ಪ್ರಚಲಿತ

ಮನೀಶ್ ತಿವಾರಿಯಿಂದಾಗಿ ಸೋನಿಯಾ ಗಾಂಧಿ ರಾಜಕೀಯಕ್ಕೆ ಪೂರ್ಣವಿರಾಮ ಇಡುವರೇ?! ತಿರುಗಿ ಬಿತ್ತು ‘ಮೋದಿ ವಿರೋಧಿ’ ಮಂತ್ರ!

ಹಾ! ಕಾಂಗ್ರೆಸ್ ಅದೆಷ್ಟು ಅಸಹನೆಗೊಳಗಾಗಿದೆ ಎಂದರೆ ತನ್ನ ಸ್ಥಾನ, ಅಲ್ಪಸ್ವಲ್ಪ ಉಳಿದಿರುವ ಘನತೆಯನ್ನೂ ಮೀರಿ ವರ್ತಿಸುತ್ತದೆ ಎಂಬುದು ಮತ್ತೊಮ್ಮೆ
ಸಾಕ್ಷಿಯಾಗಿದೆ!

ಬಿಡಿ! ಶ್ರೀ ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದ ಕಾಂಗ್ರೆಸ್ ಒಂದಲ್ಲ ಒಂದು ರೀತಿಯಲ್ಲಿ ಅವಮಾನಗೊಳಿಸುತ್ತಲೇ ಬಂದಿದೆ! ನೆನ್ನೆ ಎಲ್ಲರಿಗೂ ಗೊತ್ತಿರುವ ಹಾಗೆ ಸಹಸ್ರಾರು ಜನ ಮೋದಿಯವರಿಗೆ ಜನುಮದಿನದ ಪ್ರಯುಕ್ತವಾಗಿ ಶುಭಕೋರಿದ್ದರೆ, ಕಾಂಗ್ರೆಸ್ ನ ನಾಯಕರು ಮಾತ್ರ ಮೋದಿಯವರನ್ನು ಹೀಗಳೆಯುವುದರಲ್ಲಿ ನಿರತರಾಗಿದ್ದರಷ್ಟೇ! ಬಿಡಿ! ಇಡೀ ದೇಶ ಸಂತಸ ಪಡುವ ಹೊತ್ತಿನಲ್ಲೆಲ್ಲ ಕಾಂಗ್ರೆಸ್ ದ್ವೇಷಿಸುತ್ತಲೇ ಕೂತಿರುತ್ತದಷ್ಟೇ! ಅದೇ ರೀತಿ, ನೆನ್ನೆಯೂ ಸಹ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಅಶ್ಲೀಲ ಭಾಷೆಗಳನ್ನು ಬಳಸಿ ಮೋದಿ ಹಾಗೂ ಅನುಯಾಯಿಗಳನ್ನು ನಿಂದಿಸಿರುವುದು ಆತನ ಸಂಸ್ಕಾರವನ್ನಷ್ಟೇ ತೋರಿಸಿದೆಯಷ್ಟೇ. ಅತಿರೇಕವೆನ್ನುವಷ್ಟು ಅವಹೇಳನ ಮಾಡಿರುವ ಮನೀಶ್ ತಿವಾರಿ ಹಾಗೂ ಆತನ ಬಳಗ ನೋಡಿದರೆ ಕಾಂಗ್ರೆಸ್ ನಲ್ಲಿರುವುದು ರೌಡಿಗಳಾ ಅಥವಾ ಸಂಸ್ಕಾರ ಹೀನ ಮನಃಸ್ಥಿತಿಯವರಾ ಎಂದು ಅನ್ನಿಸದಿರಲು ಸಾಧ್ಯವೇ ಇಲ್ಲ.

ತಪಸ್ವಿಯವರಿಗೆ ಬೈಯ್ಯುವುದೇ ಕೆಲಸ ಎಂದು ನಿಮಗನ್ನಿಸಿದರೆ ನನ್ನ ತಪ್ಪಲ್ಲ! ಆದರೆ, ಒಬ್ಬ ಪ್ರಸ್ತುತ ಅಧಿಕಾರದಲ್ಲಿರುವ ಪ್ರಧಾನ ಮಂತ್ರಿಯವರಿಗೆ ಇಂತಹ ಭಾಷೆ ಬಳಸಬಹುದಾ?!

