ಪ್ರಚಲಿತ

ಬಿಗ್ ಶಾಕ್:!! ಬಂದ್‍ಗೆ ಕರೆ ನೀಡಿದ್ದ ವಾಟಾಳ್ ನಾಗರಾಜ್ ವಿರುದ್ಧ ಕೇಸ್!! ಕೇಸ್ ನೀಡಿದ ಕಾರಣವೇನು ಗೊತ್ತೇ..?!

ಮಹದಾಯಿ ಹೋರಾಟ ಇಂದು ನಿನ್ನೆಯದಲ್ಲ. ಅದು ಅನೇಕ ವರ್ಷಗಳಿಂದಲೂ ನಡೆಯುತ್ತಿರುವ ಹೋರಾಟ. ಈ ಹೋರಾಟ ಈಗ ಅಂದರೆ, ಚುನಾವಣೆ ಸಮಯದಲ್ಲಿ ಬುಗಿಲೆದ್ದಿದೆ. ದೇಶದೆಲ್ಲೆಡೆ ಕಮಲವನ್ನು ಅರಳಿಸಿದರಿಂದ ಕಂಗೆಟ್ಟಿ ಹೋಗಿರುವ ಕಾಂಗ್ರೆಸ್ ಪಕ್ಷ ಕರ್ನಾಟಕದ ಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲಲೇ ಬೇಕು ಎನ್ನುವ ಉದ್ಧೇಶದಿಂದ ಕುತಂತ್ರೀ ಬುದ್ಧಿಯನ್ನು ಅನುಸರಿಸಿದೆ. ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷವನ್ನು ಸೋಲಿಸಲೇ ಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ ಪಕ್ಷ ವಿವಿಧ ರೀತಿಯಲ್ಲಿ ತನ್ನ ರಾಜಕೀಯ ಜಾನ್ಮೆಯನ್ನು ಮೆರೆದಿದೆ. ಅದರಲ್ಲಿ ಮಹದಾಯಿ ಹೋರಾಟಕ್ಕೆ ಕನ್ನಡ ಸಂಘಟನೆಗಳನ್ನು ತನ್ನ ರಾಜಕೀಯ ದಾಳವಾಗಿರಿಸಿದ್ದೂ ಒಂದು.

ಧಿಡೀರ್ ಎಂಟ್ರಿ ಕೊಟ್ಟ ವಾಟಾಳ್ ನಾಗರಾಜ್…

ವಾಟಾಳ್ ನಾಗರಾಜ್. ನಕಲಿ ಕನ್ನಡ ಪರ ಹೋರಾಟಗಾರ. ಬಿಜೆಪಿ ವಿರೋಧ ಕಟ್ಟಿಕೊಂಡು ಸರ್ಕಾರಕ್ಕೆ ಸಲಾಮು ಹೊಡೆಯುವ ಸೋಕಾಲ್ಡ್ ಕನ್ನಡ ಪರ ಹೋರಾಟಗಾರ. ಎಲ್ಲಿಯಾದರೂ ಏನಾದರೂ ಪ್ರತಿಭಟನೆಗಳು ನಡೆಯುತ್ತಿದ್ದರೆ ಅಲ್ಲಿಗೆ ಎಂಟ್ರಿ ಕೊಟ್ಟು ತನ್ನ ಬೇಳೆ ಬೇಯಿಸಿ, ಹೆಸರು ಗಿಟ್ಟಿಸಿಕೊಳ್ಳುವ ನಾಯಕ.

ಈ ಹಿಂದೆ ಕನ್ನಡ ಚಿತ್ರದ ಡಬ್ಬಿಂಗ್ ವಿಚಾರವಾಗಿ ಕನ್ನಡ ನಟರು ನಡೆಸುತ್ತಿದ್ದ ಪ್ರತಿಭಟನೆಗೆ ಆವರೆಗೂ ಆಗಮಿಸದೆ, ನಂತರ ಏಕಾಏಕಿ ಪ್ರವೇಶಿಸಿ ಬಂದ್‍ಗೆ ಕರೆ ಕೊಟ್ಟಂತಹ ಬಂದ್ ಪ್ರೇಮಿ ನಾಯಕ. ಕಾವೇರಿ ಹೋರಾಟದಲ್ಲೂ ಎಲ್ಲೂ ಭಾಗವಹಿಸದೆ, ನಂತರ ಧಿಡೀರ್ ಎಂಟ್ರಿ ಕೊಟ್ಟು ಏಕಾಏಕಿ ಬಂದ್‍ಗೆ ಕರೆ ಕೊಟ್ಟು, ತನ್ನ ಹೆಸರನ್ನು ರಾಜ್ಯವ್ಯಾಪಿ ಪಸರಿಸುವಂತೆ ಮಾಡುವ ಸೋಗಲಾಡಿ ನಾಯಕ.

