ಪ್ರಚಲಿತ

ಯೋಗಿ ಆದಿತ್ಯನಾಥ್‍ ಅವರ ಮದರಸಾಗಳ ಕುರಿತ ಹೊಸ ಆದೇಶಕ್ಕೆ ಮೂಲಭೂತವಾದಿ ಮುಸ್ಲಿಮರು ಪತರಗುಟ್ಟಿದ್ದು ಯಾಕೆ?!

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾರ್ಯವೈಖರಿಯೇ ವಿಚಿತ್ರ. ತನ್ನ ಖಡಕ್ ಆದೇಶಗಳ ಮೂಲಕ ಭಯೋತ್ಪಾದನೆಯನ್ನು ಮಟ್ಟ ಹಾಕಲು ರಣತಂತ್ರ ಹೆಣೆಯುತ್ತಲೇ ಇದ್ದಾರೆ. ಮುಖ್ಯಮಂತ್ರಿಯಾದಂದಿನಿಂದ ಮದರಸಗಳ ಮೇಲೆ ಕಣ್ಣಿಟ್ಟಿರುವ ಯೋಗಿ ಅವುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಲೇ ಇದ್ದಾರೆ. ಇದೀಗ ಬಂದ ಸುದ್ದಿಯ ಪ್ರಕಾರ ಯೋಗಿ ಆದಿತ್ಯನಾಥ್ ಅವರು ಮದರಸಾಗಳಲ್ಲಿ ಇಂಗ್ಲೀಷ್ ಭೋದನೆ, ವಿಜ್ಞಾನ ಭೋದನೆ ಹಾಗೂ ಸರಕಾರಿ ಪಠ್ಯಗಳನ್ನು ಖಡ್ಡಾಯಗೊಳಿಸಿ ಆದೇಶಹೊರಡಿಸಿದ್ದಾರೆ. ಈ ಆದೇಶದಿಂದ ಮೂಲಭೂತವಾದಿ ಮುಸ್ಲಿಮರು ಅಕ್ಷರಶಃ ಪತರಗುಟ್ಟಿದ್ದು, ಇನ್ನು ಮುಂದೆ ಮುಸಲ್ಮಾನ ಶಾಲೆಗಳು ಈ ಆದೇಶವನ್ನು ಪಾಲಿಸಲೇಬೇಕಾಗಿದೆ.

ನಿಜಕ್ಕೂ ಯೋಗಿ ಆದಿತ್ಯನಾಥ್ ಅವರ ಈ ಆದೇಶಕ್ಕೆ ಮುಸ್ಲಿಂ ಮೂಲಭೂತವಾದಿಗಳು ಪತರಗುಟ್ಟಿರುವುದು ಯಾಕೆ ಎಂದು ಯೋಚಿಸಿದರೆ ಅದರಲ್ಲಿ ಕೆಲವೊಂದು ಕುತೂಹಲಕಾರಿ ವಿಷಯಗಳಿವೆ. ಅದೇನೆಂದರೆ ಮದರಸಾಗಳಲ್ಲಿ ಮುಖ್ಯವಾಗಿ ಅರೆಬಿಕ್ ಹಾಗೂ ಖುರಾನ್ ಕಲಿಸುತ್ತಾರೆ. ಆದರೆ ಇಂಗ್ಲೀಷ್ ಕಲಿಸುವುದೇ ಇಲ್ಲ. ಇದು ಮುಸ್ಲಿಂ ಮಕ್ಕಳು ಬೆಳೆದಾಗ ಅವರಿಗೆ ಇಂಗ್ಲಿಷ್ ಅನಿವಾರ್ಯವಾಗಿರುವುದರಿಂದ ಇದರಿಂದ ಮುಸ್ಲಿಂ ಮಕ್ಕಳು ಹಿನ್ನಡೆ ಅನುಭವಿಸುತ್ತಿದ್ದರು. ಇಂದು ಜಗತ್ತು ಇಂಗ್ಲಿಷ್‍ನೊಂದಿಗೆ ತೆರದುಕೊಳ್ಳುವುದರಿಂದ ಮಾಹಿತಿಗಳು ಅದರಲ್ಲೇ ಹೆಚ್ಚಾಗಿ ಸಿಗುವುದರಿಂದ ಮುಸ್ಲಿಂ ಮಕ್ಕಳು ವಿಶಾಲ ಜಗತ್ತಿಗೆ ತೆರೆದುಕೊಳ್ಳುವುದರ ಜೊತೆಗೆ ವ್ಯಾಪಕತ್ವ ಪಡೆಯುತ್ತಾರೆ. ಇನ್ನು ಅಲ್ಲಿ ಕಲಿಸುವ ಅರಬಿಕ್ ವಿಷಯಗಳು ಕೇವಲ ಮುಸ್ಲಿಂ ರೀತಿನೀತಿಗಳನ್ನು ಭೋದಿಸುವ ಕೆಲಸವನ್ನಷ್ಟೇ ಮಾಡುತ್ತದೆ. ಈ ರೀತಿ ಕಲಿಸುವ ಭೋದನೆ ಯಾವ ರೀತಿ ಇರುತ್ತದೆ ಎಂದು ಆಲೋಚಿಸಲೂ ಕೂಡಾ ಸಾಧ್ಯವಾಗುವುದಿಲ್ಲ.