”ಇಸ್ ಸೆ ಖಾತೇ ಹೈ ಚುತಿಯೋನ್ ಕೋ ಭಕ್ತ್ ಬನಾ ನಾ ಔರ್ ಭಕ್ತೋನ್ ಕೋ ಪರ್ಮನೆಂಟ್ ಚುತಿಯಾ ಬನಾ ನಾ – ಜೈ ಹೋ! even mahatma can
not teach modi deshabhakti.” ಇದು ಒಬ್ಬ ಕಾಂಗ್ರೆಸ್ ನಾಯಕನ ಹೇಳಿಕೆ!

ಏನು ಮಾಡಬಹುದು ನಾವು?! ‘ನಾಯಿ ಬೊಗಳುತ್ತಲೇ’ ಇರುತ್ತದೆ ಎಂದು ಸುಮ್ಮನಾಗಿಬಿಡುವುದೇ?! ಅಥವಾ, ಇಂತಹವರೆಲ್ಲ ಇಷ್ಟೇ! ತಾಳ್ಮೆ ಪರೀಕ್ಷಿಸುವುದಷ್ಟೇ ಇವರ ಕೆಲಸ ಎಂದು ತಿರಸ್ಕರಿಸಿ ನಡೆಯುವುದೇ?! ಅಥವಾ, ಮನೀಶ್ ತಿವಾರಿಯವರ ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಎಂದು ಬೆಂಬಲಿಸೋಣವೇ?!

ಹಿಂದಿನ ಸಾರಿ, ಒಬ್ಬ ಬಿಜೆಪಿ ಬೆಂಬಲಿಗ (ನಾಯಕನಲ್ಲ) ಟ್ವಿಟ್ಟರ್ ನಲ್ಲಿ ಅಶ್ಲೀಲವಾಗಿ ಬರೆದಿದ್ದಾಗ ಇದೇ ಕಾಂಗ್ರೆಸ್ಸಿಗರು ‘ಮೋದಿಯೇ ಹೊಣೆ’ ಎಂದಿದ್ದರು! ಪ್ರತೀ ಬಾರಿ, ಬಿಜೆಪಿ ಬೆಂಬಲಿಗರ ಆಕ್ರೋಶದ ನುಡಿಗಳಿಗೆ ‘ಮೋದಿ’ ಕಾರಣ ಎಂದು ರಾಜೀನಾಮೆ ಕೇಳುವ ಕಾಂಗ್ರೆಸ್ ನ ಸಿದ್ಧಾಂತಗಳನ್ನೇ ನಾವು ಪಾಲಿಸಿ ಕಾಂಗ್ರೆಸ್ ನ ಸೋನಿಯಾ ಗಾಂಧಿಗೆ ಪ್ರಶ್ನೆ ಮಾಡೋಣವೇ?! ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜಕೀಯವನ್ನು ಅವಶ್ಯವಾಗಿ ಕೈ ಬಿಡಬೇಕಲ್ಲವೇ?! ಯಾಕೆಂದರೆ ಅವಳದೇ ಪಕ್ಷದ ಟಾಪ್ ನಾಯಕ ಎನ್ನಿಸಿಕೊಂಡ ಮನೀಶ್ ತಿವಾರಿ ದೇಶದ ಪ್ರಧಾನಿಯ ವಿರುದ್ಧ ಅಶ್ಲೀಲವಾಗಿ ಮಾತನಾಡಿದ್ದಾನೆ!!!!

ಮನೀಶ್ ತಿವಾರಿಯ ದೇಶಭಕ್ತಿ ಪಾಠ!!

ಅಲ್ಲ ಮನೀಶ್ ತಿವಾರಿ!!! ಮಹಾತ್ಮಾ ಗಾಂಧಿಯೂ ಮೋದಿಗೆ ದೇಶಭಕ್ತಿಯನ್ನು ಹೇಳಿಕೊಡಲಾಗದಷ್ಟು ಮೋದಿ ದ್ರೋಹಿ ಎನ್ನುವ ಅರ್ಥವಿದೆಯಲ್ಲ. ದಯವಿಟ್ಟು, ನಿನ್ನ ಮಾತಿನ ಅರ್ಥವನ್ನು ವಿವರಿಸುವಷ್ಟು ಪುರುಸೊತ್ತು ನಿನಗಿದೆಯಾ?!

