ಪ್ರಚಲಿತ

ಮಹಾದಾಯಿ ಹೋರಾಟಕ್ಕೆ ಕನ್ನಡನಾಡಿನ ಸಮಸ್ತ ಜನರಿಂದಲೂ ಬೆಂಬಲವಿದೆ ಆದರೆ ರಾಜಕೀಯ ಪ್ರೇರಿತವಾಗಿ ಹೋರಾಟ ನಡೆಸಿದರೆ ನಮಗೆ ಖಂಡಿತವಾಗಿಯೂ ನೀರು ಸಿಗಲ್ಲ!!

ರಾಜ್ಯದಲ್ಲಿ ಚುನಾವಣೆಗೆ ಇನ್ನೇನು 3-4 ತಿಂಗಳುಗಳು ಬಾಕಿ ಇವೆ, ಚುನಾವಣೆಯ ಹೊಸ್ತಿಲಲ್ಲಿ ರಾಜ್ಯದಲ್ಲಿ ಪ್ರತಿಭಟನೆಗಳ ಕಾವೂ ಹೆಚ್ಚಾಗತೊಡಗಿವೆ.

ಒಂದೆಡೆ ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು, ಮತ್ತೊಂದೆಡೆ ಮಹಾದಾಯಿ ಹೋರಾಟದ ಬಿಸಿ. ಆದರೆ ಈ ಪ್ರತಿಭಟನೆಗಳು, ಹೋರಾಟಗಳು ಮಾತ್ರ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧವಲ್ಲ, ಬದಲಾಗಿ ಮೋದಿ ಹಾಗು ಬಿಜೆಪಿ ವಿರುದ್ಧ!!

ಹೌದು ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಗೆ ಒತ್ತಾಯಿಸಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಡೆಸುತ್ತಿರುವ ಲಿಂಗಾಯತ ಮಹಾರ್ಯಾಲಿಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವೇ ಟೊಂಕಕಟ್ಟಿ ನಿಂತು ಮೋದಿ, ಬಿಜೆಪಿ ವಿರುದ್ಧ ವಿಷ ಕಕ್ಕುತ್ತಿದೆ.

ಇತ್ತ ಮಹಾದಾಯಿ ಹೋರಾಟಗಾರರ ಹೋರಾಟ 900 ದಿನಗಳನ್ನ(ಅಂದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬಂದಾಗಿನಿಂದ ಶುರುವಾದ ಹೋರಾಟ) ಪೂರೈಸುವ ಹೊಸ್ತಿಲಲ್ಲಿದ್ದರೂ ಇನ್ನೂ ಆ ವಿಷಯವಾಗಿ ತನ್ನ ಪ್ರಯತ್ನ ಮಾಡದೆ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಮತ್ತೆ ಮಹಾದಾಯಿ ಹೋರಾಟಗಾರರ ಹೆಸರಲ್ಲಿ ಮೋದಿ, ಮನೋಹರ ಪಾರಿಕ್ಕರ್, ಬಿಎಸ್ವೈ, ಬಿಜೆಪಿ ವಿರುದ್ಧ ವಿಷ ಕಕ್ಕಿಸುವ ದುಸ್ಸಾಹಸಕ್ಕೆ ಕೈ ಹಾಕಿದೆ.

ಕಳಸ-ಬಂಡೂರಿ ರೈತ ಹಿತ ರಕ್ಷಣಾ ಸಮಿತಿಯವರೇ ಇಂದು ನೀವು ನಡೆಸುತ್ತಿರುವ
ಉತ್ತರ ಕರ್ನಾಟಕ ಬಂದ್ ಯಾರ ವಿರುದ್ದ ಅಂತ ಸ್ವಲ್ಪ ತಿಳಿಸಿ

ಕಳಸ-ಬಂಡೂರಿ ಯೋಜನೆಗೆ ಅನುಮತಿ ನೀಡಿ 7.5 ಟಿಎಂಸಿ ನೀರು ಬಿಡುವ ಆದೇಶ ಹೊರಡಿಸಿದ್ದ ಅಟಲ್ ಬಿಹಾರಿ ವಾಜಪೇಯಿಯವರ ಬಿಜೆಪಿ ಪಕ್ಷದ ವಿರುದ್ದವೋ !?

