ಪ್ರಚಲಿತ

ಬ್ರೇಕಿಂಗ್!!! ಮೋದಿ ಪ್ಲಾನ್ ಸಕ್ಸಸ್!!! ಇಬ್ರಾಹಿಂ ಖೇಲ್ ಖತಂ??? ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂನ ಬ್ರಿಟನ್ ಆಸ್ತಿ ಜಫ್ತಿ!!!

ಭೂಗತ ಪಾತಕಿ ಸದ್ಯ ಪಾಕಿಸ್ತಾನದಲ್ಲಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಸೆರೆಯಾಗುವ ಲಕ್ಷಣ ಗೋಚರಿಸಿದೆ. ಪಾಕಿಸ್ತಾನದಲ್ಲಿದ್ದುಕೊಂಡು ಇಸ್ಲಾಂ ಮತೀಯವಾದವನ್ನು ಬೆಳೆಸಿಕೊಂಡು ನರಹತ್ಯೆಯಲ್ಲಿ ತೊಡಗಿಕೊಂಡಿರುವ ದಾವೂದ್ ಇಬ್ರಾಹಿಂ ವಿಶ್ವದ ಶ್ರೀಮಂತ ಭಯೋತ್ಪಾದಕ. ಈತನ ಬಳಿ ಇರುವ ಕೋಟಿಗಟ್ಟಲೆ ಆಸ್ತಿ ಕರಗುವವರೆಗೆ ಈತನನ್ನು ಬಂಧಿಸಲು ಸಾಧ್ಯವಿಲ್ಲ. ಆದ್ದರಿಂದ ಆತನ ವಿಶ್ವದಾದ್ಯಂತ ಇರುವ ಆಸ್ತಿಯನ್ನು ಮುಟ್ಟುಗೋಲು ಹಾಕಿ ಆತನನ್ನು ದುರ್ಬಲಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಇದರಿಂದಾಗಿ ದಾವೂದ್‍ಗೆ ಎಲ್ಲಿಗೆ ಹೊಡೆತ ಬೇಳಬೇಕೋ ಅಲ್ಲಿಗೇ ಬೀಳುತ್ತದೆ.ಭೂಗತ ಪಾತಕಿಯಾಗಿರುವ ದಾವೂದ್ ಇಬ್ರಾಹಿಂ 1993ರ ಮುಂಬೈ ಸರಣಿ ಬಾಂಬ್ ಸ್ಪೋಟ ಪ್ರಕರಣದ ಪ್ರಮುಖ ಅಪರಾಧಿಯಾಗಿದ್ದು, ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ. ಭಾರತಕ್ಕೆ ಬೇಕಾಗಿರುವ ಮೋಸ್ಟ್‍ವಾಂಟೆಡ್ ಕ್ರಿಮಿನಲ್ ಆಗಿರುವ ದಾವೂದ್ ಇಬ್ರಾಹಿಂನ ಮೇಲೆ ಅಮೆರಿಕಾ ಸೇರಿ ಹಲವು ರಾಷ್ಟ್ರಗಳು ಕೆಂಗಣ್ಣು ಬೀರಿದೆ. ಇದೀಗ ಬ್ರಿಟನ್ ಕೂಡಾ ದಾವೂದ್ ಇಬ್ರಾಹಿಂನ ವಿರುದ್ಧ ತೊಡೆತಟ್ಟಿದ್ದು, ಬಲವಾದ ಹೊಡೆತ ನೀಡಿದೆ. ಬ್ರಿಟನ್ ನಲ್ಲಿ ಈತ ಹೊಂದಿರುವ ಅನೇಕ ಐಶಾರಾಮಿ ಆಸ್ತಿಪಾಸ್ತಿಗಳನ್ನು ಬ್ರಿಟನ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇದರ ಮೊತ್ತ ಬರೋಬ್ಬರಿ 6.7 ಬಿಲಿಯನ್ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ.

