ಪ್ರಚಲಿತ

ಬ್ರೇಕಿಂಗ್: ಕರ್ನಾಟಕ ಬಂದ್ ವಿಫಲ!! ಮಧ್ಯಾಹ್ನವೇ ರೋಡಿಗಿಳಿದ ಬಸ್ಸುಗಳು, ಠುಸ್ ಪಟಾಕಿಯಾದ ಕಾಂಗ್ರೆಸ್ ತಂತ್ರ!!

ಕಾಂಗ್ರೆಸ್ ಪ್ರೇರಿತ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ವಿಫಲಗೊಂಡಿದೆ‌.‌‍
ರಾಜಕೀಯ ಲಾಭಕ್ಕಾಗಿ ಬಂದ್ ಗೆ ಬೆಂಬಲ ನೀಡಿದ ಕಾಂಗ್ರೆಸ್ ನ‌ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮೈಸೂರಿನಲ್ಲಿ ನಡೆಯುತ್ತಿರುವ ಯಡಿಯೂರಪ್ಪ ನವರ ನೇತ್ರತ್ವದ ‘ಪರಿವರ್ತನಾ ಯಾತ್ರೆ’ಯನ್ನು ಹೇಗಾದರೂ ವಿಫಲಗೊಳಿಸಬೇಕು ಎಂದು ಪ್ರಯತ್ನಿಸಿದ ಸಿದ್ದರಾಮಯ್ಯ ಸರಕಾರ ಮಹಾದಾಯಿ ವಿಚಾರವಾಗಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ರಾಜ್ಯ ಸರಕಾರದ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿತ್ತು.

ಆದರೆ ಇವೆಲ್ಲವನ್ನೂ ಮೀರಿ ರಾಜ್ಯಕ್ಕೆ ಆಗಮಿಸಿದ ಬಿಜೆಪಿಯ ಚಾಣಕ್ಯ ಅಮಿತ್ ಷಾ ಮೈಸೂರಿಗೆ ಆಗಮಿಸಿದ್ದಾರೆ. ಬೆಳಿಗ್ಗೆಯಿಂದಲೇ ಬಂದ್ ಬಂದ್ ಎಂದು ಅರಚುತ್ತಿದ್ದ ಎಲ್ಲಾ ಸಂಘಟನೆಗಳು ಅಮಿತ್ ಷಾ ಮೈಸೂರಿಗೆ ಆಗಮಿಸುತ್ತಲೇ ತಣ್ಣಗಾಗಿವೆ.

ಬಿಜೆಪಿ ಚಾಣಕ್ಯನ ಮೈಸೂರು ಭೇಟಿಯನ್ನು ಹೇಗಾದರೂ ತಡೆಯಲೇಬೇಕು ಎಂದು ತಂತ್ರ ರೂಪಿಸಿದ್ದ ಕಾಂಗ್ರೆಸ್ ನ‌ ಎಲ್ಲಾ ಆಲೋಚನೆಗಳು ಅಮಿತ್ ಷಾ ಕರ್ನಾಟಕಕ್ಕೆ ಆಗಮಿಸುತ್ತಿದ್ದಂತೆ ಬುಡಮೇಲಾಗಿದೆ.

ಯಾಕೆಂದರೆ ಅಮಿತ್ ಷಾ ಮೈಸೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ರಾಜ್ಯ ಕಾಂಗ್ರೆಸ್ ಸರಕಾರದ ಮತ್ತು ಸಿದ್ದರಾಮಯ್ಯನ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಂತೆ ಇತ್ತ ಎಲ್ಲಾ ಕಾಂಗ್ರೆಸ್ ಪ್ರೇರಿತ ಸಂಘಟನೆಗಳು ಬಾಲಮುದುಡಿಕೊಂಡು ಸೈಲೆಂಟಾಗಿವೆ. ಬೆಂಗಳೂರಿನಲ್ಲಿ ಮತ್ತೆ ಬಸ್ ಸಂಚಾರ ಅಂಗಡಿ ಮುಂಗಟ್ಟುಗಳು ತೆರೆಯುತ್ತಿದ್ದು ಜನಜೀವನ ಎಂದಿನಂತೆ ಶುರುವಾಗಿದೆ. ಈ ಮೂಲಕ ಕುತಂತ್ರ ನಡೆಸಿದ್ದ ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿದೆ.

