ಪ್ರಚಲಿತ

ಭಾರತದೊಂದಿಗೆ ಮಾತುಕತೆಗೆ ಹಂಬಲಿಸುತ್ತಿರುವ ಪಾಕಿಸ್ತಾಕ್ಕೆ ಈ ಸೈನ್ಯ ದಿಗ್ಗಜ ಆ ರಾಷ್ಟ್ರಕ್ಕೆ ಕೊಟ್ಟ ಸಂದೇಶವೇನು ಗೊತ್ತಾ?!!

ಪ್ರಮುಖ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತ ತನ್ನ ರಕ್ಷಣೆಗೆ ಇತರ ರಾಷ್ಟ್ರಗಳನ್ನು ಅವಲಂಬಿಸಲು ಸಾಧ್ಯವಿಲ್ಲ ಎಂಬ ಸ್ಪಷ್ಟ ನಿಲುವನ್ನು ಹೊಂದಿದ್ದಲ್ಲದೇ, ನರೇಂದ್ರ ಮೋದಿ ಸರ್ಕಾರದ ಬೆಂಬಲದೊಂದಿಗೆ ಭಾರತೀಯ ಸೇನೆಯೂ ಬಲಿಷ್ಠಗೊಳ್ಳುತ್ತಿರುವುದು ಗೊತ್ತೇ ಇದೆ. ಹಾಗಾಗಿ ಭಾರತೀಯ ಸೇನೆ ಶತ್ರುಗಳನ್ನು ಯುದ್ದಕ್ಕೆ ಆಹ್ವಾನ ನೀಡುತ್ತಿದೆಯಲ್ಲದೇ ಇದೀಗ ಪಾಕಿಸ್ತಾನಕ್ಕೂ ಕೂಡ ಸೇನಾ ಜನರಲ್ ಬಿಪಿನ್ ರಾವತ್ ಖಡಕ್ ಉತ್ತರ ನೀಡಿದ್ದಾರೆ.

ಹೌದು.. ಈಗಾಗಲೇ ಸೇನಾ ಮುಖ್ಯಸ್ಥರಾಗಿರುವ ಬಿಪಿನ್ ರಾವತ್ ನೆರೆಯ ರಾಷ್ಟ್ರಗಳಾದ ಚೀನಾ, ಪಾಕಿಸ್ತಾನ ಮತ್ತು ಆಂತರಿಕ ಭದ್ರತೆಗೆ ಸವಾಲೊಡ್ಡುತ್ತಿರುವವರ ವಿರುದ್ಧ ಯುದ್ಧ ನಡೆಸಲು ಭಾರತೀಯ ಸೇನೆ ಸಿದ್ಧವಾಗಿದೆ ಎಂದು ಹೇಳಿದ್ದರು. ಆದರೆ ಇದೀಗ, ಖಡಕ್ ಆಗಿ ಪಾಕಿಸ್ತಾನಕ್ಕೆ ಉತ್ತರಿಸಿದ ರಾವತ್, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಪಾಕಿಸ್ತಾನದ ಬೆಂಬಲ ನಿಲ್ಲುವವರೆಗೆ ಆ ದೇಶದ ಜೊತೆ ಮಾತುಕತೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಭಾರತೀಯ ಸೇನಾಪಡೆ ಕಾಶ್ಮೀರದಲ್ಲಿ ಅತ್ಯಂತ ‘ಕೊಳಕು ಯುದ್ಧ’ವನ್ನು ಎದುರಿಸುತ್ತಿದ್ದ ವಿಚಾರ ತಿಳಿದೇ ಇದೆ!! ‘ಜನರು ನಮ್ಮತ್ತ ಕಲ್ಲೆಸೆಯುತ್ತಾರೆ. ಪೆಟ್ರೋಲ್ ಬಾಂಬ್‍ಗಳನ್ನು ಎಸೆಯುತ್ತಾರೆ. ಅಂತಹ ಸಂದರ್ಭದಲ್ಲಿ ನನ್ನ ಯೋಧರು ಏನು ಮಾಡಬೇಕೆಂದು ನನ್ನ ಅನುಮತಿ ಪಡೆದೇ ಪರಿಸ್ಥಿತಿಯನ್ನು ಎದುರಿಸಬೇಕೆಂದಿಲ್ಲ.

