ಪ್ರಚಲಿತ

ಮುಸ್ಲಿಮರ ರಕ್ತದಲ್ಲಿ ಕಾಂಗ್ರೆಸ್ ಇರಬೇಕು!! ಇದು ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರ್ ಅವರ ಆಜ್ಞೆ!!

ಕಾಂಗ್ರೆಸ್ ಪಕ್ಷದಲ್ಲಿ ಚುನಾವಣಾ ಪ್ರಚಾರ ಬಿರುಸಾಗಿ ಸಾಗುತ್ತಿದ್ದು, ಮೈಸೂರಿನ ಅಲ್ಪಸಂಖ್ಯಾತರ ಕಾಂಗ್ರೆಸ್ ಐಕ್ಯತಾ ಸಮಾವೇಶದಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಿ ಪರಮೇಶ್ವರ್ ಹೇಳಿಕೆ ನೀಡಿರುವುದು ಇದೀಗ ಬಾರೀ ಮಟ್ಟದಲ್ಲಿ ಸುದ್ದಿಯಾಗಿದೆ.

ಹೌದು…. ಒಂದು ಕಡೆ ರಾಹುಲ್ ಗಾಂಧಿಯ ಚುನಾವಣಾ ಪ್ರಚಾರ ಜೋರಾಗಿಯೇ ನಡೆಯುತ್ತಿದ್ದು ಹಿಂದುಗಳ ಮನವೊಲೈಕೆಗಾಗಿ ದೇವಾಲಯಗಳ ದರ್ಶನ
ಮಾಡುತ್ತಿರುವುದು ಗೊತ್ತೇ ಇದೆ!! ಆದರೆ ಐತಿಹಾಸಿಕ ಸೋಮನಾಥ ದೇಗುಲಕ್ಕೆ ಭೇಟಿ ನೀಡಿದ್ದ ಅವರು ಪೂಜೆ ಸಲ್ಲಿಸುವುದಕ್ಕೂ ಮುನ್ನ ದೇಗುಲದ ನೋಂದಣಿ
ಪುಸ್ತಕದಲ್ಲಿ ರಾಹುಲ್ ಹಿಂದುಯೇತರ ವ್ಯಕ್ತಿ ಎಂದು ನಮೂದಿಸಿ ತೀವ್ರ ವಿವಾದಕ್ಕೆ ಗುರಿಯಾಗಿದ್ದರು!! ಆದರೆ ಇದೀಗ ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಿ ಪರಮೇಶ್ವರ್ ಅವರು ನೀಡಿದ ಹೇಳಿಕೆ ಭಾರಿ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

“ಅಲ್ಪಸಂಖ್ಯಾತರಿಗಾಗಿ ಕಾಂಗ್ರೆಸ್ ಪಕ್ಷ ಬಲಿದಾನ ಮಾಡಿದೆ. ಮುಸಲ್ಮಾನರ ರಕ್ತದಲ್ಲಿ ಕಾಂಗ್ರೆಸ್ ಇರಬೇಕು. ಮುಸ್ಲಿಮರು ಕಾಂಗ್ರೆಸ್ ಜೊತೆ ಇರಬೇಕು” ಎಂದು
ಮೈಸೂರಿನ ಅಲ್ಪಸಂಖ್ಯಾತರ ಕಾಂಗ್ರೆಸ್ ಐಕ್ಯತಾ ಸಮಾವೇಶದಲ್ಲಿ ಪರಮೇಶ್ವರ್ ಹೇಳಿದ್ದಾರೆ. ಅಷ್ಟೇ ಅಲ್ಲದೇ, ಈ ದೇಶದ ಸಂವಿಧಾನವನ್ನು ಬಿಜೆಪಿಯವರು
ಬದಲಾಯಿಸಲು ಮುಂದಾಗಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದೆ. ಎಲ್ಲರನ್ನು ಒಂದಾಗಿ ಕಾಣುವ
ಮನೋಭಾವನೆ ಬಿಜೆಪಿಯ ನಾಯಕರಿಗೆ ಇಲ್ಲ ಎಂದು ಹೇಳಿದ್ದಾರೆ.

