ಅಂಕಣಪ್ರಚಲಿತ

ಮೋದಿ ಆರ್ಥಿಕ ಕುಸಿತದ ಹರಿಕಾರ ಎಂದು ಜರಿದ ವಿರೋಧಿಗಳಿಗೆ ಈ ರಾಷ್ಟ್ರ ಸರಿಯಾದ ಪಾಠವನ್ನೇ ಹೇಳಿದೆ…!!!

ನರೇಂದ್ರ ಮೋದಿ… ಇವರನ್ನು ಭಾರತದ ಪ್ರಧಾನಿ ಅನ್ನೋದಕ್ಕಿಂತ ಜಗತ್ತಿನ ನಾಯಕ ಅಂದರೆ ಹೆಚ್ಚು ಅರ್ಥಪೂರ್ಣವೆನಿಸಬಹುದೋ ಏನೊ… ದೇವರೇ ನಿಶ್ಚಯಿಸಿದ್ದಾನೇನೋ ಅನ್ನುವ ಹಾಗೆ ಅದೆಷ್ಟೇ ವಿರೋಧಿಸಿದರೂ ಜಗತ್ತಿನ ಏಣಿಯನ್ನು ಹತ್ತಿ ವಿಶ್ವಕ್ಕೆ ಬುದ್ಧಿ ಹೇಳುವ ನಾಯಕನಾಗಿ ಬೆಳೆದಿದ್ದಾರೆಂದರೆ ಅದು ಸುಮ್ನೇನ..?

ಭಾರತದ ಹೆಮ್ಮಯ ಪ್ರಧಾನಿ ನರೇಂದ್ರ ಮೋದಿ ಮುಡಿಗೆ ಟರ್ಕಿ ದೇಶದಿಂದ ಮತ್ತೊಂದು ಗರಿ. ಅದು “ನರೇಂದ್ರ ಮೋದಿ ಸ್ಟಾಂಪ್” ಬಿಡುಗಡೆ. ಈ ಬಾರಿಯ ಜಿ-20 ಶೃಂಗ ಸಭೆಯಲ್ಲಿ ಮೋದೀಜಿಗೆ ಈ ಗೌರವವನ್ನು ನೀಡಿದೆ.

ಅವರು ಗುಜರಾತಿನಲ್ಲಿ 3ನೇ ಬಾರಿ ಮುಖ್ಯಮಂತ್ರಿ ಆದಾಗಲೇ ಜನ ನಿಶ್ಚಯಿಸಿದ್ದರು. ದೇಶವನ್ನಾಳುವ ಏಕೈಕ ವ್ಯಕ್ತಿ ಅಂತ ಇದ್ದರೆ ಅದು ನರೇಂದ್ರ ದಾಮೋದರ ದಾಸ್ ಮೋದಿ ಮಾತ್ರ. ಶ್ರೀ ಕೃಷ್ಣನ ಎಲ್ಲಾ ಗುಣಗಳನ್ನೂ ಮೈಗೂಡಿಸಿಗೊಂಡು ರಾಜಕೀಯ ಚಾಣಾಕ್ಷತೆಯಿಂದ ಸೋಲಿಲ್ಲದ ಸರದಾರನಂತೆ ಮೆರೆದ ಮೋದೀಜಿ ಜನ ಬಯಸಿದಂತೆಯೇ ದೇಶದ ಚುಕ್ಕಾಣಿ ಹಿಡಿದೇ ಬಿಟ್ಟಿದ್ದರು.

ನಂತರ ನಡೆದದ್ದೇ ಅದ್ಭುತ. ಪ್ರಪ್ರಥಮ ಬಾರಿಗೆ ಸಂಸತ್ ಪ್ರವೇಶಿಸುವಾಗಲೇ ಸಂಸತ್ತಿಗೆ ಕೈಮುಗಿದು ಒಳಪ್ರವೇಶಿಸಿದ ಮೋದಿ ದೇಶದ ಚಿತ್ರಣವನ್ನೇ ಬದಲಾಯಿಸುವತ್ತ ಟೊಂಕ ಕಟ್ಟಿ ನಿಂತಿದ್ದರು. ಆರಂಭದ ಒಂದು ವರ್ಷ ವಿದೇಶಗಳನ್ನು ಸುತ್ತಿ ತಮ್ಮ ದೇಶ ಅಂದರೆ ಏನು ಎಂಬುವುದನ್ನು ಪ್ರಚಾರಪಡಿಸಿದ್ದರು. ಇದು ಮೊದಲ ಭಾರತವಲ್ಲ. ಭಾರತ ಬದಲಾಗಿದೆ ಎಂಬುವುದನ್ನು ಸಾರಿ ಸಾರಿ ಹೇಳಿದ್ದರು. ಇಡೀ ಜಗತ್ತೇ ಮೋದಿ ಹೇಳುತ್ತಿದ್ದ “ಭಾರತ ದರ್ಶನ”ವನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿತ್ತು.