ಅಥವಾ ನೀವು ಸುಮ್ಮನಿದ್ದು ಪ್ರಾಣ ಕಳೆದುಕೊಳ್ಳಿ ಅಂತ ನಾನು ಹೇಳಬೇಕಿತ್ತೇ? ರಾಷ್ಟ್ರ ಧ್ವಜ ಸುತ್ತಿದ ಶವಪೆಟ್ಟಿಗೆಯಲ್ಲಿ ನಿಮ್ಮ ಶವಗಳು ಬಂದಾಗ ಅವುಗಳನ್ನು ನಿಮ್ಮ ಮನೆಗಳಿಗೆ ಕಳುಹಿಸಿಕೊಡುತ್ತೇವೆ ಅಂತ ಹೇಳಬೇಕಿತ್ತೆ? ಸೇನಾ ಮುಖ್ಯಸ್ಥನಾಗಿ ನಾನು ಇಂತಹ ಮಾತಾಡಬೇಕೆ? ಅಲ್ಲಿ ಕಾದಾಡುತ್ತಿರುವ ನನ್ನ ಯೋಧರ ನೈತಿಕ ಸ್ಥೈರ್ಯ ಕಾಪಾಡುವುದು ನನ್ನ ಕರ್ತವ್ಯ’ ಎಂದು ಈ ಹಿಂದೆ ಜನರಲ್ ರಾವತ್ ತಿಳಿಸಿದ್ದರು.

ಅಷ್ಟೇ ಅಲ್ಲದೇ, ‘ಯಾವ ದೇಶದ ಜನತೆಗೆ ಸೇನೆಯ ಬಗ್ಗೆ ಭಯ ಇರುವುದಿಲ್ಲವೋ ಅಂತಹ ದೇಶ ಬಹುಬೇಗ ನಾಶಹೊಂದುತ್ತದೆ. ಶತ್ರುಗಳಿಗೆ ನಿಮ್ಮ ಬಗ್ಗೆ ಭಯ ಇರಬೇಕು. ಅದೇ ವೇಳೆಗೆ ಜನತೆ ಕೂಡ ನಿಮ್ಮ ಕುರಿತು ಭಯ ಹೊಂದಿರಬೇಕು. ನಮ್ಮದು ನಿಜಕ್ಕೂ ಜನಸ್ನೇಹಿಯಾಗಿರುವ ಸೇನಾಪಡೆ. ಆದರೆ ಕಾನೂನು-ಸುವ್ಯವಸ್ಥೆಯ ಮರುಸ್ಥಾಪನೆ ವಿಷಯದಲ್ಲಿ ಜನರು ನಮ್ಮನ್ನು ಕಂಡು ಹೆದರುವಂತಿರಬೇಕು’ ಎಂದು ರಾವತ್ ಪ್ರತಿಪಾದಿಸಿದ್ದರು.
“ಹಮೇಶಾ ವಿಜಯ್” ಕಾರ್ಯಕ್ರಮದಲ್ಲಿ ಮಾತಾನಾಡಿದ ಬಿಪಿನ್ ರಾವತ್!!

ಆದರೆ ಇದೀಗ, ಥಾರ್ ಮರುಭೂಮಿಯಲ್ಲಿ ಸೇನೆಯ ದಕ್ಷಿಣ ಕಮಾಂಡ್ ನಡೆಸಿದ “ಹಮೇಶಾ ವಿಜಯ್” ಕಾರ್ಯಕ್ರಮದ ಸಂದರ್ಭ ವರದಿಗಾರರ ಜೊತೆ ಮಾತನಾಡಿದ ಜನರಲ್ ರಾವತ್, “ಭಯೋತ್ಪಾದನೆಗೆ ಬೆಂಬಲ ನೀಡುವ ಪಾಕಿಸ್ತಾನ ಅದರಿಂದಲೇ ಪತನವಾಗಲಿದೆ” ಎಂದಿದ್ದಲ್ಲದೇ, “ನೆರೆಹೊರೆಯ ದೇಶಗಳೊಂದಿಗೆ ಬಾಂಧವ್ಯ ಉತ್ತಮವಾಗುವುದನ್ನು ನಾವು ಬಯಸುತ್ತೇವೆ, ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಹರಡುವಂತಹ ಪಾಕಿಸ್ತಾನ ಕ್ರಮ ಸ್ವೀಕಾರಾರ್ಹವಲ್ಲ, ಪಾಕಿಸ್ತಾನ ನಿಜವಾಗಿಯೂ ಶಾಂತಿಯನ್ನು ಬಯಸುತ್ತಿದೆ ಎನ್ನುವುದು ಕಾಣುತ್ತಿಲ್ಲ” ಎಂದು ರಾವತ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪೆÇಲೀಸರ ನಿರಂತರ ಸಹಕಾರದೊಂದಿಗೆ ಭಾರತೀಯ ಸೇನೆ ಉಗ್ರಗಾಮಿಗಳ ವಿರುದ್ಧ ಯಶಸ್ವಿ ಭಯೋತ್ಪಾದಕ ಕಾರ್ಯಾಚರಣೆ ನಡೆಸುತ್ತಿದೆ ಮತ್ತು ಭಯೋತ್ಪಾದನೆ ಅಂತ್ಯವಾಗುವವರೆಗೂ ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಜನರಲ್ ರಾವತ್ ಇದೇ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದ್ದಾರೆ.

