ಪ್ರಚಲಿತ

ಮಹಾದಾಯಿ ಸಮಸ್ಯೆ ಇತ್ಯರ್ಥವಾಗದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡ್ಡಗಾಲು ಇಡುವುದಾದರೂ ಯಾಕೆ..? ಗೋವಾ ಕಾಂಗ್ರೆಸ್‍ನ್ನು ಪ್ರತಿಭಟಿಸಲು ಹೇಳಿದ “ಕೈ”ಕಮಾಂಡ್!!

ಮಹಾದಾಯಿ, ಕಳಸಾ-ಬಂಡೂರಿ ನೀರಿನ ಸಮಸ್ಯೆ. ಅದು ನಿನ್ನೆ ಮೊನ್ನೆಯದಲ್ಲ. 1972ರಿಂದ ಇಂದಿನವರಗೂ ನಿರಂತರವಾಗಿ ಅಲ್ಲಿನ ರೈತರು ಪ್ರತಿಭಟನೆಯನ್ನು ನಡೆಸುತ್ತಾ ತಮ್ಮ ಜೀವವನ್ನೇ ನೀರಿಗಾಗಿ ಮುಡಿಪಾಗಿ ಇಟ್ಟಿದ್ದಾರೆ. ಅದಷ್ಟೋ ಜೀವಗಳು ಈ ಯೋಜನೆಗಾಗಿ ಅನೇಕ ಜೀವಗಳೂ ಬಲಿಯಾಗಿವೆ. ರೈತರು ತಮ್ಮ ಪ್ರಾಣದ ಹಂಗನ್ನು ತೊರೆದೂ ಈ ಮಹದಾಯಿ ನೀರಿಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಾ ಕುಳಿತಿದ್ದಾರೆ.

ಹಲವಾರು ದಶಕಗಳಿಂದ ಉತ್ತರ ಕರ್ನಾಟಕ ಭಾಗದ ಜನರ ನೀರಿನ ಬವಣೆಯನ್ನು ಬತೀರಿಸಲು ಇಲ್ಲಿನ ರಾಜಕಾರಣಿಗಳಿಗೆ ಅಥವಾ ಇಲ್ಲಿನ ಸರ್ಕಾರಗಳಿಗೆ ಸಾಧ್ಯವಾಗಲೇ ಇಲ್ಲ. ಕೆಲವರು ಪ್ರಯತ್ನಿಸಿದ್ದರೂ ಈ ಸಮಸ್ಯೆ ಕಗ್ಗಂಟಾಗಿ ಉಳಿದಿದೆ. ಆದರೆ ಕೆಲವು ಸರಕಾರಗಳು ಈ ಸಮಸ್ಯೆಯನ್ನು ಇತ್ಯರ್ಥಗೊಳಿಸುವಲ್ಲಿ ತಮ್ಮ ಇಚ್ಚಾಶಕ್ತಿಯನ್ನು ಪ್ರದರ್ಶಿಸಲೇ ಇಲ್ಲ.

ಅಮಿತ್ ಶಾ ನಡೆಸಿದರು ಐತಿಹಾಸಿಕ ಸಂದಾನ…!

