ಪ್ರಚಲಿತ

ಮದರಸಾಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಒಪ್ಪಿಕೊಂಡ ಮುಸ್ಲಿಂ ನಾಯಕ!! ಮೋದಿಗೆ ಬರೆದ ಪತ್ರದಲ್ಲಿ ಮುಸ್ಲಿಂ ನಾಯಕ ಬರೆದಿದ್ದೇನು ಗೊತ್ತೇ?!

ಮದರಸಾ ಶಿಕ್ಷಣವನ್ನು ಪಡೆಯುತ್ತಿರುವ ಅಸಂಖ್ಯಾತ ಮುಸಲ್ಮಾನರು ತಮ್ಮ ಮದರಸಾ ಶಿಕ್ಷಣಗಳನ್ನೇ ತಿರುಚಿ ಕೆಲವು ಮದರಸಾಗಳು ಜಿಹಾದ್ ಪಾಠವನ್ನು ಹೇಳಿಕೊಡುವ ಮೂಲಕ ಉಗ್ರರನ್ನು ಹುಟ್ಟು ಹಾಕುತ್ತಿದೆ. ಹಾಗಾಗಿ ಶಿಕ್ಷಣವನ್ನು ತಿರುಚಿ ವಿದ್ಯಾರ್ಥಿಗಳನ್ನು ಭಯೋತ್ಪಾದನಾ ಕಡೆಗೆ ಸೆಳೆಯುತ್ತಿರುವ ಮದರಸಾಗಳನ್ನು ಮುಚ್ಚಬೇಕು ಎಂದು ಶಿಯಾ ಕೇಂದ್ರ ವಕ್ಫ್ ಮಂಡಳಿ ಅಧ್ಯಕ್ಷ ವಾಸೀಂ ರಿಜ್ವಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ.

ಕೆಲವು ಮದರಸಾಗಳು ಬೋಧನೆ ಮಾಡುವುದಕ್ಕಿಂತ ಹೆಚ್ಚು ಉಗ್ರರನ್ನು ಹುಟ್ಟು ಹಾಕುತ್ತಿದೆ ಎಂದು ಉತ್ತರ ಪ್ರದೇಶದ ಶಿಯಾ ಮುಸ್ಲಿಂ ವಕ್ಫ್ ಮಂಡಳಿ ಅಧ್ಯಕ್ಷ ವಾಸೀಮ್ ರಿಜ್ವಿ ತಿಳಿಸಿದ್ದು, ಇದುವರೆಗೆ ಮದರಸಾಗಳಿಂದ ಓದಿ ಬಂದಿರುವವರಲ್ಲಿ ಎಷ್ಟು ಜನ ಎಂಜನಿಯರ್‍ಗಳಿದ್ದಾರೆ, ಡಾಕ್ಟರ್‍ಗಳಾಗಿದ್ದಾರೆ, ಐಎಎಸ್ ಅಧಿಕಾರಿಗಳಾಗಿದ್ದಾರೆ? ಇದಕ್ಕೆ ಉತ್ತರ ಸೊನ್ನೆ ಎಂದು ವಾಸೀಮ್ ರಿಜ್ವಿ ತಿಳಿಸಿದ್ದಾರೆ ಎಂದು ಎಎನ್‍ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಕೆಲವು ಮದರಸಾಗಳು ಜಿಹಾದ್ ಪಾಠವನ್ನು ಹೇಳಿಕೊಡುವ ಮೂಲಕ ಉಗ್ರರನ್ನು ಹುಟ್ಟು ಹಾಕುತ್ತಿದೆ. ಇದು ನಿಜಕ್ಕೂ ಆತಂಕಕಾರಿಯಾಗಿದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ವಾಸೀಮ್ ರಿಜ್ವಿ ಅವರು ಮದರಸಾ ಶಿಕ್ಷಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೇ ವಿದ್ಯಾರ್ಥಿಗಳನ್ನು ಭಯೋತ್ಪಾದನಾ ಕಡೆಗೆ ಸೆಳೆಯುತ್ತಿರುವ ಮದರಸಾಗಳನ್ನು ಮುಚ್ಚಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ.