ಭಯೋತ್ಪಾದಕ ಗುಂಪುಗಳ ವಿರುದ್ಧ ಇಸ್ಲಾಮಾಬಾದ್ ಕ್ರಮ ಕೈಗೊಳ್ಳುವವರೆಗೂ ಭಾರತ ಪಾಕಿಸ್ತಾನದೊಂದಿಗೆ ಶಾಂತಿ ಮಾತುಕತೆ ನಡೆಸುವುದಿಲ್ಲ ಎನ್ನುವ ಕೇಂದ್ರ ಸರ್ಕಾರದ ನಿಲುವಿನ ಬೆನ್ನಲ್ಲೇ ಜನರಲ್ ರಾವತ್ ಅವರ ಈ ಹೇಳಿಕೆ ಹೊರಬಂದಿರುವುದು ಹೆಮ್ಮೆಯ ವಿಚಾರ!!

ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಿಂದ ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಮುಕ್ತ ಸ್ವಾತಂತ್ರ್ಯ ನೀಡಿರುವುದು ತಿಳಿದ ವಿಚಾರ!! ಈ ಕಾರಣದಿಂದ ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತಿಹೆಚ್ಚು ಉಗ್ರರನ್ನು ಕಾಶ್ಮೀರದಲ್ಲಿ ಕೊಂದು ಹಾಕಲಾಗಿದೆ. ಈ ನಡುವೆ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಭಾರತ ಸರ್ಕಾರಕ್ಕೆ ತನ್ನ ನಿಲುವು ಬದಲಿಸುವಂತೆ ಹೇಳಿದರೂ ಕೂಡ ಸೇನೆಯ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡಿದೆ.

ಈಗಾಗಲೇ ಭಾರತೀಯ ಸೇನೆ ಸಂಪೂರ್ಣವಾದ ಸ್ವಾತಂತ್ರ್ಯವನ್ನು ಪಡೆದಿದ್ದು, ಭಯೋತ್ಪಾದಕರು, ಉಗ್ರಗಾಮಿಗಳು ಅಥವ ಶತ್ರು ರಾಷ್ಟ್ರಗಳು ಭಾರತ ದೇಶವನ್ನು ಒಳನುಸುಳುವ ಸಂದರ್ಭದಲ್ಲಿ ಭಾರತೀಯ ಸೈನಿಕರು ಯಾರ ಅನುಮತಿಯೂ ಇಲ್ಲದೇ ಗುಂಡು ಹಾರಿಸಲು, ಯುದ್ದ ಮಾಡಲು ಸಜ್ಜಾಗಿದ್ದಾರೆ. ಅಲ್ಲದೇ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಪಾಕಿಸ್ತಾನದ ಬೆಂಬಲ ನಿಲ್ಲುವವರೆಗೆ ಆ ದೇಶದ ಜೊತೆ ಮಾತುಕತೆ ಸಾಧ್ಯವಿಲ್ಲ ಎನ್ನುವ ಮೂಲಕ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿರುವುದು ಹೆಮ್ಮೆಯ ವಿಚಾರ!!

– ಅಲೋಖಾ

Tags

Related Articles

Close