ಈಗ ಮಹದಾಯಿ ವಿಚಾರವಾಗಿಯೂ ಇದೇ ನಡೆದಿದ್ದು. ಮಹದಾಯಿ ನದಿ ನೀರಿನ ಸಮಸ್ಯೆಯ ಬಗ್ಗೆ ಕಳೆದ ಅನೇಕ ವರ್ಷಗಳಿಂದ ಹೋರಾಟ, ಪ್ರತಿಭಟನೆಗಳು ನಡೆಯುತ್ತಿದೆ. ಆದರೆ ಈವರೆಗೂ ನಕಲಿ ನಾಡ ಪ್ರೇಮಿ ಈ ಬಗ್ಗೆ ಚಕಾರವೆತ್ತಿಲ್ಲ. ಆದರೆ ಯಾವಾಗ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯದ ಭಾರತೀಯ ಜನತಾ ಪಕ್ಷದ ಮುಖಂಡರನ್ನು ಕರೆಸಿ ಈ ಬಗ್ಗೆ ಸಂಧಾನ ನಡೆಸಿದರೋ ಅಂದಿನಿಂದ ರಾಜ್ಯ ಕಾಂಗ್ರೆಸ್‍ಗೆ ಹಾಗೂ ವಾಟಾಳ್ ನಾಗರಾಜ್‍ಗೆ ತಲೆನೋವಾಗಿ ಪರಿಣಮಿಸಿತ್ತು. ಎಲ್ಲಿ ಭಾರತೀಯ ಜನತಾ ಪಕ್ಷದ ಸಂಧಾನ ಯಶಸ್ವಿಯಾಗಿ, ಆ ಭಾಗದ ಜನತೆಯ ಮತಗಳು ಅತ್ತ ವಾಲುತ್ತದೋ ಎನ್ನುವ ಭಯದಿಂದ ಗೋವಾ ಮುಖ್ಯಮಂತ್ರಿಯನ್ನು ತೆಗಳಿ ದುರಾಡಳಿತ ಮೆರೆಯಲು ಆರಂಭಿಸಿದರು. ರಾಜ್ಯ ಕಾಂಗ್ರೆಸ್ ಪಕ್ಷ ಕನ್ನಡ ಸಂಘಟನೆಗಳನ್ನು ತನ್ನ ಬತ್ತಳಿಕೆಯಲ್ಲಿ ಸೇರಿಸಿಕೊಂಡು ಭಾರತೀಯ ಜನತಾ ಪಕ್ಷಗಳತ್ತ ಒಂದೊಂದೇ ಬಾಣಗಳನ್ನು ಪ್ರಯೋಗಿಸಲು ಆರಂಭಿಸಿತ್ತು.

ರಾಜಕೀಯ ಮಾಡುವ ವಾಟಾಳ್…

ಕನ್ನಡ ಪರ ಹೋರಾಟಗಾರ ಎಂದು ಪೋಸ್ ಕೊಡುವ ವಾಟಾಳ್ ನಾಗರಾಜ್ ಕನ್ನಡ ಸಂಘಟನೆಗಳಲ್ಲಿ ರಾಜಕೀಯ ತಂತ್ರಗಳನ್ನು ಅನುಸರಿಸಿದರು. ಮಾತ್ರವಲ್ಲದೆ ಯಾವತ್ತೋ ನಿಗಧಿಯಾಗಿದ್ದ ಬಂದ್‍ನ್ನು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸುವ ದಿನಾಂಕದಂದೇ ಬಂದ್ ಘೋಷಣೆ ಮಾಡಿದ್ದರು. ಈಗಾಗಲೇ ಇಂದು ಒಂದು ಬಂದ್ ನಡೆಸಿಯೇ ಬಿಟ್ಟಿದ್ದಾರೆ. ಇನ್ನು ಮುಂದಿನ ಬಂದ್ ಪ್ರಧಾನಿ ಮೋದಿ ಬರುವ ಫೆಬ್ರವರಿ 4ಕ್ಕೆ ನಿಗಧಿಯಾಗಿದೆ. ಭಾರತೀಯ ಜನತಾ ಪಕ್ಷಕ್ಕೆ ಮುಜುಗರ ತರುವ ಉದ್ಧೇಶವನ್ನು ಇಟ್ಟುಕೊಂಡಿರುವ ವಾಟಾಳ್ ನಾಗರಾಜ್ ಕೇವಲ 10 ದಿನದಲ್ಲಿ 2 ಬಂದ್‍ಗಳನ್ನು ಘೋಷಣೆ ಮಾಡಿದ್ದಾರೆ.