ಮೋದೀಜಿ ಬರುತ್ತಾರೆಂದರೆ ಸಾಕು ಜಗತ್ತೆಲ್ಲ ಒಂದೇ ಕಾಲಿನಲ್ಲಿ ನಿಂತು ಚಾತಕ ಪಕ್ಷಿಯಂತೆ ಕಾಯುತ್ತಿತ್ತು. ಮೋದಿ ಝೇಂಕಾರ ಮುಗಿಲು ಮುಟ್ಟುತ್ತಿತ್ತು. ಅಲ್ಲಿನ ಭಾರತೀಯರನ್ನು ಉದ್ಧೇಶಿಸಿ ಮಾತನಾಡಲು ಸಕಲ ವ್ಯವಸ್ಥೆಯನ್ನೂ ಮಾಡುತ್ತಿತ್ತು. ಮಾತ್ರವಲ್ಲ… ಒಂದು ದೇಶದಲ್ಲಿ ಮೋದೀಜಿಗೆ ನೀಡಿದ್ದ ಆತಿತ್ಯವನ್ನು ಕಂಡಂತಹ ಮತ್ತೊಂದು ದೇಶ ಸ್ಪರ್ಧೆಗೆ ಬಿದ್ದು, ತನ್ನ ದೇಶದಲ್ಲಿ ಇದಕ್ಕಿಂತಲೂ ವಿಭಿನ್ನ ರೀತಿಯಲ್ಲಿ ಮೋದಿ ಕಾರ್ಯಕ್ರಮವನ್ನು ಆಯೋಜಿಸುತ್ತಿತ್ತು.

ಅಮೇರಿಕಾದ ಮ್ಯಾಡಿಸನ್ ಸ್ಕ್ವಾರ್‍ನಲ್ಲಿ ಮೋದಿ ಮಾಡಿದ್ದ ಐತಿಹಾಸಿಕ ಭಾಷಣವನ್ನು ಆಸ್ಟ್ರೇಲಿಯಾ ಚಾಲೆಂಜ್ ಆಗಿ ಸ್ವೀಕರಿಸಿತ್ತು. ತನ್ನ ದೇಶದಲ್ಲಿ ಅಮೇರಿಕಾಕ್ಕಿಂತಲೂ ವಿಭಿನ್ನ ಶೈಲಿಯಲ್ಲಿ ಕಾರ್ಯಕ್ರಮ ಆಯೋಜಿಸಬೇಕೆಂಬ ಉದ್ಧೇಶದಿಂದ ಅದ್ಭುತ ಪ್ರಚಾರವನ್ನೇ ಮಾಡಿತ್ತು. ಆಸ್ಟ್ರೇಲಿಯಾದ ಸಿಡ್ನಿ ಅಕ್ಷರಷಃ ಮೋದಿಮಯವಾಗಿತ್ತು. “ನಮೋ” ಎನ್ನುತ್ತಿತ್ತು.

