ಪ್ರಚಲಿತ

ಭಾರತೀಯ ಸೈನಿಕರನ್ನು ಕೊಂದ ಪಾಪಿ ರಾಷ್ಟ್ರಕ್ಕೆ ಸುಷ್ಮಾ ಸ್ವರಾಜ್ ಕೊಟ್ಟ ಒಂದೇ ಹೇಳಿಕೆಗೆ ಈ ರಾಷ್ಟ್ರ ದಿಕ್ಕೆಟ್ಟು ಹೋಗುವಂತಾಗಿದ್ದು ಯಾಕೆ ಗೊತ್ತಾ?!

ಪಾಕಿಸ್ತಾನ ಒಂದಲ್ಲ ಒಂದು ರೀತಿಯಲ್ಲಿ ಭಾರತಕ್ಕೆ ದ್ರೋಹ ಬಗೆಯುತ್ತನೇ ಬರುತ್ತಿದೆ… ಭಾರತೀಯರನ್ನು ನಾಶ ಮಾಡಲೇ ಬೇಕು ಎಂದು ಹಟಕ್ಕೆ ಬಿದ್ದಿರುವ ಪಾಕಿಸ್ತಾನ ಅದಕ್ಕಾಗಿ ನಾನಾ ರೀತಿಯ ಸರ್ಕಸ್‍ಗಳನ್ನು ಮಾಡುತ್ತಲೇ ಬಂದಿದೆ..ಪಾಕಿಸ್ತಾನ ಭಾರತಕ್ಕೆ ಪಾಕ್ ಮಾಡಿರುವ ಮೋಸ ಒಂದಾ ಎರಡಾ? ಬೇಹುಗಾರಿಕೆಲ್ಲಿ ಆರೋಪದ ಮೇರೆಗೆ ಪಾಕಿಸ್ತಾನದಲ್ಲಿ ಸಿಲುಕಿ ಹಾಕಿ ಕೊಂಡಿರುವ ಜಾದವ್‍ರನ್ನು ಅವರ ಕುಟುಂಬಕ್ಕೆ ಭೇಟಿ ಮಾಡಲು ಅವಕಾಶ ನೀಡಿದ್ದರೂ ಕುಲಭೂಷಣ್ ಜಾದವ್ ರ ಕುಟುಂಬವನ್ನು ಅವಮಾನಿಸಿ ಕಳುಹಿಸಿರುವುದು ಇದು ಇಡೀ ಭಾರತಕ್ಕೆ ಮಾಡಿರುವ ಅವಮಾನವಾಗಿದೆ…ಅದಕ್ಕಾಗಿಯೇ ಸುಷ್ಮಾ ಸ್ವರಾಜ್ ಪಾಕ್‍ಗೆ ದೊಡ್ಡ ಶಾಕ್‍ವೊಂದನ್ನೇ ನೀಡಿದ್ದಾರೆ..!!

