ಪ್ರಚಲಿತ

ಬ್ರೇಕಿಂಗ್! ರಾಷ್ಟ್ರೀಯ ಸ್ವಯಂ ಸೇವಕ ಸಂಘ ಉಗ್ರಗಾಮಿ ಸಂಘಟನೆ! ಮತ್ತೆ ಹೊಲಸು ಬಾಯಿ ಹರಿಬಿಟ್ಟ ಸಿದ್ಧರಾಮಯ್ಯ!

ಇದು ನಮ್ಮ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಹೇಳಿಕೆ ಇದು! ಚಾಮರಾಜನಗರದಲ್ಲಿ ಮೈಕು ಸಿಕ್ಕಿತೆಂದು ನಾಲಗೆ ಹರಿ ಬಿಟ್ಟಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ‘ಆರ್ ಎಸ್ ಎಸ್, ಬಿಜೆಪಿ, ಮತ್ತು ಭಜರಂಗದಳದವರೇ ಉಗ್ರಗಾಮಿಗಳು’ ಎಂದಿರುವ ಸಿದ್ಧರಾಮಯ್ಯ, ಬಿಜೆಪಿಗೆ ನಮಗೆ ಹೇಳುವ ನೈತಿಕತೆ ಇಲ್ಲ ಎಂದಿರುವುದು ವಿಪರ್ಯಾಸವೇನಲ್ಲ! ರಾಹುಲ್ ಗಾಂಧಿಯ ನೈತಿಕ ಗೆಲುವಿನ ಅಪಭ್ರಂಶದಿಂದ ಒಂದು ಅಂಶವನ್ನು ತಮ್ಮದಾಗಿಸಿಕೊಂಡಿರುವ ಸಿದ್ಧರಾಮಯ್ಯ! ಓಹೋ! ನೈತಿಕತೆಯ ಬಗ್ಗೆ ಮಾತನಾಡುತ್ತಿದ್ದಾರೆ!

“ಆರ್ ಎಸ್ ಎಸ್ ಆಗಿರಲಿ, ಭಜರಂಗದಳದವರೇ ಆಗಿರಲಿ! ಪಿಎಫ್ ಐ ಆಗಿರಲಿ, ಎಸ್ ಡಿ ಪಿ ಐ ಆಗಿರಲಿ! ತಪ್ಪು ಮಾಡಿದವರ ಬಗ್ಗೆ ಸರಿಯಾಗಿ ಕ್ರಮ ತೆಗೆದುಕೊಂಡಿದ್ದೇವೆ’ ಎಂದಿರುವ ಸಿದ್ಧರಾಮಯ್ಯ ಕೋಮುವಾದವನ್ನು ಸಹಿಸುವುದೇ ಇಲ್ಲ ಎಂದು ನಿದ್ರೆಯ ಮತ್ತಿನಲ್ಲಿಯೇ ಹೇಳಿದ್ದಾರಾ?!

ಅಯ್ಯೋ ಬಿಡಿ! ಕ್ರಮ ತೆಗೆದುಕೊಂಡಿದ್ದೇವೆ ಎಂದರೆ ಯಾವ ರೀತಿ?! ಉಗ್ರಗಾಮಿ ಸಂಘಟನೆಗಳ ಚೇಲಾ ಸಂಘಟನೆಗಳಾದ ಪಿಎಫ್ ಐ ಜೊತೆ ಕುಳಿತು ರಾಜ್ಯದ ಆಡಳಿತದ ಬಗ್ಗೆ ಚರ್ಚಿಸುವ ಸಿದ್ಧರಾಮಯ್ಯ ಯಾವ ಕ್ರಮವನ್ನು ತೆಗೆದುಕೊಂಡಿದ್ದಾರೆ?! ಸ್ವತಃ ಎನ್ ಐ ಎ ರಾಷ್ಟ್ರದ್ರೋಹದ ಕೆಲಸಗಳ ಬಗ್ಗೆ ಮಾಹಿತಿ ನೀಡಿ ಎಚ್ಚರಿಸಿದ್ದರೂ ಸಹ, ನಿಷೇಧಿಸದೇ ಕುಂತ ಈ ಮತಿಗೆಟ್ಟವರಿಗೆ ರಾಷ್ಟ್ರದ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಆರ್ ಎಸ್ ಎಸ್ ಕೂಡಾ ಉಗ್ರಗಾಮಿ ಸಂಘಟನೆಯಾಗಿ ಕಂಡಿತೇ?!

ಅತ್ತ, ಸ್ವತಃ ಶಿಯಾ ವಕ್ಫ್ ಮಂಡಳಿ ಮದರಸಾಗಳು ಭಯೋತ್ಪಾದಕ ತಾಣಗಳೆಂದು ಹೇಳಿ ನಿಷೇಧಕ್ಕೆ ಆಗ್ರಹಿಸುತ್ತಿರುವಾಗ, ಈ ಕರ್ನಾಟಕದ ಮುಖ್ಯಮಂತ್ರಿ ಎನ್ನಿಸಿಕೊಂಡವರಿಗೆ ಏನಾಗಿದೆ?!

