ಪ್ರಚಲಿತ

ಮೋದಿ ಅಬ್ಬರಕ್ಕೆ ಬೆಚ್ಚಿ ಬಿದ್ದ ಪಾಕ್!! ಮೋದಿ ಜನಪ್ರಿಯತೆಗೆ ಮಾಜಿ ಪ್ರಧಾನಿ ಭಯವ್ಯಕ್ತ ಪಡಿಸಿದ್ದು ಹೇಗೆ ಗೊತ್ತೇ?!

ಪ್ರಧಾನಿ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿನಿಂದಾಗಿ ಇಡೀ ರಾಷ್ಟ್ರವೇ ಭಾರತವನ್ನು ಕಂಡು ಹೆಮ್ಮೆ ಪಡುತ್ತಿರುವುದು ಗೊತ್ತೇ ಇದೆ!! ಅಷ್ಟೇ ಅಲ್ಲದೇ ಈಗಾಗಲೇ ಭಾರತ ವಿಶ್ವದ ನಾಲ್ಕನೇ ಫವರ್ ಫುಲ್ ರಾಷ್ಟ್ರವಾಗಿ ಮೆರೆಯುತ್ತಿದ್ದು, ಆಸೀಸ್ ಬಿಲಿಯನೇರ್ ಕೂಡ ಮೋದಿ ಅವರ ವಿಷನ್ ಅನುಸರಿಸಲು ತಮ್ಮ ಆಸ್ಟ್ರೇಲಿಯ ಸರ್ಕಾರಕ್ಕೆ ಹೇಳಿರುವುದೂ ಕೂಡ ಗೊತ್ತೇ ಇದೆ.

ಆದರೆ ಪಾಕಿಸ್ತಾನಕ್ಕೆ ಮಾತ್ರ ಭಾರತದ ಯಶಸ್ಸನ್ನು ಸಹಿಸಲಾಗುತ್ತಿಲ್ಲ ಅನ್ನೋದೇ ವಿಪರ್ಯಾಸ!! ಯಾಕೆಂದರೆ ಈಗಾಗಲೇ ಪಾಕಿಸ್ತಾನದ ಮಿತ್ರ ರಾಷ್ಟ್ರವಾಗಿದ್ದ ಚೀನಾವು ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಕರೆದಿದ್ದಲ್ಲದೇ ಮೋದಿಯವರ ಯಶಸ್ಸನ್ನು ಹಾಗೂ ಕಾರ್ಯವೈಖರಿಯನ್ನು ಕಂಡು ಚೀನಾಗೆ ಭಾರೀ ಪ್ರಮಾಣದ ನಷ್ಟ ಉಂಟಾಗಿದ್ದುದರ ಜೊತೆಗೆ ಪಾಕಿಸ್ತಾನಕ್ಕೆ ನೀಡುತ್ತಿದ್ದ ಸಹಾಯ ಹಸ್ತದಿಂದ ದೂರ ಸರಿದಿದೆ!!

ಆದರೆ ಇದೀಗ ಪಾಕಿಸ್ತಾನವೂ ತನ್ನೆಲ್ಲ ನೋವಿಗೆ ಭಾರತವೇ ಕಾರಣವಲ್ಲದೇ ನರೇಂದ್ರ ಮೋದಿಯವರ ಯಶಸ್ಸನ್ನು ಸಹಿಸಿಕೊಳ್ಳದೇ ಭಾರತದ ಮೇಲೆ ಗೂಬೆ ಕೂರಿಸುತ್ತಿದೆ!! ಹೌದು.. ಭಾರತದ ರಾಜತಾಂತ್ರಿಕ ಯಶಸ್ಸಿನಿಂದಾಗಿ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ಗೌರವ ಕಳೆದುಕೊಂಡಿದೆ ಎನ್ನುವುದನ್ನು ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಗುರುವಾರ ಹೇಳಿದ್ದಾರೆ.

Image result for modi

”ಜಾಗತಿಕ ರಾಜತಾಂತ್ರಿಕತೆಗೆ ಸಂಬಂಧಿಸಿದಂತೆ ಭಾರತದ ಪ್ರಧಾನಿ ಮೋದಿ ಅವರು ಪಾಕಿಸ್ತಾನವನ್ನು ನಿಯಂತ್ರಿಸುತ್ತಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕಿಂದು ಗೌರವವಿಲ್ಲದಂತಾಗಿದೆ, ಪಾಕಿಸ್ತಾನ ಒಬ್ಬಂಟಿಯಾಗಿದೆ,” ಎಂದು ಮುಷರ್ರಫ್ ಹೇಳಿಕೊಂಡಿರುವುದು ಅಚ್ಚರಿಯ ವಿಚಾರವಾಗಿದೆ. ಯಾಕೆಂದರೆ ಪ್ರಧಾನಿ ಮೋದಿ ಅವರು ಯಾವಾಗ ಅಧಿಕಾರ ಗದ್ದುಗೆಯನ್ನು ಹಿಡಿದರೋ ಅಂದಿನಿಂದ ಪಾಕಿಸ್ತಾನಕ್ಕೆ ಎಲ್ಲೂ ಕೂಡ ಬೆಲೆ ಇಲ್ಲದಂತಾಗಿರೋದು ಮಾತ್ರ ಅಕ್ಷರಶಃ ನಿಜ.

