ಪ್ರಚಲಿತ

ಮೋದಿ – ಶಾ ರ ಅಜೇಯ ಗೆಲುವು! ಬಿಜೆಪಿ 6 ನೇ ಸಲವೂ ಗುಜರಾತನ್ನು ಗೆಲ್ಲುತ್ತಿದೆ! ಈ ಗೆಲುವು ವಿಶೇಷವಾಗಿರುವುದು ಯಾಕೆ ಗೊತ್ತೇ?!

ಕಾಂಗ್ರೆಸ್ ಗೆ ಗುಜರಾತಿನಲ್ಲಿ ಈ ಸಲವೂ ಸಹ ಸೋಲೇ ಗತಿ!

ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆಯನ್ನು ಗುಜರಾತಿನಲ್ಲಿ ಸ್ಥಾಪಿಸಲಿದೆ ಎಂಬ ವಿಷಯವೊಂದು ನಿರೀಕ್ಷಿತ!

ಇದು ಕಾಂಗ್ರೆಸ್ ಗೆ ಪರೀಕ್ಷೆಯ ಕಾಲ! ಗುಜರಾತಿನಲ್ಲಿ ಈ ಸಲವೂ ಸಹ ಸೋಲೇ ಗತಿ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ! ಯಾವತ್ತಿಗೂ ಸಹ, ಮೋದಿಯನ್ನು ಬಿಟ್ಟುಕೊಡದಿದ್ದ ಗುಜರಾತ್ ಇಂದಿಗೂ ಸಹ ಮೋದಿಯ ಆಡಳಿತವನ್ನು ನೆಚ್ಚಿಕೊಂಡೇ ನಡೆದಿದೆ! ಗುಜರಾತಿಗಳಿಗೆ ಇಂದಿನ ಗೆಲುವೆಂಬುದು ತೀರಾ ವಿಶೇಷವಾದ ಗೆಲುವೂ ಹೌದು! ಮೋದಿಯ ಆಡಳಿತದಲ್ಲಿ ಸಮಾಜ ಸಮೃದ್ಧಿಯಾಗಿರುವುದೆಂದು ಗೊತ್ತಿರುವುದಕ್ಕೇ , ಈ ಸಲದ ಚುನಾವಣೆಯ ಫಲಿತಾಂಶಗಳಲ್ಲಿ ‘ಗುಜರಾತ್ ಮೋದಿ ಪರ’ ಎಂಬುದನ್ನು ಸಾಬೀತು ಪಡಿಸಿಬಿಟ್ಟಿದ್ದಾರೆ!

ಹೌದು! ಒಂದು ಗಂಟೆಯ ಹಿಂದೆ, ಕಾಂಗ್ರೆಸ್ ಗೆ ಮತಗಳನ್ನು ಗಳಿಸಿಕೊಂಡು ಮುನ್ನುಗ್ಗತೊಡಗಿತ್ತು. ಆದರೆ, ಆ ಒಂದು ಗಂಟೆಗಳ ಕಾಲ ‘ಜಯ ನನ್ನದೇ” ಎಂದು ಬೀಗುತ್ತಿದ್ದ ಕಾಂಗ್ರೆಸ್ ಸಂಭ್ರಮವೊಂದು ಕೇವಲ ಆ ಗಂಟೆಗಷ್ಟೇ ಸೀಮಿತವಾದದ್ದು ದುರಾದೃಷ್ಟ! ಓಹ್! ಕಾಂಗ್ರೆಸ್ಸಿಗರೇ! ದಯವಿಟ್ಟು ಇನ್ನು ಮುಂದೆ
ಭ್ರಮೆಗೊಳಗಾಗಬೇಡಿ! ಗುಜರಾತ್ ಹಾಗೂ ಹಿಮಾಚಲ್ ಪ್ರದೇಶದ ಎರಡೂ ಕಡೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತಿದೆ! ಹಾಗೆಯೇ, ಮೋದಿಯೆದುರಿಗೆ ರಾಹುಲ್ ಗಾಂಧಿಯ ಪ್ರತಿ ನಡೆಯೂ ಸಹ ಠುಸ್ ಎನ್ನುತ್ತಿದೆ!