ಜಾದವ್‍ರ ವಿಚಾರದ ಬೆನ್ನಿಗೇ ಹೊಸ ವರ್ಷದ ಮುನ್ನಾದಿನ ಭಾರತಕ್ಕೆ ಪಾಕಿಸ್ತಾನದ ಉಗ್ರರು ಕ್ರೌರ್ಯದ ಆಘಾತ ನೀಡಿದ್ದಾರೆ..!! ಹೊಸ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿರುವ ಸಿಆರ್‍ಪಿಎಫ್ ತರಬೇತಿ ಶಿಬಿರ ಗುರಿಯಾಗಿಸಿಕೊಂಡು ಶನಿವಾರ ರಾತ್ರಿ ಜೈಶ್ ಎ ಮೊಹಮ್ಮದ್ ಉಗ್ರರು ನಡೆಸಿದ ದಾಳಿಯಲ್ಲಿ ಐವರು ಯೋಧರು ಮೃತಪಟ್ಟಿರುವುದು ನಿಜಕ್ಕೂ ಶೋಚನೀಯ!! ಭಾರತ ಯೋಧರು ಪ್ರತಿ ದಾಳಿ ನಡೆಸಿ ಮೂವರು ಉಗ್ರರನ್ನು ಗುಂಡಿಕ್ಕಿ ಕೊಂದಿದ್ದಾರೆ. ಮತ್ತೊಂದೆಡೆ ಗಡಿಯಲ್ಲಿ ಪಾಕ್ ಯೋಧರು ನಡೆಸಿದ ಗುಂಡಿನ ದಾಳಿಗೆ ಭಾರತೀಯ ಸೇನೆಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಬೆಳಗಿನ ಜಾವ 2 ಗಂಟೆಯಲ್ಲಿ ಭಾರಿ ಶಸ್ತ್ರಾಸ್ತ್ರಗಳೊಂದಿಗೆ ಪುಲ್ವಾಮಾದ ಲೆತ್ಪೋರಾದಲ್ಲಿರುವ ಸಿಆರ್‍ಪಿಎಫ್ ತರಬೇತಿ ಶಿಬಿರಕ್ಕೆ ನುಗ್ಗಿದ ಉಗ್ರರ ತಂಡ ಮೊದಲು ಗ್ರೆನೇಡ್ ಮೂಲಕ ದಾಳಿ ನಡೆಸಿತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಯೋಧರು ಸಿಆರ್‍ಪಿಎಫ್ ಸಿಬ್ಬಂದಿ ಜತೆ ಸೇರಿ ಕಾರ್ಯಾಚರಣೆ ಆರಂಭಿಸಿದಾಗ ಗುಂಡಿನ ಕಾಳಗದಲ್ಲಿ ನಾಲ್ವರು ಯೋಧರು ಮೃತಪಟ್ಟರೆ, ಓರ್ವ ಯೋಧ ಕಾರ್ಯಾಚರಣೆ ವೇಳೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದರು. ಸೇನಾಪಡೆ ಪ್ರತಿದಾಳಿಯಲ್ಲಿ ಮೂವರು ಉಗ್ರರು ಮೃತಪಟ್ಟಿದ್ದು, ಇನ್ನೂ ಹಲವರು ಕಟ್ಟಡವೊಂದನ್ನು ಹೊಕ್ಕಿ ಅಲ್ಲಿಂದಲೇ ಗುಂಡಿನ ಕಾಳಗ ಮುಂದುವರಿಸಿದ್ದಾರೆ.
ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿರುವ ಸಿಆರ್‍ಪಿಎಫ್‍ನ ತರಬೇತಿ ಶಿಬಿರದ ಮೇಲೆ ಉಗ್ರರು ಶನಿವಾರ ತಡರಾತ್ರಿ 2 ಗಂಟೆಗೆ ಮಾಡಿದ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ. ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಇನ್ನೊಬ್ಬನಿಗಾಗಿ ಶೋಧ ಕೈಗೊಳ್ಳಲಾಗಿದೆ. ಹೊಸ ವರ್ಷದ ಹೊಸ್ತಿಲಿನಲ್ಲಿ ನಡೆದ ಈ ದಾಳಿಯ ಹೊಣೆಯನ್ನು ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಯೋಧರನ್ನೇ ಉಗ್ರರು ಟಾರ್ಗೆಟ್ ಮಾಡಿಕೊಂಡಿದ್ದು

ಅಂಡರ್ ಬ್ಯಾರಲ್ ಗ್ರನೇಡ್ ಲಾಂಚರ್ (ಯುಬಿಜಿಎಲ್) ಸೇರಿ ಭಾರಿ ಶಸ್ತ್ರಸಜ್ಜಿತ ಉಗ್ರರ ತಂಡ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಪುಲ್ವಾಮ ಜಿಲ್ಲೆಯ ಲೆತ್ಪೋರಾದಲ್ಲಿರುವ ಸಿಆರ್‍ಪಿಎಫ್ ತರಬೇತಿ ಶಿಬಿರದ ಮೇಲೆ ದಾಳಿ ಮಾಡಿತು. ಗ್ರನೇಡ್ ದಾಳಿ ಮೂಲಕ ಶಿಬಿರ ಪ್ರವೇಶಿಸಲು ಯತ್ನಿಸಿದ ಉಗ್ರರ ಮೇಲೆ ಕಾವಲಿಗಿದ್ದ ಸೆಂಟ್ರಿ ಗುಂಡಿನ ದಾಳಿ ನಡೆಸಿ, ಹಿಮ್ಮೆಟ್ಟಿಸಲು ಪ್ರಯತ್ನಿಸಿದರು. ಆದರೂ, ಶಿಬಿರದ ಒಳನುಗ್ಗಿದ ಉಗ್ರರು ಕಟ್ಟಡವೊಂದರಲ್ಲಿ ಅಡಗಿ ಕುಳಿತು ದಾಳಿ ಆರಂಭಿಸಿದರು. ಈ ದಾಳಿಯಲ್ಲಿ 3 ಯೋಧರು ಹುತಾತ್ಮ ರಾದರು. ಉಗ್ರರಿದ್ದ ಕಟ್ಟಡ ಪ್ರವೇಶಿಸಿದ್ದ ಸಿಆರ್‍ಪಿಎಫ್‍ನ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇತ್ತೀಚಿನ ಸೇನಾ ಕಾರ್ಯಾ ಚರಣೆ ಯಲ್ಲಿ ತಲ್ಹಾ ರಷೀದ್ ಮತ್ತು 4 ಅಡಿ ಉಗ್ರ, ನೂರ್ ಮೊಹಮ್ಮದ್ ತಾಂತ್ರೆ ಸೇರಿ ಹಲವು ಉಗ್ರರು ಹತರಾಗಿದ್ದರು. ಪ್ರತೀಕಾರವಾಗಿ ಉಗ್ರರು ಸೇನಾ ಶಿಬಿರಗಳ ಮೇಲೆ ದಾಳಿ ಮಾಡುವ ನಿರೀಕ್ಷೆಯಿತ್ತು ,ಮೊದಲೇ ಯೋಧರಿಗೆ ತಿಳಿದಿತ್ತಂತೆ!!