ಎರಡು ದಿನಗಳ ಹಿಂದಷ್ಟೇ ಪಾಕಿಸ್ತಾನದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ ಟ್ರಂಪ್ ಅವರು, ಉಗ್ರ ನಿಗ್ರಹಕ್ಕಾಗಿ ಪಾಕಿಸ್ತಾನಕ್ಕೆ ಅಮೆರಿಕ ನೀಡುತ್ತಿದ್ದ ಆರ್ಥಿಕ ನೆರವು ವ್ಯರ್ಥವಾಗಿದ್ದು, ಪಾಕಿಸ್ತಾನ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು ಮುಂದೆ ಇಂತಹ ಪ್ರಮಾದವಾಗಲು ನಾವು ಬಿಡುವುದಿಲ್ಲ ಎಂದು ಎಚ್ಚರಿಸಿದ್ದರು.

ಈ ಹೇಳಿಕೆ ಕುರಿತಂತೆ ಪಾಕಿಸ್ತಾನದ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಮುಷರಫ್ ಅವರು, ”ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ರಾಜತಾಂತ್ರಿಕತೆ ನಾಶವಾಗಿದೆ. ಪ್ರಧಾನಿ ಮೋದಿ ಜಾಗತಿಕವಾಗಿ ನಮ್ಮನ್ನು ನಿಯಂತ್ರಿಸುತ್ತಿದ್ದಾರೆ ಎಂದು ಹೇಳಿದ್ದಾರಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ನಾವು ಪ್ರತ್ಯೇಕಗೊಳ್ಳುತ್ತಿದ್ದೇವೆ. ಪಾಕ್‍ನಲ್ಲಿ ಬಂಧಿತನಾಗಿರುವ ಕುಲಭೂಷಣ್ ಯಾದವ್ ಗೂಢಚಾರಿ ಎಂಬುದನ್ನು ಭಾರತ ಇಂದಿಗೂ ಒಪ್ಪಿಕೊಂಡಿಲ್ಲ. ಆದರೆ, ಲಷ್ಕರೆ ತೈಯ್ಬಾ ಉಗ್ರ ಸಂಘಟನೆಯೆಂದು ಪಾಕಿಸ್ತಾನ ಸುಲಭವಾಗಿ ಒಪ್ಪಿಕೊಂಡಿದೆ,” ಎಂದು ಹೇಳಿದ್ದಾರೆ.

Image result for musharraf

ಇದೇ ವೇಳೆ, ಲಷ್ಕರೆ ಸಂಘಟನೆ ಕಾಶ್ಮೀರದಲ್ಲೂ ಸಕ್ರಿಯವಾಗಿದ್ದು, ತಾವು ‘ಎಲ್‍ಇಟಿ’ ಮತ್ತು ‘ಜೆಯುಡಿ’ ಸಂಘಟನೆಗಳ ಮುಖ್ಯಸ್ಥ, ಮುಂಬಯಿ ದಾಳಿಯ ಸಂಚುಕೋರ ಉಗ್ರ ಹಫೀಜ್ ಸಯೀದ್‍ನ ದೊಡ್ಡ ಬೆಂಬಲಿಗರೆಂದೂ ಮುಷರ್ರಫ್ ಹೇಳಿಕೊಂಡಿದ್ದಾರೆ.

ಆದರೆ ಇಂದು, ಪಾಕಿಸ್ತಾನಕ್ಕೆ ನೀಡುತ್ತಿದ್ದ ವಿಶೇಷ ಭದ್ರತಾ ನೆರವನ್ನು ಅಮೆರಿಕ ವಾಪಸ್ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತಿರುಗೇಟು ನೀಡಿರುವ ಪಾಕಿಸ್ತಾನ, ಅಮೆರಿಕ ನೆರವಿಲ್ಲದಿದ್ದರೂ ನಾವು ನಮ್ಮ ಅಸ್ತಿತ್ವ ಕಾಯ್ದುಕೊಳ್ಳಬಲ್ಲೆವು ಎಂದು ಹೇಳಿದೆ. ಈ ಬಗ್ಗೆ ಪಾಕಿಸ್ತಾನ ಮೂಲದ ಜಿಯೋ ಸುದ್ದಿವಾಹಿನಿಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಆಸಿಫ್ ಅವರು, ಅಮೆರಿಕ ನೆರವಿನ ಹೊರತಾಗಿಯೂ ಪಾಕಿಸ್ತಾನ ತನ್ನ ಅಸ್ತಿತ್ವ ಕಾಯ್ದುಕೊಳ್ಳಲಿದೆ.