ಅಚ್ಚರಿಯಾದ್ರೂ ಸತ್ಯ… ಗುಜರಾತ್ ಚುನಾವಣೆ ಮುಗಿದ ತಕ್ಷಣವೇ ಅಮಿತ್ ಶಾ ದೃಷ್ಟಿ ನೆಟ್ಟಿದ್ದು ಕರ್ಣಾಟಕದತ್ತ. ಕರ್ನಾಟಕದ ಸಮಸ್ಯೆಗಳನ್ನು ಅವಲೋಕನ ಮಾಡುವಾಗ ಮಹಾದಾಯಿ ಸಮಸ್ಯೆ ಬಹುದೊಡ್ಡದಾಗಿ ಪರಿಣಮಿಸಿತ್ತು. ಹೀಗಾಗಿಯೇ ಅಮಿತ್ ಶಾ ಈ ಒಂದು ದೊಡ್ಡ ಸಮಸ್ಯೆಗೆ ಕೈ ಹಾಕಿಯೇ ಬಿಟ್ಟಿದ್ದರು. ನಿನ್ನೆ ತಾನೇ ಅಮಿತ್ ಶಾ ನೇತೃತ್ವದಲ್ಲಿ ದೆಹಲಿಯಲ್ಲಿ ಈ ಬಗ್ಗೆ ಸಭೆಯೂ ನಡೆದಿತ್ತು. ಈ ಸಭೆಯಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಕರ್ನಾಟಕದ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿಧಾನ ಸಭಾ ವಿರೋಧ ಪಕ್ಷದ ನಾಯಕ ಜಗಧೀಶ್ ಶೆಟ್ಟರ್, ಹುಬ್ಬಳ್ಳಿ ಸಂಸದ ಪ್ರಹ್ಲಾದ್ ಜೋಷಿ, ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಸಹಿತ ಅನೇಕ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದ್ದರು.

ಭಾರತೀಯ ಜನತಾ ಪಕ್ಷದ ವತಿಯಿಂದ ನಡೆದ ಈ ಐತಿಹಾಸಿಕ ಸಂಧಾನ ಸಭೆಯು ಬಹುತೇಕ ಯಶಸ್ವಿಯೂ ಆಗಿತ್ತು. ಮಹದಾಯಿ ನೀರನ್ನು ಉತ್ತರ ಕರ್ನಾಟಕದ ಜನತೆಗೆ ನೀಡಲು ಗೋವಾ ಸರ್ಕಾರ ಸಮ್ಮತಿಯನ್ನು ಸೂಚಿಸಿದೆ ಎಂದೇ ಹೇಳಲಾಗುತ್ತಿತ್ತು. ಇಂದು ಹುಬ್ಬಳ್ಳಿಯಲ್ಲಿ ನಡಯುವ ಪರಿವರ್ತನಾ ಯಾತ್ರೆಯ ಸಂದರ್ಭದಲ್ಲಿ ಇದರ ಬಗ್ಗೆ ಅಧಿಕೃತ ಘೋಷಣೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಯಶಸ್ವಿಯಾದರೆ ಅಮಿತ್ ಶಾ ದೇವರಂತೆಯೇ ಸರಿ..!

ನಿಸ್ಸಂಶಯವಾಗಿ ಹೇಳುತ್ತೇವೆ. ಈ ಒಂದು ಸಮಸ್ಯೆ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಪರಿಹಾರವಾದರೆ, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉತ್ತರ ಕರ್ನಾಟಕದ ಜನರ ಪಾಲಿಗೆ ದೇವರಂತೆಯೇ ಸರಿ. ಇಷ್ಟು ವರ್ಷ ಕಳೆದರೂ ಈ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಆದರೆ ಅಮಿತ್ ಶಾ ಮಧ್ಯ ಪ್ರವೇಶದಿಂದ ಇದಕ್ಕೆ ಪರಿಹಾರ ಸಿಗುತ್ತೇ ಎಂದಾದರೆ ಖಂಡಿತವಾಗಿಯೂ ಇದು ಬಿಜೆಪಿ ಚಾಣಾಕ್ಯನ ಮತ್ತೊಂದು ಚಾಣಾಕ್ಷ ನಡೆಯೆ.