* ಉಪಮುಖ್ಯಮಂತ್ರಿಯಾಗಿ ಹಣಕಾಸು ಸಚಿವರಾಗಿ ಕುಮಾರಸ್ವಾಮಿಯವರೊಂದಿಗೆ ಜಗಳ ಮಾಡಿ 100 ಕೋಟಿ ಹಣ ಬಿಡುಗಡೆ ಮಾಡಿ ಕಳಸ -ಬಂಡೂರಿ ಯೋಜನೆಗೆ ಶಂಕುಸ್ಥಾಪನೆ ಹಾಕಿದ ಯಡಿಯೂರಪ್ಪನವರ BJP ವಿರುದ್ದವೋ !?

* ಗೋವಾ ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ರನ್ನ ಒಪ್ಪಿಸಿ “ಕುಡಿಯುವ ನೀರಿಗೆ ನಮ್ಮ ತಕರಾರು ಇಲ್ಲ”ವೆಂದು ವಾಗ್ದಾನ ಪತ್ರ ತಂದ ಯಡಿಯೂರಪ್ಪನವರ ಬಿಜೆಪಿ ವಿರುದ್ದವೋ !?

* ಕುಡಿಯುವ ನೀರು ಬಿಡಲು ಸಿದ್ದವಾಗಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರರ ಬಿಜೆಪಿ ವಿರುದ್ದವೋ !?

* ಕರ್ನಾಟಕಕ್ಕೆ ಗೋವಾದಿಂದ ಒಂದು ಹನಿ ನೀರು ಬಿಡಲು ಅವಕಾಶ ನೀಡುವುದಿಲ್ಲವೆಂದು ಬಹಿರಂಗವಾಗಿ ಶಪಥ ಮಾಡಿದ ಸೋನಿಯಾಗಾಂಧಿಯ ಕಾಂಗ್ರೇಸ್ ವಿರುದ್ದವೋ !?

* ದೇಶದ ಪ್ರಧಾನಿಯಾಗಿ 10 ವರ್ಷಗಳ ಕಾಲ ಸಮಸ್ಯೆ ಬಗೆಹರಿಸದೆ ಮೌನವಾಗಿದ್ದ ಮನಮೋಹನ್ ಸಿಂಗ್ ರ ಕಾಂಗ್ರೇಸ್ ವಿರುದ್ದವೋ !?

* ನಾಲ್ಕು ವರ್ಷದಿಂದ ಏನು ಮಾಡದೆ ನಿದ್ರೆ ಮಾಡುತ್ತಾ ಪುಕಾರುಗಳೊಂದಿಗೆ ಎತ್ತಿಕಟ್ಟುವ ರಾಜಕೀಯ ಮಾಡುತ್ತಿರುವ ಸಿದ್ದರಾಮಯ್ಯನವರ ಕಾಂಗ್ರೇಸ್ ವಿರುದ್ದವೋ !?

* ದೇಶದ ಪ್ರಧಾನಿಯಾಗಿದ್ದು ಕಳಸ-ಬಂಡೂರಿ ಯೋಜನೆಗೆ ಅನುಮತಿ ನೀಡದ ದೇವೇಗೌಡರ ಜೆಡಿಎಸ್ ವಿರುದ್ದವೋ ?

* ಕಳಸ-ಬಂಡೂರಿ ಯೋಜನೆ ವಿರೋಧಿಸಿ ಶಂಕುಸ್ಥಾಪನೆಗೆ ಬಾರದೆ ಮುನಿಸಿಕೊಂಡಿದ್ದ ಕುಮಾರಸ್ವಾಮಿಯವರ JDS ವಿರುದ್ದವೋ ?