ರಾಜ್ಯ ಸರಕಾರದ ಈ ರಾಜಕೀಯ ಲಾಭಕ್ಕಾಗಿ ನಡೆಸುತ್ತಿರುವ ಬಂದ್ ಗೆ ಕರಾವಳಿಯಲ್ಲೂ ಯಾವುದೇ ಬೆಂಬಲ ದೊರೆಯಲಿಲ್ಲ ಮತ್ತು ಬಲವಂತವಾಗಿ ಬಂದ್ ಮಾಡಲು ಪ್ರಯತ್ನಿಸಿದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಮಂಗಳೂರಿನಲ್ಲಿ ಸ್ಥಲೀಯರೇ ಸೇರಿ ಓಡಿಸಿದ ಘಟನೆಯೂ ನಡೆಯಿತು. ಈ ಮೂಲಕ ರಾಜ್ಯ ಸರ್ಕಾರಕ್ಕೆ ಮತ್ತು ಕೆಲ ರೋಲ್ ಕಾಲ್ಡ್ ಸಂಘಟನೆಗಳ ಈ ಕುತಂತ್ರಕ್ಕೆ ಕರಾವಳಿಯಲ್ಲಿ ವಿರೋಧ ವ್ಯಕ್ತವಾಯಿತು.


ರಾಜ್ಯ ಸರಕಾರ ಈಗಾಗಲೇ ಹಗರಣಗಳ ಮೇಲೆ ಹಗರಣ ಮಾಡಿಕೊಂಡು ಇಡೀ ರಾಜ್ಯವನ್ನೇ ಸಾಲದ ಕೂಪೆಯಲ್ಲಿ ಕೂರುವಂತೆ ಮಾಡಿದೆ. ಕೇಂದ್ರ ಸರಕಾರವು ರಾಜ್ಯದ ಅಭಿವೃದ್ಧಿಗೆ ಕೋಟಿ ಕೋಟಿ ಹಣ ಬಿಡುಗಡೆ ಮಾಡುತ್ತಿದ್ದರೂ ರಾಜ್ಯ ಕಾಂಗ್ರೆಸ್ ಸರಕಾರ ಇವೆಲ್ಲವನ್ನೂ ನುಂಗಿ ನೀರು ಕುಡಿಯುತ್ತಿದೆ. ಇವೆಲ್ಲವನ್ನೂ ಮುಚ್ಚಿಹಾಕಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಕೇಂದ್ರ ಸರಕಾರದತ್ತ ಬೆರಳು ಮಾಡಿ ತೋರಿಸುತ್ತಿದೆ.

ರಾಜಕೀಯ ಲಾಭಕ್ಕಾಗಿ ಕರ್ನಾಟಕ ಬಂದ್ ಗೆ ಕರೆ ನೀಡಿದ ಸಂಘಟನೆಗಳ ಜೊತೆಗೆ ಕಾಂಗ್ರೆಸ್ ಕೈ ಜೋಡಿಸಿದ್ದು ಬಸ್ ಸಂಚಾರ ಸಂಪೂರ್ಣವಾಗಿ ಇರದಂತೆ ಮಾಡಿತ್ತು. ಆದರೆ ಇತ್ತ ಅಮಿತ್ ಷಾ ಕರ್ನಾಟಕಕ್ಕೆ ಕಾಲಿಡುತ್ತಲೇ ಬಂದ್ ಬಂದ್ ಎಂದು ಹಾರಾಡುತ್ತಿದ್ದ ಎಲ್ಲಾ ಸಂಘಟನೆಗಳು ಕಂಗಾಲಾಗಿವೆ.

