ಪ್ರಚಲಿತ

ಬಿಗ್ ಬ್ರೇಕಿಂಗ್: ಬಂದ್ ನಡುವೆಯೂ ಕರುನಾಡಿಗೆ ಲಗ್ಗೆಯಿಟ್ಟ ಬಿಜೆಪಿ ಚಾಣಾಕ್ಯ.!! ಬಂದ್‍ಗೆ ಕ್ಯಾರೇ ಎನ್ನದ ಕಮಲ ಪಡೆಗಳು.!!

ಬಂದ್ ಬಂದ್ ಬಂದ್… ಭಾರತೀಯ ಜನತಾ ಪಕ್ಷದ ವಿರುದ್ಧ ಕನ್ನಡ ಸಂಘಟನೆಗಳ ಜೊತೆಗೂಡಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಕರ್ನಾಟಕ ಬಂದ್. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಆಗಮಿಸುವ ದಿನದಂದೇ ಕನ್ನಡ ಪರ ಸಂಘಟನೆಗಳು ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಬಂದ್ ಘೋಷಿಸಿದ್ದು, ಇದೊಂದು ರಾಜಕೀಯ ಪ್ರೇರಿತ ಬಂದ್ ಎಂಬುವುದು ಜಗದ್ಜಾಹೀರಾಗಿದೆ.

ಬಂದ್ ಲೆಕ್ಕಿಸದೆ ಕರುನಾಡಿಗೆ ಲಗ್ಗೆಯಿಟ್ಟ ಬಿಜೆಪಿ ಚಾಣಾಕ್ಯ…

ಅದೆಷ್ಟೇ ಬೊಬ್ಬೆ ಬಿಟ್ಟರೂ ಭಾರತೀಯ ಜನತಾ ಪಕ್ಷ ಮಾತ್ರ ತನ್ನ ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಲೇ ಇಲ್ಲ. ಇಂದು ನಿಗಧಿಯಾಗಿದ್ದ ಪರಿವರ್ತನಾ ಯಾತ್ರೆಯ ದಿನಾಂಕವನ್ನು ಬದಲಾವಣೆ ಮಾಡಲೇ ಇಲ್ಲ. ಅಮಿತ್ ಶಾ ಆಗಮನವಾಗುವುದಕ್ಕೆ ವಿರೋಧ ವ್ಯಕ್ತ ಪಡಿಸಿದ್ದ ಕುತಂತ್ರಿ ನೀತಿಗಳನ್ನು ಅನುಸರಿಸಿದ್ದ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಪ್ರೇರಿತ ಕನ್ನಡ ಸಂಘಟನೆಗಳು ಅದೇ ದಿನಾಂಕವನ್ನು ನಿಗಧಿ ಪಡಿಸಿ ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿದ್ದರು.

ಆದರೆ ಭಾರತೀಯ ಜನತಾ ಪಕ್ಷ ಈ ಕುತಂತ್ರೀ ನೀತಿಯನ್ನು ಸವಾಲಾಗಿ ಸ್ವೀಕರಿಸಿತ್ತು. ಯಾವುದೇ ಕಾರಣಕ್ಕೂ ನಾವು ನಿಗಧಿಪಡಿಸಿದ್ದ ದಿನಾಂಕವನ್ನು ಬದಲಾವಣೆ ಮಾಡೋದಿಲ್ಲ ಎಂಬ ದಿಟ್ಟ ಸಂದೇಶವನ್ನು ಸಾರಿತ್ತು. ಅಮಿತ್ ಶಾ ರಾಜ್ಯಕ್ಕೆ ಬರುವುದು ನಿಶ್ಚಿತ. ಕರ್ನಾಟಕ ಬಂದ್‍ಗೆ ನಮ್ಮ ಬೆಂಬಲ ಇಲ್ಲ ಎಂಬ ಘೋಷಣೆಯನ್ನು ಕರ್ನಾಟಕ ಭಾರತೀಯ ಜನತಾ ಪಕ್ಷ ಮಾಡಿತ್ತು.