* ಕರ್ನಾಟಕಕ್ಕೆ ಗೋವಾ ಮುಖ್ಯಮಂತ್ರಿ ನೀರು ಬಿಡಲು ಒಪ್ಪಿರುವ ಮನೋಹರ್ ಪಾರಿಕ್ಕರರನ್ನ ವಿರೋಧಿಸುತ್ತಿರುವ ಗೋವಾ ಕಾಂಗ್ರೇಸ್ ವಿರುದ್ದವೋ ?

ಯಾರ ವಿರುದ್ದ ಬಂದ್ ಎಂಬುದನ್ನು ಸ್ಪಷ್ಟಪಡಿಸಿ ಹೋರಾಟಗಾರರೇ!!

ಚುನಾವಣೆ ಉದ್ದೇಶವಿಟ್ಟುಕೊಂಡೂ BJP ಆಫೀಸ್ ಮುಂದೆ ಕುಳಿತು ಕಾಂಗ್ರೇಸ್ ಪ್ರೇರಿತ ಪ್ರತಿಭಟನೆ ಮಾಡಿದಂತೆ ಕಾಂಗ್ರೇಸ್ ಪ್ರೇರಿತ ಬಂದ್ ಮಾಡಿದರೆ ಅದಕ್ಕೆ ನಮ್ಮ ವಿರೋಧವಿದೆ.

ಅಷ್ಟಕ್ಕೂ ಕಳಸ ಬಂಡೂರಿ ನಾಲಾ ಯೋಜನೆಯನ್ನ ಅನುಷ್ಠಾನಗೊಳಿಸಿ ಉತ್ತರಕರ್ನಾಟಕದ ಜನತೆಗೆ ಕುಡಿಯಲು ನೀರು ಕೇಳಿ ಗೋವಾ ಸಿಎಂ ಗೆ ಪತ್ರ ಬರೆದು ಸಮಸ್ಯೆ ಬಗೆಹರಿಸೋಕೆ ಮುಂದಾದ ಬಿಜೆಪಿಯ ಪ್ರಯತ್ನವನ್ನ ಶ್ಲಾಘಿಸಿ “ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ವಿರೋಧ ಪಕ್ಷವಾಗಿ ಅವರು ಅಷ್ಟಾದರೂ ಪ್ರಯತ್ನ ಪಡ್ತಿದಾರೆ ನೀವೇನು ಕಿತ್ತು ದಬ್ಬಾಕ್ತಿದೀರಾ ಹೇಳಿ?” ಅಂತ ಮುಖ್ಯಮಂತ್ರಿ ನಿವಾಸದೆದುರು ಪ್ರತಿಭಟಿಸೋದು ಬಿಟ್ಟು ಸಮಸ್ಯೆ ಬಗೆಹರಿಸಲು ಮುಂದಾದವರ ವಿರುದ್ಧವೇ ಪ್ರತಿಭಟಿಸುತ್ತಿರೋದನ್ನ ನೋಡಿದರೆ ಇದು ಪಕ್ಕಾ ರಾಜಕೀತ ಪ್ರೇರಿತ ಹೋರಾಟ ಅನ್ನೋದನ್ನ ಜನ ಅರ್ಥ ಮಾಡಿಕೊಳ್ಳದೇ ಇರೋಷ್ಟು ದಡ್ಡರೇನಲ್ಲ.

ಮಹಾದಾಯಿ ಹೋರಾಟ ನಡೆದಾಗ ಕಳೆದ ವರ್ಷ ಹೆಣ್ಣುಮಕ್ಕಳು, ರೈತರು, ಮಕ್ಕಳು ಅನ್ನೋದನ್ನೂ ನೋಡದೆ ಮನೆಗೆ ನುಗ್ಗಿ ಎಳೆತಂದು ಗರ್ಭಿಣಿಯರ ಸಮೇತ ಬಾಸುಂಡೆ ಬರುವ ರೀತಿಯಲ್ಲಿ ಪೋಲಿಸರಿಂದ ಬಡಿಸಿದ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಧರಣಿ ಮಾಡೋದನ್ನ ಬಿಟ್ಟು ಯಾರ ವಿರುದ್ಧ ನೀವು ಪ್ರತಿಭಟನೆ ನಡೆಸುತ್ತಿದ್ದೀರಾ?