ಬೆಳಿಗ್ಗೆ ೬ ಗಂಟೆಯಿಂದ ಸಂಜೆ ೬ ಗಂಟೆ ತನಕ ಕರ್ನಾಟಕ ಬಂದ್ ಎಂದು ಬೊಬ್ಬೆ ಹಾಕಿದ ಎಲ್ಲಾ ಸಂಘಟನೆಗಳು ಅಮಿತ್ ಷಾ ಮೈಸೂರಿನಲ್ಲಿ ಸಮಾವೇಶದಲ್ಲಿ ಭಾಷಣ ಆರಂಭಿಸುತ್ತಲೇ ಬೆಂಗಳೂರಿನಲ್ಲಿ ಬಸ್ ಸಂಚಾರ ಆರಂಭವಾಗಿದೆ.

ಮಾಧ್ಯಮಗಳಲ್ಲಿ ಅಮಿತ್ ಷಾ ಬಗ್ಗೆ ಸುದ್ಧಿ ಬರುತ್ತಲೇ ಇತ್ತ ತಮ್ಮ ಪ್ರತಿಭಟನೆ ತಣ್ಣಗಾಯಿತು ಅಂದುಕೊಂಡ ಎಲ್ಲಾ ಸಂಘಟನೆಗಳು ತಮ್ಮ‌ಆಟವನ್ನು ನಿಲ್ಲಿಸಿದ್ದಾರೆ. ಕರ್ನಾಟಕ ಬಂದ್ ಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ‌ ಎಂದು ಬೊಗಳೆಬಿಡುತ್ತಿದ್ದ ರಾಜ್ಯ ಸರಕಾರ ಮೈಸೂರಿನಲ್ಲಿ ನಡೆಯುತ್ತಿದ್ದ ಅಮಿತ್ ಷಾ ಕಾರ್ಯಕ್ರಮ ಮುಗಿಯುತ್ತಲೇ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಸುಮಾರು 800 ಬಸ್ ಗಳನ್ನು ಸಂಚಾರಕ್ಕೆ ಇಳಿಸಿದೆ.
ಈ ಮೂಲಕ ಅಮಿತ್ ಷಾ ಕಾರ್ಯಕ್ರಮವನ್ನು ವಿಫಲಗೊಳಿಸಲು ಯತ್ನಿಸಿದ ರಾಜ್ಯ ಕಾಂಗ್ರೆಸ್ ಸರಕಾರವೇ ಸಂಪೂರ್ಣವಾಗಿ ವಿಫಲಗೊಂಡಿದೆ.

ಮೈಸೂರಿನಲ್ಲಿ ಅಮಿತ್ ಷಾ ರಾಜ್ಯ ಸರಕಾರದ ವಿರುದ್ಧ ಗುಡುಗಿದ್ದಾರೆ. ಅಮಿತ್ ಷಾ ರ ಘರ್ಜನೆಗೆ ನಡುಗಿದ ರಾಜ್ಯ ಸರಕಾರ ಬೆಂಗಳೂರಿನಲ್ಲಿ ಬಸ್ ಸಂಚಾರ ಆರಂಭಿಸಿದೆ. ಕೆಲ ಕನ್ನಡ ಪರ ಸಂಘಟನೆಗಳ ಜೊತೆ ಸೇರಿ ರಾಜಕೀಯ ನಡೆಸಲು ಮುಂದಾದ ಸಿದ್ದರಾಮಯ್ಯ ಸರಕಾರ ಅಮಿತ್ ಷಾ ಕರ್ನಾಟಕಕ್ಕೆ ಆಗಮಿಸುತ್ತಿದ್ದಂತೆ ಸೈಲೆಂಟಾಗಿದೆ…!
-ಅರ್ಜುನ್

Tags

Related Articles

Close