“ಮದರಸಾ” ಎಂದರೆ ಅರಬ್ಬಿ ಭಾಷೆಯಲ್ಲಿ “ಶಿಕ್ಷಣ ಸಂಸ್ಥೆ” ಎಂದರ್ಥ. ಭಾರತದಲ್ಲಿ ಅದು ಇಸ್ಲಾಮಿ ಶಿಕ್ಷಣಕ್ಕೆ ಮಾತ್ರ ಸೀಮಿತವಾದ ಅರ್ಥವನ್ನು ಹೊಂದಿದೆ. ಸರ್ಕಾರದಿಂದ ಮನ್ನಣೆ ಪಡೆದ ಮದರಸಾಗಳಲ್ಲದೆ ಪ್ರತಿ ಮಸೀದಿಯ ಆವರಣದಲ್ಲಿ ಒಂದು ಚಿಕ್ಕ, ದೊಡ್ಡ ಮದರಸಾ ಇದ್ದೇ ಇದೆ. ಹಾಗಾಗಿ ಮುಸಲ್ಮಾನರು ತಮ್ಮ ಮಕ್ಕಳನ್ನು ಎಳೆಯ ವಯಸ್ಸಿನಲ್ಲಿಯೇ ಹೆಚ್ಚು ಕಡಿಮೆ ಕಡ್ಡಾಯವೆಂಬಂತೆ ಇಲ್ಲಿಗೆ ಕಳಿಸುತ್ತಾರೆ. ಆದರೆ ಮಕ್ಕಳಿಗೆ ಮೂಲ ಶಿಕ್ಷಣವನ್ನು ಕಲಿಸಿಕೊಡುವ ಬದಲು ಶಿಕ್ಷಣವನ್ನೇ ತಿರುಚಿ ಭಯೋತ್ಪಾದಕರನ್ನು ಸೃಷ್ಟಿಸುತ್ತಿದೆ ಎಂದರೆ ಮದರಸಾ ಶಿಕ್ಷಣವೇ ಅಪಾಯಕಾರಿ ಎಂದೆನಿಸುವುದರಲ್ಲಿ ತಪ್ಪಿಲ್ಲ!!

2015ರ ವೇಳೆ ಕರ್ನಾಟಕ ರಾಜ್ಯದಲ್ಲಿನ ಮದರಸಾಗಳು ಯಾವ ರೀತಿಯ ಶಿಕ್ಷಣ ಹಾಗೂ ಪಠ್ಯಕ್ರಮವನ್ನು ಹೊಂದಿವೆ ಎಂಬ ಬಗ್ಗೆ ವಿವರವಾದ ಮಾಹಿತಿ ನೀಡುವಂತೆ ಹೈಕೋರ್ಟ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೂಚಿಸಿತ್ತು. ರಾಜ್ಯದ ಕೆಲ ಮದರಸಾಗಳು ಅಳವಡಿಸಿಕೊಂಡಿರುವ “ಸಮಸ್ತ ಕೇರಳ ಸುನ್ನಿ ವಿದ್ಯಾಭ್ಯಾಸ ಮಂಡಳಿ” ರೂಪಿಸಿರುವ ಪಠ್ಯಕ್ರಮವು ರಾಷ್ಟ್ರ ವಿರೋಧಿ ಧೋರಣೆ ಹೊಂದಿದೆ ಎಂದು ಮಂಗಳೂರಿನ ಇಕ್ಬಾಲ್ ಎಂಬುವರು ನೀಡಿದ್ದ ದೂರಿನ ವಿಚಾರಣೆಯಲ್ಲಿ ಹೈಕೋರ್ಟ್‍ನ ಈ ಸೂಚನೆ ಹೊರಬಿದ್ದಿತ್ತು. ಹಾಗಾದರೆ ಮದರಸಾ ಶಿಕ್ಷಣಗಳಲ್ಲಿ ಸಣ್ಣ ಮಕ್ಕಳ ಮನಸ್ಸಿಗೆ ದೇಶ ವಿರೋಧಿ ಚಿಂತನೆಗಳನ್ನು ಭಿತ್ತರಿಸುತ್ತಿದೆ ಎನ್ನುವುದು ಸ್ಪಷ್ಟವಾಗಿದೆ.