ಕಳೆದ 3-4 ದಿನಗಳಿಂದ ಬಿಜೆಪಿ ಕಛೇರಿಯೆದುರು ಧರಣಿ ಕೂತಿರುವ ಹಾಗು ನೇತೃತ್ವ ವಹಿಸಿರುವವರಲ್ಲಿ ಅನೇಕರು ಕಾಂಗ್ರೆಸ್ ಮುಖಂಡರೂ ಭಾಗಿಯಾಗಿದ್ದಾರೆ ಅನ್ನೋದನ್ನೂ ಮಾಧ್ಯಮಗಳು ಬಿತ್ತರಿಸುತ್ತಿವೆ.

ಬಿಜೆಪಿ ಆಫೀಸಿನ ಮುಂದೆ ಪ್ರತಿಭಟನೆ ನಡೆಸಿದಾಗ ಬೆಂಬಲ ಕೊಡದ ರೈತರು ಅದೇ ಕಾಂಗ್ರೆಸ್ ಕಛೇರಿಯೆದುರು ಧರಣಿಗೆ ಮುಂದಾದಾಗ ಬೆಂಬಲ ನೀಡಿ ಸೇರಿಕೊಂಡಿದ್ದನ್ನ ನೋಡಿದರೆ ಈ ಹೋರಾಟ ನೀರಿನ ಸಲುವಾಗಿ ಅಲ್ಲ ಬದಲಾಗಿ ರಾಜಕೀಯಕ್ಕೋಸ್ಕರ ಅನ್ನೋದು ಸ್ಪಷ್ಟವಾಗಿ ಅರ್ಥವಾಗುತ್ತಿದೆ.

ಮಹಾದಾಯಿ ನೀರಿನಿಂದ ಉತ್ತರಕರ್ನಾಟಕದ ನೀರಿನ ಬವಣೆ ಬಗೆಹರಿಯುತ್ತೆ ಆದರೆ ಸಮಸ್ಯೆಯನ್ನ ಸಮಸ್ಯೆಯಾಗೇ ಇಟ್ಟು ಅದರ ಮೇಲೆ ರಾಜಕೀಯದಾಟ ಆಡಲು ಹೋದರೆ ಖಂಡಿತವಾಗಿಯೂ ನಮಗೆ ನೀರಲ್ಲ ಈ ರಾಜಕೀಯ ನಾಯಕರು ವಿಷ ಕುಡಿಸಿಬಿಡುತ್ತಾರೆ ಎಚ್ಚರ!!

ನಮಗೆ ಮಹಾದಾಯಿ ಹೋರಾಟ ಹಾಗು ನೀರು ಮುಖ್ಯ ಆದರೆ ಅದರ ಹೆಸರಲ್ಲಿ ರಾಜಕೀಯದಾಟ ಆಡಲು ಹೋದರೆ ಮುಂದಿನ ದಿನಗಳಲ್ಲಿ ಜನರು ಹೋರಾಟಗಾರರ ನೈತಿಕತೆಯನ್ನೇ ಪ್ರಶ್ನಿಸಿ ತಮ್ಮ ಬೆಂಬಲ ವಾಪಸ್ ಪಡೆದು ನೈಜ ಹೋರಾಟಗಾರರಿಗೆ ಹಿನ್ನಡೆಯಾಗಬಹುದು.

ಮಹಾದಾಯಿ ಹೋರಾಟಕ್ಕೆ ಕನ್ನಡನಾಡಿನ ಸಮಸ್ತ ಜನರಿಂದಲೂ ಬೆಂಬಲವಿದೆ ಆದರೆ ರಾಜಕೀಯ ಪ್ರೇರಿತವಾಗಿ ಹೋರಾಟ ನಡೆಸಿದರೆ ನಮಗೆ ಖಂಡಿತವಾಗಿಯೂ ನೀರು ಸಿಗಲ್ಲ!!

– Vinod Hindu Nationalist

Tags

Related Articles

Close