ಅದರಂತೆಯೇ ಇಂದು ಮಧ್ಯಾಹ್ನ ಒಂದೂವರೆ ಗಂಟೆಗೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರುನಾಡಿಗೆ ಆಗಮಿಸಿದ್ದಾರೆ. ಕಾಂಗ್ರೆಸ್ ಪ್ರೇರಿತ ಕನ್ನಡ ಸಂಘಟನೆಗಳ ಬಂದ್‍ಗಳ ಬೆದರಿಕೆಯನ್ನು ಅಮಿತ್ ಶಾ ಲೆಕ್ಕಿಸಲೇ ಇಲ್ಲ. ಈ ಹಿಂದೆಯೇ ನಿಗಧಿಪಡಿಸಿದಂತೆ ಮೈಸೂರಿನಲ್ಲಿ ನಡೆಯುವ ಪರಿವರ್ತನಾ ಯಾತ್ರೆಗೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ರಾಜಕೀಯ ಚಾಣಾಕ್ಯ ಅಮಿತ್ ಶಾ ಆಗಮಿಸಿದ್ದಾರೆ. ಇಂದು ಮಧ್ಯಾಹ್ನ 2:30ಕ್ಕೆ ಗಂಟೆಗೆ ಮೈಸೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಅಮಿತ್ ಶಾ ಅವರನ್ನು ಭಾರತೀಯ ಜನತಾ ಪಕ್ಷದ ನಾಯಕರು ಸ್ವಾಗತಿಸಿದ್ದಾರೆ. ಅಲ್ಲಿಂದ ನೇರವಾಗಿ ಮೈಸೂರಿನ ಪರಿವರ್ತನಾ ಯಾತ್ರೆಯ ಸಮಾವೇಶ ನಡೆಯುವ ಮೈದಾನಕ್ಕೆ ತೆರಳಿದ್ದಾರೆ.

ಅದೆಷ್ಟೇ ಪ್ರತಿರೋಧ ಒಡ್ಡಿದರೂ ಕಾರ್ಯಕ್ರಮದ ದಿನಾಂಕವನ್ನು ಬದಲಾವಣೆ ಮಾಡದ ಭಾರತೀಯ ಜನತಾ ಪಕ್ಷ ಇಂದು ನಡೆಯುವ ಪರಿವರ್ತನಾ ಯಾತ್ರೆಗೆ ಬದ್ಧತೆಯನ್ನು ತೋರಿತ್ತು. ಹೀಗಾಗಿಯೇ ಅಮಿತ್ ಶಾ ಅವರ ಭಾಷಣವನ್ನು ಕೇಳಲು ಸಾವಿರಾರು ಕಾರ್ಯಕರ್ತರು ಈಗಾಗಲೇ ಮೈಸೂರಿನ ಮೈದಾನಕ್ಕೆ ತೆರಳಿದ್ದಾರೆ. ಇಂದು ಸಂಜೆಯ ವೇಳೆ ಪರಿವರ್ತನಾ ಯಾತ್ರೆಯ ಬೃಹತ್ ಸಮಾವೇಶ ನಡೆಯಲಿದ್ದು, ಆ ಕಾರ್ಯಕ್ರಮದಲ್ಲಿ ಅಮಿತ್ ಶಾ ಸಾವಿರಾರು ಜನರನ್ನು ಉದ್ಧೇಶಿಸಿ ಮಾತನಾಡಲಿದ್ದಾರೆ.

ಮಹಾದಾಯಿ ಬಗ್ಗೆ ನಮಗೂ ಬೇಸರವಿದೆ. ನಮಗೂ ನ್ಯಾಯ ಬೇಕಾಗಿದೆ. ಭಾರತೀಯ ಜನತಾ ಪಕ್ಷದ ನಾಯಕರೂ ಈ ಬಗ್ಗೆ ಹೋರಾಟವನ್ನು ಮಾಡಿದ್ದಾರೆ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಧ್ಯಸ್ಥಿಕೆಯಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹಾಗೂ ಕರ್ನಾಟಕ ಭಾರತೀಯ ಜನತಾ ಪಕ್ಷದ ನಾಯಕರನ್ನು ಕರೆಸಿ ಮಾತನಾಡಿದ್ದರು. ಮಹದಾಯಿ ನದಿ ನೀರನ್ನು ಕರ್ನಾಟಕಕ್ಕೆ ಬಿಡಲು ನಾವು ಬದ್ಧರಿದ್ದೇವೆ ಎಂಬ ಸಂದೇಶವನ್ನೂ ನೀಡಿದ್ದರು. ಆದರೆ ಕಾಂಗ್ರೆಸ್ ಮಾತ್ರ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ನಿಂದಿಸಿಯೇ ಮಾತನಾಡತೊಡಗಿತು.

