ತಿದ್ದರು. ತನ್ನ
ಕಾರ್ಯವೈಖರಿಯಿಂದಲೇ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದ ಕೇಜ್ರಿವಾಲ್ ಈಗ ಮತ್ತೊಮ್ಮೆ ಪ್ರಚಾರಕ್ಕೆ ಬಂದಿದ್ದಾರೆ. ಇದ್ದಕ್ಕಿದ್ದ ಹಾಗೆ ಅರವಿಂದ ಕೇಜ್ರಿವಾಲ್ ತನ್ನ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಈವರೆಗೂ ತಾನು ಮುಖ್ಯಮಂತ್ರಿಯಾಗಬೇಕೆಂದು ಹಂಬಲಿಸುತ್ತಿದ್ದ ಅರವಿಂದ ಕೇಜ್ರಿವಾಲ್ ಈ ಬಾರಿ ಅದೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು ವಿಶೇಷವಾಗಿದೆ.

ರಾಜ್ಯಸಭೆಗೆ ಸ್ಪರ್ಧಿಸುತ್ತಾರಾ ಕೇಜ್ರಿವಾಲ್..?

ಆಮ್ ಆದ್ಮೀ ಪಕ್ಷದ ಮೂಲಕ ರಾಜಕೀಯಕ್ಕೆ ದಾಪುಗಾಲಿಟ್ಟ ಅರವಿಂದ ಕೇಜ್ರಿವಾಲ್ ಈಗ ಇದ್ದಕ್ಕಿದ್ದ ಹಾಗೆ ರಾಜೀನಾಮೆ ನೀಡಲು ಮುಂದಾಗಿದ್ದು ಎಲ್ಲರು
ಹುಬ್ಬೇರುವಂತೆ ಮಾಡಿದೆ. ಆದರೆ ಕೇಜ್ರಿವಾಲ್ ಈ ಒಂದು ನಿರ್ಧಾರವನ್ನು ಕೈಗೊಳ್ಳಲು ಪ್ರಮುಖ ಕಾರಣವಿದೆ. ಅದು ರಾಜ್ಯ ಸಭಾ ಚುನಾವಣೆ.

ಹೌದು. ಜನವರಿಯಲ್ಲಿ ರಾಜ್ಯಸಭೆಗೆ ಚುನಾವಣೆ ನಡೆಯಲಿದ್ದು ಈ ಚುನಾವಣೆಗೆ ತಾನು ಸ್ಪರ್ಧಿಸುವ ಅನಿವಾರ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ರಾಜ್ಯಸಭೆಗೆ ಸ್ಪರ್ಧಿಸುವ ಬಗ್ಗೆ ಯಾರೂ ಒಲವು ತೋರಿಸದ ಹಿನ್ನೆಲೆಯಲ್ಲಿ ತಾನೇ ಖುದ್ದು ಸ್ಪರ್ಧೆಗೆ ಇಳಿಯುವ ಸಾಧ್ಯತೆಗಳು ದಟ್ಟವಾಗಿದೆ. ಬಹಳ ಕಷ್ಟ ಪಟ್ಟು ಪಕ್ಷವನ್ನು ಕಟ್ಟಿ ಬೆಳೆಸಿ, ಆ ಪಕ್ಷವನ್ನು ಅಧಿಕಾರಕ್ಕೆ ತಂದು, ನಂತರ ಮುಖ್ಯಮಂತ್ರಿಯೂ ಆಗಿ, ಈಗ ಒಮ್ಮೆಲೆ ರಾಜೀನಾಮೆ ನೀಡುತ್ತಾರೆಂಬ ಸುದ್ದಿ ಕೇಳಿದ ತಕ್ಷಣ ಎಲ್ಲರಿಗೂ ಶಾಕ್ ಆಗಿತ್ತು. ಆದರೆ ಅದರ ಹಿಂದಿರುವ ರಹಸ್ಯ ಮಾತ್ರ ನಿಗೂಢ.