ಬಿಜೆಪಿಯ ಮೇಲಿರುವ ಆತ್ಮವಿಶ್ವಾಸವನ್ನೊಮ್ಮೆ ನೋಡಿ ಕಣ್ತುಂಬಿ ಕೊಳ್ಳಿ!

https://twitter.com/ArnbGoswami/status/942617245301194753

ದುರಂತವೆಂದರೆ ಅದೇ ಅಲ್ಲವೇ!? ರಾಹುಲ್ ಗಾಂಧಿಯ ಯಾವ ‘ಶಿವಭಕ್ತಿ’ ಯೂ ಸಹ ಕೆಲಸಕ್ಕೆ ಬರಲಿಲ್ಲ! ದುರದೃಷ್ಟಕರವಾಗಿ, ರಾಹುಲ್ ನ ‘Temple Run’ ಕೊನೆಗೆ ವೇಗ ಕಳೆದುಕೊಂಡಿತಷ್ಟೇ! ಬಹುಷಃ ಈಗ ಮತ್ತದೇ Temple run ಆಟವನ್ನಾಡಬೇಕಾಗಬಹುದೇನೋ ರಾಹುಲ್ ಗೆ!ಪಾಪ! ‘ಹಾಗಾದರೂ, ಜನರಿಂದಾಗುವ ಅವಮಾನವನ್ನು ಸ್ವಲ್ಪ ತಡೆಗಟ್ಟಬಹುದೇನೋ! ಚುನಾವಣೆಗಿಂತ ಒಂದಷ್ಟು ದಿನಗಳ ಮುಂಚೆ ಮಾಡುವ ಗಿಮಿಕ್ ಗಳು, ಅಸಂಬದ್ಧ ಹೇಳಿಕೆಗಳು ಯಾವತ್ತೂ ನಡೆಯುವುದಿಲ್ಲ ಎಂಬುದು ರಾಹುಲ್ ನಿಗೆ ಅಡ್ವಾನಸ್ಡ್ ಇಟಲಿ ಮಮ್ಮಿ ಹೇಳಿಕೊಡಲಿಲ್ಲವೇನೋ! ರಾಜಕೀಯಕ್ಕಿಳಿದು ಜಯ ಸಾಧಿಸಬೇಕೆಂದರೆ, ನಿಸ್ವಾರ್ಥ ಎನ್ನುವುದು ಇರಬೇಕಾದುದು ಅವಶ್ಯಕ! ಆದರೆ, ಗಾಂಧಿ ಕುಟುಂಬಕ್ಕೆ ಇದನ್ನೆಲ್ಲ ಅಳವಡಿಸಿಕೊಳ್ಳುವುದು ಬಹುಷಃ ತೀರಾ ಕಷ್ಟದ ವಿಷಯ!

” ಪದಗಳು ಮಾತನಾಡಬಾರದು, ಬದಲಾಗಿ ನಡೆಯೇ ಮಾತಾಡಬೇಕು” ಎಂಬುದು ಮೋದಿಜಿಯ ಮಂತ್ರ! ಆದರೆ, ರಾಹುಲ್ ಏನು ಮಾಡಲು ಹೊರಟರು ಎಂಬುದನ್ನು ನಾನು ಮತ್ತೆ ವಿಸ್ತೃತಗೊಳಿಸಬೇಕಾಗಿಲ್ಲ. ಜನ ಯಾವತ್ತಿಗೂ ಸಹ, ‘ಯಾರು ಅವರಿಗೋಸ್ಕರ ಕೆಲಸ ಮಾಡುತ್ತಿದ್ದಾರೆ ಮತ್ತು ಯಾರು ಅವರನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂಬುವುದನ್ನು ಗಮನಿಸುತ್ತಲೇ ಹೋಗುತ್ತಾರೆ! ಅಕಸ್ಮಾತ್, ರಾಹುಲ್ ಗಾಂಧಿಯೇನಾದರೂ ಮೋದಿಯ 50% ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ‌್ದರೂ ಸಹ, ಜನ ರಾಹುಲ್ ಗಾಂಧಿ ಪರ ನಿಲ್ಲುತ್ತಿದ್ದರೇನೋ! ಆದರೆ, ಕುಟುಂಬದ ಹೆಸರನ್ನೇ ಬಳಸಿಕೊಂಡ ರಾಹುಲ್ ಗೆ ಜನ ಮೂಸಿಯೂ ನೋಡದಂತಾಗಿದೆ!

ಅಚ್ಚರಿಯೇನೆಂದರೆ, ಇಂಡಸ್ಟ್ರಿಗಳ ರಾಷ್ಟ್ರವೆಂದೇ ಗುರುತಿಸಿಕೊಂಡಿರುವ ಸೂರತ್ ನಿಂದ, ಉದ್ಯಮಗಳೇ ಜಾಸ್ತಿ ಇರುವ ಉತ್ತರ ಗುಜರಾತಿನ ಪೂರ್ತಿ ಬೆಲ್ಟ್ ಬಿಜೆಪಿಗೆ ಮತ ನೀಡಿದೆ!