ಜಮ್ಮು-ಕಾಶ್ಮೀರದ ನೌಷೇರಾ ವಲಯದಲ್ಲಿ ಪಾಕ್ ಸೇನಾಪಡೆ ನಡೆಸಿದ ಅಪ್ರಚೋದಿತ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ಯೋಧ ಹುತಾತ್ಮರಾಗಿದ್ದಾರೆ. ಜಗಶೀರ್ ಸಿಂಗ್ (32) ಹುತಾತ್ಮರಾದವರು. ಇಂದು ಬೆಳಗ್ಗೆ ಪಾಕ್ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ಆರಂಭಿಸಿದವು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನಾಪಡೆ ಕೂಡ ಗುಂಡಿನ ದಾಳಿ ಆರಂಭಿಸಿದೆ. ಪಾಕ್ ಮೂಲದ ಉಗ್ರರ 3 ತಂಡಗಳು ಭಾರತ ಪ್ರವೇಶಿಸಿದ್ದು, ದಾಳಿ ನಡೆಸಲು ಹೊಂಚು ಹಾಕುತ್ತಿವೆ. ಸೇನಾಪಡೆ ಶಿಬಿರಗಳೆ ಈ ತಂಡಗಳ ಪ್ರಮುಖ ಗುರಿಯಾಗಿದೆ. ಜ.26ರವರೆಗೆ ದಾಳಿಗಳನ್ನು ಸಂಘಟಿಸಲು ಈ ತಂಡಗಳು ಉದ್ದೇಶಿಸಿವೆ. ಹೆದ್ದಾರಿಗಳಿಗೆ ಹೊಂದಿಕೊಂಡಂತಿರುವ ಸೇನಾ ಶಿಬಿರಗಳನ್ನು ಗುರಿಯಾಗಿಸಿಕೊಂಡು ಈ ತಂಡಗಳು ದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿರುವುದರಿಂದ, ಅಂತಹ ಶಿಬಿರಗಳ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸುವಂತೆ ಬೇಹುಗಾರಿಕಾ ಸಂಸ್ಥೆ ಸೇನಾಪಡೆಗಳಿಗೆ ಸಲಹೆ ನೀಡಿದೆ.

ದಾಳಿಯ ಹೊಣೆಹೊತ್ತುಕೊಂಡಿರುವ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಪ್ರತಿಕ್ರಿಯೆ ನೀಡಿದೆ. ತಲ್ಹಾ ರಶೀದ್, ನೂರ್ ಮೊಹಮ್ಮದ್ ತಾಂತ್ರೆ ಹೋದರೇನಂತೆ. ಅವರಂತೆ ಇನ್ನೂ ಹಲವು ಉಗ್ರರು ನಮ್ಮಲ್ಲಿದ್ದಾರೆ. ಕಾಶ್ಮೀರದಿಂದ ಭಾರತದ ಕೊನೆಯ ಯೋಧ ಕಾಲ್ತೆಗೆಯುವವರೆಗೂ ದಾಳಿಗಳು ಮುಂದುವರಿಯಲಿವೆ ಎಂದು ಬೆದರಿಕೆ ಹಾಕಿದೆ.