 

ಕಿಕ್ಕಿರಿದು ಸೇರಿದ್ದ ಜನ…

ಬಂದ್ ನಡುವೆ ಅಮಿತ್ ಶಾ ಭಾಗವಹಿಸುವ ಪರಿವರ್ತನಾ ಯಾತ್ರೆಗೆ ಜನ ಸೇರುತ್ತಾರಾ ಎಂಬ ಚಿಂತೆ ಭಾರತೀಯ ಜನತಾ ಪಕ್ಷದ ರಾಜ್ಯ ನಾಯಕರನ್ನು ಕಾಡುತ್ತಲೇ ಇತ್ತು. ಆದರೆ ಇಂದು ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಸಾವಿರ ಸಾವಿರ ಜನರು ಸಾಗರೋಪಾದಿಯಲ್ಲಿ ಆಗಮಿಸಿ ಕಾಂಗ್ರೆಸ್ ನಡೆಸುತ್ತಿರುವ ಕುತಂತ್ರಿ ರಾಜಕೀಯಕ್ಕೆ ಸವಾಲೊಡ್ಡಿ ಅಮಿತ್ ಶಾ ಸಮಾವೇಶದ ಯಾತ್ರೆಗೆ ಜೈ ಎಂದಿದ್ದಾರೆ.

ಕನ್ನಡ ಸಂಘಟನೆಗಳೂ ನೇರವಾಗಿ ಭಾರತೀಯ ಜನತಾ ಪಕ್ಷವನ್ನೇ ಟಾರ್ಗೆಟ್ ಮಾಡಿತೇ ಹೊರತು ಕಾಂಗ್ರೆಸ್ ನಾಯಕರ ಬಗ್ಗೆ ತುಟಿ ಬಿಚ್ಚಿಲ್ಲ. ಸೋನಿಯಾ ಗಾಂಧಿ ಗೋವಾ ಚುನಾವಣೆ ವೇಳೆಯಲ್ಲಿ ಜೀವ ಹೋದರೂ ಕರ್ನಾಟಕಕ್ಕೆ ನೀರು ಹರಿಯಲು ನಾನು ಬಿಡೋದಿಲ್ಲ ಎಂದು ಗೋವಾ ಜನತೆಗೆ ಮಾತು ಕೊಟ್ಟಿದ್ದರು. ಆದರೆ ಈವಾಗ ಕನ್ನಡ ಸಂಘಟನೆಗಳು ಮಾತ್ರ ಭಾರತೀಯ ಜನತಾ ಪಕ್ಷವನ್ನೇ ನೇರವಾಗಿ ನಿಂದಿಸುತ್ತಿವೆ. ಇದರ ಹಿಂದಿರುವ ಕಾಣದ “ಕೈ” ಕಾಂಗ್ರೆಸ್ ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ಒಟ್ಟಿನಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜ್ಯ ಬಂದ್ ನಡುವೆಯೂ ಕರ್ನಾಟಕಕ್ಕೆ ಲಗ್ಗೆ ಇಟ್ಟಿದ್ದು, ಮುಂದಿನ ಚುನಾವಣೆಯಲ್ಲಿ ಕರ್ನಾಕದಲ್ಲಿ ಕುತಂತ್ರೀ ನೀತಿಯನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಬುಡ ಸಮೇತ ಕಿತ್ತು ಹಾಕಲು ಪ್ರಯತ್ನ ಪಡುತ್ತಿದ್ದಾರೆ. ಕಾಂಗ್ರೆಸ್‍ನ ಈ ಕಳ್ಳಾಟಗಳೇ ಮುಂದಿನ ಚುನಾವಣೆಯಲ್ಲಿ ಪಾಠವಾಗಲಿದ್ದು, ಕಾಂಗ್ರೆಸ್ ಪಕ್ಷ ಸೋಲುನ್ನುವುದು ಖಚಿತ ಎನ್ನುವ ವಾತಾವರಣ ನಿರ್ಮಾಣವಾಗಿದೆ.

-ಸುನಿಲ್ ಪಣಪಿಲ

Tags

Related Articles

Close