ಇನ್ನು ಮದರಸಾಗಳಲ್ಲಿ ವಿಜ್ಞಾನವನ್ನು ಭೋದಿಸುವುದೂ ಖಡ್ಡಾಯವಾಗಿರಲಿದೆ. ಯಾಕೆಂದರೆ ಮುಸ್ಲಿಮರು ವಿಜ್ಞಾನವನ್ನು ನಂಬುವುದಿಲ್ಲ. ಖುರಾನ್‍ನಲ್ಲಿರುವುದೇ ಸತ್ಯ ಎಂದು ನಂಬಿರುವ ಮುಸ್ಲಿಮರಿಗೆ ವಿಜ್ಞಾನ ಭೋದಿಸುವುದು ನುಂಗಲಾರದ ತುಪ್ಪವಾಗಿ ಪರಿಗಣಿಸಿದೆ. ವಿಜ್ಞಾನ ಹೇಳುವ ಕೆಲವು ವಿಚಾರಗಳು ಖುರಾನಿಗೆ
ವಿರುದ್ಧವಾಗಿರುವುದರಿಂದ ಮೂಲಭೂತವಾದಿ ಮುಸ್ಲಿಮರು ವಿಜ್ಞಾನವನ್ನು ನಂಬುವುದಿಲ್ಲ. ಆದರೆ ಮಕ್ಕಳಿಗೆ ವಿಜ್ಞಾನ ಸಿಗದೆ ಕಲಿಕೆಯಲ್ಲಿ ತೀರಾ ಹಿಂದೆ ಬೀಳುವುದರಿಂದ ಯೋಗಿ ಈ ದಿಟ್ಟ ಆದೇಶ ಹೊರಡಿಸಿದ್ದಾರೆ. ಯೋಗಿಯ ಈ ಆದೇಶ ಮೂಲಭೂತವಾದಿ ಮುಸ್ಲಿಮರಿಗೆ ತಲೆನೋವಾಗಿ ಪರಿಣಮಿಸಬಹುದು.

ಯೋಗಿಯ ಆದೇಶದಲ್ಲಿ ಸರಕಾರಿ ಪಠ್ಯವನ್ನು ಅಳವಡಿಸಲೇಬೇಕು ಎಂಬ ಅಂಶವೂ ಒಳಗೊಂಡಿದೆ. ಈ ವಿಚಾರ ಯಾಕೆ ಮಹತ್ವದ್ದು ಎಂದು ಯೋಚಿಸುವುದಾದರೆ ಮದರಸಾಗಳು ಹಿಂದಿನಿಂದಲೂ ಯಾವ ವಿಚಾರವನ್ನು ಕಲಿಸುತ್ತವೆ ಎಂಬುವುದು ನಿಗೂಢವಾಗಿಯೇ ಉಳಿದುಕೊಂಡಿತ್ತು. ಹಿಂದಿನ ಸರಕಾರಗಳು ಮುಸ್ಲಿಂ ಓಟ್‍ಬ್ಯಾಂಕಿಗೋಸ್ಕರ ಆ ವಿಚಾರವನ್ನು ಅರಿಯುವ ಪ್ರಯತ್ನವನ್ನೂ ಮಾಡಿಲ್ಲ. ಅವರು ಕಲಿಸುವ ಭೋದನೆ ಜಿಹಾದ್‍ಗೆ ಬಂಬಲಿಸುತ್ತವೆ ಎಂಬ ಆಪಾದನೆ ಈ ಹಿಂದಿನಿಂದಲೂ ಇದೆ. ಈ ಬಗ್ಗೆ ಗುಪ್ತಚರ ಇಲಾಖೆಗಳೂ ಮಾಹಿತಿ ಪಡೆದುಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಯೋಗೀಜಿ ಅವರು ಸರಕಾರಿ ಪಠ್ಯಗಳನ್ನು ಭೋದಿಸುವಂತೆ ಆದೇಶ ಹೊರಡಿಸುವುದರಿಂದ ಇಂಥದೊಂದು ಅನುಮಾನಕ್ಕೆ ಕಡಿವಾಣ ಬೀರಲಿದೆ.

ಯೋಗೀಜಿಯ ಮದರಸಾಗಳ ಮೇಲೆ ಈ ಹಿಂದೆಯೂ ಅನೇಕ ಕಟ್ಟುನಿಟ್ಟಿನ ಆದೇಶಗಳನ್ನು ಹೊರಡಿಸಿದ್ದರು.