ಜನವರಿಯಲ್ಲಿ ನಡೆಯಲಿದೆ ರಾಜ್ಯಸಭಾ ಚುನಾವಣೆ…

ಜನವರಿಯಲ್ಲಿ ರಾಜ್ಯ ಸಭೆಗೆ ಚುನಾವಣೆ ನಡೆಯಲಿದ್ದು ಈ ಚುನಾವಣೆಗೆ ಅರವಿಂದ ಕೇಜ್ರಿವಾಲ್ ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಈಗಾಗಲೇ ಮಾತುಗಳು ಕೇಳಿ ಬರುತ್ತಿದೆ. ಜನವರಿ 16ಕ್ಕೆ ರಾಜ್ಯಸಭಾ ಚುನಾವಣೆಯ ದಿನಾಂಕ ನಿಗಧಿಯಾಗಿದ್ದು ಜನವರಿ 05 ಕ್ಕೆ ನಾಮಪತ್ರ ಸಲ್ಲಿಸಲು ಕಡೆಯ ದಿನಾಂಕವಾಗಿದೆ. ಈ ಚುನಾವಣೆಯಲ್ಲಿ ದೆಹಲಿ ಮುಖ್ಯಮಂತ್ರಿ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಈ ಕಾರಣದಿಂದಲೇ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಸುದ್ಧಿ ವಾಹಿನಿಯೊಂದು ವರದಿ ಮಾಡಿದೆ.

ಈ ಹಿಂದೆ ಆಮ್ ಆದ್ಮಿ ಪಕ್ಷದಲ್ಲಿ ಒಳಜಗಳ ತಾರಕಕ್ಕೇರಿತ್ತು. ಹಲವಾರು ಕಾರಣಗಳಿಂದ ರಾಜಕೀಯ ಅಲ್ಲೋಲ ಕಲ್ಲೋಲಗಳಿಗೆ ಕಾರಣವಾಗಿತ್ತು. ದೆಹಲಿಯಲ್ಲಿ ರಾಜಕೀಯ ಅರಾಜಕತೆಯ ಅವಾಂತರವನ್ನೇ ಸೃಷ್ಟಿಸಿತ್ತು. ಭ್ರಷ್ಟಾಚಾರ ವಿರೋಧಿ ಹೋರಾಟದಿಂದಲೇ ರಾಜಕೀಯಕ್ಕೆ ಬಂದ ಅರವಿಂದ ಕೇಜ್ರಿವಾಲ್ ತಮ್ಮ ಸರಕಾರದಲ್ಲೇ ನಡೆಯುತ್ತಿರುವ ಭ್ರಷ್ಟತೆಯ ಬಗ್ಗೆ ರೋಸಿ ಹೋಗಿದ್ದರು. ತನ್ನ ಸರ್ಕಾರದ ಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿಗಳ ಸೆಕ್ಸ್ ವೀಡಿಯೋ ಭಾರೀ ಸುದ್ಧಿ ಮಾಡಿತ್ತು. ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ನಡೆಸಿದ್ದ ದಬ್ಬಾಳಿಕೆ ರಾಷ್ಟ್ರಮಟ್ಟದಲ್ಲಿ ಸುದ್ಧಿಯಾಗಿತ್ತು. ಇದರಿಂದ ಸ್ವತಃ ಅರವಿಂದ ಕೇಜ್ರಿವಾಲರೇ ಬೇಸತ್ತು ಹೋಗಿದ್ದರು.

ಹೀಗಾಗಿ ಮುಖ್ಯಮಂತ್ರಿ ಪದವಿ ಸಾಕಪ್ಪಾ ಎಂದು ರಾಜ್ಯ ಸಭೆಯ ಚುನಾವಣೆಯ ಮೇಲೆ ಕಣ್ಣು ಹಾಯಿಸಿದ್ದಾರೆ ಎನ್ನುವ ಸುದ್ಧಿಯೊಂದು ಈಗ ಭಾರೀ ಸದ್ದು
ಮಾಡುತ್ತಿದ್ದು ಕೇಜ್ರಿವಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಹಬ್ಬಿದೆ. ಮತ್ತೊಂದೆಡೆ ಪಕ್ಷದಲ್ಲಿ ರಾಜ್ಯಸಭೆಗೆ ಯಾರೂ ಸ್ಪರ್ಧಿಸಲು ಒಲವು ತೋರೋದಿಲ್ಲ ಎಂಬ ಕಾರಣಕ್ಕೆ ತಾನು ಸ್ಪರ್ಧಿಸುತ್ತಿರುವುದು ಎಂಬ ಮಾತುಗಳೂ ಕೇಳಿ ಬರುತ್ತಿದೆ. ಒಟ್ಟಾರೆ ಜನವರಿ 5ರವರೆಗೆ ಸಮಯವಿದ್ದು, ಅಷ್ಟರೊಳಗೆ ಏನಾಗುತ್ತೆ ಎಂಬುವುದನ್ನು ಕಾದುನೋಡಬೇಕಾಗಿದೆ.

-ಸುನಿಲ್ ಪಣಪಿಲ

Tags

Related Articles

Close