ದುರಂತವೆಂದರೆ ಮಹಾತ್ಮಾ ಎನ್ನುವ ಪಾಕಿಸ್ಥಾನದ ಪಿತಾಮಹ ಗಾಂಧಿಯನ್ನೇ ನಾವು ಸ್ವತಃ ಭಾರತದ ದೇಶಭಕ್ತ ಎಂದು ಒಪ್ಪುವುದಿಲ್ಲ! ಇನ್ನು ಪಾಕಿಸ್ಥಾನದ ದೇಶಭಕ್ತಿಯನ್ನು ಮೋದಿಯವರಿಗೆ ಹೇಳಿಕೊಡಲು ಎಲ್ಲಿ ಸಾಧ್ಯ ಬಿಡಿ!

ಯಾವುದು ನಿನ್ನ ದೇಶಭಕ್ತಿ?! ಜೆ ಎನ್ ಯು ನಲ್ಲಿ ಕಾಂಗ್ರೆಸ್ ಪ್ರೇರಿತ ಹುಚ್ಚ ಯುವಕರು ದೇಶವನ್ನು ತುಂಡು ಮಾಡುತ್ತೇವೆಂದಿದ್ದಾ?! ಅಥವಾ ಸಾಧ್ವಿ ಪ್ರಗ್ಯಾ ಹಾಗೂ ಕಾಲೊನೆಲ್ ಪುರೋಹಿತ್ ರನ್ನು ಕೇಸರೀ ಭಯೋತ್ಪಾದನೆಯನ್ನು ಸೃಷ್ಟಿಸಿ ಅದರ ಜಾಹೀರಾತಿನ ಸಲುವಾಗಿ ಚಾರ್ಜ್ ಶೀಟಿಲ್ಲದೇ ಜೈಲಿಗಟ್ಟಿದ್ದಾ?! ಅಸಹಿಷ್ಣುತೆ ಎಂಬ ನೆಪದಲ್ಲಿ ಇಡೀ ದೇಶದಲ್ಲಿ ಅಶಾಂತಿ ಹಬ್ಬಿಸಿದ್ದು ನಿನ್ನ ದೇಶಭಕ್ತಿಯಾ?! ರಾಜಕೀಯದ ಹೆಸರಿನಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆದದ್ದು ದೇಶಭಕ್ತಿಯಾ?! ಕಂಡ ಕಂಡವರ ಹೆಣ್ಣಿನ ಹಿಂದೆ ಬಿದ್ದ ಕೆಲವು ಕಾಂಗ್ರೆಸ್ ಘಟಾನುಘಟಿಗಳು ರಾಜಕೀಯವನ್ನೇ ಮರೆತು ಬೇಜವಾಬ್ದಾರಿಯಾಗಿ ವರ್ತಿಸಿದ್ದು ದೇಶಭಕ್ತಿಯಾ?! ಯಾವುದು ನಿನ್ನ ದೇಶಭಕ್ತಿ?!

https://twitter.com/majorkps/status/909320441734381568

ರಾಜಕೀಯಕ್ಕೆ ಸೋನಿಯಾ ಗಾಂಧಿ ರಾಜೀನಾಮೆ ನೀಡುವಳೇ?!

ಇದು ಮಿಲಿಯನ್ ಡಾಲರ್ ಪ್ರಶ್ನೆ! ತನ್ನದೇ ಪಕ್ಷದ ನಾಯಕನ ಈ ಅಶ್ಲೀಲತೆಗೆ ಸೋನಿಯಾಳ ಪ್ರತ್ಯುತ್ತರ ಏನಿರಬಹುದು?! ಹಾ! ಪ್ರತ್ಯುತ್ತರವನ್ನು ನಾನೇ ಹೇಳುತ್ತೇನೆ! ” ಇದು ಮನೀಶ್ ತಿವಾರಿಯ ವೈಯುಕ್ತಿಕ ಅಭಿಪ್ರಾಯ! ಪಕ್ಷ ಏನು ಮಾಡಲು ಸಾಧ್ಯ?! ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ!’

ಈ ಹಿಂದೆಯೂ ದಿಗ್ವಿಜಯ್ ಸಿಂಗ್ ನ ಪರಾಕ್ರಮ ಟ್ವಿಟ್ಟರ್ ನಲ್ಲಿ ಜಗಜ್ಜಾಹೀರಾಗಿತ್ತು! ಇದೇ ರೀತಿಯಾಗಿಯೇ ಅವಹೇಳನಕಾರಿಯಾಗಿ ಮಾತನಾಡಿದ್ದ ದಿಗ್ವಿಜಯ್ ಗೆ ಕಾಂಗ್ರೆಸ್ ಪಕ್ಷ ಯಾವುದೇ ಎಚ್ಚರಿಕೆಯನ್ನೂ ನೀಡದೇ ಅಪರೋಕ್ಷವಾಗಿ ಕೇಕೆ ಹಾಕಿ ಬೆಂಬಲಿಸುತ್ತಿತ್ತು.