ಒಲ್ಲೆ ಎಂದ ಸಿಎಂ ಸಿದ್ದರಾಮಯ್ಯ…

“ಯಾರನ್ನು ಕೇಳಿ ಅವರು ಸಂಧಾನ ಮಾಡಿದ್ರು. ನನ್ನನ್ನೇನು ಕೇಳಿಲ್ಲವಲ್ಲಾ… ನನ್ನನ್ನು ಕೇಳಬೇಕಿತ್ತಲ್ವಾ… ಇದನ್ನು ನಾನು ಒಪ್ಪುವುದಿಲ್ಲ. ಇದು ಸಾಧ್ಯವೇ ಇಲ್ಲ”. ಹೀಗೆಂದು ಬೊಗಳೆ ಬಿಟ್ಟದ್ದು ಮತ್ಯಾರೂ ಅಲ್ಲ. ಇಂದೋ ನಾಳೆ ನ್ಯಾಯ ಕೊಡುತ್ತಾರೆ ಎಂದು ಕಾಯುತ್ತಿದ್ದ ಸಾವಿರಾರು ಮಹಾದಾಯಿ ಹೋರಾಟಗಾರರ ಭರವಸೆಯ ನಾಯಕರಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ. ಇನ್ನೇನು ಸಮಸ್ಯೆ ಬಗೆಹರಿಸಿಯಾಯಿತು ಅನ್ನುವಷ್ಟರಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆಗೆ ಒಲ್ಲೆ ಎಂದಿದ್ದಾರೆ. ಕೇವಲ ಸಿದ್ದರಾಮಯ್ಯರನ್ನು ಬಿಟ್ಟು ರಾಜ್ಯ ಭಾರತೀಯ ಜನತಾ ಪಕ್ಷದ ನಾಯಕರು ಹೋಗಿ ಮಾತನಾಡಿದ್ದಾರೆ ಎನ್ನುವ ಉದ್ದೇಶಕ್ಕಾಗಿಯೇ ಅವರು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.

ಒಣ ಪ್ರತಿಷ್ಟೆಯೇ ಮುಖ್ಯವಾಯಿತಾ ಮುಖ್ಯಮಂತ್ರಿಗಳೇ..?

ದಶಕಗಳ ಸಮಸ್ಯೆಗೆ ಇನ್ನೇನು ಮುಕ್ತಿ ಸಿಗುತ್ತೆ ಎನ್ನುವ ಸಂಭ್ರಮದಲ್ಲಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಕ್ ನೀಡಿದ್ದಾರೆ. ಅಮಿತ್ ಶಾ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಸಂಧಾನಕ್ಕೆ ತನ್ನನ್ನು ಕರೆದಿಲ್ಲ ಎನ್ನುವ ಏಕೈಕ ಕಾರಣಕ್ಕೆ ಇದನ್ನು ನಾನು ಒಪ್ಪುವುದಿಲ್ಲ ಎಂದು ಹೇಳುವುದು ಎಷ್ಟು ಸರಿ..? ಯಾರಾದರೂ ಇರಲಿ, ಸಮಸ್ಯೆಗೆ ಪರಿಹಾರ ಸಿಕ್ಕರೆ ಸಾಕು ಎಂದು ಹೇಳಬೇಕಾಗಿದ್ದ ಮುಖ್ಯಮಂತ್ರಿಗಳು ಈ ರೀತಿ ಹೇಳಿಕೆ ನೀಡುವುದು ಎಷ್ಟು ಸರಿ..?

ಮುಖ್ಯಮಂತ್ರಿಗಳೇ… ನಿಮಗೆ ಕೊಟ್ಟ ಅವಕಾಶವನ್ನು ಉಪಯೋಗಿಸಿಲ್ಲವೇಕೆ..?