ಕಾಶ್ಮೀರ ಕಣಿವೆಯಲ್ಲಿರುವ ಸೇನಾ ಶಿಬಿರದ ಮೇಲೆ ಈ ವರ್ಷ ಉಗ್ರರು ನಡೆಸಿದ 3ನೇ ದಾಳಿ ಇದಾಗಿದೆ. ಆಗಸ್ಟ್ ನಲ್ಲಿ ಫುಲ್ವಾಮಾದ ಜಿಲ್ಲಾ ಪೆÇಲೀಸ್ ಸಮುಚ್ಚಯದ ಮೇಲೆ ಮೂವರು ಉಗ್ರರು ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಭದ್ರತಾ ಪಡೆಯ 8 ಯೋಧರು ಹುತಾತ್ಮರಾಗಿದ್ದರು. 12 ಗಂಟೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಅಕ್ಟೋಬರ್‍ನಲ್ಲಿ ಮೂವರು ಉಗ್ರರು ಶ್ರೀನಗರ ವಿಮಾನ ನಿಲ್ದಾಣದ ಬಳಿಯ ಗಡಿ ಭದ್ರತಾ ಪಡೆ ಶಿಬಿರದ ಮೇಲೆ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಒಬ್ಬ ಯೋಧ ಹುತಾತ್ಮನಾಗಿದ್ದ. ಅಂದಾಜು 10 ಗಂಟೆಗಳ ಕಾರ್ಯಾಚರಣೆ ಬಳಿಕ ಉಗ್ರರನ್ನು ಹತ್ಯೆ ಮಾಡಲಾಗಿತ್ತು. ವಿಶೇಷ ತರಬೇತಿ ನೀಡಿರುವ ‘ಅಫ್ಜಲ್ ತಂಡ’ದವರಿಂದ ದಾಳಿ ಸಂಘಟಿಸಿದ್ದಾಗಿ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ಹೇಳಿಕೊಂಡಿದೆ.. ಈ ಪಾಪಿಸ್ತಾನವು ಒಂದಲ್ಲ ಒಂದು ರೀತಿಯಲ್ಲಿ ಕಾಲ್ಕೆರೆದು ಯುದ್ಧಕ್ಕೆ ಬರುವುದು… ಜಾದವ್ ಕುಟುಂಬಕ್ಕೆ ಅವಮಾನ ಮಾಡಿರುವುದು ನಿಜಕ್ಕೂ ಭಾರತಕ್ಕೆ ಅವಮಾನಕಾರಿಯಾಗಿ ಪ್ರತಿಕ್ರಿಯಿಸುತ್ತಿದೆ..ಅದಕ್ಕಾಗಿಯೇ ಸುಷ್ಮಾಸ್ವರಾಜ್ ಪಾಕ್‍ಗೆ ದೊಡ್ಡ ಶಾಕ್‍ವೊಂದನ್ನೇ ನೀಡಿದ್ದಾರೆ.
ಪಾಕ್‍ಗೆ ಸುಷ್ಮಾ ಖಡಕ್ ಉತ್ತರ!!

ಗಡಿಭಾಗದಲ್ಲಿ ಕದನ ವಿರಾಮ ಉಲ್ಲಂಘಿಸಿ ನಡೆಸುತ್ತಿರುವ ಗುಂಡಿನ ದಾಳಿ ಹಾಗೂ ಭಯೋತ್ಪಾದನೆಯನ್ನು ನಿಲ್ಲಿಸುವವರೆಗೂ ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ರೀತಿಯ ಕ್ರಿಕೆಟ್ ಪಂದ್ಯಾಟ ನಡೆಯುವುದು ಅಸಾಧ್ಯ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಸಂಸದೀಯ ಸಲಹಾ ಸಮಿತಿ ಜತೆಗಿನ ವಿದೇಶಾಂಗ ವ್ಯವಹಾರಗಳ ಕುರಿತ ಮಾತುಕತೆ ವೇಳೆಯಲ್ಲಿ ಸುಷ್ಮಾ ಸ್ವರಾಜ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾತುಕತೆಯಲ್ಲಿ ಸಚಿವರಾದ ಎಂಜೆ ಅಕ್ಬರ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ಅವರು ಪಾಲ್ಗೊಂಡಿದ್ದರು. ಪಾಕ್ ಪ್ರಚೋದಿತ ಗಡಿನಿಯಂತ್ರಿತ ರೇಖೆ ಉಲ್ಲಂಘನೆಯಿಂದಾಗಿ ಕ್ರಿಕೆಟ್ ಆಯೋಜಿಸಲು ವಾತಾವರಣ ಸೂಕ್ತವಾಗಿಲ್ಲ ಎಂದು ಹೇಳಿದ್ದಾರೆ. 2017ರಲ್ಲಿ ಭಾರತ ಪಾಕಿಸ್ತಾನ ನಡುವೆ ಬೂದಿಮುಚ್ಚಿದ ಕೆಂಡದಂತಿದ್ದ ವಾತಾವರಣವು, ಪಾಕ್ ಸೆರೆಯಲ್ಲಿರುವ ಕುಲಭೂಷಣ್ ಜಾದವ್ ಅವರ ತಾಯಿ ಹಾಗೂ ಪತ್ನಿಯನ್ನು ನಡೆಸಿಕೊಂಡ ರೀತಿ, ಹಾಗೂ ಪಾಕ್ ಪಡೆಗಳಿಂದ ಮತ್ತೆ ನಿಯಂತ್ರಣ ರೇಖೆ ಉಲ್ಲಂಘಿಸಿ, ದೇಶದ ಸೈನಿಕರನ್ನು ಹತ್ಯೆ ಮಾಡಿದ್ದು ಭಾರತದ ಆಕ್ರೊಶಕ್ಕೆ ಕಾರಣವಾಗಿತ್ತು.