ಜಗತ್ತೆಲ್ಲಾ “ನಮೋ ನಮೋ” ಎನ್ನುತ್ತಿದ್ದರೆ, ಭಾರತದಲ್ಲಿ ಮಾತ್ರ ಮೋದಿ ವಿರೋಧಿಗಳು ಟೀಕೆಯ ಸುರಿಮಳೆಯನ್ನೇ ಗೈಯ್ಯುತ್ತಿದ್ದರು. ಅವರನ್ನು ಮೋದಿ ವಿರೋಧಿಗಳು ಅನ್ನೋದಕ್ಕಿಂತ ಭಾರತ ವಿರೋಧಿಗಳು ಎನ್ನಬಹುದಷ್ಟೆ. ಏಕೆಂದರೆ ಮೋದಿ ವಿದೇಶಗಳಿಗೆ ತೆರಳಿ ಪಕ್ಷದ ಪ್ರಚಾರ ಮಾಡುತ್ತಿರಲಿಲ್ಲ. ಬದಲಾಗಿ ಅವರು ಮಾಡುತ್ತಿದ್ದುದು ಭಾರತ ಪ್ರಚಾರ. ಸಾಕ್ಷಾತ್ “ಭಾರತ ದರ್ಶನ”…

ಮೋದೀಜಿ “ಲೂಟಿಕೋರರನ್ನು ಒಬ್ಬರನ್ನೂ ಬಿಡೋದಿಲ್ಲ. ಅಕ್ರಮ ಆಸ್ತಿ ಸಂಪಾದನೆ ಮಾಡಿದವರನ್ನು ಜೈಲಿಗಟ್ಟುತ್ತೇನೆ” ಎಂದೆನ್ನುವಾಗಲೇ ವಿರೋಧಿಗಳ ಮೈಯೆಲ್ಲಾ ಬೆವರುತ್ತಿತ್ತು. ತಮ್ಮ ರಾಜಕೀಯ ಜೀವನದ ಬಗ್ಗೆ ಚಿಂತೆ ಶುರುವಾಗುತ್ತಿತ್ತು. ಮಾತನಾಡಲು ಬಾಯಿಯೇ ಬರುತ್ತಿರಲಿಲ್ಲ. ಅದ್ರಲ್ಲೂ 60 ವರ್ಷ ಈ ದೇಶವನ್ನಾಳಿದ ಒಂದು ರಾಷ್ಟ್ರೀಯ ಪಕ್ಷಕ್ಕಂತೂ ಉಸಿರು ಬಿಗಿದಿಟ್ಟುಕೊಳ್ಳುವಂತ ಪರಿಸ್ಥಿತಿ ಎದುರಾಗಿತ್ತು.

ಜಗತ್ತು ಮಾತ್ರ “ನಮೋ” ಜಪವನ್ನು ಬಿಟ್ಟೇ ಇರಲಿಲ್ಲ. ಮೋದಿ ಬರುತ್ತಾರೆಂದರೆ ಒಂದು ತಿಂಗಳ ಮುಂಚೆನೆ ಮೋದಿಯನ್ನು ಸ್ವಾಗತಿಸುವ ಬಗ್ಗೆ ಅಭ್ಯಾಸ ಆರಂಭವಾಗಿರುತ್ತದೆ. ಯಾವ ದೇಶಕ್ಕೆ ತೆರಳಿದರೂ ವಿಶೇಷವಾದ ಆತಿಥ್ಯವನ್ನು ಪಡೆದುಕೊಳ್ಳುತ್ತಾರೆ ಮೋದಿ. ವಿವಿಧ ದೇಶಗಳ ಸಭೆಯಾಗಿರಬಹುದು, ಸಾರ್ಕ್ ರಾಷ್ಟ್ರಗಳ ಒಕ್ಕೂಟವಾಗಿರಬಹುದು ಅಥವಾ ಶೃಂಗ ಸಭೆಯೂ ಆಗಿರಬಹುದು, ಅಲ್ಲೆಲ್ಲ ಮೋದಿಯದ್ದೇ ಹವಾ. ಮೋದಿ ಏನಾದರು ಮಾತನಾಡುತ್ತಾರಾ ಎಂದು ಕಾತರದಿಂದ ಕಾಯುತ್ತಿರುತ್ತವೆ ಉಳಿದ ದೇಶಗಳು.

ಅಮೇರಿಕಾದಲ್ಲಿ “ಜೈ ಹಿಂದೂ” ಅಂದರು ಟ್ರಂಪ್-ಟರ್ಕಿಯಲ್ಲಿ ಬಿಡುಗಡೆಯಾಯ್ತು ಮೋದಿ ಸ್ಟಾಂಪ್..!!!