ಒಂದಲ್ಲ, ಎರಡಲ್ಲ, ಅದೆಷ್ಟೋ ಬಾರಿ ಸಾರಿ ಸಾರಿ ಹೇಳುತ್ತಿದರು ರಾಜ್ಯದ ಜನತೆ. ಮುಖ್ಯಮಂತ್ರಿಗಳೇ ಒಮ್ಮೆ ಮಹಾದಾಯಿ ಸಮಸ್ಯೆಯನ್ನು ಬಗೆಹರಿಸಿ ಬಿಡಿ. ನಮಗೆ ನೀರು ದಕ್ಕಿಸಿಕೊಡಿ. ನೀವು ನಮಗೆ ದೇವರಾಗಿ ಬಿಡುತ್ತೀರಿ ಎಂದು ಅದೆಷ್ಟೋ ಬಾರಿ ಗೋಗರೆದರೂ ಮುಖ್ಯಮಂತ್ರಿಗಳು ಅದ್ಯಾಕೆ ಆಸಕ್ತಿ ತೋರಲಿಲ್ಲ. “ನಾವು ಅಲ್ಲಿನ ಬಿಜೆಪಿ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತೇವೆ, ನೀವು ಅಲ್ಲಿನ ವಿರೋಧ ಪಕ್ಷವಾದ ಕಾಂಗ್ರೆಸ್‍ನೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಡಿ” ಎಂದು ಭಾರತೀಯ ಜನತಾ ಪಕ್ಷದ ನಾಯಕರು ಹೇಳುಯತ್ತಲೇ ಬರುತ್ತಿದ್ದರೂ ನೀವ್ಯಾಕೆ ಈ ಬಗ್ಗೆ ಸೊಲ್ಲೆತ್ತಲಿಲ್ಲ. ನಿಮ್ಮಿಂದ ನ್ಯಾಯವನ್ನು ಕಾಯುತ್ತಾ, ಅದು ಸಿಗೋದಿಲ್ಲ ಎಂದು ಭಾರತೀಯ ಜನತಾ ಪಕ್ಷದ ನಾಯಕರು ತಾವೇ ಆಸಕ್ತಿ ವಹಿಸಿ ಅದಕ್ಕೆ ಯಾರಿಂದ ಹೇಗೆ ಬೇಕೋ ಹಾಗೆ ಸಂಧಾನ ನಡೆಸಿ ಬಗೆಹರಿಸಲು ಪ್ರಯತ್ನ ಪಟ್ಟರೆ ನೀವ್ಯಾಕೆ ಅಡ್ಡಕಾಲಿಡುತ್ತೀರಿ..?

ಅಮಿತ್ ಶಾ ಸಂಧಾನಕ್ಕೆ ನೀವು ಒಪ್ಪುತ್ತೀರಾ..?

ಇಷ್ಟಕ್ಕೂ ಅಲ್ಲಿ ನಡೆದಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಧಾನ ಅಲ್ಲ. ಅಲ್ಲಿ ನಡೆದಿದ್ದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದ ಸಂಧಾನ. ಇದು ಸರ್ಕಾರದ ಹೊರತಾಗಿ ಒಂದು ಪಕ್ಷದಿಂದ ನಡೆದಿದ್ದ ಸಂಧಾನ. ಒಂದು ವೇಳೆ ಈ ಸಂಧಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕರೆದಿದ್ದರೆ ಅವರು ಏನನ್ನುತ್ತಿದ್ದರು..? “ಕರ್ನಾಟಕದ ಮಹದಾಯಿ ನೀರಿನ ಸಮಸ್ಯೆ ಬಗ್ಗೆ ಸಂಧಾನ ನಡೆಸಲು ಅಮಿತ್ ಶಾ ಯಾರು, ಅದು ಪಕ್ಷದ ವತಿಯಿಂದ ನಡೆಯುವ ಮಾತುಕತೆ. ನಾನು ಆ ಸಭೆಗೆ ಹೋಗೋದಿಲ್ಲ” ಎಂದೇ ಹೇಳುತ್ತಿದ್ದರು. ನಿಸ್ಸಂಶಯವಾಗಿ ಮುಖ್ಯಮಂತ್ರಿಗಳು ಹೀಗೆ ಹೇಳುತ್ತಿದ್ದರು ಅನ್ನವುದರಲ್ಲಿ ಅನುಮಾನವೇ ಇಲ್ಲ. ಯಾಕೆಂದರೆ ಈ ಹಿಂದೆಯೂ ಇಂತಹ ಹಲವಾರು ಪ್ರಕರಣಗಳಲ್ಲಿ ಮುಖ್ಯಮಂತ್ರಿಗಳು ಹೀಗೇನೇ ಹೇಳಿದ್ದರು.