ಕೊಲಂಬಿಯಾದಲ್ಲಿ ಮಾದಕ ದ್ರವ್ಯ ಚಟುವಟಿಕೆ ನಡೆಸಿ ಮಾದಕ ದ್ರವ್ಯ ಸಾಮ್ರಾಜ್ಯದ ಅಧಿಪತಿ ಎಂದೇ ಕರೆಯಲ್ಪಡುವ ಪಬ್ಲೊ ಎಸ್ಕೊಬರ್ ನಂತರ ದಾವುದ್
ಇಬ್ರಾಹಿಂ ವಿಶ್ವದ ಎರಡನೇ ಅತಿ ದೊಡ್ಡ ಶ್ರೀಮಂತ ಕ್ರಿಮಿನಲ್ ಎಂಬ ಅಂಶ ಬೆಳಕಿಗೆ ಬಂದಿದೆ. ಸದ್ಯ ಪಾಕಿಸ್ತಾನದಲ್ಲಿ ತಲೆಮರಸಿಕೊಂಡಿರುವ ದಾವೂದ್‍ಗೆ ಐಎಸ್‍ಐ ಕೂಡಾ ನೆರವು ನೀಡಿದೆ. ಪಾಕಿಸ್ತಾನ ಈತನಿಗೆ ಸೆರೆ ನೀಡಿದ್ದರೂ ಈತ ತಮ್ಮ ಬಳಿ ಇಲ್ಲ ಎಂದು ನಾಟಕ ಆಡುತ್ತಲೇ ಬಂದಿದೆ. ಈತನನ್ನು ಸೆರೆ ಹಿಡಿಯಲು ಭಾರತದ ಅಧಿಕಾರಿಗಳು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಪಾಕಿಸ್ತಾನದ ಕೃಪೆಯಿಂದ ಈತ ಸಿಕ್ಕಿಬೀಳುತ್ತಿಲ್ಲ. ಆದ್ದರಿಂದ ಈತನ ಬಗ್ಗೆ ಮಾಹಿತಿ ನೀಡಿದವರಿಗೆ 25 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನವನ್ನು ಘೋಷಿಸಲಾಗಿದೆ.

ಈತನನ್ನು ಬಂಧಿಸಲೇಬೇಕೆಂದು ಹಠಕ್ಕೆ ಬಿದ್ದಿರುವ ನರೇಂದ್ರ ಮೋದಿ ಸರಕಾರ ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು 2015ರಲ್ಲಿಯೇ ಬ್ರಿಟನ್ ಸರ್ಕಾರಕ್ಕೆ ದಾವುದ್ ಗೆ ಸೇರಿದ ಆಸ್ತಿಪಾಸ್ತಿಗಳ ವಿವರವನ್ನು ಸಲ್ಲಿಸಿತ್ತು.

ಅಲ್ಲದೆ ಇತ್ತೀಚೆಗೆ ಬ್ರಿಟನ್ ಸರ್ಕಾರ ಸಿದ್ಧಪಡಿಸಿದ ಹಣಕಾಸು ನಿಷೇಧಗಳ ಪಟ್ಟಿಯಲ್ಲಿಯೂ ದಾವೂದ್ ಹೆಸರೂ ಇತ್ತು. ಹೀಗಾಗಿ ಬ್ರಿಟನ್ ಸರ್ಕಾರ ಈತನ ವಿರುದ್ಧ ಈ ಕ್ರಮಕ್ಕೆ ಮುಂದಾಗಿದೆ. ಬ್ರಿಟನ್ ಅಧಿಕಾರಿಗಳ ಪ್ರಕಾರ ದಾವುದ್ 21 ಬೇರೆ ಬೆರೆ (ಅಲಿಯಾಸ್) ಹೆಸರುಗಳಿವೆ ಅವುಗಳ ಮೂಲಕ ಬ್ರಿಟನ್ ನಲ್ಲಿ ಆಸ್ತಿ ಹೊಂದಿದ್ದಾನೆ. ಅಲ್ ಖೈದಾ ಜತೆ ನಂಟು ಹೊಂದಿರುವ ದಾವುದ್ ವಾರ್ವಿಕ್ ಶೈರ್ ನಲ್ಲಿ ಐಶಾರಾಮಿ ಹೊಟೇಲ್, ಮಿಡ್ ಲ್ಯಾಡ್ಸ್ ನಲ್ಲಿ ಅನೇಕ ಮನೆಗಳನ್ನು ಹೊಂದಿದ್ದು, ಈಗ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಇದು ದಾವೂದ್‍ಗೆ ಬಿದ್ದ ದೊಡ್ಡ ಹೊಡೆತವಾಗಿದ್ದು, ಈತ ಇದರಿಂದ ಸಾಕಷ್ಟು ಬಲಕಳೆದುಕೊಳ್ಳಲಿದ್ದಾನೆಂದೇ ವಿಶ್ಲೇಷಿಸಲಾಗುತ್ತದೆ. ಇನ್ನೇನು ಸ್ವಲ್ಪದರಲ್ಲಿಯೇ
ದಾವೂದ್ ಸೆರೆಯಾಗುವ ವಿಶ್ವಾಸ ವ್ಯಕ್ತವಾಗಿದೆ.

-Chekitan

Tags

Related Articles

Close