ಕಳೆದ ವರ್ಷ ರಾಹುಲ್ ಗಾಂಧಿ ಮೋದಿಯವರಿಗೆ ‘ಖೂನ್ ಕಿ ದಲಾಲಿ’ (ರಕ್ತದ ದಲ್ಲಾಳಿ) ಎಂದು ಅಪಮಾನಿಸಿದಾಗಲೂ ಕಾಂಗ್ರೆಸ್ ನ ಯಾವ ದೊಣ್ಣೆ ನಾಯಕನಿಗೂ ವಿರೋಧಿಸುವ ತಾಕತ್ತು ಇರಲಿಲ್ಲ ಬಿಡಿ! ಈತನ ತಾಯಿ ಸೋನಿಯಾ ಕೂಡ ಮೋದಿಯವರಿಗೆ ‘ಸಾವಿನ ಸರದಾರ’ ಎಂಬ ಬಿರುದು ಕೊಟ್ಟಾಗಲೇ ಕಾಂಗ್ರೆಸ್ ಪಕ್ಷ ವಿರೋಧಿಸಿಲ್ಲ ವೆಂದ ಮೇಲೆ ಮನೀಶ್!! ನಿನ್ನ ಈ ಮಾತು ಅಚ್ಚರಿಯುಂಟು ಮಾಡುವುದಿಲ್ಲ!

ಸಂವಿಧಾನ ಹಾಗೂ ಕಾನೂನುಗಳು ಭಾರತದ ಆಡಳಿತ ವ್ಯವಸ್ಥೆಯಲ್ಲಿ ಇನ್ನೂ ಬದುಕಿದೆಯಾ?!

ಇದನ್ನು ನಾನು ಕೇಳಲೇಬೇಕಿದೆ! ಒಂದು ದೇಶದ, ಅಧಿಕಾರದಲ್ಲಿರುವ ಪ್ರಧಾನ ಮಂತ್ರಿಯವರಿಗೆ ಅಗೌರವದಿಂದ ನಡೆದುಕೊಂಡರೆ, ಅಶ್ಲೀಲವಾಗಿ ಮಾತನಾಡಿದರೆ, ಅಪಮಾನಿಸಿದರೆ ಸಂವಿಧಾನದಲ್ಲಿರುವ ಶಿಕ್ಷೆಯೇನು ಎಂಬುದರ ಅರಿವಿದೆಯೇ ಮನೀಶ್?!

66A ಸೆಕ್ಷನ್ ಅಡಿಯಲ್ಲಿ ಯಾರೊಬ್ಬನೂ ಯಾವುದೇ ಲೋಕಸಭಾ ಸದಸ್ಯನಿಗೆ ಸಾಮಾಜಿಕ ಜಾಲತಾಣಗಳ ಮೂಲಕ, ದೂರವಾಣಿಗಳ ಮೂಲಕ ಅಥವಾ ಇನ್ಯಾವುದೇ ತಂತ್ರಜ್ಞಾನ ಆಧಾರಿತ ಸಂವಹನದ ಮೂಲಕ, ಆಶ್ಲೀಲವಾಗಿಯಾಗಲಿ, ಅಪಮಾನವಾಗಿಯಾಗಲಿ ಅಥವಾ ಬೆದರಿಕೆಗಳನ್ನೆಸೆದರೆ ಆತನಿಗೆ ಮೂರು ವರ್ಷ ಜೈಲು ಹಾಗೂ ದಂಡ! ದಂಡವನ್ನೆಷ್ಟು ಕಟ್ಟಬೇಕು ಎಂಬುದನ್ನು ನ್ಯಾಯಾಲಯ ನಿರ್ಧರಿಸುತ್ತದೆ.