ಇನ್ನು ಉತ್ತರ ಪ್ರದೇಶದಲ್ಲಿ ಕೆಲ ತಿಂಗಳ ಹಿಂದಷ್ಟೇ ಮದರಸಾಗಳ ದಾಖಲೆಗಳನ್ನು ನೀಡುವಂತೆ ಯೋಗಿ ಆದಿತ್ಯನಾಥ್ ಆದೇಶ ನೀಡಿತ್ತು, ಅಷ್ಟೇ ಅಲ್ಲದೇ ದಾಖಲೆ ಇಲ್ಲದ ಮದರಸಾಗಳನ್ನು ಮುಚ್ಚುವಂತೆ ಯೋಗಿ ಆದಿತ್ಯನಾಥ್ ಸರಕಾರ ಐತಿಹಾಸಿಕ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಆದರೆ ಇದೀಗ ಶಿಕ್ಷಣವನ್ನು ತಿರುಚಿ ವಿದ್ಯಾರ್ಥಿಗಳನ್ನು ಭಯೋತ್ಪಾದನಾ ಕಡೆಗೆ ಸೆಳೆಯುತ್ತಿರುವ ಮದರಸಾಗಳನ್ನು ಮುಚ್ಚಬೇಕೆಂದು ಶಿಯಾ ಕೇಂದ್ರ ವಕ್ಫ್ ಮಂಡಳಿ ಅಧ್ಯಕ್ಷ ವಾಸೀಂ ರಿಜ್ವಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ.

ಶಿಯಾ ಕೇಂದ್ರ ವಕ್ಫ್ ಮಂಡಳಿ ಅಧ್ಯಕ್ಷ ವಾಸೀಂ ರಿಜ್ವಿ ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲೇನಿದೆ??

ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿರುವ ಅವರು, ಈ ರೀತಿಯ ಇಸ್ಲಾಮಿಕ್ ಶಾಲೆಗಳು ಶಿಕ್ಷಣವನ್ನು ಮುಂದುವರೆಸಬೇಕಾದರೆ ಸಿಬಿಎಸ್‍ಇ ಹಾಗೂ ಐಸಿಎಸ್ಸಿ’ಯಿಂದ ಮಾನ್ಯತೆ ಪಡೆದುಕೊಳ್ಳಬೇಕು. ಮಾನ್ಯತೆ ಪಡೆದುಕೊಳ್ಳದಿರುವ ಎಲ್ಲ ಮದರಸಾಗಳನ್ನು ಮುಚ್ಚಿ ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ, ದೇಶದಲ್ಲಿರುವ ಬಹುತೇಕ ಮದರಸಾಗಳು ಹೆಚ್ಚು ಗುರುತಿಸಿಕೊಂಡಿಲ್ಲ. ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗುತ್ತಿದ್ದಾರೆ. ಎಲ್ಲ ನಗರ, ಪಟ್ಟಣ, ಹಳ್ಳಿಗಳಲ್ಲಿ ನಾಯಿಕೊಡೆಗಳಂತಿರುವ ಈ ಮದರಸಾಗಳಿಗೆ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಭಯೋತ್ಪದನಾ ಸಂಘಟನೆಗಳಿಂದ ನೆರವು ಹರಿದು ಬರುತ್ತಿದೆ’ ಎಂದು ರಿಜ್ವಿ ಆಪಾದಿಸಿದ್ದಾರೆ.

ಅತೀ ಕಳಪೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಈ ರೀತಿಯ ಮದರಸಾಗಳಲ್ಲಿ ಬಹುತೇಕರು ಉರ್ದು ಅನುವಾದಕರು ಅಥವಾ ಟೈಪಿಸ್ಟ್’ಗಳಾಗಿ ಮಾತ್ರ ಶಿಕ್ಷಣ ಪಡೆಯುತ್ತಿದ್ದಾರೆ. ಈ ರೀತಿಯ ಸಂಸ್ಥೆಗಳು ಐಸಿಎಸ್ಸಿ ಹಾಗೂ ಸಿಬಿಎಸ್ಸಿ’ಯಿಂದ ಮಾನ್ಯತೆ ಪಡೆಯುವುದರ ಜೊತೆ ಮುಸ್ಲಿಂಯೇತರ ವಿದ್ಯಾರ್ಥಿಗಳಿಗೂ ವ್ಯಾಸಂಗ ಮಾಡಲು ಅವಕಾಶ ನೀಡಬೇಕು. ಈ ಬಗ್ಗೆ ಪ್ರಧಾನಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿಗಳಿಗೂ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