ಸುಲಭವಿಲ್ಲ ಈ ಸಮಸ್ಯೆಗೆ ಪರಿಹಾರ..!

ಒಂದಂತೂ ಸತ್ಯ. ಮಹದಾಯಿ ನೀರಿನ ಸಮಸ್ಯೆಯನ್ನು ಬಗೆಹರಿಸುವುದು ಸುಲಭದ ಮಾತೇನಲ್ಲ. ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡಬೇಕು ಎನ್ನುವಾಗ ನಾವು ಹೇಗೆ ಪ್ರತಿಭಟನೆ ಮಾಡಿ ಆಕ್ಷೇಪ ವ್ಯಕ್ತ ಪಡಿಸಿದ್ದೆವೋ ಅಂತೆಯೇ ಗೋವಾದಲ್ಲಿಯೂ ಅಲ್ಲಿನ ಜನತೆ ಬೀದಿಗಿಳಿಯುತ್ತಾರೆ. ಆವಾಗ ಅಲ್ಲಿನ ಸರ್ಕಾರ ಆ ಜನತೆಗೆ ಉತ್ತರ ನೀಡಬೇಕಾಗುತ್ತದೆ. ಈ ಕಾರಣದಿಂದಲೇ ಎಲ್ಲಾ ಸರ್ಕಾರಗಳೂ ಈ ಬಗ್ಗೆ ಹಿಂದೇಟು ಹಾಕುವುದೂ ಸಹಜವಾಗಿದೆ.

ಗೋವಾ ಕಾಂಗ್ರೆಸ್‍ಗೆ ಪ್ರತಿಭಟಿಸಲು ಹೇಳಿದ ಕೈಕಮಾಂಡ್…

ಸಮಸ್ಯೆ ಇನ್ನೇನು ಬಗೆಹರಿಯಿತು ಎನ್ನುವಷ್ಟರಲ್ಲಿ ಗೋವಾ ಕಾಂಗ್ರೆಸ್‍ಗೆ ತಮ್ಮ ಹೈಕಮಾಂಡ್‍ನಿಂದ ಆದೇಶವೊಂದು ಬಂದು ಬಿಡುತ್ತೆ. ಯಾವುದೇ ಕಾರಣಕ್ಕೂ ಕರ್ನಾಟಕಕ್ಕೆ ನೀರು ಹರಿಸಬಾರದು. ಈ ಬಗ್ಗೆ ನೀವು ಪ್ರತಿಭಟನೆ ಮಾಡಿ. ಬಿಜೆಪಿ ನಡೆಸಿರುವ ಸಂಧಾನವನ್ನು ವಿಫಲಗೊಳಿಸಿ ಎಂದು ಆದೇಶವೊಂದು ಬಂದೇ ಬಿಡುತ್ತೆ.

ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೇ… ಯಾಕೆ ಈ ಬಗ್ಗೆ ಮೌನವಾಗಿದ್ದೀರಿ. ಭಾರತೀಯ ಜನತಾ ಪಕ್ಷದ ನಾಯಕರು ಈ ಬಗ್ಗೆ ಗೋವಾ ಸರ್ಕಾರದ ಮನವೊಲಿಸಿದ್ದಾರಲ್ಲವೇ. ಗೋವಾದಲ್ಲಿರುವ ನಿಮ್ಮ ಕಾಂಗ್ರೆಸ್ ನಾಯಕರ ಮನವೊಲಿಸಲು ನಿಮ್ಮಿಂದ ಯಾಕೆ ಸಾಧ್ಯವಾಗುತ್ತಿಲ್ಲ. ಮಹದಾಯಿ ಯೋಜನೆ ಬಗ್ಗೆ ನಿಮಗೆ ನಿಜವಾಗಿಯೂ ಕಾಳಜಿ ಇದ್ದದ್ದೇ ಆದರೆ ಗೋವಾ ಕಾಂಗ್ರೆಸ್ ನಾಯಕರ ಮನವೊಲಿಸಿ ಇಲ್ಲಿನ ಬಿಜೆಪಿ ನಾಯಕರೊಂದಿಗೆ ಸಹಯಕರಿಸಿ. ತಮ್ಮಲ್ಲಿ ಅಧಿಕಾರ ಇಲ್ಲದೆಯೂ ಬಿಜೆಪಿ ನಾಯಕರು ಇಂತಹ ಕೆಲಸಗಳನ್ನು ಮಾಡಿದ್ದಾರೆ ಎಂದು ಖುಷಿ ಪಡಿ. ಅದು ಬಿಟ್ಟು ರಾಜಕೀಯ ಮಾಡಿ ನಿಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಬೇಡಿ.