ಹೇಳಲೇಬೇಕೆಂದರೆ, ಈ ವಿಷಯವೇ ಜಿಎಸ್ ಟಿ ತೆರಿಗೆಯಿಂದ ಉದ್ಯಮ ನೆಲಕಚ್ಚಿತು ಎನ್ನುವವರಿಗೆ ಇದೊಂದು ಬಲವಾದ ಕಪಾಳ ಮೋಕ್ಷವಷ್ಟೇ! ಯಾರ್ಯಾರು, ನೋಟು ನಿಷೇಧ ಹಾಗೂ ಜಿಎಸ್ ಟಿ ವಿರುದ್ಧ ನಿಂತಿದ್ದರೋ, ಅಂತಹವರಿಗೆ ಗುಜರಾತಿನ ಉದ್ಯಮಿ ಯುವ ಜನಾಂಗ ಮೋದಿಗೆ ಬೆಂಬಲ ನೀಡುವ ಮೂಲಕ ಸರಿಯಾದ ಉತ್ತರವನ್ನೇ ಕೊಟ್ಟಿದ್ದಾರೆ! ಈಗ, ಮತ್ತೆ ‘ಪ್ರಸ್ತುತ ಭಾರತದ ಎರಡು ಬಹುದೊಡ್ಡ ದುರಂತಗಳು’ ಎಂದವರೊಮ್ಮೆ ಅವಶ್ಯವಾಗಿ ಮುಟ್ಟಿ ನೋಡಿಕೊಳ್ಳಬೇಕಾಗಿದೆ!

ರಾಹುಲ್ ಅಧ್ಯಕ್ಷನಾಗುತ್ತಿದ್ದ ಹಾಗೇ, ಹಿಮಾಚಲ್ ಮತ್ತು ಗುಜರಾತ್ ನನ್ನು ವಶ ಪಡಿಸಿಕೊಳ್ಳುತ್ತ ಸಾಗಿದೆ ಬಿಜೆಪಿ!

ಇದೊಂದು ತಕ್ಷಣದ ಶುಭಸೂಚಕ ನಡೆ ಕಾಂಗ್ರೆಸ್ಸಿನದು! ರಾಹುಲ್ ಅತ್ತ ಅಧ್ಯಕ್ಷನಾಗುತ್ತಿದ್ದ ಹಾಗೆ, ಇತ್ತ ಬಿಜೆಪಿ ಗೆಲುವಿನ ಮೇಲೆ ಗೆಲುವು ಸಾಧಿಸುತ್ತ ಸಾಗಿದೆ! ರಾಹುಲ್ ಬಿಜೆಪಿಗೆ ಅದೃಷ್ಟ ಒಲಿದ ಹಾಗೆ ಅಧ್ಯಕ್ಷ ಸ್ಥಾನ ಅಲಂಕರಿಸಿದ ನೋಡಿ! ಬಿಜೆಪಿ ಮುಗುಳು ನಗೆ ಬೀರಿದೆ!

ಯಾವತ್ತಿಗಾದರೂ ಸಹ, ಮೋದಿ ಸರಕಾರ ಮಾಡಿದ ಒಳ್ಳೆಯ ಕೆಲಸಗಳು ಜನರ ಕಣ್ಣಿಗೆ ಗೋಚರಿಸಲೇ ಬೇಕು! ಅದಾಗಿದೆ! ಅದಕ್ಕೇ, ಮತ್ತೆ ಬೇರೆ ಸರಕಾರ ಬೇಕೆಂಬ ಆಶಯವೇ ಇಲ್ಲದಾಗಿದೆ! ತನಗಾಗಿ ಶ್ರಮವಹಿಸಿ ದುಡಿಯುವ ಸರಕಾರವೊಂದು ಇರುವಾಗ, ಮತ್ತೆ ಕಾಂಗ್ರೆಸ್ ನನ್ನು ಗೆಲ್ಲಿಸುವಷ್ಟು ಯಾರೂ ಇವತ್ತು ಮೂರ್ಖರಾಗಿಲ್ಲವಷ್ಟೇ!

– ಪೃಥು ಅಗ್ನಿಹೋತ್ರಿ

Tags

Related Articles

Close