ಉತ್ತರ ಪ್ರದೇಶ ಸರಕಾರದ ಎಲ್ಲಾ ಮದರಸಾಗಳನ್ನು ಜಿಪಿಎಸ್ ತಂತ್ರಜ್ಞಾನದ ಮೂಲಕ ರಾಜ್ಯದ 16,000 ಮದರಸಾಗಳ ಮೇಲೆ ಕಣ್ಗಾವಲು ಇಡುವಂತೆ
ಆದೇಶಿಸಿದ್ದರು. ಈ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗಿದ್ದು, ಎಲ್ಲಾ ಮದರಸಾಗಳನ್ನು ಕಣ್ಗಾವಲು ಇರಿಸಲಾಗಿದೆ. ಮದರಸಾದ ಶಿಕ್ಷಣದ ಗುಣಮಟ್ಟ ಕಾಪಾಡಲು, ಮದರಸಾಗಳಲ್ಲಿ ನಡೆಯುವ ಕಾರ್ಯಚಟುವಟಿಕೆಗಳು ಪಾರದರ್ಶಕವಾಗಿರಬೇಕು ಹಾಗೂ ಶಿಕ್ಷಣದ ಹೆಸರಲ್ಲಿ ಕೆಲವು ನಕಲಿ ವಿದ್ಯಾರ್ಥಿಗಳು ವಾಸ್ತವ್ಯ ಹೂಡಿರುವುದನ್ನು ತಪ್ಪಿಸಲು ಈ ಕೆಲಸವನ್ನು ನಿರ್ವಹಿಸಲಾಗುತ್ತದೆ ಎಂದು ಯೋಗೀಜಿ ತನ್ನ ನಿರ್ಧಾರಕ್ಕೆ ಸಮರ್ಥನೆ ನೀಡಿದ್ದರು.

ಎಲ್ಲಾ ಮದರಸಾಗಳ ಹೆಸರುಗಳನ್ನು ಸ್ಪಷ್ಟವಾಗಿ ಹಿಂದಿಯಲ್ಲಿ ಬರೆಯಬೇಕು, ಮದರಸಾಗಳನ್ನು ತೆರೆಯುವ ಸಮಯ, ಮುಚ್ಚುವ ಸಮಯಗಳನ್ನು ಸ್ಪಷ್ಟವಾಗಿ ಫಲಕಗಳಲ್ಲಿ ಬರೆಯಬೇಕು ಎಂದು ಯೋಗಿ ಸರಕಾರ ಆದೇಶಿತ್ತು.. ಹೆಚ್ಚಿನ ಜನರಿಗೆ ಮದರಸಾ ಎಂದರೆ ಏನೆಂದೇ ಗೊತ್ತಿಲ್ಲ. ಈ ಆದೇಶದಿಂದ ಮದರಸಾ ಅಂದ್ರೆ ಏನೆಂದು ಎಲ್ಲರಿಗೂ ಸುಲಭವಾಗಿ ಗೊತ್ತಾಗುತ್ತದೆ. ಮದರಸಾ ಆರಂಭ ಮತ್ತು ಮುಚ್ಚುವ ಸಮಯವನ್ನು ಸ್ಪಷ್ಟವಾಗಿ ತಿಳಿಸಬೇಕೆಂದು ಆದೇಶಿಸಲಾಗಿದ್ದು, ಇದೆಲ್ಲಾ ಇಂದು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದೆ.

ಎಲ್ಲಾ ನೋಂದಾಯಿತ ಮದರಸಾಗಳಲ್ಲಿ ಆಗಸ್ಟ್ 15ರಂದು ಕಡ್ಡಾಯವಾಗಿ ರಾಷ್ಟ್ರಗೀತೆಯನ್ನು ಹಾಡಬೇಕು ಅಂದಿನ ದಿನ ದಿನವಿಡೀ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿ, ಎಲ್ಲಾ ಕಾರ್ಯಕ್ರಮದ ವಿಡಿಯೋ ಚಿತ್ರೀಕರಣ ಮಾಡಬೇಕೆಂದು ಆದೇಶಿಸಿದ್ದರು ಎಂದು ಆದೇಶ ಹೊರಡಿಸಲಾಗಿತ್ತು. ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡಬೇಕೆಂದು ಆದೇಶಿಸಲಾಗಿತ್ತು.

ಒಟ್ಟಿನಲ್ಲಿ ಉತ್ತರ ಪ್ರದೇಶದ ಮದರಸಾಗಳೆಲ್ಲಾ ಆಧುನೀಕರಣಗೊಳ್ಳುತ್ತಿದೆ. ಯೋಗೀಯವರ ಆದೇಶವನ್ನು ದೇಶದ ಎಲ್ಲಾ ಕಡೆಗಳಲ್ಲಿ ಪಾಲಿಸಲು ಸರಕಾರ ಮನಸ್ಸು ಮಾಡಬೇಕಾಗಿದೆ.

-ಚೇಕಿತಾನ

Tags

Related Articles

Close