ಅಲ್ಪಸಂಖ್ಯಾತರ ಕಾಂಗ್ರೆಸ್ ಐಕ್ಯತಾ ಸಮಾವೇಶದಲ್ಲಿ ಹಿಂದೂಗಳ ವಿರೋಧವಾಗಿ ಮಾತಾನಾಡಿದ ಅವರು ಮುಸಲ್ಮಾನರ ರಕ್ತದಲ್ಲಿ ಕಾಂಗ್ರೆಸ್ ಇರಬೇಕು ಎಂದು ಹೇಳಿದ್ದಲ್ಲದೇ, ಸ್ವಾತಂತ್ರ್ಯ ಬಂದಾಗ ಬಿಜೆಪಿ ಅಧಿಕಾರದಲ್ಲಿ ಇದ್ದಿದ್ದರೆ ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದರು. ದೇಶ ವಿಭಜನೆ ಆಗಿದ್ದು ಸರಿಯಲ್ಲ, ಪಾಕಿಸ್ತಾನ-ಭಾರತ ಒಂದೇ ದೇಶವಾಗಿ ಉಳಿಯಬೇಕಿತ್ತು ಎಂದು ಪರಮೇಶ್ವರ್ ಐಕ್ಯತಾ ಸಮಾವೇಶದಲ್ಲಿ ಹೇಳಿದ್ದಾರೆ.

ಆದರೆ, ಮುಸಲ್ಮಾನರ ಮನವೊಲೈಕೆಗಾಗಿ ಜಿ ಪರಮೇಶ್ವರ ಅವರೇ ಹಿಂದೂಗಳನ್ನು ತುಚ್ಛವಾಗಿ ಕಾಣುತ್ತಿದ್ದಾರೆ ಎಂದರೆ ಕಾಂಗ್ರೆಸ್ ನಲ್ಲಿರುವ ಹಿಂದೂಗಳು ಕಾಂಗ್ರೆಸ್ ಗೆ ಮತ ಹಾಕುವುದು ಬೇಡವೇ ಎನ್ನುವ ಪ್ರಶ್ನೆ ಕಾಡುತ್ತಿದೆ!! ಯಾಕೆಂದರೆ ಅಲ್ಪಸಂಖ್ಯಾತರಿಗಾಗಿ ಕಾಂಗ್ರೆಸ್ ಪಕ್ಷ ಬಲಿದಾನಗಳನ್ನು ಮಾಡಿದೆ. ಹಾಗಾಗಿ ಮುಸಲ್ಮಾನರ ರಕ್ತದಲ್ಲಿ ಕಾಂಗ್ರೆಸ್ ಇರಬೇಕು ಅಷ್ಟೇ ಅಲ್ಲದೇ ಮುಸ್ಲಿಮರು ಕಾಂಗ್ರೆಸ್ ಜೊತೆ ಇರಬೇಕು ಎಂದಿದ್ದಾರೆ!! ಹಾಗಾದರೆ ಕಾಂಗ್ರೆಸ್ಸಿಗರಿಗೆ ಹಿಂದೂಗಳ ಮತ ಬೇಡವೇ? ಅಥವಾ ನಿಮ್ಮ ಪಾಲಿಗೆ ಮುಸಲ್ಮಾನರಷ್ಟೇ ಈ ದೇಶದ ಪ್ರಜೆಗಳೇ ಎನ್ನುವ ಪ್ರಶ್ನೆ ಇದೀಗ ಕಾಡುತ್ತಿದೆ!!