ಶಿಯಾ ಮುಸ್ಲಿಂ ವಕ್ಫ್ ಮಂಡಳಿ ಅಧ್ಯಕ್ಷ ವಾಸೀಮ್ ರಿಜ್ವಿಗೆ ಟೀಕೆಗಳ ಸುರಿಮಳೆ!!

ರಿಜ್ವಿ ಆಪಾದನೆಗೆ ಪ್ರತಿಕ್ರಿಯೆ ನೀಡಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಕ್ತಾರ’ ಖಲೀಲೂರ್ ರೆಹಮಾನ್ ಸಜ್ಜದ್ ನಾಮನಿ’ ಮದರಸಾಗಳು ಸ್ವತಂತ್ರ ಸಂಗ್ರಾಮದಲ್ಲಿ ಬಹುಮುಖ್ಯ ಪಾತ್ರ ವಹಿಸಿವೆ. ಇವುಗಳನ್ನು ಪ್ರಶ್ನಿಸುವ ಮೂಲಕ ರಿಜ್ವಿ ಅವರು ಅಪಮಾನ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಇನ್ನು, ವಾಸೀಮ್ ರಿಜ್ವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಎಐಎಂಐಎಂ ಅಧ್ಯಕ್ಷ ಅಸಾವುದ್ದೀನ್ ಓವೈಸಿ, ವಾಸೀಮ್ ರಿಜ್ವಿ ದೊಡ್ಡ ಜೋಕರ್. ಅವರ ಮಾತುಗಳನ್ನು ಯಾರೂ ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿಲ್ಲ. ರಿಜ್ವಿ ಅವಕಾಶವಾದಿ ಎಂದು ಟೀಕಿಸಿದ್ದಾರೆ.

ಆದರೆ ಕೆಲವು ಮದರಸಾಗಳು ಮೂಲ ಶಿಕ್ಷಣವನ್ನೇ ತಿರುಚಿ ಉಗ್ರರನ್ನು ಸೃಷ್ಟಿ ಮಾಡುತ್ತಿದೆಯಲ್ಲದೇ ಈ ಮದರಸಾಗಳಿಗೆ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಭಯೋತ್ಪದನಾ ಸಂಘಟನೆಗಳಿಂದ ನೆರವು ಹರಿದು ಬರುತ್ತಿರುವುದು ಅಚ್ಚರಿಯ ಸಂಗತಿ.

ಆದರೆ ನರೇಂದ್ರ ಮೋದಿ ಸರ್ಕಾರ ಕೇಂದ್ರ ಬಜೆಟ್ ನಲ್ಲಿ ಮದರಸಾಗಳ ಅಭಿವೃದ್ಧಿಗೆ, ವಿದ್ಯಾರ್ಥಿಗಳ ಕೌಶಲ್ಯ ತರಬೇತಿಗೆ 100 ಕೋಟಿ ರೂಪಾಯಿ ಮೀಸಲಿಟ್ಟಿದ್ದರು. ಆದರೆ, ಅನೇಕ ಮೂಲಭೂತವಾದಿಗಳು ಮದರಸಾಗಳನ್ನು ಉಗ್ರರ ಅಡಗುತಾಣಗಳನ್ನಾಗಿಸಿಕೊಂಡಿರುವುದು ದುರಂತವಾಗಿದ್ದು, ಅಮಾಯಕ ಯುವಕರನ್ನು ಧರ್ಮದ ಹೆಸರಿನಲ್ಲಿ ಭಯೋತ್ಪಾದನೆಗೆ ತಳ್ಳುವ ಕಾರ್ಯ ನಡೆಯುತ್ತಿರುವ ಬಗ್ಗೆ ಮೋದಿ ಸರ್ಕಾರ ಎಚ್ಚರವಹಿಸಬೇಕಾಗಿದೆ.

– ಅಲೋಖಾ

 

Tags

Related Articles

Close