ವಾಟಾಳ್ ವಿರುದ್ಧ ಕೇಸ್…

ಬಂದ್ ನಡೆದರೆ ಸರ್ಕಾರಕ್ಕೆ ಬಹಳ ನಷ್ಟವಾಗುತ್ತದೆ. ಸರ್ಕಾರಿ ಆಸ್ತಿಪಾಸ್ತಿಗಳ ಮೇಲೆ ಹಾನಿಗಳಾಗುತ್ತದೆ. ಕೋಟ್ಯಾಂತರ ರೂಗಳಷ್ಟು ನಷ್ಟಗಳನ್ನು ಸರ್ಕಾರ ಅನುಭವಿಸಬೇಕಾಗುತ್ತದೆ. ಮಾತ್ರವಲ್ಲದೆ ಇದು ಜನರ ಮೇಲೂ ಭಾರೀ ಪರಿಣಾಮ ಬೀರುತ್ತದೆ. ಜನ ಜೀವನ ಅಸ್ತವ್ಯಸ್ತವಾಗುತ್ತದೆ. ಹೀಗಾಗಿ ಬಂದ್ ನಡೆಸಿದವರು ನಷ್ಟಕ್ಕೆ ಜವಬ್ಧಾರಿಗಳಾಗಿರುತ್ತಾರೆ ಎಂಬ ಆದೇಶವನ್ನು ಈ ಹಿಂದೆ ನ್ಯಾಯಾಲಯ ಆದೇಶ ನೀಡಿತ್ತು.

ಈಗ ಮಹದಾಯಿ ನದಿ ನೀರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಿ ಬಂದ್ ಮಾಡುತ್ತಿರುವ ವಾಟಾಳ್ ನಾಗರಾಜ್ ವಿರುದ್ಧ ನ್ಯಾಯಾಲಕ್ಕೆ ಪಿಎಐಲ್ ಸಲ್ಲಿಸಿದ್ದಾರೆ. ಕೇವಲ ಹತ್ತು ದಿನಗಳ ಅಂತರದಲ್ಲಿ ಎರಡು ಬಾರಿ ಕರ್ನಾಟಕ ಬಂದ್ ಗೆ ಕರೆ ಕೊಟ್ಟಿರುವ ವಾಟಾಳ್ ನಾಗರಾಜ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅರ್ಜಿ ಸಲ್ಲಿಸಿದ್ದಾರೆ.

ಇಂದು ನಡೆದ ಬಂದ್ ಪ್ರಕರಣದ ವಿಚಾರವಾಗಿ ಅನುಭವಿಸಿದ ಎಲ್ಲಾ ನಷ್ಟಗಳನ್ನೂ ವಾಟಾಳ್ ನಾಗರಾಜ್ ಅವರೇ ಭರಿಸಬೇಕು. ಇಂದು ಒಟ್ಟು ನಡೆದ ಆಸ್ತಿಪಾಸ್ತಿಗಳ ಹಾನಿ ಹಾಗೂ ಸರ್ಕಾರ ಅನುಭವಿಸಿದ ನಷ್ಟಗಳನ್ನು ವಾಟಾಳ್ ನಾಗರಾಜ್ ಅವರೇ ತುಂಬಿಸಬೇಕೆಂದೂ ನ್ಯಾಯಾಲಯಕ್ಕೆ ಸಲ್ಲಿಸಲಾದ ಅರ್ಜಿಯಲ್ಲಿ ತಿಳಿಸಲಾಗಿದೆ.

ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯಲ್ಲಿ ವಾಟಾಳ್ ನಾಗರಾಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಈ ಬಗ್ಗೆ ಸರಕಾರಕ್ಕೆ ನ್ಯಾಯಾಲಯ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಇಂದಿನ ಕರ್ನಾಟಕ ಬಂದ್ ಜನವಿರೋಧಿ ಬಂದ್.ಮಹದಾಯಿಗಾಗಿ ಹತ್ತು ದಿನಗಳ ಅಂತರದಲ್ಲಿ ಎರಡು ಬಾರಿ ಬಂದ್ ಗೆ ಕರೆ ನೀಡಲಾಗಿದೆ. ಈ ಬಂದ್ ಅಸಂವಿಧಾನಿಕ ಹಾಗೂ ಕಾನೂನು ಬಾಹಿರವಾಗಿದ್ದು, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.

ಒಟ್ಟಿನಲ್ಲಿ ತಾನು ಹೀರೋ ಆಗಲು ಹೊರಟ ವಾಟಾಳ್ ನಾಗರಾಜ್ ಈಗ ಸಂಕಷ್ಟವನ್ನು ಎದುರಿಸುವಂತಾಗಿದೆ. ಹೈಕೋರ್ಟ್ ವಿಚಾರಣೆ ನಡೆಸಿ ವಾಟಾಳ್ ವಿರುದ್ಧ ಆದೇಶ ನೀಡಿದ್ದೇ ಆದರೆ ವಾಟಾಳ್ ನಾಗರಾಜ್ ಬಂದ್ ವೇಳೆ ಸಂಭವಿಸಿದ ಆ ಎಲ್ಲಾ ನಷ್ಟಗಳನ್ನೂ ತೆರಬೇಕಾಗುತ್ತದೆ. ಇದು ವಾಟಾಳ್ ನಾಗರಾಜ್ ಗೆ ನುಂಗಲಾರದ ತುತ್ತಾಗಿದ್ದಂತು ಸುಳ್ಳಲ್ಲ.

-ಸುನಿಲ್ ಪಣಪಿಲ

Tags

Related Articles

Close