ಹೌದು. ತಾನು ಅಧಿಕಾರಕ್ಕೆ ಬರುವ ಮೊದಲು ಹಿಂದೂಗಳ ವಿರುದ್ಧ ಕಿಡಿಕಾರುತ್ತಿದ್ದ ಅಮೇರಿಕಾ ಅಧ್ಯಕ್ಷ ಟ್ರಂಪ್ ಅಧಿಕಾರಕ್ಕೆ ಬಂದೊಡನೆ “ನಮೋ” ಅಂದುಬಿಟ್ಟಿದ್ದರು. “ನಾನೊಬ್ಬ ಹಿಂದೂ ಧರ್ಮದ ಅಭಿಮಾನಿ. ಹಿಂದೂ ಧರ್ಮದ ಆಚರಣೆಗಳು ನನಗೆ ತುಂಬಾ ಇಷ್ಟ. ಐ ಲವ್ ಹಿಂದೂ” ಎಂದು ಬಿಟ್ಟಿದ್ದರು.

ಕೇವಲ ಟ್ರಂಪ್ ಮಾತ್ರವಲ್ಲ. ಜಗತ್ತೇ ಮೋದಿಗೋಸ್ಕರ ಅದೇನನ್ನೋ ಮಾಡುತ್ತಿತ್ತು. ಮೋದಿಯನ್ನು ಓಲೈಸಿಕೊಳ್ಳಲು ಮುಂದಾಗಿತ್ತು. ಮೋದಿ ಮಾತ್ರ “ತನ್ನ ಸಾಧನೆಗೆ ಇದುವೇ ಕಾರಣ”ವೆಂದು ಹೋದಲ್ಲೆಲ್ಲಾ “ಭಗವದ್ಗೀತೆ”ಯನ್ನು ಉಡುಗೊರೆಯಾಗಿ ನೀಡುತ್ತಿದ್ದರು.

ಈ ಬಾರಿ “ಟರ್ಕಿ” ದೇಶದ ಸರದಿ. ಈ ಬಾರಿಯ ಜಿ20 ಶೃಂಗ ಸಭೆ ಟರ್ಕಿ ದೇಶದಲ್ಲಿ ನಡೆದಿತ್ತು. ಮೋದೀಜಿಗೆ ಆ ದೇಶ ಉಳಿದೆಲ್ಲಾ ದೇಶಕ್ಕಿಂತಲೂ ಹೆಚ್ಚಿನ ಗೌರವವನ್ನು ನೀಡಿ ಗೌರವಿಸಿತ್ತು. ಎಲ್ಲಾ ರಾಷ್ಟ್ರಗಳಿಗಿಂತಲೂ ಭಾರತ ಮುಂದು ಎಂದು ಅಲ್ಲೂ ನಿರೂಪಿಸಿಬಿಟ್ಟಿದ್ದರು. ತನ್ನ ಸುತ್ತ ಮುತ್ತಲೆಲ್ಲಾ ವಿದೇಶಿ ಅಧ್ಯಕ್ಷರನ್ನು ನಿಲ್ಲಿಸಿ ಮಾತನಾಡುತ್ತಿದ್ದರು. ಇದು ನಿಜವಾಗಿಯೂ ಭಾರತೀಯರಿಗೆ ಹಬ್ಬವನ್ನೇ ಸೃಷ್ಟಿಸಿತ್ತು. ನಮ್ಮ ಮೋದಿ ವಿದೇಶಿಗರಿಗೆ ಪಾಠ ಮಾಡುತ್ತಿದ್ದಾರೆ, ಹಾಗಾದರೆ ಭಾರತ ವಿಶ್ವಗುರು ಆಯಿತಲ್ವಾ ಎಂದು ಕುಶಿ ಪಟ್ಟಿದ್ದರು.