ಪರಮೇಶ್ವರ್ ಅವರು ನೀಡಿರುವ ಹೇಳಿಕೆಯನ್ನು ಗಮನಿಸಿದಾಗ ಸರಕಾರ ನಡೆಸುತ್ತಿರುವುದು ರಾಜ್ಯದ ಜನತೆಗಾಗಿಯೋ ಅಥವಾ ಮುಸ್ಲಿಮರ ಓಲೈಕರಗಾಗಿಯೋ ಎನ್ನುವ ಪ್ರಶ್ನೆಯೂ ಇದೀಗ ಕಾಡಲಾರಂಭಿಸಿದೆ. ಯಾಕೆಂದರೆ ಯಾವಾಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಏರಿದರೋ ಆ ಸಂದರ್ಭದಲ್ಲಿ 150 ಪಿ.ಎಫ್.ಐ ಕಾರ್ಯಕರ್ತರ ಮೇಲಿದ್ದ ಪ್ರಕರಣವನ್ನು ಹಿಂದೆಗೆದುಕೊಂಡು ಮುಸಲ್ಮಾನ ಪ್ರೇಮಿ ಎನ್ನುವುದನ್ನು ಸಾಬೀತು ಪಡಿಸಿದ್ದರು!! ಇದೀಗ ಪರಮೇಶ್ವರ ಅವರೂ ಹಿಂದೂ ಧರ್ಮದವರಾಗಿದ್ದರೂ ಕೂಡ ಮುಸಲ್ಮಾನರ ರಕ್ತದಲ್ಲಿ ಕಾಂಗ್ರೆಸ್ ಇರಬೇಕು ಎಂದು ಹೇಳಿದ್ದಾರೆ ಎಂದರೆ ಇವರಿಗೆ ಹಿಂದೂಗಳ ಅವಶ್ಯಕತೆಯೇ ಇಲ್ವೇ??

ರಾಜ್ಯದಲ್ಲಿ ಬಹು ಸಂಖ್ಯೆಯ ಹಿಂದೂಗಳ ಹತ್ಯೆಯಾಗಿದೆ, ಕನಿಷ್ಟ ಪಕ್ಷ ಅವರ ಮೇಲೆ ಕಿಂಚಿತ್ತೂ ಕೂಡ ಕರುಣೆಯೇ ನಿಮಗಿಲ್ಲ. ಆದರೆ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಪಿ.ಎಫ್.ಐ ಮೇಲೆ ನಿಮಗೆಷ್ಟು ಮೋಹ!! ಹಾಗಾದರೆ ಪ್ರತಿಯೊಬ್ಬ ಮುಸಲ್ಮಾನರ ರಕ್ತದಲ್ಲಿ ಕಾಂಗ್ರೆಸ್ ಇರಬೇಕು ಎಂದವರು ಹಿಂದೂ ಕಾರ್ಯಕರ್ತರಾದ ಪ್ರಶಾಂತ್ ಪೂಜಾರಿ, ರುದ್ರೇಶ, ಶರತ್ ಮಡಿವಾಳ ಹೀಗೆ ಹತ್ತು ಹಲವಾರು ಮಂದಿಯ ಸಾವಿಗೆ ನೇರವಾಗಿ ಕಾಂಗ್ರೆಸ್ ರಕ್ತವೇ
ಕಾರಣವಾಗಬೇಕಲ್ಲವೇ??

ಚುನಾವಣಾ ಪ್ರಚಾರದಲ್ಲಿ ಯಾರನ್ನೂ ಬೇಕಾದರೂ ಓಲೈಕೆ ಮಾಡಿಕೊಳ್ಳಲಿ ಅದು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟ ವಿಚಾರ!! ಆದರೆ ಇದೀಗ ಹಿಂದೂಗಳನ್ನು ತುಚ್ಛವಾಗಿ
ಕಾಣುವ ಕಾಂಗ್ರೆಸ್ಸಿಗರು ಯಾವ ಮುಖ ಹೊತ್ತುಕೊಂಡು ಹಿಂದೂಗಳ ಮತವನ್ನು ಯಾಚಿಸುತ್ತಾರೋ ಗೊತ್ತಾಗುತ್ತಿಲ್ಲ!! ಇನ್ನು ಮುಂದೆ ಮುಸಲ್ಮಾನರ ರಕ್ತದಲ್ಲಿ ಮಾತ್ರ ಕಾಂಗ್ರೆಸ್ ಇರುವುದನ್ನು ಯಾರೂ ಕೂಡ ಯಾವತ್ತು ಮರೆಯುವಂತಿಲ್ಲ!!

– ಅಲೋಖಾ

Tags

Related Articles

Close