ಇದಲ್ಲದೇ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 (ಸಾರ್ವಜನಿಕ ನಿಂದನೆ), ಸೆಕ್ಷನ್ 504 (ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಮಾನ ಹಾಗೂ ಸಮಾಜದ ಶಾಂತಿ ಕದಡುವುದು), ಸೆಕ್ಷನ್ 505 (ದ್ವೇಷವನ್ನು ಹರಡುವುದು) ಪ್ರಕಾರ ನಿಮ್ಮ ಈ ಅಶ್ಲೀಲ ಟ್ವೀಟ್ ಕಾನೂನಾತ್ಮಕವಾಗಿ, ಸಂವಿಧಾತ್ಮಕವಾಗಿ ಶಿಕ್ಷಾರ್ಹ ಅಪರಾಧ!

ಆದರೂ, ದಿಗ್ವಿಜಯ್ ಸಿಂಗ್ ನನ್ನು, ನಿನ್ನನ್ನು ಹಾಗೂ ದೇಶದ್ರೋಹಿ ಹೇಳಿಕೆ ನೀಡಿದ ಕಾಂಗ್ರೆಸ್ ಪ್ರೇರಿತ ಜೆ ಎನ್ ಯು ಯುವ ಭಯೋತ್ಪಾದಕರು ಯಾವ್ಯಾವ
ಶಿಕ್ಷೆಗೊಳಪಡಬಹುದು ಎಂಬ ಅರಿವಿದೆಯಾ?! ಅಥವಾ, ಕಾಂಗ್ರೆಸ್ ಪಕ್ಷ ತಮ್ಮನ್ನು ರಕ್ಷಿಸಲು ಸಂವಿಧಾನವನ್ನು ಇಂದಿರಾ ಗಾಂಧಿಯ ತರಹ ದುರುಪಯೋಗ
ಮಾಡಿಕೊಳ್ಳುವಷ್ಟು ಕಾಣದ ಕೈಗಳು ನಿಮ್ಮೆಲ್ಲರ ಜೊತೆಗಿದೆಯಾ?!

ಹಾ!! ಈಗೇನು ಮಾಡುತ್ತೀರಿ?!

ಒಂದೋ ನಿಮ್ಮೆಲ್ಲರ ಹುಚ್ಚಾಟಕ್ಕೆ ಪ್ರೇರೇಪಿಸುತ್ತಿರುವ ಸೋನಿಯಾ ಗಾಂಧಿ ರಾಜೀನಾಮೆ ಕೊಡಲೇಬೇಕು. ಯಾಕೆಂದರೆ, ಅಪರಾಧಗಳಿಗೆ ಪ್ರೇರೇಪಿಸುವುದು ಕೂಡ ಸಂವಿಧಾನದಲ್ಲಿ ಶಿಕ್ಷಾರ್ಹ ಅಪರಾಧವೇ!

ಇನ್ನು ನಿಮ್ಮ ನಾಯಕರ ಹಡಾವಡಿ ಅಶ್ಲೀಲ ಅಪಮಾನಗಳನ್ನೆಲ್ಲ ನ್ಯಾಯಾಲಯ ಗಣನೆಗೆ ತೆಗೆದುಕೊಂಡು ಅಪರಾಧಕ್ಕೆ ತಕ್ಕ ಶಿಕ್ಷೆಯನ್ನೇ ಕೊಟ್ಟರೆ ಕಾಂಗ್ರೆಸ್ ಎಂಬ ಭಯೋತ್ಪಾದಕರ ಹಿತೈಷಿ ಪಕ್ಷವೊಂದು ಅದೆಷ್ಟು ಪಾಕಿಸ್ಥಾನಿ ದೇಶಭಕ್ತ ಪಕ್ಷ ಎಂಬುದು ಗೊತ್ತಾಗುತ್ತದೆ!

ಯೆಸ್ ಮನೀಶ್! ಮೊದಲು ನಿನ್ನ ಪಕ್ಷದವರಿಗೆ ಭಾರತದ ದೇಶಭಕ್ತರಾಗಿರಲು ಹೇಳಿಕೊಡು. ಉಳಿದವರ ಬಗೆಗಿನ ಕಾಳಜಿಯನ್ನು ಅವರವರವೇ ನೋಡಿಕೊಳ್ಳುತ್ತಾರೆ.!

ನೆನಪಿರಲಿ! ಕಾನೂನು, ಸೆಕ್ಷನ್ನುಗಳು ಹಾಗೂ ಶಿಕ್ಷೆಯ ಅವಧಿ! ಇಷ್ಟನ್ನೂ ಒದಗಿಸಿದ್ದೇನೆ!! ದಾವೆಯೊಂದು ಬಾಕಿಯಿದೆ!

– ತಪಸ್ವಿ

Tags

Related Articles

Close