ಟರ್ಕಿಯಲ್ಲಿ ನಡೆದಿದ್ದ ಜಿ-20 ಶೃಂಗ ಸಭೆಯಲ್ಲಿ ಮೋದಿಯವರ ವಿಶೇಷವಾದ ಸ್ಟಾಂಪೊಂದನ್ನು ಬಿಡುಗಡೆಗೊಳಿಸಿ ಗೌರವಿಸಿತ್ತು. ಆ ಸ್ಟಾಂಪ್‍ನಲ್ಲಿ ಮೋದೀಜಿಯ ಭಾವಚಿತ್ರ ಹಾಗೂ ತ್ರಿವರ್ಣ ಧ್ವಜವನ್ನು ಮುದ್ರಿಸಲಾಗಿತ್ತು. ಇಷ್ಟು ಮಾತ್ರವಲ್ಲ, ಆ ಸ್ಟಾಂಪ್‍ನಲ್ಲಿ “ನರೇಂದ್ರ ಮೋದಿ ಪ್ರೈಮ್ ಮಿಸ್ಟರ್ ಆಫ್ ರಿಪಬ್ಲಿಕ್ ಆಫ್ ಇಂಡಿಯಾ” ಎಂದೂ ಮುದ್ರಿಸಲಾಗಿತ್ತು. ಇದು ಅತಿ ದೊಡ್ಡ ಪ್ರಜಾಪ್ರಭುತ್ವವವನ್ನು ಹೊಂದಿರುವ ಭಾರತದ ಪ್ರಧಾನಿಯೋರ್ವರಿಗೆ ಸಂದ ಗೌರವ ಎಂದು ಅದು ಬಣ್ಣಿಸಿತ್ತು. ಮತ್ತೊಂದು ವಿಶೇಷವೆಂದರೆ ಈ ಸ್ಟಾಂಪನ್ನು ಸ್ವತಃ ಟರ್ಕಿ ದೇಶದಲ್ಲೇ ತಯರಿಸಲಾಗಿದೆಯಂತೆ…

ಜಗತ್ತಿನ ಅಷ್ಟೂ ದೇಶಗಳಲ್ಲಿ 33 ದೇಶಗಳನ್ನು ಆಯ್ಕೆ ಮಾಡಿ 19 ದೇಶದ ದಿಗ್ಗಜರಿಗೆ ಈ ಗೌರವವನ್ನು ನೀಡಲಾಗಿತ್ತು. ಅಮೇರಿಕಾದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ, ರಷ್ಯಾ ಅಧ್ಯಕ್ಷ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಸಹಿತ 19 ದೇಶಗಳು ಜಗತ್ತಿನ ಅತಿ ದೊಡ್ಡ ಆರ್ಥಿಕ ರಾಷ್ಟಗಳು ಎಂಬ ಖ್ಯಾತಿಗೆ ಪಾತ್ರವಾಗಿದೆ. ಅದರಲ್ಲಿ ಭಾರತವೂ ಒಂದು. ಇದಕ್ಕಾಗಿ ಮೋದಿಯವರನ್ನು ವಿಶೇಷವಾಗಿಯೇ ಅಲ್ಲಿನ ಅಧ್ಯಕ್ಷ ಟಯ್ಯಿಪ್ ಇರ್ಡೋಗನ್ ಸನ್ಮಾನಿಸಿ ಹಾಡಿ ಹೊಗಳಿದ್ದಾರೆ.

ಭಾರತದಲ್ಲಿನ ಮೋದಿ ವಿರೋಧಿಗಳು, ದೇಶ ಆರ್ಥಿಕತೆಯಲ್ಲಿ ಕುಸಿತವನ್ನು ಕಂಡಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದರೆ, ಜಗತ್ತು ಮಾತ್ರ ಅತಿ ದೊಡ್ಡ ಆರ್ಥಿಕ ಪ್ರಾಬಲ್ಯವುಳ್ಳ ರಾಷ್ಟ್ರ ಎಂದು ಭಾರತವನ್ನು ಹಾಡಿ ಹೊಗಳುತ್ತಿದೆ. ಜಿಎಸ್‍ಟಿ, ನೋಟ್ ಬ್ಯಾನ್‍ನಂತಹ ಹಲವಾರು ದಿಟ್ಟ ಕ್ರಮಗಳು ಮೋದಿಯ ಪಾರದರ್ಶಕ ಆಡಳಿತಕ್ಕೆ ಕೈಗನ್ನಡಿ ಎಂದು ಜಗತ್ತು ಬಣ್ಣಿಸುತ್ತಿವೆ. ಆದರೆ ಮೋದಿ ವಿರೋಧಿಗಳು ಇನ್ನೂ ನೋಟ್ ಬ್ಯಾನ್ ಸಂದರ್ಭ ಅಷ್ಟು ಜನ ಸತ್ತಿದ್ದಾರೆ ಎಂದು ಎಲ್ಲೆಲ್ಲೋ ಸತ್ತ ಜೀವಗಳತ್ತ ಬೆರಳು ತೋರಿಸಿ ಅಸಹಾಯಕತೆಯನ್ನು ಮೆರೆಯುತ್ತಿದೆ.