ಪರೇಶ್ ಮೇಸ್ತಾನ ಹತ್ಯೆಯಾಯಿತು! ಆಗೇನು ಇವರ ಒಲವಿನ ಬಾಂಧವರು ಸಾಮರಸ್ಯಕ್ಕೆ ಕೈ ಜೋಡಿಸಿದ್ದರ ಪ್ರತೀಕವೇ?! ಕಳೆದ ನಾಲ್ಕೂವರೆ ವರ್ಷಗಳಲ್ಲಿ 21 ಹಿಂದೂಗಳ ಹತ್ಯೆಯಲ್ಲಿ ಪಿಎಫ್ ಐ ಕೈವಾಡವಿದೆ ಎಂದು ಇಂಟೆಲಿಜೆನ್ಸ್ ವರದಿ ನೀಡಿ, ನಿಷೇಧಿಸಿ ಎಂದು ಹೇಳಿದ್ದರೂ ಕೂಡ., ಭಜರಂಗದಳವನ್ನು ಬೇಕಾದರೆ ನಿಷೇಧಿಸುತ್ತೇನೆ ಎಂದ ಸಿದ್ಧರಾಮಯ್ಯರವರಿಗೆ ನೈತಿಕತೆ ಇದೆಯಾ?! ಯಾವ ಕ್ರಮ ತೆಗೆದುಕೊಂಡಿದ್ದಾರೆ?!

ಕಲ್ಲಡ್ಕ ಪ್ರಭಾಕರ್ ಭಟ್ ಹುಚ್ಚು ಬಿಡಿಸಿದ್ದಾರೆ!

ಬಿಡಿ! ಕಲ್ಲಡ್ಕ ಪ್ರಭಾಕರ್ ಭಟ್ ರನ್ನು ಬಂಧಿಸುವ ಹಾಗಿರಲಿ, ಮುಟ್ಟುವುದಕ್ಕೂ ಆಗಲಿಲ್ಲ ಸರಕಾರಕ್ಕೆ! ಸಿದ್ಧರಾಮಯ್ಯನವರ ಈ ಬೇಜವಾಬ್ದಾರಿ ಹೇಳಿಕೆಗೆ, “ಆರ್ ಎಸ್ ಎಸ್ ಯಾವುದೇ ರಾಜಕೀಯ ಸಂಘಟನೆಯಲ್ಲ, ಯಾವುದೇ ಇವರ ಮಾತಿಗೆ ತಕ್ಕಂತೆ ಕುಣಿಯುವ ಸಂಘಟನೆಯೂ ಅಲ್ಲ! ಸುಮ್ಮನೇ ಹೀಗೆ ಹೇಳಿಕೆ ಕೊಡುವುದರ ಹಿಂದಿನ ಉದ್ದೇಶ ಮುಸಲ್ಮಾನರ ಓಲೈಕೆ ಅಲ್ಲವೇ?!’ ಎಂದಿರುವ ಕಲ್ಲಡ್ಕ ಪ್ರಭಾಕರ್ ಭಟ್ ಸಮಯ ಸಿಕ್ಕಿದಾಗಲೆಲ್ಲ ಸಿದ್ಧರಾಮಯ್ಯನವರ ನಿಜಮುಖ ಬಯಲು ಮಾಡುತ್ತಿದ್ದಾರೆ!

ಸಿದ್ಧರಾಮಯ್ಯರವರ ಈ ಹೇಳಿಕೆ ಸಮಾಜದ ಶಾಂತಿ ಕಾಪಾಡುತ್ತದೆಯೇ?! ಶಾಂತಿ ಕಾಪಾಡಿ ಎಂದು ಬಾಯಿ ಹರಿದುಕೊಂಡ ಸಿದ್ಧರಾಮಯ್ಯರವರಿಗೆ ಶಾಂತಿ ನೆನಪಾಗುವುದು ಹಿಂದೂ ಕಾರ್ಯಕರ್ತನ ಹತ್ಯೆಯಾದಾಗ! ಅದೇ, ಅನ್ಯಧರ್ಮೀಯನೊಬ್ಬನ ಹತ್ಯೆಯಾದಾಗ ಉಲ್ಟಾ ಹೊಡೆಯುವ ಇವರು ಕೊಡುವ ಹೇಳಿಕೆಗಳಿಂದ ಸಮಾಜದಲ್ಲಿ ಶಾಂತಿ ಸಾಧ್ಯವೇ?!

ಅರ್ಹತೆಯೇ ಇಲ್ಲದವನೊಬ್ಬನ ಕೈಯ್ಯಲ್ಲಿ ಜಾತ್ಯಾತೀತತೆಯ ಪುಸ್ತಕ ಕೊಟ್ಟು ಕೂರಿಸಿದರೆ, ತುಷ್ಟೀಕರಣ ಫಲಿತಾಂಶವಾಗುತ್ತದೆ ಎಂಬುದಕೆ ಉದಾಹರಣೆ ಈ ಸಿದ್ಧರಾಮಯ್ಯನವರು! ಅಷ್ಟೇ!

– ನಿಹಾರಿಕಾ ಶರ್ಮಾ

Tags

Related Articles

Close