ಈ ಹಿಂದೆ ನಿಮ್ಮ ಕಾಂಗ್ರೆಸ್‍ನ ಅಧಿನಾಯಕಿ ಸೋನಿಯಾ ಗಾಂಧಿನೂ ಗೋವಾ ಜನತೆಗೆ ಅಭಯ ನೀಡಿದ್ದನ್ನು ನೀವು ಮರೆತು ಬಿಟ್ಟಿದ್ದೀರೇನೂ..? ನನ್ನ ಜೀವ ಇರುವವರೆಗೂ ಮಹದಾಯಿ ನೀರನ್ನು ಕರ್ನಾಟಕಕ್ಕೆ ಹರಿಸಲು ಬಿಡೋದಿಲ್ಲಾ ಎಂದು ಹೇಳಿದ್ದ ಸೋನಿಯಾ ಗಾಂಧಿಯ ಬಗ್ಗೆ ನೀವೆನನ್ನುತ್ತೀರಿ..? ಈಗ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇದರ ಬಗ್ಗೆ ಆಸಕ್ತಿ ವಹಿಸಿ ಕರ್ನಾಟಕದ ಜನತೆಯ ಸಹಾಯಕ್ಕೆ ಧಾವಿಸಿದ್ದಾರೆ. ನೀವೂ ಕೂಡಾ ನಿಮ್ಮ ಹೈಕಮಾಂಡ್‍ನ್ನು ಒಪ್ಪಿಸಿ ಅಲ್ಲಿ ಕಾಂಗ್ರೆಸ್ ಜೊತೆ ಮಾತುಕತೆ ನಡೆಸಿ ಈ ಬಗ್ಗೆ ಒಂದು ನಿಲುವಿಗೆ ಬನ್ನಿ. ನಿಮ್ಮ ಕಾಂಗ್ರೆಸ್ ನಾಯಕರನ್ನು ಗೋವಾ ಕಾಂಗ್ರೆಸ್ ಜೊತೆ ಸಂಧಾನ ನಡೆಸಲು ಹೇಳಿ. ಆವಾಗ ಈ ಸಮಸ್ಯೆ ಬಗೆಹರಿಯಲೂ ಬಹುದಲ್ಲವೇ..? ಅದು ಬಿಟ್ಟು, ಇದು ಆ ಪಕ್ಷ ಮಾಡಿದ್ದು,ಈ ಪಕ್ಷ ಮಾಡಿದ್ದು ಎಂದು ಬೊಗಳೆ ಬಿಡುತ್ತಾ ಸುಮ್ಮನೆ ರಾಜಕೀಯ ಮಾಡಬೇಡಿ. ನಿಜವಾಗಿಯೂ ನಿಮಗೆ ಆ ಭಾಗದ ಜನರ ಮೇಲೆ ಕರುಣೆ ಇದ್ದರೆ ಮೊದಲು ಈ ವಿಚಾರವಾಗಿ ಸ್ಪಂಧಿಸಿ.

-ಸುನಿಲ್ ಪಣಪಿಲ

Tags

Related Articles

Close