ಮೋದೀಜಿ ಗೌರವಿಸಿದರೆ ಅದು ಸಮಸ್ತ ಭಾರತವನ್ನು ಗೌರವಿಸುವ ಭಾವನೆ. ಮೋದಿಯನ್ನು ಜಗತ್ತು ಹೊಗಳಿದರೆ ನಮ್ಮ ಮನಸ್ಸು ಅರಳುತ್ತದೆ. ಏಕೆಂದರೆ ಅದು ಭಾರತವನ್ನು ಹೊಗಳುವ ರೀತಿಯಲ್ಲಿರುತ್ತದೆ. ಹಿಂದಿನ ಕಾಲದಲ್ಲಿ ಭಾರತ ವಿಶ್ವಗುರು ಆಗಿತ್ತಂತೆ. ಭಾರತದ ಮಾತನ್ನು ಜಗತ್ತು ಕೇಳುತ್ತಿತ್ತಂತೆ. ಭಾರತ ಹಾಕಿಕೊಟ್ಟ ಹಾದಿಯಲ್ಲಿ ಜಗತ್ತು ನಡೆಯುತ್ತಿತ್ತಂತೆ. ಆದರೆ ನಂತರ ಭಾರತಕ್ಕೆ ಬಂದ ಆಕ್ರಮಣಕಾರಿಗಳು ಈ ಎಲ್ಲಾ ಮಹತ್ವವನ್ನು ನೆಲಸಮಗೊಳಿಸಿದ್ದರು. ಭಾರತ ಕಂಡು ಕೇಳರಿಯದ ಬಡತನಕ್ಕೆ ಇಳಿದಿತ್ತು. ಈಗ ಮತ್ತೆ ಭಾರತ ವಿಜ್ರಂಭಿಸುತ್ತಿದೆ. ಭಾರತ ವೈಭವೀಕರಿಸುತ್ತಿದೆ. ಭಾರತ ಹಾಕಿಕೊಟ್ಟ ಹಾದಿಯಲ್ಲಿ ಜಗತ್ತು ನಡೆಯುತ್ತಿದೆ. ಭಾರತ ಮಧ್ಯೆ ನಿಂತು ಮಾತನಾಡಿದರೆ ಜಗತ್ತು ಸುತ್ತ ನಿಂತು ಆಲಿಸುತ್ತಿರುತ್ತೆ. ಭಾರತ ಮತ್ತೆ ವಿಶ್ವಗುರುವಾಗಿದೆ…

ಮೋದಿಯನ್ನು ವಿರೋಧಿಸುವ ಭಾರತದ ಹತಾಶ ಮನೋಭಾವದ ನಾಯಕರೇ… ಸ್ವಲ್ಪ ಯೋಚಿಸಿ. ಭಾರತ ಯಾವ ಧಿಕ್ಕಿನಲ್ಲಿ ಸಾಗುತ್ತಿದೆ. ಜಗತ್ತು ಭಾರತವನ್ನು ನೋಡುತ್ತಿರುವ ದೃಷ್ಟಿಕೋನ ಯಾವರೀತಿ ಇದೆ. ಅರ್ಥ,ಮಾಡಿಕೊಂಡು ಮುನ್ನಡೆದರೆ ನಿಮಗೆ ಸ್ವಲ್ಪನಾದರೂ ಮರ್ಯಾದೆ ಸಿಗಬಹುದು. ಮತ್ತೆ ಟೀಕಿಸಿದರೆ ಕಾಲವೇ ಉತ್ತರ ಕೊಡಲಿದೆ… “ಭಾರತ ವಿಶ್ವಗುರು, ಮೋದಿ ವಿಶ್ವನಯಕ”…

-ಸುನಿಲ್ ಪಣಪಿಲ

Tags

Related Articles

Close