ಪಾಕಿಸ್ತಾನ 2012ರ ಡಿಸೆಂಬರ್’ನಲ್ಲಿ ಕಡೆಯ ಬಾರಿ ಭಾರತದಲ್ಲಿ 3 ಏಕದಿನ ಹಾಗೂ 2 ಟಿ20 ಪಂದ್ಯಗಳ ದ್ವಿಪಕ್ಷೀಯ ಸರಣಿ ಆಡಿತ್ತು. ಇನ್ನು ಭಾರತ ತಂಡವು ಪಾಕ್ ನೆಲದಲ್ಲಿ 2007ರಲ್ಲಿ ಕಡೆಯ ದ್ವಿಪಕ್ಷೀಯ ಸರಣಿ ಆಡಿತ್ತು. ಹದಗೆಟ್ಟ ರಾಜಕೀಯ ವಾತಾವರಣ ಹಾಗೂ ಗಡಿ ಉದ್ವಿಗ್ನ ಪರಿಸ್ಥಿತಿ ಹಿನ್ನಲೆಯಲ್ಲಿ ಎರಡು ದೇಶಗಳ ನಡುವೆ ದ್ವಿಪಕ್ಷೀಯ ಸರಣಿ ಆಯೋಜನೆ ಕನಸಿನ ಮಾತು ಎಂಬಂತಾಗಿದೆ.

ಪಾಕಿಸ್ತಾನ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿದ್ದು, ಗಡಿಯಲ್ಲಿ ನಿರಂತರವಾಗಿ ಪ್ರಚೋದನೆ ನೀಡುವ ಮೂಲಕ ವಿಧ್ವಂಸಕ ಕೃತ್ಯ ಎಸಗುವುದನ್ನು ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ ಪಾಕ್ ಜತೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಅಸಾಧ್ಯ ಎಂದು ಹೇಳಿದರು. ಅಲ್ಲದೇ ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, 70ವರ್ಷ ವಯಸ್ಸಾದ ಪುರುಷರು ಅಥವಾ ಮಹಿಳಾ ಕೈದಿಗಳು, ಬುದ್ಧಿಮಾಂದ್ಯ ಕೈದಿಗಳನ್ನು ಮಾನವೀಯತೆ ನೆಲೆಯಲ್ಲಿ ಉಭಯ ದೇಶಗಳು ಬಿಡುಗಡೆ ಮಾಡುವ ಬಗ್ಗೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಈ ರೀತಿಯಾಗಿ ನಾವು ಕೂಡಾ ಪಾಕ್‍ಗೆ ಕಡಿವಾಣ ಹಾಕಿದರೆ ಮಾತ್ರ ಬುದ್ಧಿ ಕಲಿಯಲು ಸಾಧ್ಯವಾಗುತ್ತದೆ….ಇಲ್ಲದಿದ್ದರೆ ಅವರು ಮಾಡುವ ಅವಮಾನಕ್ಕೆಲ್ಲಾ ನಾವು ತಲೆಬಾಗುವಂತೆ ಮಾಡಿಸುತ್ತಾರೆ ಆ ಪಾಪಿ ಪಾಕಿಸ್ತಾನದವರು.

-ಪವಿತ್ರ

Tags

Related Articles

Close