ಅಷ್ಟೇ ಅಲ್ಲದೇ, ಇಂತಹ ಪರಿಸ್ಥಿತಿ ಪಾಕಿಸ್ತಾನಕ್ಕೆ ಇದೇ ಮೊದಲೇನಲ್ಲ. ಈ ಹಿಂದೆ ಸಾಕಷ್ಟು ಬಾರಿ ಪಾಕಿಸ್ತಾನ ಇಂತಹ ಪರಿಸ್ಥಿತಿ ಎದುರಿಸಿತ್ತು. ನಮ್ಮ ಕಠಿಣ ಸಂದರ್ಭಗಳಲ್ಲಿ ಅವರು (ಅಮೆರಿಕ) ಎಂದೂ ನಮ್ಮ ಕೈ ಹಿಡಿದಿಲ್ಲ. ನಿರ್ಣಾಯಕ ಕಠಿಣ ಸಂದರ್ಭಗಳಲ್ಲಿ ನಮಗೆ ದ್ರೋಹ ಮಾಡಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಆದರೆ, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಧಾರ್ಮಿಕ ಹಿಂಸಾಚಾರ ಹಾಗೂ ಉಗ್ರವಾದ ಪೆÇೀಷಣೆ ಹಿನ್ನಲೆಯಲ್ಲಿ ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ನೀಡುತ್ತಿದ್ದ ವಿಶೇಷ ಭದ್ರತಾ ನೆರವನ್ನು ಅಮಾನತು ಮಾಡಿತ್ತಲ್ಲದೆ ಪಾಕಿಸ್ತಾನವನ್ನು ವಿಶೇಷ ಕಣ್ಗಾವಲು ರಾಷ್ಟ್ರಗಳ ಪಟ್ಟಿಗೆ ಸೇರಿಸಿತ್ತು. ಇದಕ್ಕೂ ಮೊದಲು ಪಾಕಿಸ್ತಾನಕ್ಕೆ ಅಮೆರಿಕ ನೀಡಬೇಕಿದ್ದ ಸುಮಾರು 255 ಮಿಲಿಯನ್ ಡಾಲರ್ ನೆರವನ್ನೂ ಕೂಡ ಟ್ರಂಪ್ ಸರ್ಕಾರ ಸ್ಥಗಿತಗೊಳಿಸಿದ್ದರು.

ಜಾಗತಿಕ ರಾಜತಾಂತ್ರಿಕತೆಗೆ ಸಂಬಂಧಿಸಿದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನವನ್ನು ನಿಯಂತ್ರಿಸುತ್ತಿದ್ದಾರೆ ಎಂದು ಹೇಳಿರುವ ಪಾಕಿಸ್ತಾನ, ಭಾರತದ ಮೇಲೆ ಒಂದಲ್ಲ ಒಂದು ಪಿತೂರಿಗಳನ್ನು ನಡೆಸುತ್ತಿದೆಯಲ್ಲದೇ ವಿಶ್ವದೆಲ್ಲೆಡೆ ಪಾಕಿಸ್ತಾನವೂ ಭಯೋತ್ಪಾದಕ ರಾಷ್ಟ್ರವಾಗಿ ಹೊರ ಹೊಮ್ಮುತ್ತಿರುವುದು ತಿಳಿದ ವಿಚಾರ. ಆದರೆ ಇದೀಗ ಪ್ರಧಾನಿ ಮೋದಿ ಜಾಗತಿಕವಾಗಿ ನಮ್ಮನ್ನು ನಿಯಂತ್ರಿಸುತ್ತಿದ್ದಾರೆ ಎಂದಿರುವುದನ್ನು ನೋಡಿದರೆ ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಯಶಸ್ಸು ನುಂಗಲಾರದ ತುತ್ತಂತೆ ಪರಿಣಮಿಸಿದ್ದು ಮಾತ್ರ ನಿಜ ಎಂದೆನಿಸುತ್ತದೆ.
– ಅಲೋಖಾ

Tags

Related Articles

Close